ಯುವಜನ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯ
azadi ka amrit mahotsav

​​​​​​​ವೈ20 ಸಮಾಲೋಚನಾ ಸಭೆ ಮತ್ತು ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಸಂದರ್ಭದಲ್ಲಿ ಮೊಬೈಲ್ ನಲ್ಲಿ ಚಲನಚಿತ್ರ ತಯಾರಿ ಕುರಿತು ಎರಡು ದಿನಗಳ ಕಾರ್ಯಾಗಾರ ನಡೆಯಿತು


​​​​​​​25 ಮಂದಿ ಗ್ರಾಮೀಣ ಯುವತಿಯರಿಗೆ ಚಲನಚಿತ್ರಗಳನ್ನು ನಿರ್ಮಿಸುವ ಕಲೆಯ ಕುರಿತು ಮಾರ್ಗದರ್ಶನ ನೀಡಲು ಎಸ್.ಐ.ಎಂ.ಸಿ , ಎನ್..ಎಫ್.‌ ಡಿ. ಸಿ. ಮತ್ತು ಪಿಐಬಿ ಜೊತೆಗೂಡಿ ಸಹಕರಿಸುತ್ತವೆ

Posted On: 11 MAR 2023 7:02PM by PIB Bengaluru

ಪುಣೆ, 11 ಮಾರ್ಚ್ 2023

ಪುಣೆಯ ಲಾವಲೆಯ ಸಿಂಬಯೋಸಿಸ್ ಇಂಟರ್ನ್ಯಾಷನಲ್ ಯೂನಿವರ್ಸಿಟಿಯಲ್ಲಿ ಮಾರ್ಚ್ 11, 2023 ರಂದು ಭಾರತ ಸರ್ಕಾರದ ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯದ ಸಹಯೋಗದೊಂದಿಗೆ ನಾಲ್ಕನೇ ವೈ20 ಸಮಾಲೋಚನಾ ಸಭೆ ನಡೆಯಿತು. ಉದ್ಘಾಟನಾ ಸಮಾರಂಭದಲ್ಲಿ ಕೇಂದ್ರ ಯುವ ವ್ಯವಹಾರಗಳು ಹಾಗೂ ಕ್ರೀಡೆ, ಮತ್ತು ವಾರ್ತಾ ಮತ್ತು ಪ್ರಸಾರ ಸಚಿವ  ಶ್ರೀ ಅನುರಾಗ್ ಸಿಂಗ್ ಠಾಕೂರ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.

ಸಮಾಲೋಚನಾ ಸಭೆಯ ಮತ್ತು ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಸಂದರ್ಭದಲ್ಲಿ ಕಾರ್ಯಕ್ರಮವನ್ನು ಉತ್ಸಾಹದಿಂದ ಆಚರಿಸುವ ಪ್ರಯತ್ನದೊಂದಿಗೆ, ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವಾಲಯ, ಸಿಂಬಿಯಾಸಿಸ್ ಇನ್ಸ್ಟಿಟ್ಯೂಟ್ ಆಫ್ ಮೀಡಿಯಾ ಮತ್ತು ಕಮ್ಯುನಿಕೇಷನ್, ಭಾರತ ಸರ್ಕಾರದ ವಾರ್ತಾ ಶಾಖೆ (ಪಿಐಬಿ), ಮುಂಬೈ ಮತ್ತು ರಾಷ್ಟ್ರೀಯ ಚಲನಚಿತ್ರ ಅಭಿವೃದ್ಧಿ ನಿಗಮ ಸಹಯೋಗದೊಂದಿಗೆ ಮೊಬೈಲ್ ನಲ್ಲಿ ಚಲನಚಿತ್ರ ನಿರ್ಮಾಣ ಕಾರ್ಯಾಗಾರವನ್ನು ಆಯೋಜಿಸಲಾಗಿದೆ. ಎರಡು ದಿನಗಳ ಕಾರ್ಯಾಗಾರವು ಮಾರ್ಚ್ 9 ಮತ್ತು 10, 2023 ರಂದು ಪುಣೆಯ ಲಾವಲೆಯ ಸಿಂಬಯೋಸಿಸ್ ಇನ್‌ಸ್ಟಿಟ್ಯೂಟ್ ಆಫ್ ಮೀಡಿಯಾ ಅಂಡ್ ಕಮ್ಯುನಿಕೇಷನ್ ನಲ್ಲಿ ನಡೆಯಿತು. ರಾಷ್ಟ್ರೀಯ ಚಲನಚಿತ್ರ ಅಭಿವೃದ್ಧಿ ನಿಗಮದ ನಿರ್ದೇಶಕರಾದ ಶ್ರೀ ಕೆ. ಶ್ರೀಧರ್ ಅಯ್ಯಂಗಾರ್ ಅವರು ತಮ್ಮ ರಾಷ್ಟ್ರೀಯ ಚಲನಚಿತ್ರ ಅಭಿವೃದ್ಧಿ ನಿಗಮದ ತಜ್ಞರ ತಂಡದೊಂದಿಗೆ 18-35 ವರ್ಷದೊಳಗಿನ ಇಪ್ಪತ್ತೈದು ಮಂದಿ ಮಹಿಳೆಯರಿಗೆ ಕಾರ್ಯಾಗಾರದಲ್ಲಿ ಮಾರ್ಗದರ್ಶನ ನೀಡಿದರು. ಈ ಯುವತಿಯರು ಪುಣೆಯ ಸುತ್ತಮುತ್ತಲಿನ ಗ್ರಾಮೀಣ ಪ್ರದೇಶಗಳಿಗೆ ಸೇರಿದವರು, ಸಿಂಬಯೋಸಿಸ್ ಇಂಟರ್ನ್ಯಾಷನಲ್ ಯೂನಿವರ್ಸಿಟಿ ತನ್ನ ಔಟ್ರೀಚ್ ಕಾರ್ಯಕ್ರಮದ ಅಡಿಯಲ್ಲಿ ಈ ಕಾರ್ಯಕ್ರಮವನ್ನು ಅಳವಡಿಸಿಕೊಂಡಿದೆ. ಸಿಂಬಯಾಸಿಸ್ ಸ್ಟುಡಿಯೋದಲ್ಲಿ ಕಾರ್ಯಾಗಾರವನ್ನು ನಡೆಸಲಾಯಿತು.

ಭಾಗವಹಿಸಿದ ಮಹಿಳೆಯರು ಕಾರ್ಯಾಗಾರದ ಮೊದಲ ದಿನದಂದು ಚಲನಚಿತ್ರ ನಿರ್ಮಾಣದ ಆಕರ್ಷಕ ಪ್ರಪಂಚದ ಮಾಹಿತಿಯನ್ನು ಪಡೆದರು ಮತ್ತು ಮೊಬೈಲ್ ಫೋನ್‌ಗಳಲ್ಲಿ ಚಲನಚಿತ್ರ ನಿರ್ಮಾಣ ತರಬೇತಿಯನ್ನು ಪಡೆದರು. ಎನ್..ಎಫ್.‌ ಡಿ. ಸಿ. ತಜ್ಞರು, ಚಲನಚಿತ್ರ ನಿರ್ಮಾಪಕ ಶ್ರೀ ಕೆ.ಎಸ್. ಶ್ರೀಧರ್ ಅಯ್ಯಂಗಾರ್ ಅವರು ಭಾಗವಹಿಸಿದವರಿಗೆ ಚಲನಚಿತ್ರ ತಯಾರಿಕೆಯ ಕುಶಲತೆಯ ಬಗ್ಗೆ ಅತ್ಯಾಧುನಿಕ ಸಿಂಬಯೋಸಿಸ್ ಸ್ಟುಡಿಯೋದಲ್ಲಿ ಸೈದ್ಧಾಂತಿಕ ಒಳಹರಿವು ನೀಡಿದರು. ಸಿನಿಮಾಟೋಗ್ರಫಿ, ವಿಡಿಯೋ ಎಡಿಟಿಂಗ್, ಸೌಂಡ್ ಎಡಿಟಿಂಗ್ ಮತ್ತು ಫಿಲ್ಮ್ ಪ್ರೊಡಕ್ಷನ್, ಇತರೆ ವಿಷಯಗಳ ಬಗ್ಗೆ ತರಬೇತುದಾರರು ಹೇಳಿಕೊಟ್ಟರು.  

   

ಕಾರ್ಯಾಗಾರದ ಎರಡನೇ ದಿನದಂದು ಭಾಗವಹಿಸುವವರ ವಿವಿಧ ಗುಂಪುಗಳನ್ನು ರಚಿಸಿದರು. ಪ್ರತಿ ಗುಂಪು ಸಣ್ಣ ಸಾಕ್ಷ್ಯಚಿತ್ರಕ್ಕಾಗಿ ವಿಷಯವನ್ನು ಆಯ್ಕೆಮಾಡಿತು ಎನ್..ಎಫ್.‌ ಡಿ. ಸಿ.  ತಂಡದ ಮಾರ್ಗದರ್ಶನದಲ್ಲಿ ಪ್ರತಿ ಗುಂಪು ಕೂಡಾ ಕಿರುಚಿತ್ರವನ್ನು ಚಿತ್ರೀಕರಿಸಿ ಮತ್ತು ಸಂಪಾದಿಸಿದರು. ಈ ಚಲನಚಿತ್ರಗಳನ್ನು ಮೊಬೈಲ್ ಫೋನ್‌ಗಳಲ್ಲಿ ಸಂಪಾದಿಸಲಾಗಿದೆ. ಭಾಗವಹಿಸಿದವರು ತಯಾರಿಸಿದ ಚಲನಚಿತ್ರಗಳ ಪ್ರದರ್ಶನದೊಂದಿಗೆ ಎರಡು ದಿನಗಳ ಕಾಲ ನಡೆದ ಕಾರ್ಯಾಗಾರವು ಕೊನೆಗೊಂಡಿತು. ಪ್ರತಿ ಚಿತ್ರದ ಮೇಲೆ ಎನ್..ಎಫ್.‌ ಡಿ. ಸಿ.  ತಂಡದಿಂದ ಪರಾಮರ್ಶನದ ಮಾರ್ಗದರ್ಶನಗಳನ್ನು ನೀಡಲಾಗಿದೆ. ಸಿಂಬಯಾಸಿಸ್ ಇಂಟರ್‌ನ್ಯಾಶನಲ್ (ಡೀಮ್ಡ್) ವಿಶ್ವವಿದ್ಯಾನಿಲಯದ ಕುಲಪತಿ ಡಾ. ವಿದ್ಯಾ ಯೆರವಡೇಕರ್ ಅವರು ಎಲ್ಲರಿಗೂ ಭಾಗವಹಿಸುವಿಕೆಯ ಪ್ರಮಾಣಪತ್ರಗಳನ್ನು ನೀಡಿದರು. ಡಾ. ವಿದ್ಯಾ ಅವರು ಕಾರ್ಯಾಗಾರದಲ್ಲಿ ಭಾಗವಹಿಸಿದ ಮಹಿಳೆಯರು ಕೈಗೊಂಡ ಪ್ರಯತ್ನಗಳನ್ನು ಅಭಿನಂದಿಸಿದರು ಮತ್ತು ಶ್ಲಾಘಿಸಿದರು ಮತ್ತು ಅವರುಗಳು ಈ ಕಾರ್ಯಾಗಾರದಲ್ಲಿ ಕಲಿತ ಕೌಶಲ್ಯಗಳನ್ನು ಭವಿಷ್ಯದಲ್ಲಿ ಬಳಸುತ್ತಾರೆ ಎಂದು ಭರವಸೆ ವ್ಯಕ್ತಪಡಿಸಿದರು.  

   

   

ಮಹಿಳಾ ಸಬಲೀಕರಣದ ಅರ್ಥ, ಮದುವೆಯ ಸಾಮಾಜಿಕ ಪ್ರಸ್ತುತತೆ ಮತ್ತು ಇತರವುಗಳಂತಹ ವಿವಿಧ ಮಹತ್ವಾಕಾಂಕ್ಷೆಯ ವಿಷಯಗಳನ್ನು ಚಲನಚಿತ್ರಗಳ ಮೂಲಕ ವ್ಯಕ್ತಪಡಿಸಲು ಭಾಗವಹಿಸಿದವರು ಆಯ್ಕೆ ಮಾಡಿದರು. ಎರಡು ದಿನದ ಕಾರ್ಯಾಗಾರದ ಸಂಪೂರ್ಣ ಚಟುವಟಿಕೆಯಲ್ಲಿ ಯುವತಿಯರು ಉತ್ಸಾಹದಿಂದ ಪಾಲ್ಗೊಂಡರು . ಎರಡು ದಿನಗಳ ಕಾರ್ಯಾಗಾರವು ಭಾಗವಹಿಸುವವರಿಗೆ ಸೃಜನಶೀಲತೆಯನ್ನು ಬಳಸಲು ಮತ್ತು ಚಲನಚಿತ್ರ ನಿರ್ಮಾಣದ ಜಟಿಲತೆಗಳು ಮತ್ತು ತಂತ್ರವನ್ನು ಕಲಿಯಲು ಅವಕಾಶವನ್ನು ನೀಡಿತು.

* * *


(Release ID: 1906140) Visitor Counter : 173


Read this release in: English , Urdu , Hindi , Marathi