ಆಯುಷ್
ಯೋಗ-2023 ಪ್ರಧಾನ ಮಂತ್ರಿ ಪ್ರಶಸ್ತಿಗಳಿಗಾಗಿ ಆಯುಷ್ ಸಚಿವಾಲಯದಿಂದ ಅರ್ಜಿಗಳು, ನಾಮನಿರ್ದೇಶನಗಳಿಗೆ ಆಹ್ವಾನ
ಯೋಗದ ಬೆಳವಣಿಗೆ (ಅಭಿವೃದ್ಧಿ) ಮತ್ತು ಉತ್ತೇಜನಕ್ಕಾಗಿ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ನೀಡಿರುವ ಅಸಾಧಾರಣ ಕೊಡುಗೆಗಳನ್ನು ಪರಿಗಣಿಸಿ ಈ ಪ್ರಶಸ್ತಿ ನೀಡಲಾಗುತ್ತದೆ
Posted On:
06 MAR 2023 11:33AM by PIB Bengaluru
ಯೋಗ-2023 ಪ್ರಧಾನ ಮಂತ್ರಿ ಪ್ರಶಸ್ತಿಗಳಿಗೆ ಆಯುಷ್ ಸಚಿವಾಲಯವು ಅರ್ಜಿಗಳು ಮತ್ತು ನಾಮನಿರ್ದೇಶನಗಳನ್ನು ಆಹ್ವಾನಿಸಿದೆ. ಈ ಪ್ರಶಸ್ತಿಯು ಯೋಗದ ಬೆಳವಣಿಗೆ(ಅಭಿವೃದ್ಧಿ), ಉತ್ತೇಜನ ಮತ್ತು ಪ್ರಚಾರಕ್ಕಾಗಿ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ನೀಡುವ ಅಸಾಧಾರಣ ಕೊಡುಗೆಗಳನ್ನು ಗುರುತಿಸಿ, ಈ ಪ್ರಶಸ್ತಿಗಳನ್ನು ನೀಡಲಾಗುತ್ತದೆ. 2 ರಾಷ್ಟ್ರೀಯ ಪ್ರಶಸ್ತಿಗಳನ್ನು ಭಾರತೀಯ ಮೂಲದ ಸಂಘ ಸಂಸ್ಥೆಗಳಿಗೆ ಮತ್ತು 2 ಅಂತಾರಾಷ್ಟ್ರೀಯ ಪ್ರಶಸ್ತಿಗಳನ್ನು ಭಾರತೀಯ ಅಥವಾ ವಿದೇಶಿ ಮೂಲದ ಸಂಘ ಸಂಸ್ಥೆಗಳೆಗೆ ನೀಡಲಾಗುವುದು. ಪ್ರಶಸ್ತಿ ವಿಜೇತರ ಪಟ್ಟಿಯನ್ನು 9ನೇ ಅಂತಾರಾಷ್ಟ್ರೀಯ ಯೋಗ ದಿನದಂದು (ಜೂನ್ 21, 2023) ಘೋಷಿಸಲಾಗುತ್ತದೆ.
2023ರ ಪ್ರಶಸ್ತಿಯ ಅರ್ಜಿಗಳು ಅಥವಾ ನಾಮನಿರ್ದೇಶನಗಳ ಪ್ರಕ್ರಿಯೆಯನ್ನು ಪ್ರಸ್ತುತ ಮೈಗೌವ್(MyGov) ವೇದಿಕೆಯಲ್ಲಿ (https://innovateindia.mygov.in/pm-yoga-awards-2023/) ಹಾಕಲಾಗಿದೆ. ಇದರ ಲಿಂಕ್ ಆಯುಷ್ ಸಚಿವಾಲಯದ ವೆಬ್‌ಸೈಟ್ ಮತ್ತು ರಾಷ್ಟ್ರೀಯ ಪ್ರಶಸ್ತಿಗಳ ಪೋರ್ಟಲ್‌ನಲ್ಲೂ ಲಭ್ಯವಿದೆ. ಈ ವರ್ಷದ ಪ್ರಶಸ್ತಿಗಳಿಗಾಗಿ ಅರ್ಜಿಗಳು ಮತ್ತು ನಾಮನಿರ್ದೇಶನಗಳ ಪ್ರಕ್ರಿಯೆಯು 2023 ಮಾರ್ಚ್ 31ರ ವರೆಗೆ ತೆರೆದಿರುತ್ತದೆ(ಮುಕ್ತವಾಗಿರುತ್ತದೆ).
ಆಯ್ಕೆ ಪ್ರಕ್ರಿಯೆಯು 2 ಹಂತದ ವ್ಯವಸ್ಥೆಯನ್ನು ಒಳಗೊಂಡಿದೆ. ಇದಕ್ಕಾಗಿ ಆಯುಷ್ ಸಚಿವಾಲಯವು 2 ಸಮಿತಿಗಳನ್ನು ರಚಿಸುತ್ತದೆ, ಅವುಗಳೆಂದರೆ ಸ್ಕ್ರೀನಿಂಗ್ ಸಮಿತಿ ಮತ್ತು ಮೌಲ್ಯಮಾಪನ ಸಮಿತಿ (ಜ್ಯೂರಿ-ತೀರ್ಪುಗಾರರು). ಮೌಲ್ಯಮಾಪನ ಸಮಿತಿಯು (ಜ್ಯೂರಿ) ಸಂಪುಟ ಕಾರ್ಯದರ್ಶಿಯವರ ಅಧ್ಯಕ್ಷತೆಯಲ್ಲಿ ಸದಸ್ಯರನ್ನು ಒಳಗೊಂಡಿರುತ್ತದೆ. ಅಂದರೆ ಪ್ರಧಾನ ಮಂತ್ರಿ, ವಿದೇಶಾಂಗ ಕಾರ್ಯದರ್ಶಿ, ಆಯುಷ್ ಸಚಿವಾಲಯದ ಕಾರ್ಯದರ್ಶಿ ಮತ್ತು ಇತರೆ ಸಚಿವಾಲಯದ ಸಲಹೆಗಾರರು ಇರುತ್ತಾರೆ. ಈ ಸಮಿತಿಯು ಪ್ರಶಸ್ತಿಗಳಿಗೆ ಆಯ್ಕೆ ಆಗುವ ಸಾಧಕರ ಮಟ್ಟಿಯನ್ನು ಸ್ವೀಕರಿಸುವವರನ್ನು ಅಂತಿಮಗೊಳಿಸಲು ಆಯ್ಕೆ ಮತ್ತು ಮೌಲ್ಯಮಾಪನ ಮಾನದಂಡಗಳನ್ನು ನಿರ್ಧರಿಸುತ್ತದೆ.
ಜಾಗತಿಕ ಮಟ್ಟದಲ್ಲಿ ಬೃಹತ್ ಸಮುದಾಯ ಭಾಗವಹಿಸುವಿಕೆಯನ್ನು ಖಾತ್ರಿಪಡಿಸುವ ಮೂಲಕ ಈ ವರ್ಷದ ಅಂತಾರಾಷ್ಟ್ರೀಯ ಯೋಗ ದಿನ ಆಯೋಜಿಸಲು ಆಯುಷ್ ಸಚಿವಾಲಯ ಯೋಜಿಸುತ್ತಿದೆ. WHO mYoga App, Namaste App, Y-break Application ಮತ್ತು ವಿವಿಧ ಜನ-ಕೇಂದ್ರಿತ ಚಟುವಟಿಕೆಗಳು ಮತ್ತು ಕಾರ್ಯಕ್ರಮಗಳನ್ನು ಬಳಸಿಕೊಂಡು ಯೋಗದ ಪ್ರಯೋಜನಗಳನ್ನು ಸಚಿವಾಲಯವು ಪ್ರಚಾರ ಮಾಡುತ್ತದೆ. IDY ಪ್ಲೆಡ್ಜ್, ಪೋಲ್/ಸರ್ವೆ, ಐಡಿವೈ ಜಿಂಗಲ್, ಐಡಿವೈ ರಸಪ್ರಶ್ನೆ ಮತ್ತು "ಯೋಗ ಮೈ ಪ್ರೈಡ್" ಛಾಯಾಗ್ರಹಣ ಸ್ಪರ್ಧೆಯಂತಹ ವಿವಿಧ ಚಟುವಟಿಕೆಗಳನ್ನು MyGov ವೇದಿಕೆಯಲ್ಲಿ ನಡೆಸಲು ಸಚಿವಾಲಯ ಚಿಂತನೆ ನಡೆಸಿದೆ.
***
(Release ID: 1904612)
Visitor Counter : 162