ಗೃಹ ವ್ಯವಹಾರಗಳ ಸಚಿವಾಲಯ

ಕೇಂದ್ರ ಗೃಹ ಸಚಿವ ಮತ್ತು ಸಹಕಾರ ಸಚಿವ ಶ್ರೀ ಅಮಿತ್ ಶಾ ಅವರು ಇಂದು ಗುಜರಾತ್ ಕೇಂದ್ರೀಯ ವಿಶ್ವವಿದ್ಯಾಲಯದ 4ನೇ ಘಟಿಕೋತ್ಸವ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು


​​​​​​​ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ದೇಶದ ಯುವಕರಿಗೆ ಹಲವು ಕ್ಷೇತ್ರಗಳಲ್ಲಿ ವಿಫುಲ ಅವಕಾಶಗಳನ್ನು ಒದಗಿಸಿದ್ದಾರೆ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಸರಕಾರದ ಹೊಸ ಶಿಕ್ಷಣ ನೀತಿಯು ಜಾಗತಿಕ ವೇದಿಕೆಯಲ್ಲಿ ಭಾರತದ ಯುವಕರನ್ನು ವಿಶ್ವದ ಯುವಕರ ಮುಂದೆ ಸ್ಪರ್ಧೆಗೆ ಒಡ್ಡುವ ಸಾಮರ್ಥ್ಯವನ್ನು ಹೊಂದಿದೆ

ರಾಷ್ಟ್ರೀಯ ಹೆಮ್ಮೆ ಮತ್ತು ಜಾಗತಿಕ ಕಲ್ಯಾಣದ ಭಾವನೆಯಿಂದ ತುಂಬಿರುವ ಅಂತಹ ವಿದ್ಯಾರ್ಥಿಗಳನ್ನು ಸೃಷ್ಟಿಸುವುದು ಹೊಸ ಶಿಕ್ಷಣ ನೀತಿಯ ಉದ್ದೇಶವಾಗಿದೆ.

ತಮ್ಮ ಜೀವನದುದ್ದಕ್ಕೂ ವಿದ್ಯಾರ್ಥಿಯಾಗಿ ಉಳಿಯುವ ವ್ಯಕ್ತಿಗಳು ದೇಶದ ಸಮಾಜ ಮತ್ತು ವ್ಯವಸ್ಥೆಗಳನ್ನು ಸುವ್ಯವಸ್ಥಿತಗೊಳಿಸುವ ಸಾಮರ್ಥ್ಯವನ್ನು ಹೊಂದಿರುತ್ತಾರೆ

ಶ್ರೇಷ್ಠ ಭಾರತವನ್ನು ನಿರ್ಮಿಸುವುದು ಮತ್ತು ಅದರ ಪ್ರಯೋಜನಗಳನ್ನು ಪಡೆಯುವುದು ವಿದ್ಯಾರ್ಥಿಗಳು ಮತ್ತು ಯುವಕರ ಜವಾಬ್ದಾರಿಯಾಗಿದೆ

ಗುಜರಾತ್ ಕೇಂದ್ರೀಯ ವಿಶ್ವವಿದ್ಯಾಲಯವು ಅಲ್ಪಾವಧಿಯಲ್ಲಿ ಅತ್ಯುನ್ನತ ಗುಣಮಟ್ಟವನ್ನು ಸಾಧಿಸಿದೆ ಮತ್ತು ಉತ್ತಮ ಗ್ರಂಥಾಲಯವನ್ನು ಸ್ಥಾಪಿಸುವ ಮೂಲಕ, ಹೆಚ್ಚು ವಿದ್ಯಾರ್ಥಿಗಳಿಗೆ ಶಿಕ್ಷಣವನ್ನು ಲಭ್ಯವಾಗಿಸುವ ಪ್ರಯತ್ನಗಳನ್ನು ಮಾಡಿದೆ

ನಾವು ನಮ್ಮ ಸ್ಥಳೀಯ ಭಾಷೆಗಳ ಶಬ್ಧ ಭಂಡಾರವನ್ನು ವಿಸ್ತರಿಸಬಹುದು, ಏಕೆಂದರೆ ನಮ್ಮ ಎಲ್ಲಾ ಭಾಷೆಗಳು ಪರಸ್ಪರ ಹೊಂದಿಕೊಳ್ಳುತ್ತವೆ, ಇದು ನಮ್ಮ ಭಾಷೆಗಳನ್ನು ವಿಸ್ತರಿಸಲು ಮತ್ತು ಶ್ರೀಮಂತಗೊಳಿಸಲು ಸಹಾಯ ಮಾಡುತ್ತದೆ

Posted On: 19 MAR 2023 9:12PM by PIB Bengaluru

ಕೇಂದ್ರ ಗೃಹ ಸಚಿವ ಮತ್ತು ಸಹಕಾರ ಸಚಿವ ಶ್ರೀ ಅಮಿತ್ ಶಾ ಅವರು ಇಂದು ಗುಜರಾತ್ ಕೇಂದ್ರೀಯ ವಿಶ್ವವಿದ್ಯಾಲಯದ 4ನೇ ಘಟಿಕೋತ್ಸವ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದರು.

ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಶ್ರೀ ಅಮಿತ್ ಶಾ ಅವರು ಯುವಕರು ತಮ್ಮೊಳಗಿನ ವಿದ್ಯಾರ್ಥಿಯನ್ನು ಎಂದಿಗೂ ಸಾಯಲು ಬಿಡಬಾರದು. ತಮ್ಮ ವಿದ್ಯಾರ್ಥಿ ಜೀವನದ ಆಧಾರದ ಮೇಲೆ ಮತ್ತು ತಮ್ಮ ಸ್ವಂತ ಅಭಿವೃದ್ಧಿಯ ಮೂಲಕ ಅವರು ದೇಶದ ಅಭಿವೃದ್ಧಿಗೆ ಕೊಡುಗೆ ನೀಡಬೇಕು ಎಂದು ಕರೆ ನೀಡಿದರು. ಗುಜರಾತ್ ಕೇಂದ್ರೀಯ ವಿಶ್ವವಿದ್ಯಾಲಯವು ಅಲ್ಪಾವಧಿಯಲ್ಲಿ ಅತ್ಯುನ್ನತ ಗುಣಮಟ್ಟವನ್ನು ಸಾಧಿಸಿದೆ ಮತ್ತು ಉತ್ತಮ ಗ್ರಂಥಾಲಯವನ್ನು ಸ್ಥಾಪಿಸುವ ಮೂಲಕ, ಶಿಕ್ಷಣವನ್ನು ಹೆಚ್ಚು ವಿದ್ಯಾರ್ಥಿಗಳಿಗೆ ಲಭ್ಯವಾಗಿಸುವ ಪ್ರಯತ್ನಗಳನ್ನು ಮಾಡಿದೆ ಎಂದರು.

ಇಂದು ಪದವಿ ಪಡೆಯುವ ವಿದ್ಯಾರ್ಥಿಗಳ ಬ್ಯಾಚ್ ಅನ್ನು ʻಅಮೃತ್ ಮಹೋತ್ಸವ್ ಬ್ಯಾಚ್ʼ ಎಂದು ಕರೆಯಲಾಗುತ್ತದೆ. ಏಕೆಂದರೆ ಇದು ಸ್ವಾತಂತ್ರ್ಯದ ಅಮೃತ ಮಹೋತ್ಸವದ ವರ್ಷವಾಗಿದೆ. ಇದು ಎಲ್ಲಾ ವಿದ್ಯಾರ್ಥಿಗಳ ಪಾಲಿಗೆ ಹೆಮ್ಮೆಯ ಕ್ಷಣವಾಗಿದೆ ಎಂದು ಕೇಂದ್ರ ಗೃಹ ಮತ್ತು ಸಹಕಾರ ಸಚಿವರು ಹೇಳಿದರು. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ʻಸ್ವಾತಂತ್ರ್ಯದ ಅಮೃತ ಮಹೋತ್ಸವʼವನ್ನು ಆಚರಿಸಲು ಮೂರು ಉದ್ದೇಶಗಳನ್ನು ಜನರ ಮುಂದೆ ಇಟ್ಟಿದ್ದಾರೆ. ಮೊದಲನೆಯದಾಗಿ, ದೇಶದ ಯುವಕರಿಗೆ ಸ್ವಾತಂತ್ರ್ಯ ಹೋರಾಟ ಮತ್ತು ಸ್ವಾತಂತ್ರ್ಯ ಪೂರ್ವದ ಇತಿಹಾಸದ ಬಗ್ಗೆ ಅರಿವು ಮೂಡಿಸುವುದು. ಎರಡನೆಯದಾಗಿ, 75 ವರ್ಷಗಳ ಸಾಧನೆಗಳ ಬಗ್ಗೆ ಹೆಮ್ಮೆ ಪಡುವುದು. ಮೂರನೆಯದಾಗಿ, 75 ರಿಂದ 100 ವರ್ಷಗಳ ಪ್ರಯಾಣವನ್ನು ಸಂಕಲ್ಪಗಳ ಪ್ರಯಾಣವನ್ನಾಗಿ ಮಾಡುವ ಮೂಲಕ, ವಿಶ್ವದ ಪ್ರತಿಯೊಂದು ಕ್ಷೇತ್ರದಲ್ಲೂ ಭಾರತವನ್ನು ಮೊದಲ ಸ್ಥಾನದಲ್ಲಿ ಮಾಡುವ ಪ್ರತಿಜ್ಞೆಯನ್ನು ಕೈಗೊಳ್ಳುವುದು. ಪ್ರಧಾನಿ ಮೋದಿ ಅವರು 75 ರಿಂದ 100 ವರ್ಷಗಳ ಅವಧಿಯನ್ನು ʻಅಮೃತ ಕಾಲʼ ಮತ್ತು ʻಸಂಕಲ್ಪ್ ಸೆ ಸಿದ್ಧಿʼ ಎಂದು ಕರೆದಿದ್ದಾರೆ. 130 ಕೋಟಿ ಜನರು ಒಂದು ಹೆಜ್ಜೆ ಮುಂದಿಟ್ಟರೆ, ದೇಶವು 130 ಕೋಟಿ ಹೆಜ್ಜೆ ಮುಂದಿಡುತ್ತದೆ ಎಂದರು. ಭಾರತವನ್ನು ಶ್ರೇಷ್ಠ ಮತ್ತು ವಿಶ್ವದ ಪ್ರತಿಯೊಂದು ಕ್ಷೇತ್ರದಲ್ಲೂ ಪ್ರಥಮ ಸ್ಥಾನ ಪಡೆಯುವಂತೆ ಮಾಡುವ ಜವಾಬ್ದಾರಿ ದೇಶದ ಯುವಕರ ಮೇಲಿದೆ ಎಂದು ಶ್ರೀ ಶಾ ಹೇಳಿದರು. ಶ್ರೇಷ್ಠ ಭಾರತವನ್ನು ನಿರ್ಮಿಸುವುದು ವಿದ್ಯಾರ್ಥಿಗಳ ಜವಾಬ್ದಾರಿಯಾಗಿದೆ ಎಂದು ಅವರು ಹೇಳಿದರು.

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ತಂದಿರುವ ʻಹೊಸ ರಾಷ್ಟ್ರೀಯ ಶಿಕ್ಷಣ ನೀತಿ-2020ʼ ಯಾವುದೇ ವಿವಾದ ಅಥವಾ ವಿರೋಧವಿಲ್ಲದ ಏಕೈಕ ಶಿಕ್ಷಣ ನೀತಿಯಾಗಿದೆ ಮತ್ತು ಅದನ್ನು ಎಲ್ಲರೂ ಒಪ್ಪಿಕೊಂಡಿದ್ದಾರೆ ಎಂದು ಶ್ರೀ ಅಮಿತ್ ಶಾ ಹೇಳಿದರು. ಈ ಶಿಕ್ಷಣ ನೀತಿಯು ಭಾರತದ ಯುವಕರನ್ನು ಜಾಗತಿಕ ವೇದಿಕೆಯಲ್ಲಿ ವಿಶ್ವದ ಯುವಕರ ಮುಂದೆ ಸ್ಪರ್ಧೆಗೆ ಒಡ್ಡುವ ಶಕ್ತಿಯನ್ನು ಹೊಂದಿದೆ. ಏಕೆಂದರೆ ಇದನ್ನು ವ್ಯಾಪಕ ಚರ್ಚೆಗಳ ನಂತರ ಸಿದ್ಧಪಡಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು. ಈ ನೀತಿಯು ನಮ್ಮ ಶಿಕ್ಷಣವನ್ನು ಸಂಕುಚಿತ ಚಿಂತನೆಯಿಂದ ಹೊರತಂದಿದೆ ಎಂದು ಅವರು ಹೇಳಿದರು. ಶಿಕ್ಷಣದ ಗುರಿ ಪದವಿ, ಉತ್ತಮ ಉದ್ಯೋಗ ಅಥವಾ ವೈಯಕ್ತಿಕ ಜೀವನದಲ್ಲಿ ಸೌಕರ್ಯಗಳನ್ನು ಪಡೆಯುವುದಲ್ಲ, ಬದಲಿಗೆ ಸಂಪೂರ್ಣ ಮನುಷ್ಯನಾಗಿ ಬದಲಾಗುವುದು ಎಂದು ಶ್ರೀ ಶಾ ಹೇಳಿದರು. ನಾವು ಯಾವಾಗಲೂ ಈ ದಿಕ್ಕಿನಲ್ಲಿ ಪ್ರಯತ್ನಗಳನ್ನು ಮಾಡಬೇಕು ಮತ್ತು ಈ ಶಿಕ್ಷಣ ನೀತಿಯು ಇದಕ್ಕೆ ಸಂಪೂರ್ಣ ಅವಕಾಶವನ್ನು ನೀಡುತ್ತದೆ ಎಂದರು. ಹೊಸ ಶಿಕ್ಷಣ ನೀತಿಯು ಭಾರತೀಯ ಮೌಲ್ಯಗಳನ್ನು ಆಧರಿಸಿದೆ, ಜೊತೆಗೆ ಆಧುನಿಕ ಶಿಕ್ಷಣದ ಎಲ್ಲಾ ಅಂಶಗಳನ್ನು ಒಳಗೊಂಡಿದೆ ಎಂದು ಅವರು ಹೇಳಿದರು. ರಾಷ್ಟ್ರೀಯ ಹೆಮ್ಮೆ ಮತ್ತು ಜಾಗತಿಕ ಕಲ್ಯಾಣದ ಭಾವನೆಯಿಂದ ತುಂಬಿರುವ ಅಂತಹ ವಿದ್ಯಾರ್ಥಿಗಳು ಮತ್ತು ಮಾನವರನ್ನು ಸೃಷ್ಟಿಸುವುದು ಈ ನೀತಿಯ ಉದ್ದೇಶವಾಗಿದೆ. ಈ ಶಿಕ್ಷಣ ನೀತಿಯು ಜಾಗತಿಕ ನಾಗರಿಕರನ್ನು ಸಿದ್ಧಪಡಿಸುವ ಎಲ್ಲಾ ಸಾಮರ್ಥ್ಯಗಳನ್ನು ಹೊಂದಿದೆ ಎಂದು ಶ್ರೀ ಶಾ ಹೇಳಿದರು.

 

ಹೊಸ ಶಿಕ್ಷಣ ನೀತಿಯಲ್ಲಿ, ಮಾತೃಭಾಷೆಗೆ ಒತ್ತು ನೀಡಲಾಗಿದೆ ಏಕೆಂದರೆ ಯಾವುದೇ ವ್ಯಕ್ತಿಯು ತನ್ನದೇ ಆದ ಭಾಷೆಯಲ್ಲಿ ಚೆನ್ನಾಗಿ ಯೋಚಿಸಬಹುದು, ಉತ್ತಮ ಸಾಮರ್ಥ್ಯದೊಂದಿಗೆ ಸಂಶೋಧನೆ ಮಾಡಬಹುದು ಮತ್ತು ಇದು ಅವನ ವಿಶ್ಲೇಷಣೆ ಮತ್ತು ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ ಎಂದು ಕೇಂದ್ರ ಗೃಹ ಸಚಿವರು ಮತ್ತು ಸಹಕಾರ ಸಚಿವರು ಹೇಳಿದರು. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಹೊಸ ಶಿಕ್ಷಣ ನೀತಿಯಲ್ಲಿ ಭಾಷೆಯ ಮಹತ್ವವನ್ನು ಕಾಯ್ದುಕೊಳ್ಳುವ ಸಲುವಾಗಿ ಪ್ರಾಥಮಿಕ ಶಿಕ್ಷಣವನ್ನು ಮಾತೃಭಾಷೆಯಲ್ಲಿ ಕಡ್ಡಾಯಗೊಳಿಸುವ ಅವಕಾಶ ಕಲ್ಪಿಸಿದ್ದಾರೆ ಎಂದರು. ನಮ್ಮ ಎಲ್ಲಾ ಭಾಷೆಗಳು ಪರಸ್ಪರ ಹೊಂದಿಕೊಳ್ಳುತ್ತವೆ. ಹೀಗಾಗಿ ನಾವು ನಮ್ಮ ಶಬ್ಧ ಭಂಡಾರವನ್ನು ವಿಸ್ತರಿಸಿಕೊಳ್ಳಲು ಅವಕಾಶವಿದೆ. ಆ ಮೂಲಕ ನಾವು ಭಾಷೆಯನ್ನು ವಿಸ್ತರಿಸಬೇಕು ಮತ್ತು ಶ್ರೀಮಂತಗೊಳಿಸಬೇಕು ಎಂದು ಶ್ರೀ ಶಾ ಕರೆ ನೀಡಿದರು. ನಮ್ಯತೆಯನ್ನು ತರುವ ಸಲುವಾಗಿ, ಉನ್ನತ ಶಿಕ್ಷಣದಲ್ಲಿ ಅವಕಾಶಗಳನ್ನು ಮಾಡಲಾಗಿದೆ. ಜೊತೆಗೆ, ಇ-ಕಲಿಕೆಗೆ ಒತ್ತು ನೀಡಲಾಗಿದೆ ಎಂದರು.
 
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ದೇಶದ ಯುವಕರಿಗೆ ವಿಫುಲ ಅವಕಾಶಗಳನ್ನು ಒದಗಿಸಿದ್ದಾರೆ ಎಂದು ಶ್ರೀ ಅಮಿತ್ ಶಾ ಹೇಳಿದರು. 2016ರಲ್ಲಿ ದೇಶದಲ್ಲಿ 724 ನವೋದ್ಯಮಗಳಿದ್ದವು. ಅವುಗಳ ಸಂಖ್ಯೆ 2022ರ ವೇಳೆಗೆ 70,000ಕ್ಕಿಂತ ಹೆಚ್ಚಾಗಿದೆ, ಅದರಲ್ಲೂ 107 ನವೋದ್ಯಮಗಳು ʻಯುನಿಕಾರ್ನ್ ಕ್ಲಬ್ʼನಲ್ಲಿವೆ. ಇವುಗಳ ಸಂಖ್ಯೆ 2016ರಲ್ಲಿ ಕೇವಲ 4 ಆಗಿತ್ತು ಎಂದರು. ದೇಶದ ಒಟ್ಟು ನವೋದ್ಯಮಗಳ ಪೈಕಿ ಶೇ.45ರಷ್ಟನ್ನು ಮಹಿಳೆಯರು ಮತ್ತು ಬಾಲಕಿಯರು ನಡೆಸುತ್ತಿದ್ದಾರೆ. ಶೇ.45ರಷ್ಟು ನವೋದ್ಯಮಗಳು 2 ಮತ್ತು 3ನೇ ಶ್ರೇಣಿಯ ನಗರಗಳಲ್ಲಿವೆ ಎಂದರು. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಹಲವಾರು ಕ್ಷೇತ್ರಗಳನ್ನು ಗುರುತಿಸುವ ಮೂಲಕ 'ಮೇಕ್ ಇನ್ ಇಂಡಿಯಾ' ಯೋಜನೆಯನ್ನು ಪ್ರಾರಂಭಿಸಿದ್ದಾರೆ. ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಹಲವು ಹೊಸ ವಲಯಗಳನ್ನು ತೆರೆಯಲಾಗಿದೆ ಮತ್ತು ಇದರ ಪರಿಣಾಮವಾಗಿ ಭಾರತದ ಸರಕು ರಫ್ತು 400 ಶತಕೋಟಿ ಡಾಲರ್ ದಾಟಿದೆ. ʻಉತ್ಪಾದನೆ ಆಧರಿತ ಪ್ರೋತ್ಸಾಹಧನʼ (ಪಿಎಲ್ಐ) ಯೋಜನೆಯ ಮೂಲಕ 4 ಲಕ್ಷ ಕೋಟಿ ರೂ.ಗಳ ಹೂಡಿಕೆ ಬಂದಿದೆ. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಯುವಜನರ ಸಾಮರ್ಥ್ಯ ವರ್ಧನೆಗಾಗಿ ಹಲವು ಕ್ಷೇತ್ರಗಳನ್ನು ತೆರೆದಿದ್ದಾರೆ ಎಂದು ಶ್ರೀ ಶಾ ಹೇಳಿದರು. ದೇಶದ ಸ್ವಾತಂತ್ರ್ಯದ ಶತಮಾನೋತ್ಸವದ ಸಮಯದಲ್ಲಿ, ಭಾರತವು ಖಂಡಿತವಾಗಿಯೂ ಪ್ರತಿಯೊಂದು ಕ್ಷೇತ್ರದಲ್ಲೂ ವಿಶ್ವದಲ್ಲೇ ಪ್ರಥಮ ಸ್ಥಾನದಲ್ಲಿರುತ್ತದೆ ಎಂಬ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದರು.

***



(Release ID: 1908714) Visitor Counter : 123