ಇಂಧನ ಸಚಿವಾಲಯ
ಮುಂಬರುವ ಬೇಸಿಗೆಯಲ್ಲಿ ಸಮರ್ಪಕ ವಿದ್ಯುತ್ ಪೂರೈಕೆಗೆ ಕೇಂದ್ರ ಇಂಧನ ಸಚಿವಾಲಯ ಬಹುಮುಖಿ ಕಾರ್ಯತಂತ್ರವನ್ನು ರೂಪಿಸಿದೆ
ಮುಂಬರುವ ಬೇಸಿಗೆಯ ತಿಂಗಳುಗಳ ವಿದ್ಯುತ್ ಪರಿಸ್ಥಿತಿಯ ಬಗ್ಗೆ ಕೇಂದ್ರ ಇಂಧನ ಸಚಿವರಾದ ಶ್ರೀ ಆರ್.ಕೆ.ಸಿಂಗ್ ಪರಿಶೀಲಿಸಿದರು; ಯಾವುದೇ ಲೋಡ್-ಶೆಡ್ಡಿಂಗ್ ಇರಬಾರದು ಎನ್ನುವುದನ್ನು ಖಚಿತಪಡಿಸಿಕೊಳ್ಳಲು ವಿದ್ಯುತ್ ಕಂಪನಿಗಳಿಗೆ ಹೇಳಿದರು
ರೈಲ್ವೆ, ಕಲ್ಲಿದ್ದಲು ಮತ್ತುಇಂಧನ ಸಚಿವಾಲಯದ ಹಿರಿಯ ಅಧಿಕಾರಿಗಳು ಪರಿಶೀಲನಾ ಸಭೆಯಲ್ಲಿ ಭಾಗವಹಿಸಿದರು
ಕಲ್ಲಿದ್ದಲು ಸಾಗಣೆಗೆ ಸಾಕಷ್ಟು ರೇಕ್ ಗಳ ಲಭ್ಯತೆಯನ್ನು ರೈಲ್ವೇ ಸಚಿವಾಲಯವು ಭರವಸೆ ನೀಡಿದೆ
Posted On:
09 MAR 2023 10:50AM by PIB Bengaluru
ಮುಂಬರುವ ಬೇಸಿಗೆಯ ತಿಂಗಳುಗಳಲ್ಲಿ ಸಾಕಷ್ಟು ವಿದ್ಯುತ್ ಲಭ್ಯತೆಯನ್ನು ಖಚಿತಪಡಿಸಿಕೊಳ್ಳಲು ಕೇಂದ್ರ ವಿದ್ಯುತ್ ಸಚಿವಾಲಯವು ಬಹುಮುಖಿ ಕಾರ್ಯತಂತ್ರವನ್ನು ರೂಪಿಸಿದೆ. ಕೇಂದ್ರ ಇಂಧನ ಹಾಗೂ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವ ಶ್ರೀ ಆರ್.ಕೆ. ಸಿಂಗ್ ರವರು ಮಂಗಳವಾರ, 7 ನೇ ಮಾರ್ಚ್, 2023 ರಂದು ಇಂಧನಬ ವಲಯ, ಕಲ್ಲಿದ್ದಲು ಸಚಿವಾಲಯ ಮತ್ತು ರೈಲ್ವೆ ಸಚಿವಾಲಯದ ಹಿರಿಯ ಅಧಿಕಾರಿಗಳೊಂದಿಗೆ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿದ್ದರು, ಇದರಲ್ಲಿ ಮುಂಬರುವ ತಿಂಗಳುಗಳಲ್ಲಿ ವಿಶೇಷವಾಗಿ ಏಪ್ರಿಲ್ 23 ಮತ್ತು ಮೇ-23ರ ಅವಧಿಯಲ್ಲಿ ಹೆಚ್ಚಿನ ವಿದ್ಯುತ್ ಬೇಡಿಕೆಯನ್ನು ಪೂರೈಸಲು ವಿವಿಧ ಅಂಶಗಳ ಕುರಿತು ವಿವರವಾದ ಚರ್ಚೆಗಳು ನಡೆದವು. ಶ್ರೀ ಅಲೋಕ್ ಕುಮಾರ್, ಕಾರ್ಯದರ್ಶಿ, ಇಂಧನ ಸಚಿವಾಲಯ, ಶ್ರೀ ಘನಶ್ಯಾಮ್ ಪ್ರಸಾದ್, ಅಧ್ಯಕ್ಷರು, ಕೇಂದ್ರ ವಿದ್ಯುತ್ ಪ್ರಾಧಿಕಾರ, ಶ್ರೀ ಎಸ್.ಆರ್. ನರಸಿಂಹನ್, ಸಿಎಂಡಿC, ಗ್ರಿಡ್ ಕಂಟ್ರೋಲರ್ ಆಫ್ ಇಂಡಿಯಾ, ರೈಲ್ವೇ ಮಂಡಳಿಯ ಸದಸ್ಯರಾದ ಶ್ರೀಮತಿ ಜಯ ವರ್ಮಾ ಸಿನ್ಹಾ, ಕಲ್ಲಿದ್ದಲು ಸಚಿವಾಲಯದ ಜಂಟಿ ಕಾರ್ಯದರ್ಶಿ ಸಂಜೀವ್ ಕುಮಾರ್ ಕಾಸಿ, ಎನ್ ಟಿಪಿಸಿ ಕಾರ್ಯಾಚರಣೆಯ ನಿರ್ದೇಶಕರಾದ ಶ್ರೀ ರಮೇಶ್ ಬಾಬು ಮತ್ತು ಈ ಮೂರು ಸಚಿವಾಲಯಗಳ ಇತರ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.
ಕಾರ್ಯತಂತ್ರದ ಭಾಗವಾಗಿ, ಕಲ್ಲಿದ್ದಲು ಆಧಾರಿತ ವಿದ್ಯುತ್ ಸ್ಥಾವರಗಳಿಗೆ ಸಾಕಷ್ಟು ಮುಂಚಿತವಾಗಿ ನಿರ್ವಹಣೆಯನ್ನು ಕೈಗೊಳ್ಳಲು ವಿದ್ಯುತ ವಲಯದ ಸಂಸ್ಥೆಗಳಿಗೆ ನಿರ್ದೇಶನ ನೀಡಲಾಗಿದೆ, ಆದ್ದರಿಂದ ಬಿಕ್ಕಟ್ಟಿನ ಅವಧಿಯಲ್ಲಿ ಯಾವುದೇ ಯೋಜಿತ ನಿರ್ವಹಣೆ ಅಗತ್ಯವಿರುವುದಿಲ್ಲ. 2023 ರ ಮಾರ್ಚ್ 16 ರಿಂದ ಪೂರ್ಣ ಸಾಮರ್ಥ್ಯದಲ್ಲಿ ಕಾರ್ಯನಿರ್ವಹಿಸಲು ಎಲ್ಲಾ ಆಮದು ಮಾಡಿದ ಕಲ್ಲಿದ್ದಲು ಆಧಾರಿತ ಸ್ಥಾವರಗಳಿಗೆ ಸೆಕ್ಷನ್-11 ರ ಅಡಿಯಲ್ಲಿ ನಿರ್ದೇಶನಗಳನ್ನು ಈಗಾಗಲೇ ನೀಡಲಾಗಿದೆ. ಕಲ್ಲಿದ್ದಲು ಆಧಾರಿತ ವಿದ್ಯುತ್ ಸ್ಥಾವರಗಳಲ್ಲಿ ಸಾಕಷ್ಟು ಕಲ್ಲಿದ್ದಲು ದಾಸ್ತಾನು ಲಭ್ಯವಾಗುವಂತೆ ಮಾಡಲಾಗುತ್ತದೆ. ಸಭೆಯಲ್ಲಿ, ಸದಸ್ಯ ರೈಲ್ವೆ ಮಂಡಳಿಯು ಕಲ್ಲಿದ್ದಲು ಸಾಗಣೆಗೆ ಸಾಕಷ್ಟು ರೇಕ್ಗಳ ಲಭ್ಯತೆಯ ಭರವಸೆ ನೀಡಿತು. ರೈಲ್ವೇ ಸಚಿವಾಲಯವು ಸಿಐಎಲ್, ಜಿ ಎಸ್ ಎಸ್ ಮತ್ತು ಕ್ಯಾಪ್ಟಿವ್ ಬ್ಲಾಕ್ಗಳ ವಿವಿಧ ಅಂಗಸಂಸ್ಥೆಗಳಿಗೆ 418 ರೇಕ್ಗಳನ್ನು ಒದಗಿಸಲು ಸಮ್ಮತಿಸಿದೆ ಮತ್ತು ವಿದ್ಯುತ್ ಸ್ಥಾವರಗಳಲ್ಲಿ ಸಾಕಷ್ಟು ಕಲ್ಲಿದ್ದಲು ದಾಸ್ತಾನನ್ನು ಇಟ್ಟುಕೊಳ್ಳಲು ಸರಿಯಾದ ಸಮಯದಲ್ಲಿ ರೇಕ್ಗಳ ಸಂಖ್ಯೆಯನ್ನು ಹೆಚ್ಚಿಸುತ್ತದೆ.
ಯಾವುದೇ ಹೆಚ್ಚಿನ ಬೇಡಿಕೆಯನ್ನು ಪೂರೈಸಲು ಅನಿಲ ಆಧಾರಿತ ಇಂಧನವನ್ನು ಬಳಸಲಾಗುವುದು. ಸಚಿವಾಲಯವು ಎನ್ ಟಿಪಿಸಿಗೆ ತನ್ನ 5000 ಮೆ.ವ್ಯಾ ಅನಿಲ ಆಧಾರಿತ ವಿದ್ಯುತ್ ಕೇಂದ್ರಗಳನ್ನು ಏಪ್ರಿಲ್-ಮೇ ತಿಂಗಳ ಬಿಕ್ಕಟ್ಟಿನ ಅವಧಿಯಲ್ಲಿ ಕಾರ್ಯನಿರ್ವಹಿಸಲು ನಿರ್ದೇಶಿಸಲಾಗಿದೆ. ಹೆಚ್ಚುವರಿಯಾಗಿ, ಬೇಸಿಗೆಯ ತಿಂಗಳುಗಳಲ್ಲಿ ಲಭ್ಯತೆಗಾಗಿ 4000 ಮೆ.ವ್ಯಾ ಹೆಚ್ಚುವರಿ ಅನಿಲ ಆಧಾರಿತ ವಿದ್ಯುತ್ ಸಾಮರ್ಥ್ಯವನ್ನು ಇತರ ಘಟಕಗಳು ಸೇರಿಸುತ್ತವೆ. ಬೇಸಿಗೆಯ ತಿಂಗಳುಗಳಲ್ಲಿ ಅಗತ್ಯ ಅನಿಲ ಪೂರೈಕೆಯ ಬಗ್ಗೆ ಜಿಎಐಎಲ್ ಈಗಾಗಲೇ ಇಂಧನ ಸಚಿವಾಲಯಕ್ಕೆ ಭರವಸೆ ನೀಡಿದೆ. ಮುಂದಿನ ತಿಂಗಳಲ್ಲಿ ಉತ್ತಮ ಲಭ್ಯತೆಗಾಗಿ ಪ್ರಸ್ತುತ ತಿಂಗಳಲ್ಲಿ ಪರಿಣಾಮಕಾರಿ ನೀರಿನ ಬಳಕೆಗಾಗಿ ಆರ್ ಎಲ್ ಡಿಸಿ ಗಳು / ಎಸ್ ಎಲ್ಡಿ ಸಿ C ಗಳೊಂದಿಗೆ (ಪ್ರಾದೇಶಿಕ / ರಾಜ್ಯ ಲೋಡ್ ಡಿಸ್ಪ್ಯಾಚ್ ಕೇಂದ್ರಗಳು) ಸಮಾಲೋಚಿಸಿ ಕಾರ್ಯನಿರ್ವಹಿಸಲು ಎಲ್ಲಾ ಜಲವಿದ್ಯುತ್ ಸ್ಥಾವರಗಳಿಗೆ ಸೂಚನೆ ನೀಡಲಾಗಿದೆ. ಹೊಸ ಕಲ್ಲಿದ್ದಲು ಆಧಾರಿತ ಸ್ಥಾವರಗಳ ಮೂಲಕ 2920 ಮೆಗಾವ್ಯಾಟ್ ನ ಹೆಚ್ಚುವರಿ ಸಾಮರ್ಥ್ಯವು ಈ ತಿಂಗಳ ಅಂತ್ಯದ ವೇಳೆಗೆ ಕಾರ್ಯಾರಂಭ ಮಾಡಲಿದೆ. ಹೆಚ್ಚುವರಿಯಾಗಿ, ಸಚಿವಾಲಯದ ನಿರ್ದೇಶನದ ಮೇಲೆ, ಬರೌನಿಯಲ್ಲಿ ಎರಡು ಘಟಕಗಳು (2X110 ಮೆವ್ಯಾ) ಬಿಕ್ಕಟ್ಟಿನ ಅವಧಿಯಲ್ಲಿ ಲಭ್ಯವಾಗುವಂತೆ ಮಾಡಲಾಗುತ್ತದೆ.
ಸಭೆಯಲ್ಲಿ ಕೇಂದ್ರ ಇಂಧನ ಸಚಿವರು ಬೇಸಿಗೆಯ ತಿಂಗಳುಗಳಲ್ಲಿ ಲೋಡ್-ಶೆಡ್ಡಿಂಗ್ ಆಗದಂತೆ ನೋಡಿಕೊಳ್ಳಲು ವಿದ್ಯುತ್ ಕಂಪನಿಗಳಿಗೆ ಸೂಚಿಸಿದರು. ಶ್ರೀ ಸಿಂಗ್ ಅವರು ಸಂಬಂಧಪಟ್ಟವರಿಗೆ ಪರಿಸ್ಥಿತಿಯನ್ನು ನಿಕಟವಾಗಿ ಮೇಲ್ವಿಚಾರಣೆ ಮಾಡಲು ಮತ್ತು ಮುಂಬರುವ ತಿಂಗಳುಗಳಲ್ಲಿ ವಿದ್ಯುತ್ ಬೇಡಿಕೆಯನ್ನು ಪೂರೈಸಲು ಪೂರ್ವಭಾವಿ ಕ್ರಮಗಳನ್ನು ಕೈಗೊಳ್ಳುವಂತೆ ಹೇಳಿದರು. ವಿವಿಧ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಿಗೆ ಕಲ್ಲಿದ್ದಲು ಹಂಚಿಕೆಗಾಗಿ ನ್ಯಾಯಯುತ ಮತ್ತು ಪಾರದರ್ಶಕ ಕಾರ್ಯವಿಧಾನವನ್ನು ರೂಪಿಸಲಾಗಿದೆ ಎನ್ನುವುದನ್ನು ಖಚಿತಪಡಿಸಿಕೊಳ್ಳಲು ಸಚಿವರು ಕೇಂದ್ರೀಯ ವಿದ್ಯುಚ್ಛಕ್ತಿ ಪ್ರಾಧಿಕಾರ (ಸಿಇಎ) ಕ್ಕೆ ಹೇಳಿದರು.
ಕೇಂದ್ರೀಯ ವಿದ್ಯುಚ್ಛಕ್ತಿ ಪ್ರಾಧಿಕಾರದ ಅಂದಾಜಿನ ಪ್ರಕಾರ, ಏಪ್ರಿಲ್-23 ರ ತಿಂಗಳುಗಳಲ್ಲಿ ಗರಿಷ್ಠ ವಿದ್ಯುತ್ ಬೇಡಿಕೆಯು 229 ಗಿ.ವ್ಯಾ ಆಗುವ ನಿರೀಕ್ಷೆಯಿದೆ, ಈ ಅವಧಿಯಲ್ಲಿ ದೇಶದಲ್ಲಿ ವಿದ್ಯುತ್ ಬೇಡಿಕೆ ಅತ್ಯಧಿಕವಾಗಿರುತ್ತದೆ. ದೇಶದ ದಕ್ಷಿಣ ಭಾಗದಿಂದ ಮಾನ್ಸೂನ್ ಆರಂಭವಾಗುವುದರಿಂದ ಮತ್ತು ಮುಂದಿನ 3-4 ತಿಂಗಳುಗಳಲ್ಲಿ ಇಡೀ ದೇಶವನ್ನು ಆವರಿಸುವುದರಿಂದ ಬೇಡಿಕೆಯು ಕಡಿಮೆಯಾಗುತ್ತದೆ. ಜಿಡಿಪಿ 7% ಕ್ಕೆ ಸಮೀಪದಲ್ಲಿ ಬೆಳೆಯುವುದರೊಂದಿಗೆ, ದೇಶದಲ್ಲಿ ವಿದ್ಯುತ್ ಬೇಡಿಕೆಯು ವಾರ್ಷಿಕವಾಗಿ 10% ರಷ್ಟು ಬೆಳೆಯುತ್ತಿದೆ. ಅಂದಾಜಿನ ಪ್ರಕಾರ, ಏಪ್ರಿಲ್ 2023 ರಲ್ಲಿ 1,42,097 ಎಂ.ಯು ನಷ್ಟು ವಿದ್ಯುತ್ ಬೇಡಿಕೆಯು ಅತ್ಯಧಿಕವಾಗಿ ಮತ್ತು ಮೇ 2023 ರಲ್ಲಿ 1,41,464 ಎಂ.ಯು ಗೆ ಇಳಿಯುವ ಸಾಧ್ಯತೆಯಿದೆ. ಇದು ನಿರಂತರವಾಗಿ ಇಳಿಕೆಯಾಗುತ್ತಾ ನವೆಂಬರ್ನಲ್ಲಿ 1,17,049 ಎಂ.ಯು ಆಗುತ್ತದೆ
***
(Release ID: 1905386)
Visitor Counter : 168