ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ

ಬಜೆಟ್ ನಂತರದ ವೆಬಿನಾರ್ ನಲ್ಲಿ ತಂತ್ರಜ್ಞಾನದ ಬಳಕೆಯ ಮೂಲಕ ನಾಗರಿಕರ ಜೀವನವನ್ನು ಪರಿವರ್ತಿಸುವ ಬಗ್ಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾತನಾಡಿದ ದಿನದಂದೇ ಕುಂದುಕೊರತೆ ಮೇಲ್ಮನವಿ ಸಮಿತಿಯನ್ನು (ಜಿಎಸಿ) ಪ್ರಾರಂಭಿಸಿದ ಎಂಇಐಟಿವೈ


ಜಿಎಸಿ ಒಂದು ಮುಖಾಮುಖಿರಹಿತ ವಿವಾದ ಪರಿಹಾರ ಕಾರ್ಯವಿಧಾನವಾಗಿದ್ದು, ಇದು ಡಿಜಿಟಲ್ ನಾಗರಿಕರಿಗೆ ಹೊಣಗಾರಿಕಯುಕ್ತ ಡಿಜಿಟಲ್ ವೇದಿಕೆ ಒದಗಿಸುತ್ತದೆ

ಸಾಮಾನ್ಯ ಸೇವಾ ಕೇಂದ್ರ (ಸಿಎಸ್.ಸಿಗಳು)ಗಳ ಮೂಲಕ ಜಿಎಸಿ ಪ್ರವೇಶಿಸಬಹುದು

ಜಿ.ಎ.ಸಿ. ಒಂದು ಸಂಸ್ಥೆಯಾಗಿ, ಭಾರತೀಯ ಇಂಟರ್ನೆಟ್ ಗೆ ದಾರಿದೀಪವಾಗಿದ್ದು, ಇಂಟರ್ನೆಟ್ ಅನ್ನು ಮುಕ್ತ, ಸುರಕ್ಷಿತ ಮತ್ತು ವಿಶ್ವಾಸಾರ್ಹ ಹಾಗೂ ಉತ್ತರದಾಯಿಯನ್ನಾಗಿ ಮಾಡಲು ಪ್ರಮುಖವಾಗಿದೆ: ಕೇಂದ್ರದ ಸಹಾಯಕ ಸಚಿವ ಶ್ರೀ ರಾಜೀವ್ ಚಂದ್ರಶೇಖರ್

Posted On: 28 FEB 2023 6:08PM by PIB Bengaluru

ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಹಾಗೂ ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯಮಶೀಲತೆ ಖಾತೆ ರಾಜ್ಯ ಸಚಿವ ಶ್ರೀ ರಾಜೀವ್ ಚಂದ್ರಶೇಖರ್ ಅವರಿಂದು ಕುಂದುಕೊರತೆ ಮೇಲ್ಮನವಿ ಸಮಿತಿಗೆ ಚಾಲನೆ ನೀಡಿದರು, ಇದು ಮುಖಾಮುಖಿರಹಿತ ವಿವಾದ ಪರಿಹಾರ ಕಾರ್ಯವಿಧಾನವಾಗಿದ್ದು, ಇದು ದೊಡ್ಡ ಮತ್ತು ಸಣ್ಣ ಡಿಜಿಟಲ್ ವೇದಿಕೆಗಳನ್ನು ಡಿಜಿಟಲ್ ನಾಗರಿಕರಿಗೆ ಉತ್ತರದಾಯಿಯನ್ನಾಗಿ ಮಾಡುತ್ತದೆ.
 


ಕುಂದುಕೊರತೆ ಮೇಲ್ಮನವಿ ಸಮಿತಿಗೆ ಚಾಲನೆ ನೀಡಿದ ಶ್ರೀ ರಾಜೀವ್ ಚಂದ್ರಶೇಖರ್

ಇತ್ತೀಚೆಗೆ ತಿದ್ದುಪಡಿ ಮಾಡಲಾದ ಮಾಹಿತಿ ತಂತ್ರಜ್ಞಾನ (ಮಧ್ಯವರ್ತಿ ಮಾರ್ಗಸೂಚಿಗಳು ಮತ್ತು ಡಿಜಿಟಲ್ ಮಾಧ್ಯಮ   ನೀತಿ ಸಂಹಿತೆ) ನಿಯಮಗಳು, 2021ರ ನಿಬಂಧನೆಗಳಲ್ಲಿ ಜಿಎಸಿ ಒಂದಾಗಿದೆ.  ವಿವಿಧ ಕ್ಷೇತ್ರಗಳ ವೃತ್ತಿಪರರನ್ನು ಒಳಗೊಂಡ ಅಂತಹ ಮೂರು ಸಂಸ್ಥೆಗಳನ್ನು ರಚಿಸಲಾಗಿದೆ.

ಉದ್ಘಾಟನಾ ಸಮಾರಂಭದಲ್ಲಿ ಸಭಿಕರನ್ನುದ್ದೇಶಿಸಿ ಅವರು "ಜಿಎಸಿಗಳು ಅತ್ಯಂತ ಪಾರದರ್ಶಕ ರೀತಿಯಲ್ಲಿ ಕಾರ್ಯನಿರ್ವಹಿಸುತ್ತವೆ ಮತ್ತು ಅದರ ಎಲ್ಲಾ ನಿರ್ಧಾರಗಳನ್ನು ಅಂತರ್ಜಾಲ ತಾಣದಲ್ಲಿ ಅಪ್ಲೋಡ್ ಮಾಡಲಾಗುತ್ತದೆ ಮತ್ತು ಸಾರ್ವಜನಿಕರಿಗೆ ಪ್ರವೇಶವಿರುತ್ತದೆ" ಎಂದು ಹೇಳಿದರು.

ಎಂಇಐಟಿವೈ ಆಯೋಜಿಸಿದ್ದ "ತಂತ್ರಜ್ಞಾನದ ಮೂಲಕ ಸುಗಮ ಜೀವನ" ಕುರಿತ ಬಜೆಟ್ ನಂತರದ ವೆಬಿನಾರ್ ಉದ್ದೇಶಿಸಿ ಪ್ರಧಾನಮಂತ್ರಿ ನರೇಂದ್ರ ಮೋದಿ ಭಾಷಣ ಮಾಡಿದ ದಿನದಂದೇ ಜಿಎಸಿ ಉದ್ಘಾಟನೆ ನಡೆದಿರುವುದಕ್ಕೆ ಸಂತಸ ವ್ಯಕ್ತಪಡಿಸಿದ ಶ್ರೀ ರಾಜೀವ್ ಚಂದ್ರಶೇಖರ್, "ಡಿಬಿಟಿ, ಜಾಮ್ ಮತ್ತು ಮುಖಾಮುಖಿರಹಿತ ತೆರಿಗೆಯಂತಹ ಯೋಜನೆಗಳ ಮೂಲಕ ಜೀವನವನ್ನು ಸುಗಮಗೊಳಿಸುವ ಮೂಲಕ ತಂತ್ರಜ್ಞಾನವು ನಾಗರಿಕರ ಜೀವನವನ್ನು ಹೇಗೆ ಪರಿವರ್ತಿಸುತ್ತಿದೆ ಎಂಬುದರ ಬಗ್ಗೆ ಮಾತನಾಡಿದರು. ಡಿಜಿಟಲ್ ನಾಗರಿಕರುಗಳಿಗೆ ವೇದಿಕೆಯ ಉತ್ತರದಾಯಿತ್ವವನ್ನು ಗಮನಾರ್ಹವಾಗಿ ಹೆಚ್ಚಿಸುವ ನಿಟ್ಟಿನಲ್ಲಿ ಮೇಲ್ಮನವಿ ಸಂಸ್ಥೆಯಾದ ಜಿಎಸಿಯನ್ನು ಪ್ರಾರಂಭಿಸುವುದು ಮತ್ತೊಂದು ಹೆಜ್ಜೆಯಾಗಿದೆ.

ಜಿಎಸಿ ಭಾರತೀಯ ಅಂತರ್ಜಾಲಕ್ಕೆ ದಾರಿದೀಪವಾಗುವಂತಹ ಸಂಸ್ಥೆ ಎಂದು ಬಣ್ಣಿಸಿದ ಸಚಿವರು, ಇಂಟರ್ನೆಟ್ ಮುಕ್ತ, ಸುರಕ್ಷಿತ, ವಿಶ್ವಾಸಾರ್ಹ ಮತ್ತು ಡಿಜಿಟಲ್ ವೇದಿಕೆಗಳನ್ನು ಉತ್ತರದಾಯಿಯನ್ನಾಗಿ ಮಾಡುವ ಒಟ್ಟಾರೆ ಚೌಕಟ್ಟಿನ ಪ್ರಮುಖ ಭಾಗವಾಗಿದೆ ಎಂದು ಹೇಳಿದರು. ಇದು ಬಹಿರಂಗಪಡಿಸುವಿಕೆ ಮತ್ತು ಸಾರ್ವಜನಿಕ ಪರಿಶೀಲನೆಯ ಸಂಸ್ಕೃತಿಯನ್ನು ಹುಟ್ಟುಹಾಕುತ್ತದೆ ಎಂದು ಅವರು ಹೇಳಿದರು.

"ಇದು ನಮ್ಮ ಸರ್ಕಾರದ ದೃಷ್ಟಿಕೋನಗಳು, ನೀತಿಗಳು ಮತ್ತು ವಿವಾದಗಳನ್ನು ಪರಿಹರಿಸುವ ಸುಲಭ ಮಾರ್ಗಗಳನ್ನು ರೂಪಿಸುವ ವಿಸ್ತರಣೆಯಾಗಿದೆ - ಅದು ತೆರಿಗೆಯೇ ಆಗಿರಬಹುದು ಅಥವಾ ಡಿಜಿಟಲ್ ನಾಗರಿಕರ ಕುಂದುಕೊರತೆ ಪರಿಹಾರವೇ ಆಗಿರಬಹುದು" ಎಂದು ಅವರು ಹೇಳಿದರು.

ಮಧ್ಯವರ್ತಿಗಳ ಕುಂದುಕೊರತೆ ಪರಿಹಾರ ಕಾರ್ಯವಿಧಾನವು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತದೆ ಎಂದು ಖಚಿತಪಡಿಸಿಕೊಳ್ಳುವುದು ಜಿಎಸಿಯ ಹಿಂದಿನ ದೃಷ್ಟಿಕೋನವಾಗಿದೆ ಎಂದು ಸಚಿವರು ಪುನರುಚ್ಚರಿಸಿದರು.

ಈ ಸಂದರ್ಭದಲ್ಲಿ ಕಾರ್ಯದರ್ಶಿ (ಎಂಇಐಟಿವೈ) ಶ್ರೀ ಅಲ್ಕೇಶ್ ಕುಮಾರ್ ಶರ್ಮಾ, ಹೆಚ್ಚುವರಿ ಕಾರ್ಯದರ್ಶಿ (ಎಂಇಐಟಿವೈ) ಶ್ರೀ ಅಮಿತ್ ಅಗರ್ವಾಲ್ ಮತ್ತು ಗುಂಪಿನ ಸಂಚಾಲಕ (ಎಂಇಐಟಿವೈ) ಶ್ರೀ ರಾಕೇಶ್ ಮಹೇಶ್ವರಿ ಅವರಲ್ಲದೆ ಸಾಮಾಜಿಕ ಮಾಧ್ಯಮ ಮಧ್ಯವರ್ತಿಗಳು, ಗ್ರಾಹಕ ಗುಂಪುಗಳ ಪ್ರತಿನಿಧಿಗಳು ಮತ್ತು ಕಾನೂನು ಸಮುದಾಯದ ಸದಸ್ಯರೂ ಉಪಸ್ಥಿತರಿದ್ದರು.

ಮಧ್ಯವರ್ತಿಯ ಕುಂದುಕೊರತೆ ಅಧಿಕಾರಿಯಿಂದ ಸಂವಹನ ಸ್ವೀಕರಿಸಿದ ದಿನಾಂಕದಿಂದ 30 ದಿನಗಳ ಅವಧಿಯಲ್ಲಿ ಡಿಜಿಟಲ್ ನಾಗರಿಕರು ಜಿಎಸಿಗಳಿಗೆ ಮೇಲ್ಮನವಿ ಸಲ್ಲಿಸಬಹುದು. ಈ ಸಮಿತಿಯು ನಂತರ 30 ದಿನಗಳ ಅವಧಿಯಲ್ಲಿ ಬಳಕೆದಾರರ ಮನವಿಯನ್ನು ಪರಿಹರಿಸಲು ಪ್ರಯತ್ನಿಸುತ್ತದೆ.

ಜಿಎಸಿ ವೇದಿಕೆಯನ್ನು ಈ ಕೆಳಗಿನ ಲಿಂಕ್ ನ ಮೂಲಕ ಪ್ರವೇಶಿಸಬಹುದು:http:// https://www.gac.gov.in.        

   
 
***



(Release ID: 1903287) Visitor Counter : 135


Read this release in: English , Urdu , Telugu , Malayalam