ಗೃಹ ವ್ಯವಹಾರಗಳ ಸಚಿವಾಲಯ

ನವದೆಹಲಿಯಲ್ಲಿಂದು ನಡೆದ 'Bharat@100: ಸಮಗ್ರ ಮತ್ತು ಸುಸ್ಥಿರ ಜಾಗತಿಕ ಬೆಳವಣಿಗೆಗೆ ದಾರಿ' ಎಂಬ ವಿಷಯದ ಆಧಾರದ ಮೇಲೆ ಅಸೋಚಾಮ್ ನ 2023 ರ ವಾರ್ಷಿಕ ಅಧಿವೇಶನದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ  ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಶ್ರೀ ಅಮಿತ್ ಶಾ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 9 ವರ್ಷಗಳಿಂದ 'ಸಂಪೂರ್ಣ ಸರ್ಕಾರದ ವಿಧಾನ' ಮತ್ತು 'ಟೀಮ್ ಇಂಡಿಯಾ'ದ ಸ್ಫೂರ್ತಿಯೊಂದಿಗೆ ದೇಶವನ್ನು ಮುನ್ನಡೆಸುತ್ತಿದ್ದಾರೆ’

ಪ್ರಧಾನಮಂತ್ರಿ ಮೋದಿ ಅವರು ದೇಶಕ್ಕೆ ರಾಜಕೀಯ ಸ್ಥಿರತೆಯನ್ನು ನೀಡಿದ್ದಾರೆ, ಭಾರತದ ಪ್ರಜಾಪ್ರಭುತ್ವ ಇತಿಹಾಸದಲ್ಲಿ ಶ್ರೀ ಮೋದಿ ಅವರ ನಾಯಕತ್ವದಲ್ಲಿ ಈ ಅವಧಿಯನ್ನು 'ರಾಜಕೀಯ ಸ್ಥಿರತೆಯ ಅವಧಿ' ಎಂದು ಕರೆಯಲಾಗುತ್ತದೆ

ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ದೇಶವನ್ನು ಮುನ್ನಡೆಸುವಾಗ, ದೇಶವು ನಿರ್ದಿಷ್ಟ ಗುರಿಯನ್ನು ತಲುಪಲು ಎಲ್ಲಾ ಸಾಧ್ಯತೆಗಳನ್ನು ಬಳಸಿಕೊಳ್ಳುವ ಧೈರ್ಯ ಮತ್ತು ದೂರದೃಷ್ಟಿಯನ್ನು ಹೊಂದಿದ್ದಾರೆ

ಶ್ರೀ ಮೋದಿ ಅವರ ನಾಯಕತ್ವದಲ್ಲಿ, ದೇಶದ ಅಭಿವೃದ್ಧಿಗಾಗಿ ಭಾರತದ ಕೈಗಾರಿಕೆಗಳ ಗಾತ್ರ ಮತ್ತು ಪ್ರಮಾಣವನ್ನು ಬದಲಾಯಿಸುವ ಸಮಯ ಇದಾಗಿದೆ

ಅಸೋಚಾಮ್ ನಂತಹ ಸಂಸ್ಥೆಗಳು ಸರ್ಕಾರದ ನೀತಿ ಮತ್ತು ಉದ್ಯಮದ ನಡುವಿನ ಸಮನ್ವಯಕ್ಕಾಗಿ ಶ್ರಮಿಸುತ್ತಿವೆ

ಸಾರ್ವಜನಿಕ ಹಿತಾಸಕ್ತಿಯನ್ನು ಆಧರಿಸಿದ ಸರ್ಕಾರದ ನೀತಿಗಳು ಮತ್ತು ಸಿದ್ಧಾಂತಗಳು ದೇಶವನ್ನು ಭದ್ರಪಡಿಸಿವೆ ಮತ್ತು ಅದನ್ನು ಪ್ರಗತಿಯ ಹಾದಿಯಲ್ಲಿ ಮುನ್ನಡೆಸಿವೆ, ಇಂದು ಇಡೀ ಜಗತ್ತು ಭಾರತ ಸ್ಥಾಪಿಸಿರುವ ಹೊಸ ಮೈಲಿಗಲ್ಲುಗಳಿಂದ ಆಶ್ಚರ್ಯಚಕಿತವಾಗಿದೆ

ಈ ಹಿಂದೆ, ಕೊರತೆಯನ್ನು ದೇಶದ ಬಜೆಟ್ ನಲ್ಲಿ ಮರೆಮಾಚಲಾಗಿತ್ತು, ಆದರೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನೇತೃತ್ವದ ಸರ್ಕಾರವು ಕೊರತೆಯನ್ನು ನಿಯಂತ್ರಿಸಿದೆ ಮತ್ತು ಅದನ್ನು ಆರ್ಥಿಕತೆಯ ಮಾನದಂಡಗಳೊಳಗೆ ತಂದಿದೆ

ಮೂಲಸೌಕರ್ಯ ಮತ್ತು ಸಾಗಣೆ ವೆಚ್ಚವನ್ನು ಕಡಿಮೆ ಮಾಡದೆ ಕೈಗಾರಿಕಾ ಅಭಿವೃದ್ಧಿ ಸಾಧ್ಯವಿಲ್ಲ, ಶ್ರೀ ಮೋದಿ ಅವರು ಉತ್ತಮ ದೂರದೃಷ್ಟಿಯೊಂದಿಗೆ 5 ವರ್ಷಗಳಲ್ಲಿ ಸಾಗಣೆ ವೆಚ್ಚವನ್ನು ತಗ್ಗಿಸುವ ಗುರಿಯನ್ನು ನಿಗದಿಪಡಿಸಿದ್ದಾರೆ.

ಜಿಡಿಪಿಗೆ ಮಾನವೀಯ ಮುಖ ಮತ್ತು ಸಂವೇದನಾಶೀಲತೆಯನ್ನು ನೀಡುವ ಮೂಲಕ ಪ್ರಧಾನಮಂತ್ರಿ ಮೋದಿ ಅವರು ವಂಚಿತ 60 ಕೋಟಿ ಜನರ ಜೀವನದಲ್ಲಿ ಬದಲಾವಣೆ ತಂದಿದ್ದಾರೆ. ದೇಶದ ಆರ್ಥಿಕತೆಗೆ ಈ 60 ಕೋಟಿ ಜನರ ಪ್ರಯತ್ನಗಳಿಗಿಂತ ದೊಡ್ಡ ಬೂಸ್ಟರ್ ಬೇರೊಂದಿಲ್ಲ.

Posted On: 28 MAR 2023 4:23PM by PIB Bengaluru

ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಶ್ರೀ ಅಮಿತ್ ಶಾ ಅವರು ಇಂದು ನವದೆಹಲಿಯಲ್ಲಿ ನಡೆದ 'Bharat@100: ಸಮಗ್ರ ಮತ್ತು ಸುಸ್ಥಿರ ಜಾಗತಿಕ ಬೆಳವಣಿಗೆಗೆ ದಾರಿ' ಎಂಬ ವಿಷಯದ ಆಧಾರದ ಮೇಲೆ ಅಸೋಚಾಮ್ ನ 2023 ರ ವಾರ್ಷಿಕ ಅಧಿವೇಶನದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.

ಶ್ರೀ ಅಮಿತ್ ಶಾ ಅವರು ತಮ್ಮ ಭಾಷಣದಲ್ಲಿ, ಇಡೀ ರಾಷ್ಟ್ರವು ಅದಕ್ಕಾಗಿ ಪ್ರಯತ್ನಗಳನ್ನು ಮಾಡಿದಾಗ ಮಾತ್ರ ಇಡೀ ಭಾರತದ ಅಭಿವೃದ್ಧಿ ಸಾಧ್ಯ ಎಂದು ಹೇಳಿದರು. ಭಾರತದ ಸರ್ವಾಂಗೀಣ ಅಭಿವೃದ್ಧಿಯಾಗದ ಹೊರತು, ನಾವು ನಮ್ಮ ಗುರಿಗಳನ್ನು ಸಾಧಿಸಲು ಸಾಧ್ಯವಿಲ್ಲ ಎಂದು ಅವರು ಹೇಳಿದರು. ಅನೇಕ ಜನರು 130 ಕೋಟಿ ಜನಸಂಖ್ಯೆಯನ್ನು ದೊಡ್ಡ ಹೊರೆ ಎಂದು ಪರಿಗಣಿಸುತ್ತಾರೆ ಆದರೆ ಇದು ದೊಡ್ಡ ಮಾರುಕಟ್ಟೆಯನ್ನು ಹೊಂದಿದೆ ಎಂದು ಅವರು ಹೇಳಿದರು. ಭಾರತದ ಅಭಿವೃದ್ಧಿಗಾಗಿ ದೇಶದ ಮೂಲೆ ಮೂಲೆಗಳಿಂದ ಪ್ರಯತ್ನಗಳು ನಡೆಯುವವರೆಗೆ ನಾವು ಮುಂದೆ ಸಾಗಲು ಸಾಧ್ಯವಿಲ್ಲ ಎಂದು ಅವರು ಹೇಳಿದರು.

ಕೇಂದ್ರ ಗೃಹ ಮತ್ತು ಸಹಕಾರ ಸಚಿವರು, ನಾವು ಇಂದು ಭಾರತದ ರಾಜಕೀಯ ನಕ್ಷೆಯನ್ನು ಅವಲೋಕಿಸಿದರೆ, ಒಂದು ಕೇಂದ್ರ ಸರ್ಕಾರ, 28 ರಾಜ್ಯ ಸರ್ಕಾರಗಳು, 2 ಕೇಂದ್ರಾಡಳಿತ ಪ್ರದೇಶ ಸರ್ಕಾರಗಳು, 6 ಕೇಂದ್ರಾಡಳಿತ ಪ್ರದೇಶಗಳು, ಸುಮಾರು 2.5 ಲಕ್ಷ ಸ್ಥಳೀಯ ಸಂಸ್ಥೆಗಳು, 30-31 ಲಕ್ಷ ಚುನಾಯಿತ ಪ್ರತಿನಿಧಿಗಳು, 6.40 ಲಕ್ಷ ಗ್ರಾಮಗಳು ಮತ್ತು ಅವುಗಳ ಪಂಚಾಯಿತಿಗಳು, ಜಿಲ್ಲಾ ಪಂಚಾಯಿತಿಗಳು, ಪುರಸಭೆಗಳು ಮತ್ತು ನಗರಸಭೆಗಳು ಒಟ್ಟಾಗಿ ನಮ್ಮ ಆಡಳಿತ ವ್ಯವಸ್ಥೆಯನ್ನು ರೂಪಿಸುತ್ತವೆ ಎಂಬುದನ್ನು ನಾವು ನೋಡುತ್ತೇವೆ ಎಂದು ಹೇಳಿದರು. ದೇಶದ ಪ್ರಧಾನಮಂತ್ರಿಗಳ ಸಂಪೂರ್ಣ ಸರ್ಕಾರದ ವಿಧಾನ ಮತ್ತು ಟೀಮ್ ಇಂಡಿಯಾದ ಪರಿಕಲ್ಪನೆಯನ್ನು ತಳಮಟ್ಟದಲ್ಲಿ ಜಾರಿಗೆ ತರದ ಹೊರತು ಭಾರತದ ಅಭಿವೃದ್ಧಿ ಸಾಧ್ಯವಿಲ್ಲ ಎಂದು ಅವರು ಹೇಳಿದರು. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ವಿವಿಧ ಸಿದ್ಧಾಂತಗಳನ್ನು ಮೀರಿ ಟೀಮ್ ಇಂಡಿಯಾದ ದೂರದೃಷ್ಟಿಯನ್ನು ಸಾಕಾರಗೊಳಿಸುವ ಮೂಲಕ ಇಡೀ ದೇಶವನ್ನು ಒಟ್ಟಿಗೆ ಕೊಂಡೊಯ್ಯಲು ನಿರ್ಧರಿಸಿದ್ದಾರೆ ಎಂದು ಶ್ರೀ ಶಾ ಹೇಳಿದರು. ಕಳೆದ 9 ವರ್ಷಗಳಲ್ಲಿ ಅವರ ನಾಯಕತ್ವದಲ್ಲಿ ಸರ್ಕಾರವು ಅನೇಕ ಮೈಲಿಗಲ್ಲುಗಳನ್ನು ಸಾಧಿಸಲು ಇದು ಕಾರಣವಾಗಿದೆ.  ದೇಶದ ಪ್ರತಿಯೊಂದು ಮೂಲೆಯಲ್ಲೂ ಇದೇ ರೀತಿಯ ಶಕ್ತಿಯನ್ನು ಅನುಭವಿಸಲಾಗುತ್ತಿದೆ ಎಂದು ಅವರು ಹೇಳಿದರು. ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ 59 ಸ್ಥಳಗಳಲ್ಲಿ ಜಿ -20 ಸಭೆಗಳನ್ನು ನಡೆಸುವ ಮೂಲಕ ಭಾರತವು ಪ್ರಜ್ಞೆಯನ್ನು ಸೃಷ್ಟಿಸಿದೆ ಎಂದು ಅವರು ಹೇಳಿದರು. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಸರ್ಕಾರವು ಒಟ್ಟಾಗಿ ಶ್ರಮಿಸುವ ವಿಧಾನವನ್ನು ಅಳವಡಿಸಿಕೊಳ್ಳದೇ ಇದ್ದಿದ್ದರೆ, ಕೋವಿಡ್ -19 ನಂತಹ ಸಾಂಕ್ರಾಮಿಕ ರೋಗದ ವಿರುದ್ಧ ಯಶಸ್ವಿಯಾಗಿ ಹೋರಾಡಲು ನಮಗೆ ಎಂದಿಗೂ ಸಾಧ್ಯವಾಗುತ್ತಿರಲಿಲ್ಲ ಎಂದು ಅವರು ಹೇಳಿದರು. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ, ಕೋವಿಡ್ -19 ವಿರುದ್ಧ ಸಾಧ್ಯವಾದಷ್ಟು ಉತ್ತಮ ರೀತಿಯಲ್ಲಿ ಹೋರಾಡಿದ ಏಕೈಕ ದೇಶ ಭಾರತ ಎಂದು ಇಂದು ಜಗತ್ತಿಗೆ ಮನವರಿಕೆಯಾಗಿದೆ ಎಂದು ಅವರು ಹೇಳಿದರು.

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ನೇತೃತ್ವದ ಸರ್ಕಾರ ನಡೆಸಿದ ಚರ್ಚೆಗಳ ನಂತರ ಮಾಡಿದ ನಿಖರ ನೀತಿಗಳು ಭಾರತವನ್ನು ಪ್ರಗತಿಯ ಪಥದಲ್ಲಿ ಕೊಂಡೊಯ್ದಿವೆ ಎಂದು ಶ್ರೀ ಅಮಿತ್ ಶಾ ಹೇಳಿದರು. ನಮ್ಮ ಸಿದ್ಧಾಂತವು ಭಾರತವನ್ನು ಸುರಕ್ಷಿತಗೊಳಿಸಿದೆ, ನಮ್ಮ ಸೂಕ್ಷ್ಮ ಯೋಜನೆಗಳು ಭಾರತದ ಅಭಿವೃದ್ಧಿಯನ್ನು ಎಲ್ಲರನ್ನೂ ಒಳಗೊಳ್ಳುವಂತೆ ಮಾಡಿದ್ದು, ನಾವು ನಮ್ಮ ಸಾಧನೆಗಳಿಂದ ಜಗತ್ತನ್ನು ಆಶ್ಚರ್ಯಚಕಿತಗೊಳಿಸಿದ್ದೇವೆ. ಡಿಜಿಟಲ್ ಇಂಡಿಯಾ ಮೂಲಕ 2022 ರಲ್ಲಿ ದೇಶದಲ್ಲಿ ಒಟ್ಟು 8840 ಕೋಟಿ ಡಿಜಿಟಲ್ ವಹಿವಾಟುಗಳು ನಡೆದಿವೆ, ಇದರಲ್ಲಿ ಯುಪಿಐನ ಪಾಲು ಶೇಕಡಾ 52 ರಷ್ಟಿದೆ ಮತ್ತು ಅವುಗಳ ಒಟ್ಟು ಮೌಲ್ಯ 126 ಲಕ್ಷ ಕೋಟಿ ರೂ. ಆಗಿದೆ. ದೇಶದ ಶೇ.99ರಷ್ಟು ಗ್ರಾಮಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ, ದೇಶದ 1.90 ಲಕ್ಷ ಪಂಚಾಯಿತಿಗಳಿಗೆ ಭಾರತ್ ನೆಟ್ ಸಂಪರ್ಕ ಕಲ್ಪಿಸಲಾಗಿದೆ ಮತ್ತು ಕಳೆದ 6 ವರ್ಷಗಳಲ್ಲಿ 6 ಲಕ್ಷ ಕಿಲೋಮೀಟರ್ ಆಪ್ಟಿಕಲ್ ಫೈಬರ್ ಅಳವಡಿಸಲಾಗಿದೆ ಎಂದರು. 2014 ರಲ್ಲಿ 6.1 ಕೋಟಿ ಬ್ರಾಡ್ ಬ್ಯಾಂಡ್ ಸಂಪರ್ಕಗಳಿದ್ದವು, ಇದು 2022ರ ಸೆಪ್ಟೆಂಬರ್ ನಲ್ಲಿ 82 ಕೋಟಿಗೆ ಏರಿದೆ ಎಂದು ಶ್ರೀ ಶಾ ಹೇಳಿದರು. ದೇಶವನ್ನು ಮುನ್ನಡೆಸುವಾಗ, ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಎಲ್ಲಾ ಸಾಧ್ಯತೆಗಳನ್ನು ಬಳಸಿಕೊಳ್ಳುವ ಸಾಮರ್ಥ್ಯ, ಧೈರ್ಯ ಮತ್ತು ದೂರದೃಷ್ಟಿಯನ್ನು ಹೊಂದಿದ್ದಾರೆ ಎಂಬುದನ್ನು ಇದು ತೋರಿಸುತ್ತದೆ, ಇದರಿಂದ ದೇಶವು ನಿರ್ದಿಷ್ಟ ಗುರಿಯನ್ನು ತಲುಪಬಹುದು ಎಂದು ಅವರು ಹೇಳಿದರು.  

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ದೇಶಕ್ಕಾಗಿ ಎರಡು ಗುರಿಗಳನ್ನು ನಿಗದಿಪಡಿಸಿದ್ದಾರೆ ಎಂದು ಕೇಂದ್ರ ಗೃಹ ಮತ್ತು ಸಹಕಾರ ಸಚಿವರು ಹೇಳಿದರು. ಮೊದಲನೆಯದಾಗಿ, 2047 ರ ವೇಳೆಗೆ ಭಾರತವು ಸಂಪೂರ್ಣ ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಬೇಕು ಮತ್ತು ಎರಡನೆಯದಾಗಿ, 2025 ರ ವೇಳೆಗೆ ಭಾರತವನ್ನು 5 ಟ್ರಿಲಿಯನ್ ಡಾಲರ್ ಆರ್ಥಿಕ ರಾಷ್ಟ್ರವನ್ನಾಗಿ ಮಾಡಬೇಕು ಮತ್ತು ಈ ಎರಡು ಗುರಿಗಳನ್ನು ಸಾಧಿಸಲು, ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 9 ವರ್ಷಗಳಲ್ಲಿ ಬಲವಾದ ಅಡಿಪಾಯವನ್ನು ಹಾಕಿದ್ದಾರೆ. 2022 ರಲ್ಲಿ ಭಾರತದ ಒಟ್ಟು ಗ್ರಾಹಕ ಸರಕು ರಫ್ತು 421 ಶತಕೋಟಿ ಡಾಲರ್ ಆಗಿದ್ದರೆ, ದೇಶಕ್ಕೆ 83 ಶತಕೋಟಿ ಡಾಲರ್ ಎಫ್.ಡಿ.ಐ. ಹರಿದು ಬಂದಿದೆ, 70,000 ಕ್ಕೂ ಹೆಚ್ಚು ನವೋದ್ಯಮಗಳಿವೆ, ಅವುಗಳಲ್ಲಿ 116 ಯುನಿಕಾರ್ನ್ ಗಳಾಗಿವೆ ಎಂದು ಅವರು ಹೇಳಿದರು. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ನೇತೃತ್ವದ ಸರ್ಕಾರವು ಮೂಲಸೌಕರ್ಯದ ಮೇಲಿನ ವೆಚ್ಚದ ಮೇಲೆ ಗಮನ ಹರಿಸಿದೆ ಮತ್ತು 2022-23ರ 10 ತಿಂಗಳ ಸರಾಸರಿ ಜಿಎಸ್ಟಿ ಸಂಗ್ರಹವು ತಿಂಗಳಿಗೆ 1.49 ಲಕ್ಷ ಕೋಟಿ ರೂ. ಆಗಿದೆ ಎಂದರು.

2014ಕ್ಕೆ ಮೊದಲು, ಯಾವುದೇ ಬ್ಯಾಂಕ್ ಖಾತೆಯನ್ನು ಹೊಂದಿರದ ಮತ್ತು ದೇಶದ ಆರ್ಥಿಕತೆಯ ಭಾಗವಲ್ಲದ ಸುಮಾರು 60 ಕೋಟಿ ಜನರ ಬಗ್ಗೆ ಯಾರೂ ಚರ್ಚಿಸಿರಲಿಲ್ಲ ಎಂದು ಶ್ರೀ ಅಮಿತ್ ಶಾ ಹೇಳಿದರು. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 9 ವರ್ಷಗಳಲ್ಲಿ ಪ್ರತಿ ಕುಟುಂಬಕ್ಕೂ ಬ್ಯಾಂಕ್ ಖಾತೆಯ ಸೌಲಭ್ಯವನ್ನು ಒದಗಿಸಿದ್ದಾರೆ ಎಂದರು. ಡಿಬಿಟಿ ಮೂಲಕ ಪ್ರಧಾನಮಂತ್ರಿ ಮೋದಿ ನೇತೃತ್ವದ ಸರ್ಕಾರ 53 ಸಚಿವಾಲಯಗಳ 310 ಕ್ಕೂ ಹೆಚ್ಚು ಯೋಜನೆಗಳ 48 ಕೋಟಿ ಬ್ಯಾಂಕ್ ಖಾತೆಗಳಿಗೆ ನೇರವಾಗಿ 24 ಲಕ್ಷ ಕೋಟಿ ರೂ.ಗಳನ್ನು ವರ್ಗಾಯಿಸಿದೆ ಎಂದು ಅವರು ಹೇಳಿದರು. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ದೇಶದ ಈ 60 ಕೋಟಿ ಜನರ ಜೀವನ ಮಟ್ಟವನ್ನು ಹೆಚ್ಚಿಸಲು ಹಲವು ಸುಧಾರಣೆಗಳನ್ನು ತಂದಿದ್ದಾರೆ ಎಂದರು. ಜಿಡಿಪಿಗೆ ಮಾನವೀಯ ಮುಖ ಮತ್ತು ಸಂವೇದನಾಶೀಲತೆಯನ್ನು ನೀಡುವ ಮೂಲಕ ಪ್ರಧಾನಮಂತ್ರಿ ಮೋದಿ ಅವರು ದೇಶದ ವಂಚಿತ 60 ಕೋಟಿ ಜನರ ಜೀವನದಲ್ಲಿ ಬದಲಾವಣೆ ತಂದಿದ್ದಾರೆ ಎಂದು ಶ್ರೀ ಶಾ ಹೇಳಿದರು. ಈ 60 ಕೋಟಿ ಜನರ ಪ್ರಯತ್ನಗಳಿಗಿಂತ ದೇಶದ ಆರ್ಥಿಕತೆಗೆ ದೊಡ್ಡ ಬೂಸ್ಟರ್ ಬೇರೊಂದಿಲ್ಲ. ಈ ಹಿಂದೆ, ಕೊರತೆಯನ್ನು ದೇಶದ ಬಜೆಟ್ ನಲ್ಲಿ ಮರೆಮಾಚಲಾಗಿತ್ತು, ಆದರೆ ಶ್ರೀ ನರೇಂದ್ರ ಮೋದಿಯವರ ನೇತೃತ್ವದ ಸರ್ಕಾರವು ಕೊರತೆಯನ್ನು ನಿಯಂತ್ರಿಸಿದೆ ಮತ್ತು ಅದನ್ನು ಆರ್ಥಿಕತೆಯ ಮಾನದಂಡಗಳೊಳಗೆ ತಂದಿದೆ ಎಂದರು.

ಶ್ರೀ ಮೋದಿ ಅವರು ಮೂಲಸೌಕರ್ಯದಲ್ಲಿ ಹೂಡಿಕೆ ಮಾಡುವ ದೊಡ್ಡ ಕಾರ್ಯವನ್ನು ಮಾಡಿದ್ದಾರೆ ಮತ್ತು ಇದಕ್ಕಾಗಿ ಅವರು ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳಿಗೆ ಸ್ಫೂರ್ತಿ ನೀಡಿದ್ದಾರೆ ಎಂದು ಕೇಂದ್ರ ಗೃಹ ಸಚಿವರು ಹೇಳಿದರು. 5 ವರ್ಷಗಳ ನಂತರ, ಭಾರತದಲ್ಲಿ ಸಾಗಣೆ ವೆಚ್ಚವು ಪ್ರಸ್ತುತ ಶೇಕಡಾ 13 ರಿಂದ ಶೇಕಡಾ 7.5 ಕ್ಕೆ ಇಳಿಯುತ್ತದೆ ಎಂದು ಅವರು ಹೇಳಿದರು. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನೇತೃತ್ವದ ಸರ್ಕಾರವು ಮೂಲಸೌಕರ್ಯ ಕ್ಷೇತ್ರದಲ್ಲಿ ಸುಮಾರು 100 ಲಕ್ಷ ಕೋಟಿ ರೂ.ಗಳನ್ನು ಹೂಡಿಕೆ ಮಾಡಲು ಯೋಜಿಸಿದೆ ಎಂದು ಅವರು ಹೇಳಿದರು. 2014 ರಲ್ಲಿ ರಾಷ್ಟ್ರೀಯ ಹೆದ್ದಾರಿಗಳ ಉದ್ದ 91,000 ಕಿಲೋಮೀಟರ್ ಆಗಿತ್ತು, ಅದು ಇಂದು 1.46 ಲಕ್ಷ ಕಿಲೋಮೀಟರ್ ಗೆ ಏರಿದೆ ಎಂದು ಅವರು ಹೇಳಿದರು. ಮೂಲಸೌಕರ್ಯ ಮತ್ತು ಸಾಗಣೆ ವೆಚ್ಚವನ್ನು ಕಡಿಮೆ ಮಾಡದೆ ಕೈಗಾರಿಕಾ ಅಭಿವೃದ್ಧಿ ಸಾಧ್ಯವಿಲ್ಲ ಮತ್ತು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ದೂರದೃಷ್ಟಿಯೊಂದಿಗೆ 5 ವರ್ಷಗಳಲ್ಲಿ ಸಾಗಣೆ ವೆಚ್ಚವನ್ನು ಕಡಿಮೆ ಮಾಡುವ ಗುರಿಯನ್ನು ನಿಗದಿಪಡಿಸಿದ್ದಾರೆ ಎಂದರು. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ದೇಶದಲ್ಲಿ ರಾಜಕೀಯ ಸ್ಥಿರತೆಯನ್ನು ತಂದಿದ್ದಾರೆ ಮತ್ತು 30 ವರ್ಷಗಳ ನಂತರ 2014 ರಲ್ಲಿ ಪೂರ್ಣ ಬಹುಮತದೊಂದಿಗೆ ಸರ್ಕಾರವನ್ನು ರಚಿಸಲಾಯಿತು ಮತ್ತು ದೇಶದ ಜನರು ಇದರಲ್ಲಿ ಮಹತ್ವದ ಕೊಡುಗೆ ನೀಡಿದ್ದಾರೆ ಎಂದು ಶ್ರೀ ಶಾ ಹೇಳಿದರು. ಈ 10 ವರ್ಷಗಳ ಅವಧಿಯನ್ನು ಭಾರತೀಯ ಪ್ರಜಾಪ್ರಭುತ್ವದ ಇತಿಹಾಸದಲ್ಲಿ ರಾಜಕೀಯ ಸ್ಥಿರತೆಯ ಅವಧಿ ಎಂದು ಕರೆಯಲಾಗುತ್ತದೆ ಎಂದು ಶ್ರೀ ಶಾ ಹೇಳಿದರು. ಕಳೆದ ಒಂಬತ್ತು ವರ್ಷಗಳಲ್ಲಿ ದೇಶದ ಆಂತರಿಕ ಮತ್ತು ಬಾಹ್ಯ ಭದ್ರತಾ ಪರಿಸ್ಥಿತಿಯೂ ಬಲಗೊಂಡಿದೆ ಎಂದು ಅವರು ಹೇಳಿದರು. ದೇಶದಲ್ಲಿ ರಾಷ್ಟ್ರೀಯ ಭದ್ರತೆಯ ಬಲವಾದ ವಾತಾವರಣವನ್ನು ಸೃಷ್ಟಿಸಲಾಗಿದೆ, ಇದು ಈಶಾನ್ಯದಿಂದ ಗುಜರಾತ್ ನ ಕಚ್ ವರೆಗೆ ಮತ್ತು ಜಮ್ಮು ಮತ್ತು ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ದೇಶಾದ್ಯಂತ ಕೈಗಾರಿಕಾ ಅಭಿವೃದ್ಧಿಗೆ ಅನುಕೂಲಕರ ವಾತಾವರಣವನ್ನು ಅಭಿವೃದ್ಧಿಪಡಿಸಿದೆ ಎಂದರು.

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನೇತೃತ್ವದ ಸರ್ಕಾರವು 2014ರಿಂದ, ಬಲವಾದ ಸಂಕಲ್ಪದೊಂದಿಗೆ ತಳಮಟ್ಟದಲ್ಲಿ ಆಡಳಿತದ ತತ್ವಗಳನ್ನು ಜಾರಿಗೆ ತಂದಿದೆ ಮತ್ತು ಅನೇಕ ಹೊಸ ನೀತಿಗಳನ್ನು ತಂದಿದೆ ಎಂದು ಶ್ರೀ ಅಮಿತ್ ಶಾ ಹೇಳಿದರು. ಹೊಸ ಶಿಕ್ಷಣ ನೀತಿ, ಹೊಸ ಡ್ರೋನ್ ನೀತಿ, ಹೊಸ ಆರೋಗ್ಯ ನೀತಿ, ಹೊಸ ವಿದ್ಯುನ್ಮಾನ ನೀತಿ, ವಾಣಿಜ್ಯ ಕಲ್ಲಿದ್ದಲು ಗಣಿಗಾರಿಕೆ ನೀತಿ, ಮೇಕ್ ಇನ್ ಇಂಡಿಯಾ, ಸ್ಟ್ಯಾಂಡ್ ಅಪ್ ಇಂಡಿಯಾ, ಸ್ಕಿಲ್ ಇಂಡಿಯಾ ಮತ್ತು ಡಿಜಿಟಲ್ ಇಂಡಿಯಾ ನೀತಿಗಳು ಎಲ್ಲಾ ಮಾನದಂಡಗಳನ್ನು ಸಂಪೂರ್ಣವಾಗಿ ಬದಲಾಯಿಸಿವೆ. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನೇತೃತ್ವದ ಸರ್ಕಾರವು ಆತ್ಮನಿರ್ಭರ ಭಾರತ್ ಮತ್ತು ವೋಕಲ್ ಫಾರ್ ಲೋಕಲ್ (ಸ್ಥಳೀಯತೆಗೆ ಧ್ವನಿಯಾಗುವ) ಮೂಲಕ ದೇಶದ ಸ್ಥಳೀಯ ಕೈಗಾರಿಕೆಗಳನ್ನು ಬಲಪಡಿಸುವ ವಾತಾವರಣವನ್ನು ಸೃಷ್ಟಿಸಿದೆ. ದೀರ್ಘಕಾಲೀನ ಮತ್ತು ದೂರದೃಷ್ಟಿಯ ನೀತಿಗಳಿಲ್ಲದೆ ಅಭಿವೃದ್ಧಿ ಸಾಧ್ಯವಿಲ್ಲ ಮತ್ತು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನೇತೃತ್ವದ ಸರ್ಕಾರವು ಎಂದಿಗೂ ಜನರು ಮತ್ತು ವೋಟ್ ಬ್ಯಾಂಕ್ ಇಷ್ಟಪಡುವ ನಿರ್ಧಾರಗಳನ್ನು ತೆಗೆದುಕೊಳ್ಳಲಿಲ್ಲ, ಆದರೆ ಜನರಿಗೆ ಒಳ್ಳೆಯದನ್ನು ಮಾಡುವಂತಹ ನಿರ್ಧಾರಗಳನ್ನು ತೆಗೆದುಕೊಂಡಿದೆ ಎಂದು ಅವರು ಹೇಳಿದರು. ದೂರದೃಷ್ಟಿಯಿಂದ ಮತ್ತು ವೋಟ್ ಬ್ಯಾಂಕ್ ದುರಾಸೆಯಿಲ್ಲದೆ ಸರ್ಕಾರವು ದೇಶದಲ್ಲಿ ಒಂದು ವಾತಾವರಣವನ್ನು ಸೃಷ್ಟಿಸಿದೆ, ನಿರ್ಧಾರಗಳನ್ನು ತೆಗೆದುಕೊಂಡಿದೆ, ನೀತಿಗಳನ್ನು ರೂಪಿಸಿದೆ ಮತ್ತು ಅವುಗಳನ್ನು ದೃಢವಾಗಿ ಜಾರಿಗೆ ತಂದಿದೆ ಎಂದು ಶ್ರೀ ಶಾ ಹೇಳಿದರು. ಇದು ಅದ್ಭುತ ಫಲಿತಾಂಶಗಳನ್ನು ನೀಡಿದೆ, ಅದು ಇಂದು ನಮ್ಮ ಸಾಧನೆಗಳ ರೂಪದಲ್ಲಿ ವಿಶ್ವದ ಮುಂದೆ ಇದೆ. 2014ರಲ್ಲಿ ಶ್ರೀ ನರೇಂದ್ರ ಮೋದಿ ಅವರು ಪ್ರಧಾನಮಂತ್ರಿಯಾದಾಗ ದೇಶದ ತಲಾ ಆದಾಯ 68,000 ರೂ.ಗಳಾಗಿದ್ದು, ಇಂದು ಅದು 1.72 ಲಕ್ಷ ರೂ. ಆಗಿದೆ.

2014ರಲ್ಲಿ ಜಾಗತಿಕ ಜಿಡಿಪಿಯಲ್ಲಿ ಭಾರತದ ಪಾಲು ಶೇಕಡಾ 2.60 ರಷ್ಟಿತ್ತು, ಇದು ಮಾರ್ಚ್ 31, 2022 ರ ವೇಳೆಗೆ ಶೇಕಡಾ 3.40 ಕ್ಕೆ ಏರಿದೆ ಎಂದು ಕೇಂದ್ರ ಗೃಹ ಮತ್ತು ಸಹಕಾರ ಸಚಿವರು ಹೇಳಿದರು. ಜಾಗತಿಕ ಎಫ್.ಡಿ.ಐ ಒಳಹರಿವಿನಲ್ಲಿ ನಮ್ಮ ಪಾಲು 2014 ರಲ್ಲಿ ಶೇಕಡಾ 2.10 ರಷ್ಟಿತ್ತು, ಅದು 2022 ರಲ್ಲಿ ಶೇಕಡಾ 6.70 ಕ್ಕೆ ಏರಿದೆ ಎಂದು ಅವರು ಹೇಳಿದರು. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನೇತೃತ್ವದ ಸರ್ಕಾರವು ಕಠಿಣ ನಿರ್ಧಾರಗಳು, ನಿಖರವಾದ ನೀತಿಗಳನ್ನು ರೂಪಿಸಿ, ಈ ನೀತಿಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವ ಮತ್ತು ಭ್ರಷ್ಟಾಚಾರವನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡುವ 4 ಸ್ತಂಭಗಳ ಮೇಲೆ ಆರ್ಥಿಕತೆಯನ್ನು ಬೆಳೆಸಲು ಪ್ರಯತ್ನಿಸಿದೆ ಎಂದು ಶ್ರೀ ಶಾ ಹೇಳಿದರು. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಭಾರತೀಯ ಉದ್ಯಮಕ್ಕೆ ತನ್ನ ಗಾತ್ರ ಮತ್ತು ಪ್ರಮಾಣವನ್ನು ಬದಲಾಯಿಸುವ ಸಮಯ ಬಂದಿದೆ ಎಂದು ಅವರು ಹೇಳಿದರು. 

*****



(Release ID: 1911619) Visitor Counter : 118


Read this release in: English , Urdu , Marathi , Tamil