ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ
azadi ka amrit mahotsav

ಕೋವಿಡ್-19 ನಿರ್ವಹಣೆಗಾಗಿ ಸಾರ್ವಜನಿಕ ಆರೋಗ್ಯ ಸನ್ನದ್ಧತೆ ಮತ್ತು ಕೋವಿಡ್-19 ವ್ಯಾಕ್ಸಿನೇಷನ್ (ಲಸಿಕಾ) ಪ್ರಗತಿ ಕುರಿತು ರಾಜ್ಯಗಳೊಂದಿಗೆ ಪರಿಶೀಲಿಸಿದ ಕೇಂದ್ರ


ಸಕಾರಾತ್ಮಕ ಮಾದರಿಗಳ ಸಂಪೂರ್ಣ ಜೀನೋಮ್ ಅನುಕ್ರಮದ ಮೇಲೆ ಗಮನ ಹರಿಸಿ ಕಣ್ಗಾವಲು ಬಲಪಡಿಸಲು ಮತ್ತು ಹೆಚ್ಚಿನ ಪ್ರಮಾಣದ ಆರ್ ಟಿ-ಪಿಸಿಆರ್ ಪರೀಕ್ಷೆಗಳೊಂದಿಗೆ ಪರೀಕ್ಷೆಯನ್ನು ಹೆಚ್ಚಿಸಲು ರಾಜ್ಯಗಳಿಗೆ ಸೂಚಿಸಲಾಗಿದೆ.

ಆಮ್ಲಜನಕ ಸಿಲಿಂಡರ್ ಗಳು, ಪಿಎಸ್ಎ ಸ್ಥಾವರಗಳು, ವೆಂಟಿಲೇಟರ್ ಗಳು  ಮತ್ತು ಮಾನವ ಸಂಪನ್ಮೂಲ ಸೇರಿದಂತೆ ಆಸ್ಪತ್ರೆ ಮೂಲಸೌಕರ್ಯಗಳ ಕಾರ್ಯಾಚರಣೆಯ ಸನ್ನದ್ಧತೆಯನ್ನು ಖಚಿತಪಡಿಸಿಕೊಳ್ಳಲು ಅಣಕು ಕಾರ್ಯಚರಣೆ ಕೈಗೊಳ್ಳಲು ರಾಜ್ಯಗಳಿಗೆ ಸೂಚಿಸಲಾಗಿದೆ

ಟೆಸ್ಟ್-ಟ್ರ್ಯಾಕ್-ಟ್ರೀಟ್-ವ್ಯಾಕ್ಸಿನೇಷನ್ ಮತ್ತು ಕೋವಿಡ್ ಸೂಕ್ತ ನಡವಳಿಕೆಯ ಅನುಸರಣೆ ಕೋವಿಡ್ ನಿರ್ವಹಣೆಗೆ ಪರೀಕ್ಷಾ ತಂತ್ರವಾಗಿ ಮುಂದುವರಿಯುತ್ತದೆ

प्रविष्टि तिथि: 27 MAR 2023 8:33PM by PIB Bengaluru

ಕೇಂದ್ರ ಆರೋಗ್ಯ ಕಾರ್ಯದರ್ಶಿ ಶ್ರೀ ರಾಜೇಶ್ ಭೂಷಣ್ ಅವರು ಇಂದು ವಿಡಿಯೊ ಕಾನ್ಫರೆನ್ಸ್ ಮೂಲಕ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳೊಂದಿಗೆ ಪ್ರಕರಣಗಳ ಏರಿಕೆಯ ದೃಷ್ಟಿಯಿಂದ ಕೋವಿಡ್ -19 ಸಾಂಕ್ರಾಮಿಕದ ಸಂಪೂರ್ಣ ನಿರ್ವಹಣೆಯ ಸಂಪೂರ್ಣ ವ್ಯಾಪ್ತಿಯ ಸನ್ನದ್ಧತೆಯ ಸ್ಥಿತಿಯನ್ನು ಪರಿಶೀಲಿಸಲು ಉನ್ನತ ಮಟ್ಟದ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಪರಿಶೀಲನಾ ಸಭೆಯಲ್ಲಿ ನೀತಿ ಆಯೋಗದ ಸದಸ್ಯ (ಆರೋಗ್ಯ) ಡಾ ವಿ. ಕೆ. ಪಾಲ್ ಮತ್ತು ಆರೋಗ್ಯ ಸಂಶೋಧನಾ ವಿಭಾಗದ ಕಾರ್ಯದರ್ಶಿ ಡಾ. ರಾಜೀವ್ ಬಹ್ಲ್ ಉಪಸ್ಥಿತರಿದ್ದರು.

ಕೇಂದ್ರ ಆರೋಗ್ಯ ಕಾರ್ಯದರ್ಶಿ 2023 ರ ಮಾರ್ಚ್ 22 ರಂದು ನಡೆದ ಉನ್ನತ ಮಟ್ಟದ ಪರಿಶೀಲನಾ ಸಭೆಯಿಂದ ಗೌರವಾನ್ವಿತ ಪ್ರಧಾನಿಯವರ ಸಂದೇಶವನ್ನು ಉಲ್ಲೇಖಿಸಿದರು ಮತ್ತು ರಾಜ್ಯಗಳು ಜಾಗರೂಕರಾಗಿರಬೇಕು ಮತ್ತು ಕೋವಿಡ್ - 19 ನಿರ್ವಹಣೆಗೆ ಸನ್ನದ್ಧತೆಯನ್ನು ಖಚಿತಪಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು. ಆರೋಗ್ಯ ಸಂಶೋಧನಾ ಇಲಾಖೆ ಮತ್ತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ 2023 ರ ಮಾರ್ಚ್ 25 ರಂದು ಹೊರಡಿಸಿದ ಜಂಟಿ ಸಲಹೆಯಲ್ಲಿ ಪಟ್ಟಿ ಮಾಡಲಾದ ಆದ್ಯತೆಗಳನ್ನು ಅನುಸರಿಸುವಂತೆ ಅವರು ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳಿಗೆ ಎಚ್ಚರಿಕೆ ನೀಡಿದರು. ಹೆಚ್ಚಿನ ಪ್ರಮಾಣದ ಆರ್ ಟಿ-ಪಿಸಿಆರ್ ಮತ್ತು ಸಕಾರಾತ್ಮಕ ಮಾದರಿಗಳ ಸಂಪೂರ್ಣ ಜೀನೋಮ್ ಅನುಕ್ರಮದೊಂದಿಗೆ ಪರೀಕ್ಷೆಯನ್ನು ಹೆಚ್ಚಿಸಲು ಅವರು ಒತ್ತಿ ಹೇಳಿದರು. ಎಲ್ಲಾ ಸಮಯದಲ್ಲೂ ಕೋವಿಡ್ ಸೂಕ್ತ ನಡವಳಿಕೆಯನ್ನು ಅನುಸರಿಸುವಂತೆ ಪ್ರತಿಯೊಬ್ಬರನ್ನು ಒತ್ತಾಯಿಸುವುದು. ಜನರಲ್ಲಿ, ವಿಶೇಷವಾಗಿ ದುರ್ಬಲ ಜನಸಂಖ್ಯೆಯ ಗುಂಪಿಗೆ ಮುನ್ನೆಚ್ಚರಿಕೆ ಡೋಸ್ ನೀಡುವ ಅಗತ್ಯವನ್ನು ಅವರು ಪ್ರತಿಪಾದಿಸಿದರು.

ಭಾರತದಲ್ಲಿ ಹೆಚ್ಚುತ್ತಿರುವ ಪ್ರಕರಣಗಳು ಸೇರಿದಂತೆ ಜಾಗತಿಕ ಕೋವಿಡ್ -19 ಪರಿಸ್ಥಿತಿಯನ್ನು ಒಳಗೊಂಡ ಸಮಗ್ರ ಪ್ರಸ್ತುತಿಯನ್ನು ನೀಡಲಾಯಿತು. 2023 ರ ಮಾರ್ಚ್ 3ಕ್ಕೆ ಕೊನೆಗೊಂಡ ವಾರದಲ್ಲಿ 313 ಸರಾಸರಿ ದೈನಂದಿನ ಪ್ರಕರಣಗಳಿಂದ 2023 ರ ಮಾರ್ಚ್ 23 ಕ್ಕೆ ಕೊನೆಗೊಂಡ ವಾರದಲ್ಲಿ ಸರಾಸರಿ ದೈನಂದಿನ ಪ್ರಕರಣಗಳು 966 ಕ್ಕೆ ಏರುವುದರೊಂದಿಗೆ ಭಾರತವು ಕೋವಿಡ್ -19 ಪ್ರಕರಣಗಳಲ್ಲಿ ಹೆಚ್ಚಳವನ್ನು ಕಾಣುತ್ತಿದೆ ಎಂದು ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳಿಗೆ ತಿಳಿಸಲಾಯಿತು; ಮತ್ತು ಅದೇ ಸಮಯದಲ್ಲಿ ಸಾಪ್ತಾಹಿಕ ಸಕಾರಾತ್ಮಕತೆಯು ಶೇ.1.08 ಕ್ಕೆ ಏರಿದೆ.

ಮಹಾರಾಷ್ಟ್ರದಲ್ಲಿ ಸಾಪ್ತಾಹಿಕ ಸಕಾರಾತ್ಮಕತೆಯು 2023 ರ ಮಾರ್ಚ್ 3 ಕ್ಕೆ ಕೊನೆಗೊಂಡ ವಾರದಲ್ಲಿ ಶೇ.0.54 ರಿಂದ 2023 ರ ಮಾರ್ಚ್ 24 ರ ವೇಳೆಗೆ ಶೇ 4.58 ಕ್ಕೆ ಏರಿದೆ ಎಂದು ತಿಳಿಸಲಾಯಿತು. ಗುಜರಾತ್ ನಲ್ಲಿ ಇದು ಶೇ.0.07ರಿಂದ ಶೇ.2.17ಕ್ಕೆ ಏರಿಕೆಯಾಗಿದೆ. ಕೇರಳದಲ್ಲಿ ಸಾಪ್ತಾಹಿಕ ಪಾಸಿಟಿವಿಟಿ ದರ ಶೇ.1.47ರಿಂದ ಶೇ.4.51ಕ್ಕೆ ಏರಿಕೆಯಾಗಿದೆ. ಕರ್ನಾಟಕದಲ್ಲಿ ಸಾಪ್ತಾಹಿಕ ಪಾಸಿಟಿವಿಟಿ ದರ ಶೇ.1.65ರಿಂದ ಶೇ.3.05ಕ್ಕೆ ಹೆಚ್ಚಳವಾಗಿದ್ದರೆ, ದೆಹಲಿಯಲ್ಲಿ ಸಾಪ್ತಾಹಿಕ ಪಾಸಿಟಿವಿಟಿ ದರ ಶೇ.0.53ರಿಂದ ಶೇ.4.25ಕ್ಕೆ ಏರಿಕೆಯಾಗಿದೆ. ಅಂತೆಯೇ, ಹಿಮಾಚಲ ಪ್ರದೇಶವು ಸಾಪ್ತಾಹಿಕ ಸಕಾರಾತ್ಮಕತೆಯ ಹೆಚ್ಚಳವನ್ನು ಶೇ.1.92 ರಿಂದ ಶೇ.7.48 ಕ್ಕೆ ಕಂಡಿದೆ. ರಾಜಸ್ಥಾನದಲ್ಲಿ, ಇದು ಶೇ. 0.12 ರಿಂದ ಶೇ.1.62 ಕ್ಕೆ ಏರಿದೆ ಮತ್ತು ತಮಿಳುನಾಡಿನಲ್ಲಿ ಇದೇ ಅವಧಿಯಲ್ಲಿ ಸಾಪ್ತಾಹಿಕ ಸಕಾರಾತ್ಮಕತೆಯು ಶೇ.0.46 ರಿಂದ ಶೇ.2.40 ಕ್ಕೆ ಏರಿದೆ.

22 ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳು ಸರಾಸರಿ ದೈನಂದಿನ ಟಿಪಿಎಂ ಅನ್ನು ರಾಷ್ಟ್ರೀಯ ಸರಾಸರಿಗಿಂತ ಕಡಿಮೆ ವರದಿ ಮಾಡುತ್ತಿವೆ. 2023 ರ ಮಾರ್ಚ್ 24 ಕ್ಕೆ ಕೊನೆಗೊಳ್ಳುವ ವಾರದಲ್ಲಿ ಭಾರತದ 24 ಜಿಲ್ಲೆಗಳು ಶೇ.10 ಕ್ಕಿಂತ ಹೆಚ್ಚು ಸಾಪ್ತಾಹಿಕ ಸಕಾರಾತ್ಮಕತೆಯನ್ನು ವರದಿ ಮಾಡುತ್ತಿವೆ, ಆದರೆ 43 ಜಿಲ್ಲೆಗಳು ಅದೇ ಅವಧಿಯಲ್ಲಿ ಶೇ.5-10 ರಷ್ಟು ನಡುವೆ ಸಾಪ್ತಾಹಿಕ ಸಕಾರಾತ್ಮಕತೆಯನ್ನು ವರದಿ ಮಾಡುತ್ತಿವೆ.

ಆಮ್ಲಜನಕ ಸಿಲಿಂಡರ್ ಗಳು, ಪಿಎಸ್ಎ ಸ್ಥಾವರಗಳು, ವೆಂಟಿಲೇಟರ್ ಗಳು, ಲಾಜಿಸ್ಟಿಕ್ಸ್ ಮತ್ತು ಮಾನವ ಸಂಪನ್ಮೂಲಗಳು ಸೇರಿದಂತೆ ಆಸ್ಪತ್ರೆ ಮೂಲಸೌಕರ್ಯಗಳ ಕಾರ್ಯಾಚರಣೆಯ ಸನ್ನದ್ಧತೆಯನ್ನು ಖಚಿತಪಡಿಸಿಕೊಳ್ಳಲು 2023 ರ ಏಪ್ರಿಲ್ 10 ಮತ್ತು 11 ರಂದು ಎಲ್ಲಾ ಆರೋಗ್ಯ ಸೌಲಭ್ಯಗಳಲ್ಲಿ ಅಣಕು ಕಾರ್ಯಚರಣೆಗಳನ್ನು ಕೈಗೊಳ್ಳುವಂತೆ ಶ್ರೀ ರಾಜೇಶ್ ಭೂಷಣ್ ರಾಜ್ಯಗಳಿಗೆ ಸಲಹೆ ನೀಡಿದರು. ಅವರು 2023 ರ ಡಿಸೆಂಬರ್ 27 ರಂದು ನಡೆಸಿದ ಕೊನೆಯ ಅಣಕು ಕಾರ್ಯಚರಣೆಯ ಸ್ಥಿತಿಯ ಬಗ್ಗೆ ಮಾಹಿತಿ ನೀಡಿದರು. 16,601 ಸರ್ಕಾರಿ ಸೌಲಭ್ಯಗಳು ಮತ್ತು 5,338 ಖಾಸಗಿ ಸೌಲಭ್ಯಗಳು ಸೇರಿದಂತೆ ಒಟ್ಟು 21,939 ಸೌಲಭ್ಯಗಳಲ್ಲಿ ಕಾರ್ಯಚರಣೆಗಳನ್ನು ನಡೆಸಲಾಯಿತು. ದೇಶಾದ್ಯಂತ ಶೇ.94 ಕ್ಕೂ ಹೆಚ್ಚು ಪಿಎಸ್ಎ ಸ್ಥಾವರಗಳು ಮತ್ತು ಆಮ್ಲಜನಕ ಸಾಂದ್ರಕಗಳು ಕಾರ್ಯನಿರ್ವಹಿಸುತ್ತಿದ್ದರೆ,ಶೇ.87 ಕ್ಕೂ ಹೆಚ್ಚು ಐಸಿಯು ಹಾಸಿಗೆಗಳು, ವೆಂಟಿಲೇಟರ್ ಗಳು, ಒ 2(ಆಕ್ಸಿಜನ್ ಬೆಡ್) ಹಾಸಿಗೆಗಳು ಮತ್ತು ಪ್ರತ್ಯೇಕ ಹಾಸಿಗೆಗಳು ಕೆಲಸ ಮಾಡುವ ಸ್ಥಿತಿಯಲ್ಲಿ ಕಂಡುಬಂದಿವೆ.

ಹೊಸ ಕೋವಿಡ್ ರೂಪಾಂತರಗಳನ್ನು ಲೆಕ್ಕಿಸದೆ, 'ಟೆಸ್ಟ್-ಟ್ರ್ಯಾಕ್-ಟ್ರೀಟ್-ವ್ಯಾಕ್ಸಿನೇಟ್ ಮತ್ತು ಕೋವಿಡ್ ಸೂಕ್ತ ನಡವಳಿಕೆಯ ಅನುಸರಣೆ' ಕೋವಿಡ್ ನಿರ್ವಹಣೆಗೆ ಪರೀಕ್ಷಾ ತಂತ್ರವಾಗಿ ಮುಂದುವರಿಯುತ್ತದೆ ಎಂದು ಕೇಂದ್ರ ಆರೋಗ್ಯ ಕಾರ್ಯದರ್ಶಿ ಹೇಳಿದರು. ಇದು ಸೂಕ್ತ ಸಾರ್ವಜನಿಕ ಆರೋಗ್ಯ ಕ್ರಮಗಳನ್ನು ಕೈಗೊಳ್ಳಲು ಅನುಕೂಲವಾಗುತ್ತದೆ ಎಂದು ಅವರು ಹೇಳಿದರು. ರಾಜ್ಯಗಳಾದ್ಯಂತ ಸಾಕಷ್ಟು ಗೊತ್ತುಪಡಿಸಿದ ಹಾಸಿಗೆಗಳು ಮತ್ತು ಆರೋಗ್ಯ ಕಾರ್ಯಕರ್ತರ ಲಭ್ಯತೆಯನ್ನು ಖಚಿತಪಡಿಸಿಕೊಳ್ಳಲು, ರೋಗ ಮತ್ತು ಲಸಿಕೆಯ ಬಗ್ಗೆ ಸಮುದಾಯ ಜಾಗೃತಿಯನ್ನು ಹೆಚ್ಚಿಸಲು ಮತ್ತು ಕೋವಿಡ್ ಇಂಡಿಯಾ ಪೋರ್ಟಲ್ ನಲ್ಲಿ ಕೋವಿಡ್ -19 ದತ್ತಾಂಶವನ್ನು ನಿಯಮಿತವಾಗಿ ನವೀಕರಿಸಲು ರಾಜ್ಯಗಳನ್ನು ಒತ್ತಾಯಿಸಲಾಯಿತು.

ಡಾ.ವಿ.ಕೆ.ಪಾಲ್ ಅವರು ಹೊಸ ರೂಪಾಂತರಗಳ ಹರಡುವಿಕೆ ಮತ್ತು ದೇಶಾದ್ಯಂತ ಲಸಿಕೆ ರೋಗನಿರೋಧಕ ಶಕ್ತಿ ಪ್ರಸ್ತುತ ಸಾಧಾರಣ ಮಟ್ಟದಲ್ಲಿರುವುದರಿಂದ ಹೆಚ್ಚಿನ ಜಾಗರೂಕತೆಯ ಅಗತ್ಯವನ್ನು ಬಿಂಬಿಸಿದರು. ಹೆಚ್ಚಿನ ಮಟ್ಟದ ಆರ್ ಟಿ-ಪಿಸಿಆರ್ ಪರೀಕ್ಷೆಗಳು ಸೇರಿದಂತೆ ಸನ್ನದ್ಧತೆಯನ್ನು ಹೆಚ್ಚಿಸುವಂತೆ ಅವರು ರಾಜ್ಯಗಳನ್ನು ಒತ್ತಾಯಿಸಿದರು ಮತ್ತು ಜನರಲ್ಲಿ ಮುನ್ನೆಚ್ಚರಿಕೆ ಡೋಸ್ ವ್ಯಾಪ್ತಿಯನ್ನು ಹೆಚ್ಚಿಸಲು ಕರೆ ನೀಡಿದರು.

ಪರೀಕ್ಷೆಗಳನ್ನು ಹೆಚ್ಚಿಸಲು, ವಿಶೇಷವಾಗಿ ಆರ್ ಟಿ-ಪಿಸಿಆರ್ ಪರೀಕ್ಷೆಗಳನ್ನು ಹೆಚ್ಚಿಸಲು ಮತ್ತು ಮುನ್ನೆಚ್ಚರಿಕೆಯನ್ನು ಕಾಪಾಡಿಕೊಳ್ಳಲು ಡಾ.ರಾಜೀವ್ ಬಹ್ಲ್, ರಾಜ್ಯಗಳನ್ನು ಪ್ರೋತ್ಸಾಹಿಸಿದರು. ಕೇಂದ್ರ ಆರೋಗ್ಯ ಸಚಿವಾಲಯದಿಂದ ಕಳುಹಿಸಲಾದ ಸಲಹೆಯನ್ನು ಅನುಸರಿಸಲು ಮತ್ತು ಸಮುದಾಯ ಜಾಗೃತಿಯನ್ನು ಹೆಚ್ಚಿಸಲು ಅವರು ವಿನಂತಿಸಿದರು. ಹೆಚ್ಚಿನ ಸಂಖ್ಯೆಯ ಪ್ರಕರಣಗಳನ್ನು ತೋರಿಸುವ ರಾಜ್ಯಗಳು ಹೊಸ ಪ್ರಕರಣಗಳು ಮತ್ತು ತೀವ್ರ ಪ್ರಕರಣಗಳ ಸಮೂಹವನ್ನು ಮೇಲ್ವಿಚಾರಣೆ ಮಾಡಬೇಕೆಂದು ಅವರು ಇದೇ ವೇಳೆ ಒತ್ತಾಯಿಸಿದರು.

ಕೋವಿಡ್ ನಿರ್ವಹಣೆಯ ವಿವಿಧ ಅಂಶಗಳ ಬಗ್ಗೆ ಸಮಗ್ರ ಮತ್ತು ವಿವರವಾದ ಚರ್ಚೆ ನಡೆಯಿತು. ಗೌರವಾನ್ವಿತ ಪ್ರಧಾನ ಮಂತ್ರಿ ಮತ್ತು ಕೇಂದ್ರ ಆರೋಗ್ಯ ಸಚಿವರ ಅಧ್ಯಕ್ಷತೆಯಲ್ಲಿ ನಡೆದ ಸಮಯೋಚಿತ ಪರಿಶೀಲನಾ ಸಭೆಗಳು ಮತ್ತು ಕೇಂದ್ರ ಆರೋಗ್ಯ ಸಚಿವಾಲಯದ ಸಲಹೆಗಳನ್ನು ರಾಜ್ಯಗಳು ಶ್ಲಾಘಿಸಿದವು. ಕೋವಿಡ್ -19 ರ ಪರಿಣಾಮಕಾರಿ ತಡೆಗಟ್ಟುವಿಕೆ ಮತ್ತು ನಿರ್ವಹಣೆಗಾಗಿ ಕೇಂದ್ರದೊಂದಿಗೆ ಕೆಲಸ ಮಾಡುವುದಾಗಿ ಅವರು ಭರವಸೆ ನೀಡಿದರು. ಕಟ್ಟೆಚ್ಚರ ವಹಿಸಿದ್ದು, ಸದ್ಯದ ಪರಿಸ್ಥಿತಿ ಅವಲೋಕಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು. 2023 ರ ಏಪ್ರಿಲ್ 10 ಮತ್ತು 11 ರಂದು ಆಸ್ಪತ್ರೆ ಮೂಲಸೌಕರ್ಯಗಳ ಸಿದ್ಧತೆಗಾಗಿ ಅಣಕು ಕಾರ್ಯಚರಣೆ ನಡೆಸುವುದಾಗಿ ರಾಜ್ಯಗಳು ಭರವಸೆ ನೀಡಿವೆ.

ಸಭೆಯಲ್ಲಿ ಆರೋಗ್ಯ ಸಚಿವಾಲಯದ ಎ.ಎಸ್. ಶ್ರೀ ಲವ್ ಅಗರ್ವಾಲ್ ಮತ್ತು ಸಚಿವಾಲಯದ ಇತರ ಅಧಿಕಾರಿಗಳು ಉಪಸ್ಥಿತರಿದ್ದರು. ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಪ್ರಧಾನ ಕಾರ್ಯದರ್ಶಿ (ಆರೋಗ್ಯ), ಮಿಷನ್ ನಿರ್ದೇಶಕರು (ಎನ್ಎಚ್ಎಂ) ಪರಿಶೀಲನಾ ಸಭೆಯಲ್ಲಿ ಭಾಗವಹಿಸಿದ್ದರು.

****


(रिलीज़ आईडी: 1911428) आगंतुक पटल : 157
इस विज्ञप्ति को इन भाषाओं में पढ़ें: English , हिन्दी , Marathi , Odia , Telugu