ಗೃಹ ವ್ಯವಹಾರಗಳ ಸಚಿವಾಲಯ

ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಶ್ರೀ ಅಮಿತ್ ಶಾ ಅವರು ಇಂದು ಕರ್ನಾಟಕದ ಬೀದರ್‌ನ ಗೋರಟಾ ಮೈದಾನದಲ್ಲಿ ಗೋರಟಾ ಹುತಾತ್ಮರ ಸ್ಮಾರಕ ಮತ್ತು ಸರ್ದಾರ್ ವಲ್ಲಭಭಾಯಿ ಪಟೇಲ್ ಸ್ಮಾರಕವನ್ನು ಉದ್ಘಾಟಿಸಿದರು ಮತ್ತು 103 ಅಡಿ ಎತ್ತರದ ತ್ರಿವರ್ಣ ಧ್ವಜವನ್ನು ಹಾರಿಸಿದರು

  
1948ರಲ್ಲಿ ಇದೇ ಸ್ಥಳದಲ್ಲಿ ನಿಜಾಮರು ಎರಡೂವರೆ ಅಡಿ ಎತ್ತರದ ತ್ರಿವರ್ಣ ಧ್ವಜ ಹಾರಿಸಿದ್ದಕ್ಕಾಗಿ ನೂರಾರು ಜನರನ್ನು ಕೊಂದಿದ್ದರು, ಇಂದು ಅದೇ ಸ್ಥಳದಲ್ಲಿ 103 ಅಡಿ ಎತ್ತರದ ತ್ರಿವರ್ಣ ಧ್ವಜ ಹಾರಿಸುವ ಸೌಭಾಗ್ಯ ನನ್ನದಾಗಿದೆ: ಶ್ರೀಅಮಿತ್‌ ಶಾ
 
“ಸೆಪ್ಟೆಂಬರ್ 17, 2014 ರಂದು, ಹೈದರಾಬಾದ್ ವಿಮೋಚನಾ ದಿನದಂದು, ಇಡೀ ದೇಶವು ನೂರಾರು ವರ್ಷಗಳ ಕಾಲ ಗೋರಟಾ ಹುತಾತ್ಮರಿಗೆ ಶ್ರದ್ಧಾಂಜಲಿ ಸಲ್ಲಿಸಲು ಸ್ಮಾರಕದ ಶಂಕುಸ್ಥಾಪನೆಯನ್ನು ಮಾಡಿತು, ಇಂದು ಅದನ್ನು ಉದ್ಘಾಟಿಸುವ ಅವಕಾಶವನ್ನು ಪಡೆದಿರುವುದು ನನ್ನ ಅದೃಷ್ಟವಾಗಿದೆ”
 
“ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಭಾಯಿ ಪಟೇಲ್ ಇಲ್ಲದಿದ್ದರೆ ಹೈದರಾಬಾದ್ ಮತ್ತು ಬೀದರ್ ಎಂದಿಗೂ ಸ್ವತಂತ್ರವಾಗುತ್ತಿರಲಿಲ್ಲ, ಸರ್ದಾರ್ ಪಟೇಲರ ಈ ಸ್ಮಾರಕವು ನಿಜಾಮರ ಕ್ರೂರ ಆಡಳಿತದಿಂದ ಹೈದರಾಬಾದ್-ಕರ್ನಾಟಕ-ಮರಾಠವಾಡದ ಜನರ ವಿಮೋಚನೆಯ ಸಂಕೇತವಾಗಿದೆ “
 
“50 ಕೋಟಿ ರೂ.ವೆಚ್ಚದಲ್ಲಿ ಬೃಹತ್ ಸ್ಮಾರಕ ಹಾಗೂ ಧ್ವನಿ ಮತ್ತು ಬೆಳಕು ಪ್ರದರ್ಶನ ವ್ಯವಸ್ಥೆ ನಿರ್ಮಿಸುವ ಯೋಜನೆಯೂ ಇದ್ದು, ಇದು ಕರ್ನಾಟಕದಿಂದ ಮಾತ್ರವಲ್ಲದೆ ದೇಶದೆಲ್ಲೆಡೆಯಿಂದ ಆಗಮಿಸುವ ಯಾತ್ರಿಗಳು ಹಾಗೂ ಪ್ರವಾಸಿಗರಿಗೆ ಮಹಾನ್ ಹುತಾತ್ಮರ ಕಥೆ ಹೇಳುತ್ತದೆ”
 
“ಶ್ರೀ ಯಡಿಯೂರಪ್ಪ ಅವರು ಕರ್ನಾಟಕದ ಮುಖ್ಯಮಂತ್ರಿಯಾಗಿದ್ದಾಗ ಅವರು ಗುಲಾಮಗಿರಿಯ ಸಂಕೇತವಾದ 'ಹೈದರಾಬಾದ್-ಕರ್ನಾಟಕ' ಹೆಸರನ್ನು 'ಕಲ್ಯಾಣ-ಕರ್ನಾಟಕ' ಎಂದು ಬದಲಾಯಿಸಿದರು”
 
“ಕರ್ನಾಟಕದಲ್ಲಿ ಒಕ್ಕಲಿಗರ ಮೀಸಲಾತಿ ಕೋಟಾವನ್ನು ರಾಜ್ಯ ಸರ್ಕಾರವು ಶೇ.4 ರಿಂದ ಶೇ.6 ಕ್ಕೆ ಮತ್ತು ಪಂಚಮಸಾಲಿಗಳು, ವೀರಶೈವರು ಮತ್ತು ಇತರ ಲಿಂಗಾಯತ ವರ್ಗಗಳಿಗೆ ಶೇ.5 ರಿಂದ 7 ಕ್ಕೆ ಹೆಚ್ಚಿಸಿದೆ”
 
“ಎಸ್‌ಸಿ-ಎಡಕ್ಕೆ ಶೇ.6, ಎಸ್‌ಸಿ-ಬಲಕ್ಕೆ ಶೇ.5.5, ಎಸ್‌ಸಿ-ಲಂಬಾಣಿ, ಭೋವಿ, ಕೊರಚ, ಕೊರಮ ಮತ್ತು ಇತರ ಎಸ್‌ಸಿ ಸಮುದಾಯಗಳಿಗೆ ಶೇ.4.5 ಮೀಸಲಾತಿ ನೀಡುವ ಮೂಲಕ ಸರ್ಕಾರ ಎಸ್‌ಸಿ ಸಮುದಾಯಗಳಿಗೆ ಆಗಿರುವ ಅನ್ಯಾಯವನ್ನು ಸರಿಪಡಿಸಿದೆ”
 
“ಮುಂಬೈ-ಕರ್ನಾಟಕ ಅಥವಾ ದಕ್ಷಿಣ-ಕರ್ನಾಟಕ ಅಥವಾ ಕಲ್ಯಾಣ-ಕರ್ನಾಟಕ ಅಥವಾ ಬೆಂಗಳೂರು ಯಾವುದೇ ಆಗಿರಲಿ, ರಾಜ್ಯದ ಸಮತೋಲಿತ ಅಭಿವೃದ್ಧಿ ನಮ್ಮ ಪಕ್ಷದ ಸಂಪೂರ್ಣ ಬಹುಮತದ ಸರ್ಕಾರದಿಂದ ಮಾತ್ರ ಸಾಧ್ಯ”
 
“ಕರ್ನಾಟಕ ಸರ್ಕಾರವು ತೆಗೆದುಕೊಂಡ ಈ ಐತಿಹಾಸಿಕ ನಿರ್ಧಾರಗಳು ಹಿಂದುಳಿದ ವರ್ಗಗಳ ಎಲ್ಲಾ ವರ್ಗಗಳಿಗೆ ಸೂಕ್ತ ಸಾಮಾಜಿಕ ನ್ಯಾಯವನ್ನು ಖಚಿತಪಡಿಸುತ್ತವೆ”
 
“ಕಲ್ಯಾಣ ಕರ್ನಾಟಕ ಅಭಿವೃದ್ಧಿಗೆ 3000 ಕೋಟಿ ರೂ. ನೀಡಲಾಗಿದ್ದು, ಈ ಬಜೆಟ್‌ನಲ್ಲಿ ಅದನ್ನು 5000 ಕೋಟಿ ರೂ.ಗೆ ಹೆಚ್ಚಿಸಲಾಗಿದೆ”

Posted On: 26 MAR 2023 6:46PM by PIB Bengaluru

ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಶ್ರೀ ಅಮಿತ್ ಶಾ ಅವರು ಇಂದು ಕರ್ನಾಟಕದ ಬೀದರ್‌ನ ಗೋರಟಾ ಮೈದಾನದಲ್ಲಿ ಗೋರಟಾ ಹುತಾತ್ಮರ ಸ್ಮಾರಕ ಮತ್ತು ಸರ್ದಾರ್ ವಲ್ಲಭಭಾಯಿ ಪಟೇಲ್ ಸ್ಮಾರಕವನ್ನು ಉದ್ಘಾಟಿಸಿದರು ಮತ್ತು 103 ಅಡಿ ಎತ್ತರದ ತ್ರಿವರ್ಣ ಧ್ವಜವನ್ನು ಹಾರಿಸಿದರು. ಈ ಸಂದರ್ಭದಲ್ಲಿ ಕರ್ನಾಟಕದ ಮಾಜಿ ಮುಖ್ಯಮಂತ್ರಿ ಶ್ರೀ ಬಿ ಎಸ್ ಯಡಿಯೂರಪ್ಪ ಮತ್ತು ಅನೇಕ ಗಣ್ಯರು ಉಪಸ್ಥಿತರಿದ್ದರು.
 

https://static.pib.gov.in/WriteReadData/userfiles/image/image001CIYY.jpg

ದೇಶದ ಮೊದಲ ಗೃಹ ಸಚಿವ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರಿಗೆ ಶ್ರದ್ಧಾಂಜಲಿ ಅರ್ಪಿಸಿದ ಶ್ರೀ ಅಮಿತ್ ಶಾ ಅವರು, ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರು ಇಲ್ಲದಿದ್ದರೆ, ಹೈದರಾಬಾದ್ ಮತ್ತು ಬೀದರ್ ಎಂದಿಗೂ ಸ್ವತಂತ್ರವಾಗುತ್ತಿರಲಿಲ್ಲ ಎಂದು ಹೇಳಿದರು. ಸರ್ದಾರ್ ಪಟೇಲರ ಈ ಸ್ಮಾರಕವು ನಿಜಾಮರ ಕ್ರೂರ ಆಡಳಿತದಿಂದ ಹೈದರಾಬಾದ್-ಕರ್ನಾಟಕ-ಮರಾಠವಾಡದ ಜನರ ವಿಮೋಚನೆಯ ಸಂಕೇತವಾಗಿದೆ. 1948 ರಲ್ಲಿ ಈ ಸ್ಥಳದಲ್ಲಿ ನಿಜಾಮರು ಎರಡೂವರೆ ಅಡಿ ಎತ್ತರದ ತ್ರಿವರ್ಣ ಧ್ವಜವನ್ನು ಹಾರಿಸಿದ್ದಕ್ಕಾಗಿ ನೂರಾರು ಜನರನ್ನು ಕೊಂದರು ಮತ್ತು ಅದೇ ಸ್ಥಳದಲ್ಲಿ ಇಂದು 103 ಅಡಿ ಎತ್ತರದ ತ್ರಿವರ್ಣ ಧ್ವಜವನ್ನು ಹಾರಿಸಿದ ನಾನು ಅದೃಷ್ಟಶಾಲಿಯಾಗಿದ್ದೇನೆ ಎಂದು ಶ್ರೀ ಶಾ ಹೇಳಿದರು. 

https://static.pib.gov.in/WriteReadData/userfiles/image/image002B4N5.jpg


 
17 ಸೆಪ್ಟೆಂಬರ್ 2014 ರಂದು ಹೈದರಾಬಾದ್ ವಿಮೋಚನಾ ದಿನದಂದು ಇಡೀ ದೇಶವು ನೂರಾರು ವರ್ಷಗಳ ಕಾಲ ಗೋರಟಾ ಹುತಾತ್ಮರಿಗೆ ಶ್ರದ್ಧಾಂಜಲಿ ಸಲ್ಲಿಸುವಂತೆ ಮಾಡಲು ಸ್ಮಾರಕದ ಅಡಿಪಾಯವನ್ನು ಹಾಕಿಲಾಯಿತು. ಇಂದು ಅದನ್ನು ಉದ್ಘಾಟನೆ ಮಾಡುವ ಅವಕಾಶ ಸಿಕ್ಕಿರುವುದು ನನ್ನ ಸೌಭಾಗ್ಯವಾಗಿದೆ ಎಂದು ಶ್ರೀ ಶಾ ಹೇಳಿದರು. 50 ಕೋಟಿ ರೂ.ವೆಚ್ಚದಲ್ಲಿ ಬೃಹತ್ ಸ್ಮಾರಕ ಹಾಗೂ ಧ್ವನಿ ಮತ್ತು ಬೆಳಕು ಪ್ರದರ್ಶನ ವ್ಯವಸ್ಥೆಯನ್ನು ನಿರ್ಮಿಸುವ ಯೋಜನೆಯೂ ಇದೆ ಎಂದ ಅವರು, ಇದು ಕರ್ನಾಟಕದಿಂದ ಮಾತ್ರವಲ್ಲದೆ ದೇಶದ ವಿವಿಧೆಡೆಯಿಂದ ಬರುವ ಯಾತ್ರಿಕರು ಹಾಗೂ ಪ್ರವಾಸಿಗರಿಗೆ ಮಹಾನ್ ಹುತಾತ್ಮರ ಕಥೆಯನ್ನು ಹೇಳುತ್ತದೆ ಎಂದು ಅವರು ಹೇಳಿದರು.

https://static.pib.gov.in/WriteReadData/userfiles/image/image003CN36.jpg


ಇಂದಿಗೂ ತೆಲಂಗಾಣ ಸರ್ಕಾರ ಹೈದರಾಬಾದ್ ವಿಮೋಚನಾ ದಿನವನ್ನು ಆಚರಿಸಲು ಹಿಂದೇಟು ಹಾಕುತ್ತಿದೆ. ಆದರೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರವು ಪ್ರತಿ ವರ್ಷ ಹೈದರಾಬಾದ್ ವಿಮೋಚನಾ ದಿನವನ್ನು ಅದ್ಧೂರಿಯಾಗಿ ಆಯೋಜಿಸಲು ನಿರ್ಧರಿಸಿತು ಎಂದು ಶ್ರೀ ಅಮಿತ್ ಶಾ ಹೇಳಿದರು. ಸ್ಮಾರಕ ನಿರ್ಮಾಣದ ನಂತರ ಮುಂದಿನ ವರ್ಷ ಹೈದರಾಬಾದ್ ವಿಮೋಚನಾ ದಿನಾಚರಣೆಯನ್ನು ಗೋರಟಾ ಗ್ರಾಮದಲ್ಲಿಯೇ ಆಯೋಜಿಸಲಾಗುವುದು ಎಂದು ಅವರು ಹೇಳಿದರು.
 

https://static.pib.gov.in/WriteReadData/userfiles/image/image004SY6H.jpg

ಓಲೈಕೆ ಮತ್ತು ಮತಬ್ಯಾಂಕ್ ರಾಜಕಾರಣದಿಂದಾಗಿ ಹಿಂದಿನ ಸರ್ಕಾರಗಳು ಹೈದರಾಬಾದ್ ವಿಮೋಚನೆಗಾಗಿ ಹೋರಾಡಿದ ಜನರನ್ನು ಎಂದಿಗೂ ನೆನಪಿಸಿಕೊಳ್ಳಲಿಲ್ಲ ಮತ್ತು ಧರ್ಮದ ಆಧಾರದ ಮೇಲೆ ಶೇ.4 ಅಲ್ಪಸಂಖ್ಯಾತ ಮೀಸಲಾತಿಯನ್ನು ನೀಡಿದವು, ಇದು ಸಂವಿಧಾನದ ನಿಯಮಗಳಿಗೆ ವಿರುದ್ಧವಾಗಿದೆ ಎಂದು ಕೇಂದ್ರ ಗೃಹ ಸಚಿವರು ಹೇಳಿದರು. ಓಲೈಕೆ ರಾಜಕಾರಣದಲ್ಲಿ ನಂಬಿಕೆಯಿಲ್ಲದ ತಮ್ಮ ಪಕ್ಷದ ಸರ್ಕಾರವು ಮೀಸಲಾತಿಯಲ್ಲಿ ಬದಲಾವಣೆಗಳನ್ನು ಮಾಡಿದೆ ಮತ್ತು ಅಲ್ಪಸಂಖ್ಯಾತರ ಮೀಸಲಾತಿಯನ್ನು ರದ್ದುಪಡಿಸಿದೆ ಎಂದು ಶ್ರೀ ಶಾ ಹೇಳಿದರು. ಒಕ್ಕಲಿಗರಿಗೆ ಮೀಸಲಾತಿ ಕೋಟಾವನ್ನು ಶೇ.4 ರಿಂದ ಶೇ.6 ಕ್ಕೆ ಹೆಚ್ಚಿಸಿದೆ. ಪಂಚಮಸಾಲಿಗಳು, ವೀರಶೈವರು ಮತ್ತು ಇತರ ಲಿಂಗಾಯತ ವರ್ಗಗಳ ಕೋಟಾವನ್ನು ಶೇ.5 ರಿಂದ ಶೇ.7 ಕ್ಕೆ ಹೆಚ್ಚಿಸಲಾಗಿದೆ. ಇದರೊಂದಿಗೆ ಎಸ್‌ಸಿ-ಎಡಕ್ಕೆ ಶೇ.6, ಎಸ್‌ಸಿ-ಬಲಕ್ಕೆ ಶೇ.5.5, ಎಸ್‌ಸಿ-ಲಂಬಾಣಿ, ಭೋವಿ, ಕೊರಚ, ಕೊರಮರಿಗೆ ಶೇ.4.5 ಹಾಗೂ ಇತರೆ ಪರಿಶಿಷ್ಟ ಜಾತಿಯವರಿಗೆ ಶೇ.1ರಷ್ಟು ಮೀಸಲಾತಿ ನೀಡುವ ಮೂಲಕ ಎಸ್‌ಸಿ ಸಮುದಾಯಗಳಿಗೆ ಆಗಿರುವ ಅನ್ಯಾಯವನ್ನು ಸರಿಪಡಿಸಲಾಗಿದೆ ಎಂದು ಅವರು ಹೇಳಿದರು. ಮುಂಬೈ-ಕರ್ನಾಟಕ ಅಥವಾ ದಕ್ಷಿಣ-ಕರ್ನಾಟಕ ಅಥವಾ ಕಲ್ಯಾಣ-ಕರ್ನಾಟಕ ಅಥವಾ ಬೆಂಗಳೂರು ಯಾವುದೇ ಆಗಲಿ ರಾಜ್ಯದ ಸಮತೋಲಿತ ಅಭಿವೃದ್ಧಿ ನಮ್ಮ ಪಕ್ಷದ ಸಂಪೂರ್ಣ ಬಹುಮತದ ಸರ್ಕಾರದಿಂದ ಮಾತ್ರ ಸಾಧ್ಯ ಎಂದು ಶ್ರೀ ಶಾ ಹೇಳಿದರು. ಕರ್ನಾಟಕ ಸರ್ಕಾರ ಕೈಗೊಂಡಿರುವ ಈ ಐತಿಹಾಸಿಕ ನಿರ್ಧಾರಗಳು ಎಲ್ಲಾ ಹಿಂದುಳಿದ ವರ್ಗಗಳಿಗೆ ಸೂಕ್ತ ಸಾಮಾಜಿಕ ನ್ಯಾಯವನ್ನು ಖಚಿತಪಡಿಸುತ್ತವೆ ಎಂದು ಅವರು ಹೇಳಿದರು.
 

https://static.pib.gov.in/WriteReadData/userfiles/image/image005OYQW.jpg

ಶ್ರೀ ಯಡಿಯೂರಪ್ಪ ಅವರು ಕರ್ನಾಟಕದ ಮುಖ್ಯಮಂತ್ರಿಯಾಗಿದ್ದಾಗ, ಅವರು ಗುಲಾಮಗಿರಿಯ ಸಂಕೇತವಾಗಿದ್ದ 'ಹೈದರಾಬಾದ್-ಕರ್ನಾಟಕ' ಎಂಬ ಹೆಸರನ್ನು 'ಕಲ್ಯಾಣ-ಕರ್ನಾಟಕ' ಎಂದು ಬದಲಾಯಿಸಿದರು. ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ ಸರಕಾರ 3000 ಕೋಟಿ ರೂ.ನೀಡಿದ್ದು, ಈ ಬಜೆಟ್ ನಲ್ಲಿ 5000 ಕೋಟಿಗೆ ಹೆಚ್ಚಿಸಲಾಗಿದೆ. ಭದ್ರಾ ಮೇಲ್ದಂಡೆ ಯೋಜನೆ, ಕಳಸಾ-ಬಂಡೂರಿ ಯೋಜನೆ, ಕೃಷ್ಣಾ ಮೇಲ್ದಂಡೆ ಯೋಜನೆಯ 2ನೇ ಹಂತ, ಎತ್ತಿನ ಹೊಳೆ ಕುಡಿಯುವ ನೀರಿನ ಯೋಜನೆ ಸೇರಿದಂತೆ ಈ ಭಾಗದ ಹಲವಾರು ಸಮಸ್ಯೆಗಳನ್ನು ಸರಕಾರ ಪರಿಹರಿಸಿದೆ ಎಂದು ಅವರು ಹೇಳಿದರು. ಕೇಂದ್ರ ಮತ್ತು ರಾಜ್ಯ ಸರ್ಕಾರವು ಜಂಟಿಯಾಗಿ 411 ಕಿಲೋಮೀಟರ್ ಉದ್ದದ ಬೀದರ್-ಕಲ್ಬುರ್ಗಿ-ಬಳ್ಳಾರಿ ರಸ್ತೆಯನ್ನು 7700 ಕೋಟಿ ರೂ.ವೆಚ್ಚದಲ್ಲಿ ನಿರ್ಮಿಸಿವೆ ಮತ್ತು ಸಣ್ಣ ಮತ್ತು ಅತಿ ಸಣ್ಣ ರೈತರಿಗೆ 1115 ಕೋಟಿ ರೂ.ಮೌಲ್ಯದ ಗಂಗಾ ಕಲ್ಯಾಣ ಯೋಜನೆಗೆ ಚಾಲನೆ ನೀಡಲಾಗಿದೆ. 5 ಕೋಟಿ ರೂ.ವೆಚ್ಚದಲ್ಲಿ ಮಾದರಿ ವಿಶ್ವವಿದ್ಯಾಲಯ ಮತ್ತು ಸೆಂಟ್ರಲ್ ಇನ್‌ಸ್ಟಿಟ್ಯೂಟ್ ಆಫ್ ಪೆಟ್ರೋಕೆಮಿಕಲ್ ಇಂಜಿನಿಯರಿಂಗ್ ಕೂಡ ಸ್ಥಾಪಿಸಲಾಗಿದೆ ಎಂದು ಅವರು ತಿಳಿಸಿದರು.
 

https://static.pib.gov.in/WriteReadData/userfiles/image/image006GQXP.jpg

ಪ್ರಧಾನಮಂತ್ರಿ ಕಿಸಾನ್ ಯೋಜನೆ ಮೂಲಕ ರಾಜ್ಯದ 54 ಲಕ್ಷ ರೈತರು ಪ್ರತಿ ವರ್ಷ 10,000 ರೂ.ಗಳನ್ನು ನೇರವಾಗಿ ತಮ್ಮ ಬ್ಯಾಂಕ್ ಖಾತೆಗೆ ಪಡೆಯುತ್ತಿದ್ದಾರೆ ಎಂದು ಕೇಂದ್ರ ಗೃಹ ಸಚಿವರು ಹೇಳಿದರು. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ, ಪ್ರತಿ ಮನೆಗೆ ಗ್ಯಾಸ್, ಶೌಚಾಲಯ, ವಿದ್ಯುತ್, ಪ್ರತಿಯೊಬ್ಬ ಬಡವರಿಗೆ 5 ಕೆಜಿ ಉಚಿತ ಆಹಾರ ಧಾನ್ಯ ಮತ್ತು 5 ಲಕ್ಷ ರೂ.ವರೆಗೆ ಉಚಿತ ಚಿಕಿತ್ಸೆ ನೀಡುವ ಮೂಲಕ ಸರ್ಕಾರ ದೇಶದ ಕೋಟ್ಯಾಂತರ ಬಡ ಜನರ ಕಲ್ಯಾಣಕ್ಕಾಗಿ ಅನೇಕ ಅಭಿವೃದ್ಧಿ ಕೆಲಸಗಳನ್ನು ಮಾಡಿದೆ ಎಂದರು.
 

https://static.pib.gov.in/WriteReadData/userfiles/image/image007FI1N.jpg

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ದೇಶವನ್ನು ಸಂಪೂರ್ಣವಾಗಿ ಸುಭದ್ರಗೊಳಿಸಿದ್ದಾರೆ ಎಂದು ಶ್ರೀ ಅಮಿತ್ ಶಾ ಹೇಳಿದರು. ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಕಾರ್ಯ ಕಳೆದ ಹಲವು ವರ್ಷಗಳಿಂದ ನನೆಗುದಿಗೆ ಬಿದ್ದಿತ್ತು. ಸರ್ವೋಚ್ಚ ನ್ಯಾಯಾಲಯದ ತೀರ್ಪಿನ ನಂತರ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಭೂಮಿಪೂಜೆ ನೆರವೇರಿಸಿ ರಾಮಮಂದಿರದ ಶಂಕುಸ್ಥಾಪನೆ ನೆರವೇರಿಸಿದರು. ಹಿಂದಿನ ಸರ್ಕಾರಗಳು ವೋಟ್ ಬ್ಯಾಂಕ್ ರಾಜಕಾರಣದ ಕಾರಣದಿಂದ ಜಮ್ಮು ಮತ್ತು ಕಾಶ್ಮೀರದಲ್ಲಿದ್ದ ಆರ್ಟಿಕಲ್ 370 ಅನ್ನು ತೆಗೆದುಹಾಕಲಿಲ್ಲ, ಆದರೆ 5 ಆಗಸ್ಟ್ 2019 ರಂದು ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಆರ್ಟಿಕಲ್ 370 ಅನ್ನು ರದ್ದುಗೊಳಿಸಿದರು ಮತ್ತು ಕಾಶ್ಮೀರವನ್ನು ಶಾಶ್ವತವಾಗಿ ಭಾರತದ ಭಾಗವಾಗಿಸಿದರು. ಇದರ ಪರಿಣಾಮವೇ ಇಂದು ನಮ್ಮ ಕಾಶ್ಮೀರವು ಭಯೋತ್ಪಾದನೆಯಿಂದ ಮುಕ್ತವಾಗಿದೆ ಮತ್ತು ಸಮೃದ್ಧಿ ಮತ್ತು ಅಭಿವೃದ್ಧಿಯ ಪಥದಲ್ಲಿ ಮುನ್ನಡೆದಿದೆ ಎಂದು ತಿಳಿಸಿದರು. ಅಖಂಡ ಕರ್ನಾಟಕದ ಸರ್ವತೋಮುಖ ಅಭಿವೃದ್ಧಿಗೆ ಸರಕಾರ ನಿರಂತರವಾಗಿ ಶ್ರಮಿಸಲಿದೆ ಎಂದು ಅವರು ಹೇಳಿದರು.

https://static.pib.gov.in/WriteReadData/userfiles/image/image008944G.jpg

****
 

 



(Release ID: 1911062) Visitor Counter : 128