ಕಲ್ಲಿದ್ದಲು ಸಚಿವಾಲಯ

ಮಹಾನದಿ ಕಲ್ಲಿದ್ದಲು ನಿಗಮ ನಿಯಮಿತ ಪರಿಚಯಿಸುತ್ತಿದೆ ವಿಹಂಗಮ್ ಡ್ರೋನ್ ತಂತ್ರಜ್ಞಾನ ಮತ್ತು ಆಧುನಿಕ ಸುರಕ್ಷತಾ ಸಲಕರಣೆಗಳು  

Posted On: 03 FEB 2023 3:18PM by PIB Bengaluru


ಪ್ರಧಾನ CPSE ಮಹಾನದಿ ಕಲ್ಲಿದ್ದಲು ನಿಗಮ ನಿಯಮಿತ (MCL), ಕಲ್ಲಿದ್ದಲು ಸಚಿವಾಲಯದ ಅಡಿಯಲ್ಲಿ ವಿಹಂಗಮ ಎಂಬ ವೆಬ್ ಆಧಾರಿತ ಪೋರ್ಟಲ್ ಜೊತೆಗೆ ಒಂದು ಡ್ರೋನ್ ಮತ್ತು ಮೂಲಭೂತ ನಿಯಂತ್ರಣ ವ್ಯವಸ್ಥೆಯನ್ನು ಪ್ರಾರಂಭಿಸುವ ಮೂಲಕ ಕಲ್ಲಿದ್ದಲು ಗಣಿಗಳಲ್ಲಿ ಡ್ರೋನ್ ತಂತ್ರಜ್ಞಾನವನ್ನು ಪರಿಚಯಿಸಿದೆ. ಗಣಿಗಳ ಸಮೀಪ ಅಳವಡಿಸಲಾದ ಪ್ರತ್ಯೇಕ 40 Mbps ಸಾಮರ್ಥ್ಯದ ಇಂಟರ್ನೆಟ್ ಲೀಸ್ ಲೈನ್ ಮೂಲಕ ಗಣಿಯಿಂದ ವಾಸ್ತವ ಸಮಯದಲ್ಲಿ  ಡ್ರೋನ್ ವೀಡಿಯೊವನ್ನು ವೀಕ್ಷಿಸಲು ಅಧಿಕೃತ ಪರವಾನಿಗೆ ಇರುವ ವ್ಯಕ್ತಿಗೆ ಪೋರ್ಟಲ್ ಅನುಮತಿಸುತ್ತದೆ. ಡ್ರೋನ್  ಹಾರಿಸುವ ನಿಯಂತ್ರಣ ಕೇಂದ್ರ ನಿರ್ಮಿಸಲಾಗಿದ್ದು ಈ ವ್ಯವಸ್ಥೆಯನ್ನು ಯಾವುದೇ ಸ್ಥಳದಿಂದ ಪೋರ್ಟಲ್ ಮೂಲಕ ನಿರ್ವಹಿಸಬಹುದಾಗಿದೆ. ತಾಲಚೇರ್ ಗಣಿಪ್ರದೇಶದ ಭುವನೇಶ್ವರಿ ಮತ್ತು ಲಿಂಗರಾಜ್ ತೆರೆದ ಗಣಿಗಳಲ್ಲಿ  ಈ ಪ್ರಾಯೋಗಿಕ ಯೋಜನೆಯು ಪ್ರಸ್ತುತ ಜಾರಿಯಲ್ಲಿದೆ.

ಗಣಿಗಾರಿಕೆ ಪ್ರಕ್ರಿಯೆಯ ಡಿಜಿಟಲೀಕರಣಕ್ಕಾಗಿ ಎಂ ಸಿ ಎಲ್ ಗಣಿ ಪರಿಸರದ ಮೇಲ್ವಿಚಾರಣೆ, ಪರಿಮಾಣ ಮಾಪನ ಮತ್ತು ಫೋಟೋಗ್ರಾಮೆಟ್ರಿಕ್ ಮ್ಯಾಪಿಂಗ್ ಗಾಗಿ  ಡ್ರೋನ್ ತಂತ್ರಜ್ಞಾನವನ್ನು ಬಳಸುತ್ತಿದೆ.

ದಾಖಲೆಯ ಕಲ್ಲಿದ್ದಲು ಉತ್ಪಾದನೆಯನ್ನು ಮತ್ತಷ್ಟು ಹೆಚ್ಚಿಸಲು ಅತ್ಯಾಧುನಿಕ ತಂತ್ರಜ್ಞಾನವನ್ನು ನಿಯೋಜಿಸುವುದರ ಜೊತೆಗೆ, ಸುರಕ್ಷತಾ ಮಾನದಂಡಗಳನ್ನು ಮತ್ತಷ್ಟು ಹೆಚ್ಚಿಸಲು ಎಂ ಸಿ ಎಲ್ ಅತ್ಯಾಧುನಿಕ ಉಪಕರಣಗಳ ಬಳಕೆಗೆ ಮುಂದಾಗಿದೆ.  ಇತ್ತೀಚೆಗೆ ತನ್ನ ಕಲ್ಲಿದ್ದಲು ಶೇಖರಣ ಗೋದಾಮಿನಲ್ಲಿ  ರೋಬೋಟಿಕ್ ನಾಜಲ್ ವಾಟರ್ ಸ್ಪ್ರೇಯರ್ ಅನ್ನು ಪರಿಚಯಿಸಿದೆ. ಕಲ್ಲಿದ್ದಲು ಕಂಪನಿಗಳು ಕಷ್ಟಕರವಾದ ಮತ್ತು ಅಪಾಯಕಾರಿ ಕೆಲಸಗಳನ್ನು ನಿರ್ವಹಿಸಲು ರೋಬೋಟ್ ಸಹಾಯದ ಅಗ್ನಿಶಾಮಕ ಮತ್ತು ಧೂಳು ನಿಗ್ರಹಿಸುವಂತಹ ಸುಧಾರಿತ ತಂತ್ರಜ್ಞಾನವನ್ನು ಬಳಸುತ್ತವೆ.

ಈ ಉಪಕರಣವು ಮಂಜಿನ ರೂಪದಲ್ಲಿ ಸತತವಾಗಿ 70 ಮೀಟರ್ ದೂರದವರೆಗೆ ನೀರನ್ನು ಸಿಂಪಡಿಸಬಹುದಾಗಿದೆ. ಈ ನಳಿಕೆಯನ್ನು 28 ಕಿಲೋಲೀಟರ್ ಸಾಮರ್ಥ್ಯದ ನೀರಿನ ಟ್ಯಾಂಕರ್ ಗೆ ಕೂಡಾ ಆಳವಡಿಸಬಹುದಾಗಿದ್ದು ಇದನ್ನು ಸ್ವಿವೆಲ್ ನಳಿಕೆ ಎಂದೂ ಕರೆಯುತ್ತಾರೆ.

ಒಡಿಶಾದ ಸುಂದರ್‌ಗಢ್, ಝಾರ್ಸುಗುಡ ಮತ್ತು ಅಂಗುಲ್ ಜಿಲ್ಲೆಗಳಲ್ಲಿ ಕಲ್ಲಿದ್ದಲು ಗಣಿಗಾರಿಕೆ ಚಟುವಟಿಕೆಗಳಲ್ಲಿ ತೊಡಗಿರುವ ಮಹಾನದಿ ಕಲ್ಲಿದ್ದಲು ನಿಗಮ ನಿಯಮಿತ (MCL) ಭಾರತದಲ್ಲಿ ಉತ್ಪಾದನೆಯಾಗುವ ಒಟ್ಟು ಕಲ್ಲಿದ್ದಲಿನ ಪ್ರಮಾಣದ 20% ಕ್ಕಿಂತ ಹೆಚ್ಚು ಕೊಡುಗೆಯನ್ನು ನೀಡುತ್ತಿದೆ.

*****(Release ID: 1896068) Visitor Counter : 125


Read this release in: English , Urdu , Marathi , Hindi , Odia