ರಾಷ್ಟ್ರಪತಿಗಳ ಕಾರ್ಯಾಲಯ
azadi ka amrit mahotsav

ಎಲ್.ಬಿ.ಎಸ್.ಎನ್.ಎ.ಎ ಇದರ 124 ನೇ ಸೇರ್ಪಡೆ ಪೂರ್ವ ತರಬೇತಿ ಕಾರ್ಯಕ್ರಮಕ್ಕೆ ಹಾಜರಾಗುತ್ತಿರುವ ರಾಜ್ಯಗಳ ನಾಗರಿಕ ಸೇವಾ  ಅಧಿಕಾರಿಗಳು ರಾಷ್ಟ್ರಪತಿ ಅವರನ್ನು ಭೇಟಿ ಮಾಡಿದರು

Posted On: 13 MAR 2023 1:00PM by PIB Bengaluru

ಎಲ್.ಬಿ.ಎಸ್.ಎನ್.ಎ.ಎ ಇದರ  124 ನೇ ಸೇರ್ಪಡೆ ಪೂರ್ವ ತರಬೇತಿ ಕಾರ್ಯಕ್ರಮದಲ್ಲಿ ಭಾಗವಹಿಸುವ ದೇಶದ ವಿವಿಧ ರಾಜ್ಯಗಳ ನಾಗರಿಕ ಸೇವಾ ಅಧಿಕಾರಿಗಳು ಇಂದು (ಮಾರ್ಚ್ 13, 2023) ರಾಷ್ಟ್ರಪತಿ ಭವನದಲ್ಲಿ ಭಾರತದ ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಅವರನ್ನು ಭೇಟಿ ಮಾಡಿದರು.

ಅಧಿಕಾರಿಗಳನ್ನು ಉದ್ದೇಶಿಸಿ ಮಾತನಾಡಿದ ರಾಷ್ಟ್ರಪತಿಯವರು, ಭಾರತೀಯ ಆಡಳಿತ ಸೇವೆಗಳಿಗೆ ಬಡ್ತಿ ಮತ್ತು ಸೇರ್ಪಡೆಗಾಗಿ ಅವರನ್ನು ಅಭಿನಂದಿಸಿದರು.  ಬಹುತೇಕ ಎಲ್ಲರೂ ವಿವಿಧ ರಾಜ್ಯ ಸರ್ಕಾರಗಳಲ್ಲಿ 20 ವರ್ಷಗಳ ಕಾಲ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಈ ಸೇವಾ ವರ್ಷಗಳಲ್ಲಿ ಅವರು ಅನೇಕ ಸವಾಲುಗಳನ್ನು ಎದುರಿಸಲು ಬಹುದು ಮತ್ತು ಕಠಿಣ ನಿರ್ಧಾರಗಳನ್ನು ತೆಗೆದುಕೊಂಡಿರಬಹುದು ಎಂದು ಅವರು ಹೇಳಿದರು.  ರಾಷ್ಟ್ರ ಮೊದಲು ಮತ್ತು ಪ್ರಜೆಗಳು ಮೊದಲು (ನೇಷನ್ ಫಸ್ಟ್ ಮತ್ತು ಪೀಪಲ್ ಫಸ್ಟ್ ) ಎಂಬ ಮನೋಭಾವದಿಂದ ಕೆಲಸ ಮಾಡುವಂತೆ ಅವರು ಅಧಿಕಾರಿಗಳನ್ನು ಒತ್ತಾಯಿಸಿದರು.  ಈಗ ಐಎಎಸ್ ಅಧಿಕಾರಿಗಳಾದ ಅವರು ಸಮಗ್ರತೆ, ಪಾರದರ್ಶಕತೆ, ಬದ್ಧತೆ ಮತ್ತು ತ್ವರಿತತೆಯ ತತ್ವಗಳಿಗೆ ಬದ್ಧವಾಗಿರಬೇಕು ಎಂದು ಅವರು ಹೇಳಿದರು.

ಹಲವು ಸಂದರ್ಭಗಳಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳುವ ಪ್ರವೃತ್ತಿ ಕಂಡುಬರುತ್ತಿದೆ ಎಂದು ರಾಷ್ಟ್ರಪತಿಯವರು ಹೇಳಿದರು.  ಒಂದೋ ಅದು ಸರಳ ಜಡತ್ವ ಅಥವಾ ನಮ್ಮ ಸುತ್ತಲಿನ ಸದಾ ಬದಲಾಗುತ್ತಿರುವ ಸನ್ನಿವೇಶದಿಂದ ಉದ್ಭವಿಸುವ ಜನರ ಸಮಸ್ಯೆಗಳ ಬಗೆಗಿನ ಅಧಿಕಾರಿಗಳ ಉದಾಸೀನತೆ ಆಗಿರಬಹುದು  ‘ಒಳಿತಿಗಾಗಿ ಬದಲಾವಣೆ ’ ಎಂಬ ಮನೋಭಾವನೆಯೊಂದಿಗೆ ನಾಗರಿಕ ಸೇವಾ ಅಧಿಕಾರಿಗಳು ಮುನ್ನಡೆಯಬೇಕು ಎಂದು ರಾಷ್ಟ್ರಪತಿಯವರು ಹೇಳಿದರು.

 ದೇಶಕ್ಕೆ ನವೀನ, ಪೂರ್ವಭಾವಿ ಮತ್ತು ಸಭ್ಯ, ವೃತ್ತಿಪರ, ಪ್ರಗತಿಶೀಲ, ಶಕ್ತಿಯುತ, ಪಾರದರ್ಶಕ, ತಂತ್ರಜ್ಞಾನ - ಶಕ್ತಗೊಂಡ ಮತ್ತು ರಚನಾತ್ಮಕ ನಾಗರಿಕ ಸೇವಕರು ಅಗತ್ಯವಿದೆ ಎಂದು ರಾಷ್ಟ್ರಪತಿಯವರು ಹೇಳಿದರು.  ಈ ನಾಯಕತ್ವದ ಶೈಲಿಗಳು ಮತ್ತು ಮೌಲ್ಯಗಳನ್ನು ಸಾಕಾರಗೊಳಿಸುವ ಆಡಳಿತಾತ್ಮಕ ನಾಯಕರನ್ನು ರಾಷ್ಟ್ರ ಮತ್ತು ರಾಜ್ಯ ಮಟ್ಟದಲ್ಲಿ ನಾಗರಿಕರಿಗೆ ಸೇವೆ ಸಲ್ಲಿಸಲು ಉತ್ತಮ ಹುದ್ದೆಗಳಲ್ಲಿ ಇರಿಸಲಾಗುತ್ತದೆ ಎಂದು ರಾಷ್ಟ್ರಪತಿಯವರು ಹೇಳಿದರು.

ರಾಷ್ಟ್ರಪತಿಯವರ ಮೂಲ ಭಾಷಣವನ್ನು ವೀಕ್ಷಿಸಲು ದಯವಿಟ್ಟು ಇಲ್ಲಿ ಕ್ಲಿಕ್ ಮಾಡಿ -

 

** *


(Release ID: 1906402) Visitor Counter : 118