ಸಂಸ್ಕೃತಿ ಸಚಿವಾಲಯ

“ಸಿವಿಲ್ 20 ಇಂಡಿಯಾ 2023” ಇದರ ಪ್ರಾರಂಭಿಕ ಸಭೆಯ ಪ್ರಥಮ ಸಮಗ್ರ ಅಧಿವೇಶನವು 'ಪರಿಸರದೊಂದಿಗೆ ಅಭಿವೃದ್ಧಿಯನ್ನು ಸಮತೋಲನಗೊಳಿಸುವುದು' ಎಂಬ ವಿಷಯದ ಕುರಿತು ನಡೆಯಿತು


ಸಂಯೋಜಿತ ಸಮಗ್ರ ಆರೋಗ್ಯ, ಸುಸ್ಥಿರ ಮತ್ತು ಸ್ಥಿತಿಸ್ಥಾಪಕ ಸಮುದಾಯಗಳು, ಪರಿಸರಕ್ಕಾಗಿ ಜೀವನ (ಲೈಫ್) ಮತ್ತು ನದಿಗಳ ಪುನರುಜ್ಜೀವನ ಮತ್ತು ನೀರಿನ ನಿರ್ವಹಣೆಯ ವಿಷಯಗಳಲ್ಲಿ ಅಧಿವೇಶನವು ಕೇಂದ್ರೀಕರಿಸಿದೆ.

Posted On: 20 MAR 2023 2:44PM by PIB Bengaluru

ನಾಗ್ಪುರ, ಮಾರ್ಚ್ 20, 2023

ಸಿವಿಲ್-20 (ಸಿ-20) ಇಂಡಿಯಾ 2023 ಪ್ರಾರಂಭಿಕ ಸಭೆಯ ಪ್ರಥಮ ಸಮಗ್ರ ಅಧಿವೇಶನವು ಇಂದು (ಮಾರ್ಚ್ 20, 2023) ನಾಗ್ಪುರದಲ್ಲಿ ನಡೆಯಿತು. ಅಧಿವೇಶನದ ವಿಷಯವು 'ಪರಿಸರದೊಂದಿಗೆ ಅಭಿವೃದ್ಧಿಯನ್ನು ಸಮತೋಲನಗೊಳಿಸುವುದು'. ಮಾಜಿ ಮುಖ್ಯ ಮಾಹಿತಿ ಆಯುಕ್ತ ಶ್ರೀ  ಸತ್ಯಾನಂದ ಮಿಶ್ರಾ ಅವರು ಅಧಿವೇಶನದ ಅಧ್ಯಕ್ಷತೆ ವಹಿಸಿದ್ದರು. 

ಕ್ಲಿಂಟನ್ ಹೆಲ್ತ್ ಆಕ್ಸೆಸ್ ಇನಿಶಿಯೇಟಿವ್ ಕ್ಲಿನಿಕಲ್ ಇದರ ನಿರ್ದೇಶಕ ಡಾ ಆಂಡಿ ಕಾರ್ಮೋನ್, ನೆದರ್ಲ್ಯಾಂಡ್ನ ಟಿ.ಯು. ಡೆಲ್ಫ್ಟ್ನ ಪರಿಸರ ತಂತ್ರಜ್ಞಾನದ ಪ್ರಾಧ್ಯಾಪಕ ಡಾ ಮೆರ್ಲೆ ಡಿ ಕ್ರೂಕ್, ಅಸ್ಸಾಂನ ಮಜುಲಿಯ ಪರಿಸರವಾದಿ ಶ್ರೀ ಜಾದವ್ ಪಯೆಂಗ್ ಮತ್ತು ಪ್ರವಾಹ ಮತ್ತು ಬರದ ಜಾಗತಿಕ ಆಯೋಗದ ಪೀಪಲ್ಸ್ ಕಮಿಷನರ್  ಶ್ರೀಮತಿ ಇಂದಿರಾ ಖುರಾನಾ ಅವರು ಅಧಿವೇಶನದಲ್ಲಿ ಪ್ರಮುಖ ಭಾಷಣಕಾರರು

ಸಿವಿಲ್20 ಇಂಡಿಯಾ 2023ದ ಈ ಅಧಿವೇಶನವು ಈ ಕೆಳಗಿನ ಕಾರ್ಯ ಗುಂಪುಗಳನ್ನು ಒಳಗೊಂಡಿದೆ: ಸಂಯೋಜಿತ ಸಮಗ್ರ ಆರೋಗ್ಯ: ಮನಸ್ಸು, ದೇಹ ಮತ್ತು ಪರಿಸರ; ಸಮರ್ಥನೀಯ ಮತ್ತು ಸ್ಥಿತಿಸ್ಥಾಪಕ ಸಮುದಾಯಗಳು: ಹವಾಮಾನ, ಪರಿಸರ ಮತ್ತು ನಿವ್ವಳ ಶೂನ್ಯ ಗುರಿಗಳು; ಪರಿಸರಕ್ಕಾಗಿ ಜೀವನಶೈಲಿ (ಲೈಫ್); ನದಿಗಳ ಪುನರುಜ್ಜೀವನ ಮತ್ತು ನೀರಿನ ನಿರ್ವಹಣೆ . 

ಅಧಿವೇಶನದಲ್ಲಿ ಭಾಗವಹಿಸಿದ ವಿವಿಧ ಕಾರ್ಯಕಾರಿ ತಂಡಗಳ ಆಯಾ ಸಂಯೋಜಕರಾದ ಸ್ಕೂಲ್ ಆಫ್ ಮೆಡಿಸಿನ್ ಸಂಸ್ಥೆಯ ಡಾ ಪ್ರಿಯಾ ನಾಯರ್, ಅಮೃತ ವಿಶ್ವ ವಿದ್ಯಾಪೀಠಂ ಸಂಸ್ಥೆಯ ಡಾ ಮನೀಶಾ ಸುಧೀರ್, ಪ್ರೊವೋಸ್ಟ್, ಅಮೃತ ವಿಶ್ವ ವಿದ್ಯಾಪೀಠಂ, ಯೋಜಕ್ ಅಧ್ಯಕ್ಷ ಡಾ ಗಜಾನನ ಡಾಂಗೆ, ಮತ್ತು ಭಾರತದ ದಿ ಸತ್ಸಂಗ ಫೌಂಡೇಶನ್ ಸಂಸ್ಥೆಯ ಶ್ರೀಮತಿ ವಾಸುಕಿ ಕಲ್ಯಾಣಸುಂದರಂ ಇವರುಗಳು ಕೂಡಾ ಈ ಅಧಿವೇಶನದಲ್ಲಿ ಮಾತನಾಡಿದರು. 

“ಮಾನವರು ತಮ್ಮ ಸುತ್ತಮುತ್ತಲಿನ ಮತ್ತು ಪ್ರಕೃತಿಯ ಮೇಲೆ ಪರಸ್ಪರ ಅವಲಂಬಿತರಾಗಿದ್ದಾರೆ” ಎಂಬ ಒಂದು ವಿಷಯವು ಕಾರ್ಯನಿರತ ಗುಂಪಿನ ಎಲ್ಲಾ ವಿಷಯಗಳಾದ್ಯಂತ ಸಾಮಾನ್ಯವಾಗಿದ್ದು, ಎಲ್ಲಾ ತಂಡಗಳೊಂದಿಗೆ ಸಮನ್ವಯಗೊಳ್ಳುತ್ತದೆ ಎಂದು ಅಧಿವೇಶನದ ಅಧ್ಯಕ್ಷರಾದ ಶ್ರೀ ಸತ್ಯಾನಂದ ಮಿಶ್ರಾ ಅವರು ಹೇಳಿದರು. ಹಾಗೂ ಸಿವಿಲ್-20 (ಸಿ-20) ಇಂಡಿಯಾ 2023 ಅಧ್ಯಕ್ಷರಾಗಿರುವ ಮಾತಾ ಅಮೃತಾನಂದಮಯಿ (ಅಮ್ಮ) ಅವರು ತಮ್ಮ ಆಲೋಚನೆಗಳಲ್ಲಿ ಬಹಳ ವರ್ಷಗಳಿಂದ ಇದನ್ನೇ ಪ್ರಚಾರ ಮಾಡುತ್ತಿದ್ದಾರೆ ಎಂದು ಹೇಳಿದರು.  

ಡಾ ಪ್ರಿಯಾ ನಾಯರ್ ಅವರು ಆರೋಗ್ಯ ಮತ್ತು ಪರಿಸರದ ನಡುವಿನ ಸಂಬಂಧವನ್ನು ಒಳಗೊಂಡಿರುವ ಸಮಗ್ರ ಆರೋಗ್ಯದ ಪರಿಕಲ್ಪನೆಯನ್ನು ವಿವರಿಸಿದರು. “ಸಂಯೋಜಿತ ಸಮಗ್ರ ಆರೋಗ್ಯ(ಹೋಲಿಸ್ಟಿಕ್ ಹೆಲ್ತ್)ದಲ್ಲಿ ತನ್ನ ಕಾರ್ಯನಿರತ ತಂಡ(ವರ್ಕಿಂಗ್ ಗ್ರೂಪ್)ದ ಚಟುವಟಿಕೆಗಳಿಗೆ ಸಂಬಂಧಿಸಿದವುಗಳನ್ನು “ಉದಾಹರಣ್” ಯೋಜನೆಯಡಿಯಲ್ಲಿ ಅತ್ಯುತ್ತಮವಾಗಿ ಹುಡುಕಿ ಸಂಯೋಜಿಸಲಾಗಿದೆ” ಎಂದು ಅವರು ಹೇಳಿದರು. ಮಾನಸಿಕ ಆರೋಗ್ಯ, ಪೋಷಣೆ, ಹಿರಿಯರ ಆರೋಗ್ಯ ಮತ್ತು ಜೀವ ರಕ್ಷಣೆಯ ಸಮಗ್ರ ಆರೋಗ್ಯ, ಸಾಂಕ್ರಾಮಿಕವಲ್ಲದ ಕಾಯಿಲೆ, ಏಕೀಕೃತ ಒಂದು ಆರೋಗ್ಯ, ಮತ್ತು ಮಹಿಳಾ ಮತ್ತು ಮಕ್ಕಳ ಆರೋಗ್ಯ ಮುಂತಾದವುಗಳನ್ನು ಸಮಗ್ರ ಆರೋಗ್ಯದ ಅವಿಭಾಜ್ಯ ಅಂಶಗಳಾಗಿ ಕೇಂದ್ರೀಕರಿಸಲು ಅವರು ಸಲಹೆ ನೀಡಿದರು 

ಡಾ. ಮನೀಶ್ ಸುಧೀರ್ ಮಾತನಾಡಿ, “ಕಾರ್ಯನಿರತ ತಂಡವು ಹವಾಮಾನ ಸ್ಥಿತಿಸ್ಥಾಪಕತ್ವ ಮತ್ತು ಸಾಮಾಜಿಕ ನ್ಯಾಯ; ಪರಿಸರ ಸುಸ್ಥಿರತೆ, ನಿವ್ವಳ ಶೂನ್ಯ ಹೊರಸೂಸುವಿಕೆ ನಿರ್ವಹಣೆ ಮತ್ತು ಸುಸ್ಥಿರ ಅಭಿವೃದ್ಧಿಗೆ ಸಹಾನುಭೂತಿ ಚಾಲಿತ ವಿಧಾನ ಎಂಬ ನಾಲ್ಕು-ಉಪ ವಿಷಯಗಳ ಮೇಲೆ ಕೇಂದ್ರೀಕರಿಸಿದೆ” ಎಂದು ಹೇಳಿದರು

ಡಾ. ಗಜಾನನ ಡಾಂಗೆ ಅವರು ಮಾತನಾಡುತ್ತಾ, “ಜೀವನಶೈಲಿ ಮತ್ತು ಅಭಿವೃದ್ಧಿಗೆ ಸಂಬಂಧವಿದೆ. ಮೌಲ್ಯಾಧಾರಿತ ಚೌಕಟ್ಟಿನೊಂದಿಗೆ ಗುರಿ ಆಧಾರಿತ ಚೌಕಟ್ಟುಗಳನ್ನು ಸೇರಿಸಬೇಕು. ಮೌಲ್ಯ ಆಧಾರಿತ ವಿಧಾನ ಚೌಕಟ್ಟನ್ನು ಸೇರಿಸುವುದು ಪರಿಸರ ಕೇಂದ್ರಿತ ಜೀವನಶೈಲಿಗೆ ಪ್ರಮುಖವಾಗಿರುತ್ತದೆ. ನಾವು ಭಾರತದ ಅಭಿವೃದ್ಧಿ ಮಾರ್ಗವನ್ನು ಜಾಗತಿಕವಾಗಿ  ಕೊಂಡೊಯ್ಯುತ್ತಿದ್ದೇವೆ” ಎಂದು ಹೇಳಿದರು.  

ಶ್ರೀಮತಿ ವಾಸುಕಿ ಕಲ್ಯಾಣಸುಂದರಂ ಅವರು ನದಿಗಳ ಸಂರಕ್ಷಣೆಯ ಮಹತ್ವದ ಕುರಿತು ಮಾತನಾಡಿದರು. “ನದಿಗಳು ಕಣ್ಮರೆಯಾಗುತ್ತಿರುವುದು ಮತ್ತು ಜಲಮೂಲಗಳ ಮಾಲಿನ್ಯವು ಕಳವಳಕಾರಿಯಾಗಿದೆ. ನೀರಿನ ನಿರ್ವಹಣೆಯಲ್ಲಿ - ಕಡಿಮೆ ಮಾಡಿ(ರೆಡ್ಯೂಸ್), ಮರುಬಳಕೆ ಮಾಡಿ(ರಿಯೂಸ್), ಮರುಹುರುಪುಗೊಳಿಸಿ(ರೀಚಾರ್ಜ್), ಮರುಬಳಕೆ ಮಾಡಿ(ರಿಸೈಕಲ್) ಮತ್ತು ಗೌರವಿಸಿ(ರೆಸ್ಪೆಕ್ಟ್ ) – ಎಂಬ 5 ಮಹತ್ತರವಾದ “ಆರ್" ಗಳ ಪಾತ್ರವಿದೆ. ಪ್ರಪಂಚದಾದ್ಯಂತದ ಭಾರತ ಮತ್ತು  ನ್ಯೂಜಿಲ್ಯಾಂಡ್ ನಂ ತಹ ಸರ್ಕಾರಗಳು ನದಿಗಳನ್ನು ಜೀವಂತ ಘಟಕವೆಂದು ಗುರುತಿಸುತ್ತಿರುವುದು ಸಕಾರಾತ್ಮಕ ಸಂಕೇತವಾಗಿದೆ” ಎಂದು ಅವರು ಹೇಳಿದರು. 

ಆರೋಗ್ಯ ಕುರಿತು ಚರ್ಚಿಸುವಾಗ “ಪಾಲುದಾರಿಕೆ(ಇಕ್ವಿಟಿ) ಮತ್ತು ಲಿಂಗ ಏಕೀಕರಣ” ಹಾಗೂ “ಸಂಪೂರ್ಣ ಆರೋಗ್ಯ” – ಎಂಬ ಎರಡು ವಿಷಯಗಳು ಬಹಳ ಮುಖ್ಯವಾಗುತ್ತವೆ. ದೂರದ ಪ್ರದೇಶಗಳಲ್ಲಿ ವಾಸಿಸುವ ಜನರು ಮತ್ತು ಅಂಚಿನಲ್ಲಿರುವ ಸಮಾಜದ ಹಿನ್ನಲೆಯಿಂದ ಬಂದವರ ಆರೋಗ್ಯ ಸಮಸ್ಯೆಗಳನ್ನು ನಾವು ಪರಿಶೀಲಿಸಬೇಕಾಗಿದೆ” ಎಂದು ಡಾ ಆಂಡಿ ಕಾರ್ಮೋನ್ ಅವರು ಹೇಳಿದರು.

ಡಾ ಮೆರ್ಲೆ ಡಿ ಕ್ರೂಕ್  ಅವರು ಜಲಚಕ್ರದ ಮಹತ್ವದ ಕುರಿತು ಮಾತನಾಡಿದರು. “ಮಾನವೀಯತೆಯು ಜಲಚಕ್ರವನ್ನು ಮುರಿದಿದೆ. ವಿಜ್ಞಾನಿಗಳು ಮತ್ತು ಸಂಶೋಧಕರಾಗಿ, ನಾವು ಅದನ್ನು ಸುಧಾರಿಸುವ ಮಾರ್ಗಗಳನ್ನು ಹುಡುಕುತ್ತಿದ್ದೇವೆ, ಆದರೆ ನಾವು ಅದನ್ನು ಇನ್ನೂ ಕೂಡಾ ಸರಿಪಡಿಸಬೇಕಾಗಿದೆ. ಹವಾಮಾನ ಬದಲಾವಣೆಯನ್ನು ಪರಿಹರಿಸುವುದು ಮತ್ತು ಸೀಮಿತಗೊಳಿಸುವುದು ನೀರಿನ ಚಕ್ರವನ್ನು ಸರಿಪಡಿಸಲು ಇರುವ ನಮ್ಮ ಏಕೈಕ ಅವಕಾಶವಾಗಿದೆ.” ಎಂದು ಅವರು ಹೇಳಿದರು.

ಶ್ರೀಮತಿ ಇಂದಿರಾ ಖುರಾನಾ ಅವರು “ಹವಾಮಾನ ಬದಲಾವಣೆ, ಬರ ಮತ್ತು ಪ್ರವಾಹ, ಮಳೆ ನೀರು ಸಂರಕ್ಷಣೆಯ ಮಹತ್ವ, ವಿಕೇಂದ್ರೀಕೃತ ನೀರಿನ ಸಂರಕ್ಷಣಾ ವಿಧಾನ” ಮುಂತಾದ ವಿಷಯಗಳ ಕುರಿತು ಮಾತನಾಡಿದರು. “ಸ್ಥಳೀಯ ಬುದ್ಧಿವಂತಿಕೆ ಜೊತೆಗೆ ಬೆಳೆ ಕೃಷಿಯನ್ನು ಪರಿಸರ ವಿಜ್ಞಾನ ಮತ್ತು ಪ್ರದೇಶದ ಮಳೆಯೊಂದಿಗೆ ಸಂಯೋಜಿಸಿ ಸೇರಿಸಿಕೊಳ್ಳುವ (ಸಿಂಕ್ರೊನೈಸೇಶನ್) ಹಾಗೂ ಇವುಗಳಲ್ಲಿ ಸಮುದಾಯಗಳ ಒಳಗೊಳ್ಳುವಿಕೆಯ ಮಹತ್ವ ಮತ್ತು ಅಗತ್ಯತೆಗಳನ್ನು ಅವರು ವಿವರಿಸಿದರು. ಹವಾಮಾನದ ಯಾವುದೇ ಚರ್ಚೆಯು ಅದರ ಕಾರ್ಯಸೂಚಿಯಲ್ಲಿ ನೀರನ್ನು ಹೊಂದಿರಬೇಕು. ಕೇವಲ ನೀರಿನ ಹೊರಹರಿವು ಬಗ್ಗೆ ಗಮನ ಹರಿಸುವುದು ಮಾತ್ರ ಸಾಕಾಗುವುದಿಲ್ಲ, ನೀರಿನ ಬಳಕೆ ಮತ್ತು ನೀರಿನ ಸಂರಕ್ಷಣೆಯತ್ತ ಕೂಡಾ ಗಮನ ಹರಿಸುವ ಅಗತ್ಯವಿದೆ” ಎಂದು ಶ್ರೀಮತಿ ಇಂದಿರಾ ಖುರಾನಾ ಅವರು ಹೇಳಿದರು.  

ಶ್ರೀ ಜಾದವ್ ಪಯೆಂಗ್ ಅವರು ಅರಣ್ಯ ಸಂರಕ್ಷಣೆಯಲ್ಲಿ ತಮ್ಮ ಕಾರ್ಯದ ಬಗ್ಗೆ ಮಾತನಾಡಿದರು. “ನಾನು ನೆಟ್ಟ ಮರಗಳು ಬೆಳೆದು ಈಗ ಕಾಡುಗಳಾಗಿ ವಿವಿಧ ಪ್ರಾಣಿಗಳ ವೈವಿಧ್ಯತೆಗೆ ನಾಂದಿ ಹಾಡಿವೆ. ಪರಿಸರವನ್ನು ಪ್ರೀತಿಸಲು ಮತ್ತು ಗೌರವಿಸಲು ಮತ್ತು ಗಿಡಗಳನ್ನು ನೆಡಲು ಕಲಿಸುವ ಯೋಜನೆಯನ್ನು ನಾನಿಂದು ಕಾಡಿನಲ್ಲಿ ಅನುಷ್ಠಾನಗೊಳಿಸಿದ್ದೇನೆ. ಗಿಡಗಳನ್ನು ನೆಟ್ಟು ಪೋಷಿಸುವ ಪಾತ್ರದ ಬಗ್ಗೆ ನಾವೆಲ್ಲಾ ಒತ್ತು ನೀಡಬೇಕು. ಮರಗಳನ್ನು ನೆಡುವುದು ಮಾತ್ರವಲ್ಲ, ಅದನ್ನು ಪೋಷಿಸಬೇಕು. ಎಲ್ಲರೂ ತಮ್ಮ ಹುಟ್ಟುಹಬ್ಬದಂದು ಕೇಕ್ ಕತ್ತರಿಸುವ ಬದಲು ಒಂದೊಂದು ಗಿಡ ನೆಡುವಂತೆ ನಾವು ಎಲ್ಲರನ್ನೂ ಮನವಿ ಮಾಡಬೇಕು” ಎಂದು ಹೇಳಿದರು. 

ಮಾರ್ಚ್ 20, 2023 ರಂದು ನಾಗ್ಪುರದಲ್ಲಿ ಜರುಗಿದ ಸಿ-20 ಇದರ ಪ್ರಾರಂಭಿಕ ಸಭೆಯ “ಸಮಗ್ರ ಅಧಿವೇಶನ”ವನ್ನು ಉದ್ದೇಶಿಸಿ ಅಸ್ಸಾಂನ ಮಜುಲಿಯ ಪರಿಸರವಾದಿ ಶ್ರೀ ಜಾದವ್ ಪಯೆಂಗ್ ಅವರು 'ಪರಿಸರದೊಂದಿಗೆ ಅಭಿವೃದ್ಧಿಯನ್ನು ಸಮತೋಲನಗೊಳಿಸುವುದು' ಎಂಬ ವಿಷಯದ ಕುರಿತು ಮಾತನಾಡಿದರು.

ಮಾರ್ಚ್ 20, 2023 ರಂದು ನಾಗ್ಪುರದಲ್ಲಿ ಜರುಗಿದ ಸಿ-20ಯ ಪ್ರಾರಂಭಿಕ ಸಭೆಯ ಮೊದಲ ಸಮಗ್ರ ಅಧಿವೇಶನವು ಮಾಜಿ ಮುಖ್ಯ ಮಾಹಿತಿ ಆಯುಕ್ತ (ಸಿ.ಐ.ಸಿ.) ಶ್ರೀ ಸತ್ಯಾನಂದ ಮಿಶ್ರಾ ಅವರ ಅಧ್ಯಕ್ಷತೆಯಲ್ಲಿ ಯಶಸ್ವಿಯಾಯಿತು.

ಅಧಿವೇಶನದಲ್ಲಿ ಪರಿಸರಕ್ಕೆ ಸಂಬಂಧಿಸಿದ ಹಲವು ಮಹತ್ವದ ವಿಚಾರಗಳ ಕುರಿತು ಚರ್ಚೆ ನಡೆಸಲಾಗಿದೆ ಎಂದು ಶ್ರೀ ಸತ್ಯಾನಂದ ಮಿಶ್ರಾ ಅವರು ಹೇಳಿದರು. ಎಲ್ಲಾ ಭಾಷಣಕಾರರಿಗೆ ಧನ್ಯವಾದ ಸಲ್ಲಿಸುವ ಮೂಲಕ ಅಧಿವೇಶನವನ್ನು ಅವರು ಮುಕ್ತಾಯಗೊಳಿಸಿದರು.  

**



(Release ID: 1908973) Visitor Counter : 180