ಗೃಹ ವ್ಯವಹಾರಗಳ ಸಚಿವಾಲಯ
azadi ka amrit mahotsav

ನಾಲ್ಕು ದಿನಗಳ ಮಣಿಪುರ ಭೇಟಿಯ ಕೊನೆಯ ದಿನವಾದ ಇಂದು, ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಶ್ರೀ ಅಮಿತ್ ಶಾ ಅವರು ಇಂಫಾಲ್ನಲ್ಲಿ ಮಾಧ್ಯಮಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು.


ಮಣಿಪುರ ಹಿಂಸಾಚಾರದಲ್ಲಿ ಮಡಿದವರ ಕುಟುಂಬಗಳಿಗೆ ಮೋದಿ ಸರ್ಕಾರದ ಪರವಾಗಿ ಶ್ರೀ ಅಮಿತ್ ಶಾ ತೀವ್ರ ಸಂತಾಪವನ್ನು ವ್ಯಕ್ತಪಡಿಸಿದರು, ವದಂತಿಗಳಿಗೆ ಕಿವಿಗೊಡದಂತೆ, ಶಾಂತಿಯನ್ನು ಕಾಪಾಡಿಕೊಳ್ಳಲು ಮತ್ತು ಸಾಮರಸ್ಯವನ್ನು ಉತ್ತೇಜಿಸಲು ಎಲ್ಲಾ ವರ್ಗಗಳಿಗೆ ಮನವಿ ಮಾಡಿದರು.

ಮಣಿಪುರ ಹಿಂಸಾಚಾರದ ತನಿಖೆಗಾಗಿ ಹೈಕೋರ್ಟ್‌ ನಿವೃತ್ತ ಮುಖ್ಯ ನ್ಯಾಯಾಧೀಶರ ಅಧ್ಯಕ್ಷತೆಯಲ್ಲಿ ನ್ಯಾಯಾಂಗ ಆಯೋಗವನ್ನು ರಚಿಸಲಾಗುವುದು.

ಮಣಿಪುರದ ರಾಜ್ಯಪಾಲರ ಅಧ್ಯಕ್ಷತೆಯಲ್ಲಿ ಶಾಂತಿ ಸಮಿತಿಯನ್ನು ಸಹ ರಚಿಸಲಾಗುವುದು, ಇದರಲ್ಲಿ ಎಲ್ಲಾ ವರ್ಗಗಳ ಪ್ರತಿನಿಧಿಗಳನ್ನು ಸೇರಿಸಲಾಗುವುದು.

ಭಾರತ ಸರ್ಕಾರ ಮತ್ತು ಮಣಿಪುರ ಸರ್ಕಾರದಿಂದ ಪರಿಹಾರ ಮತ್ತು ಪುನರ್ವಸತಿ ಪ್ಯಾಕೇಜ್ ಅಡಿಯಲ್ಲಿ, ಹಿಂಸಾಚಾರದಲ್ಲಿ ಪ್ರಾಣ ಕಳೆದುಕೊಂಡವರ ಸಂಬಂಧಿಕರಿಗೆ ಡಿಬಿಟಿ ಮೂಲಕ 10 ಲಕ್ಷ ರೂ.ಗಳನ್ನು ನೀಡಲಾಗುವುದು.

ಎಲ್ಲಾ ದಾಖಲಾದ ಪ್ರಕರಣಗಳಲ್ಲಿ 5 ಗುರುತಿಸಲಾದ ಪ್ರಕರಣಗಳು ಮತ್ತು ಸಾಮಾನ್ಯ ಪಿತೂರಿಯ ಒಂದು ಪ್ರಕರಣ ಸೇರಿದಂತೆ 6 ಪ್ರಕರಣಗಳ ಬಗ್ಗೆ ಸಿಬಿಐ ವಿಶೇಷ ತಂಡವು ತನಿಖೆ ನಡೆಸಲಿದೆ.

ಮಣಿಪುರಕ್ಕೆ ಅಗತ್ಯ ವಸ್ತುಗಳ ನಿರಂತರ ಪೂರೈಕೆಯನ್ನು ಖಚಿತಪಡಿಸಿಕೊಳ್ಳಲು, ಭಾರತ ಸರ್ಕಾರವು ನಿಗದಿತ ಕೋಟಾದ ಜೊತೆಗೆ 30,000 ಮೆಟ್ರಿಕ್ ಟನ್ ಅಕ್ಕಿಯನ್ನು ಕಳುಹಿಸಿದೆ, ಗ್ಯಾಸ್ ಸಿಲಿಂಡರ್‌ಗಳು, ಪೆಟ್ರೋಲ್ ಮತ್ತು ತರಕಾರಿಗಳ ಪೂರೈಕೆಗೆ ವ್ಯವಸ್ಥೆ ಮಾಡಲಾಗಿದೆ.

Posted On: 01 JUN 2023 3:40PM by PIB Bengaluru

ನಾಲ್ಕು ದಿನಗಳ ಮಣಿಪುರ ಭೇಟಿಯ ಕೊನೆಯ ದಿನವಾದ ಇಂದು ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಶ್ರೀ ಅಮಿತ್ ಶಾ ಅವರು ಇಂಫಾಲದಲ್ಲಿ ಮಾಧ್ಯಮಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು. ಹಿಂಸಾಚಾರ ಪೀಡಿತ ಮಣಿಪುರದಲ್ಲಿ ಶಾಂತಿಯನ್ನು ಕಾಪಾಡುವಂತೆ, ಚರ್ಚೆಗಳನ್ನು ನಡೆಸುವಂತೆ ಮತ್ತು ಸಾಮರಸ್ಯವನ್ನು ಉತ್ತೇಜಿಸುವಂತೆ ಶ್ರೀ ಅಮಿತ್ ಶಾ ಎಲ್ಲಾ ವರ್ಗಗಳಿಗೆ ಮನವಿ ಮಾಡಿದರು. ವದಂತಿಗಳಿಗೆ ಕಿವಿಗೊಡದಂತೆ ಮತ್ತು ಶಾಂತಿ ಕಾಪಾಡುವಂತೆ ಮಣಿಪುರದ ಜನತೆಗೆ ಅವರು ಮನವಿ ಮಾಡಿದರು. ಮೋದಿ ಸರ್ಕಾರದ ಪರವಾಗಿ ಗೃಹ ಸಚಿವರು ಮಣಿಪುರ ಹಿಂಸಾಚಾರದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ತೀವ್ರ ಸಂತಾಪ ಸೂಚಿಸಿದರು.

ಮಣಿಪುರ ಹಿಂಸಾಚಾರದ ತನಿಖೆಗಾಗಿ ಹೈಕೋರ್ಟ್‌ ನಿವೃತ್ತ ಮುಖ್ಯ ನ್ಯಾಯಾಧೀಶರ ಅಧ್ಯಕ್ಷತೆಯಲ್ಲಿ ನ್ಯಾಯಾಂಗ ಆಯೋಗವನ್ನು ರಚಿಸಲಾಗುವುದು ಎಂದು ಕೇಂದ್ರ ಗೃಹ ಸಚಿವರು ಹೇಳಿದರು. ಮಣಿಪುರದ ರಾಜ್ಯಪಾಲರ ಅಧ್ಯಕ್ಷತೆಯಲ್ಲಿ ಶಾಂತಿ ಸಮಿತಿಯನ್ನೂ ರಚಿಸಲಾಗುವುದು, ಅದರಲ್ಲಿ ಎಲ್ಲಾ ವರ್ಗಗಳ ಪ್ರತಿನಿಧಿಗಳನ್ನು ಸೇರಿಸಲಾಗುವುದು ಎಂದು ಅವರು ಹೇಳಿದರು.

ಭಾರತ ಸರ್ಕಾರ ಮತ್ತು ಮಣಿಪುರ ಸರ್ಕಾರದ ಪರಿಹಾರ ಮತ್ತು ಪುನರ್ವಸತಿ ಪ್ಯಾಕೇಜ್ ಅಡಿಯಲ್ಲಿ, ಹಿಂಸಾಚಾರದಲ್ಲಿ ಪ್ರಾಣ ಕಳೆದುಕೊಂಡವರ ಹತ್ತಿರದ ಸಂಬಂಧಿಕರಿಗೆ ತಲಾ 10 ಲಕ್ಷ ರೂಪಾಯಿಗಳನ್ನು ನೀಡಲಾಗುವುದು ಮತ್ತು ಈ ಮೊತ್ತವನ್ನು ಅವರ ಬ್ಯಾಂಕ್ ಖಾತೆಗಳಿಗೆ ಡಿಬಿಟಿ ಮೂಲಕ ನೀಡಲಾಗುತ್ತದೆ ಎಂದರು. ಮಣಿಪುರದಲ್ಲಿ ಭದ್ರತೆಯನ್ನು ಕಾಪಾಡಿಕೊಳ್ಳಲು ಕಾರ್ಯನಿರ್ವಹಿಸುತ್ತಿರುವ ಎಲ್ಲಾ ಏಜೆನ್ಸಿಗಳ ನಡುವೆ ಉತ್ತಮ ಮತ್ತು ಪಕ್ಷಾತೀತ ಸಮನ್ವಯಕ್ಕಾಗಿ, ಭದ್ರತಾ ಸಲಹೆಗಾರ ಶ್ರೀ ಕುಲದೀಪ್ ಸಿಂಗ್ ಅವರ ಅಧ್ಯಕ್ಷತೆಯಲ್ಲಿ ಅಂತರ್-ಏಜೆನ್ಸಿ ಏಕೀಕೃತ ಕಮಾಂಡ್ ಅನ್ನು ಸ್ಥಾಪಿಸಲಾಗುವುದು ಎಂದು ಅವರು ಹೇಳಿದರು. ಎಲ್ಲಾ ದಾಖಲಾದ ಪ್ರಕರಣಗಳಲ್ಲಿ ಗುರುತಿಸಲಾದ 5 ಪ್ರಕರಣಗಳು ಮತ್ತು ಸಾಮಾನ್ಯ ಪಿತೂರಿಯ ಒಂದು ಪ್ರಕರಣ ಸೇರಿದಂತೆ 6 ಪ್ರಕರಣಗಳ ಬಗ್ಗೆ ಸಿಬಿಐ ವಿಶೇಷ ತಂಡದಿಂದ ತನಿಖೆ ನಡೆಸಲಾಗುವುದು ಎಂದು ಗೃಹ ಸಚಿವರು ಹೇಳಿದರು. ಹಿಂಸಾಚಾರದ ಕಾರಣವನ್ನು ಯಾವುದೇ ಪಕ್ಷಪಾತ ಮತ್ತು ತಾರತಮ್ಯವಿಲ್ಲದೆ ತನಿಖೆ ಮಾಡಲಾಗುವುದು ಮತ್ತು ಅಂತಹ ಘಟನೆಗಳನ್ನು ತಡೆಗಟ್ಟಲು ತಪ್ಪಿತಸ್ಥರನ್ನು ಶಿಕ್ಷಿಸಲು ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಹೇಳಿದರು.

ಮಣಿಪುರಕ್ಕೆ ಅಗತ್ಯ ವಸ್ತುಗಳ ನಿರಂತರ ಪೂರೈಕೆಯನ್ನು ಖಚಿತಪಡಿಸಿಕೊಳ್ಳಲು, ಭಾರತ ಸರ್ಕಾರವು ನಿಗದಿತ ಕೋಟಾದ ಜೊತೆಗೆ 30,000 ಮೆಟ್ರಿಕ್‌ ಟನ್ ಅಕ್ಕಿಯನ್ನು ಕಳುಹಿಸಿದೆ ಎಂದು ಕೇಂದ್ರ ಗೃಹ ಸಚಿವರು ಹೇಳಿದರು. ಇದಲ್ಲದೇ ಗ್ಯಾಸ್ ಸಿಲಿಂಡರ್, ಪೆಟ್ರೋಲ್, ತರಕಾರಿ ಪೂರೈಕೆಗೂ ವ್ಯವಸ್ಥೆ ಮಾಡಲಾಗಿದೆ. ಖೊಂಗ್‌ಸಾಂಗ್ ರೈಲು ನಿಲ್ದಾಣದಲ್ಲಿ ತಾತ್ಕಾಲಿಕ ಪ್ಲಾಟ್‌ಫಾರ್ಮ್ ಅನ್ನು ಸ್ಥಾಪಿಸುವ ಮೂಲಕ ದೇಶದ ಇತರ ಭಾಗಗಳಿಂದ ಮಣಿಪುರಕ್ಕೆ ಅಗತ್ಯ ವಸ್ತುಗಳ ಪೂರೈಕೆಯನ್ನು ಖಚಿತಪಡಿಸಿಕೊಳ್ಳಲಾಗುವುದು ಎಂದು ಅವರು ಹೇಳಿದರು. ಚುರಾಚಂದಪುರ, ಮೋರೆಹ್ ಮತ್ತು ಕಾಂಗ್‌ಪೋಕ್ಪಿಯಿಂದ ತಾತ್ಕಾಲಿಕ ಹೆಲಿಕಾಪ್ಟರ್ ಸೌಲಭ್ಯವನ್ನು ಪ್ರಾರಂಭಿಸಲಾಗುತ್ತಿದೆ ಎಂದು ಶ್ರೀ ಷಾ ಹೇಳಿದರು, ಇದು ವಿಮಾನ ನಿಲ್ದಾಣ ಮತ್ತು ದೂರದ ಸ್ಥಳಗಳಿಗೆ ಸಾರಿಗೆ ಸೌಲಭ್ಯವನ್ನು ಒದಗಿಸುತ್ತದೆ ಮತ್ತು ಪ್ರತಿ ವ್ಯಕ್ತಿಗೆ ಕೇವಲ 2000 ರೂ. ಶುಲ್ಕ ನಿಗದಿಪಡಿಸಲಾಗಿದೆ. ಈ ಸೇವೆಯ ಉಳಿದ ವೆಚ್ಚವನ್ನು ಭಾರತ ಸರ್ಕಾರ ಮತ್ತು ಮಣಿಪುರ ಸರ್ಕಾರ ನೀಡಲಿದೆ ಎಂದು ಅವರು ಹೇಳಿದರು. ಭಾರತ ಸರ್ಕಾರ ರಚಿಸಿರುವ 8 ವೈದ್ಯಕೀಯ ತಂಡಗಳ ಪೈಕಿ 3 ತಂಡಗಳು ಈಗಾಗಲೇ ಮಣಿಪುರ ತಲುಪಿದ್ದು, 5 ತಂಡಗಳು ಶೀಘ್ರದಲ್ಲೇ ತಲುಪಲಿವೆ. ಈ ತಂಡಗಳು ಮೋರೆಹ್, ಚುರಾಚಂದಪುರ ಮತ್ತು ಕಾಂಗ್‌ಪೋಕ್ಪಿ ಪ್ರದೇಶಗಳಲ್ಲಿ ಆರೋಗ್ಯ ಸೌಲಭ್ಯಗಳನ್ನು ಒದಗಿಸುತ್ತವೆ ಎಂದು ಅವರು ಹೇಳಿದರು.

ಮಣಿಪುರದ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳು ಮತ್ತು ಶಿಕ್ಷಣ ವ್ಯವಸ್ಥೆಯು ಯಾವುದೇ ಅಡೆತಡೆಗಳಿಲ್ಲದೆ ಮುಂದುವರಿಯುವುದನ್ನು ಖಚಿತಪಡಿಸಿಕೊಳ್ಳಲು, ಭಾರತ ಸರ್ಕಾರದ ಶಿಕ್ಷಣ ಸಚಿವಾಲಯದ ಅಧಿಕಾರಿಗಳು, ಮಣಿಪುರ ಶಿಕ್ಷಣ ಇಲಾಖೆಯ ಅಧಿಕಾರಿಗಳೊಂದಿಗೆ ಯೋಜನೆ ಸಿದ್ಧಪಡಿಸುತ್ತಿದ್ದಾರೆ ಎಂದು ಶ್ರೀ ಅಮಿತ್ ಶಾ ಹೇಳಿದರು. ಆನ್‌ಲೈನ್ ಶಿಕ್ಷಣ, ಪರೀಕ್ಷೆಗಳು ಮತ್ತು ದೂರ ಶಿಕ್ಷಣವನ್ನು ವ್ಯವಸ್ಥೆ ಮಾಡಲು ಯೋಜಿಸಲಾಗಿದೆ, ಇದು 2 ದಿನಗಳಲ್ಲಿ ಸಿದ್ಧವಾಗಲಿದೆ. ವರ್ಚುವಲ್ ಮಾಧ್ಯಮದ ಮೂಲಕ ಚುರಾಚಂದಪುರ, ಮೋರೆಹ್ ಮತ್ತು ಕಾಂಗ್‌ಪೊಕ್ಪಿಯಿಂದ ಮಣಿಪುರ ಹೈಕೋರ್ಟ್‌ಗೆ ಹಾಜರಾಗಲು ಅನುಕೂಲವಾಗುವಂತೆ ಅಗತ್ಯ ವ್ಯವಸ್ಥೆಗಳನ್ನು ಮಾಡಲಾಗುತ್ತಿದೆ ಎಂದು ಅವರು ಹೇಳಿದರು. ಮಣಿಪುರದಲ್ಲಿ ಎಲ್ಲಾ ವ್ಯವಸ್ಥೆಗಳ ಸುಗಮ ಕಾರ್ಯನಿರ್ವಹಣೆಯನ್ನು ಖಚಿತಪಡಿಸಿಕೊಳ್ಳಲು, ಕೇಂದ್ರ ಗೃಹ ಸಚಿವಾಲಯದ ಜಂಟಿ ಕಾರ್ಯದರ್ಶಿ ಮಟ್ಟದ ಅಧಿಕಾರಿಗಳು ಮತ್ತು ವಿವಿಧ ಸಚಿವಾಲಯಗಳ ಐದು ನಿರ್ದೇಶಕ ಮಟ್ಟದ ಅಧಿಕಾರಿಗಳು ರಾಜ್ಯದಲ್ಲಿ ಉಪಸ್ಥಿತರಿರುತ್ತಾರೆ ಎಂದು ಶ್ರೀ ಶಾ ಹೇಳಿದರು.‌

ಮ್ಯಾನ್ಮಾರ್ ಮತ್ತು ಮಣಿಪುರ ಗಡಿಯಲ್ಲಿ 10 ಕಿಲೋಮೀಟರ್ ಗಡಿಯಲ್ಲಿ ಬೇಲಿ ಹಾಕುವ ಪ್ರಾಯೋಗಿಕ ಕಾರ್ಯವನ್ನು ಭಾರತ ಸರ್ಕಾರ ಪೂರ್ಣಗೊಳಿಸಿದೆ ಎಂದು ಕೇಂದ್ರ ಗೃಹ ಸಚಿವರು ಹೇಳಿದರು. 80 ಕಿಲೋಮೀಟರ್ ಬೇಲಿ ಕಾಮಗಾರಿಗೆ ಟೆಂಡರ್ ಪ್ರಕ್ರಿಯೆಯೂ ಪೂರ್ಣಗೊಂಡಿದೆ ಮತ್ತು ಉಳಿದ ಗಡಿ ಪ್ರದೇಶದಲ್ಲಿ ಬೇಲಿ ಹಾಕಲು ಸಮೀಕ್ಷೆ ನಡೆಯುತ್ತಿದೆ. ನೆರೆಯ ದೇಶಗಳಿಂದ ಬರುವ ಜನರ ಬಯೋಮೆಟ್ರಿಕ್ ಮತ್ತು ಕಣ್ಣಿನ ಗುರುತುಗಳನ್ನು ಸಹ ತೆಗೆದುಕೊಳ್ಳಲಾಗುತ್ತಿದ್ದು, ಈ ಪ್ರದೇಶದಲ್ಲಿ ಯಾರೂ ಹಿಂಸಾಚಾರವನ್ನು ಪ್ರಚೋದಿಸಬಾರದು ಎಂದು ಅವರು ಹೇಳಿದರು.

ಕಾರ್ಯಾಚರಣೆಯ ಅಮಾನತು ಒಪ್ಪಂದದ ಯಾವುದೇ ರೀತಿಯ ಉಲ್ಲಂಘನೆಯನ್ನು ಕಟ್ಟುನಿಟ್ಟಾಗಿ ನಿಗ್ರಹಿಸಲಾಗುವುದು ಮತ್ತು ಒಪ್ಪಂದದ ಉಲ್ಲಂಘನೆ ಎಂದು ಪರಿಗಣಿಸಲಾಗುವುದು ಎಂದು ಕೇಂದ್ರ ಗೃಹ ಸಚಿವರು ಹೇಳಿದರು. ಒಪ್ಪಂದದ ಎಲ್ಲಾ ಷರತ್ತುಗಳನ್ನು ಸಂಬಂಧಪಟ್ಟವರು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಅವರು ಹೇಳಿದರು. ಪೊಲೀಸರು ನಡೆಸಿದ ಪತ್ತೆ ಕಾರ್ಯಾಚರಣೆಯಲ್ಲಿ ಶಸ್ತ್ರಾಸ್ತ್ರಗಳನ್ನು ಹೊಂದಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು, ಆದ್ದರಿಂದ ಜನರು ತಮ್ಮ ಶಸ್ತ್ರಾಸ್ತ್ರಗಳನ್ನು ಪೊಲೀಸರಿಗೆ ಒಪ್ಪಿಸಬೇಕು ಎಂದು ಶ್ರೀ ಶಾ ಹೇಳಿದರು.

ಸಮಾಜದಲ್ಲಿ ಶಾಂತಿ ಸ್ಥಾಪಿಸುವ ಮತ್ತು ಸೌಹಾರ್ದತೆಯನ್ನು ಉತ್ತೇಜಿಸುವ ಸಮಯ ಬಂದಿದೆ ಎಂದು ಶ್ರೀ ಅಮಿತ್ ಶಾ ಅವರು ಎಲ್ಲಾ ನಾಗರಿಕ ಸಂಘಟನೆಗಳಿಗೆ ಮನವಿ ಮಾಡಿದರು. ಶಾಂತಿ ಸ್ಥಾಪಿಸಲು ಮತ್ತು ಚರ್ಚೆ ಮತ್ತು ಸೌಹಾರ್ದತೆಯ ವಾತಾವರಣವನ್ನು ನಿರ್ಮಿಸಲು ಪ್ರತಿಯೊಬ್ಬರೂ ಶ್ರಮಿಸಬೇಕು ಎಂದು ಅವರು ಹೇಳಿದರು.

ಏಪ್ರಿಲ್ 29 ರಂದು ಮಣಿಪುರದಲ್ಲಿ ಎರಡು ಗುಂಪುಗಳ ನಡುವೆ ಜನಾಂಗೀಯ ಘರ್ಷಣೆ ಮತ್ತು ಹಿಂಸಾಚಾರ ಪ್ರಾರಂಭವಾಯಿತು ಎಂದು ಕೇಂದ್ರ ಗೃಹ ಸಚಿವರು ಹೇಳಿದರು. ಕಳೆದ 6 ವರ್ಷಗಳಿಂದ ಮಣಿಪುರವು ಬಂದ್, ದಿಗ್ಬಂಧನ, ಕರ್ಫ್ಯೂ ಮತ್ತು ಹಿಂಸಾಚಾರದಿಂದ ಮುಕ್ತವಾಗಿದೆ ಮತ್ತು ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಮತ್ತು ಮುಖ್ಯಮಂತ್ರಿ ಶ್ರೀ ಎನ್. ಬಿರೇನ್ ಸಿಂಗ್ ಅವರ ನೇತೃತ್ವದಲ್ಲಿ ಮಣಿಪುರದ ಡಬಲ್ ಇಂಜಿನ್ ಸರ್ಕಾರವು ಅಭೂತಪೂರ್ವ ಪ್ರಗತಿಯನ್ನು ಸಾಧಿಸಿದೆ ಎಂದು ಅವರು ಹೇಳಿದರು. ರಾಜ್ಯದ ಅಭಿವೃದ್ಧಿಯ ಎಲ್ಲಾ ನಿಯತಾಂಕಗಳಲ್ಲಿ. ಕಳೆದ 6 ವರ್ಷಗಳು ಮಣಿಪುರದ ಇತಿಹಾಸದಲ್ಲಿ ಅಭಿವೃದ್ಧಿ ಮತ್ತು ಶಾಂತಿಯ ವರ್ಷಗಳಾಗಿವೆ ಎಂದು ಅವರು ಹೇಳಿದರು. ಈ ಪ್ರದೇಶದಲ್ಲಿ ಕೇಂದ್ರೀಯ ಸಂಸ್ಥೆಗಳನ್ನು ತೆರೆಯುವುದು, ಮೂಲಸೌಕರ್ಯಗಳನ್ನು ಬಲಪಡಿಸುವುದು, ಕೈಗಾರಿಕಾ ಹೂಡಿಕೆಯನ್ನು ತರುವುದು, ಶಿಕ್ಷಣ ಸಂಸ್ಥೆಗಳನ್ನು ಸುಗಮವಾಗಿ ನಡೆಸುವ ಮೂಲಕ ಮಣಿಪುರವನ್ನು ಶಿಕ್ಷಣ ಮತ್ತು ಈಶಾನ್ಯದ ಕ್ರೀಡಾ ಕೇಂದ್ರವನ್ನಾಗಿ ಮಾಡುವುದು ಸೇರಿದಂತೆ ಹಲವಾರು ಉಪಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಅವರು ಹೇಳಿದರು.

ಮಣಿಪುರದ ತಮ್ಮ ಭೇಟಿಯ ಸಂದರ್ಭದಲ್ಲಿ, ಅವರು ಎಲ್ಲಾ ವರ್ಗಗಳ ಜನರನ್ನು ಭೇಟಿ ಮಾಡಲಾಗಿದೆ, ತಾತ್ಕಾಲಿಕ ಪರಿಹಾರ ಶಿಬಿರಗಳಿಗೆ ಭೇಟಿ ನೀಡಲಾಗಿದೆ ಮತ್ತು ಇಂಫಾಲ್, ಮೋರೆಹ್, ಚುರಾಚಂದಪುರ ಮತ್ತು ಕಾಂಗ್‌ಪೋಕ್ಪಿಯಲ್ಲಿ ನಿಯೋಗಗಳು ಮತ್ತು ಸಂತ್ರಸ್ತರೊಂದಿಗೆ ಸಂವಾದ ನಡೆಸಲಾಗಿದೆ. ರಾಜ್ಯ ಸಂಪುಟದ ಸಚಿವರು ಮತ್ತು ಮಹಿಳಾ ಸಂಘಟನೆಗಳೊಂದಿಗೆ ಸಭೆಯನ್ನೂ ನಡೆಸಸಲಾಗಿದೆ ಎಂದು ಶ್ರೀ ಶಾ ಹೇಳಿದರು. ಇದರ ಹೊರತಾಗಿ, ಶ್ರೀ ಷಾ ಅವರು ಮೇಟಿ ಸಮುದಾಯದ ಸುಮಾರು 22 ನಾಗರಿಕ ಸೊಸೈಟಿ ಸಂಸ್ಥೆಗಳು (ಸಿಎಸ್ಒಗಳು) ಮತ್ತು ಕುಕಿ ಸಮುದಾಯದ ಸುಮಾರು 25 ಸಿಎಸ್ಒಗಳೊಂದಿಗೆ ಸಭೆ ನಡೆಸಿದರು. ಅವರು ಕಳೆದ 2 ದಿನಗಳಲ್ಲಿ ಸಮಾಜದ ಪ್ರತಿಯೊಂದು ವರ್ಗದ ಬುದ್ಧಿಜೀವಿಗಳು, ಪ್ರಾಧ್ಯಾಪಕರು, ನಿವೃತ್ತ ಅಧಿಕಾರಿಗಳು ಮತ್ತು ಜನರೊಂದಿಗೆ ಶಾಂತಿ ಮರುಸ್ಥಾಪಿಸುವ ಕ್ರಮಗಳನ್ನು ಕುರಿತು ಚರ್ಚಿಸಿದರು. 11 ರಾಜಕೀಯ ಪಕ್ಷಗಳ ಜತೆಯೂ ಚರ್ಚೆ ನಡೆಸಲಾಗಿದೆ. ಹೆಚ್ಚುವರಿಯಾಗಿ, ಕ್ರೀಡಾಪಟುಗಳು ಮತ್ತು ಎಲ್ಲಾ ಪಕ್ಷಗಳ ಚುನಾಯಿತ ಪ್ರತಿನಿಧಿಗಳೊಂದಿಗೆ ಚರ್ಚೆ ನಡೆಸಲಾಯಿತು ಎಂದು ಅವರು ಹೇಳಿದರು.

Detailed Information of Union Home Minister Shri Amit Shah’s 4-day Visit to Manipur

****

 

 


(Release ID: 1929335) Visitor Counter : 168