ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ

2023ರ ಮೇ 23 – 25 ರವರೆಗೆ ಬೆಂಗಳೂರಿನಲ್ಲಿ 2 ನೇ ವ್ಯಾಪಾರ ಮತ್ತು ಹೂಡಿಕೆ ಕಾರ್ಯಕಾರಿ ಗುಂಪು (ಟಿಐಡಬ್ಲ್ಯುಜಿ) ಸಭೆ


ಶ್ರೀಮತಿ ಅನುಪ್ರಿಯ ಪಟೇಲ್ ಅವರಿಂದ ಎರಡನೇಯ ಟಿಐಡಬ್ಲ್ಯುಜಿ ಉದ್ಘಾಟನೆ

Posted On: 19 MAY 2023 12:25PM by PIB Bengaluru

ಭಾರತದ ಜಿ20 ಅಧ್ಯಕ್ಷತೆಯ ಅಡಿಯಲ್ಲಿ 2 ನೇ ವ್ಯಾಪಾರ ಮತ್ತು ಹೂಡಿಕೆ ಕಾರ್ಯಕಾರಿ ಗುಂಪು (ಟಿಐಡಬ್ಲ್ಯುಜಿ) ಸಭೆಯು 2023ರ ಮೇ 23-25 ರವರೆಗೆ ಬೆಂಗಳೂರಿನಲ್ಲಿ ನಡೆಯಲಿದೆ. ಈ ಸಭೆಯನ್ನು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ರಾಜ್ಯ ಸಚಿವರಾದ ಶ್ರೀಮತಿ ಅನುಪ್ರಿಯ ಪಟೇಲ್ ಅವರು ಮೇ 24, 2023 ರಂದು ಉದ್ಘಾಟಿಸಲಿದ್ದಾರೆ. ಈ ಮೂರು ದಿನಗಳ ಸಭೆಯಲ್ಲಿ, ಜಿ20 ಸದಸ್ಯ ರಾಷ್ಟ್ರಗಳು, ಆಹ್ವಾನಿತ ದೇಶಗಳು, ಪ್ರಾದೇಶಿಕ ಗುಂಪುಗಳು ಮತ್ತು ಅಂತರರಾಷ್ಟ್ರೀಯ ಸಂಸ್ಥೆಗಳ 100 ಕ್ಕೂ ಹೆಚ್ಚು ಪ್ರತಿನಿಧಿಗಳು ಬಹುಪಕ್ಷೀಯ ವ್ಯಾಪಾರ ವ್ಯವಸ್ಥೆ ಸುಧಾರಣೆ, ಜಾಗತಿಕ ವ್ಯಾಪಾರದಲ್ಲಿ ಎಂಎಸ್‌ಎಂಇಗಳನ್ನು ಸಂಯೋಜಿಸುವುದು, ಜಿವಿಸಿಗಳು, ಬೆಳವಣಿಗೆ ಮತ್ತು ಸಮೃದ್ಧಿಗಾಗಿ ವ್ಯಾಪಾರವು ಕಾರ್ಯನಿರ್ವಹಿಸುವಂತೆ ಮಾಡುವುದು ಮತ್ತು ವ್ಯಾಪಾರಕ್ಕಾಗಿ ಸಮರ್ಥ ಲಾಜಿಸ್ಟಿಕ್ಸ್ ಕುರಿತು ಚರ್ಚೆ ನಡೆಸುತ್ತಾರೆ.

ಟಿಐಡಬ್ಲ್ಯುಜಿ ಯ ಮೊದಲ ದಿನವಾದ ಮೇ 23 ರಂದು, ವ್ಯಾಪಾರ ಮತ್ತು ತಂತ್ರಜ್ಞಾನದ ಕುರಿತು ವಿಚಾರಸಂಕಿರಣವನ್ನು ಆಯೋಜಿಸಲಾಗಿದೆ. ತಂತ್ರಜ್ಞಾನವು ಮರುರೂಪಿಸಿರುವ ವ್ಯಾಪಾರ ಮತ್ತು ಅಂತರ್ಗತ ಬೆಳವಣಿಗೆಯನ್ನು ಚಾಲನೆ ಮಾಡುವಲ್ಲಿ ತಂತ್ರಜ್ಞಾನದ ಪಾತ್ರದಂತಹ ವಿಷಯಗಳ ಬಗ್ಗೆ ಆಯಾ ಕ್ಷೇತ್ರದ ತಜ್ಞರು, ಶಿಕ್ಷಣ ತಜ್ಞರು ಮತ್ತು ಅಭ್ಯಾಸಕಾರರನ್ನು ಒಳಗೊಂಡ ಎರಡು ತಂಡಗಳು ಚರ್ಚೆಗಳನ್ನು ನಡೆಸುತ್ತವೆ. ವಿಚಾರಸಂಕಿರಣ ನಂತರ ಜಿ20 ಪ್ರತಿನಿಧಿಗಳಿಗೆ ನಗರ ಪ್ರವಾಸ, ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ರಾತ್ರಿ ಊಟ ಏರ್ಪಡಿಸಲಾಗಿದೆ.

ವಿಶ್ವ ವ್ಯಾಪರ ಸಂಸ್ಥೆ (ಡಬ್ಲ್ಯುಟಿಒ)ಸುಧಾರಣೆಯ ವಿಷಯವು ಭಾರತದ ಅಧ್ಯಕ್ಷತೆಯ ಆದ್ಯತೆಗಳಲ್ಲಿ ಒಂದಾಗಿದೆ. ಮೇ 24, 2023 ರಂದು ತಾಂತ್ರಿಕ ಅಧಿವೇಶನದಲ್ಲಿ ಇದನ್ನು ಚರ್ಚಿಸಲಾಗುವುದು. ಈ ಚರ್ಚೆಗಳ ಮಹತ್ವವು ಮರ್ರಕೇಶ್ ಒಪ್ಪಂದ ಮತ್ತು ಅದರ ಬಹುಪಕ್ಷೀಯ ವ್ಯಾಪಾರ ಒಪ್ಪಂದಗಳ ಅಂಗವಾಗಿರುವ ಡಬ್ಲ್ಯುಟಿಒದ ಮೂಲಭೂತ ತತ್ವಗಳನ್ನು ಪುನರುಚ್ಚರಿಸುತ್ತದೆ. ಹೀಗಾಗಿ ಡಬ್ಲ್ಯುಟಿಒದ ಮುಕ್ತ, ಅಂತರ್ಗತ ಮತ್ತು ಪಾರದರ್ಶಕ ಕಾರ್ಯನಿರ್ವಹಣೆಯ ಅಗತ್ಯವನ್ನು ಗುರುತಿಸುತ್ತದೆ. ಜ್ಞಾನ ಪಾಲುದಾರರಿಂದ ವಿಷಯದ ಬಗ್ಗೆ ಪ್ರಸ್ತುತಿ ಸಹ ಇರುತ್ತದೆ.

ಎರಡನೇ ಮತ್ತು ಮೂರನೇ ದಿನದಲ್ಲಿ, ಗಡಿಯಾಚೆಗಿನ ವ್ಯಾಪಾರಕ್ಕೆ ನಿರ್ಣಾಯಕವಾಗಿರುವ ಮತ್ತು ಎಂಎಸ್‌ಎಂಇಗಳಿಗೆ ಮೆಟಾ ಮಾಹಿತಿ ಪೋರ್ಟಲ್ ರಚಿಸಲು ಕ್ರಿಯಾ ಯೋಜನೆಯನ್ನು ಅಭಿವೃದ್ಧಿಪಡಿಸುವ ಬಿಲ್‌ಗಳು ಮತ್ತು ಮೂಲದ ಪ್ರಮಾಣಪತ್ರದಂತಹ ಕಾಗದದ ದಾಖಲೆಗಳ ಡಿಜಿಟಲೀಕರಣ, ಜಿವಿಸಿಗಳನ್ನು ಮ್ಯಾಪಿಂಗ್ ಮಾಡಲು ಫ್ರೇಮ್‌ವರ್ಕ್, ಪರಸ್ಪರ ಗುರುತಿಸುವಿಕೆ ಒಪ್ಪಂದಗಳು (ಎಂಆರ್‌ಎಗಳು) ಮತ್ತು ಜಿ20 ನಿಯಂತ್ರಕ ಮಾತುಕತೆಯ ಮೇಲಿನ ಉತ್ತಮ ಅಭ್ಯಾಸಗಳಿಗೆ ಸಂಬಂಧಿಸಿದ ಪ್ರಸ್ತುತಿಗಳನ್ನು ನೀಡಲಾಗುತ್ತದೆ. ಮಾರ್ಚ್ 28 ರಿಂದ 30, 2023 ರವರೆಗೆ ಮುಂಬೈನಲ್ಲಿ ನಡೆದ ಮೊದಲನೇ ಟಿಐಡಬ್ಲ್ಯುಜಿ ಸಭೆಯಲ್ಲಿ ನಡೆದ ಚರ್ಚೆಗಳಿಂದ ಈ ಫಲಿತಾಂಶಗಳು ಹೊರಹೊಮ್ಮಿವೆ.

ಭಾರತದ ಜಿ20 ಅಧ್ಯಕ್ಷತೆಯ ಅಡಿಯಲ್ಲಿ, ಜಾಗತಿಕ ವ್ಯಾಪಾರ ಮತ್ತು ಹೂಡಿಕೆಯನ್ನು ವೇಗಗೊಳಿಸುವಲ್ಲಿ ಎದುರಿಸುತ್ತಿರುವ ಸವಾಲುಗಳ ಬಗ್ಗೆ ಹಂಚಿಕೆಯ ತಿಳುವಳಿಕೆಯನ್ನು ನಿರ್ಮಿಸುವುದು ಮತ್ತು ಅಸ್ತಿತ್ವದಲ್ಲಿರುವ ಅವಕಾಶಗಳನ್ನು ಬಳಸಿಕೊಂಡು ಬೆಳವಣಿಗೆಯನ್ನು ಅಂತರ್ಗತ ಮತ್ತು ಪಾರದರ್ಶಕವಾಗಿರುವಂತೆ ಮಾಡುವುದು ಗುರಿಯಾಗಿದೆ. ಹೀಗಾಗಿ, ಸ್ಥಿತಿಸ್ಥಾಪಕ ಮತ್ತು ಸುಸ್ಥಿರವಾದ ಒಂದು ಭೂಮಿ, ಒಂದು ಕುಟುಂಬ, ಒಂದು ಭವಿಷ್ಯಕ್ಕಾಗಿ ಸಾಮಾನ್ಯ ಪರಿಹಾರಗಳನ್ನು ಹುಡುಕುವ ಕಡೆಗೆ ಜಗತ್ತನ್ನು ಮುನ್ನಡೆಸುವ ಜಾಗತಿಕ ಸಮನ್ವಯವನ್ನು ನಿರ್ಮಿಸಲಾಗುವುದು.

*****



(Release ID: 1925445) Visitor Counter : 129


Read this release in: English , Urdu , Hindi , Tamil , Telugu