ನಾಗರೀಕ ವಿಮಾನಯಾನ ಸಚಿವಾಲಯ

ಕಲಬುರ್ಗಿ ವಿಮಾನ ನಿಲ್ದಾಣದಲ್ಲಿ ರಾತ್ರಿ ನಿಲುಗಡೆ ಸೌಲಭ್ಯಕ್ಕೆ ಡಿಜಿಸಿಎಯ ಅನುಮೋದನೆ


ನವೆಂಬರ್ 22, 2019ರಂದು ಕಲಬುರ್ಗಿ ವಿಮಾನ ನಿಲ್ದಾಣವನ್ನು ಉದ್ಘಾಟಿಸಲಾಯಿತು

Posted On: 29 MAY 2023 3:58PM by PIB Bengaluru

ಮೇ 17, 2023ರಂದು ನಾಗರಿಕ ವಿಮಾನಯಾನ ನಿರ್ದೇಶನಾಲಯದಿಂದ (ಡಿಜಿಸಿಎ) ಕಲಬುರ್ಗಿ ವಿಮಾನ ನಿಲ್ದಾಣದಲ್ಲಿ ರಾತ್ರಿ ನಿಲುಗಡೆ ಸೌಲಭ್ಯದ  ಅನುಮೋದನೆ ದೊರೆತಿದೆ.

ಕಲಬುರ್ಗಿ ವಿಮಾನ ನಿಲ್ದಾಣವನ್ನು ನವೆಂಬರ್ 22, 2019ರಂದು ಅಂದಿನ ಕರ್ನಾಟಕದ ಮುಖ್ಯಮಂತ್ರಿ ಶ್ರೀ ಬಿ. ಎಸ್. ಯಡಿಯೂರಪ್ಪನವರು ಉದ್ಘಾಟಿಸಿದರು. ಇದು ಒಂದು ಎ-320 ಮತ್ತು ಎರಡು ಎಟಿಆರ್ 72 / ಕ್ಯೂ-400 ವಿಮಾನಗಳನ್ನು ನಿಲ್ಲಿಸಲು ಸೂಕ್ತವಾದ, 09-27 (3175 ಮೀ x 45 ಮೀ) ರನ್ ವೇ ಮತ್ತು ಏಪ್ರಾನ್ ಸ್ಥಳವನ್ನು ಹೊಂದಿದೆ.

ಈ ವಿಮಾನ ನಿಲ್ದಾಣದಲ್ಲಿ ರಾತ್ರಿ ನಿಲುಗಡೆ ಸೌಲಭ್ಯಗಳನ್ನು ಒದಗಿಸಬೇಕೆಂಬ ಬೇಡಿಕೆ ಬಹಳ ಹಿಂದಿನಿಂದಲೂ ಇತ್ತು. ಡಿಜಿಸಿಎಯ ರಾತ್ರಿ ನಿಲುಗಡೆ ಸೌಲಭ್ಯದ ಅನುಮೋದನೆಯೊಂದಿಗೆ ಈ ವಿಮಾನ ನಿಲ್ದಾಣದ ಏರೋಡ್ರೋಮ್ ಪರವಾನಗಿಯನ್ನು ಎಲ್ಲಾ ಹವಾಮಾನ ಕಾರ್ಯಾಚರಣೆಗಳಿಗಾಗಿ ವಿಎಫ್ಆರ್ ನಿಂದ (ದೃಶ್ಯ ವಿಮಾನ ನಿಯಮಗಳು) ಐಎಫ್ಆರ್ ಗೆ (ಇನ್ಸ್ಟ್ರುಮೆಂಟಲ್ ಫ್ಲೈಟ್ ರೂಲ್ಸ್) ತಿದ್ದುಪಡಿ ಮಾಡಿ ಬದಲಿಸಲಾಗಿದೆ.

ಕಲಬುರ್ಗಿ ವಿಮಾನ ನಿಲ್ದಾಣವು ಈ ಕೆಳಗೆ ಸೂಚಿಸಿರುವ ನಗರ ಸಂಪರ್ಕವನ್ನು ಹೊಂದಿದೆ:

ವಿಮಾನ ನಿಲ್ದಾಣ

ವಿಮಾನ ಸಂಸ್ಥೆ

ಹಿಂದಿನ/ಮುಂದಿನ ನಗರ ಸಂಪರ್ಕ

ಸ್ಲಾಟ್ ಹಂಚಿಕೆಯ ಪ್ರಕಾರ ವಾರದ ಚಲನೆಗಳು (ಆಗಮನ / ನಿರ್ಗಮನ)

ಜಿಬಿಐ

ಸ್ಟಾರ್ ಏರ್

ತಿರುಪತಿ

8

ಜಿಬಿಐ

ಅಲಯನ್ಸ್ ಏರ್

ಬೆಂಗಳೂರು

10

ಜಿಬಿಐ

ಸ್ಟಾರ್ ಏರ್

ಬೆಂಗಳೂರು

8

****

 



(Release ID: 1928106) Visitor Counter : 96


Read this release in: Telugu , English , Urdu , Hindi