ಇಂಧನ ಸಚಿವಾಲಯ
azadi ka amrit mahotsav

ಹಸಿರು ಇಂಧನ ಮತ್ತು ಹಸಿರು ಉದ್ಯೋಗ ವಲಯದಲ್ಲಿ ಜಗತ್ತನ್ನು ಮುನ್ನಡೆಸಲು ಭಾರತಕ್ಕೆ ದೊಡ್ಡಮಟ್ಟದ ಸಾಮರ್ಥ್ಯವಿದೆ: ಮುಂಗಡಪತ್ರ ನಂತರದ ಮೊದಲ ಹಸಿರು ಪ್ರಗತಿ ಕುರಿತ ವೆಬಿನಾರ್ ಉದ್ದೇಶಿಸಿ ಪ್ರಧಾನಮಂತ್ರಿ ಭಾಷಣ


ಜಾಗತಿಕ ಹಸಿರು ಇಂಧನ ಮಾರುಕಟ್ಟೆಯಲ್ಲಿ ಪ್ರಮುಖ ಸ್ಥಾನವನ್ನು ಸ್ಥಾಪಿಸುವಲ್ಲಿ ಈ ಬಜೆಟ್ ಪ್ರಮುಖ ಪಾತ್ರ ವಹಿಸುತ್ತದೆ: ಪ್ರಧಾನಮಂತ್ರಿ

13 ಸಚಿವಾಲಯಗಳ ಪಾಲುದಾರರಿಂದ ಬರುವ ಸಲಹೆಗಳ ಆಧಾರದ ಮೇಲೆ ಆಯವ್ಯಯ ಘೋಷಣೆಗಳನ್ನು ಕಾಲಮಿತಿಯಲ್ಲಿ ಅನುಷ್ಠಾನಗೊಳಿಸಲು ಕ್ರಿಯಾ ಯೋಜನೆಗಳನ್ನು ರೂಪಿಸುವ ಕುರಿತು ಆರು ವಿಷಯಗಳ ಬಗ್ಗೆ ಚರ್ಚೆ     

ಮುಂಗಡಪತ್ರದ ಹಸಿರು ಬೆಳವಣಿಗೆ ಉಪಕ್ರಮಗಳ ಅನುಷ್ಠಾನಕ್ಕಾಗಿ ಯೋಜನೆ ರೂಪಿಸಲು ಕೈಗಾರಿಕೆ, ಶಿಕ್ಷಣ, ಸಾರ್ವಜನಿಕ ಉದ್ದಿಮೆಗಳು ಮತ್ತು ರಾಜ್ಯ ಸರ್ಕಾರದ 1100ಕ್ಕೂ ಹೆಚ್ಚು ಮಂದಿ ಭಾಗಿ

ಭಾರತದ ಪ್ರಗತಿ ಮತ್ತು ಹೂಡಿಕೆಯಲ್ಲಿ ಇಂಧನ ವಲಯ ಪ್ರಮುಖ ಕೊಡುಗೆ ನೀಡುವ ವಲಯವಾಗಿ ರೂಪುಗೊಳ್ಳುತ್ತಿದೆ ; ಶ್ರೀ ಆರ್.ಕೆ. ಸಿಂಗ್

ಸಧ್ಯೋಭವಿಷ್ಯದಲ್ಲಿ ದೊಡ್ಡ ಪ್ರಮಾಣದಲ್ಲಿ ಸಾಮರ್ಥ್ಯ ಸೇರ್ಪಡೆ ಮತ್ತು ಆಧುನೀಕರಣದ ಯೋಜನೆಗಳಿದ್ದು, ಇಂಧನ ವಲಯದಲ್ಲಿ ಹೂಡಿಕೆ ಮಾಡುವಂತೆ ಕರೆ ನೀಡಿದ ಶ್ರೀ ಸಿಂಗ್

Posted On: 23 FEB 2023 8:27PM by PIB Bengaluru

2023-24 ನೇ ಸಾಲಿನ ಕೇಂದ್ರ ಮುಂಗಡ ಪತ್ರದಲ್ಲಿ 12 ಘೋಷಣೆಗಳ ಅನುಷ್ಠಾನ ಕುರಿತ ಚರ್ಚೆಗೆ ಆಯವ್ಯಯ ನಂತರದ ಆರು ಪರ್ಯಾಯ ಚರ್ಚಾಗೋಷ್ಠಿಗಳನ್ನು ಇಂಧನ ಸಚಿವಾಲಯ ವೆಬಿನಾರ್ ಮೂಲಕ ಆಯೋಜಿಸಿತ್ತು. ಮುಂಗಡಪತ್ರದ ಹಸಿರು ಬೆಳವಣಿಗೆ ಉಪಕ್ರಮಗಳ ಅನುಷ್ಠಾನದ ಯೋಜನೆ ರೂಪಿಸಲು 1100 ಕ್ಕೂ ಹೆಚ್ಚು ಕೈಗಾರಿಕೆ, ಶಿಕ್ಷಣ, ಸಾರ್ವಜನಿಕ ಉದ್ದಿಮೆಗಳು, ರಾಜ್ಯ ಸರ್ಕಾರ ಮತ್ತು ವಲಯವಾರು ತಜ್ಞರು ಭಾಗಿಯಾಗಿದ್ದರು ಮತ್ತು ಮುಂಗಡಪತ್ರದ ಉಪಕ್ರಮಗಳನ್ನು ಕಾಲಮಿತಿಯಲ್ಲಿ ಜಾರಿಗೊಳಿಸಲು ತಜ್ಞರಿಂದ ಸಲಹೆಗಳನ್ನು ಪಡೆಯಲಾಯಿತು.

ಹಸಿರು ಬೆಳವಣಿಗೆ ಕುರಿತ ಮೊದಲ ಅಧಿವೇಶನವನ್ನು ಇಂಧನ ಕಾರ್ಯದರ್ಶಿ ಶ್ರೀ ಅಲೋಕ್ ಕುಮಾರ್ ಮುನ್ನಡೆಸಿದರು ಮತ್ತು ಹಸಿರು ಬೆಳವಣಿಗೆಯನ್ನು ಗುರಿಯಾಗಿಸಿದ ಅಧಿವೇಶನದ ಸಹ ಅಧ್ಯಕ್ಷತೆಯನ್ನು ಎಂಎನ್ಆರ್ ಇ ಕಾರ್ಯದರ್ಶಿ ಶ‍್ರೀ ಬಿ.ಎಸ್. ಬಲ್ಲಾ ವಹಿಸಿದ್ದರು. ಇಂಧನ ಸಂಗ್ರಹ ಮತ್ತು ಅಂತರರಾಜ್ಯ ವರ್ಗಾವಣೆ ವ್ಯವಸ್ಥೆಯಲ್ಲಿ ನವೀಕೃತ ಇಂಧನ ಸ್ಥಳಾಂತರಿಸುವಿಕೆ, ಹಸಿರು ಹೈಡ್ರೋಜನ್ ಅಭಿಯಾನ ಮತ್ತು ಇಂಧನ ಪರಿವರ್ತನೆಯಲ್ಲಿ ಬಂಡವಾಳ ಹೂಡಿಕೆ ಕುರಿತು ಚರ್ಚಿಸಲಾಯಿತು. ಎರಡನೇ ಅಧಿವೇಶನವನ್ನು ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದ ಕಾರ್ಯದರ್ಶಿ ಶ್ರೀ ಪಂಕಜ್ ಜೈನ್ ನೇತೃತ್ವದಲ್ಲಿ ಗೋಬ್ರಾಧನ್ [ಗೋವುಗಳ ಜೈವಿಕ – ಕೃಷಿ ಸಂಪನ್ಮೂಲಗಳ ಧನ್ ಯೋಜನೆ] ಕುರಿತು ಚರ್ಚಿಸಲಾಯಿತು.  ಮೂರನೇ ಅಧಿವೇಶನದ ಅಧ್ಯಕ್ಷತೆಯನ್ನು ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯದ ಕಾರ್ಯದರ್ಶಿ ಶ್ರೀಮತಿ ಲೀಲಾ ನಂದ್ ವಹಿಸಿದ್ದು, ಹಸಿರು ಸಾಲ ಯೋಜನೆ, ಎಂ.ಐ.ಎಸ್.ಎಚ್.ಟಿ.ಐ ಮತ್ತು ಅಮೃತ್ ಧಾರೋಹರ್ ಉಪಕ್ರಮಗಳ ಕುರಿತು ಪಾಲುದಾರರೊಂದಿಗೆ ಚರ್ಚಿಸಲಾಯಿತು. ನಾಲ್ಕನೇ ಅಧಿವೇಶನದ ಅಧ್ಯಕ್ಷತೆಯನ್ನು ನೀತಿ ಆಯೋಗದ ಸದಸ್ಯ ಪ್ರೊಫೆಸರ್ ರಮೇಶ್ ಚಂದ್ ವಹಿಸಿದ್ದು, ಪಿಎಂ ಪ್ರಣಾಮ್ ಮತ್ತು ಭಾರತೀಯ ನೈಸರ್ಗಿಕ ಕೃಷಿಯಲ್ಲಿ ಜೈವಿಕ ಸಂಪನ್ಮೂಲ ಕೇಂದ್ರಗಳು ಕುರಿತು ಚರ್ಚೆ ನಡೆಸಲಾಯಿತು. ಬಂದರು, ಹಡಗು ಮತ್ತು ಜಲ ಮಾರ್ಗಗಳ ಸಚಿವಾಲಯದ ಕಾರ್ಯದರ್ಶಿ ಶ್ರೀ ಸುಧಾಂಶ್ ಪಂತ್ ನೇತೃತ್ವದಲ್ಲಿ ಕರಾವಳಿ ಬಂದರು ಕುರಿತು ಐದನೇ ಅಧಿವೇಶನ ನಡೆದಿದ್ದು, ವಾಹನ ಬದಲಾವಣೆ ಕಾರ್ಯಕ್ರಮದ ಸಮಸ್ಯೆಗಳು, ಕಾಲಮಿತಿ ಕುರಿತ ಕಾರ್ಯಕ್ರಮದ ಚರ್ಚೆಯನ್ನು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ ಶ್ರೀಮತಿ ಅಲ್ಕಾ ಉಪಧ್ಯಾಯ ನಡೆಸಿದರು.

ಪಾಲ್ಗೊಂಡಿದ್ದ ಪ್ರತಿನಿಧಿಗಳನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿ ಶ‍್ರೀ ನರೇಂದ್ರ ಮೋದಿ, ಇಂಧನ ವಲಯದಲ್ಲಿ ಕೈಗಾರಿಕೆಗಳು ಹೂಡಿಕೆ ಮಾಡಬೇಕು ಮತ್ತು ಹಸಿರು ಇಂಧನ ಮತ್ತು ಹಸಿರು ಉದ್ಯೋಗ ವಲಯದಲ್ಲಿ ಜಗತ್ತನ್ನು ಮುನ್ನಡೆಸಲು ಭಾರತಕ್ಕೆ ದೊಡ್ಡಮಟ್ಟದ ಸಾಮರ್ಥ್ಯವಿದೆ ಎಂದರು. ಜಾಗತಿಕ ಹಸಿರು ಇಂಧನ ಮಾರುಕಟ್ಟೆಯಲ್ಲಿ ಪ್ರಮುಖ ಸ್ಥಾನವನ್ನು ಸ್ಥಾಪಿಸುವಲ್ಲಿ ಈ ಬಜೆಟ್ ಪ್ರಮುಖ ಪಾತ್ರ ವಹಿಸುತ್ತದೆ. ಆದ್ದರಿಂದ ಇಂಧನ ಜಗತ್ತು ಭಾರತದಲ್ಲಿ ಹೂಡಿಕೆ ಮಾಡುವಂತೆ ಪ್ರತಿಯೊಬ್ಬ ಪಾಲುದಾರರನ್ನು ಒತ್ತಾಯಿಸುತ್ತೇನೆ ಎಂದು ಹೇಳಿದರು.   

ಮುಂಗಡಪತ್ರದಲ್ಲಿ ನೀಡಿರುವ ಗುರಿಗಳನ್ನು ಸಾಧಿಸುವ ವಿಶ್ವಾಸ ವ್ಯಕ್ತಪಡಿಸಿದ ಪ್ರಧಾನಮಂತ್ರಿ ಅವರು, ಕಳೆದ 9 ವರ್ಷಗಳ ಮೊದಲು ಸ್ಥಾಪಿಸಲಾದ ವಿದ್ಯುತ್ ಸಾಮರ್ಥ್ಯದಲ್ಲಿ ಪಳೆಯುಳಿಕೆಯೇತರ ಇಂಧನ ಮೂಲಗಳಿಂದ 40% ಕೊಡುಗೆಗಳ ಗುರಿಗಳನ್ನು ಭಾರತ ಸಾಧಿಸಿದೆ ಎಂದು ಪ್ರಧಾನಮಂತ್ರಿ ಹೇಳಿದರು. ಪೆಟ್ರೋಲ್ ನಲ್ಲಿ 10% ರಷ್ಟು ಎಥನಾಲ್ ಮಿಶ್ರಣ ಮಾಡುವ ಗುರಿಯನ್ನು ಐದು ತಿಂಗಳ ಮುಂಚೆ ಸಾಧಿಸಲಾಗಿದೆ ಮತ್ತು 2030 ರ ಬದಲಾಗಿ 2025-26 ರ ವೇಳೆಗೆ ಪೆಟ್ರೋಲ್ ನಲ್ಲಿ 20% ಎಥನಾಲ್ ಮಿಶ್ರಣ ಮಾಡುವ ಗುರಿ ಸಾಧಿಸುತ್ತೇವೆ ಎಂದು ಹೇಳಿದರು.

ಹಸಿರು ಬೆಳವಣಿಗೆ ಕುರಿತು ಇಂಧನ ಮತ್ತು ಎಂಎನ್ಆರ್ ಇ ಸಚಿವ ಶ್ರೀ ಆರ್.ಕೆ. ಸಿಂಗ್ ಮಾತನಾಡಿ, ಭಾರತದ ಪ್ರಗತಿ ಮತ್ತು ಹೂಡಿಕೆಯಲ್ಲಿ ಇಂಧನ ವಲಯ ಪ್ರಮುಖ ಕೊಡುಗೆ ನೀಡುವ ವಲಯವಾಗಿ ರೂಪುಗೊಳ್ಳುತ್ತಿದೆ. “ ಪ್ರಸ್ತುತ ಮತ್ತು 2030 ರ ವೇಳೆಗೆ ನವೀಕೃತ ಇಂಧನ ವಲಯದಲ್ಲಿ 325 ಗಿಗಾವ್ಯಾಟ್ ಸಾಮರ್ಥ್ಯವನ್ನು ಸೇರ್ಪಡೆ ಮಾಡಲಿದೆ. ನವೀಕೃತ ಇಂಧನ ಸಾಮರ್ಥ್ಯ ಸೇರ್ಪಡೆ ಕಡಿಮೆ ವೆಚ್ಚದಿಂದ ಕೂಡಿದೆ ಮತ್ತು ಜಲ ಜನಕ ವೆಚ್ಚ ವಿಶ್ವದಲ್ಲೇ ಸ್ಪರ್ಧಾತ್ಮಕವಾಗಿರುತ್ತದೆ. 2030 ರ ವೇಳೆಗೆ 80 ಗಿಗಾವ್ಯಾಟ್ ವಿದ್ಯುದ್ವಿಭಜಕವನ್ನು ಸೇರ್ಪಡೆ ಮಾಡುವ ಅಗತ್ಯವಿದೆ. ಭಾರತ ಇಂಧನ ಆಮದುದಾರನಿಂದ ನಿವ್ವಳ ರಫ್ತುದಾರನಾಗಿ ಪರಿವರ್ತನೆಗೊಳ್ಳಲು ಸಜ್ಜಾಗಿದೆ ಎಂದು ಹೇಳಿದರು. ದೇಶ 7% ರಷ್ಟು ಬೆಳವಣಿಗೆಯಾಗುತ್ತಿದೆ ಮತ್ತು ವಿದ್ಯುತ್ ಬೇಡಿಕೆ 10% ರಷ್ಟು ಹೆಚ್ಚುತ್ತಿದೆ. ದೇಶದ ಆರ್ಥಿಕ ಬೆಳವಣಿಗೆಗೆ ಅನುಗುಣವಾಗಿ ವಿದ್ಯುತ್ ಉತ್ಪಾದನೆ, ವರ್ಗಾವಣೆ ಮತ್ತು ಪೂರೈಕೆ ವಲಯದಲ್ಲಿ ಸಾಮರ್ಥ್ಯವನ್ನು ವೃದ್ಧಿಸಲಾಗುತ್ತಿದೆ. 2030 ರ ವೇಳೆಗೆ 5 ಎಂಎಂಟಿ ಹಸಿರು ಜಲಜನಕದ ಗುರಿ ತಲುಪಬೇಕಿದ್ದು, ಈ ಸಮಯದಲ್ಲಿ ದೇಶ ಗುರಿ ಮೀರಿ ಸಾಧನೆ ಮಾಡಲಿದೆ. ದಿನಪೂರ್ತಿ ನಡೆದ ಸಮಾಲೋಚನೆಯಲ್ಲಿ ಇಂಧನ ಸಚಿವರು, ದೊಡ್ಡ ಪ್ರಮಾಣದಲ್ಲಿ ಫಲಪ್ರದ ಸಲಹೆಗಳನ್ನು ಸ್ವೀಕರಿಸಲಾಗಿದೆ. ಕಾಲಮಿತಿಯಲ್ಲಿ ಕ್ರಿಯಾ ಯೋಜನೆ ಜಾರಿಗೊಳಿಸಲು ಸಂಬಂಧಪಟ್ಟ ಸಚಿವಾಲಯಗಳು ನೀಡಿದ ಸಲಹೆಗಳ ಮೇಲೆ ಕಾರ್ಯನಿರ್ವಹಿಸಲಿದೆ ಎಂದು ಹೇಳಿದರು.   

ಹಸಿರು ಬೆಳವಣಿಗೆ ಕಾರ್ಯಸೂಚಿ ಭಾಗವಾಗಿ ಕೇಂದ್ರ ಆಯವ್ಯಯದಲ್ಲಿ 13 ಸಚಿವಾಲಯಗಳಲ್ಲಿ 12 ಉಪಕ್ರಮಗಳನ್ನು ಪ್ರಕಟಿಸಲಾಗಿದೆ. ಹಸಿರು ಜಲಜನಕ, ಇಂಧನ ಪರಿವರ್ತನೆ, ಇಂಧನ ಸಂಗ್ರಹ ಯೋಜನೆಗಳು, ನವೀಕೃತ ಇಂಧನ ಬದಲಾವಣೆ, ಹಸಿರು ಸಾಲ ಯೋಜನೆ, ಪಿಎಂ-ಪ್ರಣಾಮ್, ಗೋಬ್ರಾಧನ್ ಯೋಜನೆ; ಭಾರತೀಯ ನೈಸರ್ಗಿಕ ಕೃಷಿಯಲ್ಲಿ ಜೈವಿಕ ಸಂಪನ್ಮೂಲ ಕೇಂದ್ರಗಳು, ಎಂಐಎಸ್ಎಚ್ ಟಿಐ, ಅಮೃತ್ ಧಾರೋಹರ್, ಕರಾವಳಿ ಬಂದರು ಮತ್ತು ವಾಹನ ಬದಲಾವಣೆ ಕಾರ್ಯಕ್ರಮಗಳು ಸೇರಿವೆ.

‘ಸಪ್ತರ್ಷಿ’ ಆದ್ಯತೆಗಳ ಮೇಲೆ ವಿವಿಧ ಸಚಿವಾಲಯಗಳ ವೆಬಿನಾರ್ ಗಳನ್ನು ಫೆಬ್ರವರಿ 23 ರಿಂದ ಮಾರ್ಚ್ 11 ರ ವರೆಗೆ ಆಯೋಜಿಸಲಾಗಿದೆ.

***


(Release ID: 1901903) Visitor Counter : 196


Read this release in: English , Urdu , Hindi , Manipuri