ಪರಿಸರ ಮತ್ತು ಅರಣ್ಯ ಸಚಿವಾಲಯ
azadi ka amrit mahotsav

ಮೂರು ಆದ್ಯತೆಯ ಕ್ಷೇತ್ರಗಳಲ್ಲಿ ರಚನಾತ್ಮಕವಾಗಿ ಕೆಲಸ ಮಾಡಲು ಎಲ್ಲಾ ಜಿ-20 ದೇಶಗಳು ಬದ್ಧತೆಯನ್ನು ತೋರಿಸುವುದರೊಂದಿಗೆ ಮೊದಲ ಪರಿಸರ ಮತ್ತು ಹವಾಮಾನ ಸುಸ್ಥಿರತೆ ಕಾರ್ಯಕಾರಿ ಗುಂಪು (ಇ ಸಿ ಡಬ್ಲ್ಯು ಜಿ) ಸಭೆಯು ಬೆಂಗಳೂರಿನಲ್ಲಿ ಮುಕ್ತಾಯವಾಯಿತು.

Posted On: 11 FEB 2023 3:51PM by PIB Bengaluru

ಭೂಮಿಯ ಅವನತಿಯನ್ನು ನಿಗ್ರಹಿಸುವ, ಪರಿಸರ ವ್ಯವಸ್ಥೆಯ ಮರುಸ್ಥಾಪನೆಯನ್ನು ವೇಗಗೊಳಿಸುವ ಮತ್ತು ಜೀವವೈವಿಧ್ಯವನ್ನು ಸಮೃದ್ಧಗೊಳಿಸುವ ಮೂರು ಆದ್ಯತೆಯ ಕ್ಷೇತ್ರಗಳಲ್ಲಿ ರಚನಾತ್ಮಕವಾಗಿ ಕೆಲಸ ಮಾಡಲು; ಸುಸ್ಥಿರ ಮತ್ತು ಹವಾಮಾನ ಸ್ಥಿತಿಸ್ಥಾಪಕ ನೀಲಿ ಆರ್ಥಿಕತೆಯನ್ನು ಉತ್ತೇಜಿಸಲು ಮತ್ತು ಸಂಪನ್ಮೂಲ ದಕ್ಷತೆ ಮತ್ತು ಮರುಬಳಕೆ ಆರ್ಥಿಕತೆಯನ್ನು ಉತ್ತೇಜಿಸಲು ಎಲ್ಲಾ ಜಿ-20 ರಾಷ್ಟ್ರಗಳು ಆಸಕ್ತಿ ಮತ್ತು ಬದ್ಧತೆ ತೋರುವುದರೊಂದಿಗೆ ಮೊದಲ ಪರಿಸರ ಮತ್ತು ಹವಾಮಾನ ಸುಸ್ಥಿರತೆ ಕಾರ್ಯಕಾರಿ ಗುಂಪಿನ (ಇ ಸಿ ಡಬ್ಲ್ಯು ಜಿ) ಸಭೆಯು ಬೆಂಗಳೂರಿನಲ್ಲಿಂದು ಮುಕ್ತಾಯವಾಯಿತು.

Image

ಭಾರತದ ಜಿ-20 ಅಧ್ಯಕ್ಷತೆಯಲ್ಲಿ ನಡೆದ ಪರಿಸರ ಮತ್ತು ಹವಾಮಾನ ಸುಸ್ಥಿರತೆ ಕಾರ್ಯಕಾರಿ ಗುಂಪಿನ (ಇ ಸಿ ಡಬ್ಲ್ಯು ಜಿ) ಮೊದಲ ಸಭೆಯು ಸುಸ್ಥಿರ ಭವಿಷ್ಯಕ್ಕಾಗಿ ಜಿ-20 ದೇಶಗಳಲ್ಲಿ ರಚನಾತ್ಮಕ ಚರ್ಚೆಗಳ ಆರಂಭವನ್ನು ಸೂಚಿಸುತ್ತದೆ. 2023 ರ ಫೆಬ್ರವರಿ 9-11ರವರೆಗೆ ನಡೆದ, ಮೂರು ದಿನಗಳ ಇ ಸಿ ಡಬ್ಲ್ಯು ಜಿ ಸಭೆಯ ನೇತೃತ್ವವನ್ನು ಭಾರತ ಸರ್ಕಾರದ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯ (MoEFCC) ವಹಿಸಿತು.

https://static.pib.gov.in/WriteReadData/userfiles/image/image0029GZ2.jpg

ಕಾಡ್ಗಿಚ್ಚು ಮತ್ತು ಗಣಿಗಾರಿಕೆಯಿಂದ ಸಂತ್ರಸ್ತವಾದ ಪ್ರದೇಶಗಳ ಪರಿಸರ ವ್ಯವಸ್ಥೆ ಪುನಃಸ್ಥಾಪನೆಗಾಗಿ ಉತ್ತಮ ಅಭ್ಯಾಸಗಳನ್ನು ಹಂಚಿಕೊಳ್ಳುವ ಕಾರ್ಯಕ್ರಮದೊಂದಿಗೆ ಸಭೆಯು ಪ್ರಾರಂಭವಾಯಿತು. ನಂತರ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನ ಮತ್ತು ಕಲ್ಕೆರೆ ಅರ್ಬೊರೇಟಂ (ಮರಗಳ ಉದ್ಯಾನ) ಗೆ ಭೇಟಿ ನೀಡಿದ ಪ್ರತಿನಿಧಿಗಳಿಗೆ ಕರ್ನಾಟಕದ ವನ್ಯಜೀವಿ ರಕ್ಷಣೆ. ಅರಣ್ಯ ಪರಿಸರ ವ್ಯವಸ್ಥೆಗಳು, ಪರಿಸರ ವ್ಯವಸ್ಥೆಯ ಮರುಸ್ಥಾಪನೆ ಮತ್ತು ಪರಿಸರ ಪ್ರವಾಸೋದ್ಯಮ ಮಾದರಿಗಳನ್ನು ಪ್ರದರ್ಶಿಸಲಾಯಿತು.

ಎರಡನೇ ದಿನದ ಸಭೆಯು ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳು ಮತ್ತು ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಶ್ರೀ ಹರ್ದೀಪ್ ಪುರಿ ಅವರ ಉದ್ಘಾಟನಾ ಭಾಷಣದೊಂದಿಗೆ ಪ್ರಾರಂಭವಾಯಿತು. ನಂತರ ಸ್ವಾಗತ ಭಾಷಣವನ್ನು ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯ ಕಾರ್ಯದರ್ಶಿ ಶ್ರೀಮತಿ ಲೀನಾ ನಂದನ್ ಮಾಡಿದರು. ಭಾರತವು ಪರಿಸರ ಮತ್ತು ಹವಾಮಾನ ಬದಲಾವಣೆಯ ವಿಷಯಗಳನ್ನು ಕ್ರಿಯಾ-ಆಧಾರಿತ ಮತ್ತು ಒಮ್ಮತದ ವಿಧಾನದ ಮೂಲಕ ಪರಿಹರಿಸಲು ಉದ್ದೇಶಿಸಿದೆ ಎಂದು ಅವರು ಹೇಳಿದರು. ಪರಿಸರ, ಸುಸ್ಥಿರತೆ ಮತ್ತು ಹವಾಮಾನ ಬದಲಾವಣೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಸಮಗ್ರವಾಗಿ ಪರಿಹರಿಸಲು ಜಿ-20 ರ ಇತರ ಪ್ರಮುಖ ಕಾರ್ಯಕಾರಿ ಗುಂಪುಗಳೊಂದಿಗೆ ಇ ಸಿ ಡಬ್ಲ್ಯು ಜಿ ನಿಕಟ ಸಹಯೋಗದೊಂದಿಗೆ ಕೆಲಸ ಮಾಡುತ್ತದೆ ಎಂದು ಅವರು ಹೇಳಿದರು.

https://static.pib.gov.in/WriteReadData/userfiles/image/image0038X8N.jpg

ಎರಡನೇ ದಿನದ ಮೊದಲಾರ್ಧದಲ್ಲಿ ಮಾನವಜನ್ಯ ಕಾರಣಗಳಿಂದ ತೊಂದರೆಗೊಳಗಾಗಿರುವ ಭೂ-ಆಧಾರಿತ ಪರಿಸರ ವ್ಯವಸ್ಥೆಗಳನ್ನು ಪುನಃಸ್ಥಾಪಿಸಲು ಮತ್ತು ಜಾಗತಿಕ ಜೀವವೈವಿಧ್ಯ ಚೌಕಟ್ಟಿನ ವರ್ಧನೆಯ ವಿಧಾನಗಳ ಸುತ್ತ ಚರ್ಚೆಗಳು ನಡೆದವು.

https://static.pib.gov.in/WriteReadData/userfiles/image/image004NKQI.jpg

ದಿನದ ದ್ವಿತೀಯಾರ್ಧದಲ್ಲಿ, ಉಕ್ಕು ಮತ್ತು ಜೈವಿಕ ತ್ಯಾಜ್ಯ ಸೇರಿದಂತೆ ವಿವಿಧ ವಲಯಗಳಲ್ಲಿ ಮರುಬಳಕೆ ಆರ್ಥಿಕತೆಯ ರಚನೆ ಮತ್ತು ಮರುಬಳಕೆ ಆರ್ಥಿಕತೆಯ ರಚನೆಯಲ್ಲಿ ವಿಸ್ತೃತ ಉತ್ಪಾದಕರ ಜವಾಬ್ದಾರಿಯ ಪಾತ್ರದ ಕುರಿತು ಚರ್ಚೆಗಳನ್ನು ನಡೆಸಲಾಯಿತು. ಸಂಪನ್ಮೂಲ ದಕ್ಷತೆ ಮತ್ತು ಮರುಬಳಕೆ ಆರ್ಥಿಕತೆಗಾಗಿ ಜಿ-20 ಉದ್ಯಮ ಒಕ್ಕೂಟದ ಕಲ್ಪನೆಯನ್ನು ಸಹ ಪ್ರಸ್ತುತಪಡಿಸಲಾಯಿತು. ಅಧಿವೇಶನಗಳಲ್ಲಿ ಎಲ್ಲಾ ದೇಶಗಳ ಪ್ರತಿನಿಧಿಗಳು ಉತ್ಸಾಹದಿಂದ ಭಾಗವಹಿಸಿದರು. ಈ ಅಧಿವೇಶನದಲ್ಲಿ, ಜಿ-20 ಸೆಕ್ರೆಟರಿಯೇಟ್‌ನ ಜಂಟಿ ಕಾರ್ಯದರ್ಶಿ ಶ್ರೀಮತಿ ಈನಮ್ ಗಂಭೀರ್, ಅಭಿವೃದ್ಧಿ ಕಾರ್ಯಕಾರಿ ಗುಂಪು ನಿರ್ವಹಿಸುವ ಲೈಫ್ ಮತ್ತು ಹಸಿರು ಅಭಿವೃದ್ಧಿ ಒಪ್ಪಂದದ ಮೇಲಿನ ಪ್ರಸ್ತಾವಿತ ಉನ್ನತ ಮಟ್ಟದ ತತ್ವಗಳನ್ನು ಸಂಭಾವ್ಯ ಫಲಿತಾಂಶಗಳಾಗಿ ಪ್ರಸ್ತುತಿ ಪಡಿಸಿದರು. ಕರ್ನಾಟಕದ ಶ್ರೀಮಂತ ಸಾಂಸ್ಕೃತಿಕ ಪರಂಪರೆಯನ್ನು ಪ್ರದರ್ಶಿಸಲು ಸಂಜೆ ಸಾಂಸ್ಕೃತಿಕ ಕಾರ್ಯಕ್ರಮವನ್ನು ಆಯೋಜಿಸಲಾಯಿತು ಮತ್ತು ಇದು 29 ದೇಶಗಳಿಂದ ಆಗಮಿಸಿದ ಪ್ರತಿನಿಧಿಗಳಿಗೆ ವಿಶಿಷ್ಟವಾದ ‘ಭಾರತʼದ ಅನುಭವವನ್ನು ನೀಡಿತು.

ಮೂರನೇ ಮತ್ತು ಕೊನೆಯ ದಿನವು 'ಸುಸ್ಥಿರ ಮತ್ತು ಹವಾಮಾನ ಸ್ಥಿತಿಸ್ಥಾಪಕ ನೀಲಿ ಆರ್ಥಿಕತೆ' ವಿಷಯದ ಮೇಲೆ ಗಮನ ಕೇಂದ್ರೀಕರಿಸುವ ಅಧಿವೇಶನದೊಂದಿಗೆ ಪ್ರಾರಂಭವಾಯಿತು. ಭೂ ವಿಜ್ಞಾನ ಸಚಿವಾಲಯದ ಕಾರ್ಯದರ್ಶಿ ಡಾ.ಎಂ ರವಿಚಂದ್ರನ್ ಅವರು ಪ್ರಾಸ್ತಾವಿಕ ಮಾತುಗಳನ್ನಾಡಿದರು. ಸಾಗರಗಳು ಮತ್ತು ನೀಲಿ ಆರ್ಥಿಕತೆಯ ಚರ್ಚೆಗಳು ಸಮುದ್ರದ ತ್ಯಾಜ್ಯ, ಕರಾವಳಿ ಮತ್ತು ಸಮುದ್ರ ಪರಿಸರ ವ್ಯವಸ್ಥೆಗಳ ಸಂರಕ್ಷಣೆ ಮತ್ತು ವರ್ಧನೆ ಮತ್ತು ಸಮುದ್ರ ಪ್ರಾದೇಶಿಕ ಯೋಜನೆಯನ್ನು ಕುರಿತು ಚರ್ಚಿಸಲಾಯಿತು. ಸಮುದ್ರದ ಪ್ಲಾಸ್ಟಿಕ್ ತ್ಯಾಜ್ಯದ ಸಮಸ್ಯೆ ಮತ್ತು ಅದರ ದುಷ್ಪರಿಣಾಮಗಳು ಚರ್ಚೆಗಳ ಕೇಂದ್ರಬಿಂದುವಾಗಿತ್ತು.

https://static.pib.gov.in/WriteReadData/userfiles/image/image0053QC8.jpg

ಭಾರತದ ಅಧ್ಯಕ್ಷತೆಯು 'ಸುಸ್ಥಿರ ಮತ್ತು ಹವಾಮಾನ ಸ್ಥಿತಿಸ್ಥಾಪಕ ನೀಲಿ ಆರ್ಥಿಕತೆಗೆ ಪರಿವರ್ತನೆಯನ್ನು ವೇಗಗೊಳಿಸುವುದು' ಎಂಬ ತಾಂತ್ರಿಕ ಅಧ್ಯಯನದ ಪ್ರಾರಂಭದ ವರದಿಯನ್ನು ಪ್ರಸ್ತುತಪಡಿಸಿತು, ಅದು ಎಲ್ಲಾ ಜಿ-20 ದೇಶಗಳನ್ನು ಒಳಗೊಂಡಿದೆ ಮತ್ತು 'ಸುಸ್ಥಿರ ಮತ್ತು ಹವಾಮಾನ ಸ್ಥಿತಿಸ್ಥಾಪಕ ನೀಲಿ ಆರ್ಥಿಕತೆ' ಕುರಿತು ಉನ್ನತ ಮಟ್ಟದ ತತ್ವಗಳ ಅಭಿವೃದ್ಧಿಗೆ ಚಿಂತನೆಗಳನ್ನು ಒದಗಿಸುತ್ತದೆ. ಭಾರತದ ಅಧ್ಯಕ್ಷತೆಯು ಜಪಾನ್‌ನ ಸಹಯೋಗದೊಂದಿಗೆ ಸಾಗರ ಪ್ಲಾಸ್ಟಿಕ್ ತ್ಯಾಜ್ಯದ ಜಿ-20 ಚೌಕಟ್ಟಿನ ಅಡಿಯಲ್ಲಿ ಸಮುದ್ರದ ಪ್ಲಾಸ್ಟಿಕ್ ತ್ಯಾಜ್ಯದ ವಿರುದ್ಧ ಕ್ರಮಗಳ 5 ನೇ ವರದಿಯನ್ನು ಪ್ರಕಟಿಸುತ್ತದೆ ಎಂದು ಹೇಳಲಾಯಿತು. ಪ್ರತಿನಿಧಿಗಳು ಸಾಗರ ಸಂಪನ್ಮೂಲಗಳ ಸುಸ್ಥಿರ ಬಳಕೆ, ಮಾಲಿನ್ಯ ಮತ್ತು ತ್ಯಾಜ್ಯವನ್ನು ತಡೆಗಟ್ಟಲು ಮತ್ತು ಜೀವವೈವಿಧ್ಯದ ರಕ್ಷಣೆ ಮತ್ತು ವರ್ಧನೆಗಾಗಿ ಕ್ರಮಗಳಿಗೆ ಬೆಂಬಲ ವ್ಯಕ್ತಪಡಿಸಿದರು. ಹವಾಮಾನದ ಪರಿಣಾಮಗಳಿಗೆ ಸ್ಥಿತಿಸ್ಥಾಪಕತ್ವವನ್ನು ನಿರ್ಮಿಸಲು ಮತ್ತು ಸಾಗರಗಳ ಇಂಗಾಲದ ಪ್ರತ್ಯೇಕತೆಯ ಸಾಮರ್ಥ್ಯವನ್ನು ಕಾಪಾಡಿಕೊಳ್ಳಲು ಇವು ನಿರ್ಣಾಯಕವಾಗಿವೆ, ಜೊತೆಗೆ ಸ್ಥಳೀಯ ಕರಾವಳಿ ಸಮುದಾಯಗಳ ಜೀವನೋಪಾಯವನ್ನು ಬೆಂಬಲಿಸುವ ನೀಲಿ ಆರ್ಥಿಕತೆಗೆ ಕೊಡುಗೆ ನೀಡುತ್ತವೆ.

ಸಮಾರೋಪದ ಅಧಿವೇಶನದ ಕಡೆಗೆ, ನೀಲಿ ಆರ್ಥಿಕತೆಯ ಪ್ರಮುಖ ಅಂಶಗಳ ಕುರಿತು ವಿವರವಾದ ಚರ್ಚೆಗೆ ಅನುಕೂಲವಾಗುವಂತೆ ಸಾಗರ 20 ಸಂವಾದ (ಓಷನ್ 20 ಡೈಲಾಗ್)‌ ನಡೆಸಲು ಭಾರತದ ಅಧ್ಯಕ್ಷತೆಯು ಯೋಜಿಸಿರುವುದನ್ನು ತಿಳಿಸಲಾಯಿತು. ಭಾರತದ ಅಧ್ಯಕ್ಷತೆಯು ಮೇ 21, 2023 ರಂದು ಸಾಗರ 20 ಸಂವಾದದ ಹಿನ್ನೆಲೆಯಲ್ಲಿ ಸಮುದ್ರದ ತ್ಯಾಜ್ಯ  ಮತ್ತು ಸಮುದಾಯದ ಭಾಗವಹಿಸುವಿಕೆಯಲ್ಲಿ ಕ್ರಮದ ಪ್ರಾಮುಖ್ಯತೆಯನ್ನು ಒತ್ತಿಹೇಳಲು ಸಂಘಟಿತ ಕಡಲತೀರ ಸ್ವಚ್ಚತಾ ಕಾರ್ಯಕ್ರಮವನ್ನು ಆಯೋಜಿಸುವುದಾಗಿ ಘೋಷಿಸಿತು. ಏಕ ಬಳಕೆಯ ಪ್ಲಾಸ್ಟಿಕ್‌ಗಳಿಗೆ ಸಮರ್ಥ ಪರ್ಯಾಯಗಳ ಬಳಕೆಯನ್ನು ಉತ್ತೇಜಿಸಲು ನಡವಳಿಕೆ ಬದಲಾವಣೆಗಳು, ಕಸವನ್ನು ತಡೆಗಟ್ಟುವುದು ಇತ್ಯಾದಿಗಳು ಸ್ವಚ್ಛ ಮತ್ತು ಆರೋಗ್ಯಕರ ಸಾಗರಗಳಿಗೆ ಕೊಡುಗೆ ನೀಡುವಲ್ಲಿ ಲೈಫ್ (ಪರಿಸರಕ್ಕಾಗಿ ಜೀವನಶೈಲಿ) ತತ್ವಗಳ ಪ್ರಾಮುಖ್ಯತೆಯನ್ನು ಎತ್ತಿ ತೋರಿಸಲಾಯಿತು.

ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯ ಕಾರ್ಯದರ್ಶಿ ಮತ್ತು ಭೂ ವಿಜ್ಞಾನ ಸಚಿವಾಲಯದ ಕಾರ್ಯದರ್ಶಿಯವರು ದಿನದಲ್ಲಿ ನಡೆದ ಚರ್ಚೆಗಳ ಕುರಿತು ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದರು.

*****

 

 


(Release ID: 1898405) Visitor Counter : 254