ಗೃಹ ವ್ಯವಹಾರಗಳ ಸಚಿವಾಲಯ
azadi ka amrit mahotsav

ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಶ್ರೀ ಅಮಿತ್ ಶಾ ಅವರು ಇಂದು ಅಹಮದಾಬಾದ್ ನಗರಪಾಲಿಕೆ ಮತ್ತು ಅಹಮದಾಬಾದ್ ನಗರಾಭಿವೃದ್ಧಿ ಪ್ರಾಧಿಕಾರದ ಸುಮಾರು 154 ಕೋಟಿ ರೂಪಾಯಿಗಳ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗರ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಚಾಲನೆ ನೀಡಿದರು

 
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಭಾರತ ಸರ್ಕಾರ ಮತ್ತು ಮುಖ್ಯಮಂತ್ರಿ ಶ್ರೀ ಭೂಪೇಂದ್ರ ಪಟೇಲ್ ಅವರ ನೇತೃತ್ವದಲ್ಲಿ ಗುಜರಾತ್ ಸರ್ಕಾರವು ಗಾಂಧಿನಗರವನ್ನು ಪ್ರತಿ ಕ್ಷೇತ್ರದಲ್ಲೂ ಅಭಿವೃದ್ಧಿ ಹೊಂದಿದ ಲೋಕಸಭಾ ಕ್ಷೇತ್ರವನ್ನಾಗಿ ಮಾಡಲು ಒಟ್ಟಾಗಿ ಶ್ರಮಿಸುತ್ತಿವೆ
 
ಶ್ರೀ ಮೋದಿಯವರ ನಾಯಕತ್ವದಲ್ಲಿ, ಗುಜರಾತ್‌ನ ಡಬಲ್ ಇಂಜಿನ್ ಸರ್ಕಾರವು ಗುಜರಾತ್‌ನಲ್ಲಿ ಯಾರೂ ನಿರಾಶ್ರಿತರಾಗಿರಬಾರದು ಎಂದು ಸಂಕಲ್ಪ ಮಾಡಿದೆ
 
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಹೊಸ ಶಿಕ್ಷಣ ನೀತಿಯಲ್ಲಿ ಸ್ಮಾರ್ಟ್ ಸ್ಕೂಲ್ ಪರಿಕಲ್ಪನೆಯನ್ನು ರೂಪಿಸಿದ್ದಾರೆ, ಇದು ಪ್ರಾಥಮಿಕ ಶಿಕ್ಷಣದ ಹಂತದಲ್ಲಿಯೇ ಮಕ್ಕಳ ಪ್ರತಿಭೆಗೆ ವೇದಿಕೆಯನ್ನು ಒದಗಿಸುವ ಗುರಿಯನ್ನು ಹೊಂದಿದೆ, ಇದರಿಂದ ಅವರ ಸರ್ವತೋಮುಖ ಅಭಿವೃದ್ಧಿಯನ್ನು ಖಚಿತಪಡಿಸಿಕೊಳ್ಳಬಹುದು.
 
ಇಂದು ಮುನ್ಸಿಪಲ್ ಬೋರ್ಡ್ ಅಡಿಯಲ್ಲಿ, ಎಲ್ಲ ಶಾಲೆಗಳನ್ನು ಸ್ಮಾರ್ಟ್ ಶಾಲೆಗಳನ್ನಾಗಿ ಮಾಡಲು ಚಾಲನೆ ನೀಡಲಾಗಿದೆ ಮತ್ತು ಶೀಘ್ರದಲ್ಲೇ ಎಲ್ಲ ಮಕ್ಕಳು ಸ್ಮಾರ್ಟ್ ಶಾಲೆಗಳಲ್ಲಿ ಓದುವ ಪ್ರಯೋಜನವನ್ನು ಪಡೆಯುತ್ತಾರೆ.

Posted On: 10 MAR 2023 5:55PM by PIB Bengaluru

ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಶ್ರೀ ಅಮಿತ್ ಶಾ ಅವರು ಇಂದು ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಅಹಮದಾಬಾದ್ ನಗರಪಾಲಿಕೆ ಮತ್ತು ಅಹಮದಾಬಾದ್ ನಗರಾಭಿವೃದ್ಧಿ ಪ್ರಾಧಿಕಾರದ ಸುಮಾರು 154 ಕೋಟಿ ರೂಪಾಯಿಗಳ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದರು. ಈ ಅಭಿವೃದ್ಧಿ ಕಾರ್ಯಗಳು ಚಂದ್‌ಖೇಡಾ, ಸಾಬರಮತಿ, ಶೇಲಾ, ಥಾಲ್ತೇಜ್ ಮತ್ತು ಸರ್ಖೇಜ್‌ನ ಸ್ಮಾರ್ಟ್ ಶಾಲೆಗಳನ್ನು ಒಳಗೊಂಡಿವೆ. 62 ಲಕ್ಷ ವೆಚ್ಚದಲ್ಲಿ ಚಂದ್‌ಖೇಡಾ ಮತ್ತು ನವದಾಜ್‌ನಲ್ಲಿ ಹಿರಿಯ ನಾಗರಿಕರ ಉದ್ಯಾನ, 4.39 ಕೋಟಿ ರೂ.ವೆಚ್ಚದಲ್ಲಿ ಅಹಮದಾಬಾದ್-ವಿರಮ್‌ಗಾಮ್ ಬ್ರಾಡ್ ಗೇಜ್ ಮಾರ್ಗದ ಬಳಿ ಪಾದಚಾರಿ ಸುರಂಗ ಮಾರ್ಗ, 40 ಲಕ್ಷ ರೂ.ವೆಚ್ಚದಲ್ಲಿ 5 ಅಂಗನವಾಡಿಗಳು, ಸನತಾಲ್ ಜಂಕ್ಷನ್‌ನಲ್ಲಿ ಮೇಲ್ಸೇತುವೆ. 97 ಕೋಟಿ ರೂ.ವೆಚ್ಚದಲ್ಲಿ ನಿರ್ಮಿಸಿರುವ ಸರ್ದಾರ್ ಪಟೇಲ್ ವರ್ತುಲ ರಸ್ತೆಯ ಉದ್ಘಾಟನೆಯೂ ಇದರಲ್ಲಿ ಸೇರಿವೆ. ಈ ಸಂದರ್ಭದಲ್ಲಿ ಗುಜರಾತ್ ಮುಖ್ಯಮಂತ್ರಿ ಶ್ರೀ ಭೂಪೇಂದ್ರ ಪಟೇಲ್ ಸೇರಿದಂತೆ ಹಲವಾರು ಗಣ್ಯರು ಉಪಸ್ಥಿತರಿದ್ದರು.

https://static.pib.gov.in/WriteReadData/userfiles/image/image00110WZ.jpg

ಸ್ವರಾಜ್ಯ, ಸ್ವಧರ್ಮ ಮತ್ತು ಸ್ವಭಾಷಾ ನೆಲೆಯಲ್ಲಿ ದೇಶದಲ್ಲಿ ಸ್ವಾಭಿಮಾನಕ್ಕೆ ಹೊಸ ವ್ಯಾಖ್ಯಾನ ನೀಡಿದ ಛತ್ರಪತಿ ಶಿವಾಜಿ ಮಹಾರಾಜರ ಜನ್ಮ ದಿನಾಚರಣೆಯಾದ ಇಂದು ಅತ್ಯಂತ ಮಹತ್ವದ್ದಾಗಿದೆ ಎಂದು ಶ್ರೀ ಅಮಿತ್ ಶಾ ಹೇಳಿದರು. ಕೇವಲ 15 ವರ್ಷ ವಯಸ್ಸಿನಲ್ಲೇ ಶಿವಾಜಿ ಮಹಾರಾಜರು ಮೊಘಲ್ ದೊರೆಗಳ ಎದುರು ಬಲವಾದ ಸಂಕಲ್ಪದೊಂದಿಗೆ ಹಿಂದೂ ಸಾಮ್ರಾಜ್ಯವನ್ನು ನಿರ್ಮಿಸಿದರು ಎಂದು ಶ್ರೀ ಶಾ ಹೇಳಿದರು. ಮಹಿಳಾ ಸಬಲೀಕರಣಕ್ಕಾಗಿ ಮಹಿಳಾ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಿದ ಸಾವಿತ್ರಿಬಾಯಿ ಫುಲೆ ಅವರ ಪುಣ್ಯತಿಥಿಯೂ ಇಂದೇ ಆಗಿದೆ. ಮಹಾತ್ಮ ಜ್ಯೋತಿಬಾ ಮತ್ತು ಸಾವಿತ್ರಿಬಾಯಿ ಫುಲೆ ಇಬ್ಬರೂ ವಿವಿಧ ಮಹಿಳಾ ಸುಧಾರಣೆಗಳಿಗೆ ಶ್ರಮಿಸಿದರು ಎಂದು ಅವರು ಹೇಳಿದರು.

https://static.pib.gov.in/WriteReadData/userfiles/image/image002ERM1.jpg

ಇಂದು 154 ಕೋಟಿ ರೂ.ಗಳ ಹಲವು ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದ್ದು, ಅದರಲ್ಲಿ ಸರ್ದಾರ್ ಪಟೇಲ್ ವರ್ತುಲ ರಸ್ತೆಯ ಸನತಾಲ್ ಜಂಕ್ಷನ್‌ನಲ್ಲಿ ಸುಮಾರು 100 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿರುವ ನೂತನ ಮೇಲ್ಸೇತುವೆ ಉದ್ಘಾಟನೆ ಅತ್ಯಂತ ದೊಡ್ಡ ಕೆಲಸವಾಗಿದೆ ಎಂದು ಕೇಂದ್ರ ಗೃಹ ಹಾಗೂ ಸಹಕಾರ ಸಚಿವರು ಹೇಳಿದರು. ಸಾನಂದ್ ಜಿಐಡಿಸಿ ಮತ್ತು ಹತ್ತಿರದ ಪ್ರದೇಶದಲ್ಲಿ ತ್ವರಿತ ಕೈಗಾರಿಕಾ ಅಭಿವೃದ್ಧಿಯಿಂದಾಗಿ ಈ ಮೇಲ್ಸೇತುವೆಯ ಅಗತ್ಯವು ಹೆಚ್ಚಾಗಿದೆ ಎಂದು ಅವರು ಹೇಳಿದರು.

ಇಂದು ಶೇಲಾ ಗ್ರಾಮದಲ್ಲಿ ಒಳಚರಂಡಿಯ ಬಹಳ ಮುಖ್ಯವಾದ ಕೆಲಸ ಪೂರ್ಣಗೊಂಡಿದೆ ಎಂದು ಶ್ರೀ ಅಮಿತ್ ಶಾ ಹೇಳಿದರು. ಶುಚಿತ್ವ ಮತ್ತು ಆರೋಗ್ಯದ ದೃಷ್ಟಿಯಿಂದ ಶೇಲಾ ಜನರಿಗೆ ಇದರಿಂದ ಭಾರಿ ಅನುಕೂಲವಾಗಲಿದೆ. ಇದಲ್ಲದೇ ಮುಖ್ಯಮಂತ್ರಿ ಆವಾಸ್ ಯೋಜನೆಯಡಿ ಬಾವಲ ನಗರದಲ್ಲಿ ಇಂದು 468 ಕುಟುಂಬಗಳು ಮನೆಗಳನ್ನು ಪಡೆದಿವೆ ಎಂದರು. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಗುಜರಾತ್‌ನ ಡಬಲ್ ಇಂಜಿನ್ ಸರ್ಕಾರವು ಇಡೀ ಗುಜರಾತ್‌ನಲ್ಲಿ ಯಾರೂ ನಿರಾಶ್ರಿತರಾಗಬಾರದು ಎಂದು ಸಂಕಲ್ಪ ಮಾಡಿದೆ ಎಂದು ಅವರು ಹೇಳಿದರು. ಇಂದು ಅಹಮದಾಬಾದ್ ನಗರಪಾಲಿಕೆ ಅಡಿಯಲ್ಲಿ, ಚಂದ್‌ಖೇಡಾ, ಸಾಬರಮತಿ, ಶೇಲಾ, ಥಾಲ್ತೇಜ್ ಮತ್ತು ಸರ್ಖೇಜ್‌ನಲ್ಲಿ ಸ್ಮಾರ್ಟ್ ಶಾಲೆಗಳನ್ನು ಸಹ ಉದ್ಘಾಟಿಸಲಾಗಿದೆ ಎಂದು ಶ್ರೀ ಶಾ ಹೇಳಿದರು. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಹೊಸ ಶಿಕ್ಷಣ ನೀತಿಯಲ್ಲಿ ಸ್ಮಾರ್ಟ್ ಸ್ಕೂಲ್ ಪರಿಕಲ್ಪನೆಯನ್ನು ರೂಪಿಸಿದ್ದು, ಪ್ರಾಥಮಿಕ ಶಿಕ್ಷಣದ ಹಂತದಲ್ಲಿಯೇ ಮಕ್ಕಳ ಪ್ರತಿಭೆಗೆ ವೇದಿಕೆ ಕಲ್ಪಿಸುವುದು ಇದರ ಉದ್ದೇಶವಾಗಿದೆ. ಇದರಿಂದ ಅವರ ಸರ್ವಾಂಗೀಣ ಅಭಿವೃದ್ಧಿಯನ್ನು ಅಭಿವೃದ್ಧಿಯನ್ನು ಖಚಿತಪಡಿಸಿಕೊಳ್ಳಬಹುದು ಎಂದು ಅವರು ಹೇಳಿದರು. ಸ್ಮಾರ್ಟ್ ಶಾಲೆಗಳು ಕೇವಲ ಪರಿಕಲ್ಪನೆಯಾಗಿರದೆ ಮಕ್ಕಳ ಜೀವನದಲ್ಲಿ ಬದಲಾವಣೆ ತರುವ ಮಾರ್ಗವಾಗಿದೆ. ಈ ಶಾಲೆಗಳ ಮೂಲಕ ಮಕ್ಕಳ ಶಿಕ್ಷಣದಲ್ಲಿ ಖಂಡಿತವಾಗಿಯೂ ಗುಣಾತ್ಮಕ ಬದಲಾವಣೆಯಾಗಲಿದೆ ಎಂದು ಅವರು ಹೇಳಿದರು.

.https://static.pib.gov.in/WriteReadData/userfiles/image/image003687N.jpg


ಇಂದು ಅಹಮದಾಬಾದ್‌ ನಗರಾಭಿವೃದ್ಧಿ ಪ್ರಾಧಿಕಾರದ ಅಡಿಯಲ್ಲಿ ಚಂದ್‌ಖೇಡಾದಲ್ಲಿ ಹಿರಿಯ ನಾಗರಿಕ ಉದ್ಯಾನವನವನ್ನು ಸಹ ಉದ್ಘಾಟಿಸಲಾಗಿದೆ ಎಂದು ಅವರು ಹೇಳಿದರು. ಇದಲ್ಲದೇ ವಿರಾಮಗಾಮ್ ಬ್ರಾಡ್ ಗೇಜ್ ಮಾರ್ಗದ ಕೆಳಸೇತುವೆ ಕಾಮಗಾರಿಯೂ ಪೂರ್ಣಗೊಂಡಿದ್ದು, ಸಾರ್ವಜನಿಕರಿಗೆ ಸಂಚಾರ ದಟ್ಟಣೆಯಿಂದ ಮುಕ್ತಿ ದೊರೆಯಲಿದೆ ಎಂದು ಅವರು ತಿಳಿಸಿದರು.

ಅಹಮದಾಬಾದ್ ನಗರ ಪಾಲಿಕೆಯ ಪ್ರಾಥಮಿಕ ಶಿಕ್ಷಣ ಸಮಿತಿಯ ನೇತೃತ್ವದಲ್ಲಿ ಕಳೆದ 6 ವರ್ಷಗಳಲ್ಲಿ 459 ಪಾಲಿಕೆಯ ಶಾಲೆಗಳು ಮತ್ತು ಈ ಶಾಲೆಗಳಲ್ಲಿ ಕಲಿಯುತ್ತಿರುವ ಸುಮಾರು 1.70 ಲಕ್ಷ ಮಕ್ಕಳ ಶಿಕ್ಷಣದ ಗುಣಮಟ್ಟವನ್ನು ಸುಧಾರಿಸಲು ನಗರ ಪಾಲಿಕೆಯು ಅನೇಕ ಶ್ಲಾಘನೀಯ ಪ್ರಯತ್ನಗಳನ್ನು ಮಾಡಿದೆ ಎಂದು ಶ್ರೀ ಅಮಿತ್ ಶಾ ಹೇಳಿದರು. ಇಂದು ನಗರಪಾಲಿಕೆ ವ್ಯಾಪ್ತಿಯ ಎಲ್ಲ ಶಾಲೆಗಳನ್ನು ಸ್ಮಾರ್ಟ್ ಶಾಲೆಗಳನ್ನಾಗಿ ರೂಪಿಸಲು ಆರಂಭಿಸಿದ್ದು, ಶೀಘ್ರವೇ ಕ್ಷೇತ್ರದ ಎಲ್ಲ ಮಕ್ಕಳು ಸ್ಮಾರ್ಟ್ ಶಾಲೆಗಳಲ್ಲಿ ಓದುವ ಪ್ರಯೋಜನ ಪಡೆದುಕೊಳ್ಳಲಿದ್ದಾರೆ ಎಂದು ಅವರು ಹೇಳಿದರು.

****


(Release ID: 1905935) Visitor Counter : 149


Read this release in: English , Urdu , Telugu