ಆಯುಷ್

ಆಯುಷ್ ಸಚಿವಾಲಯ ಮತ್ತು ರಕ್ಷಣಾ ಸಚಿವಾಲಯದ ಮಾಜಿ ಸೈನಿಕರ ಕಲ್ಯಾಣ ಇಲಾಖೆ ನಡುವೆ ತಿಳುವಳಿಕೆ ಒಪ್ಪಂದಕ್ಕೆ ಸಹಿ ಹಾಕಲಾಗಿದೆ


ಭಾರತದಾದ್ಯಂತ 10 ಪಾಲಿಕ್ಲಿನಿಕ್ಗಳಲ್ಲಿ ಮಾಜಿ ಸೈನಿಕರ ಕೊಡುಗೆ ಆರೋಗ್ಯ ಯೋಜನೆಯಲ್ಲಿ ಆಯುರ್ವೇದವನ್ನು ಸೇರಿಸಲು ತಿಳುವಳಿಕೆ ಒಪ್ಪಂದವನ್ನು ಮಾಡಲಾಗಿದೆ

Posted On: 24 MAR 2023 4:53PM by PIB Bengaluru

ಆಯುಷ್ ಸಚಿವಾಲಯ ಮತ್ತು ಮಾಜಿ ಸೈನಿಕರ ಕಲ್ಯಾಣ ಇಲಾಖೆ/ಇಸಿಎಚ್ಎಸ್, ರಕ್ಷಣಾ ಸಚಿವಾಲಯವು  ಇಂದು ಇಸಿಎಚ್ಎಸ್ ಪಾಲಿಕ್ಲಿನಿಕ್ಸ್ನಲ್ಲಿ ಆಯುರ್ವೇದವನ್ನು ಐದು ವರ್ಷಗಳ ಅವಧಿಗೆ ಹೊರ ರೋಗಿ ವಿಭಾಗದ (ಒಪಿಡಿ )ಸೇವೆಯಾಗಿ ಸೇರಿಸಲು ತಿಳುವಳಿಕೆ ಒಪ್ಪಂದಕ್ಕೆ ಸಹಿ ಹಾಕಿದೆ. ಇವುಗಳನ್ನು ಅಂಬಾಲ, ಮೈಸೂರು, ರಾಂಚಿ, ನಾಗ್ಪುರ, ಭೋಪಾಲ್, ಭುವನೇಶ್ವರ್, ಚೆನ್ನೈ, ಮೀರತ್, ದಾನಪುರ್ ಮತ್ತು ಅಲ್ಲೆಪ್ಪಿ (ಆಲಪ್ಪುಳ) ಮೂಲದ 10 ಪಾಲಿಕ್ಲಿನಿಕ್ಗಳಲ್ಲಿ ಸ್ಥಾಪಿಸಲಾಗುವುದು. ಆಯುರ್ವೇದ ಕೇಂದ್ರಗಳು ಈಗಾಗಲೇ 37 ಕಂಟೋನ್ಮೆಂಟ್ ಆಸ್ಪತ್ರೆಗಳು, ಎಎಫ್ಎಂಸಿ  ಯ 12 ಮಿಲಿಟರಿ ಆಸ್ಪತ್ರೆಗಳು ಮತ್ತು ಎಎಚ್ ಆರ್ & ಆರ್ ನಲ್ಲಿ ಆಯುರ್ವೇದ ಒಪಿಡಿ, ಎಎಫ್ ಆಸ್ಪತ್ರೆ ಹಿಂದಾನ್ ಮತ್ತು ಐದು ಇಸಿಎಚ್ಎಸ್ ಪಾಲಿಕ್ಲಿನಿಕ್ಗಳಲ್ಲಿ ಕಾರ್ಯನಿರ್ವಹಿಸುತ್ತಿವೆ.

ಆಯುಷ್ ಸಚಿವಾಲಯದ ಪರವಾಗಿ ಆಯುಷ್ ಸಚಿವಾಲಯದ ಸಲಹೆಗಾರ (ಆಯುರ್ವೇದ) ಡಾ. ಮನೋಜ್ ನೇಸರಿ ಮತ್ತು ಮಾಜಿ ಸೈನಿಕರ ಕೊಡುಗೆ ಆರೋಗ್ಯ ಯೋಜನೆಯ ಎಂಡಿ ಮೇಜರ್ ಜನರಲ್ ಎನ್ ಆರ್ ಇಂದೂರ್ಕರ್ ಅವರು ಆಯುಷ್ ಸಚಿವಾಲಯದ ವಿಶೇಷ ಕಾರ್ಯದರ್ಶಿ ಶ್ರೀ ಪ್ರಮೋದ್ ಕುಮಾರ್ ಪಾಠಕ್ , ಬ್ರಿಗೇಡಿಯರ್ ಜಿತೇಂದ್ರ ಸಿಂಗ್, ಇಸಿಎಚ್ಎಸ್, ಕರ್ನಲ್ ಎಸಿ ನಿಶಿಲ್, ನಿರ್ದೇಶಕರು (ವೈದ್ಯಕೀಯ) ಮತ್ತು ಆಯುಷ್ ಸಚಿವಾಲಯದ ಇತರ ಅಧಿಕಾರಿಗಳ ಸಮ್ಮುಖದಲ್ಲಿ ತಿಳುವಳಿಕೆ ಒಪ್ಪಂದಕ್ಕೆ ಸಹಿ ಹಾಕಿದರು.

   

 

  ಈ ಒಪ್ಪಂದದ ಪ್ರಕಾರ ಆಯುರ್ವೇದ ಒಪಿಡಿ ಯನ್ನು 10 ಇಸಿಎಚ್ಎಸ್  ಪಾಲಿಕ್ಲಿನಿಕ್/ಡಿಸ್ಪೆನ್ಸರಿಗಳಲ್ಲಿ ಭಾರತದ ವಿವಿಧ ಪ್ರದೇಶಗಳಲ್ಲಿ ಸ್ವಯಂಪ್ರೇರಿತ ಆಧಾರದ ಮೇಲೆ ಎಲ್ಲಾ ಇಸಿಎಚ್ಎಸ್ ಸದಸ್ಯರನ್ನು ಒಳಗೊಳ್ಳಲು ಸ್ಥಾಪಿಸಲಾಗುವುದು. ಸಚಿವಾಲಯವು ಕಾಲಕಾಲಕ್ಕೆ ತಾಂತ್ರಿಕ ಮಾರ್ಗದರ್ಶನವನ್ನು ನೀಡುತ್ತದೆ ಮತ್ತು ಸೇವೆಗಾಗಿ ಆಯುರ್ವೇದ ವೈದ್ಯರು ಮತ್ತು ಫಾರ್ಮಾಸಿಸ್ಟ್ಗಳನ್ನು ನೇಮಕಾತಿ ಮಾಡುತ್ತದೆ ಮತ್ತು ಅಗತ್ಯ ಆಯುರ್ವೇದ ಔಷಧಿಗಳ ಪಟ್ಟಿಯನ್ನು ಮತ್ತು ಅಗತ್ಯವಿರುವ ಯಾವುದೇ ಇತರ ತಾಂತ್ರಿಕ ಬೆಂಬಲವನ್ನು ನೀಡುತ್ತದೆ.

ರಕ್ಷಣಾ ಸಚಿವಾಲಯದ ಮಾಜಿ ಸೈನಿಕರ ಕಲ್ಯಾಣ ಇಲಾಖೆ/ಇಸಿಎಚ್ಎಸ್ ವಿಭಾಗವು ಆಯಾ ಪಾಲಿಕ್ಲಿನಿಕ್ಗಳಲ್ಲಿ ಸೂಕ್ತವಾದ ಸ್ಥಳದಲ್ಲಿ ಅಗತ್ಯವಾದ ಮೂಲಸೌಕರ್ಯಗಳನ್ನು (ಕೊಠಡಿಗಳು/ಪೀಠೋಪಕರಣಗಳು/ಇತರ ಸೌಕರ್ಯಗಳು) ಒದಗಿಸುತ್ತದೆ, ಆಯುರ್ವೇದ ತಜ್ಞರು, ಆಯುರ್ವೇದ ಸಾಮಾನ್ಯ ಕರ್ತವ್ಯ ವೈದ್ಯಕೀಯ ಅಧಿಕಾರಿಗಳು ಮತ್ತು ಅರೆವೈದ್ಯಕೀಯ ಸಿಬ್ಬಂದಿಯೊಂದಿಗೆ ಒಪ್ಪಂದದ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತದೆ ಮತ್ತು ದಿನನಿತ್ಯದ ಕೆಲಸಕ್ಕೆ ಅಗತ್ಯವಿರುವ ಸಹಾಯಕ ಸಿಬ್ಬಂದಿಯನ್ನು (ಆಡಳಿತಾತ್ಮಕ, ಗುಮಾಸ್ತರು ಮತ್ತು ಬಹು-ಕಾರ್ಯಕಾರಿ ಸಿಬ್ಬಂದಿ) ಒದಗಿಸುತ್ತದೆ.

ಎರಡೂ ಸಚಿವಾಲಯಗಳು ಆಯುಷ್ ಸಚಿವಾಲಯ ಮತ್ತು ಮಾಜಿ ಸೈನಿಕರ ಕಲ್ಯಾಣ ಇಲಾಖೆ/ಇಸಿಎಚ್ಎಸ್, ರಕ್ಷಣಾ ಸಚಿವಾಲಯದ ಪ್ರತಿನಿಧಿಗಳನ್ನು ಒಳಗೊಂಡ ಜಂಟಿ ಕಾರ್ಯನಿರತ ಗುಂಪನ್ನು (ಜೆಡಬ್ಲ್ಯೂಜಿ) ತಿಳುವಳಿಕೆ ಒಪ್ಪಂದದ  ಪ್ರಕಾರ ಒಪಿಡಿ ಗಳನ್ನು ಸ್ಥಾಪಿಸುವ ಪ್ರಸ್ತಾಪವನ್ನು ಜಾರಿಗೊಳಿಸಲು ಒಪ್ಪಿಕೊಂಡಿವೆ.

ಆಯುಷ್ ಸಚಿವಾಲಯ ಮತ್ತು ರಕ್ಷಣಾ ಸಚಿವಾಲಯವು ರಕ್ಷಣಾ ಸಚಿವಾಲಯದ ವಿವಿಧ ಸಂಸ್ಥೆಗಳಲ್ಲಿ ಆಯುಷ್ ಆರೋಗ್ಯ ಸೇವೆಗಳನ್ನು ಒದಗಿಸುವಲ್ಲಿ ತಮ್ಮ ಸಹಭಾಗಿತ್ವವನ್ನು ಬಲಪಡಿಸಿದೆ. 2019 ರ ತಿಳುವಳಿಕೆ ಒಪ್ಪಂದದ ಮೂಲಕ, ಎಎಚ್ ಆರ್&ಆರ್, ಎಎಫ್ ಆಸ್ಪತ್ರೆ ಹಿಂದಾನ್ ಮತ್ತು ಐದು ಇಸಿಎಚ್ಎಸ್ ಪಾಲಿಕ್ಲಿನಿಕ್ಗಳ ಸಶಸ್ತ್ರ ಪಡೆಗಳ ವೈದ್ಯಕೀಯ ಸೇವೆಗಳ ಕೇಂದ್ರಗಳಲ್ಲಿ ಆಯುರ್ವೇದ ಒಪಿಡಿ ಅನ್ನು ಪ್ರಾರಂಭಿಸಲಾಯಿತು. ನಂತರ 2022 ರಲ್ಲಿ, 37 ಕಂಟೋನ್ಮೆಂಟ್ ಆಸ್ಪತ್ರೆಗಳು ಮತ್ತು ಸಶಸ್ತ್ರ ಪಡೆಗಳ ವೈದ್ಯಕೀಯ ಸೇವೆಗಳ (ಎಎಫ್ಎಂಎಸ್) 12 ಮಿಲಿಟರಿ ಆಸ್ಪತ್ರೆಗಳಲ್ಲಿ ಆಯುರ್ವೇದ ಕೇಂದ್ರಗಳನ್ನು ಪ್ರಾರಂಭಿಸಲು ಎರಡು ತಿಳುವಳಿಕೆ ಒಪ್ಪಂದಗಳಿಗೆ ಸಹಿ ಹಾಕಲಾಯಿತು.

**



(Release ID: 1910503) Visitor Counter : 126