ರಾಷ್ಟ್ರಪತಿಗಳ ಕಾರ್ಯಾಲಯ

ಮಾ.27ರಿಂದ 28ರವರೆಗೆ ಪಶ್ಚಿಮ ಬಂಗಾಳಕ್ಕೆ ಭೇಟಿ ನೀಡಲಿರುವ ರಾಷ್ಟ್ರಪತಿ

Posted On: 26 MAR 2023 5:02PM by PIB Bengaluru

ಭಾರತದ ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಅವರು 2023 ರ ಮಾರ್ಚ್ 27 ರಿಂದ 28 ರವರೆಗೆ ಪಶ್ಚಿಮ ಬಂಗಾಳಕ್ಕೆ ಭೇಟಿ ನೀಡಲಿದ್ದಾರೆ.

2023 ರ ಮಾರ್ಚ್ 27 ರಂದು ರಾಷ್ಟ್ರಪತಿ ಅವರು ಕೋಲ್ಕತ್ತಾದ ನೇತಾಜಿ ಭವನಕ್ಕೆ ಭೇಟಿ ನೀಡಿ, ನೇತಾಜಿ ಸುಭಾಷ್ ಚಂದ್ರ ಬೋಸ್ ಅವರಿಗೆ ಗೌರವ ಸಲ್ಲಿಸಲಿದ್ದಾರೆ. ನಂತರ, ಅವರು ಗುರುದೇವ ರವೀಂದ್ರನಾಥ ಟ್ಯಾಗೋರ್ ಅವರಿಗೆ ಗೌರವ ಸಲ್ಲಿಸಲು ಜೊರಾಸಂಕೊ ಠಾಕೂರ್ಬಾರಿ - ರವೀಂದ್ರನಾಥ ಟ್ಯಾಗೋರ್ ಅವರ ನಿವಾಸಕ್ಕೆ ಭೇಟಿ ನೀಡಲಿದ್ದಾರೆ. ಅದೇ ದಿನ ಸಂಜೆ ಕೋಲ್ಕತಾದ ನೇತಾಜಿ ಒಳಾಂಗಣ ಕ್ರೀಡಾಂಗಣದಲ್ಲಿ ಅವರ ಗೌರವಾರ್ಥ ಆಯೋಜಿಸಲಾಗಿರುವ ನಾಗರಿಕ ಸ್ವಾಗತ ಸಮಾರಂಭದಲ್ಲಿ ರಾಷ್ಟ್ರಪತಿ ಅವರು ಭಾಗವಹಿಸಲಿದ್ದಾರೆ.

2023 ರ ಮಾರ್ಚ್ 28 ರಂದು ರಾಷ್ಟ್ರಪತಿ ಅವರು ಬೇಲೂರು ಮಠಕ್ಕೆ ಭೇಟಿ ನೀಡಲಿದ್ದಾರೆ. ಕೋಲ್ಕತಾದಲ್ಲಿ ಯುಕೋ ಬ್ಯಾಂಕ್ 80 ವರ್ಷಗಳನ್ನು ಪೂರೈಸಿದ ಸಂಭ್ರಮಾಚರಣೆಯ ಕಾರ್ಯಕ್ರಮದಲ್ಲಿ ಅವರು ಭಾಗವಹಿಸಲಿದ್ದಾರೆ. ನಂತರ, ರಾಷ್ಟ್ರಪತಿ ಶಾಂತಿನಿಕೇತನಕ್ಕೆ ಭೇಟಿ ನೀಡಲಿದ್ದು, ಅಲ್ಲಿ ಅವರು ವಿಶ್ವ-ಭಾರತಿಯ ವಾರ್ಷಿಕ ಘಟಿಕೋತ್ಸವದಲ್ಲಿ ಭಾಗವಹಿಸಲಿದ್ದಾರೆ.

*****



(Release ID: 1910993) Visitor Counter : 125