ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ
azadi ka amrit mahotsav g20-india-2023

ಭಾರತೀಯ ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರದ ಆಧಾರ್ ಆನ್ ಲೈನ್ ದಾಖಲಾತಿ ಪರಿಷ್ಕರಣೆ (ನವೀಕರಣ) ಉಚಿತ; ಇದರಿಂದ ಲಕ್ಷಾಂತರ ಜನರಿಗೆ ಪ್ರಯೋಜನ

Posted On: 15 MAR 2023 7:09PM by PIB Bengaluru

ಭಾರತೀಯ ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರ (ಯುಐಡಿಎಐ)ವು ದೇಶದ ಲಕ್ಷಾಂತರ  ನಿವಾಸಿಗಳಿಗೆ ಆಧಾರ್ ಆನ್‌ಲೈನ್‌ ದಾಖಲಾತಿಗಳನ್ನು ಉಚಿತವಾಗಿ ನವೀಕರಿಸಲು ಅನುಮತಿ ನೀಡಲು ನಿರ್ಧರಿಸಿದೆ. ಇದು ಲಕ್ಷಾಂತರ ನಿವಾಸಿಗಳಿಗೆ ಪ್ರಯೋಜನ ನೀಡಲಿದೆ.

ಡಿಜಿಟಲ್ ಇಂಡಿಯಾ ಉಪಕ್ರಮದ ಭಾಗವಾಗಿ, ಯುಐಡಿಎಐ ಈ ಮಹತ್ವದ ನಿರ್ಧಾರ ತೆಗೆದುಕೊಂಡಿದೆ. ಮೈ ಆಧಾರ್ ಪೋರ್ಟಲ್‌ನಲ್ಲಿ ಉಚಿತವಾಗಿ ದಾಖಲಾತಿಗಳನ್ನು ನವೀಕರಿಸಲು ಇದು ದೇಶದ ಲಕ್ಷಾಂತರ ಜನರಿಗೆ ಪ್ರಯೋಜನ ಒದಗಿಸಲಿದೆ.  ಉಚಿತ ಸೇವೆಯು ಮುಂದಿನ 3 ತಿಂಗಳವರೆಗೆ, ಅಂದರೆ 2023 ಮಾರ್ಚ್ 15ರಿಂದ ಜೂನ್ 14ರ ವರೆಗೆ ಲಭ್ಯವಿದೆ. ಈ ಸೇವೆಯು ಮೈ ಆಧಾರ್ ಪೋರ್ಟಲ್‌ನಲ್ಲಿ ಮಾತ್ರ ಉಚಿತವಾಗಿದೆ. ಆದರೆ ಹಿಂದೆ ಇದ್ದಂತೆ ಭೌತಿಕ ಆಧಾರ್ ಕೇಂದ್ರಗಳಲ್ಲಿ 50 ರೂ. ಶುಲ್ಕ ಮುಂದುವರಿಯಲಿದೆ ಎಂಬುದು ಗಮನಾರ್ಹ ಸಂಗತಿ.  

ನಿವಾಸಿಗಳು ತಮ್ಮ ಜನಸಂಖ್ಯಾ ವಿವರಗಳನ್ನು ಮರು ಮೌಲ್ಯೀಕರಿಸಲು ಗುರುತಿನ ಮತ್ತು ವಿಳಾಸದ ಪುರಾವೆಯ ದಾಖಲೆಗಳನ್ನು ಅಪ್‌ಲೋಡ್ ಮಾಡಲು ಭಾರತೀಯ ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರ (ಯುಐಡಿಎಐ)ವು ಪ್ರೋತ್ಸಾಹಿಸುತ್ತಿದೆ. ವಿಶೇಷವಾಗಿ, 10 ವರ್ಷಗಳ ಹಿಂದೆ ಆಧಾರ್ ನೀಡಿದ್ದರೆ ಮತ್ತು ಎಂದಿಗೂ ನವೀಕರಿಸದೆ ಇದ್ದರೆ ಇದು ಸುಧಾರಿತ ಜೀವನಶೈಲಿಗೆ ಸಹಾಯ ಮಾಡುತ್ತದೆ, ಉತ್ತಮ ಸೇವೆ ವಿತರಣೆ ಮತ್ತು ದೃಢೀಕರಣದ ಯಶಸ್ಸಿನ ದರವನ್ನು ಹೆಚ್ಚಿಸುತ್ತದೆ.

ಜನಸಂಖ್ಯಾ ವಿವರಗಳನ್ನು (ಹೆಸರು, ಹುಟ್ಟಿದ ದಿನಾಂಕ, ವಿಳಾಸ, ಇತ್ಯಾದಿ) ಬದಲಾಯಿಸುವ ಅಗತ್ಯವಿದ್ದರೆ, ನಿವಾಸಿಗಳು ನಿಯಮಿತ ಆನ್‌ಲೈನ್ ನವೀಕರಣ ಸೇವೆ ಬಳಸಬಹುದು ಅಥವಾ ಹತ್ತಿರದ ಆಧಾರ್ ಕೇಂದ್ರಕ್ಕೆ ಭೇಟಿ ನೀಡಬಹುದು. ಅಂತಹ ಸಂದರ್ಭಗಳಲ್ಲಿ ಸಾಮಾನ್ಯ ಶುಲ್ಕಗಳು ಅನ್ವಯಿಸುತ್ತವೆ.

ನಿವಾಸಿಗಳು ತಮ್ಮ ಆಧಾರ್ ಸಂಖ್ಯೆ ಬಳಸಿಕೊಂಡು https://myaadhaar.uidai.gov.in/ ನಲ್ಲಿ ಲಾಗಿನ್ ಮಾಡಬಹುದು. ನೋಂದಾಯಿತ ಮೊಬೈಲ್ ಸಂಖ್ಯೆಗೆ ಒನ್ ಟೈಮ್ ಪಾಸ್‌ವರ್ಡ್ (ಒಟಿಪಿ) ಕಳುಹಿಸಲಾಗುತ್ತದೆ. ಒಬ್ಬರು 'ಡಾಕ್ಯುಮೆಂಟ್ ಅಪ್‌ಡೇಟ್' ಮೇಲೆ ಕ್ಲಿಕ್ ಮಾಡಿದರೆ ಸಾಕು,ಪ್ರಸ್ತುತ ಇರುವ ನಿವಾಸಿ ವಿವರಗಳನ್ನು ತೋರುತ್ತದೆ. ಆಧಾರ್ ಹೊಂದಿರುವವರು ವಿವರಗಳನ್ನು ಪರಿಶೀಲಿಸಬೇಕಾಗುತ್ತದೆ, ಸರಿಯಾಗಿ ಕಂಡುಬಂದರೆ, ಮುಂದಿನ ಹೈಪರ್-ಲಿಂಕ್ ಕ್ಲಿಕ್ ಮಾಡಿ. ಮುಂದಿನ ಪರದೆಯಲ್ಲಿ, ನಿವಾಸಿಯು ಡ್ರಾಪ್‌ಡೌನ್ ಪಟ್ಟಿಯಿಂದ ಗುರುತಿನ ಮತ್ತು ವಿಳಾಸದ ಪುರಾವೆ ಡಾಕ್ಯುಮೆಂಟ್ ಆಯ್ಕೆ ಮಾಡಬೇಕು ಮತ್ತು ಅವನ ಅಥವಾ ಅವಳ ದಾಖಲೆಗಳನ್ನು ನವೀಕರಿಸಲು ಅದರ ಪ್ರತಿಗಳನ್ನು ಅಪ್‌ಲೋಡ್ ಮಾಡಬೇಕು. ನವೀಕರಿಸಿದ ಮತ್ತು ಸ್ವೀಕಾರಾರ್ಹ ಪಿಒಎ ಮತ್ತು ಪಿಒಐ ದಾಖಲೆಗಳ ಪಟ್ಟಿಯು ಪ್ರಾಧಿಕಾರದ ಅಧಿಕೃತ ವೆಬ್‌ಸೈಟ್‌ನಲ್ಲಿ ಲಭ್ಯವಿದೆ.

ಕಳೆದ ದಶಕದಲ್ಲಿ ಆಧಾರ್ ಸಂಖ್ಯೆಯು ಭಾರತದ ನಿವಾಸಿಗಳಿಗೆ ಸಾರ್ವತ್ರಿಕವಾಗಿ ಅಂಗೀಕರಿಸಲ್ಪಟ್ಟ ಗುರುತಿನ ಪುರಾವೆಯಾಗಿ ಹೊರಹೊಮ್ಮಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ನಡೆಸುತ್ತಿರುವ ಸುಮಾರು 1,200 ಸರ್ಕಾರಿ ಯೋಜನೆಗಳು ಮತ್ತು ಕಾರ್ಯಕ್ರಮಗಳು, ಸೇವೆಗಳ ವಿತರಣೆಗಾಗಿ ಆಧಾರ್ ಆಧಾರಿತ ಗುರುತನ್ನು ಬಳಸುತ್ತಿವೆ. ಇದಲ್ಲದೆ, ಬ್ಯಾಂಕ್‌ಗಳು, ಎನ್‌ಬಿಎಫ್‌ಸಿಗಳು ಮತ್ತಿತರ ಹಣಕಾಸು ಸಂಸ್ಥೆಗಳು ಸೇರಿದಂತೆ ಸೇವಾ ಪೂರೈಕೆದಾರರ ಹಲವಾರು ಸೇವೆಗಳನ್ನು ಗ್ರಾಹಕರನ್ನು ಮನಪೂರ್ವಕವಾಗಿ ದೃಢೀಕರಿಸಲು ಮತ್ತು ಆನ್‌ಬೋರ್ಡ್ ಮಾಡಲು ಆಧಾರ್ ಬಳಸುತ್ತಿವೆ.

2016ರ ಆಧಾರ್ ನೋಂದಣಿ ಮತ್ತು ನವೀಕರಣ ನಿಯಮಗಳ ಪ್ರಕಾರ, ಆಧಾರ್ ಸಂಖ್ಯೆ ಹೊಂದಿರುವವರು, ಆಧಾರ್‌ಗಾಗಿ ದಾಖಲಾದ ದಿನಾಂಕದಿಂದ ಪ್ರತಿ 10 ವರ್ಷ ಪೂರ್ಣಗೊಂಡ ನಂತರ, ತಮ್ಮ ಮಾಹಿತಿಯ ನಿರಂತರ ನಿಖರತೆ ಖಚಿತಪಡಿಸಿಕೊಳ್ಳಲು ಪಿಒಐ ಮತ್ತು ಪಿಒಎ ದಾಖಲೆಗಳನ್ನು ಸಲ್ಲಿಸುವ ಮೂಲಕ ಆಧಾರ್‌ನಲ್ಲಿ ತಮ್ಮ ಪೋಷಕ ದಾಖಲೆಗಳನ್ನು ಒಮ್ಮೆಯಾದರೂ ನವೀಕರಿಸಬೇಕು.

****(Release ID: 1907582) Visitor Counter : 146