ಸಂಸ್ಕೃತಿ ಸಚಿವಾಲಯ
azadi ka amrit mahotsav

ಸಂಸ್ಕೃತಿ ಸಚಿವಾಲಯದ ವಿಶಿಷ್ಟ ಪ್ರಮುಖ ಉಪಕ್ರಮವಾದ 'ಧಾರಾ: ಭಾರತೀಯ ಜ್ಞಾನ ವ್ಯವಸ್ಥೆಯ ಪ್ರಗಾಥ' ಒಂದು ವರ್ಷವನ್ನು ಪೂರ್ಣಗೊಳಿಸಿದೆ


ಮೊದಲ ವರ್ಷದಲ್ಲಿ ವೈವಿಧ್ಯಮಯ ಮತ್ತು ವಿಭಿನ್ನ ವಿಷಯಗಳ ಮೇಲೆ 10 ಸಮ್ಮೇಳನಗಳನ್ನು ಯಶಸ್ವಿಯಾಗಿ ಆಯೋಜಿಸಲಾಗಿತ್ತು

ಧಾರಾದ ಮುಂದಿನ ಹಂತವು ಲೋಹಶಾಸ್ತ್ರ, ಕೃಷಿ ವಿಷಯಗಳು, ಭಾರತದ ಪ್ರಾಚೀನ ಆರ್ಥಿಕ ಚಿಂತನೆಗಳು ಮತ್ತು ಸಂಪ್ರದಾಯಗಳ ಬಗ್ಗೆ ಸಮ್ಮೇಳನಗಳನ್ನು ನಡೆಸಲಿದೆ

Posted On: 03 MAR 2023 2:33PM by PIB Bengaluru

ಸಂಸ್ಕೃತಿ ಸಚಿವಾಲಯವು 'ಆಜಾದಿ ಕಾ ಅಮೃತ್' ಮಹೋತ್ಸವದ ಆಶ್ರಯದಲ್ಲಿ ಕೈಗೊಂಡ ವಿಶಿಷ್ಟ ಮತ್ತು ಪ್ರಮುಖ ಉಪಕ್ರಮವಾದ 'ಧಾರಾ: ಭಾರತೀಯ ಜ್ಞಾನ ವ್ಯವಸ್ಥೆಯ ಪ್ರಗಾಥ' ಫೆಬ್ರವರಿ 2023ಕ್ಕೆ ಒಂದು ವರ್ಷವನ್ನು ಪೂರ್ಣಗೊಳಿಸಿದೆ. ಈ ಉಪಕ್ರಮವು ವರ್ಷವಿಡೀ ತನ್ನ ಚಟುವಟಿಕೆಗಳಿಂದ ಸಾರ್ವಜನಿಕ ಜನಜಾಗೃತಿ ಮೂಡಿಸಲು, ಮಧ್ಯಸ್ಥಗಾರರ ಭಾಗವಹಿಸುವಿಕೆಯನ್ನು ಸೃಷ್ಟಿಸುವಲ್ಲಿ ಯಶಸ್ವಿಯಾಗಿದೆ. ಭಾರತೀಯ ಜ್ಞಾನ ವ್ಯವಸ್ಥೆಯ ಬಹು ಡೊಮೇನ್ ಗಳ ಉತ್ತೇಜನ ಮತ್ತು ಪುನರುಜ್ಜೀವನಕ್ಕಾಗಿ ಒಂದು ಚೌಕಟ್ಟನ್ನು ರೂಪಿಸಲು ಸಹಾಯ ಮಾಡಿದೆ. ಈ ಕಾರ್ಯಕ್ರಮವನ್ನು ಭಾರತದ ನಾಗರಿಕ ಸಾಧನೆಗಳನ್ನು ಎತ್ತಿ ಹಿಡಿಯುವ ನಿರ್ದಿಷ್ಟ ಕ್ಷೇತ್ರಗಳಿಗೆ ಮೀಸಲಾಗಿರುವ ಉಪನ್ಯಾಸಗಳು ಮತ್ತು ಚರ್ಚೆಗಳ ಸರಣಿಯಾಗಿ ಪರಿಕಲ್ಪಿಸಲಾಗಿತ್ತು.

ಧಾರಾ ಒಂದು ಕಾಲದಿಂದ ಮತ್ತೊಂದು ಕಾಲಕ್ಕೆ ಜ್ಞಾನ ಮತ್ತು ಬುದ್ಧಿವಂತಿಕೆಯ 'ನಿರಂತರ ಹರಿವಿನ' ಕಲ್ಪನೆಯನ್ನು ಸಾಕಾರಗೊಳಿಸಿ ಅದನ್ನು ಕಾಲಾನಂತರದಲ್ಲಿ ಪ್ರಮಾಣಿಸಿ, ಮಾರ್ಪಡಿಸಿ, ಅಳವಡಿಸಿಕೊಂಡು, ವಿವಿಧ ಕ್ಷೇತ್ರಗಳಲ್ಲಿ ಮುಂದಿನ ಹಂತಕ್ಕೆ ಮುಂದುವರಿಯುವುದು ಮಾತ್ರವಲ್ಲದೆ ನಮ್ಮ ಗತಕಾಲದಿಂದ ನಮಗೆ ಈಗಾಗಲೇ ಲಭ್ಯವಿರುವ ಕಾರ್ಯದ ಹಿನ್ನೆಲೆಯಲ್ಲಿ ಅದನ್ನು ಅಳವಡಿಸಿಕೊಳ್ಳುತ್ತೇವೆ. ನವದೆಹಲಿಯ ಎಐಸಿಟಿಇಯಲ್ಲಿರುವ ಶಿಕ್ಷಣ ಸಚಿವಾಲಯದ ಇಂಡಿಯನ್ ನಾಲೆಡ್ಜ್ ಸಿಸ್ಟಮ್ಸ್ (ಐಕೆಎಸ್) ವಿಭಾಗವು ಧಾರಾ ಕಾರ್ಯಕ್ರಮಗಳಿಗೆ ಪ್ರಮುಖ ಕಾರ್ಯಕಾರಿ ಪಾಲುದಾರನಾಗಿದೆ.

 

ಧಾರಾ ಸರಣಿಯ ಉಗಮದ ಬಗ್ಗೆ ಮಾತನಾಡಿದ ಸಂಸ್ಕೃತಿ ಸಚಿವಾಲಯದ ಕಾರ್ಯದರ್ಶಿ ಶ್ರೀ ಗೋವಿಂದ್ ಮೋಹನ್, "'ಆಜಾದಿ ಕಾ ಅಮೃತ್' ಮಹೋತ್ಸವವು ಪ್ರಗತಿಪರ ಭಾರತದ 75 ವರ್ಷಗಳನ್ನು ಮತ್ತು ಅದರ ಜನರ ಭವ್ಯ ಇತಿಹಾಸ, ಸಂಸ್ಕೃತಿ ಮತ್ತು ಸಾಧನೆಗಳನ್ನು ಆಚರಿಸುವ ಮತ್ತು ಸ್ಮರಿಸುವ ಭಾರತ ಸರ್ಕಾರದ ಉಪಕ್ರಮವಾಗಿದೆ. ದೇಶಾದ್ಯಂತ ವ್ಯಕ್ತಿಗಳು ಮತ್ತು ಸಮುದಾಯಗಳು ಮುನ್ನಡೆಸಿದ ಹಲವಾರು ಆಂದೋಲನಗಳ ಹಿನ್ನೆಲೆಯಲ್ಲಿ 100 ವರ್ಷಗಳಿಗಿಂತ ಹೆಚ್ಚು ಕಾಲದ ಸುದೀರ್ಘ ಹೋರಾಟದ ನಂತರ, ಭಾರತವು 1947ರಲ್ಲಿ ಭಾರತೀಯ ಉಪಖಂಡದಿಂದ ವಿದೇಶಿ ಆಡಳಿತಗಾರರನ್ನು ಯಶಸ್ವಿಯಾಗಿ ಹೊರಗಟ್ಟಿದೆ. ಈ ಸಮಯದ ಆರಂಭದಿಂದಲೂ ಭಾರತದ ಪ್ರಯಾಣವು ತತ್ಪರಿಣಾಮದ ಘಟನೆಗಳಿಂದ ಕೂಡಿದೆ, ಅವುಗಳಲ್ಲಿ ಪ್ರತಿಯೊಂದೂ ಭಾರತದ ಕಲ್ಪನೆಯನ್ನು ಬಹಳ ವಿಶಿಷ್ಟ ಮತ್ತು ಅನಿವಾರ್ಯ ರೀತಿಯಲ್ಲಿ ನಿರೂಪಿಸಿದೆ. ದೀರ್ಘಕಾಲದವರೆಗೆ, ಈ ಘಟನೆಗಳು ಜಾನಪದಕ್ಕೆ ಸೀಮಿತವಾದ ಕಥೆಗಳು ಅಥವಾ ಇತಿಹಾಸಕಾರರ ಸಾಮೂಹಿಕದ ಭಾಗವಾಗಿದ್ದವು. ಇದು ನಾವು ಇತಿಹಾಸದ ಪುಟಗಳನ್ನು ತೆರೆದು ನೋಡಿ, ಇದು ಭಾರತಕ್ಕೆ ಸೇರಿದ್ದು ಎಂದು ನಮಗೆ ತಿಳಿಯದ ಸಾಧನೆಗಳನ್ನು ಆಚರಿಸುವ ಸಮಯ; ಸ್ವಾಭಾವಿಕವಾಗಿ ನಾವು ಭಾರತೀಯರು, ಇದು ಭಾರತಕ್ಕೆ ಸೇರಿದ ನಮ್ಮ ಕೊಡುಗೆ ಎಂದು ಹೇಳಿಕೊಳ್ಳಿ. ಮಾನವೀಯತೆಯು ಅಭಿವೃದ್ಧಿ ಹೊಂದಲು ಮತ್ತು ಸಹಬಾಳ್ವೆ ನಡೆಸಲು ಜಗತ್ತನ್ನು ಉತ್ತಮ ಸ್ಥಳವನ್ನಾಗಿ ಮಾಡಲು ಭಾರತದ ಕೊಡುಗೆಯ ಮುಂದುವರಿಕೆಯನ್ನು ಮುಂದುವರಿಸಿ" ಎಂದು ಹೇಳಿದ್ದಾರೆ.

ಧಾರಾ ಸರಣಿಯಲ್ಲಿ ಈವರೆಗೆ 10 ಸಮ್ಮೇಳನಗಳನ್ನು ಯಶಸ್ವಿಯಾಗಿ ಆಯೋಜಿಸಲಾಗಿದೆ. ಗಣಿತಶಾಸ್ತ್ರ, ಭಾರತೀಯ ರಾಷ್ಟ್ರೀಯ ಕ್ಯಾಲೆಂಡರ್, ಧಾರಾ ಖಗೋಳವಿಜ್ಞಾನ ಮತ್ತು ಖಗೋಳ ಭೌತಶಾಸ್ತ್ರಕ್ಕೆ ಭಾರತೀಯರ ಕೊಡುಗೆ, ರಾಷ್ಟ್ರೀಯ ಶಿಕ್ಷಣ ನೀತಿ (ಎನ್ಇಪಿ) 2020 ಮತ್ತು ಸಂಸ್ಕೃತಿಯ ಪಾತ್ರದ ಬಗ್ಗೆ ಐಕೆಎಸ್ ಮೇಳ, ಆಯುರ್ವೇದ (1 ಮತ್ತು 2), ವಿವಿಧ ರಾಷ್ಟ್ರೀಯ ಯೋಧರ ಸಂಪ್ರದಾಯಗಳ ಬಗ್ಗೆ ರಾಷ್ಟ್ರೀಯ ಸಮರ ಕಲೆಗಳ ಮೇಳ, ಭಾರತದ ಅದ್ಭುತ ಕಡಲ ಸಂಪ್ರದಾಯಗಳ ಬಗ್ಗೆ ಸಮುದ್ರಮಂಥನ, ಭಾರತೀಯ ರಸಾಯನಶಾಸ್ತ್ರ ಹಾಗೂ ಸಂಗೀತ ಮತ್ತು ನಾಟ್ಯ ಪರಂಪರೆ, ರಸಾಯನಶಾಸ್ತ್ರ ಎಂಬ ಶೀರ್ಷಿಕೆಯ ವೈವಿಧ್ಯಮಯ ಮತ್ತು ವಿಶಿಷ್ಟ ವಿಷಯಗಳ ಮೇಲೆ ಈ ಸಮ್ಮೇಳನಗಳು ಯಶಸ್ವಿಯಾಗಿ ನಡೆದಿವೆ. ವೈಜ್ಞಾನಿಕ ಸಂಶ್ಲೇಷಣೆ, ಪ್ರಸರಣ ಮತ್ತು ಸಾಂಪ್ರದಾಯಿಕ ಜ್ಞಾನ ವ್ಯವಸ್ಥೆಗಳ ರಕ್ಷಣೆಗಾಗಿ ಕಠಿಣ ಚೌಕಟ್ಟುಗಳನ್ನು ಬಲಪಡಿಸಲು ಅನುವು ಮಾಡಿಕೊಡುವ ಕಾರ್ಯತಂತ್ರದ ಸಹಯೋಗಗಳನ್ನು ರಚಿಸಲು ವಿವಿಧ ಸಚಿವಾಲಯಗಳು, ಶಿಕ್ಷಣ ತಜ್ಞರು, ಉದ್ಯಮ ವೃತ್ತಿಪರರು, ಜ್ಞಾನ ನಂಪಾದಕರು ಮತ್ತು ಇತರ ಮಧ್ಯಸ್ಥಗಾರರನ್ನು ಒಟ್ಟುಗೂಡಿಸುವ ಗುರಿಯನ್ನು ಈ ಸಮ್ಮೇಳನಗಳು ಹೊಂದಿದ್ದವು.

ಈ ಸರಣಿಯಲ್ಲಿ ಯೋಜಿಸಲಾಗುವ ಮುಂದಿನ ಸಮ್ಮೇಳನಗಳು ಭಾರತದ ಲೋಹಶಾಸ್ತ್ರ, ಕೃಷಿ ಮತ್ತು ಪ್ರಾಚೀನ ಆರ್ಥಿಕ ಚಿಂತನೆಗಳು ಮತ್ತು ಸಂಪ್ರದಾಯಗಳನ್ನು ಒಳಗೊಳ್ಳಲಿವೆ.

ಧಾರಾದ ಪ್ರತಿಯೊಂದು ವಿಷಯಕ್ಕೂ, ಈ ವಿಶೇಷ ಉಪಕ್ರಮದ ದೂರಗಾಮಿ ದೃಷ್ಟಿಕೋನವು ವಿಷನ್ 2047 ಡಾಕ್ಯುಮೆಂಟ್ ಅನ್ನು ರಚಿಸುವುದಾಗಿದೆ. ಇದು ಮುಂಬರುವ 25 ವರ್ಷಗಳಲ್ಲಿ ಈ ಪ್ರತಿಯೊಂದು ನಿರ್ದಿಷ್ಟ ಡೊಮೇನ್ ಗಳು ಹೇಗೆ ಅಭಿವೃದ್ಧಿ ಹೊಂದಬಹುದು ಹಾಗೂ ವೃದ್ದಿಸಬಹುದು ಎಂಬುದಕ್ಕೆ ಸರ್ಕಾರವು ಅಪೇಕ್ಷಿತ ಗುರಿಗಳನ್ನು ಪರಿಣಾಮಕಾರಿಯಾಗಿ ಕಾರ್ಯಗತಗೊಳಿಸಲು ಅನುವು ಮಾಡಿಕೊಡುವ ದೃಢ ಸಂಕಲ್ಪದೊಂದಿಗೆ,  ಆ ಡೊಮೇನ್ ನ ಪ್ರಮುಖ ಮಧ್ಯಸ್ಥಗಾರರೊಂದಿಗೆ
ಕಾರ್ಯತಂತ್ರದ ಮಾರ್ಗಸೂಚಿಯನ್ನು ಒದಗಿಸುತ್ತದೆ. ಪ್ರತಿ ಸಮ್ಮೇಳನವು ನಿರ್ದಿಷ್ಟವಾಗಿ ಜ್ಞಾನ ವ್ಯವಸ್ಥೆಯ ಚಾರಿತ್ರಿಕತೆ ಮತ್ತು ವೈವಿಧ್ಯತೆಯನ್ನು ಪರಿಹರಿಸುವುದು, ಜ್ಞಾನದ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಅನೇಕ ಮಧ್ಯಸ್ಥಗಾರರ ಭಾಗವಹಿಸುವಿಕೆಯನ್ನು ಸುಗಮಗೊಳಿಸುವುದು ಮತ್ತು ಸಮಕಾಲೀನ ವೈಜ್ಞಾನಿಕ ತತ್ವಗಳು ಮತ್ತು ಸ್ಥಳೀಯ ಜ್ಞಾನಶಾಸ್ತ್ರದ ಆಧಾರದ ಮೇಲೆ ನಾವೀನ್ಯತೆ ಮತ್ತು ಅನ್ವಯಕ್ಕಾಗಿ ಕಾರ್ಯತಂತ್ರಗಳನ್ನು ರೂಪಿಸುವುದು ಮತ್ತು ಆಯಾ ಜ್ಞಾನ ಕ್ಷೇತ್ರಗಳ ಸಾಧಕರ ನಡುವಿನ ಸಹಯೋಗದ ಪ್ಯಾನಲ್ ಚರ್ಚೆಗಳು ಮತ್ತು ಸಾರ್ವಜನಿಕರ ಭಾಗವಹಿಸುವಿಕೆಯ ಮೇಲೆ ಕೇಂದ್ರೀಕರಿಸಿತ್ತು. ಈ ಸಮ್ಮೇಳನಗಳು ತಾವು ನಡೆಸಿದ ವಿಷಯ ಮತ್ತು ಪ್ರದೇಶಕ್ಕೆ ಅನುಗುಣವಾಗಿ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಸಹ ಒಳಗೊಂಡಿದ್ದವು.

ಸಮ್ಮೇಳನಗಳ ವಿವರಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

ಪ್ರತಿ ಧಾರಾ ಕಾರ್ಯಕ್ರಮದಲ್ಲಿ ಪ್ರತಿದಿನ ಸಂಜೆ ವ್ಯಾಪಕ ಶ್ರೇಣಿಯ ಉನ್ನತ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಿದ್ದವು, ಅವರು ಕಲೆ ಮತ್ತು ಸಂಸ್ಕೃತಿಯು ಭಾರತೀಯ ಜ್ಞಾನ ವ್ಯವಸ್ಥೆಗಳ ಪ್ರಸರಣ, ಪ್ರಸಾರ ಮತ್ತು ಜನಪ್ರಿಯಗೊಳಿಸುವಿಕೆಗೆ ಅತ್ಯಂತ ಶಕ್ತಿಯುತ ಸಾಧನಗಳಾಗಿ ಸೇವೆ ಸಲ್ಲಿಸಿ ಮತ್ತು ಅದನ್ನು ಮುಂದುವರಿಸಿದ್ದಾರೆ ಎಂದು ಪ್ರದರ್ಶಿಸಿದರು. ಧಾರಾ ಕಾರ್ಯಕ್ರಮದ ಎಲ್ಲಾ ಅವತರಣಿಕೆಗಳು ಸಂದರ್ಭಗಳಲ್ಲಿಯೂ ಮುದ್ರಣ ಮತ್ತು ಶ್ರವಣ-ದೃಶ್ಯ ವೇದಿಕೆಗಳ ಮೂಲಕ ಬಹಳ ವ್ಯಾಪಕವಾದ ಮಾಧ್ಯಮ ಪ್ರಸಾರವನ್ನು ಪಡೆದುಕೊಂಡವು. ಲಕ್ಷಾಂತರ ಜನರಲ್ಲಿ ನಮ್ಮ ಶ್ರೀಮಂತ ಜ್ಞಾನ ಪರಂಪರೆಯ ಬಗ್ಗೆ ಜಾಗೃತಿ ಮೂಡಿಸಿದವು. ವಿವಿಧ ರೂಪಗಳಲ್ಲಿ ಜನ-ಭಾಗೀದಾರಿತ್ವವು ಧಾರಾದ ಮುಖ್ಯ ಉದ್ದೇಶಗಳ ಭಾಗವಾಗಿತ್ತು, ಅದು ಶಾಸ್ತ್ರದಿಂದ ಸಮಾಜದವರೆಗೆ ಎಂಬ ನುಡಿಯಂತೆ ಪಠ್ಯ ಜ್ಞಾನವನ್ನು ಜನರಿಗೆ ತಲುಪಿಸುವುದಾಗಿತ್ತು.

ಧಾರಾ ಸರಣಿಯು ಅದರ ಮುಂದುವರೆದ ನಾಗರಿಕ ಪರಂಪರೆ ಮತ್ತು ಜ್ಞಾನ ವ್ಯವಸ್ಥೆಗಳಿಗೆ ರಾಷ್ಟ್ರೀಯ ಪ್ರಜ್ಞೆಯನ್ನು ಜಾಗೃತಗೊಳಿಸುವ ಪ್ರಮುಖ ಶಕ್ತಿಯಾಗಿದೆ. ಈ ಸಂಪ್ರದಾಯಗಳ ಚಾರಿತ್ರಿಕತೆ ಮತ್ತು ವೈವಿಧ್ಯತೆಯನ್ನು ಪ್ರಚಾರ ಮಾಡಲು ಮತ್ತು ಸಂರಕ್ಷಿಸಲು; ಅವುಗಳನ್ನು ರಾಷ್ಟ್ರೀಯ ಪ್ರಜ್ಞೆಗೆ ತರಲು ನವೀನ ವಿಧಾನಗಳನ್ನು ರಚಿಸಲು; ಸ್ಥಳೀಯ ಸಂಪ್ರದಾಯಗಳು ಮತ್ತು ಜ್ಞಾನ ವ್ಯವಸ್ಥೆಗಳನ್ನು ಉತ್ತೇಜಿಸುವ ಪ್ರಾಮುಖ್ಯತೆಗಾಗಿ; ಸಾಧಕರು, ಸಚಿವಾಲಯಗಳು, ವಿದ್ವಾಂಸರು ಮತ್ತು ಸಾರ್ವಜನಿಕರ ನಡುವೆ ಸಹಯೋಗದ ಪ್ರಯತ್ನಗಳನ್ನು ಸುಗಮಗೊಳಿಸಲು; ರಾಷ್ಟ್ರೀಯ ಆಂದೋಲನವನ್ನು ಮುನ್ನಡೆಸಲು ಯುವಕರನ್ನು ಸಶಕ್ತಗೊಳಿಸುವುದು ಮತ್ತು ಮುಖ್ಯವಾಗಿ, ಭಾರತೀಯ ಜ್ಞಾನ ವ್ಯವಸ್ಥೆಗಳ (ಐಕೆಎಸ್) ವಿವಿಧ ಕ್ಷೇತ್ರಗಳಲ್ಲಿ ಶೈಕ್ಷಣಿಕ ಸಂಶೋಧನೆಯಲ್ಲಿ ಕಠಿಣತೆ ಮತ್ತು ಉತ್ಕೃಷ್ಟತೆಯನ್ನು ಉತ್ತೇಜಿಸುವುದಕ್ಕೆ ಇದು ಒತ್ತು ನೀಡಿದೆ. ಧಾರಾ ಸರಣಿಯು ಐಕೆಎಸ್ ನ ಮಲ್ಟಿಮೀಡಿಯಾ ಮತ್ತು ಮಲ್ಟಿಮೋಡಲ್ ಪ್ರಾತಿನಿಧ್ಯಗಳನ್ನು ಬಳಸಿಕೊಳ್ಳುವ ಅಗತ್ಯವನ್ನು ಎತ್ತಿ ತೋರಿಸಿದೆ. ನಮ್ಮ ಸಂಪ್ರದಾಯಗಳು ಮತ್ತು ಇತಿಹಾಸದ ಆಳಕ್ಕೆ ಇಳಿಯುವಾಗ ಈ ವ್ಯವಸ್ಥೆಯಲ್ಲಿ ಒಂದು ನಿರ್ದಿಷ್ಟ ಜ್ಞಾನ ಕ್ಷೇತ್ರದ ವೈವಿಧ್ಯತೆ ಮತ್ತು ಆಳವನ್ನು ಅರ್ಥಮಾಡಿಕೊಳ್ಳುವ ಮಹತ್ವವನ್ನು ಎತ್ತಿ ತೋರಿಸಿದೆ, ಇದರಿಂದ ಭವಿಷ್ಯದ ಪೀಳಿಗೆಯು ಧಾರಾದೊಂದಿಗೆ ಅರ್ಥಪೂರ್ಣವಾಗಿ ತಮ್ಮನ್ನು ತಾವು ತೊಡಗಿಸಿಕೊಳ್ಳಬಹುದು.

ಸ್ವತಂತ್ರ ಆಧುನಿಕ ರಾಷ್ಟ್ರವಾಗಿ ನಮ್ಮ ಇತಿಹಾಸವು 75 ವರ್ಷಗಳಷ್ಟು ಹಳೆಯದಾದರೂ, ನಮ್ಮ ನಾಗರಿಕತೆಯು 5,000 ವರ್ಷಗಳಿಗಿಂತಲೂ ಹಳೆಯದು. ಮಾನವ ಜ್ಞಾನಕ್ಕೆ ಭಾರತದ ಕೊಡುಗೆ ಅಪಾರವಾಗಿದೆ. ಈ ದಿಕ್ಕಿನಲ್ಲಿ ಕೇಂದ್ರೀಕೃತ ಪ್ರಯತ್ನವನ್ನು ಪ್ರಾರಂಭಿಸಲು ಸ್ವಾತಂತ್ರ್ಯದ ಎಪ್ಪತ್ತೈದು ವರ್ಷಗಳ ಸ್ಮರಣಾರ್ಥವಾದ 'ಆಜಾದಿ ಕಾ ಅಮೃತ್' ಮಹೋತ್ಸವದ ಸಂದರ್ಭಕ್ಕಿಂತ ಉತ್ತಮ ಸಮಯ ಯಾವುದೂ ಇಲ್ಲ.

***

 


(Release ID: 1904083) Visitor Counter : 181


Read this release in: English , Urdu , Hindi , Marathi