ಉಪರಾಷ್ಟ್ರಪತಿಗಳ ಕಾರ್ಯಾಲಯ

"ನಮ್ಮ ಡಿ.ಎನ್.ಎ.ಯಲ್ಲಿ ನಾವು ನಾವೀನ್ಯತೆ, ಸಂಶೋಧನೆ, ಉದ್ಯಮ, ಉದ್ಯಮಶೀಲತೆಯನ್ನು ಹೊಂದಿದ್ದೇವೆ ಮತ್ತು ಅದನ್ನು ನಾವು ಮಾಡಿ ತೋರಿಸಬೇಕು" - ಉಪರಾಷ್ಟ್ರಪತಿ


ನೂತನ ರಾಷ್ಟ್ರೀಯ ಶಿಕ್ಷಣ ನೀತಿ -2020 ಒಂದು ಪರಿವರ್ತಕ ಸುಧಾರಣೆಯಾಗಿದೆ; ಪದವಿ ಆಧಾರಿತ ಸಂಸ್ಕೃತಿಯಿಂದ ನಮ್ಮನ್ನು ದೂರವಿಡುತ್ತದೆ ಮತ್ತು ಉತ್ಪಾದಕ ಹಾದಿಯಲ್ಲಿ ನಮ್ಮನ್ನು ಕರೆದೊಯ್ಯುತ್ತದೆ - ಉಪರಾಷ್ಟ್ರಪತಿ

ಒತ್ತಡವನ್ನು ತೆಗೆದುಕೊಳ್ಳಬೇಡಿ, ಪ್ರಯತ್ನಿಸಲು ಹಿಂಜರಿಯಬೇಡಿ ಏಕೆಂದರೆ ತಪ್ಪುಗಳಾಗಬಹುದು – ಎಂದು ಉಪರಾಷ್ಟ್ರಪತಿಯವರು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು

ಸರ್ಕಾರವನ್ನು ಹೊಣೆಗಾರರನ್ನಾಗಿ ಮಾಡಲು ಸಂಸತ್ತು ಒಂದು ಉತ್ತಮ ವೇದಿಕೆಯಾಗಿದೆ ; ಸಂಸತ್ತಿನ ಅಡಚಣೆಗಳು ಆ ಉದ್ದೇಶವನ್ನು ಪೂರೈಸುವುದಿಲ್ಲ ಎಂದು ಉಪರಾಷ್ಟ್ರಪತಿಯವರು ಹೇಳಿದರು

ಬೆಂಗಳೂರಿನಲ್ಲಿ ಡಾ. ಎಂ.ಎಸ್.ರಾಮಯ್ಯ ಅವರ ಶತಮಾನೋತ್ಸವ ಆಚರಣೆಯನ್ನು ಉದ್ದೇಶಿಸಿ ಉಪರಾಷ್ಟ್ರಪತಿಯವರು ಭಾಷಣ ಮಾಡಿದರು

Posted On: 01 MAR 2023 4:18PM by PIB Bengaluru

ಭಾರತೀಯ ನಾವೀನ್ಯತೆ, ಸಂಶೋಧನೆ ಮತ್ತು ಉದ್ಯಮಶೀಲತೆಯ ಶಕ್ತಿಯ ಮಹತ್ವವನ್ನು ಉಪರಾಷ್ಟ್ರಪತಿ ಶ್ರೀ ಜಗದೀಪ್ ಧಂಖರ್ ಅವರು ವಿವರಿಸಿದರು. ಭಾರತದ ಹೆಚ್ಚುತ್ತಿರುವ ಸಾಧನೆಗಳಲ್ಲಿ ಹೆಮ್ಮೆ ಪಡುವಂತೆ ನಾಗರಿಕರಿಗೆ ಕರೆ ನೀಡಿದರು. ಅವರು ಇಂದು ಬೆಂಗಳೂರಿನ ಗೋಕುಲ ಶಿಕ್ಷಣ ಪ್ರತಿಷ್ಠಾನದ ಸಂಸ್ಥಾಪಕ ಅಧ್ಯಕ್ಷ ದಿವಂಗತ ಡಾ.ಎಂ.ಎಸ್ ರಾಮಯ್ಯ ಅವರ ಶತಮಾನೋತ್ಸವ ಸಮಾರಂಭವನ್ನು ಉದ್ದೇಶಿಸಿ ಮಾತನಾಡುತ್ತಿದ್ದರು. 


ಉಪರಾಷ್ಟ್ರಪತಿ ಅವರು ಸಮಾಜದ ಪರಿವರ್ತನೆಗೆ ಶಿಕ್ಷಣದ ಮಹತ್ವವನ್ನು ಒತ್ತಿ ಹೇಳಿದರು. ಪ್ರಾಚೀನ ಕಾಲದಿಂದಲೂ ಭಾರತವು ನಳಂದ, ತಕ್ಷಶಿಲಾ, ವಲ್ಲಭಿ ಮತ್ತು ವಿಕ್ರಮಶಿಲೆಯಂತಹ ಶ್ರೇಷ್ಠ ಶಿಕ್ಷಣ ಕೇಂದ್ರಗಳಿಗೆ ನೆಲೆಯಾಗಿದೆ ಎಂದು ಅವರು ವಿವರಿಸಿದರು. ಭಾರತದ ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚಿನ ವಿಷಯಗಳನ್ನು ಸೇರ್ಪಡೆ ಮತ್ತು ಶ್ರೇಷ್ಠತೆಯನ್ನು ತರುವಲ್ಲಿ ಹೊಸ ಶಿಕ್ಷಣ ನೀತಿಯ ಮಹತ್ವವನ್ನು ಉಪರಾಷ್ಟ್ರಪತಿ ಶ್ರೀ ಧಂಖರ್ ಅವರು ವಿವರಿಸಿ ಹೇಳಿದರು. ಎನ್.ಇ.ಪಿ-2020 ಅನ್ನು ಬದಲಾವಣೆಯ ಪರಿವರ್ತಕ ( ಗೇಮ್ ಚೇಂಜರ್) ಎಂದು ವಿವರಿಸಿದ ಅವರು, "ಇದು ನಮ್ಮ ಶಿಕ್ಷಣ ವ್ಯವಸ್ಥೆಯಲ್ಲಿ ಕ್ರಾಂತಿಗೊಳಿಸುತ್ತದೆ, ಇದು ನಮ್ಮನ್ನು ಪದವಿ ಆಧಾರಿತ ಸಂಸ್ಕೃತಿಯಿಂದ ದೂರವಿಡುತ್ತದೆ ಮತ್ತು ಉತ್ಪಾದಕ ಹಾದಿಯಲ್ಲಿ ನಮ್ಮನ್ನು ಬದಲಾಯಿಸುತ್ತದೆ" ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು.

ವಿದ್ಯಾರ್ಥಿಗಳು ಒತ್ತಡ ಮತ್ತು ಉದ್ವೇಗಕ್ಕೆ ಒಳಗಾಗಬೇಡಿ ಎಂದು ಸಲಹೆ ನೀಡಿದ ಅವರು, ಸ್ಪರ್ಧಾತ್ಮಕ ಸನ್ನಿವೇಶದಲ್ಲಿ ಸಿಲುಕಿಕೊಳ್ಳಬೇಡಿ ಎಂದು ವಿದ್ಯಾರ್ಥಿಗಳಿಗೆ ಹಿತನುಡಿ ಹೇಳಿದರು. “ಪ್ರಯತ್ನಿಸಲು ಹಿಂಜರಿಯಬೇಡಿ ಏಕೆಂದರೆ ತಪ್ಪಾಗಿರಬಹುದು; ಎಡವಿ ಬೀಳದೆ ದೊಡ್ಡದನ್ನು ಸಾಧಿಸಲಾಗುವುದಿಲ್ಲ, ”ಎಂದು ಅವರು ವಿದ್ಯಾರ್ಥಿಗಳಿಗೆ ಹೇಳಿದರು.

ಜಾಗತಿಕ ಮಟ್ಟದಲ್ಲಿ ಭಾರತದ ಅಪ್ರತಿಮ ಪ್ರಗತಿಯ ಏರಿಕೆ ಹಂತವನ್ನು ಶ್ಲಾಘಿಸಿದ ಶ್ರೀ ಧಂಖರ್ ಅವರು, “ಇಂದು ಇಡೀ ಜಗತ್ತು ಭಾರತವನ್ನು ಗೌರವಿಸುತ್ತದೆ ಮತ್ತು ಭಾರತದ ಧ್ವನಿಯನ್ನು ಕೇಳುತ್ತದೆ “ಎಂದು ಹೇಳಿದರು.

ಇಂದು ಕೆಲವರಿಗೆ, ಸಂಸತ್ತು ಸರ್ಕಾರವನ್ನು ಹೊಣೆಗಾರರನ್ನಾಗಿಸಲು ವೇದಿಕೆಯಾಗಿದೆ ಎಂದು ಬಣ್ಣಿಸಿದ ಉಪರಾಷ್ಟ್ರಪತಿಯವರು, ಸದನದಲ್ಲಿ ಹೆಚ್ಚುತ್ತಿರುವ ಅಡ್ಡಿ ಘಟನೆಗಳ ಬಗ್ಗೆ ಅಸಮ್ಮತಿ ವ್ಯಕ್ತಪಡಿಸಿದರು. ಈ ಪ್ರವೃತ್ತಿಯನ್ನು ತಡೆಗಟ್ಟಲು ಸಾಮೂಹಿಕ ಆಂದೋಲನಕ್ಕೆ ಕರೆ ನೀಡಿದ ಅವರು, ಸಂಸದರ ಮನವೊಲಿಸಲು ಮತ್ತು ಎಲ್ಲರ ಅನುಕರಣೆಗೆ ಯೋಗ್ಯವಾದ ನಡವಳಿಕೆಯನ್ನು ದೈನಂದಿನ ಆಚರಣೆಯಲ್ಲಿ ಉದಾಹರಣೆಯಾಗಿ ನೀಡುವಂತೆ ಆಗಬೇಕು, ಈ ನಿಟ್ಟಿನಲ್ಲಿ ವಿನಂತಿಸಲು ಹಾಗೂ ಸಾರ್ವಜನಿಕ ಅಭಿಪ್ರಾಯವನ್ನು ಸೃಷ್ಟಿಸಲು ಯುವಜನರಿಗೆ ಅವರು ಮನವಿ ಮಾಡಿದರು.

ಇದು ಭಾರತದ ಉಪರಾಷ್ಟ್ರಪತಿಯಾಗಿ ಕರ್ನಾಟಕ ರಾಜ್ಯಕ್ಕೆ ಶ್ರೀ ಧಂಖರ್ ಅವರ ಮೊದಲ ಭೇಟಿಯಾಗಿದೆ. ಕರ್ನಾಟಕ ರಾಜಭವನದಲ್ಲಿ ವಾಸ್ತವ್ಯ ಹೂಡಿದ್ದ ಸಂದರ್ಭದಲ್ಲಿ ಅವರು ಕರ್ನಾಟಕದ ಮುಖ್ಯಮಂತ್ರಿಗಳಾದ ಶ್ರೀ ಬಸವರಾಜ ಬೊಮ್ಮಾಯಿ ಸೇರಿದಂತೆ ರಾಜ್ಯದ ಹಲವಾರು ಗಣ್ಯರನ್ನು ಭೇಟಿ ಮಾಡಿದರು.

ಇದಕ್ಕೂ ಮೊದಲು ಅವರು ಡಾ ಸುದೇಶ್ ಧನಕರ್ ಅವರೊಂದಿಗೆ ಬೆಂಗಳೂರಿನ ದೊಡ್ಡ ಗಣಪತಿ ದೇವಸ್ಥಾನ, ಬಸವನಗುಡಿ ದೇವಸ್ಥಾನ ಮತ್ತು ಗವಿ ಗಂಗಾಧರೇಶ್ವರ ದೇವಸ್ಥಾನಗಳಲ್ಲಿ ಪ್ರಾರ್ಥನೆ ಸಲ್ಲಿಸಿದರು, ಹಾಗೂ ರಾಷ್ಟ್ರದ ಶಾಂತಿ ಮತ್ತು ಸಮೃದ್ಧಿ ಮತ್ತು ಎಲ್ಲಾ ನಾಗರಿಕರ ಯೋಗಕ್ಷೇಮಕ್ಕಾಗಿ ಪ್ರಾರ್ಥಿಸಿದರು.


ಕರ್ನಾಟಕ ರಾಜ್ಯಪಾಲರಾದ ಶ್ರೀ ಥಾವರ್ ಚಂದ್ ಗೆಹ್ಲೋಟ್, ಕರ್ನಾಟಕ ಸರ್ಕಾರದ ಕಾನೂನು ಸಚಿವರಾದ ಶ್ರೀ ಜೆ.ಸಿ. ಮಾಧುಸ್ವಾಮಿ, ಗೋಕುಲ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷರಾದ ಡಾ.ಎಂ.ಆರ್. ಜಯರಾಮ್, ಗೋಕುಲ ಶಿಕ್ಷಣ ಪ್ರತಿಷ್ಠಾನದ ಉಪಾಧ್ಯಕ್ಷರಾದ ಶ್ರೀ ಎಂ.ಆರ್. ಸೀತಾರಾಮ್ ಮತ್ತು ಇತರ ಗಣ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಉಪರಾಷ್ಟ್ರಪತಿಯವರ ಭಾಷಣದ ಪಠ್ಯದ ಕೊಂಡಿ ಇಲ್ಲಿದೆ-

https://www.pib.gov.in/PressReleaseIframePage.aspx?PRID=1903351

****



(Release ID: 1903494) Visitor Counter : 148