ಕಲ್ಲಿದ್ದಲು ಸಚಿವಾಲಯ
ಆರನೇ ಸುತ್ತಿನ ವಾಣಿಜ್ಯ ಹರಾಜಿನಲ್ಲಿ ಗಣಿಗಳ ಹರಾಜಿನ ಒಪ್ಪಂದಕ್ಕೆ ಕಲ್ಲಿದ್ದಲು ಸಚಿವಾಲಯ ಸಹಿ ಹಾಕುವುದು
ಮಾರ್ಚ್ 29 ರಂದು ಏಳನೇ ಸುತ್ತಿನ ಹರಾಜುಗಳ ಆರಂಭ .
प्रविष्टि तिथि:
27 MAR 2023 3:51PM by PIB Bengaluru
ಕಲ್ಲಿದ್ದಲು ಸಚಿವಾಲಯವು 6 ನೇ ಸುತ್ತಿನ ಅಡಿಯಲ್ಲಿ ಹರಾಜಾದ 28 ಕಲ್ಲಿದ್ದಲು ಗಣಿಗಳ ಒಪ್ಪಂದಗಳಿಗೆ ಸಹಿ ಹಾಕಲಿದೆ ಮತ್ತು ಕಲ್ಲಿದ್ದಲು ಮಾರಾಟಕ್ಕಾಗಿ ಗಣಿಗಳ ಏಳನೇ ಸುತ್ತಿನ ಹರಾಜನ್ನು ಮಾರ್ಚ್ 29, 2023 ರಂದು ಪ್ರಾರಂಭ ಮಾಡಲಿದೆ.
ಕೇಂದ್ರ ರಕ್ಷಣಾ ಸಚಿವರಾದ ಶ್ರೀ ರಾಜನಾಥ್ ಸಿಂಗ್ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದು, ಮುಂದಿನ ಸುತ್ತಿನ ಹರಾಜಿಗೆ ಚಾಲನೆ ನೀಡಲಿದ್ದಾರೆ. ಕೇಂದ್ರ ಕಲ್ಲಿದ್ದಲು, ಗಣಿ ಮತ್ತು ಸಂಸದೀಯ ವ್ಯವಹಾರಗಳ ಸಚಿವರಾದ ಶ್ರೀ ಪ್ರಲ್ಹಾದ ಜೋಶಿ ಅವರು ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದು, ಕಲ್ಲಿದ್ದಲು, ಗಣಿ ಮತ್ತು ರೈಲ್ವೆ ರಾಜ್ಯ ಸಚಿವರಾದ ಶ್ರೀ ರಾವ್ ಸಾಹೇಬ್ ಪಾಟೀಲ್ ದಾನ್ವೆ ಅವರು ಗೌರವಾನ್ವಿತ ಅತಿಥಿಯಾಗಿ ಭಾಗವಹಿಸಲಿದ್ದಾರೆ.
6 ನೇ ಸುತ್ತಿನ ಅಡಿಯಲ್ಲಿ ಹರಾಜಾದ 28 ಕಲ್ಲಿದ್ದಲು ಗಣಿಗಳ ಒಟ್ಟು ಸಂಚಿತ ಪಿಆರ್ಸಿ ವಾರ್ಷಿಕವಾಗಿ 74 ಮಿಲಿಯನ್ ಟನ್ (ಎಂಟಿಪಿಎ) ಆಗಿದೆ ಮತ್ತು ಈ ಗಣಿಗಳಿಂದ ಕಲ್ಲಿದ್ದಲಿನ ಪಿಆರ್ಸಿಯನ್ನು (ಸಾಮರ್ಥ್ಯ) ಪರಿಗಣಿಸಿದಾಗ ವಾರ್ಷಿಕ ರೂ.14,497 ಕೋಟಿ ಆದಾಯವನ್ನು ನಿರೀಕ್ಷಿಸಲಾಗಿದೆ. ಈ ಗಣಿಗಳ ಕಾರ್ಯಾಚರಣೆಯ ಆರಂಭದ ನಂತರ, ಒಂದು ಲಕ್ಷ ಜನರಿಗೆ ಉದ್ಯೋಗವನ್ನು ಸೃಷ್ಟಿಸುವ ನಿರೀಕ್ಷೆಯಿದೆ.
7 ನೇ ಸುತ್ತಿನ ಅಡಿಯಲ್ಲಿ ನೀಡಲಾಗುತ್ತಿರುವ ಕಲ್ಲಿದ್ದಲು ಗಣಿಗಳು ಭಾಗಶಃ ಪರಿಶೋಧಿಸಲ್ಪಟ್ಟ, ಸಂಪೂರ್ಣವಾಗಿ ಪರಿಶೋಧಿಸಲ್ಪಟ್ಟ, ಕೋಕಿಂಗ್, ನಾನ್-ಕೋಕಿಂಗ್, ಲಿಗ್ನೈಟ್ ಇತ್ಯಾದಿಗಳ ಮಿಶ್ರಣವಾಗಿದೆ. 7 ನೇ ಸುತ್ತಿನ ಅಡಿಯಲ್ಲಿ ನೀಡಲಾದ 106 ಕಲ್ಲಿದ್ದಲು ಗಣಿಗಳಲ್ಲಿ, 61 ಗಣಿಗಳು ಭಾಗಶಃ ಪರಿಶೋಧಿತ ಕಲ್ಲಿದ್ದಲು ಗಣಿಗಳು ಮತ್ತು 45 ಸಂಪೂರ್ಣವಾಗಿ ಪರಿಶೋಧಿಸಲ್ಪಟ್ಟವುಗಳಾಗಿವೆ. . 95 ನಾನ್-ಕೋಕಿಂಗ್ ಕಲ್ಲಿದ್ದಲು ಗಣಿಗಳು, ಒಂದು ಕೋಕಿಂಗ್ ಕಲ್ಲಿದ್ದಲು ಗಣಿ ಮತ್ತು 10 ಲಿಗ್ನೈಟ್ ಗಣಿಗಳನ್ನು 7 ನೇ ಸುತ್ತಿನ ಹರಾಜಿನ ಅಡಿಯಲ್ಲಿ ನೀಡಲಾಗುತ್ತಿದೆ.
ಟೆಂಡರ್ ದಸ್ತಾವೇಜುಗಳ ಮಾರಾಟದ ಪ್ರಾರಂಭವು ಮಾರ್ಚ್ 29, 2023 ರಿಂದ ಪ್ರಾರಂಭವಾಗುತ್ತದೆ. ಗಣಿಗಳ ವಿವರಗಳು, ಹರಾಜು ನಿಯಮಗಳು, ಕಾಲಾವಧಿ ಇತ್ಯಾದಿಗಳನ್ನು ಎಂಎಸ್.ಟಿ.ಸಿMSTC ಹರಾಜು ವೇದಿಕೆಯಲ್ಲಿ ನೋಡಬಹುದು. ಶೇಕಡಾವಾರು ಆದಾಯದ ಹಂಚಿಕೆಯ ಆಧಾರದ ಮೇಲೆ ಪಾರದರ್ಶಕ ಎರಡು ಹಂತದ ಪ್ರಕ್ರಿಯೆಯ ಮೂಲಕ ಆನ್ಲೈನ್ನಲ್ಲಿ ಹರಾಜು ನಡೆಸಲಾಗುವುದು.
***
(रिलीज़ आईडी: 1911169)
आगंतुक पटल : 97