ವಸತಿ ಮತ್ತು ನಗರ ಬಡತನ ನಿರ್ಮೂಲನೆ ಸಚಿವಾಲಯ
azadi ka amrit mahotsav

ರಾಷ್ಟ್ರೀಯ ಯುವ ಸಮಾವೇಶ 2023 (13 ಮತ್ತು 14 ಮಾರ್ಚ್ 2023)

Posted On: 10 MAR 2023 1:29PM by PIB Bengaluru
• ಯುವ ಮನಸ್ಸುಗಳನ್ನು ಒಟ್ಟುಗೂಡಿಸುವ ಭಾರತದ ಅತಿದೊಡ್ಡ ಯುವ ಶೃಂಗಸಭೆ
• ಭಾರತೀಯ ನಗರಗಳಲ್ಲಿನ ಯುವಕರು ತಾವು ವಾಸಿಸಲು ಹಾಗೂ ಅಭಿವೃದ್ಧಿ ಹೊಂದಲು ನಗರಗಳನ್ನು ಉತ್ತಮ ಸ್ಥಳವನ್ನಾಗಿ ಮಾಡಲು ಅವರು ಹೇಗೆ ಸಹಾಯ ಮಾಡಬಲ್ಲರು ಎಂಬ ಬಗ್ಗೆ ಚರ್ಚೆ

ಸ್ಮಾರ್ಟ್ ಸಿಟಿ ಮಿಷನ್, ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ, ಯುವ ವ್ಯವಹಾರಗಳ ಇಲಾಖೆ ಮತ್ತು ರಾಷ್ಟ್ರೀಯ ನಗರ ವ್ಯವಹಾರಗಳ ಸಂಸ್ಥೆ (ಎನ್ಐಯುಎ) ಭಾರತದ ಅತಿದೊಡ್ಡ ಯುವ ಶೃಂಗಸಭೆಯಾದ - 'ರಾಷ್ಟ್ರೀಯ ಯುವ ಸಮಾವೇಶ'ವನ್ನು ಆಯೋಜಿಸಿದೆ. ಈ ಕಾರ್ಯಕ್ರಮವನ್ನು 2023ರಲ್ಲಿ ಭಾರತದ ಜಿ-20 ಪ್ರೆಸಿಡೆನ್ಸಿಯ ಆಶ್ರಯದಲ್ಲಿ ಆಯೋಜಿಸಲಾಗಿದ್ದು, ಅರ್ಬನ್-20 ಮತ್ತು ಯೂತ್-20 ಎಂಗೇಜ್ಮೆಂಟ್ ಗುಂಪುಗಳೊಂದಿಗೆ ಸಂಯೋಜಿಸಲಾಗಿದೆ. ನವದೆಹಲಿಯ ವಿಜ್ಞಾನ ಭವನದಲ್ಲಿ 2023ರ ಮಾರ್ಚ್ 13 ಮತ್ತು 14ರಂದು ನಡೆಯಲಿರುವ ಈ 2 ದಿನಗಳ ಶೃಂಗಸಭೆಯಲ್ಲಿ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ ಮತ್ತು ಯುವ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯ ಎರಡೂ ಕೈಜೋಡಿಸುತ್ತಿವೆ. ಇದು ಅರ್ಬನ್-20 ಮತ್ತು ಯೂತ್-20ರ ಆದ್ಯತೆಯ ಪ್ರದೇಶಗಳ ಬಗ್ಗೆ ಚರ್ಚಿಸಲು ಯುವ ಮನಸ್ಸುಗಳನ್ನು ಒಟ್ಟುಗೂಡಿಸಿ ಭವಿಷ್ಯದ ಉಜ್ವಲ ನಾಯಕರನ್ನು ಹುಟ್ಟುಹಾಕಲಿದೆ.

ಗುಜರಾತ್ ನ ಅಹ್ಮದಾಬಾದ್ ನಲ್ಲಿ ನಡೆದ ಅರ್ಬನ್-20ರ ಆರಂಭಿಕ ಸಮಾವೇಶದಲ್ಲಿ ಮಾತನಾಡಿದ ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳು ಹಾಗು ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಖಾತೆ ಸಚಿವ ಶ್ರೀ ಹರ್ದೀಪ್ ಎಸ್ ಪುರಿಯವರು, "ಅರ್ಬನ್-20 ಜಾಗತಿಕ ಸಮಾನಮನಸ್ಕ ಕಲಿಕೆಗೆ ಉತ್ತಮ ಅವಕಾಶವೆಂದು ನೋಡಬೇಕು" ಎಂದು ಹೇಳಿದರು. ಈ ಕಾರ್ಯಕ್ರಮದಲ್ಲಿ ಕಲಿಕೆಯ ತೀವ್ರತೆಯ ಮಹತ್ವಾಕಾಂಕ್ಷೆಯನ್ನು ಉಳಿಸಿಕೊಂಡಂತಹ ದೇಶಾದ್ಯಂತದ ಯುವಕರು, ರಾಷ್ಟ್ರೀಯ ನಾಯಕರು, ತಜ್ಞರು, ವಿದ್ಯಾರ್ಥಿ ಸಂಶೋಧಕರು ಮತ್ತು ಆವಿಷ್ಕಾರಕರು ಒಗ್ಗೂಡಿ ಕೆಲವು ಕಾಳಜಿಗಳನ್ನು ಚರ್ಚಿಸಿ, ನಗರಗಳು ಮತ್ತು ಸಮುದಾಯಗಳನ್ನು ವಾಸಿಸಲು ಯೋಗ್ಯ ಮತ್ತು ಅಭಿವೃದ್ಧಿ ಹೊಂದಲು ಉತ್ತಮ ಸ್ಥಳವನ್ನಾಗಿ ಮಾಡುವುದು ಹೇಗೆ ಎಂಬುದರ ಬಗ್ಗೆ ಪರಸ್ಪರ ಚರ್ಚಿಸಲಿದ್ದಾರೆ.

ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯದ ಕಾರ್ಯದರ್ಶಿ ಶ್ರೀ ಮನೋಜ್ ಜೋಶಿಯವರು, ನಮ್ಮ ನಗರಗಳ ಯೋಜನೆ, ಹಣಕಾಸು ಮತ್ತು ಆಡಳಿತ, ಜೊತೆಗೆ ಸುಸ್ಥಿರತೆ ಮತ್ತು ಜನಸಂಖ್ಯಾ ಬದಲಾವಣೆಗಳ ಮಹತ್ವವನ್ನು ಒತ್ತಿ ಹೇಳಿದರು. ನಮ್ಮ ಭಾರತದಲ್ಲಿ ಪ್ರಸ್ತುತ ಶೇ.35ರಷ್ಟು ನಗರ ಪ್ರದೇಶಗಳಿದ್ದು, 2047ರ ವೇಳೆಗೆ ಇದು ಶೇ.53ಕ್ಕೆ ತಲುಪುವ ನಿರೀಕ್ಷೆಯಿದೆ. ಅಂತೆಯೇ, ನಮ್ಮ ನಗರ ಜನಸಂಖ್ಯೆಯು ದ್ವಿಗುಣಗೊಳ್ಳಲಿದೆ, ಸುಮಾರು 400 ಮಿಲಿಯನ್ ಗೂ ಹೆಚ್ಚು ಸಂಖ್ಯೆಯ ಜನರು ನಮ್ಮ ನಗರಗಳಲ್ಲಿ ವಾಸಿಸಲಿದ್ದಾರೆ. ಆದ್ದರಿಂದ, ನಮಗೆ ನಗರೀಕರಣದ ಭವಿಷ್ಯ ಮತ್ತು ಭಾರತದ ಸಮೃದ್ಧಿಯ ಭವಿಷ್ಯವು ನಗರಗಳು ಏನಾಗುತ್ತವೆ ಮತ್ತು ಈ ನಗರೀಕರಣ ಪ್ರಕ್ರಿಯೆಯನ್ನು ನಾವು ಎಷ್ಟು ಚೆನ್ನಾಗಿ ನಿರ್ವಹಿಸುತ್ತೇವೆ ಎಂಬುದರ ಮೇಲೆ ಅವಲಂಬಿತವಾಗಿದೆ. ಅದು ನಗರಗಳ ವಿಸ್ತರಣೆ ಅಥವಾ ಸುವ್ಯವಸ್ಥಿತ ನಗರಕ್ಕೆ ಕಾರಣವಾಗುತ್ತದೆ" ಎಂದು ಅವರು ಗುಜರಾತ್ ನ ಅಹಮದಾಬಾದ್ ನಲ್ಲಿ ನಡೆದ ಅರ್ಬನ್-20ರ ಪ್ರಾರಂಭಿಕ ಸಭೆಯಲ್ಲಿ ಹೇಳಿದರು. ಈ ಎಲ್ಲದರ ಹಿನ್ನೆಲೆಯಲ್ಲಿ, ಶೃಂಗಸಭೆಯು ಪ್ರಸ್ತುತಿಗಳು, ಚರ್ಚೆಗಳು, ಸಂವಾದಾತ್ಮಕ ಅಧಿವೇಶನಗಳು ಮತ್ತು ಈ ಎರಡೂ ಗುಂಪುಗಳು ಗುರುತಿಸಿದ ಆದ್ಯತೆಯ ಕ್ಷೇತ್ರಗಳನ್ನು ಎತ್ತಿ ತೋರಿಸುವ ಇತರ ಆಕರ್ಷಕ ಚಟುವಟಿಕೆಗಳನ್ನು ಒಳಗೊಂಡಿವೆ.

ಈ ಸಮಾವೇಶದ ಕೆಲವು ಪ್ರಮುಖ ಇವೆಂಟ್ ಗಳು ಈ ಕೆಳಗಿನಂತಿವೆ:
• ಸ್ಮಾರ್ಟ್ ಸಿಟಿಗಳು ಮತ್ತು ಕ್ರಿಯಾ ಸಂಶೋಧನೆಗಳ ಶೈಕ್ಷಣಿಕ ಸಂಗ್ರಹ 1.0ಯ ಬಿಡುಗಡೆ

    ದೇಶದ 15 ಪ್ರಮುಖ ಕಾಲೇಜುಗಳು ಎಸ್ಎಎಆರ್ (ಸ್ಮಾರ್ಟ್ ಸಿಟಿಗಳು ಮತ್ತು ಕ್ರಿಯಾ ಸಂಶೋಧನೆಯತ್ತ ಶೈಕ್ಷಣಿಕ) ಕಾರ್ಯಕ್ರಮದಡಿ ನವೀನ ನಗರ ಯೋಜನೆಗಳ ಬಗ್ಗೆ 75ಕ್ಕೂ ಹೆಚ್ಚಿನ ಕೇಸ್ ಸ್ಟಡಿಗಳ ದಾಖಲು.

• ಇತರ ಬಿಡುಗಡೆಗಳು - ಪ್ರಜಾತಂತ್ರ, ಇಂಡಿಯನ್ ಸ್ಮಾರ್ಟ್ ಸಿಟಿಸ್ ಫೆಲೋ ಪ್ರೋಗ್ರಾಂ (ಐಎಸ್ ಸಿಎಫ್ ಪಿ), ನ್ಯಾಷನಲ್ ಅರ್ಬನ್ ಡಿಜಿಟಲ್ ಮಿಷನ್ (ಎನ್ ಯುಡಿಎಂ), ದಿ ಅರ್ಬನ್ ಲರ್ನಿಂಗ್ ಇಂಟರ್ನ್ಶಿಪ್ ಪ್ರೋಗ್ರಾಂ (ಟಿಯುಎಲ್ಐಪಿ) ಮತ್ತು ನ್ಯಾಷನಲ್ ಅರ್ಬನ್ ಲರ್ನಿಂಗ್ ಪ್ಲಾಟ್ಫಾರ್ಮ್ (ಎನ್ ಯುಎಲ್ ಪಿ)ನ ಲೇಖನಗಳು, ಕೇಸ್ ಸ್ಟಡೀಸ್ ಮತ್ತು ಮಾಹಿತಿಯ ಸಂಕಲನಗಳನ್ನು ಈ ಕಾರ್ಯಕ್ರಮದ ವೇದಿಕೆಯಲ್ಲಿ ಬಿಡುಗಡೆ ಮಾಡಲಾಗುವುದು.

• ಸ್ಮಾರ್ಟ್ ಸಿಟಿಗಳು ಮತ್ತು ಕ್ರಿಯಾ ಸಂಶೋಧನೆಯತ್ತ ಶೈಕ್ಷಣಿಕ ಸಂಗ್ರಹ 2.0ರ ಬಿಡುಗಡೆ

    ಪ್ರತಿ ಸ್ಮಾರ್ಟ್ ಸಿಟಿ ಕನಿಷ್ಠ ಒಂದು ಶೈಕ್ಷಣಿಕ ಅಥವಾ ಸಂಶೋಧನಾ ಸಂಸ್ಥೆಯೊಂದಿಗೆ ಒಪ್ಪಂದ ಮಾಡಿಕೊಳ್ಳಲು ಮತ್ತು ಅನುಷ್ಠಾನಗೊಳಿಸಿದ ಯೋಜನೆಗಳ ಕನಿಷ್ಠ 3 ಕೇಸ್ ಸ್ಟಡಿಗಳನ್ನು ತಯಾರಿಸಲು ಪ್ರೋತ್ಸಾಹಿಸಲಾಗುತ್ತದೆ. ನವೀನ ನಗರ ಉಪಕ್ರಮಗಳ ಪುನರಾವರ್ತನೆಗಾಗಿ ಇವು ಉದಾಹರಣೆಯ ಉಲ್ಲೇಖ ದಾಖಲೆಗಳಾಗುತ್ತವೆ.

• ವಸ್ತುಪ್ರದರ್ಶನ – ಎಸ್ ಎಎಆರ್ ಮತ್ತು ಎನ್ ಎಂಸಿಜಿಯ (ನ್ಯಾಷನಲ್ ಮಿಷನ್ ಫಾರ್ ಕ್ಲೀನ್ ಗಂಗಾ) ಅಡಿಯಲ್ಲಿ ನವೀನ ನಗರ ಯೋಜನೆಗಳ ಕುರಿತಾದ ಎರಡು ಪ್ರದರ್ಶನಗಳನ್ನು ಕಾರ್ಯಕ್ರಮದ ಸ್ಥಳದಲ್ಲಿ 2 ದಿನಗಳ ಕಾಲ ಪ್ರದರ್ಶಿಸಲಾಗುವುದು.

• ಸಮಗ್ರ ಅಧಿವೇಶನಗಳು – ಹವಾಮಾನ ಬದಲಾವಣೆಯ ಸ್ಥಿತಿಸ್ಥಾಪಕತ್ವ, ಆಡಳಿತ ಮತ್ತು ಯೋಜನಾ ಚೌಕಟ್ಟುಗಳು ಉತ್ತಮ ನಗರ ಭವಿಷ್ಯಕ್ಕಾಗಿ ಕೌಶಲ್ಯಗಳು ಮತ್ತು ನಾವೀನ್ಯವನ್ನು ಶೀಘ್ರಗೊಳಿಸುವ ವಿಷಯಗಳ ಕುರಿತು ಚರ್ಚೆಗಳು ನಡೆಯಲಿವೆ.

ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯದ ಸ್ಮಾರ್ಟ್ ಸಿಟಿ ಮಿಷನ್ ನ ಜಂಟಿ ಕಾರ್ಯದರ್ಶಿ ಶ್ರೀ ಕುನಾಲ್ ಕುಮಾರ್ ರವರು, "ಈ ಸಮಾವೇಶವು ಭಾರತೀಯ ಯುವಕರ ಪ್ರಾಮುಖ್ಯ ಮತ್ತು ಭಾರತದ ನಗರಾಭಿವೃದ್ಧಿಯಲ್ಲಿ ಅವರ ಪಾತ್ರವನ್ನು ಎತ್ತಿ ತೋರಿಸುತ್ತದೆ. ಭಾರತೀಯ ಯುವಕರನ್ನು ಉತ್ತೇಜಿಸುವ ಹಲವಾರು ಉಪಕ್ರಮಗಳನ್ನು ಈ ಸಂದರ್ಭದಲ್ಲಿ ಬಿಂಬಿಸಲಾಗುವುದು. ಅವರ ಶಕ್ತಿಯುತ ಪಾಲ್ಗೊಳ್ಳುವಿಕೆಯೊಂದಿಗೆ ನಮ್ಮ ನಗರಗಳು ಸ್ಮಾರ್ಟ್ ಆಗಲಿವೆ" ಎಂದು ಹೇಳಿದರು.

ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಅರ್ಬನ್ ಅಫೇರ್ಸ್ ನ ನಿರ್ದೇಶಕರಾದ ಹಿತೇಶ್ ವೈದ್ಯ ಮಾತನಾಡಿ, "ತಮ್ಮ ಸಮುದಾಯಗಳಲ್ಲಿ ಸಕಾರಾತ್ಮಕ ಬದಲಾವಣೆಯನ್ನು ಸೃಷ್ಟಿಸಲು ಯುವಕರ ಉತ್ಸಾಹ ಮತ್ತು ತೀವ್ರಾಸಕ್ತಿಯು ವಿಸ್ಮಯಕಾರಿಯಾಗಿದೆ. ದೇಶದ ಯುವಕರು ಮತ್ತು ಸರ್ಕಾರದ ನಾಯಕತ್ವವನ್ನು ಒಟ್ಟುಗೂಡಿಸುವ ರಾಷ್ಟ್ರೀಯ ಯುವ ಸಮಾವೇಶವು ಈ ಕಲಿಕೆಗೆ ಒಂದು ಅವಕಾಶವಾಗಿದೆ. ಆಡಳಿತದಲ್ಲಿ ತಮ್ಮ ಹಕ್ಕುಗಳ ಬಗ್ಗೆ ಕಲಿಯಲು ಮತ್ತು ರಾಷ್ಟ್ರೀಯ ಅಭಿವೃದ್ಧಿಗೆ ಕೊಡುಗೆ ನೀಡಲು ಇದು ಯುವಕರಿಗೆ ಹೆಚ್ಚಿನ ಪ್ರಚೋದನೆಯನ್ನು ನೀಡಲಿದೆ, ಆದರೆ ಯುವಕರ ಹುರುಪು ಮತ್ತು ನವೀನ ಆಲೋಚನೆಗಳ ಮೂಲಕ ನಾಯಕತ್ವವು ಹೆಚ್ಚಿನ ಲಾಭ ಪಡೆಯುತ್ತದೆ!" ಎಂದು ಹೇಳಿದರು.

ಅರ್ಬನ್-20ರ ಬಗ್ಗೆ ಸಂಕ್ಷಿಪ್ತ ವರದಿ:

ಅರ್ಬನ್-20 (ಯು-20) ಎಂಬುದು ಜಿ-20ರ ಅಡಿಯಲ್ಲಿನ ಒಂದು ಎಂಗೇಜ್ಮೆಂಟ್ ಗ್ರೂಪ್ ಆಗಿದ್ದು, ಇದು  ಜಿ-20ರ ರಾಷ್ಟ್ರೀಯ ನಾಯಕರ ಚರ್ಚೆಗಳನ್ನು ತಿಳಿಯಪಡಿಸಲು ಜಿ-20ರ ಪ್ರಮುಖ ನಗರಗಳ ಮೇಯರ್ ಗಳನ್ನು ಒಟ್ಟುಗೂಡಿಸುತ್ತದೆ. ಇದು ಜಿ-20ರ ಮಾತುಕತೆಗಳನ್ನು ಸಾಮೂಹಿಕವಾಗಿ ತಿಳಿಸಲು ನಗರಗಳಿಗೆ ವೇದಿಕೆಯಾಗಿ ವರ್ತಿಸುತ್ತದೆ. ಈ ವರ್ಷದ ಯು-20ರ ಸಂವಾದವು ಜಗತ್ತಿಗೆ ದೀರ್ಘಕಾಲೀನ ಪ್ರಯೋಜನಕಾರಿ ಫಲಿತಾಂಶಗಳನ್ನು ಸಾಧಿಸಲು ನಗರ ವಲಯವನ್ನು ಮಾರ್ಪಡಿಸುವ ಅಗತ್ಯವನ್ನು ಒತ್ತಿಹೇಳುವುದಲ್ಲದೆ, ನಗರ ಮಟ್ಟದ ಸಂಘಟಿತ ಚಟುವಟಿಕೆಗಳಿಗೆ ದಾರಿ ಮಾಡಿಕೊಡುತ್ತದೆ. ಯು-20ರ ಅಡಿಯಲ್ಲಿನ ಚರ್ಚೆಗಳು ಸಂಕೀರ್ಣ ಜಾಗತಿಕ ನಗರ ಕಾರ್ಯಸೂಚಿಗಳನ್ನು ಕ್ರಿಯಾತ್ಮಕ ನಗರ ಮಟ್ಟದ ಉಪಕ್ರಮಗಳಾಗಿ ರೂಪಿಸಲು ನಿರ್ಣಾಯಕವಾದ ಆರು ಆದ್ಯತಾ ಕ್ಷೇತ್ರಗಳ ಮೇಲೆ ಕೇಂದ್ರೀಕೃತವಾಗಲಿವೆ. ಈ ಸಂಘಟಣೆಯು ಎಲ್ಲ ಚರ್ಚೆಗಳಲ್ಲಿ ಅನ್ಯೋನ್ಯ ಸೇರ್ಪಡೆಯಾಗಲಿದೆ.

ಅರ್ಬನ್-20ರ ಆದ್ಯತಾ ಕ್ಷೇತ್ರಗಳೆಂದರೆ: 

• ಪರಿಸರಾತ್ಮಕ ಜವಾಬ್ದಾರಿಯುತ ನಡವಳಿಕೆಗಳನ್ನು ಪ್ರೋತ್ಸಾಹಿಸುವುದು
• ನೀರಿನ ಸುರಕ್ಷತೆಯನ್ನು ಖಚಿತಪಡಿಸುವುದು
• ಹವಾಮಾನ ಹಣಕಾಸಿನ ವೇಗವರ್ಧನೆ
• 'ಸ್ಥಳೀಯ' ಗುರುತಿನ ಛಾಪು ಮೂಡಿಸುವುದು
• ನಗರ ಆಡಳಿತ ಮತ್ತು ಯೋಜನೆಗಾಗಿ ಚೌಕಟ್ಟುಗಳ ಮರುಶೋಧನೆ
• ಡಿಜಿಟಲ್ ನಗರದ ಭವಿಷ್ಯಗಳ ವೇಗವರ್ಧನೆ 

ಯೂತ್-20 ಬಗ್ಗೆ ಸಂಕ್ಷಿಪ್ತ ವರದಿ:
ಯೂತ್-20 (ವೈ-20) ಎಂಗೇಜ್ಮೆಂಟ್ ಗ್ರೂಪ್, 2010ರಲ್ಲಿ ನಡೆದ ತನ್ನ ಮೊದಲ ವೈ-20ರ ಸಮ್ಮೇಳನದೊಂದಿಗೆ, ಜಿ-20ರ ಆದ್ಯತೆಗಳ ಬಗ್ಗೆ ತಮ್ಮ ದೃಷ್ಟಿ ಮತ್ತು ಆಲೋಚನೆಗಳನ್ನು ವ್ಯಕ್ತಪಡಿಸಲು ಯುವಕರಿಗೆ ಅವಕಾಶ ನೀಡುವ ವೇದಿಕೆಯನ್ನು ಒದಗಿಸುತ್ತದೆ. ಇದು ಜಿ-20ರ ನಾಯಕರಿಗೆ ಸಲ್ಲಿಸಲಾದ ಶಿಫಾರಸುಗಳ ಸರಣಿಯನ್ನು ರೂಪಿಸುತ್ತದೆ. 2023ರಲ್ಲಿ ನಡೆಯಲಿರುವ ವೈ-20ರ ಭಾರತ ಶೃಂಗಸಭೆಯು ಭಾರತದ ಯುವ-ಕೇಂದ್ರಿತ ಪ್ರಯತ್ನಗಳಿಗೆ ಉದಾಹರಣೆಯಾಗಲಿದೆ. ಅದರ ಮೌಲ್ಯಗಳು ಮತ್ತು ನೀತಿ ಕ್ರಮಗಳನ್ನು ಪ್ರದರ್ಶಿಸಲು ಈ ಸಭೆಯಲ್ಲಿ ಅವಕಾಶವನ್ನು ಒದಗಿಸಲಾಗುವುದು. ಇದರಿಂದಾಗಿ ಈ ಶೃಂಗಸಭೆಯಲ್ಲಿ ಭಾರತದ ಯುವ ನಾಯಕತ್ವವು ಎದ್ದು ಕಾಣಲಿದೆ. ಈ ಶೃಂಗಸಭೆಗೆ ಆಯ್ಕೆ ಮಾಡಲಾದ ಆದ್ಯತಾ ಕ್ಷೇತ್ರಗಳು ಈ ವಿಷಯಗಳ ಬಗ್ಗೆ ಭಾರತೀಯ ನಾಯಕತ್ವವನ್ನು ಜಾಗತಿಕ ಮತ್ತು ದೇಶೀಯ ಪ್ರೇಕ್ಷಕರಿಗೆ ಎತ್ತಿ ತೋರಿಸುತ್ತದೆ. ಇದು ಜಿ-20ರ ಶೃಂಗಸಭೆಯನ್ನು ಉತ್ಸಾಹಭರಿತ ಭಾಗವಹಿಸುವಿಕೆಯ ಭಾರತದ ದೃಷ್ಟಿಕೋನವನ್ನು ಈಡೇರಿಸಲು ಸಹಾಯ ಮಾಡುತ್ತದೆ.

ಯು-20ರ ಆದ್ಯತೆಯ ಕ್ಷೇತ್ರಗಳೆಂದರೆ:
• ಕಾರ್ಯ ಭವಿಷ್ಯ: ಉದ್ಯಮ 4.0, ನಾವೀನ್ಯ, ಮತ್ತು 21ನೇ ಶತಮಾನದ ಕೌಶಲ್ಯಗಳು
• ಹವಾಮಾನ ಬದಲಾವಣೆ ಮತ್ತು ವಿಪತ್ತು ಅಪಾಯ ತಗ್ಗಿಸುವಿಕೆ: ಸುಸ್ಥಿರ ಜೀವನ ಮಾರ್ಗ ನಿರೂಪಣೆ
• ಶಾಂತಿ ಸ್ಥಾಪನೆ ಮತ್ತು ಸಮನ್ವಯ: ಯುದ್ಧರಹಿತ ಯುಗದ ನಾಂದಿ
• ಹಂಚಿಕೆಯ ಭವಿಷ್ಯ: ಪ್ರಜಾಪ್ರಭುತ್ವ ಮತ್ತು ಆಡಳಿತದಲ್ಲಿ ಯುವಜನತೆಯ ಪಾತ್ರ
• ಆರೋಗ್ಯ, ಯೋಗಕ್ಷೇಮ ಮತ್ತು ಕ್ರೀಡೆ: ಯುವಕವರ್ಗಕ್ಕೆ ಕಾರ್ಯಸೂಚಿ
 
ರಾಷ್ಟ್ರೀಯ ಯುವ ಸಮಾವೇಶ, 2023ರ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ಬಳಸಬಹುದಾದ ಸಂಬಂಧಪಟ್ಟ ಸಂಕರ್ಪ ಕೊಂಡಿ: https://niua.in/youthengagement


****


(Release ID: 1905662)