ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav g20-india-2023

ದೇಶದ ಪರಂಪರೆಯನ್ನು ಕಾಪಾಡುವ ಮಹತ್ತರ ಪ್ರಯತ್ನಕ್ಕೆ ಪ್ರಧಾನ ಮಂತ್ರಿ ಮೋದಿ ಶ್ಲಾಘನೆ

Posted On: 25 MAR 2023 11:22AM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ದೇಶದ ಪರಂಪರೆಯನ್ನು ಸಂರಕ್ಷಿಸುವ ಮಹತ್ತರ ಪ್ರಯತ್ನವನ್ನು ಶ್ಲಾಘಿಸಿದ್ದಾರೆ. ದೇಶದ ಪರಂಪರೆಯನ್ನು ಸಂರಕ್ಷಿಸಲು ಮತ್ತು ಮತ್ತಷ್ಟು ಸುಂದರಗೊಳಿಸಲು ನಾವು ಬದ್ಧರಾಗಿದ್ದೇವೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಶ್ರೀ ಅಮಿತ್ ಶಾ ಅವರು ಐಜಿಎನ್‌ಸಿಎ ಕ್ಯಾಂಪಸ್‌ನಲ್ಲಿ ಉದ್ಘಾಟಿಸಿರುವ ವೈದಿಕ ಪರಂಪರೆ ಪೋರ್ಟಲ್ ಮತ್ತು ಕಲಾ ವೈಭವ (ವರ್ಚುವಲ್ ಮ್ಯೂಸಿಯಂ)ಬಗ್ಗೆ ಇಂದಿರಾ ಗಾಂಧಿ ರಾಷ್ಟ್ರೀಯ ಕಲಾ ಕೇಂದ್ರದ ಟ್ವೀಟ್ ಗೆ ಪ್ರಧಾನಿ ಮೋದಿ ಪ್ರತಿಕ್ರಿಯಿಸಿ ಟ್ವೀಟ್ ಮಾಡಿದ್ದಾರೆ. 

ವೈದಿಕ ಪರಂಪರೆ ಪೋರ್ಟಲ್ ನ್ನು ಹಿಂದಿ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಸಿದ್ಧಪಡಿಸಲಾಗಿದೆ ಎಂದು ಐಜಿಎನ್‌ಸಿಎ ದೆಹಲಿ ತಿಳಿಸಿದೆ. 18 ಸಾವಿರಕ್ಕೂ ಹೆಚ್ಚು ವೇದ ಮಂತ್ರಗಳ ಆಡಿಯೋ ಮತ್ತು ವಿಡಿಯೊಗಳು ಇದರಲ್ಲಿ ಲಭ್ಯವಿದೆ.

ಕೇಂದ್ರದ ಅಭಿವೃದ್ಧಿ ಕುರಿತು ಐಜಿಎನ್‌ಸಿಎ ದೆಹಲಿಯ ಟ್ವೀಟ್ ಗೆ ಪ್ರತಿಕ್ರಿಯಿಸಿ ಪ್ರಧಾನ ಮಂತ್ರಿಗಳು ಟ್ವೀಟ್ ಮಾಡಿ: "ಇದು ಉತ್ತಮ ಪ್ರಯತ್ನ! ನಮ್ಮ ಸರ್ಕಾರವು ದೇಶದ ಪರಂಪರೆಯನ್ನು ಉಳಿಸಲು ಮತ್ತು ಮತ್ತಷ್ಟು ಹೆಚ್ಚಿಸಲು ಬದ್ಧವಾಗಿದೆ." ಎಂದು ಬರೆದುಕೊಂಡಿದ್ದಾರೆ.

 

*****



(Release ID: 1910759) Visitor Counter : 152