ಅತಿಸಣ್ಣ, ಸಣ್ಣ, ಮತ್ತು ಮಧ್ಯಮ ಗಾತ್ರದ ಉದ್ದಿಮೆಗಳ ಸಚಿವಾಲಯ
azadi ka amrit mahotsav g20-india-2023

​​​​​​​“ಪ್ರಧಾನಮಂತ್ರಿ ವಿಶ್ವಕರ್ಮ ಕೌಶಲ್ ಸಮ್ಮಾನ್” ಯೋಜನೆ ಕುರಿತ ಬಜೆಟ್ ನಂತರದ ವೆಬಿನಾರ್ ಉದ್ದೇಶಿಸಿ ಪ್ರಧಾನಮಂತ್ರಿಯವರ ಭಾಷಣ


ಸ್ಥಳೀಯ ಕರಕುಶಲ ವಸ್ತುಗಳ ಉತ್ಪಾದನೆಯಲ್ಲಿ ಸಣ್ಣ ಕುಶಲಕರ್ಮಿಗಳ ಪಾತ್ರ ಮಹತ್ವದ್ದು. ವಿಶ‍್ವಕರ್ಮ ಯೋಜನೆಯು ವಿಶ್ವಕರ್ಮರನ್ನು ಸಬಲೀಕರಣಗೊಳಿಸುವತ್ತ ಗಮನಹರಿಸುತ್ತದೆ: ಪ್ರಧಾನಮಂತ್ರಿ

“ಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆ ಸಾಂಪ್ರದಾಯಿಕ ಕುಶಲಕರ್ಮಿಗಳು ಮತ್ತು ಶ್ರೀಮಂತ ಕರಕುಶಲ ಸಂಪ್ರದಾಯಗಳನ್ನು ಉಳಿಸುವ ಗುರಿ ಹೊಂದಿದೆ”

“ನುರಿತ ಕುಶಲಕರ್ಮಿಗಳು ಸ್ವಾವಲಂಬಿ ಭಾರತದ ನೈಜ ಚೈತನ್ಯದ ಸಂಕೇತಗಳು ಮತ್ತು ನಮ್ಮ ಸರ್ಕಾರ ಅಂತಹ ಜನರನ್ನು ನವಭಾರತದ ವಿಶ್ವಕರ್ಮರು ಎಂದು ಪರಿಗಣಿಸುತ್ತದೆ”

“ಭಾರತದ ಅಭಿವೃದ್ಧಿ ಯಾನದಲ್ಲಿ ಹಳ್ಳಿಗಳ ಪ್ರತಿಯೊಂದು ವರ್ಗವನ್ನು ಸಬಲೀಕರಣಗೊಳಿಸುವುದು ಅಗತ್ಯ”

“ರಾಷ್ಟ್ರದ ವಿಶ್ವಕರ್ಮರ ಅಗತ್ಯಗಳಿಗೆ ಅನುಗುಣವಾಗಿ ನಮ್ಮ ಕೌಶಲ್ಯ ಮೂಲಸೌಕರ್ಯ ವ್ಯವಸ್ಥೆಯನ್ನು ಮರುಹೊಂದಿಸಬೇಕಾಗಿದೆ”

“ಇಂದಿನ ವಿಶ್ವಕರ್ಮ ಸಮುದಾಯದವರು ನಾಳಿನ ಉದ್ಯಮಿಗಳು”

“ಪ್ರಧಾನಮಂತ್ರಿ ವಿಶ್ವಕರ್ಮ ಕೌಶಲ್ ಸಮ್ಮಾನ್ [ಪಿಎಂ-ವಿಕಾಸ್] ಯೋಜನೆ ಸರ್ಕಾರದ ಆಟದ ಬದಲಾವಣೆಯ ಉಪಕ್ರಮವಾಗಿದ್ದು, ಇದುವರೆಗೆ ಯಾವುದೇ ಉದ್ದೇಶಿತ ಭಾಗವಾಗಿರದ ಸ್ಥಳೀಯ ಸಾಂಪ್ರದಾಯಿಕ ಕರಕುಶಲ ಮತ್ತು ಕುಶಲಕರ್ಮಿಗಳನ್ನು ಗುರುತಿಸಲು ಸಹಕಾರಿ: ಶ್ರೀ ನಾರಾಯಣ್ ರಾಣೆ   

ಈ ಯೋಜನೆ ಸ್ಥಳೀಯ ಕೈಗಾರಿಕೆಗಳಿಗೆ ಬೆಂಬಲ ನೀಡಲಿದೆ ಮತ್ತು ಹಣಕಾಸು ಒಳಗೊಳ್ಳುವಿಕೆಗೆ ಉತ್ತೇಜನ ಕೊಡಲಿದೆ; ಲಿಂಗ ಸಮಾನತೆ ಮತ್ತು ಸಶಕ್ತ ಹಾಗೂ ಒಳಗೊಳ್ಳುವ ಆರ್ಥಿಕತೆಯತ್ತ ಹೆಜ್ಜೆಯನ್ನು ಬಲಪಡಿಸುತ್ತದೆ: ಶ್ರೀ ರಾಣೆ

Posted On: 11 MAR 2023 7:46PM by PIB Bengaluru

“ಪ್ರಧಾನಮಂತ್ರಿ ವಿಶ್ವಕರ್ಮ ಕೌಶಲ್ ಸಮ್ಮಾನ್” ಯೋಜನೆ ಕುರಿತ ಬಜೆಟ್ ನಂತರದ ವೆಬಿನಾರ್ ಉದ್ದೇಶಿಸಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಮಾತನಾಡಿದರು. ಕರಕುಶಲ ಮತ್ತು ಕುಶಲಕರ್ಮಿಗಳಿಗೆ ಸಮಗ್ರ ಬೆಂಬಲ ಒದಗಿಸಲು ಹೊಸದಾಗಿ ಘೋಷಿಸಲಾದ ಯೋಜನೆ ಇದಾಗಿದ್ದು, ಪ್ರಧಾನಮಂತ್ರಿ ವಿಕಾಸ್ ಯೋಜನೆಯಡಿ ಇದನ್ನು ಪ್ರತ್ಯೇಕವಾಗಿ ಸಮರ್ಪಿಸಲಾಗಿದೆ.   

ವೆಬಿನಾರ್ ಉದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿಯವರು, ಎಲ್ಲಾ ಪಾಲುದಾರರು ಈ ಫಲಪ್ರದ ಚರ್ಚೆಯಲ್ಲಿ ಪಾಲ್ಗೊಂಡಿರುವುದಕ್ಕೆ ಸಂತಸ ವ್ಯಕ್ತಪಡಿಸಿದರು. ಬಜೆಟ್ ಬಗ್ಗೆ ಚರ್ಚಿಸುವ ಬದಲು ಬಜೆಟ್ ನಲ್ಲಿ ಒದಗಿಸಿರುವ ನಿಬಂಧನೆಗಳನ್ನು ಅನುಷ್ಠಾನಗೊಳಿಸುವ ಅಂಶಗಳನ್ನು ಪಾಲುದಾರರು ಚರ್ಚಿಸಿರುವುದನ್ನು ಉಲ್ಲೇಖಿಸಿದರು.  

ಇಂದಿನ ವೆಬಿನಾರ್ ಕೋಟ್ಯಂತರ ಭಾರತೀಯರ ಕೌಶಲ್ಯ ಮತ್ತು ಪರಿಣಿತರಿಗಾಗಿ ಸಮರ್ಪಣೆಗೊಂಡಿದೆ. ಭಾರತೀಯ ಕೌಶಲ್ಯ ಅಭಿಯಾನ ಮತ್ತು ಕೌಶಲ್ಯ ಉದ್ಯೋಗ ಕೇಂದ್ರಗಳಲ್ಲಿ ಕೋಟ್ಯಂತರ ಜನರಿಗೆ ಕೌಶಲ್ಯದ ಜೊತೆಗೆ ಉದ್ಯೋಗಾವಕಾಶಗಳನ್ನು ಒದಗಿಸಿರುವ ಕುರಿತು ಪ್ರಸ್ತಾಪಿಸಿದ ಪ್ರಧಾನಮಂತ್ರಿಯವರು, ಈ ನಿಟ್ಟಿನಲ್ಲಿ ನಿರ್ದಿಷ್ಟ ಮತ್ತು ಉದ್ದೇಶಿತ ವಿಧಾನದ ಅಗತ್ಯವನ್ನು ಒತ್ತಿ ಹೇಳಿದರು. ಪ್ರಧಾನಮಂತ್ರಿ ವಿಶ್ವಕರ್ಮ ಕೌಶಲ್ ಸಮ್ಮಾನ್ ಯೋಜನೆ ಅಥವಾ ಪಿಎಂ ವಿಶ್ವಕರ್ಮ ಇದೇ ಚಿಂತನೆಯ ಫಲವಾಗಿದೆ. ಯೋಜನೆಯ ಅಗತ್ಯ ಮತ್ತು ವಿಶ್ವಕರ್ಮ ಹೆಸರಿನ ಮಹತ್ವವನ್ನು ವಿವರಿಸಿದ ಪ್ರಧಾನಮಂತ್ರಿಯವರು, ಭಾರತೀಯ ತತ್ವಗಳಲ್ಲಿ ಭಗವಾನ್ ವಿಶ್ವಕರ್ಮರ ಉನ್ನತ ಸ್ಥಾನಮಾನ ಮತ್ತು ಉಪಕರಣಗಳೊಂದಿಗೆ ಕೈಯಿಂದ ಕೆಲಸ ಮಾಡುವವರಿಗೆ ಗೌರವದ ಶ‍್ರೀಮಂತ ಸಂಪ್ರದಾಯ ಇರುವ ಬಗ್ಗೆ ಮಾತನಾಡಿದರು.  

 

ಕೆಲವು ವಲಯಗಳ ಕುಶಲಕರ್ಮಿಗಳ ಬಗ್ಗೆ ಗಮನ ಸೆಳೆದ ಅವರು, ಬಡಗಿಗಳು, ಕಮ್ಮಾರರು, ಶಿಲ್ಪಿಗಳು, ಮೇಸ್ತ್ರಿಗಳು ಮತ್ತು ನಿರ್ಲಕ್ಷ್ಯಕ್ಕೊಳಗಾಗಿರುವ ಸಮಾಜದ ಅವಿಭಾಜ್ಯ ಅಂಗವಾಗಿರುವ ಅನೇಕ ವರ್ಗದ ಕುಶಲ ಕರ್ಮಿಗಳು ಬದಲಾಗಿರುವ ಕಾಲಕ್ಕೆ ತಕ್ಕಂತೆ ಹೊಂದಿಕೊಳ್ಳುತ್ತಿದ್ದಾರೆ ಎಂದರು.  

ಗಾಂಧೀಜಿಯವರ ಗ್ರಾಮ ಸ್ವರಾಜ್ಯ ಪರಿಕಲ್ಪನೆಯನ್ನು ಉಲ್ಲೇಖಿಸಿದ ಪ್ರಧಾನಮಂತ್ರಿಯವರು, ಕೃಷಿಯೊಂದಿಗೆ ಗ್ರಾಮ ಜೀವನದಲ್ಲಿ ಈ ವ್ಯಕ್ತಿಗಳ ಪಾತ್ರವನ್ನು ಪ್ರಸ್ತಾಪಿಸಿದರು. “ಭಾರತದ ಅಭಿವೃದ್ಧಿ ಯಾನದಲ್ಲಿ ಹಳ್ಳಿಗಳ ಪ್ರತಿಯೊಂದು ವರ್ಗವನ್ನು ಸಬಲೀಕರಣಗೊಳಿಸುವುದು ಅಗತ್ಯವಾಗಿದೆ” ಎಂದರು. ಪ್ರಧಾನಮಂತ್ರಿ ಸ್ವಾನಿಧಿ ಯೋಜನೆ ಮೂಲಕ ಬೀದಿ ಬದಿ ವ್ಯಾಪಾರಿಗಳಿಗೆ ದೊರೆಯುವ ಲಾಭದ ಮಾದರಿಯಲ್ಲಿ ಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆಯು ಕುಶಲಕರ್ಮಿಗಳಿಗೆ ಪ್ರಯೋಜನವಾಗಲಿದೆ ಎಂದು ಹೇಳಿದರು.  

“ರಾಷ್ಟ್ರದ ವಿಶ್ವಕರ್ಮರ ಅಗತ್ಯಗಳಿಗೆ ಅನುಗುಣವಾಗಿ ನಮ್ಮ ಕೌಶಲ್ಯ ಮೂಲಸೌಕರ್ಯ ವ್ಯವಸ್ಥೆಯನ್ನು ಮರುಹೊಂದಿಸಬೇಕಾಗಿದೆ”. ಮುದ್ರಾ ಯೋಜನೆಯ ಉದಾಹರಣೆ ನೀಡಿದ ಅವರು, ಯಾವುದೇ ಖಾತರಿಯಿಲ್ಲದೇ ಬ್ಯಾಂಕ್ ಗಳಲ್ಲಿ ಕೋಟ್ಯಂತರ ರೂಪಾಯಿ ಮೊತ್ತದ ಸಾಲ ಒದಗಿಸಲಾಗಿದೆ. ಈ ಯೋಜನೆ ನಮ್ಮ ವಿಶ್ವಕರ್ಮ ಸಮುದಾಯಕ್ಕೆ ಗರಿಷ್ಠ ಲಾಭ ಒದಗಿಸಿದೆ ಮತ್ತು ಆದ್ಯತೆಯ ಮೇರೆಗೆ ನಮ್ಮ ವಿಶ್ವಕರ್ಮ ಸ್ನೇಹಿತರು ಡಿಜಿಟಲ್ ಸಾಕ್ಷರತೆಯ ಅಭಿಯಾನವನ್ನು ಒದಗಿಸಬೇಕಾಗಿದೆ ಎಂದು ಹೇಳಿದರು.  

ಕೈಗಳಿಂದ ಉತ್ಪಾದಿಸುವ ಉತ್ಪನ್ನಗಳು ನಿರಂತರವಾಗಿ ಆಕರ್ಷಣೀಯವಾಗಿರುವುದನ್ನು ಪ್ರಸ್ತಾಪಿಸಿದ ಪ್ರಧಾನಮಂತ್ರಿಯವರು, ದೇಶದ ವಿಶ್ವಕರ್ಮರಿಗೆ ಸರ್ಕಾರ ಸಮಗ್ರ ಸಾಂಸ್ಥಿಕ ಬೆಂಬಲ ಒದಗಿಸಲಿದೆ. ಇದರಿಂದ ಸುಲಭವಾಗಿ ಸಾಲ, ಕೌಶಲ್ಯ, ತಾಂತ್ರಿಕ ಬೆಂಬಲ, ಡಿಜಿಟಲ್ ಸಬಲೀಕರಣ, ಬ್ರ್ಯಾಂಡ್ ಉತ್ತೇಜನ, ಮಾರುಕಟ್ಟೆ ಮತ್ತು ಕಚ್ಚಾ ವಸ್ತುಗಳನ್ನು ಖಚಿತಪಡಿಸುತ್ತದೆ. “ಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆ ಸಾಂಪ್ರದಾಯಿಕ ಕುಶಲಕರ್ಮಿಗಳು ಮತ್ತು ಶ್ರೀಮಂತ ಕರಕುಶಲ ಸಂಪ್ರದಾಯಗಳನ್ನು ಉಳಿಸುವ ಗುರಿ ಹೊಂದಿದೆ” ಎಂದು ಪ್ರಧಾನಮಂತ್ರಿಯವರು ಹೇಳಿದರು. “ಇಂದಿನ ವಿಶ್ವಕರ್ಮ ಸಮುದಾಯದವರು ನಾಳಿನ ಉದ್ಯಮಿಗಳಾಗುತ್ತಾರೆ. ಇದಕ್ಕಾಗಿ ಅವರ ವ್ಯವಹಾರ ಮಾದರಿಯಲ್ಲಿ ಸುಸ್ಥಿರತೆ ಅಗತ್ಯ” ಎಂದು ಹೇಳಿದರು.  

ಕುಶಲಕರ್ಮಿಗಳು ಮತ್ತು ಕರಕುಶಲ ಮೌಲ್ಯ ಸರಪಳಿಯ ಭಾಗವಾದಾಗ ಅವರನ್ನು ಇನ್ನಷ್ಟು ಬಲಪಡಿಸಬಹುದು ಮತ್ತು ಅವರಲ್ಲಿ ಅನೇಕರು ನಮ್ಮ ಎಂಎಸ್ಎಂಇ ವಲಯಕ್ಕೆ ಪೂರೈಕೆದಾರರು ಮತ್ತು ಉತ್ಪಾದಕರಾಗಬಹುದು ಎಂದು ಪ್ರಧಾನಮಂತ್ರಿವರು ಹೇಳಿದರು.

ಪಿಎಂ ವಿಕಾಸ್ ಯೋಜನೆ ಜಾರಿಗೊಳಿಸಲು ದೃಢವಾದ ನೀಲನಕ್ಷೆ ಸಿದ್ಧಪಡಿಸುವಂತೆ ಎಲ್ಲಾ ಪಾಲುದಾರರಿಗೆ ಮನವಿ ಮಾಡಿದರು. ದೇಶದ ದೂರದ ಭಾಗದ ಜನರನ್ನು ತಲುಪಲು ಸರ್ಕಾರ ಪ್ರಯತ್ನಿಸುತ್ತಿದೆ ಮತ್ತು ಅವರಲ್ಲಿ ಅನೇಕರು ಮೊದಲ ಬಾರಿಗೆ ಸರ್ಕಾರದ ಯೋಜನೆಗಳ ಲಾಭ ಪಡೆಯುತ್ತಿದ್ದಾರೆ ಎಂದು ಒತ್ತಿ ಹೇಳಿದರು. ಬಹುತೇಕ ಕರಕುಶಲ ಕರ್ಮಿಗಳು ದಲಿತರು, ಆದಿವಾಸಿಗಳು, ಹಿಂದುಳಿದ ಸಮುದಾಯದವರು ಅಥವಾ ಮಹಿಳೆಯರು ಮತ್ತು ಅವರನ್ನು ತಲುಪಲು ಮತ್ತು ಅವರಿಗೆ ಪ್ರಯೋಜನ ಒದಗಿಸಲು ಪ್ರಾಯೋಗಿಕ ಕಾರ್ಯತಂತ್ರದ ಅಗತ್ಯವಿದೆ. “ಇದಕ್ಕಾಗಿ ನಾವು ಕಾಲಮಿತಿಯ ಅಭಿಯಾನದ ಮಾದರಿಯಲ್ಲಿ ಕೆಲಸ ಮಾಡಬೇಕಾಗುತ್ತದೆ” ಎಂದು ಪ್ರಧಾನಮಂತ್ರಿಯವರು ತಮ್ಮ ಭಾಷಣವನ್ನು ಮುಕ್ತಾಯ ಮಾಡಿದರು.

ಪ್ರಧಾನಮಂತ್ರಿಯವರ ಭಾಷಣದ ನಂತರ ನಾಲ್ಕು ಸಮಾನಂತರ ಅಧಿವೇಶನಗಳು ನಡೆದವು. (i) ಡಿಜಿಟಲ್ ವಹಿವಾಟುಗಳಿಗೆ ಪ್ರೋತ್ಸಾಹ ಮತ್ತು ಸಾಮಾಜಿಕ ಭದ್ರತೆ ಸೇರಿ ಕೈಗೆಟುವ ರೀತಿಯಲ್ಲಿ ಹಣಕಾಸಿನ ಪ್ರವೇಶ, (ii) ಅತ್ಯಾಧುನಿಕ ಕೌಶಲ್ಯ ತರಬೇತಿ ಮತ್ತು ಕೈಗೆಟುವ ರೀತಿಯಲ್ಲಿ ಆಧುನಿಕ ಪರಿಕರಗಳು ಮತ್ತು ತಂತ್ರಜ್ಞಾನ, (iii) ದೇಶೀಯ ಮತ್ತು ಜಾಗತಿಕ ಮಾರುಕಟ್ಟೆಗಳಿಗೆ ಸಂಪರ್ಕದ ಬೆಂಬಲ ಹಾಗೂ (iv) ಯೋಜನೆಯ ಚೌಕಟ್ಟು, ಫಲಾನುಭವಿಗಳನ್ನು ಗುರುತಿಸುವ ಮತ್ತು ಕಾರ್ಯಕ್ರಮ ಚೌಕಟ್ಟು ಅನುಷ್ಠಾನ. ವಿವಿಧ ವಲಯಗಳಿಂದ ಪರಿಣಿತರು, ಕೇಂದ್ರ ಸಚಿವಾಲಯದ ಅಧಿಕಾರಿಗಳು ಮತ್ತು ರಾಜ್ಯ ಸರ್ಕಾರಗಳು ಹಾಗೂ ವಿವಿಧ ಬ್ಯಾಂಕ್ ಗಳು, ಇತರೆ ಹಣಕಾಸು ಸಂಸ್ಥೆಗಳು, ಖಾಸಗಿ ಸಂಘಟನೆಗಳು, ಸಂಸ್ಥೆಗಳು ಮತ್ತು ಇ – ವಾಣಿಜ್ಯ ವೇದಿಕೆಗಳ ಪ್ರತಿನಿಧಿಗಳು ಪಾಲ್ಗೊಂಡಿದ್ದರು,  

ಹಣಕಾಸು ಸಚಿವಾಲಯದ ಹಣಕಾಸು ಸೇವೆಗಳ ಇಲಾಖೆಯಿಂದ “ಡಿಜಿಟಲ್ ವಹಿವಾಟುಗಳು ಮತ್ತು ಸಾಮಾಜಿಕ ಭದ್ರತೆ ಸೇರಿದಂತೆ ಕೈಗೆಟುಕುವ ಹಣಕಾಸಿನ ಪ್ರವೇಶ” ಕುರಿತ ಮೊದಲ ಅಧಿವೇಶನದಲ್ಲಿ ಕೈಗೆಟುವ ಸಾಲದ ಪ್ರವೇಶ, ಸಾಲದ ಪ್ರಕಾರ, ಡಿಜಿಟಲ್ ವಹಿವಾಟಿಗೆ ಪ್ರೋತ್ಸಾಹ ಮತ್ತು ಸಾಮಾಜಿಕ ಭದ್ರತೆ ಮೇಲೆ ಕೇಂದ್ರೀಕರಿಸಲಾಗಿತ್ತು. ಚರ್ಚಾಗೋಷ್ಟಿಯಲ್ಲಿ ಕರಕುಶಲ ಪರಿಣಿತ ಶ್ರೀ ಧನಲಕೋಟ ರಾವ್ [ಅಕ್ಕಸಾಲಿಗ], ಶ್ರೀ ಗಣೇಶ್ ಯೋಪ್ಹೊಡೆ [ಚರ್ಮೋದ್ಯಮ ಪರಿಣಿತ] ಮತ್ತು ಶ್ರೀ ರೋಹಿತ್ ದ್ಹೈಮನ್ [ಮರಗೆಲಸ ಪರಿಣಿತ], ಚರ್ಚಾಗೋಷ್ಟಿಯಲ್ಲಿ ಇತರರೆಂದರೆ ಶ‍್ರೀ ಪ್ರವೀಣ್ ಸೋಂಕಿ [ಕಾರ್ಯದರ್ಶಿ, ಗುಡಿ ಮತ್ತು ಗ್ರಾಮೀಣ ಕೈಗಾರಿಕೆಗಳು, ಗುಜರಾತ್ ಸರ್ಕಾರ], ಶ‍್ರೀ ಸುನಿಲ್ ಮೆಹ್ತಾ [ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಇಂಡಿಯಾ ಬ್ಯಾಂಕ್ ಅಸೋಸಿಯೇಷನ್], ಶ್ರೀ ವಿ. ಸತ್ಯಾ ವೆಂಕಟ ರಾವ್ [ಉಪ ವ್ಯವಸ್ಥಾಪಕ ನಿರ್ದೇಶಕ, ಸಿಡ್ಬಿ] ಮತ್ತು ಶ್ರೀ ಗೌತಮ್ ಜೈನ್ [ವ್ಯವಸ್ಥಾಪಕ ನಿರ್ದೇಶಕರು, ವೇಇಕ್ ಕ್ರಿಡಿಟ್ ಕ್ಯಾಪಿಟಲ್ ಲಿಮಿಟೆಡ್], ವಿವಿಧ ಪಾಲುದಾರರಿಂದ ಹೊರಹೊಮ್ಮಿದ ಪ್ರಮುಖ ಸಲಹೆಗಳಲ್ಲಿ ಬಡ್ಡಿ ರಿಯಾಯಿತಿ, ಕನಿಷ್ಠ ಖಾತರಿ ಶುಲ್ಕದೊಂದಿಗೆ ಸಾಲ ಖಾತರಿ ನಿಧಿಯ ಬೆಂಬಲದೊಂದಿಗೆ ಆಧಾರರಹಿತ ಸಾಲಗಳು, ಮಹಿಳಾ ಉದ್ಯಮಿಗಳಿಗೆ ವಿಶೇಷ ನಿಬಂಧನೆಗಳು, ಡಿಜಿಟಲ್ ವಹಿವಾಟುಗಳನ್ನು ಪ್ರೋತ್ಸಾಹಿಸುವ ಪ್ರಾಮುಖ್ಯತೆ ಮತ್ತು ಪಿಂಚಣಿ ಹಾಗೂ ವಿಮೆ ಮೂಲಕ ಸಾಮಾಜಿಕ ಭದ್ರತೆ ಒದಗಿಸುವ, ಇತ್ಯಾದಿ ಸಲಹೆಗಳು ಕೇಳಿಬಂದವು.

ಕೈಗೆಟುವ ಸಾಲದ ಲಭ್ಯತೆಯ ನಿರ್ಬಂಧಗಳು, ಸಣ್ಣ ಉದ್ಯಮಿಗಳು, ಎದುರಿಸುತ್ತಿರುವ ನಿರ್ಣಾಯಕ ಸವಾಲುಗಳನ್ನು ವಿವರವಾಗಿ ಚರ್ಚಿಸಲಾಯಿತು. ಕಡಿಮೆ ಬಡ್ಡಿದರದಲ್ಲಿ ಆಧಾರವಿಲ್ಲದೇ ಸಾಲ ಒದಗಿಸುವ ಹಾಗೂ ಆರಂಭಿಕ ಸಾಲದ ಮರುಪಾವತಿ ಮೇಲೆ ಹೆಚ್ಚುವರಿ ಸಾಲ ಮತ್ತು ಸಾಲ ಪಡೆಯಲು ಕನಿಷ್ಠ ದಾಖಲಾತಿಗಳನ್ನು ಒದಗಿಸುವ ಅಗತ್ಯತೆಗಳು, ಇವು ಚರ್ಚೆಯಿಂದ ಹೊರ ಹೊಮ್ಮಿದ ಕೆಲವು ಪ್ರಮುಖ ಅಂಶಗಳಾಗಿವೆ.

“ಅತ್ಯಾಧುನಿಕ ಕೌಶಲ್ಯ ತರಬೇತಿ ಮತ್ತು ಕೈಗೆಟುವ ರೀತಿಯಲ್ಲಿ ತಂತ್ರಜ್ಞಾನ ಮತ್ತು ಪರಿಕರಗಳು” ಎರಡನೇ ಅಧಿವೇಶನವಾಗಿದ್ದು, ಕೌಶಲ್ಯಾಭಿವೃದ್ಧಿ ಮತ್ತು ಉದ್ಯಮಶೀಲತೆ ಸಚಿವಾಲಯದ ನೇತೃತ್ವದಲ್ಲಿ ಇದು ನಡೆಯಿತು. ಅತ್ಯಾಧುನಿಕ ಕೌಶಲ್ಯ ತರಬೇತಿ, ಆಧುನಿಕ ಪರಿಕರಗಳು ಮತ್ತು ತಂತ್ರಜ್ಞಾನ ಹಾಗೂ ದೇಶೀಯ ಮತ್ತು ಜಾಗತಿಕ ಮಾರುಕಟ್ಟೆಗಳ ಸಂಪರ್ಕ ವ್ಯವಸ್ಥೆಯನ್ನು ಒದಗಿಸುವ ಕುರಿತು ಚರ್ಚಿಸಲಾಯಿತು. ಗೋಷ್ಠಿಯಲ್ಲಿ ಪರಿಣಿತ ಕುಂಬಾರರು ಮತ್ತು ಮಿಟ್ಟಿಕೋಲ್ ನ ಸಂಶೋಧಕರಾದ ಪರಿಣಿತ ಕುಶಲಕರ್ಮಿ ಶ್ರೀ ಮನ್ಸುಖ್ ಭಾಯಿ ಪ್ರಜಾಪತಿ, ವಿದ್ಯುತ್ ಇಲ್ಲದೇ ಚಲಿಸಬಲ್ಲ, ಮಣ್ಣಿನ ರೆಪ್ರಿಜರೇಟರ್ ಶ್ರೀ ಶಾದಾಬ್ ಖಾನ್ [ಲ್ಯಾಕ್ ಬ್ಯಾಂಗಲ್ ತಯಾರಕ ತಜ್ಞ] ಮತ್ತು ಶ‍್ರೀ ನರೇಶ್ ವಿಶ್ವಕರ್ಮ [ಪರಿಣಿತ ಕಮ್ಮಾರ] ಇದ್ದರು. ಗೋಷ್ಠಿಯಲ್ಲಿನ ಇತರೆ ಪರಿಣಿತರೆಂದರೆ ಶ್ರೀ ಮನು ಶ್ರೀವಾತ್ಸವ್ [ಹೆಚ್ಚುವರಿ ಮುಖ್ಯಕಾರ್ಯದರ್ಶಿ, ಮಧ್ಯಪ್ರದೇಶ ಸರ್ಕಾರ], ಶ‍್ರೀ ರಾಜೀವ್ ಸೆಕ್ಸೇನಾ [ಜಂಟಿ ಕಾರ್ಯದರ್ಶಿ, ಜವಳಿ ಸಚಿವಾಲಯ] ಮತ್ತು ಶ್ರೀ ಅನಿಲ್ ಕುಮಾರ್ ಪಿಪಲ್ [ಹಿರಿಯ ನಿರ್ದೇಶಕರು, ಮೇತ್ಯ] ಹಾಜರಿದ್ದರು. ಅಧಿವೇಶದಲ್ಲಿ ಕುಶಲಕರ್ಮಿಗಳಿಗೆ ತರಬೇತಿ ನೀಡಲು ಪರಿಣಿತರನ್ನು ಬಳಸಿಕೊಳ್ಳುವ ಮತ್ತು ಅತ್ಯಾಧುನಿಕ ತಂತ್ರಜ್ಞಾನದ ಪರಿಕರಗಳ ಕಿಟ್ ಗಳು ಹಾಗೂ ಯಂತ್ರೋಪಕರಣಗಳನ್ನು ಬಳಸುವ, ಔದ್ಯೋಗಿಕ ಆರೋಗ್ಯ ಮತ್ತು ಸುರಕ್ಷತೆಯಂತಹ ಸಮಸ್ಯೆಗಳನ್ನು ಪರಿಹರಿಸುವ ಹಾಗೂ ಕಚ್ಚಾ ವಸ್ತುಗಳ ಬ್ಯಾಂಕ್ ಗಳ ಸ್ಥಾಪನೆ ಬಗ್ಗೆ ಚರ್ಚಿಸಲಾಗಿದೆ. ಭಾಗವಹಿಸಿದವರು ಕೌಶಲ್ಯ ತರಬೇತಿಗಳಿಗೆ ಹಾಜರಾಗುವಾಗುವ ಕುಶಲಕರ್ಮಿಗಳಿಗೆ ವೇತನ ಪರಿಹಾರ ಒದಗಿಸುವ ಮತ್ತು ಇತರೆ ಸಚಿವಾಲಯ, ಇಲಾಖೆಗಳಲ್ಲಿ ಅಸ್ತಿತ್ವದಲ್ಲಿರುವ ಯೋಜನೆಗಳೊಂದಿಗೆ ಪಿಎಂ – ವಿಕಾಸ್ ಯೋಜನೆ ಸಂಯೋಜಿಸಿ ಜಾರಿ ಮಾಡುವ ಕುರಿತು ಚರ್ಚಿಸಿದರು.    

“ದೇಶೀಯ ಮತ್ತು ಜಾಗತಿಕ ಮಾರುಕಟ್ಟೆಗಳಿಗೆ ಸಂಪರ್ಕದ ಬೆಂಬಲ” ಕುರಿತ ಮೂರನೇ ಅಧಿವೇಶನವನ್ನು ಜವಳಿ ಸಚಿವಾಲಯ ಆಯೋಜಿಸಿತ್ತು. ಅಧಿವೇಶನದಲ್ಲಿ ಕುಶಲಕರ್ಮಿಗಳು, ಹಿಂದುಳಿದ ಮತ್ತು ಮುಂದುವರೆದ ಸಂಪರ್ಕ, ಅವರ ಉತ್ಪನ್ನಗಳ  ಪ್ರಮಾಣೀಕರಣ ಮತ್ತು ಪ್ಯಾಕೇಜಿಂಗ್ ಮತ್ತು ಅವರ ಮಾರುಕಟ್ಟೆ ಮಾರ್ಗಗಳನ್ನು ಸುಧಾರಿಸುವ ಕುರಿತು ಚರ್ಚೆ ನಡೆಯಿತು. ಗೋಷ್ಠಿಯಲ್ಲಿ ಶ್ರೀ ಶುಭಂ ಸತ್ಪುತೆ [ಚರ್ಮೋದ್ಯಮ ತಜ್ಞರು], ಶ‍್ರೀ ಬಿಹಾರಿ ಲಾಲ್ ಪ್ರಜಾಪತಿ [ಮಡಿಕೆಗಳ ರಫ್ತುದಾರರು] ಮತ್ತು ಶ‍್ರೀ ಎಂ. ಮಣಿಕಂಠನ್ [ಮರಗೆಲಸ ತಜ್ಞರು] ಭಾಗವಹಿಸಿದ್ದರು. ಇತರೆ ಪರಿಣಿತರೆಂದರೆ ಶ‍್ರೀ ಅಭಿಶೇಕ್ ಚಂದ್ರ [ವಿಶೇಷ ಕಾರ್ಯದರ್ಶಿ, ತ್ರಿಪುರ ಸರ್ಕಾರ], ಶ‍್ರೀ ಇರ್ಫಾನ್ ಆಲಂ [ನಿರ್ದೇಶಕರು, ಖಾದಿ ಇಂಡಿಯಾ ಪೋರ್ಟಲ್], ಶ್ರೀಮತಿ ಪ್ರಾಚಿ ಭುಚರ್ [ಮೀಶೋ ಇ ವಾಣಿಜ್ಯ ವೇದಿಕೆ], ಶ‍್ರೀ ಗೋಪಾಲಕೃಷ್ಣ [ಅಧ್ಯಕ್ಷರು. ಎಚ್ಇಪಿಸಿ] ಮತ್ತು ಶ್ರೀ ರಾಜ್ ಕುಮಾರ್ ಮೆಲ್ಹೋತ್ರಾ [ಅಧ್ಯಕ್ಷರು, ಇಪಿಸಿಎಚ್]. ಅಧಿವೇಶನದಲ್ಲಿ ಮಾರುಕಟ್ಟೆ ಸಂಸ್ಥೆ ಸ್ಥಾಪನೆ/ಮಾರುಕಟ್ಟೆ ಚಟುವಟಿಕೆ ಗಟಕಗಳಿಗೆ ಉತ್ತೇಜನ, ಪ್ಯಾಕೇಜಿಂಗ್, ಜಾಗತಿಕ ಮಾರುಕಟ್ಟೆ ಸಂಪರ್ಕಗಳ ಸುಧಾರಣೆ, ಇ-ವಾಣಿಜ್ಯ ವೇದಿಕೆಯನ್ನು ನಿರ್ಮಿಸುವುದು ಸೇರಿದಂತೆ ಹಲವು ಹಲವಾರು ಮೌಲ್ಯಯುತ ಸಲಹೆಗಳು ಕೇಳಿ ಬಂದವು.

‘’ಯೋಜನೆಯ ರಚನೆ ಮತ್ತು ಅನುಷ್ಠಾನದ ಚೌಕಟ್ಟು” ನಾಲ್ಕನೇ ಅಧಿವೇಶನದ ವಿಷಯವಾಗಿದ್ದು, ಎಂಎಸ್ಎಂಇ ಸಚಿವಾಲಯದ ನೇತೃತ್ವದಲ್ಲಿ ಇದು ನಡೆಯಿತು. ಪ್ರಾಥಮಿಕವಾಗಿ ಯೋಜನೆಯ ಅನುಷ್ಠಾನದ ಚೌಕಟ್ಟು, ಪಾಲುದಾರರ ಪಾತ್ರ, ಬಡ್ಡಿದರ ಖಾತರಿ, ಇತರೆ ಯೋಜನೆಗಳೊಂದಿಗೆ ಸಂಯೋಜನೆಗೊಳ್ಳುವ, ಫಲಾನುಭವಿಗಳನ್ನು ಗುರುತಿಸುವ ಕಾರ್ಯವಿಧಾನಗಳ ಮೇಲೆ ಕೇಂದ್ರೀಕರಿಸಲಾಗಿತ್ತು.  ಗೋಷ್ಠಿಯಲ್ಲಿ ಪದ್ಮಶ್ರೀ ಶ‍್ರೀ ವಿ.ಕೆ. ಮುನಿಸ್ವಾಮಿ [ಪರಿಣಿತ ಕುಂಬಾರಿಕೆ ಹಾಗೂ ಟೆರಾಕೋಟ ಕಲಾವಿದರು], ಶ್ರೀ ವಿಶ‍್ವನಾಥನ್ ಆಚಾರ್ಯ [ನಾವೀನ್ಯತೆ ಮತ್ತು ಸಾಂಪ್ರದಾಯಿಕ ಕರಕುಶಲ ಸಮನ್ವಯಕಾರರು] ಮತ್ತು ಶ‍್ರೀಮತಿ ಕೇವಿಸೆದೆನ್ಯೋ ಮಾರ್ಗರೇಟ್ ಝಿನ್ಯು [ರಫ್ತು ವಿನ್ಯಾಸಕಾರರು]. ಇತರರೆಂದರೆ ಶ‍್ರೀ ಅಮಿತ್ ಮೋಹನ್ ಪ್ರಸಾದ್ [ಹೆಚ್ಚುವರಿ ಮುಖ‍್ಯಕಾರ್ಯದರ್ಶಿ, ಉತ್ತರ ಪ್ರದೇಶ]. ಶ್ರೀಮತಿ ಮುದಿತ ಮಿಶ‍್ರಾ [ಜವಳಿ ಸಚಿವಾಲಯದ ಕರಕುಶಲ ಇಲಾಖೆಯ ಹೆಚ್ಚುವರಿ ಆಯುಕ್ತರು], ಶ್ರೀ ಮುಖೇಶ್ ಕುಮಾರ್ ಬನ್ಸಾಲ್ [ಜಂಟಿ ಕಾರ್ಯದರ್ಶಿ, ಡಿಎಫ್ಎಸ್], ಶ‍್ರೀ ಕೃಷ್ಣ ಕುಮಾರ್ ದ್ವಿವೇದಿ [ಜಂಟಿ ಕಾರ್ಯದರ್ಶಿ – ಸಿವಿಒ, ಎಂಎಸ್ ಡಿಇ], ಶ್ರೀ ವಿನಿತ್ ಕುಮಾರ್ [ಮುಖ್ಯ ಕಾರ್ಯನಿರ್ವಹಣಾಧಿಕಾರಿ -ಕೆವಿಐಸಿ] ಮತ್ತು ಶ‍್ರೀಮತಿ ಶಾಲಿನಿ ಪಾಂಡೆ [ನಿರ್ದೇಶಕರು, ಎಂಎಚ್ ಯುಎ]. ಅಧಿವೇಶನದಲ್ಲಿ ಫಲಾನುಭವಿಗಳನ್ನು ಗುರುತಿಸುವ, ಸಾಲ ಬೆಂಬಲ, ಡಿಜಿಟಲ್ ವಹಿವಾಟುಗಳಿಗೆ ಪ್ರೋತ್ಸಾಹ, ಸಾಮಾಜಿಕ ಭದ್ರತೆಯ ಮಹತ್ವ, ಕೌಶಲ್ಯ ತರಬೇತಿ, ಕೈಗೆಟುವ ರೀತಿಯಲ್ಲಿ ಪರಿಕರಗಳು ಮತ್ತು ತಂತ್ರಜ್ಞಾನ ಒದಗಿಸುವ, ಮಾರುಕಟ್ಟೆ, ಸಾಗಣೆ ವ್ಯವಸ್ಥೆಯ ಬೆಂಬಲ, ಮೂಲ ಚೌಕಟ್ಟಿನ ಅನುಷ್ಠಾನ, ರಾಜ್ಯ/ಕೇಂದ್ರಾಡಳಿತ ಪ್ರದೇಶಗಳು/ರಾಜ್ಯ ಸರ್ಕಾರಗಳ ಇಲಾಖೆಗಳು/ಸಂಸ್ಥೆಗಳ ಪಾತ್ರ, ಯೋಜನೆಯ ಚೌಕಟ್ಟು ವ್ಯವಸ್ಥೆಯ ಮೇಲೆ ನಿಗಾ ವಹಿಸುವ ಹಾಗೂ ಎಂಐಎಸ್ ವ್ಯವಸ್ಥೆ ಬಗ್ಗೆ ಚರ್ಚೆ ನಡೆಸಲಾಗಿದೆ.

ನಂತರ ಸಮಾರೋಪ ಸಮಾರಂಭ ನಡೆದಿದ್ದು, ಜವಳಿ ಸಚಿವಾಲಯದ ಕಾರ್ಯದರ್ಶಿ ಶ‍್ರೀ ರಚನಾ ಶಾ ಸಹ ಅಧ್ಯಕ್ಷತೆ ವಹಿಸಿದ್ದರು. ಶ‍್ರೀ ಬಿ.ಬಿ. ಸ್ವೈನ್, ಕಾರ್ಯದರ್ಶಿ [ಎಂಎಸ್ಎಂಇ], ಅಧಿವೇಶವನ್ನು ಡಾ. ರಾಜನೀಶ್, ಎ,ಎಸ್ ಮತ್ತು ಡಿಸಿ [ಎಂಎಸ್ಎಂಇ] ಅವರು ನಿರೂಪಣೆ ಮಾಡಿದರು. ಶ್ರೀ ನೀಲಾಂಭುಜ್ ಶರ್ಮಾ [ಹಿರಿಯ ಆರ್ಥಿಕ ಸಲಹೆಗಾರರು, ಕೌಶಲ್ಯಾಭಿವೃದ್ಧಿ ಮತ್ತು ಉದ್ಯಮಶೀಲತೆ ಸಚಿವಾಲಯ], ಶ‍್ರಿಮತಿ ಶುಬ್ರಾ [ವ್ಯಾಪಾರ ಸಲಹೆಗಾರರು ಮತ್ತು ಡಿಸಿ, ಕೈಮಗ್ಗ ಮತ್ತು ಕರಕುಶಲ, ಜವಳಿ ಸಚಿವಾಲಯ] ಮತ್ತು ಶ‍್ರೀ ಮುಖೇಶ್ ಕುಮಾರ್ ಬನ್ಸಾಲ್, ಜಂಟಿ ಕಾರ್ಯದರ್ಶಿ [ಹಣಕಾಸು ಸೇವೆಗಳ ಇಲಾಖೆ, ಹಣಕಾಸು ಸಚಿವಾಲಯ]. ಅಧಿವೇಶನಗಳಲ್ಲಿ ಪಾಲ್ಗೊಂಡಿದ್ದವರು ಚರ್ಚೆಗಳಿಂದ ಹೊರಹೊಮ್ಮಿದ ಅಂಶಗಳನ್ನು ಸಂಕ್ಷಿಪ್ತವಾಗಿ ವಿವರಿಸಿದರು. ಶ್ರೀ ಬಿ.ಬಿ. ಸ್ವೈನ್, ಕಾರ್ಯದರ್ಶಿ [ಎಂಎಸ್ಎಂಇ] ಅವರು ಸರ್ಕಾರದ ಬದ್ಧತೆಯನ್ನು ಸಾರುವ ಉಪಕ್ರಮದ ಪ್ರಾಮುಖ್ಯತೆಯ ಬಗ್ಗೆ सबका साथ सबका विकास सबका विश्वास और सबका प्रयास ಹೀಗೆ ಒತ್ತಿ ಹೇಳಿದರು.

ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಎಂಎಸ್ಎಂಇ ಸಚಿವ ಶ್ರೀ ನಾರಾಯಣ ರಾಣೆ, ಅಮೃತ ಕಾಲದತ್ತ ಸಾಗಲು ನಮಗೆ ಪ್ರಧಾನಮಂತ್ರಿಯವರು  ಮಾರ್ಗದರ್ಶನ ಮತ್ತು ಆಲೋಚನೆಗಳ ಪ್ರೇರಕ ಸಂದೇಶ ನೀಡಿದ್ದಾರೆ. ವೆಬಿನಾರ್ ನಲ್ಲಿ ಪಾಲ್ಗೊಂಡ ಕರಕುಶಲಕರ್ಮಿಗಳು ಮತ್ತು ಕುಶಲಕರ್ಮಿಗಳು ಸೇರಿದಂತೆ ಪಾಲ್ಗೊಂಡ ಎಲ್ಲರಿಗೂ ಧನ್ಯವಾದ ಸಲ್ಲಿಸಿದರು. ಯೋಜನೆಯ ರಚನೆಯನ್ನು ರೂಪಿಸಲು ಸಲಹೆಗಳು ಮತ್ತು ಆಲೋಚನೆಗಳನ್ನು ನೀಡಿದರು. ಪ್ರಧಾನಮಂತ್ರಿ ವಿಶ್ವಕರ್ಮ ಕೌಶಲ್ ಸಮ್ಮಾನ್ [ಪಿಎಂ ವಿಕಾಸ್] ಯೋಜನೆಯನ್ನು 2023 ರ ಬಜೆಟ್ ನಲ್ಲಿ ಘೋಷಿಸಲಾಗಿದ್ದು, “ಪ್ರಧಾನಮಂತ್ರಿ ವಿಶ್ವಕರ್ಮ ಕೌಶಲ್ ಸಮ್ಮಾನ್ [ಪಿಎಂ-ವಿಕಾಸ್] ಯೋಜನೆ ಸರ್ಕಾರದ ಆಟದ ಬದಲಾವಣೆಯ ಉಪಕ್ರಮವಾಗಿದ್ದು, ಇದುವರೆಗೆ ಯಾವುದೇ ಉದ್ದೇಶಿತ ಭಾಗವಾಗಿರದ ಸ್ಥಳೀಯ ಸಾಂಪ್ರದಾಯಿಕ ಕರಕುಶಲ ಮತ್ತು ಕುಶಲಕರ್ಮಿಗಳನ್ನು ಗುರುತಿಸಲು ಸಹಕಾರಿಯಾಗಲಿದೆ. ಈ ಯೋಜನೆ ಸ್ಥಳೀಯ ಕೈಗಾರಿಕೆಗಳಿಗೆ ಬೆಂಬಲ ನೀಡಲಿದೆ ಮತ್ತು ಹಣಕಾಸು ಒಳಗೊಳ್ಳುವಿಕೆಗೆ ಉತ್ತೇಜನ ಕೊಡಲಿದೆ, ಲಿಂಗ ಸಮಾನತೆ ಮತ್ತು ಸಶಕ್ತ ಹಾಗೂ ಒಳಗೊಳ್ಳುವ ಆರ್ಥಿಕತೆಯತ್ತ ಹೆಜ್ಜೆಯನ್ನು ಬಲಪಡಿಸುತ್ತದೆ. ಎಲ್ಲಾ ಪಾಲುದಾರರಿಂದ ಸ್ವೀಕರಿಸಿದ ಸಲಹೆಗಳನ್ನು ಎಂಎಸ್ಎಂಇ ಸಚಿವಾಲಯದ ಅಧಿಕಾರಿಗಳು ಪರಿಣಾಮಕಾರಿಗೊಳಿಸಲು ಮತ್ತಷ್ಟು ಚರ್ಚಿಸುತ್ತಾರೆ ಮತ್ತು ಕಾಲಮಿತಿಯಲ್ಲಿ ಯೋಜನೆಯನ್ನು ವಿನ್ಯಾಸಗೊಳಿಸಲಿದ್ದಾರೆ ಮತ್ತು ಪಿಎಂ-ವಿಕಾಸ ಯೋಜನೆ ಯೋಜನೆಯನ್ನು ಜಾರಿಗೊಳಿಸಲಿದ್ದಾರೆ ಎಂದರು.   

ಸಮಾರೋಪ ಸಮಾರಂಭದಲ್ಲಿ ಜವಳಿ ಸಚಿವ ಶ್ರೀ ಪಿಯೂಶ್ ಗೋಯಲ್ ಮಾತನಾಡಿದರು. ಬಜೆಟ್ ನಂತರದ ವೆಬಿನಾರ್ ಗಳನ್ನು ಸರ್ಕಾರ ಆಯೋಜಿಸುತ್ತಿದ್ದು, ಇದರಿಂದ ನೀತಿ ನಿರೂಪಣೆಯಲ್ಲಿ ಮೌಲ್ಯವರ್ಧನೆಯಾಗಲಿದೆ. ಇತರೆ ಸಚಿವಾಲಯ/ಇಲಾಖೆಗಳಲ್ಲಿ ಅಸ್ಥಿತ್ವದಲ್ಲಿರುವ ಯೋಜನೆಗಳೊಂದಿಗೆ ಪ್ರಧಾನಮಂತ್ರಿ ವಿಕಾಸ್ ಯೋಜನೆಯ ಸಂಯೋಜನೆಯ ಅಗತ್ಯದ ಬಗ್ಗೆ ಒತ್ತಿ ಹೇಳಿದರು. ಈ ಯೋಜನೆಯಡಿ ಗೋದಾಮುಗಳ ಮಹತ್ವದ ಬಗ್ಗೆಯೂ ಪ್ರಸ್ತಾಪಿಸಿದರು. ಅಧಿವೇಶದಲ್ಲಿ ಎಂಎಸ್ಎಂಇ ಖಾತೆ ರಾಜ್ಯ ಸಚಿವ ಶ್ರೀ ಬಾನು ಪ್ರತಾಪ್ ಸಿಂಗ್ ಮತ್ತು ಜವಳಿ ಖಾತೆ ರಾಜ್ಯ ಸಚಿವರಾದ ಶ್ರೀಮತಿ ದರ್ಶನ ವಿಕ್ರಮ ಜರ್ದೋಶ್ ಅವರು ಸಾಕ್ಷಿಯಾದರು.   

******



(Release ID: 1906168) Visitor Counter : 192


Read this release in: Manipuri , English , Urdu , Hindi