ಸಂಪುಟ
azadi ka amrit mahotsav

"ಸಹಕಾರಿ ವಲಯದಲ್ಲಿ ವಿಶ್ವದ ಅತಿ ದೊಡ್ಡ ಧಾನ್ಯ ಸಂಗ್ರಹ ಯೋಜನೆ" ಯ ಅನುಕೂಲಕ್ಕಾಗಿ ಅಂತರ-ಸಚಿವಾಲಯ ಸಮಿತಿಯ (ಐ.ಎಂ.ಸಿ) ಸ್ಥಾಪನೆ ಮತ್ತು ಅಧಿಕಾರ ನೀಡುವಿಕೆಗೆ ಕೇಂದ್ರ ಸಚಿವ ಸಂಪುಟ ಸಭೆಯಿಂದ ಅನುಮೋದನೆ

Posted On: 31 MAY 2023 3:35PM by PIB Bengaluru

ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯ, ಕೇಂದ್ರ ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣೆ ಸಚಿವಾಲಯ ಮತ್ತು ಕೇಂದ್ರ ಆಹಾರ ಸಂಸ್ಕರಣಾ ಉದ್ಯಮಗಳ ಸಚಿವಾಲಯಗಳ ವಿವಿಧ ಯೋಜನೆಗಳ ಒಗ್ಗೂಡಿಸುವಿಕೆಯಿಂದಾಗುವ “ಸಹಕಾರಿ ವಲಯದಲ್ಲಿ ವಿಶ್ವದ ಅತಿದೊಡ್ಡ ಧಾನ್ಯ ಸಂಗ್ರಹ ಯೋಜನೆ” ಯ ಅನುಕೂಲಕ್ಕಾಗಿ ನೂತನ ಅಂತರ್ ಸಚಿವರ ಸಮಿತಿಯ (ಐ.ಎಂ.ಸಿ.) ಸ್ಥಾಪನೆ ಮತ್ತು ಸಮಿತಿಗೆ ಅಧಿಕಾರ ನೀಡುವಿಕೆಯನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ಇಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆಯು ಅಂಗೀಕರಿಸಿತು 

ವೃತ್ತಿಪರ ರೀತಿಯಲ್ಲಿ ಯೋಜನೆಯ ಸಮಯಕ್ಕೆ ಮತ್ತು ಏಕರೂಪದ ಅನುಷ್ಠಾನವನ್ನು ಖಚಿತಪಡಿಸಿಕೊಳ್ಳಲು, ಕೇಂದ್ರ ಸಹಕಾರ ಸಚಿವಾಲಯವು ದೇಶದ ವಿವಿಧ ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳ ಕನಿಷ್ಠ 10 ಆಯ್ದ ಜಿಲ್ಲೆಗಳಲ್ಲಿ ಯೋಜನೆಯನ್ನು ಪ್ರಾಯೋಗಿಕವಾಗಿ ಜಾರಿಗೊಳಿಸಲಿದೆ. ಈ ಪೈಲಟ್ ಯೋಜನೆಯು, ಯೋಜನೆಯ ವಿವಿಧ ಪ್ರಾದೇಶಿಕ ಅಗತ್ಯತೆಗಳ ಕುರಿತು ಮೌಲ್ಯಯುತ ಒಳನೋಟಗಳನ್ನು ಒದಗಿಸಲಿದೆ. ಆ ನಂತರ ಯೋಜನೆಯನ್ನು ದೇಶಾದ್ಯಂತ ಅನುಷ್ಠಾನಕ್ಕೆ ಸೂಕ್ತವಾದ ಕಲಿಕೆ ವ್ಯವಸ್ಥೆಗಳನ್ನು ಅಳವಡಿಸಿಕೊಳ್ಳಲಾಗುವುದು. 

ಅನುಷ್ಠಾನ

ಆಯಾ ಸಚಿವಾಲಯಗಳ ಯೋಜನೆಗಳ ಅನುಷ್ಠಾನ ವಿಧಾನಗಳು ಮತ್ತು ಅಗತ್ಯವಿದ್ದಾಗ, ಮತ್ತು ಹೆಚ್ಚುವರಿ ಉದ್ದೇಶಗಳಿಗಾಗಿ, ಆಯ್ದ 'ಕಾರ್ಯಸಾಧ್ಯ' ಪ್ರಾಥಮಿಕ ಕೃಷಿ ಸಾಲ ಸಂಘ(ಸೊಸೈಟಿ)ಗಳಲ್ಲಿ ಅನುಮೋದಿತ ವೆಚ್ಚಗಳಲ್ಲಿ ನಿಗದಿತ ಗುರಿ ಮತ್ತು ಕೃಷಿಗಾಗಿ ಗೋಡೌನ್ಗಳಂತಹ ಮೂಲಸೌಕರ್ಯಗಳನ್ನು ರಚಿಸುವ ಮೂಲಕ 'ಸಹಕಾರಿ ವಲಯದಲ್ಲಿ ವಿಶ್ವದ ಅತಿದೊಡ್ಡ ಧಾನ್ಯ ಸಂಗ್ರಹ ಯೋಜನೆ'ಯ ಅನುಷ್ಠಾನದ ಅನುಕೂಲಕ್ಕಾಗಿ ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯ, ಕೇಂದ್ರ ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣೆ ಸಚಿವಾಲಯ ಮತ್ತು ಕೇಂದ್ರ ಆಹಾರ ಸಂಸ್ಕರಣಾ ಉದ್ಯಮಗಳ ಸಚಿವಾಲಯಗಳ ಸಚಿವರು ಮತ್ತು ಕಾರ್ಯದರ್ಶಿಗಳು ತಯಾರಿಸುವ ಮಾರ್ಗಸೂಚಿಗಳನ್ನು ರೂಪಿಸಲು ಕೇಂದ್ರ ಸಹಕಾರ ಸಚಿವರ ಅಧ್ಯಕ್ಷತೆಯಲ್ಲಿ ಅಂತರ-ಸಚಿವಾಲಯ ಸಮಿತಿಯನ್ನು (ಐ.ಎಂ.ಸಿ.) ರಚಿಸಲಾಗುವುದು. 

 ಆಯಾ ಸಚಿವಾಲಯಗಳ ಗುರುತಿಸಲಾದ ಯೋಜನೆಗಳ ಅಡಿಯಲ್ಲಿ ಒದಗಿಸಲಾದ ಲಭ್ಯವಿರುವ ವೆಚ್ಚಗಳನ್ನು ಬಳಸಿಕೊಂಡು ಯೋಜನೆಯನ್ನು ಕಾರ್ಯಗತಗೊಳಿಸಲಾಗುತ್ತದೆ. ಒಂದೇ ಯೋಜನೆಯಡಿಯಲ್ಲಿ ಸಮ್ಮೀಳನಗೊಳಿಸಿ ಅನುಷ್ಠಾನದ ಉದ್ದೇಶ ಒಮ್ಮುಖವಾಗಲು ಈ ಕೆಳಗಿನ ಯೋಜನೆಗಳನ್ನು ಗುರುತಿಸಲಾಗಿದೆ:

(ಎ) ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯ:

1. ಕೃಷಿ ಮೂಲಸೌಕರ್ಯ ನಿಧಿ (ಎಐಎಫ್),
2. ಕೃಷಿ ಮಾರುಕಟ್ಟೆ ಮೂಲಸೌಕರ್ಯ ಯೋಜನೆ (ಎಎಂಐ),
3. ಮಿಷನ್ ಫಾರ್ ಇಂಟಿಗ್ರೇಟೆಡ್ ಡೆವಲಪ್ಮೆಂಟ್ ಆಫ್ ಹಾರ್ಟಿಕಲ್ಚರ್ (ಎಂಐಡಿಹೆಚ್),
4. ಕೃಷಿ ಯಾಂತ್ರೀಕರಣದ ಉಪ ಮಿಷನ್ (ಎಸ್.ಎಂ.ಎ.ಎಂ)

(ಬಿ) ಆಹಾರ ಸಂಸ್ಕರಣಾ ಕೈಗಾರಿಕೆಗಳ ಸಚಿವಾಲಯ:

1. ಪ್ರಧಾನ ಮಂತ್ರಿ ಫಾರ್ಮಲೈಸೇಷನ್ ಆಫ್ ಮೈಕ್ರೊ ಫುಡ್ ಪ್ರೊಸೆಸಿಂಗ್ ಎಂಟರ್ಪ್ರೈಸಸ್ ಸ್ಕೀಮ್ (ಪಿ.ಎಂ.ಎಫ್.ಎಂ.ಇ) 
2. ಪ್ರಧಾನ ಮಂತ್ರಿ ಕಿಸಾನ್ ಸಂಪದ ಯೋಜನೆ (ಪಿ.ಎಂ.ಕೆ.ಎಸ್.ವೈ)

(ಸಿ) ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯ:

1. ರಾಷ್ಟ್ರೀಯ ಆಹಾರ ಭದ್ರತಾ ಕಾಯಿದೆಯಡಿ ಆಹಾರ ಧಾನ್ಯಗಳ ಹಂಚಿಕೆ,
2. ಕನಿಷ್ಠ ಬೆಂಬಲ ಬೆಲೆಯಲ್ಲಿ ಸಂಗ್ರಹಣೆ ಕಾರ್ಯಾಚರಣೆಗಳು,

ಯೋಜನೆಯ ಪ್ರಯೋಜನಗಳು

* ಯೋಜನೆಯು ಬಹುಮುಖವಾಗಿದೆ - ಇದು ಪ್ರಾಥಮಿಕ ಕೃಷಿ ಸಾಲ ಸಂಘಗಳು (ಪಿ.ಎ.ಸಿ.ಎಸ್) ಮಟ್ಟದಲ್ಲಿ ಗೋಡೌನ್ಗಳನ್ನು ಸ್ಥಾಪಿಸಲು ಅನುಕೂಲವಾಗುವಂತೆ ದೇಶದಲ್ಲಿ ಕೃಷಿ ಶೇಖರಣಾ (ಸಂಗ್ರಹಣಾ) ಮೂಲಸೌಕರ್ಯಗಳ ಕೊರತೆಯನ್ನು ಪರಿಹರಿಸುವ ಗುರಿಯನ್ನು ಹೊಂದಿದೆ, ಇದರ ಜೊತೆಗೆ ಪ್ರಾಥಮಿಕ ಕೃಷಿ ಸಾಲ ಸಂಘಗಳಿಗೆ (ಪಿ.ಎ.ಸಿ.ಎಸ್) ಇತರ ಹಲವಾರು ಪೂರಕ ಚಟುವಟಿಕೆಗಳನ್ನು ಕೈಗೊಳ್ಳಲು ಅನುವು ಮಾಡಿಕೊಡುತ್ತದೆ, ಅವುಗಳೆಂದರೆ:

- ರಾಜ್ಯ ಏಜೆನ್ಸಿಗಳು/ ಭಾರತೀಯ ಆಹಾರ ನಿಗಮ (ಎಫ್.ಸಿ.ಐ) ಗಾಗಿ ಖರೀದಿ ಕೇಂದ್ರಗಳಾಗಿ ಕಾರ್ಯನಿರ್ವಹಿಸುವುದು;
- ನ್ಯಾಯಬೆಲೆ ಅಂಗಡಿಗಳಾಗಿ (ಎಫ್.ಪಿ.ಎಸ್) ಸೇವೆ ಸಲ್ಲಿಸುವುದು;
- ಆವಶ್ಯಕ ನೇಮಕಾತಿ ಕೇಂದ್ರಗಳನ್ನು ಸ್ಥಾಪಿಸುವುದು;
 
 * ಕೃಷಿ ಉತ್ಪನ್ನಗಳಿಗೆ ವಿಶ್ಲೇಷಣೆ, ವಿಂಗಡಣೆ, ಗ್ರೇಡಿಂಗ್ ಘಟಕಗಳು ಸೇರಿದಂತೆ ಸಾಮಾನ್ಯ ಸಂಸ್ಕರಣಾ ಘಟಕಗಳನ್ನು ಸ್ಥಾಪಿಸುವುದು.

* ಇದಲ್ಲದೆ, ಸ್ಥಳೀಯ ಮಟ್ಟದಲ್ಲಿ ವಿಕೇಂದ್ರೀಕೃತ ಶೇಖರಣಾ ಸಾಮರ್ಥ್ಯವನ್ನು ರಚಿಸುವುದು. ಇದು ಆಹಾರ ಧಾನ್ಯದ ವ್ಯರ್ಥವನ್ನು ಕಡಿಮೆ ಮಾಡುತ್ತದೆ ಮತ್ತು ದೇಶದ ಆಹಾರ ಭದ್ರತೆಯನ್ನು ಬಲಪಡಿಸುತ್ತದೆ.

* ರೈತರಿಗೆ ವಿವಿಧ ಆಯ್ಕೆಗಳನ್ನು ಒದಗಿಸುವ ಮೂಲಕ, ಇದು ಬೆಳೆಗಳ ಸಂಕಷ್ಟದ ಕಡಿಮೆ ಬೆಲೆಯ ಮಾರಾಟವನ್ನು ತಡೆಯುತ್ತದೆ, ಹೀಗಾಗಿ ರೈತರು ತಮ್ಮ ಉತ್ಪನ್ನಗಳಿಗೆ ಉತ್ತಮ ಬೆಲೆಯನ್ನು ಆಯ್ಕೆ ಮಾಡಿಕೊಳ್ಳಲು ಅನುವು ಮಾಡಿಕೊಡುತ್ತದೆ.

* ಇದು ಆಹಾರ ಧಾನ್ಯಗಳನ್ನು ಖರೀದಿ ಕೇಂದ್ರಗಳಿಗೆ ದಾಸ್ತಾನುಗಳನ್ನು ಸಾಗಿಸಲು ತಗಲುವ ವೆಚ್ಚವನ್ನು ಕಡಿಮೆ ಮಾಡುತ್ತದೆ ಮತ್ತು ಗೋದಾಮುಗಳಿಂದ ಎಫ್.ಪಿ.ಎಸ್. ಗಳಿಗೆ ದಾಸ್ತಾನುಗಳನ್ನು ಸಾಗಿಸಲು ಸಹಾಯ ಮಾಡುತ್ತದೆ.

* 'ಸಂಪೂರ್ಣ ಸರ್ಕಾರದ ಪಾಲ್ಗೊಳ್ಳುವಿಕೆ' ವಿಧಾನದ ಮೂಲಕ, ಯೋಜನೆಯು ಪ್ರಾಥಮಿಕ ಕೃಷಿ ಸಾಲ ಸಂಘ (ಪಿ.ಎ.ಸಿ.ಎಸ್) ಗಳನ್ನು ಬಲಪಡಿಸುತ್ತವೆ ಮತ್ತು ಅವುಗಳ ವ್ಯಾಪಾರ ಚಟುವಟಿಕೆಗಳನ್ನು ವೈವಿಧ್ಯಗೊಳಿಸಲು ಅನುವು ಮಾಡಿಕೊಡುತ್ತದೆ, ಹೀಗಾಗಿ, ಈ ಮೂಲಕ ರೈತ ಸದಸ್ಯರ ಆದಾಯವನ್ನು ಹೆಚ್ಚಿಸುತ್ತದೆ.


ಸಮಯದ ಚೌಕಟ್ಟು ಮತ್ತು ಅನುಷ್ಠಾನದ ವಿಧಾನ

* ಸಚಿವ ಸಂಪುಟದ ಒಪ್ಪಿಗೆ ದೊರೆತ ಒಂದು ವಾರದೊಳಗೆ ರಾಷ್ಟ್ರೀಯ ಮಟ್ಟದ ಸಮನ್ವಯ ಸಮಿತಿ ರಚನೆಯಾಗಲಿದೆ.

* ಸಚಿವ ಸಂಪುಟದ ಅನುಮೋದನೆಯ ನಂತರ 15 ದಿನಗಳಲ್ಲಿ ಅನುಷ್ಠಾನದ ಮಾರ್ಗಸೂಚಿಗಳನ್ನು ಹೊರಡಿಸಲಾಗುತ್ತದೆ. 

* ಸಚಿವ ಸಂಪುಟದ ಅನುಮೋದನೆಯ 45 ದಿನಗಳಲ್ಲಿ ಭಾರತ ಸರ್ಕಾರ ಮತ್ತು ರಾಜ್ಯ ಸರ್ಕಾರಗಳ ಕೊಂಡಿಯಾಗಿ, ಸರ್ಕಾರದೊಂದಿಗೆ ಪ್ರಾಥಮಿಕ ಕೃಷಿ ಸಾಲ ಸಂಘಗಳ (ಪಿ.ಎ.ಸಿ.ಎಸ್) ಸಂಪರ್ಕಕ್ಕಾಗಿ ನೂತನ ಜಾಲತಾಣವನ್ನು ರೂಪಿಸಲಾಗುವುದು.

* ಸಚಿವ ಸಂಪುಟದ ಅನುಮೋದನೆಯ 45 ದಿನಗಳಲ್ಲಿ ಪ್ರಸ್ತಾವನೆಯ ಅನುಷ್ಠಾನ ಪ್ರಾರಂಭವಾಗುತ್ತದೆ.

ಹಿನ್ನೆಲೆ

ಭಾರತದ ಪ್ರಧಾನಮಂತ್ರಿ ಅವರ ಆಶಯದಂತೆ "ಸಹಕಾರ-ಸೇ-ಸಮೃದ್ಧಿ"ಯ ದೃಷ್ಟಿಕೋನವನ್ನು ಸಾಕಾರಗೊಳಿಸಲು ಸಹಕಾರಿಗಳ ಬಲವನ್ನು ಸದುಪಯೋಗಪಡಿಸಿಕೊಳ್ಳಲು ಮತ್ತು ಅವುಗಳನ್ನು ಯಶಸ್ವಿ ಮತ್ತು ಉದಯೋನ್ಮುಖ ವ್ಯಾಪಾರಗಳನ್ನು ಉದ್ಯಮಗಳಾಗಿ ಪರಿವರ್ತಿಸಲು ಎಲ್ಲಾ ಪ್ರಯತ್ನಗಳನ್ನು ಮಾಡಲಾಗುವುದು. ಈ ದೃಷ್ಟಿಯನ್ನು ಮುಂದಕ್ಕೆ ಕೊಂಡೊಯ್ಯಲು, ಕೇಂದ್ರ ಸಹಕಾರ ಸಚಿವಾಲಯವು 'ಸಹಕಾರಿ ವಲಯದಲ್ಲಿ ವಿಶ್ವದ ಅತಿ ದೊಡ್ಡ ಧಾನ್ಯ ಸಂಗ್ರಹ ಯೋಜನೆ'ಯನ್ನು ಹೊರತಂದಿದೆ. ಯೋಜನೆಯ ಮೂಲಕ ಪ್ರಾಥಮಿಕ ಕೃಷಿ ಸಾಲ ಸಂಘಗಳ (ಪಿ.ಎ.ಸಿ.ಎಸ್) ಮಟ್ಟದಲ್ಲಿ ಗೋದಾಮು, ಕಸ್ಟಮ್ ನೇಮಕಾತಿ ಕೇಂದ್ರ, ಸಂಸ್ಕರಣಾ ಘಟಕಗಳು, ಇತ್ಯಾದಿ ಸೇರಿದಂತೆ ವಿವಿಧ ರೀತಿಯ ಕೃಷಿ-ಮೂಲಸೌಕರ್ಯಗಳನ್ನು ಸ್ಥಾಪಿಸಲಾಗುವುದು, ಹೀಗಾಗಿ ಸಂಘ(ಸೊಸೈಟಿ)ಗಳನ್ನು ವಿವಿಧೋದ್ದೇಶ ಸಮಾಜ ಅಭಿವೃದ್ಧಿ ಕೇಂದ್ರಗಳಾಗಿ ಪರಿವರ್ತಿಸಲಾಗುವುದು. ಪ್ರಾಥಮಿಕ ಕೃಷಿ ಸಾಲ ಸಂಘಗಳ (ಪಿ.ಎ.ಸಿ.ಎಸ್) ಮಟ್ಟದಲ್ಲಿ ಮೂಲಸೌಕರ್ಯಗಳ ರಚನೆ ಮತ್ತು ಆಧುನೀಕರಣವು ಸಾಕಷ್ಟು ಶೇಖರಣಾ ಸಾಮರ್ಥ್ಯವನ್ನು ಸೃಷ್ಟಿಸುವ ಮೂಲಕ ಆಹಾರ ಧಾನ್ಯದ ವ್ಯರ್ಥವನ್ನು ಕಡಿಮೆ ಮಾಡಲು ಸಾಧ್ಯವಿದೆ. ಈ ಯೋಜನೆಯು ದೇಶದ ಆಹಾರ ಭದ್ರತೆಯನ್ನು ಬಲಪಡಿಸುತ್ತದೆ ಮತ್ತು ರೈತರಿಗೆ ಅಥವಾ ಅವರ ಬೆಳೆಗಳಿಗೆ ಉತ್ತಮ ಬೆಲೆಗಳನ್ನು ಪಡೆಯಲು ಅನುವು ಮಾಡಿಕೊಡುತ್ತದೆ. 

ದೇಶದ 1,00,000 ಕ್ಕೂ ಹೆಚ್ಚು ಪ್ರಾಥಮಿಕ ಕೃಷಿ ಸಾಲ ಸೊಸೈಟಿ (ಸಂಘ)ಗಳು (ಪಿ.ಎ.ಸಿ.ಎಸ್) ಒಟ್ಟಾರೆ 13 ಕೋಟಿಗೂ ಹೆಚ್ಚು ರೈತರ ಬೃಹತ್ ಸದಸ್ಯರನ್ನು ಹೊಂದಿವೆ. ಭಾರತೀಯ ಆರ್ಥಿಕತೆಯ ಕೃಷಿ ಮತ್ತು ಗ್ರಾಮೀಣ ಸನ್ನಿವೇಶಗಳನ್ನು ಪರಿವರ್ತಿಸುವಲ್ಲಿ ತಳಮಟ್ಟದಲ್ಲಿ ಪ್ರಾಥಮಿಕ ಕೃಷಿ ಸಾಲ ಸಂಘಗಳು (ಪಿ.ಎ.ಸಿ.ಎಸ್) ವಹಿಸಿದ ಪ್ರಮುಖ ಪಾತ್ರವನ್ನು ಗಮನದಲ್ಲಿಟ್ಟುಕೊಂಡು ಮತ್ತು ಸಮಾಜದ ಕಟ್ಟಕಡೆಯ ವ್ಯಕ್ತಿಯವರೆಗೆ ಆಳವಾದ ಮತ್ತು ವಿಸ್ತಾರದ ವ್ಯಾಪ್ತಿಯನ್ನು ಹತೋಟಿಗೆ ತರಲು, ಸಂಘಗಳ ಮಟ್ಟದಲ್ಲಿ ವಿಕೇಂದ್ರೀಕೃತ ಶೇಖರಣಾ ಸಾಮರ್ಥ್ಯವನ್ನು ಸ್ಥಾಪಿಸಲು ಅನುಕೂಲವಾಗುವಂತೆ, ಇತರ ಕೃಷಿ ಮೂಲಸೌಕರ್ಯಗಳ ಜೊತೆಗೆ ಈ ನೂತನ ಉಪಕ್ರಮವನ್ನು ಪ್ರಾರಂಭಿಸಲಾಗಿದೆ. ಇದು ದೇಶದ ಆಹಾರ ಭದ್ರತೆಯನ್ನು ಬಲಪಡಿಸುವುದಲ್ಲದೆ, ಪ್ರಾಥಮಿಕ ಕೃಷಿ ಸಾಲ ಸಂಘಗಳನ್ನು (ಪಿ.ಎ.ಸಿ.ಎಸ್) ಅತ್ಯುತ್ತಮ ಆರ್ಥಿಕ ಘಟಕಗಳಾಗಿ ಪರಿವರ್ತಿಸಲು ಅನುವು ಮಾಡಿಕೊಡುತ್ತದೆ. 

**


(Release ID: 1928701) Visitor Counter : 236