ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ
ಭಾರತದಲ್ಲಿ ಡಿಜಿಟಲ್ ಕಂದಕ ಮುಚ್ಚಲು ಬಹುಭಾಷಾ ಇಂಟರ್ನೆಟ್ ಒದಗಿಸುವುದೇ ನಿರ್ಣಾಯಕ: ನಿಕ್ಸಿಯ ಸಾರ್ವತ್ರಿಕ ಸ್ವೀಕಾರ - 2ನೇ ದಿನದ ಕಾರ್ಯಕ್ರಮದಲ್ಲಿ ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ ಹೇಳಿಕೆ
Posted On:
27 MAR 2023 8:37PM by PIB Bengaluru
ಪ್ರಮುಖಾಂಶಗಳು
• ಡಿಜಿಟಲ್ ಸೇರ್ಪಡೆಗಾಗಿ ಸಾರ್ವತ್ರಿಕ ಸ್ವೀಕಾರ ಉತ್ತೇಜಿಸಲು ಮತ್ತು ಪ್ರಚಾರ ಮಾಡಲು ಈ ವರ್ಷ ಭಾರತವನ್ನು ಧ್ವಜಧಾರಿಯಾಗಿ ಆಯ್ಕೆ ಮಾಡಲಾಗಿದೆ.
• ಸಾರ್ವತ್ರಿಕ ಸ್ವೀಕಾರವನ್ನು ಜಾಗತಿಕವಾಗಿ ಆಚರಿಸಲಾಗುತ್ತಿದೆ. ಸಾರ್ವತ್ರಿಕ ಸ್ವೀಕಾರದ ಈ ಉದ್ಘಾಟನಾ ದಿನವು ಎಲ್ಲರನ್ನೂ ಒಳಗೊಂಡ ಮತ್ತು ಬಹುಭಾಷಾ ಇಂಟರ್ನೆಟ್ ಪ್ರಯತ್ನಗಳಿಗೆ ಚಾಲನೆ ನೀಡುವ ಗುರಿ ಹೊಂದಿದೆ.
• 2 ದಿನಗಳ ಕಾರ್ಯಕ್ರಮವನ್ನು ನ್ಯಾಷನಲ್ ಇಂಟರ್ನೆಟ್ ಎಕ್ಸ್‌ಚೇಂಜ್ ಆಫ್ ಇಂಡಿಯಾ (ನಿಕ್ಸಿ), ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ಅಡಿ, ಮಾರ್ಚ್ 27-28ರಂದು ಆಯೋಜಿಸಲಾಗಿದೆ.
ಸಾರ್ವತ್ರಿಕ ಸ್ವೀಕಾರ ದಿನಾಚರಣೆಗೆ ಭಾರತವು ಸೂಕ್ತ ಸ್ಥಳ ಎಂದು ಬಣ್ಣಿಸಿದ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ ಶ್ರೀ ಭುವನೇಶ್ ಕುಮಾರ್, ಬಹುಭಾಷಾ ಇಂಟರ್ನೆಟ್ ಬಳಕೆದಾರ ಇಂಟರ್ಫೇಸ್ ಒದಗಿಸುವುದು ದೇಶದಲ್ಲಿ ಡಿಜಿಟಲ್ ಕಂದಕವ ಮುಚ್ಚಲು ನಿರ್ಣಾಯಕವಾಗಿದೆ. ಸಚಿವಾಲಯದ ಸಹಯೋಗದಲ್ಲಿ ಲಾಭರಹಿತ ಕಂಪನಿಯಾದ ನ್ಯಾಷನಲ್ ಇಂಟರ್ನೆಟ್ ಎಕ್ಸ್‌ಚೇಂಜ್ ಆಫ್ ಇಂಡಿಯಾ(ನಿಕ್ಸಿ) ಆಯೋಜಿಸಿರುವ ಸಾರ್ವತ್ರಿಕ ಸ್ವೀಕಾರದ 2 ದಿನಗಳ ಕಾರ್ಯಕ್ರಮದ ಉದ್ಘಾಟನಾ ಸಮಾರಂಭ ಉದ್ದೇಶಿಸಿ ಅವರು ಮಾತನಾಡಿದರು.
ಮಾರ್ಚ್ 27 ಮತ್ತು 28ರಂದು ಆಯೋಜಿಸಿರುವ ಈ ಕಾರ್ಯಕ್ರಮವು ಎಲ್ಲರನ್ನೂ ಒಳಗೊಂಡ ಮತ್ತು ಬಹುಭಾಷಾ ಇಂಟರ್ನೆಟ್ ಒದಗಿಸುವ ಸಹಭಾಗಿತ್ವದ ಪ್ರಯತ್ನಗಳಿಗೆ ಚಾಲನೆ ನೀಡುವ ಗುರಿ ಹೊಂದಿದೆ. ಈ ವಿಶಿಷ್ಟ ಉಪಕ್ರಮವನ್ನು ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್ ಶ್ಲಾಘಿಸಿದ್ದಾರೆ.
ಸಾರ್ವತ್ರಿಕ ಸ್ವೀಕಾರದ ಪ್ರಾಮುಖ್ಯತೆ ವಿವರಿಸಿದ ಶ್ರೀ ಭುವನೇಶ್ ಕುಮಾರ್, “ಹಲವು ಭಾಷೆಗಳಿಗೆ ನೆಲೆಯಾಗಿರುವ ಭಾರತವು 22 ಅಧಿಕೃತ ಭಾಷೆಗಳಲ್ಲಿ ಡೊಮೇನ್ ಹೆಸರುಗಳನ್ನು ಒದಗಿಸುವಲ್ಲಿ ಯಶಸ್ವಿಯಾಗಿದೆ, ಇದು ಒಂದು ದೊಡ್ಡ ಸಾಧನೆಯಾಗಿದೆ. ದೇಶವು ಹೆಚ್ಚು ಇಂಟರ್ನೆಟ್ ಬಳಕೆದಾರರನ್ನು ಹೊಂದಿದೆ. ಆದರೆ ಭಾಷೆಯ ಅಡೆತಡೆಗಳು ಇಂಗ್ಲಿಷ್ ಮಾತನಾಡದ ಹೆಚ್ಚಿನ ಸಂಖ್ಯೆಯ ಬಳಕೆದಾರರಲ್ಲದವರಿಗೆ ಇಂಟರ್ನೆಟ್ ಅನ್ನು ಆಧಾರವಾಗಿಸಬೇಕು ಎಂಬುದನ್ನು ಗಮನಿಸಬೇಕು. ನಾವು ಇಂಟರ್ನೆಟ್ ಸೇವೆಗಳನ್ನು ಒದಗಿಸುವುದು ಮಾತ್ರವಲ್ಲದೆ, ಸ್ಥಳೀಯ ಭಾಷೆಗಳಲ್ಲಿ ಇ-ಮೇಲ್‌ಗಳು ಮತ್ತು ವೆಬ್‌ಸೈಟ್‌ಗಳನ್ನು ರೂಪಿಸುವುದು ಬಹಳ ಮುಖ್ಯ. ಪ್ರಸ್ತುತ ಡಿಜಿಟಲ್ ಕಂದಕವನ್ನು ಕಡಿಮೆ ಮಾಡಲು ಬಹುಭಾಷಾ ಇಂಟರ್ನೆಟ್ ಬಳಕೆದಾರ ಇಂಟರ್ಫೇಸ್ ಒದಗಿಸುವುದು ನಿರ್ಣಾಯಕವಾಗಿದೆ. ಸಾರ್ವತ್ರಿಕ ಸ್ವೀಕಾರದ ಮೂಲಕ, ನಾವು ಇಂಟರ್ನೆಟ್ ಬಳಕೆದಾರರಲ್ಲದ ಜನರೊಂದಿಗೆ ಸಂಪರ್ಕ ಸಾಧಿಸಬಹುದು, ದೇಶ ಮತ್ತು ವಿಶ್ವಾದ್ಯಂತ ಡಿಜಿಟಲ್ ಸೇರ್ಪಡೆಯನ್ನು ಉತ್ತೇಜಿಸಬಹುದು ಎಂದರು.
ಗಮನಾರ್ಹ ವಿಷಯವೆಂದರೆ, ಡಿಜಿಟಲ್ ಆರ್ಥಿಕತೆಯಾಗಿ ವೇಗವಾಗಿ ಬದಲಾಗುತ್ತಿರುವ ಭಾರತವನ್ನು ಡಿಜಿಟಲ್ ಸೇರ್ಪಡೆಗಾಗಿ ಸಾರ್ವತ್ರಿಕ ಸ್ವೀಕಾರ ಉತ್ತೇಜಿಸಲು ಮತ್ತು ಘೋಷಿಸಲು ಈ ವರ್ಷ ಭಾರತವನ್ನು ಧ್ವಜಧಾರಿ(ಫ್ಲ್ಯಾಗ್ ಬೇರರ್)ಯಾಗಿ ಆಯ್ಕೆ ಮಾಡಲಾಗಿದೆ. ಜಾಗೃತಿ ಮೂಡಿಸಲು, ಭಾಷೆಯ ಅಡೆತಡೆಗಳನ್ನು ನಿವಾರಿಸಲು ಮತ್ತು ಹೆಚ್ಚಿನ ಜನಸಂಖ್ಯೆಗೆ ಇಂಟರ್ನೆಟ್ ಪ್ರವೇಶ ಕಲ್ಪಿಸಲು ಮತ್ತು ಪ್ರತಿಯೊಬ್ಬ ನಾಗರಿಕರನ್ನು ಆರ್ಥಿಕತೆಯ ವ್ಯಾಪ್ತಿಗೆ ತರಲು ವಿಚಾರಧಾರೆಗೆ ಪ್ರೇರೇಪಿಸಲು, ಅರ್ಥಪೂರ್ಣ ಮತ್ತು ಫಲಿತಾಂಶ-ಆಧಾರಿತ ಮತ್ತು ಪ್ರಗತಿದಾಯಕ ಸಂವಾದಗಳನ್ನು ನಡೆಸಲು ಈ ಕಾರ್ಯಕ್ರಮ ಮೊದಲ ರೀತಿಯ ಹೊಸ ಪ್ರಯತ್ನವಾಗಿದೆ.
ಕಾರ್ಯಕ್ರಮದ ಮೊದಲ ದಿನದಲ್ಲಿ ಐಸಿಎಎನ್ಎನ್ ಕಂಪನಿಯ ಆಡಳಿತ ಮಂಡಳಿ ನಿರ್ದೇಶಕ ಎಡ್ಮನ್ ಚುಂಗ್, ಯುಎಎಸ್ ಜಿ ಅಧ್ಯಕ್ಷ ಅಜಯ್ ದತ್ತ, ಐಸಿಎಎನ್ಎನ್ ಕಂಪನಿಯ ಎಪಿಎಸಿ ಎಂಡಿ ಮತ್ತು ಉಪಾಧ್ಯಕ್ಷ ಜಿಯಾ-ರಾಂಗ್ ಲೊ, ನಿಕ್ಸಿ ಸಿಇಒ ಅನಿಲ್ ಕುಮಾರ್ ಜೈನ್, ಸಚಿವಾಲಯದ ವಿಜ್ಞಾನಿ ಆಶಾ ನಂಗಿಯಾ- ವಿಜ್ಞಾನಿ ಜಿ, ಸಚಿವಾಲಯದ ಇ-ಇಂಟರ್ನೆಟ್ ಆಡಳಿತ ವಿಭಾಗದ ವಿಜ್ಞಾನಿ ಸಂತೋಷ್, ಐಸಿಎಎನ್ಎನ್ ಹಿರಿಯ ನಿರ್ದೇಶಕ ನಿತಿನ್ ವಾಲಿ ಮತ್ತು ಇತರೆ ಗಣ್ಯರು ತಮ್ಮ ಅಭಿಪ್ರಾಯಗಳನ್ನು ವಿದ್ಯಾರ್ಥಿಗಳೊಂದಿಗೆ ಹಂಚಿಕೊಂಡರು, ಕಾರ್ಯಕ್ರಮದಲ್ಲಿ ಸಂಶೋಧಕರು, ವಿಷಯ ತಜ್ಞರು ಸೇರಿದಂತೆ ವಿವಿಧ ವಲಯಗಳ ಗಣ್ಯರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಐಸಿಎಎನ್ಎನ್ ಕಂಪನಿಯ ಎಪಿಎಸಿ ವಿಭಾಗದ ಉಪಾಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಜಿಯಾ-ರಾಂಗ್ ಲೊ, “ಮುಂದಿನ ಶತಕೋಟಿ ಜನರನ್ನು ಆನ್‌ಲೈನ್‌ನಲ್ಲಿ ತರಲು ಸಹಾಯ ಮಾಡುವ ಸಾರ್ವತ್ರಿಕ ಸ್ವೀಕಾರವು ಭಾಷೆಯ ಅಡೆತಡೆಗಳನ್ನು ಒಡೆದುಹಾಕಲಿದೆ. ಡೊಮೇನ್ ಹೆಸರುಗಳನ್ನು ವಿಭಿನ್ನ ಸ್ಕ್ರಿಪ್ಟ್‌ಗಳಲ್ಲಿ ಸ್ವೀಕರಿಸಲು ಉದ್ಯಮಕ್ಕೆ ವಿಶೇಷವಾಗಿ ಭಾರತೀಯ ತಂತ್ರಜ್ಞಾನ ಕಂಪನಿಗಳಿಗೆ ಜಾಗೃತಿ ಮೂಡಿಸಲು ನಾವು ಒಟ್ಟಾಗಿ ಕೆಲಸ ಮಾಡಬೇಕಾಗಿದೆ. ಬಹುಭಾಷಾ ಇಂಟರ್‌ನೆಟ್‌ಗಾಗಿ ಭಾರತದ ದೃಷ್ಟಿಕೋನ ಕಾರ್ಯರೂಪಕ್ಕೆ ಬರುತ್ತದೆ. ಇದು ಜಗತ್ತಿಗೆ ಯಶಸ್ಸಿನ ಸಂದರ್ಭವಾಗಲಿದೆ ಎಂಬ ಆತ್ಮವಿಶ್ವಾಸ ನನಗಿದೆ ಎಂದರು.
ಕಾರ್ಯಕ್ರಮದ ಮೊದಲ ದಿನದಲ್ಲಿ 'ಸಾರ್ವತ್ರಿಕ ಸ್ವೀಕಾರದ ಪರಿಚಯ', 'ನಿಮ್ಮ ವೆಬ್‌ಸೈಟ್ ಅನ್ನು ಸಾರ್ವತ್ರಿಕ ಸ್ವೀಕಾರಕ್ಕೆ ಸಿದ್ಧಪಡಿಸುವುದು: ವೇ ಫಾರ್ವರ್ಡ್', 'ಭಾರತದಲ್ಲಿ ಸಾರ್ವತ್ರಿಕ ಸ್ವೀಕಾರ ಕಾರ್ಯ', 'ಪ್ರಾಮುಖ್ಯತೆ', ಭಾರತದ ಬಹು-ಸಾಂಸ್ಕೃತಿಕ ಸಮಾಜಕ್ಕಾಗಿ ಸಾರ್ವತ್ರಿಕ ಸ್ವೀಕಾರ ಅಳವಡಿಕೆ ಮತ್ತು ಇತರೆ ಮುಂತಾದ ಸಂಬಂಧಿತ ಮತ್ತು ಪ್ರಮುಖ ವಿಷಯಗಳ ಕುರಿತು ತೊಡಗಿಸಿಕೊಳ್ಳುವ ಕಲಾಪಗಳು ಮತ್ತು ಕಾರ್ಯಾಗಾರಗಳನ್ನು ಆಯೋಜಿಸಲಾಗಿತ್ತು.
ಸಾರ್ವತ್ರಿಕ ಸ್ವೀಕಾರ ಎಂದರೆ ಕಂಪ್ಯೂಟಿಂಗ್ ಸಾಧನಗಳು, ಆಪರೇಟಿಂಗ್ ಸಿಸ್ಟಮ್‌ಗಳು, ಬ್ರೌಸರ್‌ಗಳು, ಸಾಮಾಜಿಕ ಮಾಧ್ಯಮ ಅಥವಾ ಇ-ಕಾಮರ್ಸ್‌ಗೆ ಇಂಗ್ಲಿಷ್ ಹೊರತುಪಡಿಸಿ ಸ್ಥಳೀಯ ಭಾಷೆಯಲ್ಲಿ ಸೂಚನೆಗಳನ್ನು ಸ್ವೀಕರಿಸಲು ಮತ್ತು ಸ್ಕ್ರಿಪ್ಟ್, ಭಾಷೆ ಅಥವಾ ಅಕ್ಷರದ ಉದ್ದವನ್ನು ಲೆಕ್ಕಿಸದೆ ಮಾನ್ಯ ಡೊಮೇನ್ ಹೆಸರುಗಳು ಮತ್ತು ಇಮೇಲ್ ವಿಳಾಸಗಳನ್ನು ಖಚಿತಪಡಿಸಿಕೊಳ್ಳಲು ತಾಂತ್ರಿಕ ಪರಿಸರವನ್ನು ನಿರ್ಮಿಸುವುದು ಎಂದರ್ಥ. ಭಾರತವು ಶೀಘ್ರದಲ್ಲೇ 1 ಟ್ರಿಲಿಯನ್ ಡಾಲರ್ ಮೊತ್ತದ ಡಿಜಿಟಲ್ ಆರ್ಥಿಕತೆಯ ಗುರಿ ಹೊಂದಿದ. ಈ ನಿಟ್ಟಿನಲ್ಲಿ, ಸಾರ್ವತ್ರಿಕ ಸ್ವೀಕಾರದೊಂದಿಗೆ ಡಿಜಿಟಲ್ ಸೇರ್ಪಡೆ ವಿಸ್ತರಿಸುವುದು ದೇಶಕ್ಕೆ ಮುಖ್ಯವಾಗಿದೆ. ಇದನ್ನು ಸಾಧಿಸುವುದರಿಂದ ಪ್ರತಿಯೊಬ್ಬ ಭಾರತೀಯರು ತಮ್ಮ ಆಸಕ್ತಿಗಳು, ವ್ಯವಹಾರ, ಸಂಸ್ಕೃತಿ, ಭಾಷೆ ಮತ್ತು ಲಿಪಿಯೊಂದಿಗೆ ಉತ್ತಮವಾಗಿ ಹೊಂದಾಣಿಕೆಯಾಗುವ ಯಾವುದೇ ಭಾಷೆಯಲ್ಲಿ ಡೊಮೇನ್ ಹೆಸರು ಮತ್ತು ಇಮೇಲ್ ವಿಳಾಸವನ್ನು ಆಯ್ಕೆ ಮಾಡುವ ಮೂಲಕ ಇಂಟರ್ನೆಟ್‌ನ ಸಂಪೂರ್ಣ ಸಾಮಾಜಿಕ ಮತ್ತು ಆರ್ಥಿಕ ಶಕ್ತಿ ಅನುಭವಿಸುವ ಸಾಮರ್ಥ್ಯ ಹೊಂದಿದ್ದಾರೆ ಎಂದು ಖಚಿತಪಡಿಸಿಕೊಳ್ಳಬಹುದು.
ಮಾರ್ಚ್ 28ರಂದು ಜಾಗತಿಕವಾಗಿ ಆಚರಿಸಲಾಗುತ್ತಿರುವ ಈ ಕಾರ್ಯಕ್ರಮವನ್ನು ಯುಎಎಸ್ ಜಿ (Universal Acceptance Steering Group) ಮತ್ತು ಐಸಿಎಎನ್ಎನ್ (Internet Corporation for Assigned Names and Numbers) ಜಂಟಿಯಾಗಿ ಆಯೋಜಿಸಿವೆ. ಸಾರ್ವತ್ರಿಕ ಸ್ವೀಕಾರದ ಪ್ರಯೋಜನಗಳನ್ನು ಚೆನ್ನಾಗಿ ಅರ್ಥ ಮಾಡಿಕೊಳ್ಳಲು ಉನ್ನತ ತಾಂತ್ರಿಕ ಮತ್ತು ಭಾಷಾ ಸಮುದಾಯಗಳು, ಕಂಪನಿಗಳು, ಸರ್ಕಾರಗಳು ಮತ್ತು ಡಿಎನ್ಎಸ್(Domain Name System) ಉದ್ಯಮದ ಪಾಲುದಾರರನ್ನು ತೊಡಗಿಸಿಕೊಳ್ಳುವ ಮತ್ತು ಸಜ್ಜುಗೊಳಿಸುವ ಗುರಿ ಹೊಂದಿದೆ. ಮೊದಲ ಜಾಗತಿಕ ಸಾರ್ವತ್ರಿಕ ಸ್ವೀಕಾರ ದಿನ ಆಚರಿಸಲು 50ಕ್ಕಿಂತ ಹೆಚ್ಚಿನ ದೇಶಗಳು ಕಾರ್ಯಕ್ರಮದಲ್ಲಿ ಭಾಗವಹಿಸಿವೆ ಎಂದು ವರದಿಯಾಗಿದೆ.
*****
(Release ID: 1911414)
Visitor Counter : 155