ಗಣಿ ಸಚಿವಾಲಯ
2023-24ರಲ್ಲಿ 111 ಸಾರ್ವಜನಿಕ ಆರೋಗ್ಯ ಮತ್ತು ಸಾರ್ವಜನಿಕ ಉತ್ತಮ ಭೂವಿಜ್ಞಾನ ಚಟುವಟಿಕೆಗಳನ್ನು ಕೈಗೊಳ್ಳಲಿರುವ ಭಾರತೀಯ ಭೂವಿಜ್ಞಾನ ಸಮೀಕ್ಷೆ
ಭಾರತೀಯ ಭೂವಿಜ್ಞಾನ ಸಮೀಕ್ಷೆ- GSI ಕಾರ್ಯತಂತ್ರ ಮತ್ತು ರಸಗೊಬ್ಬರ ಖನಿಜಗಳ ಪರಿಶೋಧನೆಯ ಮೇಲೆ ಕೇಂದ್ರೀಕರಿಸಿದೆ
Posted On:
11 FEB 2023 9:36AM by PIB Bengaluru
ಗಣಿ ಸಚಿವಾಲಯದ ಅಡಿಯಲ್ಲಿ ಭಾರತೀಯ ಭೂವಿಜ್ಞಾನ ಸಮೀಕ್ಷೆ(GSI) 2023-24ರ ಅವಧಿಯಲ್ಲಿ 111 ಸಾರ್ವಜನಿಕ ಆರೋಗ್ಯ ಮತ್ತು ಸಾರ್ವಜನಿಕ ಉತ್ತಮ ಭೂವಿಜ್ಞಾನ ಚಟುವಟಿಕೆಗಳನ್ನು ಕೈಗೆತ್ತಿಕೊಳ್ಳಲಿದೆ. 2023-24 ಕ್ಕೆ ಐದು ಅಭಿಯಾನಗಳಲ್ಲಿ ಒಟ್ಟು 966 ಪ್ರಮಾಣಿತ ಕಾರ್ಯಕ್ರಮಗಳನ್ನು ಜಿಎಸ್ ಐ ಅಂತಿಮಗೊಳಿಸಿದೆ. ಆಯಕಟ್ಟಿನ-ನಿರ್ಣಾಯಕ ಮತ್ತು ರಸಗೊಬ್ಬರ ಖನಿಜಗಳ ಪರಿಶೋಧನೆಗೆ ವಿಶೇಷ ಒತ್ತು ನೀಡುವ ಮೂಲಕ ಬೇಸ್‌ಲೈನ್ ಡೇಟಾ ಉತ್ಪಾದನೆ ಮತ್ತು ಖನಿಜ ಶೋಧನೆ ಕಾರ್ಯಕ್ರಮಗಳ ಮೇಲೆ ಗಮನ ಕೇಂದ್ರೀಕರಿಸಿದೆ.
ಇಷ್ಟು ಮಾತ್ರವಲ್ಲದೆ, ಜಿಎಸ್ ಐ ವಿವಿಧ ರಾಜ್ಯಗಳ ಭೂವಿಜ್ಞಾನಿಗಳು ಸೇರಿದಂತೆ ತನ್ನ ಅಧಿಕಾರಿಗಳು ಮತ್ತು ಹೊರಗಿನ ಅಧಿಕಾರಿಗಳಿಗೆ ತರಬೇತಿ ಮತ್ತು ಸಾಮರ್ಥ್ಯ ನಿರ್ಮಾಣಕ್ಕಾಗಿ 115 ಕೋರ್ಸ್‌ಗಳನ್ನು ನಡೆಸುತ್ತದೆ.
1851 ರಲ್ಲಿ ಸ್ಥಾಪನೆಯಾದ ಜಿಎಸ್ ಐ, ವಿಶ್ವದ ಅತ್ಯಂತ ಹಳೆಯ ಸಮೀಕ್ಷೆ ಸಂಸ್ಥೆಗಳಲ್ಲಿ ಒಂದಾಗಿದೆ. ಇಷ್ಟು ವರ್ಷಗಳಲ್ಲಿ, ಜಿಎಸ್ ಐ ವಿವಿಧ ಭೂವೈಜ್ಞಾನಿಕ ಚಟುವಟಿಕೆಗಳಲ್ಲಿ ವೈವಿಧ್ಯವಾಗಿ ಬೆಳೆದು ಮುಂದುವರಿದಿದೆ. ಭೂವಿಜ್ಞಾನದ ಕ್ಷೇತ್ರದಲ್ಲಿ ಗಮನಾರ್ಹ ಕೊಡುಗೆಗಳನ್ನು ಕೂಡ ನೀಡಿದೆ.
*****
(Release ID: 1898388)
Visitor Counter : 178