ರಕ್ಷಣಾ ಸಚಿವಾಲಯ
azadi ka amrit mahotsav

ಪರಿಷ್ಕೃತ ನೇಮಕಾತಿ ವಿಧಾನದ ಪ್ರಕಾರ ಅಧಿಸೂಚನೆ ಹೊರಡಿಸಿದ ಭಾರತೀಯ ಸೇನೆ

Posted On: 16 FEB 2023 5:00PM by PIB Bengaluru

ಭಾರತೀಯ ಸೇನೆಯು ಜೂನಿಯರ್ ಕಮಿಷನ್ಡ್  ಅಧಿಕಾರಿಗಳು/ಇತರ ಶ್ರೇಣಿ/ ಅಗ್ನಿವೀರರ ನೇಮಕಾತಿ ಕಾರ್ಯವಿಧಾನದಲ್ಲಿ ಪರಿಷ್ಕರಣೆ (ಮಾರ್ಪಾಡು)ಗಳನ್ನು ಪ್ರಕಟಿಸಿದೆ. ಪರಿಷ್ಕೃತ ನೇಮಕಾತಿ ವಿಧಾನದ ಪ್ರಕಾರ, ಕಂಪ್ಯೂಟರ್ ಆಧಾರಿತ ಆನ್‌ಲೈನ್ ಸಾಮಾನ್ಯ ಪ್ರವೇಶ ಪರೀಕ್ಷೆಯನ್ನು (ಸಿಇಇ) ನೇಮಕಾತಿ ರ್ಯಾಲಿಯ  ಮೊದಲೇ ನಡೆಸಲಾಗುವುದು.

ನೋಂದಣಿಗಾಗಿ ಅಧಿಸೂಚನೆಯನ್ನು ಜಾಯಿನ್ ಇಂಡಿಯನ್ ಆರ್ಮಿ ವೆಬ್‌ಸೈಟ್‌ನಲ್ಲಿ http://www.joinindianarmy.nic.in. ಅಪ್‌ಲೋಡ್ ಮಾಡಲಾಗಿದೆ. ಅರ್ಜಿಗಳಿಗೆ ಆನ್‌ಲೈನ್ ನೋಂದಣಿಗಳು (ಇಂದಿನಿಂದ)  2023ರ ಫೆಬ್ರವರಿ  16 ರಿಂದ 2023ರ ಮಾರ್ಚ್ 15 ರವರೆಗೆ ಅವಕಾಶ ತೆರೆದಿರುತ್ತದೆ. ಅಲ್ಲಿ ಅಭ್ಯರ್ಥಿಗಳು ತಮ್ಮ ವಯಸ್ಸು, ಶೈಕ್ಷಣಿಕ ಅರ್ಹತೆ, ದೈಹಿಕ ಮಾನದಂಡ ಮತ್ತು ಇತರ ಅರ್ಹತಾ ಅಗತ್ಯತೆಗಳ (ಕ್ಯೂಆರ್ ಎಸ್) ಪ್ರಕಾರ ಅರ್ಜಿಗಳನ್ನು  ಸಲ್ಲಿಸಬಹುದಾಗಿದೆ.

ಮೂರು ಹಂತಗಳಲ್ಲಿ ಈ ನೇಮಕಾತಿ ನಡೆಯಲಿದೆ.

ಮೊದಲ ಹಂತದಲ್ಲಿ http://www.joinindianarmy.nic.in ವೆಬ್‌ಸೈಟ್‌ನಲ್ಲಿ ಆನ್‌ಲೈನ್‌ನಲ್ಲಿ ನೋಂದಾಯಿಸಿದ ಮತ್ತು ಅರ್ಜಿ ಸಲ್ಲಿಸಿದ ಎಲ್ಲಾ ಅಭ್ಯರ್ಥಿಗಳು ಕಂಪ್ಯೂಟರ್ ಆಧಾರಿತ ಆನ್‌ಲೈನ್ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಇ) ಎದುರಿಸಬೇಕಾಗುತ್ತದೆ. 
 
ಎರಡನೇ ಹಂತದಲ್ಲಿ, ಕಿರು ಪಟ್ಟಿ (ಶಾರ್ಟ್ ಲಿಸ್ಟ್) ಮಾಡಿದ ಅಭ್ಯರ್ಥಿಗಳನ್ನು ಆಯಾ ಸೇನಾ ನೇಮಕಾತಿ ಕಚೇರಿ (ಎಆರ್‌ಒಗಳು) ನಿರ್ಧರಿಸಿದ ಸ್ಥಳದಲ್ಲಿ ನೇಮಕಾತಿ ರ್ಯಾಲಿಗೆ ಕರೆಯಲಾಗುವುದು, ಅಲ್ಲಿ ಅವರು ದೈಹಿಕ ಸಾಮರ್ಥ್ಯ ಪರೀಕ್ಷೆ ಮತ್ತು ದೈಹಿಕ ಅಳತೆ ಪರೀಕ್ಷೆಗೆ ಒಳಗಾಗುತ್ತಾರೆ.

ಅಂತಿಮವಾಗಿ ಮೂರನೇ ಹಂತದಲ್ಲಿ, ಆಯ್ಕೆಯಾದ ಅಭ್ಯರ್ಥಿಗಳು ವೈದ್ಯಕೀಯ ಪರೀಕ್ಷೆಗಳನ್ನು ಎದುರಿಸಬೇಕಾಗುತ್ತದೆ. 

ಕಂಪ್ಯೂಟರ್ ಆಧಾರಿತ ಆನ್‌ಲೈನ್ ಸಾಮಾನ್ಯ ಪ್ರವೇಶ ಪರೀಕ್ಷೆಯನ್ನು (ಸಿಇಇ) 2023  ಏಪ್ರಿಲ್ 17 ರಿಂದ 2023ರ ಏಪ್ರಿಲ್ 30ರ ನಡುವೆ ಭಾರತದಾದ್ಯಂತ ಸುಮಾರು 175 ರಿಂದ 180 ಪರೀಕ್ಷಾ ಕೇಂದ್ರಗಳಲ್ಲಿ ನಡೆಸಲು ಉದ್ದೇಶಿಸಲಾಗಿದೆ. ಆನ್‌ಲೈನ್‌ನಲ್ಲಿ 'ನೋಂದಣಿ ಮಾಡುವುದು ಹೇಗೆ' ಮತ್ತು 'ಹೇಗೆ ಹಾಜರಾಗಬೇಕು' ಎಂಬ ಕುರಿತು ಶೈಕ್ಷಣಿಕ ವೀಡಿಯೊಗಳು ಪ್ರವೇಶ ಪರೀಕ್ಷೆಯನ್ನು ಜಾಯಿನ್ ಇಂಡಿಯನ್ ಆರ್ಮಿ ವೆಬ್‌ಸೈಟ್‌http://www.joinindianarmy.nic.in , ಮತ್ತು http://YouTubeನಲ್ಲಿ ಅಪ್‌ಲೋಡ್ ಮಾಡಲಾಗಿದೆ. 

ಆನ್‌ಲೈನ್ ಸಾಮಾನ್ಯ ಪ್ರವೇಶ ಪರೀಕ್ಷೆಗೆ (ಆನ್‌ಲೈನ್ ಸಿಇಇ) ಪ್ರತಿ ಅಭ್ಯರ್ಥಿಗೆ 500 ರೂ. ಶುಲ್ಕು ವೆಚ್ಚ ತಗುಲಲಿದ್ದು, ವೆಚ್ಚದ ಶೇ 50ರಷ್ಟನ್ನು ಭಾರತೀಯ ಸೇನೆಯು ಭರಿಸಲಿದೆ. ಆನ್‌ಲೈನ್ ನಲ್ಲಿ ಅರ್ಜಿಯ ನೋಂದಣಿ ಸಮಯದಲ್ಲಿ ಅಭ್ಯರ್ಥಿಗಳು 250 ರೂ. ಪಾವತಿಸಬೇಕಾಗುತ್ತದೆ. ಅವರು ಆನ್‌ಲೈನ್ ಸಾಮಾನ್ಯ ಪ್ರವೇಶ ಪರೀಕ್ಷೆಗೆ (ಆನ್‌ಲೈನ್ ಸಿಇಇ) ಹಾಜರಾಗಲು ಐದು ಸ್ಥಳಗಳ ಆಯ್ಕೆಗಳನ್ನು ಸಹ ನೀಡಬಹುದು.

ಬದಲಾದ ಕಾರ್ಯವಿಧಾನವು ನೇಮಕಾತಿ ಸಮಯದಲ್ಲಿ ತ್ವರಿತವಾಗಿ ಜಾಗೃತಿ ಮೂಡಿಸುವ ಅಂಶಗಳಿಗೆ ಒತ್ತು ನೀಡುತ್ತದೆ ಮತ್ತು ದೇಶಾದ್ಯಂತ ವ್ಯಾಪಕ ಮತ್ತು ಉತ್ತಮ ಪರಿಣಾಮವನ್ನು ಬೀರುತ್ತದೆ. ಇದು ನೇಮಕಾತಿ ರ್ಯಾಲಿಗಳಲ್ಲಿ ಹೆಚ್ಚಿನ ಜನದಟ್ಟಣೆ ಉಂಟಾಗುವುದುನ್ನು ತಗ್ಗಿಸುತ್ತದೆ ಮತ್ತು ವೈದ್ಯಕೀಯ ಪರೀಕ್ಷೆಗೆ ಹೋಗುವ ಅಭ್ಯರ್ಥಿಗಳ ಸಂಖ್ಯೆಯನ್ನು ಕಡಿಮೆ ಮಾಡುವುದರ ಜೊತೆಗೆ ಅವರ ನಡವಳಿಕೆಯಲ್ಲಿನ ಆಡಳಿತಾತ್ಮಕ ಬದ್ಧತೆ ಕಡಿಮೆ ಮಾಡುತ್ತದೆ. ಈ ಪ್ರಕ್ರಿಯೆಯು ಹೆಚ್ಚು ಸುವ್ಯವಸ್ಥಿತವಾಗಿರುತ್ತದೆ, ಕಾರ್ಯಗತಗೊಳಿಸಲು ಸರಳವಾಗಿದೆ ಮತ್ತು ಪ್ರಸ್ತುತ ತಂತ್ರಜ್ಞಾನಕ್ಕೆ ಅನುಗುಣವಾಗಿದೆ.

*****


(Release ID: 1900350) Visitor Counter : 217