ಕಾರ್ಪೋರೇಟ್ ವ್ಯವಹಾರಗಳ ಸಚಿವಾಲಯ
azadi ka amrit mahotsav

ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ನಾಳೆ “ಎಕಾನಮಿಕ್ಸ್ ಆಫ್ ಕಾಂಪಿಟೇಷನ್ ಲಾ” 8 ನೇ ರಾಷ್ಟ್ರೀಯ ಸಮ್ಮೇಳನ 

Posted On: 02 MAR 2023 3:34PM by PIB Bengaluru

ಭಾರತೀಯ ಸ್ಪರ್ಧಾ ಆಯೋಗವು (CCI) ನಾಳೆ ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ “ಎಕಾನಮಿಕ್ಸ್ ಆಫ್ ಕಾಂಪಿಟೇಷನ್ ಲಾ” ರಾಷ್ಟ್ರೀಯ ಸಮ್ಮೇಳನದ 8 ನೇ ಆವೃತ್ತಿಯನ್ನು ಆಯೋಜಿಸುತ್ತಿದೆ. ಭಾರತೀಯ ಸ್ಪರ್ಧಾ ಆಯೋಗವು  2016 ರಿಂದ ಪ್ರತಿ ವರ್ಷ ಈ ಸಮ್ಮೇಳನವನ್ನು ಆಯೋಜಿಸಲಾಗುತ್ತಿದೆ.

ಕೇಂದ್ರ ಹಣಕಾಸು ಸಚಿವಾಲಯದ ಮುಖ್ಯ ಆರ್ಥಿಕ ಸಲಹೆಗಾರ ಡಾ. ವಿ ಅನಂತ ನಾಗೇಶ್ವರನ್ ಅವರು ಸಮ್ಮೇಳನ ಉದ್ಘಾಟನೆ ಮಾಡಿ, ಪ್ರಧಾನ ಭಾಷಣ ಮಾಡಲಿದ್ದಾರೆ.

ಸಮ್ಮೇಳನವು ಮುಖ್ಯ ಅಧಿವೇಶನ ಮತ್ತು ಎರಡು ಪ್ರತ್ಯೇಕ ಅಧಿವೇಶನಗಳಾಗಿ ನಡೆಯುತ್ತದೆ. ಈ ವರ್ಷದ ಸಮ್ಮೇಳನವು ‘ಆಂಟಿ  ಟ್ರಸ್ಟ್ ಮತ್ತು ರೆಗ್ಯುಲೇಷನ್: ಇಂಟರ್ಫೇಸ್ ಮತ್ತು ಸಿನರ್ಜಿ’ಎಂಬ ವಿಷಯದ ಬಗ್ಗೆ ಚರ್ಚೆ ನಡೆಸುವ ನಿರೀಕ್ಷೆ ಇದೆ.

ವಿಧಿ ಲೀಗಲ್ ಸಂಸ್ಥಾಪಕ ಮತ್ತು ಸಂಶೋಧನಾ ನಿರ್ದೇಶಕರಾದ ಡಾ ಅರ್ಘ್ಯ ಸೇನ್ ಗುಪ್ತಾ ಅವರು ಸಮಗ್ರ ಅಧಿವೇಶನದ ಮಾಡರೇಟರ್ ಆಗಿದ್ದಾರೆ. ಎರಡು ತಾಂತ್ರಿಕ ಅಧಿವೇಶನಗಳ ಅಧ್ಯಕ್ಷತೆಯನ್ನು ದೆಹಲಿಯ ಪ್ರತಿಷ್ಠಿತ ಎನ್ಎಲ್ ಯು ಪ್ರಾಧ್ಯಾಪಕ ಡಾ. ಎಂ. ಎಸ್. ಸಾಹೂ ಅವರು, ಮತ್ತು ದೆಹಲಿ ಸ್ಕೂಲ್ ಆಫ್ ಎಕನಾಮಿಕ್ಸ್ ನ ನಿವೃತ್ತ ಹಿರಿಯ ಪ್ರಾಧ್ಯಾಪಕ ಡಾ. ಆದಿತ್ಯ ಭಟ್ಟಾಚಾರ್ಯ ಅವರು ವಹಿಸಲಿದ್ದಾರೆ. 

ಕಾನೂನಿನ ಅರ್ಥಶಾಸ್ತ್ರದಲ್ಲಿ ಆಸಕ್ತಿಯನ್ನು ಹೆಚ್ಚಿಸುವ ಮತ್ತು ಅದನ್ನು ಉಳಿಸಿಕೊಳ್ಳುವ ಪ್ರಯತ್ನ ಮಾಡುವುದು ಮತ್ತು ಮತ್ತು ಅರ್ಥಶಾಸ್ತ್ರಜ್ಞರ ನಿರ್ಣಾಯಕ ಸಮೂಹವನ್ನು ಸೃಷ್ಟಿಸುವುದು ಈ ರಾಷ್ಟ್ರೀಯ ಸಮಾವೇಶದ ಮುಖ್ಯ ಉದ್ದೇಶವಾಗಿದೆ.

ಕಾನೂನಿನ ಅರ್ಥಶಾಸ್ತ್ರದ ಕ್ಷೇತ್ರದ ವಿದ್ವಾಂಸರು, ಅಭ್ಯಾಸಕಾರರು, ಶಿಕ್ಷಣ ತಜ್ಞರು ಮತ್ತು ತಜ್ಞರು ಇದರಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಸಮ್ಮೇಳನದಲ್ಲಿ ಜ್ಞಾನ ಹಂಚಿಕೆ ಮತ್ತು ಚರ್ಚೆಗಳು ಮತ್ತು ಕಾಯಿದೆಯ ಜಾರಿಗಾಗಿ ಆರ್ಥಿಕತೆಯ ಆಧಾರವನ್ನು ಒದಗಿಸುತ್ತವೆ.

ಸಮ್ಮೇಳನದ ಪ್ರಮುಖ ಉದ್ದೇಶಗಳು :-

ಅರ್ಥಶಾಸ್ತ್ರದ ಕ್ಷೇತ್ರದಲ್ಲಿ ಸಮಕಾಲೀನ ವಿಷಯಗಳ ಕುರಿತು ಸಂಶೋಧನೆ ಮತ್ತು ಚರ್ಚೆಯನ್ನು ಉತ್ತೇಜಿಸುವುದು.

ಭಾರತೀಯ ಸಂದರ್ಭಕ್ಕೆ ಸಂಬಂಧಿಸಿದ ಸ್ಪರ್ಧೆಯ ವಿಷಯಗಳ ಬಗ್ಗೆ ಉತ್ತಮ ತಿಳಿವಳಿಕೆಯನ್ನು ಅಭಿವೃದ್ಧಿಪಡಿಸುವುದು. 

ಭಾರತದಲ್ಲಿ ಸ್ಪರ್ಧಾತ್ಮಕ ಕಾನೂನನ್ನು ಜಾರಿಗೊಳಿಸಲು ತೀರ್ಮಾನಗಳನ್ನು ತೆಗೆದುಕೊಳ್ಳುವುದು

****


(Release ID: 1903818) Visitor Counter : 125