ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ

ಮಹಾರಾಷ್ಟ್ರದ ವಿದರ್ಭ್ ಹೆದ್ದಾರಿಯಲ್ಲಿ “ಬಾಹು ಬಲಿ "ಎಂಬ ವಿಶ್ವದ ಮೊದಲ 200 ಮೀಟರ್ ಉದ್ದದ ಬಿದರಿನ ಗಡೆಗೋಡೆ ಸ್ಥಾಪನೆ  

Posted On: 04 MAR 2023 2:09PM by PIB Bengaluru

ಮಹಾರಾಷ್ಟ್ರದ ವಿದರ್ಭ್ ನ ವಾಣಿ – ವರೋರ ಹೆದ್ದಾರಿಯಲ್ಲಿ ಸ್ವಾವಲಂಬಿ ಭಾರತ ನಿರ್ಮಾಣದ ಅಸಾಧಾರಣ ಸಾಧನೆಯ ಭಾಗವಾಗಿ 200 ಮೀಟರ್ ಉದ್ದದ ವಿಶ್ವದ ಮೊದಲ ಬಿದರಿನ ತಡೆಗೋಡೆಯನ್ನು ಅಳವಡಿಸಲಾಗಿದೆ.   

ಬಾಹು ಬಲಿ ಎಂದು ಹೆಸರಿಸಲಾದ ಈ ಬಿದಿರು ತಡೆಗೋಡೆಯನ್ನು ಇಂದೋರ್ ನ ಪೀತಾಂಪುರದಲ್ಲಿರುವ ನ್ಯಾಷನಲ್ ಆಟೋಮೋಟಿವ್ ಟೆಸ್ಟ್ ಟ್ರಾಕ್ [ಎನ್ಎಟಿಆರ್ ಎಎಕ್] ನಂತಹ ವಿವಿಧ ಸರ್ಕಾರಿ ಸಂಸ್ಥೆಗಳಲ್ಲಿ ಕಠಿಣ ಪರೀಕ್ಷೆಗೆ ಒಳಪಡಿಸಲಾಗಿದೆ  ಮತ್ತು ರೂರ್ಕಿಯ ನ್ಯಾಷನಲ್ ಬಿಲ್ಡಿಂಗ್ ರೀಸರ್ಚ್ ಇನ್ಸ್ಟಿಟ್ಯೂಟ್ [ಸಿಬಿಆರ್ ಐ] ನಲ್ಲಿ ನಡೆಸಿದ ಅಗ್ನಿ ಪರೀಕ್ಷೆಯಲ್ಲಿ ಇದಕ್ಕೆ ಮೊದಲ ದರ್ಜೆಯ ಶ್ರೇಯಾಂಕ ನೀಡಲಾಗಿದೆ. ಜೊತೆಗೆ ಇದಕ್ಕೆ ಇಂಡಿಯನ್ ರೋಡ್ ಕಾಂಗ್ರೆಸ್ ನಿಂದಲೂ ಮಾನ್ಯತೆ ನೀಡಲಾಗಿದೆ. ಬಿದರಿನ ತಡೆಗೋಡೆಯ ಮರು ಬಳಕೆ ಮೌಲ್ಯ 50-70% ರಷ್ಟು, ಆದರೆ ಉಕ್ಕಿನ ತಡೆಗೋಡೆಗಳ ಪ್ರಮಾಣ 30-50% ರಷ್ಟಿದೆ.

ಬಂಬೂಸ ಬಾಲ್ಕೋವ ಎಂಬ ಜಾತಿಯ ಬಿದಿರನ್ನು ಬಳಸಿ ಇದನ್ನು ಕ್ರಿಯೋಸೋಟ್ ತೈಲದಿಂದ ಸಂಸ್ಕರಿಸಲಾಗಿದೆ ಮತ್ತು ಮರು ಬಳಕೆಯ ಹೆಚ್ಚಿನ ಸಾಂದ್ರತೆಯ ಪಾಲಿ ಎಲಿಥಿನ್ [ಎಚ್ ಡಿಪಿಇ]  ಮೂಲಕ ಲೇಪನ ಮಾಡಲಾಗಿದೆ. ಈ ಸಾಧನೆ ಬಿದಿರು ವಲಯಕ್ಕೆ ಮತ್ತು ಒಟ್ಟಾರೆ ಭಾರತಕ್ಕೆ ಗಮನಾರ್ಹವಾಗಿದೆ. ಏಕೆಂದರೆ ಈ ತಡೆಗೋಡೆ ಉಕ್ಕಿಗೆ ಪರಿಪೂರ್ಣವಾಗಿ ಪರ್ಯಾಯವಾಗಿದೆ ಮತ್ತು ಪರಿಸರ ಕಾಳಜಿ ಹಾಗೂ ಅದರ ನಂತರದ ಪರಿಣಾಮಗಳನ್ನು ತಿಳಿಸಿಕೊಡುತ್ತದೆ. ಹೆಚ್ಚಿನದಾಗಿ ಇದು ಗ್ರಾಮೀಣ ಮತ್ತು ಕೃಷಿ ಸ್ನೇಹಿ ಕೈಗಾರಿಕೆಯಾಗಿದ್ದು, ಇದು ಮಹತ್ವದ ಮೈಲಿಗಲ್ಲಾಗಿದೆ.

***



(Release ID: 1904234) Visitor Counter : 170