ಸಂಸ್ಕೃತಿ ಸಚಿವಾಲಯ
azadi ka amrit mahotsav g20-india-2023

ಸಿವಿಲ್-20 ಭಾರತ 2023 ಇದರ ಪ್ರಾರಂಭಿಕ ಸಮ್ಮೇಳನದ ಮೂರನೇ ಸಮಗ್ರ ಅಧಿವೇಶನವು ‘ಮಾನವ ಅಭಿವೃದ್ಧಿಯನ್ನು ಉತ್ತೇಜಿಸುವಲ್ಲಿ ನಾಗರಿಕ ಸಮಾಜದ ಪಾತ್ರ' ಎಂಬ ವಿಷಯದ ಕುರಿತು ಜರುಗಿತು

Posted On: 21 MAR 2023 2:07PM by PIB Bengaluru

ನಾಗ್ಪುರ, ಮಾರ್ಚ್ 21, 2023

ನಾಗಪುರದಲ್ಲಿ ಇಂದು (ಮಾರ್ಚ್ 21, 2023) ಜರುಗಿದ ಸಿವಿಲ್-20 ಭಾರತ 2023 ಇದರ  ಪ್ರಾರಂಭಿಕ ಸಮ್ಮೇಳನದ ಮೂರನೇ ಸರ್ವಸದಸ್ಯರ ಸಮಗ್ರ ಅಧಿವೇಶನವು 'ಮಾನವ ಅಭಿವೃದ್ಧಿಯನ್ನು ಉತ್ತೇಜಿಸುವಲ್ಲಿ ನಾಗರಿಕ ಸಮಾಜದ ಪಾತ್ರ' ಎಂಬ ವಿಷಯವನ್ನು ಹೊಂದಿತ್ತು. ಈ ಅಧಿವೇಶನವು ಪ್ರಮುಖವಾಗಿ ಸಿವಿಲ್-20 ಭಾರತ 2023 ಇದರ ಲಿಂಗ ಸಮಾನತೆ ಮತ್ತು ಅಂಗವೈಕಲ್ಯ (ಜೆಡ್); ಎಸ್.ಡಿ.ಜಿ. 16+ ಮತ್ತು ನಾಗರಿಕ ಸ್ಥಳವನ್ನು ಉತ್ತೇಜಿಸುವುದು, ಮತ್ತು ಪ್ರಜಾಪ್ರಭುತ್ವದ ಅನುಷ್ಠಾನ – ಸಿಂಹಾವಲೋಕನ ಮತ್ತು ಉಜ್ವಲ ಭವಿಷ್ಯ (ಡೆಲಿವರಿ ಡೆಮಾಕ್ರಸಿ - ರೆಟ್ರೋಸ್ಪೆಕ್ಟ್ ಮತ್ತು ಪ್ರಾಸ್ಪೆಕ್ಟ್) ಮುಂತಾದ ಕಾರ್ಯ ಗುಂಪುಗಳನ್ನು ಒಳಗೊಂಡಿದೆ. ಕನ್ಯಾಕುಮಾರಿ ವಿವೇಕಾನಂದ ಕೇಂದ್ರದ ಅಖಿಲ ಭಾರತ ಉಪಾಧ್ಯಕ್ಷೆ ನಿವೇದಿತಾ ಭಿಡೆ ಅವರು ಅಧಿವೇಶನದ ಅಧ್ಯಕ್ಷತೆ ವಹಿಸಿದ್ದರು. ನೆವರ್ ಅಲೋನ್ ಸಂಸ್ಥೆಯ ಸಹ-ಸಂಸ್ಥಾಪಕಿ ಗೇಬ್ರಿಯೆಲಾ ರೈಟ್, ಗ್ರಾಸ್ರೂಟ್ಸ್ ರಿಸರ್ಚ್ ಮತ್ತು ಅಡ್ವೊಕಸಿ ಮೂವ್ಮೆಂಟ್ (ಗ್ರಾಮ್) ಸ್ಥಾಪಕ ಮತ್ತು ಅಧ್ಯಕ್ಷರಾದ ಡಾ. ಆರ್. ಬಾಲಸುಬ್ರಮಣ್ಯಂ, ವಿಶ್ವಸಂಸ್ಥೆಯ  ಮಹಿಳೆಯರ ಆರ್ಥಿಕ ಸಬಲೀಕರಣ ವಿಭಾಗ ಮುಖ್ಯಸ್ಥರಾದ ಮೆಗ್ ಜೋನ್ಸ್ ಮತ್ತು ಸಿವಿಲ್-20 ಭಾರತ 2023 ಇದರ ಅಂತರರಾಷ್ಟ್ರೀಯ ಸಲಹಾ ಸದಸ್ಯ ಪೆಡ್ರೊ ಬೊಕ್ಕಾ ಅವರು ಅಧಿವೇಶನದಲ್ಲಿ ಭಾಷಣಕಾರರಾಗಿ ಭಾಗವಹಿಸಿದ್ದರು.

ಕಾರ್ಯಕಾರಿಣಿ ಗುಂಪುಗಳ ಸಂಯೋಜಕರಾದ ಯುನೆಸ್ಕೋದ ಲಿಂಗ ಸಮಾನತೆ ಪೀಠದ ಅಧ್ಯಕ್ಷರಾದ ಪ್ರೊ. ಭವಾನಿ ರಾವ್, ರೈಸಿಂಗ್ ಫ್ಲೇಮ್ಸ್ ಸಹ ಸಂಸ್ಥಾಪಕಿ ಮತ್ತು ನಿರ್ದೇಶಕಿ ನಿಧಿ ಗೋಯಲ್, ಏಷ್ಯನ್ ಡೆವಲಪ್ಮೆಂಟ್ ಅಲೈಯನ್ಸ್ (ಏಷ್ಯಾ) ಪ್ರಾದೇಶಿಕ ಸಂಯೋಜಕಿ ಜ್ಯೋತ್ಸ್ನಾ ಮೋಹನ್ ಮತ್ತು ಗ್ರಾಸ್ರೂಟ್ಸ್ ರಿಸರ್ಚ್ ಆಂಡ್ ಅಡ್ವೊಕಸಿ ಮೂವ್ ಮೆಂಟ್ (ಗ್ರಾಮ್) ಇದರ ಕಾರ್ಯನಿರ್ವಾಹಕ ನಿರ್ದೇಶಕ ಡಾ. ಬಸವರಾಜು ಆರ್. ಶ್ರೇಷ್ಠ  ಮುಂತಾದವರು ಸಭೆಯಲ್ಲಿ ಮಾತನಾಡಿದರು.

ನಾಗಪುರದಲ್ಲಿ ಸಿ-20 ಆರಂಭದ ಸಭೆಯ ಎರಡನೇ ದಿನದಂದು ‘ಮಾನವ ಅಭಿವೃದ್ಧಿಯನ್ನು ಉತ್ತೇಜಿಸುವಲ್ಲಿ ನಾಗರಿಕ ಸಮಾಜದ ಪಾತ್ರ’ ಎಂಬ ವಿಷಯದ ಕುರಿತು ಜರುಗಿದ ಸಮಗ್ರ ಅಧಿವೇಶನದ ಅಧ್ಯಕ್ಷತೆಯನ್ನು ಕನ್ಯಾಕುಮಾರಿಯ ವಿವೇಕಾನಂದ ಕೇಂದ್ರದ ಅಖಿಲ ಭಾರತ ಉಪಾಧ್ಯಕ್ಷರಾದ ನಿವೇದಿತಾ ಭಿಡೆ ಅವರು ವಹಿಸಿದ್ದರು. “ಎಲ್ಲ ನಾಗರಿಕ ಸಮಾಜಗಳು ಮಾನವ ಸಮಾಜದ ಅಭಿವೃದ್ಧಿಯಲ್ಲಿ ತೊಡಗಿವೆ “ ಎಂದು ನಿವೇದಿತಾ ಭಿಡೆ ಅವರು ಹೇಳಿದರು.  

ಕಾರ್ಯಪ್ರವೃತ್ತಿಗಾಗಿ ನೀಡುವ ಕರೆಯ ಬೆಳಕು ನೀವಾಗಿದ್ದೀರಿ ಎಂಬ ನಿಮ್ಮೆಲ್ಲರ ಸಂದೇಶವು ಸಿವಿಲ್-20ರ ಧ್ಯೇಯವಾಕ್ಯವನ್ನು ಸೂಚಿಸುತ್ತದೆ ಎಂದು ಮೆಗ್ ಜೋನ್ಸ್ ಅವರು ಹೇಳಿದರು. ಅವರು ಎ.ಸಿ.ಟಿ. ಪರಿಕಲ್ಪನೆಯ ಬಗ್ಗೆ ಮಾತನಾಡಿದರು. “ಎ.ಸಿ.ಟಿ.  ಎಂದರೆ ಇದರ ಅರ್ಥ - ಅರಿವು, ಸಹಾನುಭೂತಿ ಮತ್ತು ದೃಢತೆ ಮತ್ತು ಟಿ.ಎ.ಪಿ. ಎಂದರೆ ಎಂದರೆ ಇದರ ಅರ್ಥ - ‘ಯೋಚಿಸಿ’, ‘ಕೇಳಿ’ ಮತ್ತು ‘ನೀತಿ’ ಮತ್ತು ‘ನೀತಿಯ ಬಗ್ಗೆ ಚಿಂತಿಸಿ’ ಮತ್ತು ‘ನೀತಿಯ ಬಗ್ಗೆ ಕೇಳಿ’ ಎಂದಾಗಿದೆ. ಬಜೆಟ್ನಲ್ಲಿ ಮಹಿಳಾ ನೇತೃತ್ವದ ಅಭಿವೃದ್ಧಿಗೆ ಹಣ ಮೀಸಲಿಡುವುದು ಸಾಕಾಗುವುದಿಲ್ಲ ಮತ್ತು ಈ ಬಜೆಟ್ ಹಂಚಿಕೆಯ ಪ್ರಯೋಜನಗಳನ್ನು ಮಹಿಳೆಯರು ಪಡೆಯುವುದನ್ನು ಖಚಿತಪಡಿಸಿಕೊಳ್ಳುವ ಅವಶ್ಯಕತೆಯಿದೆ” ಎಂದು ಮೆಗ್ ಜೋನ್ಸ್ ಅವರು ಹೇಳಿದರು.

“ಲಿಂಗ ಅಸಮಾನತೆಯನ್ನು ಪರಿಹರಿಸುವುದು ಒಂದು ಪ್ರಮುಖ ವಿಷಯವಾಗಿದೆ ಹಾಗೂ ಈ ಕ್ಷೇತ್ರವು ಆದ್ಯತೆಯ ಕ್ಷೇತ್ರವಾಗಿ ಮುಂದುವರಿಯಲಿದೆ” ಎಂದು ಪ್ರೊಫೆಸರ್ ಭವಾನಿ ರಾವ್ ಅವರು ಹೇಳಿದರು. “ಲಿಂಗ ಸಮಾನತೆಯ ಯಾವುದೇ ಸಮಾಲೋಚನೆಯಲ್ಲಿ ಪುರುಷರು ಮತ್ತು ಹುಡುಗರನ್ನು ತೊಡಗಿಸಿಕೊಳ್ಳುವುದು ಸಹ ಮುಖ್ಯವಾಗಿದೆ. ಮಹಿಳೆಯರು ಈಗ ವಿಪತ್ತು ನಿರ್ವಹಣೆಯಲ್ಲಿ ಕೂಡಾ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ” ಎಂದು ಅವರು ಹೇಳಿದರು. 

“ಅಂಗವೈಕಲ್ಯವು ಎಲ್ಲ ವರ್ಗಗಳ ಅಭಿವೃದ್ಧಿಗೆ ಬಾಧಿತ (ಕ್ರಾಸ್ ಕಟಿಂಗ್) ಹಾಗು ಪ್ರಮುಖ ಸಮಸ್ಯೆಯಾಗಿದೆ. ವಿಶ್ವದಲ್ಲಿ 1.3 ಶತಕೋಟಿ ಜನರು ವಿಕಲಾಂಗಚೇತನರಿದ್ದಾರೆ” ಎಂದು ನಿಧಿ ಗೋಯಲ್ ಅವರು ಹೇಳಿದರು. ಅಂಗವೈಕಲ್ಯ ಸೇರ್ಪಡೆಯು ಜಿ20 ಮತ್ತು ಸಿ20 ನಲ್ಲಿ ನಿರ್ಣಾಯಕ ಸಮಸ್ಯೆಯಾಗಿದೆ. ಅಂಗವೈಕಲ್ಯವನ್ನು ಕೂಡಾ “ಕ್ಷೇಮಾಭಿವೃದ್ಧಿ” ವಿಧಾನವಾಗಿ ನೋಡುವ ಮನೋಭಾವದತ್ತ ಬಲಾಯಿಸುವ ಅವಶ್ಯಕತೆಯಿದೆ ಮತ್ತು ಇವರನ್ನು ಉತ್ಪಾದಕ ಆರ್ಥಿಕತೆಗೆ ಕೊಡುಗೆ ನೀಡುವ ನಿಟ್ಟಿನಲ್ಲಿ ವ್ಯವಸ್ಥೆ-ವಿಧಾನಗಳ ಕುರಿತು ಕೂಡಾ ಸಮಾಜ ನೋಡಬೇಕು ಎಂದು ಅವರು ಹೇಳಿದರು. 

ಗೇಬ್ರಿಯೆಲಾ ರೈಟ್ ಅವರು “ಲಿಂಗ ಸಮಾನತೆ ಎಂಬುದು ಮಾನವ ಅನುಭವ” ಎಂದು ಹೇಳಿದರು. ಸಿ20 ಧ್ಯೇಯವಾಕ್ಯ(ಅಡಿಬರಹ)ದ ಪ್ರಕಾರ ನಾವು ದಾರಿ ತೋರುವ ಬೆಳಕು ಕೂಡಾ ಆಗಿದ್ದೇವೆ ಎಂದು ಗೇಬ್ರಿಯೆಲಾ ರೈಟ್ ಅವರು ಹೇಳಿದರು. “ನಮ್ಮಲ್ಲಿ ಬಹಳಷ್ಟು ಮಂದಿ ಸುಸ್ತಾಗಿದ್ದೇವೆ. ಧ್ವನಿಯಿಲ್ಲದವರಿಗೆ ಮತ್ತು ಅಂಗವಿಕಲರಿಗೆ ಸಹಾಯ ಮಾಡಿ, ನಂತರ ಅವರಿಗೆ ಸಾಮಾನ್ಯ ನೆಲೆಯನ್ನು ನೀಡುವ ಅವಶ್ಯಕತೆ ಇದೆ. ಮಾನಸಿಕ ಆರೋಗ್ಯದ ಲಭ್ಯತೆ- ಅವಕಾಶಗಳನ್ನು ಉತ್ತಮಪಡಿಸಬೇಕು. “ಸೇವಾ” ಮನೋಭಾವವು ಜಗತ್ತನ್ನು ಗುಣಪಡಿಸುತ್ತದೆ. "ನಾನು ಮನುಷ್ಯತ್ವ ಹೊಂದಿದ್ದೇನೆ" ಎಂದು ಪ್ರವರ್ತಿಸುವ ಗುಣಲಕ್ಷಣ ಹಾಗೂ ಇದರ ಸಾಕ್ಷಾತ್ಕಾರವು ಶ್ರೇಷ್ಠ ಕ್ರಿಯೆಯಾಗಿದೆ” ಎಂದು ಗೇಬ್ರಿಯೆಲಾ ರೈಟ್ ಅವರು ಹೇಳಿದರು. 

“ಬ್ರೆಜಿಲ್ನಲ್ಲಿ ಪ್ರಜಾಪ್ರಭುತ್ವವು ನಾಗರಿಕ ಸಮಾಜದ ಹೋರಾಟದಿಂದ ಮಾತ್ರ ಸಾಧ್ಯ” ಎಂದು ಪೆಡ್ರೊ ಬೊಕ್ಕಾ ಅವರು ಹೇಳಿದರು. “ಯಾವುದೇ ಪ್ರಜಾಪ್ರಭುತ್ವದಲ್ಲಿ ಮುಕ್ತ ನಾಗರಿಕ ಅವಕಾಶಗಳು ಅತ್ಯಗತ್ಯ ಭಾಗವಾಗಿರುತ್ತವೆ. ಸಮಾಜಗಳಲ್ಲಿ ನಾಗರಿಕ ಅವಕಾಶಗಳನ್ನು ಸಕ್ರಿಯಗೊಳಿಸುವುದನ್ನು ನಾವು ಖಾತರಿಪಡಿಸಿಕೊಳ್ಳಬೇಕು. ನಾಗರಿಕ ಜಾಗದ ರಕ್ಷಣೆಗೆ ಸಿ-20 ಅಸ್ತ್ರವಾಗಬೇಕಿದೆ. ಸರ್ಕಾರಗಳು ನಾಗರಿಕ ಸಮಾಜಕ್ಕೆ ಹೆದರಿದರೆ, ಸಮಾಜವು ಪ್ರಜಾಪ್ರಭುತ್ವಕ್ಕೆ ಹೆದರುತ್ತದೆ” ಎಂದು ಅವರು ಹೇಳಿದರು.

“ಎಸ್.ಡಿ.ಜಿ. 16+ ಒಂದು ಪರಿಕಲ್ಪನೆಯೇ ಹೊರತು  ಗುರಿಯಲ್ಲ” ಎಂದು ಹೇಳಿದ ಜ್ಯೋತ್ಸ್ನಾ ಮೋಹನ್ ಅವರು “ಬಹಳಷ್ಟು ಎಸ್.ಡಿ.ಜಿ. - ಸುಸ್ಥಿರ ಅಭಿವೃದ್ಧಿ ಗುರಿಗಳು  ಸುಲಭಸಾಧ್ಯವಾಗುವಂತಹುದಲ್ಲ ಹಾಗಾಗಿ ಕೋವಿಡ್-19 ಬಿಕ್ಕಟ್ಟು ಅವಧಿ ಗುರಿ ಸಾಧನೆಗೆ ಅಡಚಣೆ ಉಂಟುಮಾಡಿತು ಎಂದು‌ ಹೇಳುವಂತಿಲ್ಲ. ಸರ್ಕಾರದ ಅಧಿಕೃತ ದತ್ತಾಂಶ(ಡೇಟಾ)ದ ಹೊರತಾಗಿ ನಾಗರಿಕರ ನೇತೃತ್ವದ ದತ್ತಾಂಶವನ್ನು ಸಹ ಸೇರಿಸಬೇಕು” ಎಂದು ಅವರು ಹೇಳಿದರು.

“ಸ್ಥಳೀಯ ಜನರ ಧ್ವನಿಯೇ ಪ್ರಜಾಪ್ರಭುತ್ವದ ನಿಜವಾದ ನಿರ್ಮಾತೃವಾಗಿದೆ” ಎಂದು ಡಾ.ಆರ್.ಬಾಲಸುಬ್ರಮಣ್ಯಂ ಅವರು ಹೇಳಿದರು. “ಪ್ರಜಾಪ್ರಭುತ್ವವನ್ನು ರಾಜಕೀಯ ಸಾಧನವಾಗಿ ನೋಡದೆ ಅಭಿವೃದ್ಧಿಯ ಅಗತ್ಯವಾಗಿ ನೋಡಬೇಕು. ಪ್ರಪಂಚವು ಆದಾಯದ ಬಡತನದಿಂದ ಬಳಲುತ್ತಿಲ್ಲ ಬದಲಾಗಿ ಧ್ವನಿ ಎತ್ತದೆ ಅದರ ಅಭಾವದಿಂದ ಬಳಲುತ್ತಿದೆ. ಪ್ರಜಾಪ್ರಭುತ್ವ ಎಂದರೆ ಪ್ರಜಾಸತ್ತಾತ್ಮಕ ಚಿಂತನೆ. ಪ್ರಜಾಪ್ರಭುತ್ವ ಎಂದರೆ ಜನರ ಬಗ್ಗೆ ತಿಳಿವಳಿಕೆ” ಎಂದು ಅವರು ಹೇಳಿದರು. ಇತ್ತೀಚೆಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಹೇಳಿದ "ನಾಗರಿಕರೇ ನನ್ನ ಸರ್ಕಾರದ ಹೊಸ ಮಂತ್ರ" ಎಂಬ ಸಂದೇಶವನ್ನು ಅವರು ಈ ಸಂದರ್ಭದಲ್ಲಿ ಉಲ್ಲೇಖಿಸಿದರು. “ಪ್ರಜಾಪ್ರಭುತ್ವ ಮತ್ತು ಅಭಿವೃದ್ಧಿಯನ್ನು ಅರ್ಥಮಾಡಿಕೊಳ್ಳಲು ಭಾರತೀಯ ಧ್ವನಿಯನ್ನು ಮರಳಿ ಪಡೆಯುವ ಸಕಾಲಿಕ ಸಮಯ ಇದಾಗಿದೆ” ಎಂದು ಅವರು ಹೇಳಿದರು. 

“ನಮ್ಮ ಕಾರ್ಯಕಾರಿಣಿ ಗುಂಪು ಸಾರ್ವಜನಿಕರ ಪಾಲ್ಗೊಳ್ಳುವಿಕೆ (ಜನ್ ಭಾಗೀದಾರಿ) ಕುರಿತು ಚರ್ಚಿಸುತ್ತಿದೆ ಮತ್ತು ಭಾಗವಹಿಸುವ ಪ್ರಜಾಪ್ರಭುತ್ವವನ್ನು ಬಲಪಡಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದೆ”ಎಂದು ಡಾ. ಬಸವರಾಜು ಆರ್. ಶ್ರೇಷ್ಠ ಅವರು ಹೇಳಿದರು. "ಭಾರತ ಪ್ರಜಾಪ್ರಭುತ್ವದ ತಾಯಿ" ಎಂಬ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ಇತ್ತೀಚೆಗಿನ ಮಾತನ್ನು ಉಲ್ಲೇಖಿಸುತ್ತಾ,  “ಅಭಿವೃದ್ಧಿ ಮತ್ತು ಪ್ರಜಾಪ್ರಭುತ್ವವು ಬಲವಾಗಿ ಸಂಪರ್ಕ ಹೊಂದಿದೆ, ಹಾಗೂ ಪ್ರಜಾಸತ್ತಾತ್ಮಕ ಮೌಲ್ಯಗಳನ್ನು ಬಲಪಡಿಸುವ ಅಗತ್ಯವಿದೆ” ಎಂದು ಹೇಳಿದರು. 

 

****(Release ID: 1909758) Visitor Counter : 143