ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ

​​​​​​​ಮಾರ್ಚ್ 4 ರಂದು 'ಮೂಲಸೌಕರ್ಯ ಮತ್ತು ಹೂಡಿಕೆ - ಪ್ರಧಾನ ಮಂತ್ರಿ ಗತಿ ಶಕ್ತಿ ರಾಷ್ಟ್ರೀಯ ಮಾಸ್ಟರ್ ಪ್ಲಾನಿನೊಂದಿಗೆ  ಲಾಜಿಸ್ಟಿಕ್ಸ್ ದಕ್ಷತೆಯನ್ನು ಸುಧಾರಿಸುವುದು' ಕುರಿತು ಬಜೆಟ್ ನಂತರದ ವೆಬಿನಾರ್ ಉದ್ದೇಶಿಸಿ ಮಾತನಾಡಲಿರುವ ಪ್ರಧಾನಮಂತ್ರಿ

Posted On: 03 MAR 2023 8:39PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 4ನೇ ಮಾರ್ಚ್, 2023 ರಂದು ಬೆಳಿಗ್ಗೆ 10 ಗಂಟೆಗೆ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ 'ಮೂಲಸೌಕರ್ಯ ಮತ್ತು ಹೂಡಿಕೆ - ಪ್ರಧಾನಮಂತ್ರಿ ಗತಿ ಶಕ್ತಿ ರಾಷ್ಟ್ರೀಯ ಮಾಸ್ಟರ್ ಪ್ಲಾನೀನೊಂದಿಗೆ ಲಾಜಿಸ್ಟಿಕ್ಸ್ ದಕ್ಷತೆಯನ್ನು ಸುಧಾರಿಸುವುದು' ಕುರಿತು ಬಜೆಟ್ ನಂತರದ ವೆಬಿನಾರ್ ಅನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಇದು ಬಜೆಟ್ ಘೋಷಣೆಗಳ ಅನುಷ್ಠಾನಕ್ಕಾಗಿ ಅಭಿಪ್ರಾಯಗಳನ್ನು ಪಡೆಯಲು ಸರ್ಕಾರವು ಆಯೋಜಿಸುತ್ತಿರುವ ಬಜೆಟ್ ನಂತರದ 12 ವೆಬಿನಾರ್ಗಳ ಭಾಗವಾಗಿದೆ.

ಕೇಂದ್ರ ಬಜೆಟ್ ಏಳು ಆದ್ಯತೆಗಳನ್ನು ಅಳವಡಿಸಿಕೊಂಡಿದ್ದು ಅವು ಒಂದಕ್ಕೊಂದು ಪೂರಕವಾಗಿವೆ ಮತ್ತು "ಅಮೃತ ಕಾಲ"ದಲ್ಲಿ ನಮಗೆ ಮಾರ್ಗದರ್ಶನ ನೀಡುವ 'ಸಪ್ತಋಷಿ'ಯಂತೆ ಕಾರ್ಯನಿರ್ವಹಿಸುತ್ತವೆ. ಮೂಲಸೌಕರ್ಯ ಮತ್ತು ಹೂಡಿಕೆಯು ಸರ್ಕಾರದ ಆದ್ಯತೆಯ ಕ್ಷೇತ್ರಗಳಲ್ಲಿ ಒಂದಾಗಿದೆ. ಮೂಲಸೌಕರ್ಯ ಮತ್ತು ಹೂಡಿಕೆಯ ಕುರಿತ ವೆಬಿನಾರ್ ಅನ್ನು ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯವು ಪ್ರಮುಖ ಸಚಿವಾಲಯವಾಗಿ, ಸಹ-ಪ್ರಮುಖ ಸಚಿವಾಲಯವಾದ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯದ ಡಿಪಿಐಐಟಿ ಸಹಯೋಗದೊಂದಿಗೆ ಆಯೋಜಿಸಲಾಗುತ್ತಿದೆ. ಇದು ಸಮಗ್ರ ಉದ್ಘಾಟನಾ ಮತ್ತು ಸಮಾರೋಪ ಅಧಿವೇಶನಗಳ ಸ್ವರೂಪದಲ್ಲಿರುತ್ತದೆ ಮತ್ತು ಮೂರು ಸಮಾನಾಂತರ ಬ್ರೇಕ್ಔಟ್ ಅಧಿವೇಶನಗಳಾಗಿ ವಿಭಜಿಸಲಾಗುತ್ತದೆ. ಬ್ರೇಕ್ಔಟ್ ಅಧಿವೇಶನಗಳು ಮೂಲಸೌಕರ್ಯ ಮತ್ತು ಹೂಡಿಕೆಗೆ ಸಂಬಂಧಿಸಿದ ಬಜೆಟ್ ಘೋಷಣೆಗಳು, ಅವುಗಳ ಅನುಷ್ಠಾನ ಮತ್ತು ಮುಂದಿನ ಮಾರ್ಗಗಳ ಕುರಿತು ಸಲಹೆಗಳನ್ನು ಒಳಗೊಂಡಿರುತ್ತವೆ.

ಮೂರು ಸಮಾನಾಂತರ ಬ್ರೇಕ್ಔಟ್ ಅಧಿವೇಶನಗಳಲ್ಲಿ - “ಬಹು-ಮಾದರಿ ಮೂಲಕ ಲಾಜಿಸ್ಟಿಕ್ಸ್ ದಕ್ಷತೆಯನ್ನು ಸುಧಾರಿಸುವುದು ಮತ್ತು ನಿರ್ಣಾಯಕ ಮೂಲಸೌಕರ್ಯದ ಅಂತರವನ್ನು ನಿವಾರಿಸುವುದು” ಅಧಿವೇಶನವನ್ನು ಬಂದರುಗಳು, ಹಡಗು ಮತ್ತು ಜಲಮಾರ್ಗಗಳ ಸಚಿವಾಲಯವು ನಡೆಸಿಕೊಡುತ್ತದೆ; "ಮೂಲಸೌಕರ್ಯ ಅಭಿವೃದ್ಧಿ ಮತ್ತು ಹೂಡಿಕೆ ಅವಕಾಶಗಳು" ಅಧಿವೇಶನವನ್ನು ಡಿಪಿಐಐಟಿ ಮತ್ತು "ಪಿಎಂ ಗತಿ ಶಕ್ತಿ ರಾಷ್ಟ್ರೀಯ ಮಾಸ್ಟರ್ ಪ್ಲಾನ್ ಕುರಿತು ಯೋಜನೆ" ಅಧಿವೇಶನವನ್ನು ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯವು ನಡೆಸಿಕೊಡುತ್ತದೆ.

ಸಂಬಂಧಪಟ್ಟ ಕೇಂದ್ರ ಸರ್ಕಾರದ ಸಚಿವಾಲಯಗಳ ಸಚಿವರು ಮತ್ತು ಕಾರ್ಯದರ್ಶಿಗಳಲ್ಲದೆ, ರಾಜ್ಯಗಳು, ಉದ್ಯಮಗಳು, ಸಂಘಟನೆಗಳು, ಹೂಡಿಕೆ ಗುಂಪುಗಳು, ವ್ಯವಹಾರ ಕಂಪನಿಗಳು ಇತ್ಯಾದಿಗಳ ಪ್ರತಿನಿಧಿಗಳು ವೆಬಿನಾರ್ ಗೆ ಹಾಜರಾಗುತ್ತಾರೆ ಮತ್ತು ಬಜೆಟ್ ಪ್ರಕಟಣೆಗಳ ಉತ್ತಮ ಅನುಷ್ಠಾನಕ್ಕಾಗಿ ಸಲಹೆಗಳ ಮೂಲಕ ಕೊಡುಗೆ ನೀಡುತ್ತಾರೆ. ಕೇಂದ್ರ ಬಜೆಟ್ ನ ಪ್ರಭಾವದ ವಿವಿಧ ಆಯಾಮಗಳ ಕುರಿತು ತಮ್ಮ ಆಲೋಚನೆಗಳನ್ನು ಹಂಚಿಕೊಳ್ಳಲು ಮತ್ತು ಅವುಗಳ ಅನುಷ್ಠಾನದ ಕುರಿತು ಚರ್ಚಿಸಲು ತಯಾರಕರು, ಖಾಸಗಿ ನಿರ್ವಾಹಕರು, ಅನುಷ್ಠಾನ ಸಂಸ್ಥೆಗಳು, ಎನ್ಜಿಒಗಳು, ಸ್ವತಂತ್ರ ತಜ್ಞರು ಮುಂತಾದವ ಪಟ್ಟಿ ಮಾಡಲಾಗಿದೆ.

ಕಾರ್ಯಕ್ರಮದಲ್ಲಿ ಮಾತನಾಡುವ ಕೆಲವು ಉದ್ಯಮದ ನಾಯಕರು ಮತ್ತು ತಜ್ಞರೆಂದರೆ; ಶ್ರೀ ಧ್ರುವ್ ಕೋಟಕ್ (ಎಂಡಿ, ಜೆಂ ಬಾಕ್ಸಿ ಗ್ರೂಪ್), ಶ್ರೀ ಆರ್ ದಿನೇಶ್ (ಎಂಡಿ, ಟಿವಿಎಸ್ ಲಾಜಿಸ್ಟಿಕ್ಸ್ ಮತ್ತು ಸಿಐಐ ನಿಯೋಜಿತ ಅಧ್ಯಕ್ಷ), ಶ್ರೀ ಅಶೋಕ್ ಸೇಥಿ (ಅಧ್ಯಕ್ಷರು, ಟಾಟಾ ಕನ್ಸಲ್ಟಿಂಗ್ ಇಂಜಿನಿಯರ್ಸ್ ಲಿಮಿಟೆಡ್), ಶ್ರೀ ಮನು ಭಲ್ಲಾ (ಅಧ್ಯಕ್ಷರು, ವೇರ್ ಹೌಸಿಂಗ್ ಅಸೋಸಿಯೇಷನ್ ಆಫ್ ಇಂಡಿಯಾ), ಶ್ರೀ ಅಜಿತ್ ಗುಲಾಬ್ಚಂದ್ (ಸಿಎಮ್ ಡಿ , ಹಿಂದೂಸ್ತಾನ್ ಕನ್ಸ್ಟ್ರಕ್ಷನ್ ಕಂಪನಿ ಲಿಮಿಟೆಡ್), ದವೀಂದರ್ ಸಂಧು (ಅಧ್ಯಕ್ಷರು, ಪ್ರೈಮಸ್ ಪಾರ್ಟನರ್ಸ್), ಶ್ರೀ ವಿನಾಯಕ್ ಪೈ (ಎಂಡಿ, ಟಾಟಾ ಪ್ರಾಜೆಕ್ಟ್ಸ್), ಶ್ರೀ ಶಶಾಂಕ್ ಶ್ರೀವಾಸ್ತವ ( ಇಡಿ, ಮಾರುತಿ ಸುಜುಕಿ).
ವೆಬಿನಾರ್ ಅನ್ನು ವರ್ಚುವಲ್ ಮಾದರಿಯಲ್ಲಿ ನಡೆಸಲಾಗುವುದು ಮತ್ತು ಆಹ್ವಾನಿತರಲ್ಲಿ ರಾಜ್ಯ ಸರ್ಕಾರದ ಪ್ರತಿನಿಧಿಗಳು, ಸ್ಥಳೀಯ ಸಂಸ್ಥೆ ಪ್ರತಿನಿಧಿಗಳು, ತಾಂತ್ರಿಕ ಸಂಸ್ಥೆಗಳು, ಉದ್ಯಮ ಪ್ರತಿನಿಧಿಗಳು, ಎನ್ಜಿಒಗಳು, ಸ್ವತಂತ್ರ ತಜ್ಞರು ಇರುತ್ತಾರೆ.

ಮೂಲಸೌಕರ್ಯವು ಆರ್ಥಿಕ ಬೆಳವಣಿಗೆ ಮತ್ತು ಅಭಿವೃದ್ಧಿಯ ಅತ್ಯಗತ್ಯ ಅಂಶವಾಗಿದೆ, ಏಕೆಂದರೆ ಇದು ವ್ಯವಹಾರಗಳು ಹೆಚ್ಚು ಸಮರ್ಥವಾಗಿ ಮತ್ತು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಲು ಅನುವು ಮಾಡಿಕೊಡುತ್ತದೆ, ಉದ್ಯೋಗಗಳನ್ನು ಸೃಷ್ಟಿಸುತ್ತದೆ ಮತ್ತು ವ್ಯಕ್ತಿಗಳು ಮತ್ತು ಸಮುದಾಯಗಳ ಜೀವನದ ಗುಣಮಟ್ಟವನ್ನು ಸುಧಾರಿಸುತ್ತದೆ. ಮೂಲಸೌಕರ್ಯದಲ್ಲಿನ ಹೂಡಿಕೆಗಳು ಆರ್ಥಿಕ ಬೆಳವಣಿಗೆಗೆ ಹೆಚ್ಚಿನ ಗುಣಕ ಪರಿಣಾಮವನ್ನು ಬೀರುತ್ತವೆ. ಕಳೆದ ಕೆಲವು ವರ್ಷಗಳಲ್ಲಿ ಸರ್ಕಾರವು ದೇಶದಾದ್ಯಂತ ವಿಶ್ವದರ್ಜೆಯ ಮೂಲಸೌಕರ್ಯಗಳನ್ನು ಖಚಿತಪಡಿಸಿಕೊಳ್ಳಲು ಬಜೆಟ್ ನಲ್ಲಿ ಹೆಚ್ಚಿನ ಅನುದಾನವನ್ನು ಒದಗಿಸುತ್ತಿದೆ.

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ದೂರದರ್ಶಿ ನಾಯಕತ್ವದ ಅಡಿಯಲ್ಲಿ ಸರ್ಕಾರವು ವಿಶ್ವ ದರ್ಜೆಯ ಮೂಲಸೌಕರ್ಯವನ್ನು ಅಭಿವೃದ್ಧಿಪಡಿಸುವ ತನ್ನ ಬದ್ಧತೆಗೆ ಅನುಗುಣವಾಗಿ ಮೂಲಸೌಕರ್ಯ ಸಚಿವಾಲಯಗಳ ಬಜೆಟ್ ಹಂಚಿಕೆಯನ್ನು ಹೆಚ್ಚಿಸಿದೆ. 2023-24ರ ಕೇಂದ್ರ ಬಜೆಟ್ ಮೂಲಭೂತ ಸೌಕರ್ಯಗಳ ಅಭಿವೃದ್ಧಿಯ ಮೇಲೆ ಕೇಂದ್ರೀಕರಿಸಿ ಹೆಚ್ಚಿಸಿರುವ ಗಮನಾರ್ಹ ಬಂಡವಾಳ ವೆಚ್ಚದ ಹಂಚಿಕೆಯು ಈ ದೃಷ್ಟಿಕೋನದ ಪ್ರತಿಬಿಂಬವಾಗಿದೆ. ಈ ವೆಚ್ಚದಲ್ಲಿ, ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳು ಮತ್ತು ರೈಲ್ವೆಗಳು ಪ್ರಮುಖ ಗುರಿಯಾಗಿವೆ, ಇವುಗಳಿಗೆ ಹಂಚಿಕೆಯು ಕ್ರಮವಾಗಿ ಶೇ.25 ಮತ್ತು ಶೇ.15 ರಷ್ಟು ಹೆಚ್ಚಳವಾಗಿದೆ. ಅಂದರೆ ಕ್ರಮವಾಗಿ 2.7 ಲಕ್ಷ ಕೋಟಿ ರೂ. ಮತ್ತು 2.4 ಲಕ್ಷ ಕೋಟಿ ರೂ. ಹೆಚ್ಚಳವಾಗಿದೆ. ಹಂಚಿಕೆಯಲ್ಲಿನ ಗಮನಾರ್ಹ ಹೆಚ್ಚಳವು ಭಾರತ ಸರ್ಕಾರವು ಈ ಹಿಂದೆ ಘೋಷಿಸಿದ ದೀರ್ಘಾವಧಿಯ ಕಾರ್ಯಕ್ರಮಗಳು ಮತ್ತು ಉಪಕ್ರಮಗಳ ಅನುಷ್ಠಾನವನ್ನು ಮುಂದುವರೆಸಲು ಅನುವು ಮಾಡಿಕೊಡುತ್ತದೆ ಎಂದು ನಿರೀಕ್ಷಿಸಲಾಗಿದೆ, ಇದು ಜಾಗತಿಕ ಪ್ರತಿಕೂಲಗಳ ನಡುವೆಯೂ ಭಾರತದ ಜಿಡಿಪಿ ಬೆಳವಣಿಗೆಗೆ ಬೆಂಬಲ ಒದಗಿಸುತ್ತದೆ.

*****



(Release ID: 1904211) Visitor Counter : 104