ಇಂಧನ ಸಚಿವಾಲಯ
azadi ka amrit mahotsav

​​​​​​​ಫೆಬ್ರವರಿ 23 ರಂದು ಬಜೆಟ್ ನಂತರದ ಮೊದಲ ವೆಬಿನಾರ್ ನಲ್ಲಿ ಹಸಿರು ಪ್ರಗತಿ ಕುರಿತು ಮಾತನಾಡಲಿರುವ ಪ್ರಧಾನಿ 


ಇದು ಬಜೆಟ್ ಘೋಷಣೆಗಳ ಅನುಷ್ಠಾನಕ್ಕಾಗಿ ಅಭಿಪ್ರಾಯಗಳನ್ನು ಪಡೆಯಲು ಸರ್ಕಾರವು ಆಯೋಜಿಸುತ್ತಿರುವ ಬಜೆಟ್ ನಂತರದ 12 ವೆಬಿನಾರ್ ಗಳ ಒಂದು ಭಾಗವಾಗಿದೆ

ಪ್ರಮುಖ ಕೈಗಾರಿಕೋದ್ಯಮಿಗಳು, ತಜ್ಞರು ಮತ್ತು ರಾಜ್ಯ ಸರ್ಕಾರದ ಅಧಿಕಾರಿಗಳು ಸೇರಿದಂತೆ ಹಲವು ಭಾಗೀದಾರರು ವೆಬಿನಾರ್ ನಲ್ಲಿ ಭಾಗವಹಿಸುತ್ತಾರೆ

ಹಸಿರು ಪ್ರಗತಿ ಕುರಿತು ಕೇಂದ್ರ ಬಜೆಟ್ ನಲ್ಲಿ ಘೋಷಿಸಲಾದ 12 ಉಪಕ್ರಮಗಳನ್ನು ಆರು ಸಮಾನಾಂತರ ಅಧಿವೇಶನಗಳಲ್ಲಿ ಚರ್ಚಿಸಲಾಗುವುದು

ಭಾಗೀದಾರರ ಸಲಹೆಗಳ ಆಧಾರದ ಮೇಲೆ ಕಾಲಮಿತಿಯ ಕ್ರಿಯಾ ಯೋಜನೆಗಳನ್ನು ಸಚಿವಾಲಯಗಳು ಸಿದ್ಧಪಡಿಸುತ್ತವೆ

Posted On: 22 FEB 2023 7:20PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 23 ಫೆಬ್ರವರಿ 2023 ರಂದು ಬೆಳಿಗ್ಗೆ 10 ಗಂಟೆಗೆ ಬಜೆಟ್ ನಂತರದ ಮೊದಲ ವೆಬಿನಾರ್ ನಲ್ಲಿ ಹಸಿರು ಪ್ರಗತಿ ಕುರಿತು ಮಾತನಾಡಲಿದ್ದಾರೆ. ಕೇಂದ್ರ ಬಜೆಟ್ ನಲ್ಲಿ ಘೋಷಿಸಲಾದ ಉಪಕ್ರಮಗಳ ಪರಿಣಾಮಕಾರಿ ಅನುಷ್ಠಾನಕ್ಕಾಗಿ ಆಲೋಚನೆಗಳು ಮತ್ತು ಸಲಹೆಗಳನ್ನು ಪಡೆಯಲು ಸರ್ಕಾರವು ಆಯೋಜಿಸುತ್ತಿರುವ  ಬಜೆಟ್ ನಂತರದ 12 ವೆಬಿನಾರ್ ಸರಣಿಯಲ್ಲಿ ಇದು ಮೊದಲನೆಯದು.

ವೆಬಿನಾರ್ ಹಸಿರು ಪ್ರಗತಿಯ ಇಂಧನ ಮತ್ತು ಇಂಧನೇತರ ಅಂಶಗಳೆರಡನ್ನೂ ಒಳಗೊಂಡ ಆರು ಅಧಿವೇಶನಗಳನ್ನು ಹೊಂದಿರುತ್ತದೆ. ಕೇಂದ್ರ ವಿದ್ಯುತ್ ಸಚಿವಾಲಯವು ಈ ವೆಬಿನಾರ್ ಪ್ರಮುಖ ಸಚಿವಾಲಯವಾಗಿದೆ. ಸಂಬಂಧಪಟ್ಟ ಕೇಂದ್ರ ಸರ್ಕಾರದ ಸಚಿವಾಲಯಗಳ ಸಚಿವರು ಮತ್ತು ಕಾರ್ಯದರ್ಶಿಗಳಲ್ಲದೆ, ರಾಜ್ಯ ಸರ್ಕಾರಗಳು, ಉದ್ಯಮ, ಶೈಕ್ಷಣಿಕ ಮತ್ತು ಸಂಶೋಧನಾ ಸಂಸ್ಥೆಗಳು ಮತ್ತು ಸಾರ್ವಜನಿಕ ವಲಯದ ಭಾಗೀದಾರರು ಈ ವೆಬಿನಾರ್ ಗಳಲ್ಲಿ ಭಾಗವಹಿಸುತ್ತಾರೆ ಮತ್ತು ಬಜೆಟ್ ಘೋಷಣೆಗಳ ಉತ್ತಮ ಅನುಷ್ಠಾನಕ್ಕಾಗಿ ಸಲಹೆಗಳ ಮೂಲಕ ಕೊಡುಗೆ ನೀಡುತ್ತಾರೆ.

ದೇಶದಲ್ಲಿ ಹಸಿರು ಕೈಗಾರಿಕೆ ಮತ್ತು ಆರ್ಥಿಕ ಪರಿವರ್ತನೆ, ಪರಿಸರ ಸ್ನೇಹಿ ಕೃಷಿ ಮತ್ತು ಸುಸ್ಥಿರ ಇಂಧನಕ್ಕಾಗಿ ಹಸಿರು ಪ್ರಗತಿಯು ಕೇಂದ್ರ ಬಜೆಟ್ 2023-24 ರ ಏಳು ಪ್ರಮುಖ ಆದ್ಯತೆಗಳಲ್ಲಿ ಒಂದಾಗಿದೆ. ಇದು ಹೆಚ್ಚಿನ ಸಂಖ್ಯೆಯ ಹಸಿರು ಉದ್ಯೋಗಗಳನ್ನು ಸಹ ಸೃಷ್ಟಿಸುತ್ತದೆ. ಕೇಂದ್ರ ಬಜೆಟ್ ಹಲವಾರು ಯೋಜನೆಗಳು ಮತ್ತು ಉಪಕ್ರಮಗಳನ್ನು ವಿವಿಧ ವಲಯಗಳು ಮತ್ತು ಸಚಿವಾಲಯಗಳಾದ್ಯಂತ ಪ್ರಕಟಿಸಿದೆ. ಅವುಗಳಲ್ಲಿ ಹಸಿರು ಹೈಡ್ರೋಜನ್ ಮಿಷನ್, ಇಂಧನ ಪರಿವರ್ತನೆ, ಇಂಧನ ಶೇಖರಣಾ ಯೋಜನೆಗಳು, ನವೀಕರಿಸಬಹುದಾದ ಇಂಧನ ಸ್ಥಳಾಂತರ, ಗ್ರೀನ್ ಕ್ರೆಡಿಟ್ ಪ್ರೋಗ್ರಾಮ್, ಪಿಎಂ-ಪ್ರಣಾಮ್, ಗೋಬರ್ಧನ್ ಯೋಜನೆ, ಭಾರತೀಯ ಪ್ರಾಕೃತಿಕ ಖೇತಿ ಬಯೋ-ಇನ್ ಫುಟ್ ರಿಸೋರ್ಸ್ ಸೆಂಟರ್ ಗಳು, ಮಿಶ್ಟಿ, ಅಮೃತ್ ಧರೋಹರ್, ಕೋಸ್ಟಲ್ ಶಿಪ್ಪಿಂಗ್ ಮತ್ತು ವಾಹನ ಬದಲಾವಣೆಗಳು ಸೇರಿವೆ.

ಪ್ರತಿ ಬಜೆಟ್ ನಂತರದ ವೆಬಿನಾರ್ ಮೂರು ಅಧಿವೇಶನಗಳನ್ನು ಹೊಂದಿರುತ್ತದೆ. ಪ್ರಧಾನಮಂತ್ರಿಯವರು ಉದ್ದೇಶಿಸಿ ಮಾತನಾಡುವ ಪೂರ್ಣ ಪ್ರಮಾಣದ ಆರಂಭಿಕ ಅಧಿವೇಶನದೊಂದಿಗೆ ಇದು ಪ್ರಾರಂಭವಾಗುತ್ತದೆ. ಈ ಅಧಿವೇಶನದ ನಂತರ ಸಮಾನಾಂತರವಾಗಿ ವಿವಿಧ ವಿಷಯಗಳ ಮೇಲೆ ಪ್ರತ್ಯೇಕ ಬ್ರೇಕ್ಔಟ್ ಅಧಿವೇಶನಗಳು ನಡೆಯುತ್ತವೆ. ಅಂತಿಮವಾಗಿ, ಬ್ರೇಕ್ಔಟ್ ಅಧಿವೇಶನಗಳ ವಿಚಾರಗಳನ್ನು ಸಮಾರೋಪದ ಅಧಿವೇಶನದಲ್ಲಿ ಪ್ರಸ್ತುತಪಡಿಸಲಾಗುತ್ತದೆ. ವೆಬಿನಾರ್ ಸಮಯದಲ್ಲಿ ಸ್ವೀಕರಿಸಿದ ಸಲಹೆಗಳ ಆಧಾರದ ಮೇಲೆ, ಸಂಬಂಧಪಟ್ಟ ಸಚಿವಾಲಯಗಳು ಬಜೆಟ್ ಘೋಷಣೆಗಳ ಅನುಷ್ಠಾನಕ್ಕಾಗಿ ಕಾಲಮಿತಿಯ ಕ್ರಿಯಾ ಯೋಜನೆಯನ್ನು ಸಿದ್ಧಪಡಿಸುತ್ತವೆ.

****


(Release ID: 1901567) Visitor Counter : 141