ಸಂಪುಟ
ವೈದ್ಯಕೀಯ ಸಾಧನಗಳ ವಲಯದ ನೀತಿಗೆ ಸಂಪುಟದ ಅಂಗೀಕಾರ
ಅನುಷ್ಠಾನದ ಕ್ರಿಯಾ ಯೋಜನೆಯೊಂದಿಗೆ ಈ ವಲಯದ ಸಾಮರ್ಥ್ಯವನ್ನು ಬಳಸಿಕೊಳ್ಳಲು ಆರು ತಂತ್ರಗಳನ್ನು ಯೋಜಿಸಲಾಗಿದೆ
ನೀತಿಯು ವೈದ್ಯಕೀಯ ಸಾಧನಗಳ ವಲಯವು ಮುಂದಿನ ಐದು ವರ್ಷಗಳಲ್ಲಿ ಪ್ರಸ್ತುತ ಇರುವ 11 ಬಿಲಿಯನ್ ಡಾಲರ್ ನಿಂದ 50 ಬಿಲಿಯನ್ ಡಾಲರ್‌ಗೆ ಬೆಳೆಯಲು ಸಹಾಯ ಮಾಡುವ ನಿರೀಕ್ಷೆಯಿದೆ
Posted On:
26 APR 2023 7:33PM by PIB Bengaluru
ಗೌರವಾನ್ವಿತ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ಇಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆಯು ರಾಷ್ಟ್ರೀಯ ವೈದ್ಯಕೀಯ ಸಾಧನಗಳ ನೀತಿ, 2023 ಕ್ಕೆ ಅನುಮೋದನೆ ನೀಡಿದೆ.
ಭಾರತದಲ್ಲಿ ವೈದ್ಯಕೀಯ ಸಾಧನಗಳ ವಲಯವು ಭಾರತದ ಆರೋಗ್ಯ ಕ್ಷೇತ್ರದ ಅತ್ಯಗತ್ಯ ಮತ್ತು ಅವಿಭಾಜ್ಯ ಅಂಗವಾಗಿದೆ. ವೆಂಟಿಲೇಟರ್‌ಗಳು, ರಾಪಿಡ್ ಆಂಟಿಜೆನ್ ಟೆಸ್ಟ್ ಕಿಟ್‌ಗಳು, ರಿಯಲ್-ರೈಮ್ ರಿವರ್ಸ್ ಟ್ರಾನ್ಸ್‌ಕ್ರಿಪ್ಷನ್ ಪಾಲಿಮರೇಸ್ ಚೈನ್ ರಿಯಾಕ್ಷನ್ (ಆರ್ ಟಿ- ಪಿಸಿಆರ್) ಕಿಟ್‌ಗಳು, ಇನ್‌ಫ್ರಾರೆಡ್ (ಐಆರ್) ಥರ್ಮಾಮೀಟರ್‌ಗಳು, ವೈಯಕ್ತಿಕ ರಕ್ಷಣಾ ಸಾಧನ (ಪಿಪಿಇ) ಕಿಟ್‌ಗಳು ಮತ್ತು ಎನ್-95 ಮುಖಗವಸುಗಳಂತಹ ವೈದ್ಯಕೀಯ ಸಾಧನಗಳು ಮತ್ತು ಡಯಾಗ್ನೋಸ್ಟಿಕ್ ಕಿಟ್‌ಗಳ ದೊಡ್ಡ ಪ್ರಮಾಣದ ಉತ್ಪಾದನೆಯ ಮೂಲಕ ಕೋವಿಡ್-19 ಸಾಂಕ್ರಾಮಿಕ ರೋಗದ ವಿರುದ್ಧದ ದೇಶೀಯ ಮತ್ತು ಜಾಗತಿಕ ಸಮರದಲ್ಲಿ ಭಾರತ ಬೆಂಬಲ ನೀಡಿದ್ದರಿಂದ ಭಾರತೀಯ ವೈದ್ಯಕೀಯ ಸಾಧನಗಳ ವಲಯದ ಕೊಡುಗೆಯು ಇನ್ನಷ್ಟು ಪ್ರಮುಖವಾಗಿದೆ.
ಭಾರತದಲ್ಲಿ ವೈದ್ಯಕೀಯ ಸಾಧನಗಳ ವಲಯವು ಇದೀಗ ಹೊರಹೊಮ್ಮುತ್ತಿರುವ ವಲಯವಾಗಿದ್ದು, ಇದು ವೇಗವಾಗಿ ಬೆಳೆಯುತ್ತಿದೆ. ಭಾರತದಲ್ಲಿ ವೈದ್ಯಕೀಯ ಸಾಧನಗಳ ವಲಯದ ಮಾರುಕಟ್ಟೆ ಗಾತ್ರವು 2020 ರಲ್ಲಿ 11 ಶತಕೋಟಿ ಡಾಲರ್ (ಅಂದಾಜು 90,000 ಕೋಟಿ ರೂ) ಆಗಿತ್ತು ಎಂದು ಅಂದಾಜಿಸಲಾಗಿದೆ ಮತ್ತು ಜಾಗತಿಕ ವೈದ್ಯಕೀಯ ಸಾಧನ ಮಾರುಕಟ್ಟೆಯಲ್ಲಿ ಅದರ ಪಾಲು ಶೇ.1.5 ಎಂದು ಅಂದಾಜಿಸಲಾಗಿದೆ. ಭಾರತದ ವೈದ್ಯಕೀಯ ಸಾಧನಗಳ ವಲಯವು ಬೆಳವಣಿಗೆಯ ಹಾದಿಯಲ್ಲಿದೆ ಮತ್ತು ಸ್ವಾವಲಂಬಿಯಾಗಲು ಮತ್ತು ಸಾರ್ವತ್ರಿಕ ಆರೋಗ್ಯ ರಕ್ಷಣೆಗೆ ಕೊಡುಗೆ ನೀಡುವ ಅಗಾಧ ಸಾಮರ್ಥ್ಯವನ್ನು ಹೊಂದಿದೆ. ಭಾರತ ಸರ್ಕಾರವು ಈಗಾಗಲೇ ಹಿಮಾಚಲ ಪ್ರದೇಶ, ಮಧ್ಯಪ್ರದೇಶ, ತಮಿಳುನಾಡು ಮತ್ತು ಉತ್ತರ ಪ್ರದೇಶ ರಾಜ್ಯಗಳಲ್ಲಿ ವೈದ್ಯಕೀಯ ಸಾಧನಗಳಿಗಾಗಿ ಪಿಎಲ್‌ಐ ಯೋಜನೆಯ ಅನುಷ್ಠಾನವನ್ನು ಪ್ರಾರಂಭಿಸಿದೆ ಮತ್ತು 4 ವೈದ್ಯಕೀಯ ಸಾಧನಗಳ ಪಾರ್ಕ್‌ಗಳನ್ನು ಸ್ಥಾಪಿಸಲು ಬೆಂಬಲ ನೀಡಿದೆ. ವೈದ್ಯಕೀಯ ಸಾಧನಗಳ ಪಿಎಲ್‌ಐ ಯೋಜನೆಯಡಿಯಲ್ಲಿ, ಇದುವರೆಗೆ, ಒಟ್ಟು 26 ಯೋಜನೆಗಳಿಗೆ 1206 ಕೋಟಿ ರೂ.ಗಳ ಬದ್ಧ ಹೂಡಿಕೆಯೊಂದಿಗೆ ಅನುಮೋದನೆ ನೀಡಲಾಗಿದೆ ಮತ್ತು ಇದರಲ್ಲಿ ಇದುವರೆಗೆ 714 ಕೋಟಿ ರೂ.ಗಳ ಹೂಡಿಕೆಯನ್ನು ಸಾಧಿಸಲಾಗಿದೆ. ಪಿಎಲ್‌ಐ ಯೋಜನೆಯಡಿಯಲ್ಲಿ, 37 ಉತ್ಪನ್ನಗಳನ್ನು ಉತ್ಪಾದಿಸುವ ಒಟ್ಟು 14 ಯೋಜನೆಗಳನ್ನು ಆರಂಭಿಸಲಾಗಿದೆ ಮತ್ತು ಲೀನಿಯರ್ ಆಕ್ಸಿಲರೇಟರ್, ಎಂಆರ್‌ಐ ಸ್ಕ್ಯಾನ್, ಸಿಟಿ-ಸ್ಕ್ಯಾನ್, ಮ್ಯಾಮೊಗ್ರಾಮ್, ಸಿ-ಆರ್ಮ್, ಎಂಆರ್‌ಐ ಕಾಯಿಲ್ಸ್, ಹೈ ಎಂಡ್ ಎಕ್ಸ್-ರೇ ಟ್ಯೂಬ್‌ಗಳು ಸೇರಿದಂತೆ ಉನ್ನತ ಮಟ್ಟದ ವೈದ್ಯಕೀಯ ಸಾಧನಗಳ ದೇಶೀಯ ಉತ್ಪಾದನೆಯನ್ನು ಪ್ರಾರಂಭಿಸಲಾಗಿದೆ. ಉಳಿದ 12 ಉತ್ಪನ್ನಗಳ ಉತ್ಪಾದನೆಯನ್ನು ಸದ್ಯದಲ್ಲಿಯೇ ಆರಂಭಿಸಲಾಗುವುದು. 87 ಉತ್ಪನ್ನಗಳು/ಉತ್ಪನ್ನ ಘಟಕಗಳ ದೇಶೀಯ ಉತ್ಪಾದನೆಗಾಗಿ, ಬಿ ವರ್ಗದ ಅಡಿಯಲ್ಲಿ ಒಟ್ಟು 26 ಯೋಜನೆಗಳಲ್ಲಿ ಐದು ಯೋಜನೆಗಳನ್ನು ಇತ್ತೀಚೆಗೆ ಅನುಮೋದಿಸಲಾಗಿದೆ.
ಈ ಕ್ರಮಗಳ ಆಧಾರದ ಮೇಲೆ, ಈ ವಲಯದ ಬೆಳವಣಿಗೆಯನ್ನು ವೇಗಗೊಳಿಸಲು ಮತ್ತು ಅದರ ಸಾಮರ್ಥ್ಯವನ್ನು ಪೂರೈಸಲು ಸಮಗ್ರ ನೀತಿಯ ಚೌಕಟ್ಟನ್ನು ನಿರ್ಮಿಸುವುದು ಇಂದಿನ ಅಗತ್ಯವಾಗಿದೆ. ಸರ್ಕಾರದ ವಿವಿಧ ಇಲಾಖೆಗಳು ಈ ವಲಯವನ್ನು ಉತ್ತೇಜಿಸಲು ಕಾರ್ಯಕ್ರಮದ ಮಧ್ಯಸ್ಥಿಕೆಗಳನ್ನು ಕೈಗೊಂಡಿದ್ದರೂ, ಪ್ರಸ್ತುತ ನೀತಿಯು ಸಮನ್ವಯ ರೀತಿಯಲ್ಲಿ ವಲಯದ ಬೆಳವಣಿಗೆಗೆ ಸಮಗ್ರ ಗುರಿಯನ್ನು ಹೊಂದಿದೆ. ಎರಡನೆಯದಾಗಿ, ವಲಯದ ವೈವಿಧ್ಯತೆ ಮತ್ತು ಬಹು-ಶಿಸ್ತೀಯ ಸ್ವರೂಪದ ದೃಷ್ಟಿಯಿಂದ, ವೈದ್ಯಕೀಯ ಸಾಧನ ಉದ್ಯಮದ ನಿಯಮಗಳು, ಕೌಶಲ್ಯ ವ್ಯಾಪಾರ ಉತ್ತೇಜನವು ಕೇಂದ್ರ ಮತ್ತು ರಾಜ್ಯ ಮಟ್ಟದಲ್ಲಿ ಸರ್ಕಾರದ ಹಲವಾರು ಇಲಾಖೆಗಳಲ್ಲಿ ಹರಡಿಕೊಂಡಿವೆ. ಕೇಂದ್ರೀಕೃತ ಮತ್ತು ಸಮರ್ಥವಾದ ಬೆಂಬಲ ಮತ್ತು ಆಯಾ ಏಜೆನ್ಸಿಗಳಿಂದ ವಲಯಕ್ಕೆ ಅನುಕೂಲವಾಗುವಂತೆ ಸುಸಂಬದ್ಧವಾದ ರೀತಿಯಲ್ಲಿ ಮಧ್ಯಸ್ಥಿಕೆಗಳ ವ್ಯಾಪ್ತಿಯನ್ನು ಒಟ್ಟುಗೂಡಿಸುವ ಅವಶ್ಯಕತೆಯಿದೆ.
ರಾಷ್ಟ್ರೀಯ ವೈದ್ಯಕೀಯ ಸಾಧನಗಳ ನೀತಿ, 2023, ಸಾರ್ವಜನಿಕ ಆರೋಗ್ಯ ಉದ್ದೇಶಗಳಾದ ಲಭ್ಯತೆ, ಕೈಗೆಟುಕುವಿಕೆ, ಗುಣಮಟ್ಟ ಮತ್ತು ನಾವೀನ್ಯತೆಗಳನ್ನು ಪೂರೈಸಲು ವೈದ್ಯಕೀಯ ಸಾಧನ ವಲಯದ ಕ್ರಮಬದ್ಧ ಬೆಳವಣಿಗೆಯನ್ನು ಸುಗಮಗೊಳಿಸುತ್ತದೆ ಎಂದು ನಿರೀಕ್ಷಿಸಲಾಗಿದೆ. ಈ ವಲಯವು ಉತ್ಪಾದನೆಗೆ ಸೂಕ್ತ ಪರಿಸರ ವ್ಯವಸ್ಥೆಯನ್ನು ನಿರ್ಮಿಸುವುದು, ನಾವೀನ್ಯತೆಯ ಮೇಲೆ ಗಮನ ಕೇಂದ್ರೀಕರಿಸುವುದು, ದೃಢವಾದ ಮತ್ತು ಸುವ್ಯವಸ್ಥಿತ ನಿಯಂತ್ರಣ ಚೌಕಟ್ಟನ್ನು ರಚಿಸುವುದು, ತರಬೇತಿ ಮತ್ತು ಸಾಮರ್ಥ್ಯ ನಿರ್ಮಾಣ ಕಾರ್ಯಕ್ರಮಗಳಲ್ಲಿ ಬೆಂಬಲವನ್ನು ಒದಗಿಸುವುದು ಮತ್ತು ಉದ್ಯಮದ ಅವಶ್ಯಕತೆಗಳಿಗೆ ಅನುಗುಣವಾಗಿ ಪ್ರತಿಭೆ ಮತ್ತು ನುರಿತ ಸಂಪನ್ಮೂಲಗಳನ್ನು ಬೆಳೆಸಲು ಉನ್ನತ ಶಿಕ್ಷಣವನ್ನು ಉತ್ತೇಜಿಸುವುದು ಮುಂತಾದ ಕಾರ್ಯತಂತ್ರಗಳ ಮೂಲಕ ತನ್ನ ಸಂಪೂರ್ಣ ಸಾಮರ್ಥ್ಯವನ್ನು ಬಳಸಿಕೊಳ್ಳುವ ನಿರೀಕ್ಷೆಯಿದೆ. ದೇಶೀಯ ಹೂಡಿಕೆಗಳು ಮತ್ತು ವೈದ್ಯಕೀಯ ಸಾಧನಗಳ ಉತ್ಪಾದನೆಯನ್ನು ಉತ್ತೇಜಿಸುವುದು ಸರ್ಕಾರದ ‘ಆತ್ಮನಿರ್ಭರ ಭಾರತ’ ಮತ್ತು ‘ಮೇಕ್ ಇನ್ ಇಂಡಿಯಾ’ ಕಾರ್ಯಕ್ರಮಗಳಿಗೆ ಪೂರಕವಾಗಿದೆ.
ರಾಷ್ಟ್ರೀಯ ವೈದ್ಯಕೀಯ ಸಾಧನಗಳ ನೀತಿ 2023 ರ ಪ್ರಮುಖ ಲಕ್ಷಣಗಳು:
ದೃಷ್ಟಿಕೋನ: ರೋಗಿ ಕೇಂದ್ರಿತ ವಿಧಾನದೊಂದಿಗೆ ವೇಗವರ್ಧಿತ ಬೆಳವಣಿಗೆಯ ಮಾರ್ಗ ಮತ್ತು ಮುಂದಿನ 25 ವರ್ಷಗಳಲ್ಲಿ ವಿಸ್ತರಿಸುತ್ತಿರುವ ಜಾಗತಿಕ ಮಾರುಕಟ್ಟೆಯಲ್ಲಿ ಶೇ.10-12 ರಷ್ಟು ಪಾಲನ್ನು ಸಾಧಿಸುವ ಮೂಲಕ ವೈದ್ಯಕೀಯ ಸಾಧನಗಳ ಉತ್ಪಾದನೆ ಮತ್ತು ನಾವೀನ್ಯತೆಯಲ್ಲಿ ಜಾಗತಿಕ ನಾಯಕರಾಗಿ ಹೊರಹೊಮ್ಮುವುದು. 2030 ರ ವೇಳೆಗೆ ವೈದ್ಯಕೀಯ ಸಾಧನಗಳ ವಲಯವು ಪ್ರಸ್ತುತ 11 ಬಿಲಿಯನ್ ಡಾಲರ್ ನಿಂದ 50 ಬಿಲಿಯನ್ ಡಾಲರ್ ಗೆ ಬೆಳೆಯಲು ನೀತಿಯು ಸಹಾಯ ಮಾಡುತ್ತದೆ ಎಂದು ನಿರೀಕ್ಷಿಸಲಾಗಿದೆ.
ಧ್ಯೇಯ: ಲಭ್ಯತೆ ಮತ್ತು ಸಾರ್ವತ್ರಿಕತೆ, ಕೈಗೆಟಕುವ ಸಾಮರ್ಥ್ಯ, ಗುಣಮಟ್ಟ, ರೋಗಿಗಳ ಕೇಂದ್ರಿತ ಮತ್ತು ಗುಣಮಟ್ಟದ ಆರೈಕೆ, ತಡೆಗಟ್ಟುವ ಮತ್ತು ಜಾಗೃತಿಯ ಆರೋಗ್ಯ, ಭದ್ರತೆ, ಸಂಶೋಧನೆ ಮತ್ತು ನಾವೀನ್ಯತೆ ಮತ್ತು ನುರಿತ ಮಾನವಶಕ್ತಿ ಈ ಕಾರ್ಯಗಳನ್ನು ಸಾಧಿಸಲು ವೈದ್ಯಕೀಯ ಸಾಧನಗಳ ವಲಯದ ವೇಗವರ್ಧಿತ ಬೆಳವಣಿಗೆಗೆ ನೀತಿಯು ಮಾರ್ಗಸೂಚಿಯನ್ನು ರೂಪಿಸುತ್ತದೆ.
ವೈದ್ಯಕೀಯ ಸಾಧನ ವಲಯವನ್ನು ಉತ್ತೇಜಿಸುವ ಕಾರ್ಯತಂತ್ರಗಳು:
ವೈದ್ಯಕೀಯ ಸಾಧನಗಳ ವಲಯಕ್ಕೆ ನೀತಿ ಮಧ್ಯಸ್ಥಿಕೆಗಳ ಆರು ವಿಶಾಲ ಕ್ಷೇತ್ರಗಳನ್ನು ಒಳಗೊಂಡಿರುವ ಕಾರ್ಯತಂತ್ರಗಳ ಮೂಲಕ ನೆರವು ನೀಡಲಾಗುತ್ತದೆ ಮತ್ತು ಮಾರ್ಗದರ್ಶನ ನೀಡಲಾಗುತ್ತದೆ.
- ನಿಯಂತ್ರಕ ವ್ಯವಸ್ಥೆಯನ್ನು ಸುವ್ಯವಸ್ಥಿತಗೊಳಿಸುವುದು: ಸಂಶೋಧನೆ ಮತ್ತು ವ್ಯವಹಾರವನ್ನು ಸುಲಭಗೊಳಿಸಲು ಮತ್ತು ಉತ್ಪನ್ನ ನಾವೀನ್ಯತೆ ಕ್ರಮಗಳೊಂದಿಗೆ ರೋಗಿಗಳ ಸುರಕ್ಷತೆಯನ್ನು ಸಮತೋಲನಗೊಳಿಸಲು, ವೈದ್ಯಕೀಯ ಸಾಧನಗಳ ಪರವಾನಗಿಗಾಗಿ ಏಕ ಗವಾಕ್ಷಿ ಅನುಮತಿ ವ್ಯವಸ್ಥೆಯನ್ನು ರಚಿಸುವುದು, AERB, MeitY DAHD ಯಂತಹ ಎಲ್ಲಾ ಪಾಲುದಾರ ವಿಭಾಗಗಳು / ಸಂಸ್ಥೆಗಳು, BIS ನಂತಹ ಭಾರತೀಯ ಮಾನದಂಡಗಳ ಪಾತ್ರವನ್ನು ಹೆಚ್ಚಿಸುವುದು ಮತ್ತು ಸುಸಂಬದ್ಧ ಬೆಲೆ ನಿಯಂತ್ರಣವನ್ನು ವಿನ್ಯಾಸಗೊಳಿಸುವುದು.
- ಮೂಲಸೌಕರ್ಯವನ್ನು ಸಕ್ರಿಯಗೊಳಿಸುವುದು: ರಾಷ್ಟ್ರೀಯ ಕೈಗಾರಿಕಾ ಕಾರಿಡಾರ್ ಕಾರ್ಯಕ್ರಮ ಮತ್ತು ಪ್ರಧಾನ ಮಂತ್ರಿ ಗತಿಶಕ್ತಿ ಯೋಜನೆ ಅಡಿಯಲ್ಲಿ ಉದ್ದೇಶಿತ ರಾಷ್ಟ್ರೀಯ ಲಾಜಿಸ್ಟಿಕ್ಸ್ ನೀತಿ 2021 ರ ಅಡಿಯಲ್ಲಿ ಕಲ್ಪಿಸಿದಂತೆ ಅಗತ್ಯವಾದ ಲಾಜಿಸ್ಟಿಕ್ಸ್ ಸಂಪರ್ಕದೊಂದಿಗೆ ಆರ್ಥಿಕ ವಲಯಗಳಿಗೆ ಸಮೀಪದಲ್ಲಿ ವಿಶ್ವ ದರ್ಜೆಯ ಸಾಮಾನ್ಯ ಮೂಲಸೌಕರ್ಯ ಸೌಲಭ್ಯಗಳನ್ನು ಹೊಂದಿರುವ ಬೃಹತ್ ವೈದ್ಯಕೀಯ ಸಾಧನ ಪಾರ್ಕ್‌ಗಳ ಸ್ಥಾಪನೆ ಮತ್ತು ಬಲಪಡಿಸಕೆ.
- ಆರ್ & ಡಿ ಮತ್ತು ನಾವೀನ್ಯತೆಯನ್ನು ಸುಗಮಗೊಳಿಸುವುದು: ಭಾರತದಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿಯನ್ನು ಉತ್ತೇಜಿಸಲು ಮತ್ತು ಭಾರತದಲ್ಲಿ ಫಾರ್ಮಾ-ಮೆಡ್‌ಟೆಕ್ ವಲಯದಲ್ಲಿ ಆರ್ & ಡಿ ಮತ್ತು ನಾವೀನ್ಯತೆಯ ಕುರಿತು ಇಲಾಖೆಯ ಪ್ರಸ್ತಾವಿತ ರಾಷ್ಟ್ರೀಯ ನೀತಿಗೆ ಪೂರಕವಾಗಿ ನೀತಿಯು ಕಾರ್ಯನಿರ್ವಹಿಸುತ್ತದೆ. ಇದು ಶೈಕ್ಷಣಿಕ ಮತ್ತು ಸಂಶೋಧನಾ ಸಂಸ್ಥೆಗಳಲ್ಲಿ ಶ್ರೇಷ್ಠತಾ ಕೇಂದ್ರಗಳು, ನಾವೀನ್ಯತೆ ಕೇಂದ್ರಗಳು, 'ಪ್ಲಗ್ ಮತ್ತು ಪ್ಲೇ' ಮೂಲಸೌಕರ್ಯಗಳನ್ನು ಸ್ಥಾಪಿಸುವ ಮತ್ತು ಸ್ಟಾರ್ಟ್-ಅಪ್‌ಗಳಿಗೆ ಬೆಂಬಲ ನೀಡುವ ಗುರಿಯನ್ನು ಹೊಂದಿದೆ.
- ಈ ವಲಯದಲ್ಲಿ ಹೂಡಿಕೆಗಳನ್ನು ಆಕರ್ಷಿಸುವುದು: ಮೇಕ್ ಇನ್ ಇಂಡಿಯಾ, ಆಯುಷ್ಮಾನ್ ಭಾರತ್ ಕಾರ್ಯಕ್ರಮ, ಹೀಲ್-ಇನ್-ಇಂಡಿಯಾ, ಸ್ಟಾರ್ಟ್-ಅಪ್ ಮಿಷನ್‌ನಂತಹ ಯೋಜನೆಗಳು ಮತ್ತು ಮಧ್ಯಸ್ಥಿಕೆಗಳ ಜೊತೆಗೆ, ನೀತಿಯು ಖಾಸಗಿ ಹೂಡಿಕೆಗಳನ್ನು ಪ್ರೋತ್ಸಾಹಿಸುತ್ತದೆ, ವೆಂಚರ್ ಕ್ಯಾಪಿಟಲಿಸ್ಟ್‌ಗಳಿಂದ ಹೂಡಿಕೆ ಮತ್ತು ಸಾರ್ವಜನಿಕ-ಖಾಸಗಿ ಪಾಲುದಾರಿಕೆ (ಪಿಪಿಪಿ) ಯನ್ನು ಪ್ರೋತ್ಸಾಹಿಸುತ್ತದೆ.
- ಮಾನವ ಸಂಪನ್ಮೂಲ ಅಭಿವೃದ್ಧಿ: ವಿಜ್ಞಾನಿಗಳು, ನಿಯಂತ್ರಕರು, ಆರೋಗ್ಯ ತಜ್ಞರು, ವ್ಯವಸ್ಥಾಪಕರು, ತಂತ್ರಜ್ಞರು ಮುಂತಾದ ಮೌಲ್ಯ ಸರಪಳಿಯಾದ್ಯಂತ ನುರಿತ ಕಾರ್ಯಪಡೆಯ ಸ್ಥಿರ ಪೂರೈಕೆಯನ್ನು ಹೊಂದಲು ನೀತಿಯು ಬೆಂಬಲಿಸುತ್ತದೆ.
- ವೈದ್ಯಕೀಯ ಸಾಧನ ವಲಯದಲ್ಲಿ ವೃತ್ತಿಪರರ ಕೌಶಲ್ಯ, ಪುನರ್ ಕೌಶಲ್ಯ ಮತ್ತು ಉನ್ನತ ಕೌಶಲ್ಯಕ್ಕಾಗಿ, ನಾವು ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯಮಶೀಲತೆ ಸಚಿವಾಲಯದಲ್ಲಿ ಲಭ್ಯವಿರುವ ಸಂಪನ್ಮೂಲಗಳನ್ನು ಬಳಸಿಕೊಳ್ಳಬಹುದು.
- ಭವಿಷ್ಯದ ವೈದ್ಯಕೀಯ ತಂತ್ರಜ್ಞಾನಗಳು, ಉನ್ನತ ಗುಣಮಟ್ಟದ ಉತ್ಪಾದನೆ ಮತ್ತು ಸಂಶೋಧನೆಗಾಗಿ ನುರಿತ ಮಾನವಶಕ್ತಿಯ ಲಭ್ಯತೆಯನ್ನು ಖಚಿತಪಡಿಸಿಕೊಳ್ಳಲು, ಭವಿಷ್ಯಕ್ಕೆ ಸಿದ್ಧವಾಗಿರುವ ಮೆಡ್‌ಟೆಕ್ ಮಾನವ ಸಂಪನ್ಮೂಲಗಳನ್ನು ಸೃಷ್ಟಿಸಲು ಮತ್ತು ವಲಯದ ಅಭಿವೃದ್ಧಿ ಹೊಂದುತ್ತಿರುವ ಅಗತ್ಯಗಳನ್ನು ಪೂರೈಸಲು ಅಸ್ತಿತ್ವದಲ್ಲಿರುವ ಸಂಸ್ಥೆಗಳಲ್ಲಿ ವೈದ್ಯಕೀಯ ಸಾಧನಗಳಿಗೆ ಮೀಸಲಾದ ಬಹುಶಿಸ್ತೀಯ ಕೋರ್ಸ್‌ಗಳನ್ನು ಆರಂಭಿಸಲು ನೀತಿಯು ಬೆಂಬಲಿಸುತ್ತದೆ.
- ವಿಶ್ವ ಮಾರುಕಟ್ಟೆಯ ವೇಗದೊಂದಿಗೆ ಸ್ಪರ್ಧಿಸಲು, ವೈದ್ಯಕೀಯ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸಲು ವಿದೇಶಿ ಶೈಕ್ಷಣಿಕ/ಉದ್ಯಮ ಸಂಸ್ಥೆಗಳೊಂದಿಗೆ ಸಹಭಾಗಿತ್ವವನ್ನು ಅಭಿವೃದ್ಧಿಪಡಿಸುವುದು.
- ಬ್ರಾಂಡ್ ಮತ್ತು ಜಾಗೃತಿ ಸೃಷ್ಟಿಸುವುದು: ನೀತಿಯು ಇಲಾಖೆಯ ಅಡಿಯಲ್ಲಿ ಕ್ಷೇತ್ರಕ್ಕೆ ಮೀಸಲಾದ ರಫ್ತು ಉತ್ತೇಜನಾ ಮಂಡಳಿಯನ್ನು ರಚಿಸುವುದಕ್ಕೆ ಅವಕಾಸ ನೀಡುತ್ತದೆ, ಇದು ವಿವಿಧ ಮಾರುಕಟ್ಟೆ ಪ್ರವೇಶ ಸಮಸ್ಯೆಗಳನ್ನು ನಿಭಾಯಿಸಲು ಅನುವು ಮಾಡಿಕೊಡುತ್ತದೆ.
- ಭಾರತದಲ್ಲಿ ಯಶಸ್ವಿ ಮಾದರಿಗಳನ್ನು ಅಳವಡಿಸಿಕೊಳ್ಳುವ ಕಾರ್ಯಸಾಧ್ಯತೆಯನ್ನು ಅನ್ವೇಷಿಸಲು ಉತ್ಪಾದನೆ ಮತ್ತು ಕೌಶಲ್ಯ ವ್ಯವಸ್ಥೆಯ ಅತ್ಯುತ್ತಮ ಜಾಗತಿಕ ಅಭ್ಯಾಸಗಳಿಂದ ಕಲಿಯಲು ಅಧ್ಯಯನಗಳು ಮತ್ತು ಯೋಜನೆಗಳನ್ನು ಪ್ರಾರಂಭಿಸುತ್ತದೆ.
- ಜ್ಞಾನವನ್ನು ಹಂಚಿಕೊಳ್ಳಲು ಮತ್ತು ವಲಯದಾದ್ಯಂತ ಬಲವಾದ ನೆಟ್‌ವರ್ಕ್‌ಗಳನ್ನು ನಿರ್ಮಿಸಲು ವಿವಿಧ ಪಾಲುದಾರರನ್ನು ಒಟ್ಟುಗೂಡಿಸಲು ಹೆಚ್ಚಿನ ವೇದಿಕೆಗಳನ್ನು ಉತ್ತೇಜಿಸುತ್ತದೆ.
ಈ ನೀತಿಯು ವೈದ್ಯಕೀಯ ಸಾಧನಗಳ ಉದ್ಯಮವನ್ನು ಸ್ಪರ್ಧಾತ್ಮಕ, ಸ್ವಾವಲಂಬಿ, ಚೇತರಿಕೆಯ ನವೀನ ಉದ್ಯಮವಾಗಿ ಬಲಪಡಿಸಲು ಅಗತ್ಯವಾದ ಬೆಂಬಲ ಮತ್ತು ನಿರ್ದೇಶನಗಳನ್ನು ಒದಗಿಸುವ ನಿರೀಕ್ಷೆಯಿದೆ, ಇದು ಭಾರತ ಮಾತ್ರವಲ್ಲದೆ ಪ್ರಪಂಚದ ಆರೋಗ್ಯ ಅಗತ್ಯಗಳನ್ನು ಪೂರೈಸುತ್ತದೆ. ರಾಷ್ಟ್ರೀಯ ವೈದ್ಯಕೀಯ ಸಾಧನಗಳ ನೀತಿ, 2023, ರೋಗಿಗಳ ಹೆಚ್ಚುತ್ತಿರುವ ಆರೋಗ್ಯ ಅಗತ್ಯಗಳನ್ನು ಪೂರೈಸಲು ರೋಗಿ ಕೇಂದ್ರಿತ ವಿಧಾನದೊಂದಿಗೆ ವೈದ್ಯಕೀಯ ಸಾಧನಗಳ ವಲಯವನ್ನು ಬೆಳವಣಿಗೆಯ ವೇಗವರ್ಧಿತ ಹಾದಿಗೆ ತರುವ ಗುರಿಯನ್ನು ಹೊಂದಿದೆ.
****
(Release ID: 1921413)
Visitor Counter : 166
Read this release in:
English
,
Urdu
,
Marathi
,
Hindi
,
Assamese
,
Bengali
,
Manipuri
,
Punjabi
,
Gujarati
,
Odia
,
Tamil
,
Telugu
,
Malayalam