ಕೃಷಿ ಸಚಿವಾಲಯ

ಕೇಂದ್ರ ಸಚಿವರಾದ ಶ್ರೀ ತೋಮರ್ ಮತ್ತು ಶ್ರೀ ಪರಾಸ್ ಅವರು ಜಿ-20 ಅಂತರರಾಷ್ಟ್ರೀಯ ಹಣಕಾಸು ವಾಸ್ತುಶಿಲ್ಪ ಕಾರ್ಯಕಾರಿ ಗುಂಪಿನ ಸಭೆಯನ್ನು ಉದ್ಘಾಟಿಸಿದರು


ವಿಜ್ಞಾನ ಮತ್ತು ನಾವೀನ್ಯತೆಯಿಂದಾಗಿ ಭಾರತವು ವೇಗವಾಗಿ ಅಭಿವೃದ್ಧಿ ಹೊಂದುತ್ತಿದೆ - ಶ್ರೀ ತೋಮರ್

ಜಾಗತಿಕವಾಗಿ ಸಂಘಟಿತ ನೀತಿಗಳು ಮತ್ತು ಕ್ರಮಗಳ ಮೇಲೆ ಗಮನ ಹರಿಸುವ ಅಗತ್ಯವಿದೆ

ಅಭಿವೃದ್ಧಿ ಹಣಕಾಸು, ದುರ್ಬಲ ದೇಶಗಳಿಗೆ ಬೆಂಬಲ ಮತ್ತು ಆರ್ಥಿಕ ಸ್ಥಿರತೆಯನ್ನು ಒದಗಿಸಲು ಗುಂಪು ಉತ್ತಮ ಸ್ಥಾನದಲ್ಲಿದೆ - ಶ್ರೀ ಪರಾಸ್

Posted On: 30 JAN 2023 3:14PM by PIB Bengaluru

ಭಾರತದ ಅಧ್ಯಕ್ಷತೆಯಲ್ಲಿ ನಡೆಯುತ್ತಿರುವ ಜಿ -20ರ ಮೊದಲ ಅಂತರರಾಷ್ಟ್ರೀಯ ಹಣಕಾಸು ವಾಸ್ತುಶಿಲ್ಪ ಕಾರ್ಯಕಾರಿ ಗುಂಪಿನ ಎರಡು ದಿನಗಳ ಸಭೆಯನ್ನು ಇಂದು ಚಂಡೀಗಢದಲ್ಲಿ ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಸಚಿವ ಶ್ರೀ ನರೇಂದ್ರ ಸಿಂಗ್ ತೋಮರ್ ಮತ್ತು ಆಹಾರ ಸಂಸ್ಕರಣಾ ಕೈಗಾರಿಕೆಗಳ ಸಚಿವ ಶ್ರೀ ಪಶುಪತಿ ಕುಮಾರ್ ಪರಾಸ್ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಶ್ರೀ ತೋಮರ್, ಭಾರತವು ವಿಜ್ಞಾನ ಮತ್ತು ನಾವೀನ್ಯತೆಯೊಂದಿಗೆ ವೇಗವಾಗಿ ಅಭಿವೃದ್ಧಿ ಹೊಂದುತ್ತಿದೆ, ಇವೆರಡೂ ಭಾರತದ ಭವಿಷ್ಯದೊಂದಿಗೆ ಬಹಳ ಆಳವಾದ ಸಂಪರ್ಕ ಹೊಂದಿವೆ ಎಂದು ತಿಳಿಸಿದರು. ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯವನ್ನು ರಚಿಸಲು ನಾವು ತಂತ್ರಜ್ಞಾನವನ್ನು ಬಳಸಿಕೊಂಡಿದ್ದೇವೆ. ಜಾಗತಿಕ ಆರೋಗ್ಯ ರಕ್ಷಣೆಯಲ್ಲಿ ಆರ್ಥಿಕ ಸೇರ್ಪಡೆ ಮತ್ತು ಸುಸ್ಥಿರ ಇಂಧನದತ್ತ ಸಾಗಲು ನಾವು ಗಮನಾರ್ಹ ಕೊಡುಗೆ ನೀಡಿದ್ದೇವೆ, ಆದರೆ ಜನ-ಕೇಂದ್ರಿತ ಅಭಿವೃದ್ಧಿಯು ನಮ್ಮ ರಾಷ್ಟ್ರೀಯ ಕಾರ್ಯತಂತ್ರದ ಆಧಾರವಾಗಿದೆ. ಇದೇ ತತ್ವವನ್ನು ನಮ್ಮ ಜಿ-20ರ ಅಧ್ಯಕ್ಷತೆಯ ಘೋಷ ವಾಕ್ಯವಾದ - 'ಒಂದು ಭೂಮಿ, ಒಂದು ಕುಟುಂಬ, ಒಂದು ಭವಿಷ್ಯ' ಕೂಡ ಒತ್ತಿಹೇಳುತ್ತದೆ ಎಂದು ತಿಳಿಸಿದರು.

ಕೇಂದ್ರ ಸಚಿವ ಶ್ರೀ ತೋಮರ್ ಅವರು, ಜಿ -20ರ ಭಾರತದ ಅಧ್ಯಕ್ಷತೆ ನಮ್ಮೆಲ್ಲ ನಾಗರಿಕರಿಗೆ ಹೆಮ್ಮೆಯ ಕ್ಷಣವಾಗಿದೆ, ಜೊತೆಗೆ ಈ ಐತಿಹಾಸಿಕ ಸಂದರ್ಭದೊಂದಿಗೆ ಬರುವ ಜವಾಬ್ದಾರಿಗಳ ಬಗ್ಗೆ ನಮಗೆ ಚೆನ್ನಾಗಿ ತಿಳಿದಿದೆ ಎಂದು ಹೇಳಿದರು. ಇಂದು ಜಗತ್ತು ಅನೇಕ ಸಂಕೀರ್ಣ ಸವಾಲುಗಳನ್ನು ಎದುರಿಸುತ್ತಿದ್ದು, ಆ ಸಂಕೀರ್ಣ ಸವಾಲುಗಳು ಆಳವಾಗಿ ಪರಸ್ಪರ ಸಂಬಂಧ ಹೊಂದಿವೆ ಮತ್ತು ಕೇವಲ ಗಡಿಗಳಿಂದ ಅವುಗಳನ್ನು ವ್ಯಾಖ್ಯಾನಿಸಲಾಗುವುದಿಲ್ಲ. ಈಗ ನಾವು ಎದುರಿಸುತ್ತಿರುವ ಸವಾಲುಗಳು ಜಾಗತಿಕ ಸ್ವರೂಪದ್ದಾಗಿದ್ದು, ಜಾಗತಿಕ ಪರಿಹಾರಗಳ ಅಗತ್ಯವಿದೆ, ಆದ್ದರಿಂದ ವಿಶ್ವ ಸಮುದಾಯವು ಇಂದು ಜಾಗತಿಕವಾಗಿ ಸಂಘಟಿತ ನೀತಿಗಳು ಮತ್ತು ಕ್ರಮಗಳತ್ತ ಹೆಚ್ಚು ಒತ್ತು ನೀಡಬೇಕಾಗಿದೆ. ಬಹುಪಕ್ಷೀಯತೆಯಲ್ಲಿ ನವೀಕರಿಸಲಾದ ನಂಬಿಕೆಯ ಅಗತ್ಯವೂ ಇದೆ. ಪ್ರಜಾಪ್ರಭುತ್ವ ಮತ್ತು ಬಹುಪಕ್ಷೀಯತೆಗೆ ಸಂಪೂರ್ಣವಾಗಿ ಬದ್ಧವಾಗಿರುವ ನಮ್ಮ ರಾಷ್ಟ್ರವು ಬಹು ಆಯಾಮದ ಅಭಿವೃದ್ಧಿಯನ್ನು ಪ್ರದರ್ಶಿಸುವುದು ಮಾತ್ರವಲ್ಲದೆ ಸಾರ್ವತ್ರಿಕವಾಗಿ ಗುರುತಿಸಲ್ಪಟ್ಟ ಶಕ್ತಿಯನ್ನು ಪ್ರದರ್ಶಿಸಲು ಸಿದ್ಧವಾಗಿದೆ. ಇತ್ತೀಚೆಗೆ ನಡೆದ ವಿಶ್ವ ಆರ್ಥಿಕ ವೇದಿಕೆ ಸಭೆಯಲ್ಲಿ ಭಾರತವನ್ನು ದುರ್ಬಲ ಜಗತ್ತಿನಲ್ಲಿ ದಾರಿದೀಪ ಎಂದು ಬಣ್ಣಿಸಲಾಗಿದೆ. ಹವಾಮಾನ ಗುರಿ ಮತ್ತು ಕೋವಿಡ್ ನಂತರದ ಅಭಿವೃದ್ಧಿಯ ಹಾದಿಯತ್ತ ಮರಳಿರುವ ಭಾರತದ ಬದ್ಧತೆಯನ್ನು ಎಲ್ಲರೂ ಶ್ಲಾಘಿಸಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಭಾರತ ತನಗೆ ನೀಡಲಾದ ಜವಾಬ್ದಾರಿಯನ್ನು ಪೂರೈಸಲು ಸಿದ್ಧವಾಗಿದೆ ಎಂದು ಶ್ರೀ ತೋಮರ್ ಹೇಳಿದರು. ಅಭಿವೃದ್ಧಿ ಮಾದರಿಯ ನಮ್ಮ ಟೆಂಪ್ಲೇಟ್ ಅನ್ನು ಹಂಚಿಕೊಳ್ಳಲು ನಾವು ಸಂತೋಷಪಡುತ್ತೇವೆ, ಹಾಗೆಯೇ ನಾವು ಎಲ್ಲರಿಂದಲೂ ಕಲಿಯಲು ಸಹ ಸಿದ್ದರಿದ್ದೇವೆ. ಈ ವರ್ಷದ ನಮ್ಮ ಆದ್ಯತೆಗಳು ಮತ್ತು ಫಲಿತಾಂಶಗಳ ಮೂಲಕ, ಚರ್ಚೆಗಳ ಮೂಲಕ, ನಾವು ಪ್ರಾಯೋಗಿಕ ಜಾಗತಿಕ ಪರಿಹಾರಗಳನ್ನು ಕಂಡುಕೊಳ್ಳುವ ಗುರಿಯನ್ನು ಹೊಂದಿದ್ದೇವೆ. ಹಾಗೆ ಮಾಡುವ ಮೂಲಕ, ಅಭಿವೃದ್ಧಿಶೀಲ ರಾಷ್ಟ್ರಗಳ ಧ್ವನಿಯನ್ನು ಎತ್ತಿ ಹಿಡಿಯುವಲ್ಲಿ ನಾವು ತೀವ್ರ ಆಸಕ್ತಿ ವಹಿಸಿದ್ದೇವೆ. ನಾವು ಈಗ ಯಾರನ್ನೂ ಬಿಟ್ಟು ಕೊಡಲು ಸಾಧ್ಯವಿಲ್ಲ. ಜಿ -20ರ ನಮ್ಮ ಅಂತರ್ಗತ, ಮಹತ್ವಾಕಾಂಕ್ಷೆಯ, ಕ್ರಿಯಾ ಆಧಾರಿತ ಮತ್ತು ನಿರ್ಣಾಯಕ ಕಾರ್ಯಸೂಚಿಯ ಮೂಲಕ, ನಮ್ಮ ಗುರಿಯ ನಿಜವಾದ ಮನೋಭಾವವನ್ನು ವ್ಯಕ್ತಪಡಿಸುವ 'ವಸುದೈವ ಕುಟುಂಬಕಂ' ಎಂಬ ಗುರಿಯನ್ನು ನಾವು ಹೊಂದಿದ್ದೇವೆ ಎಂದು ಶ್ರೀ ತೋಮರ್ ಹೇಳಿದರು.

ಇತ್ತೀಚಿನ ವರ್ಷಗಳಲ್ಲಿ ಅತ್ಯಂತ ದುರ್ಬಲ ಮತ್ತು ಕಡಿಮೆ ಆದಾಯದ ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ನೆರವು ನೀಡುವಲ್ಲಿ ಈ ಗುಂಪಿನ ಅನುಕರಣೀಯ ಕೊಡುಗೆಯನ್ನು ಉಲ್ಲೇಖಿಸಿದ ಅವರು, ಸಾಲದ ಹರಿವಿನ ಮೇಲೆ ಹೆಚ್ಚುತ್ತಿರುವ ಅಭದ್ರತೆಯನ್ನು ನಿವಾರಿಸಲು ಕೈಗೊಂಡ ಕ್ರಮಗಳು ವಿಶೇಷವಾಗಿ ಗಮನಾರ್ಹವಾಗಿವೆ ಎಂದು ತಿಳಿಸಿದರು. 2023ರಲ್ಲಿ ಭಾರತದ ಅಧ್ಯಕ್ಷತೆಯ ಅವಧಿಯಲ್ಲಿ ಈ ಪ್ರಯತ್ನಗಳು ಹೆಚ್ಚಿನ ವೇಗದಲ್ಲಿ ಮುಂದುವರೆಯುತ್ತಿವೆ. ಜಾಗತಿಕ ಮತ್ತು ಹಣಕಾಸು ಆಡಳಿತವನ್ನು ಮರುವಿನ್ಯಾಸಗೊಳಿಸಲು ಗುಂಪಿನ ಆರಾಮದಾಯಕ ಸ್ಥಾನವನ್ನು ನಾವು ಹೇಗೆ ಬಳಸಿಕೊಳ್ಳಬಹುದು ಎಂಬುದನ್ನು ಸಹ ಗುಂಪು ಪರಿಗಣಿಸುತ್ತದೆ. ಭಾರತದ ಅಧ್ಯಕ್ಷತೆಯಲ್ಲಿ, 21ನೇ ಶತಮಾನದ ಜಾಗತಿಕ ಸವಾಲುಗಳನ್ನು ಎದುರಿಸಲು ಅಭಿವೃದ್ಧಿಯ ಪ್ರಮುಖ ವೇಗವರ್ಧಕಗಳಾದ ಬಹುಪಕ್ಷೀಯ ಅಭಿವೃದ್ಧಿ ಬ್ಯಾಂಕುಗಳನ್ನು ಹೇಗೆ ಉತ್ತಮವಾಗಿ ಸಜ್ಜುಗೊಳಿಸಿ ಬಳಸಿಕೊಳ್ಳುವುದು ಎಂಬುದನ್ನು ಕಂಡುಹಿಡಿಯಲು ಗುಂಪು ಪ್ರಯತ್ನಿಸುತ್ತದೆ. ಈ ಸಂದರ್ಭದಲ್ಲಿ ರಾಷ್ಟ್ರಪಿತ ಮಹಾತ್ಮಾ ಗಾಂಧಿಯವರನ್ನು ಸ್ಮರಿಸಿದ ಶ್ರೀ ತೋಮರ್ ಅವರು, ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಮತ್ತು ಭಾರತದ ಎಲ್ಲ ನಾಗರಿಕರ ಪರವಾಗಿ ಪ್ರತಿನಿಧಿಗಳನ್ನು ಸ್ವಾಗತಿಸಿದರು.

ರಚನಾತ್ಮಕ ಸಂವಾದಕ್ಕೆ ಅವಕಾಶ ಕಲ್ಪಿಸುವುದು, ಜ್ಞಾನವನ್ನು ಸೃಷ್ಟಿಸಿ ಹಂಚಿಕೊಳ್ಳುವುದು ಮತ್ತು ಸುರಕ್ಷಿತ, ಶಾಂತಿಯುತ ಮತ್ತು ಸಮೃದ್ಧ ವಿಶ್ವಕ್ಕಾಗಿ ಸಾಮೂಹಿಕ ಆಕಾಂಕ್ಷೆಯ ಹಂಚಿಕೆ ಭಾರತದ ಪ್ರಯತ್ನವಾಗಿದೆ ಎಂದು ಕೇಂದ್ರ ಸಚಿವ ಶ್ರೀ ಪರಾಸ್ ಸಭೆಯಲ್ಲಿ ತಿಳಿಸಿದರು. ಈ ದಿಕ್ಕಿನಲ್ಲಿ ನಾವು ಒಗ್ಗಟ್ಟಾಗಿ ಕೆಲಸ ಮಾಡಬೇಕು. ಜಿ-20 ಶೃಂಗಸಭೆಯ ಭಾರತದ ಅಧ್ಯಕ್ಷತೆಯ ಅವಧಿಯಲ್ಲಿ, ಪ್ರಗತಿಯನ್ನು ಮುನ್ನಡೆಸುವುದು ಮತ್ತು ತೀವ್ರ ಸವಾಲುಗಳನ್ನು ಎದುರಿಸಿ, ದುರ್ಬಲ ಗುಂಪುಗಳಿಗೆ ಗರಿಷ್ಠ ಬೆಂಬಲವನ್ನು ಒದಗಿಸಲು ಇಂದು ಅಂತರರಾಷ್ಟ್ರೀಯ ಹಣಕಾಸು ವಾಸ್ತುಶಿಲ್ಪವು ಸುಸಜ್ಜಿತವಾಗಿದೆ ಎಂದು ಖಚಿತಪಡಿಸಿಕೊಳ್ಳುವುದು ನಮ್ಮ ಜವಾಬ್ದಾರಿಯಾಗಿದೆ ಎಂದು ಅವರು ಹೇಳಿದರು. ಪ್ರಧಾನಮಂತ್ರಿ ಶ್ರೀ ಮೋದಿಯವರು ದಾವೋಸ್ ಶೃಂಗಸಭೆಯ ವಿಶ್ವ ಆರ್ಥಿಕ ವೇದಿಕೆಯನ್ನುದ್ದೇಶಿಸಿ ಮಾಡಿದ ಭಾಷಣದಲ್ಲಿ, ಹೊಸ ವಿಶ್ವ ವ್ಯವಸ್ಥೆಯ ಸವಾಲುಗಳನ್ನು ಎದುರಿಸಲು ಬಹುಪಕ್ಷೀಯ ಸಂಸ್ಥೆಗಳು ಸಿದ್ಧವಾಗಿವೆಯೇ ಎಂಬುದರ ಬಗ್ಗೆ ಚರ್ಚಿಸಿದರು. ಈ ಕಾರ್ಯಕಾರಿ ಗುಂಪು ಈ ಸವಾಲುಗಳನ್ನು ಎದುರಿಸಲು ಬದ್ಧವಾಗಿದೆ. ಅಭಿವೃದ್ಧಿ ಗುರಿಗಳನ್ನು ಪೂರೈಸುವ ನಿಟ್ಟಿನಲ್ಲಿ ಅಭಿವೃದ್ಧಿ ಹಣಕಾಸು ಸಂಸ್ಥೆಗೆ ತಮ್ಮ ಕೊಡುಗೆಯನ್ನು ಹೆಚ್ಚಿಸುವ ಸಲುವಾಗಿ, ಈ ಗುಂಪು ಈ ಸಂಸ್ಥೆಗಳನ್ನು ಬಲಪಡಿಸುವತ್ತ ತಮ್ಮ ಆಯ್ಕೆಗಳನ್ನು ಹುಡುಕಬಹುದು. ಅಂತರರಾಷ್ಟ್ರೀಯ ಹಣಕಾಸು ಸಂಸ್ಥೆಗಳು ಒದಗಿಸುವ ಆರ್ಥಿಕ ನೆರವಿನ ಅಗತ್ಯಗಳಿಗೆ ಪರಿಣಾಮಕಾರಿಯಾಗಿ ಸ್ಪಂದಿಸಲು ಅನುವು ಮಾಡಿಕೊಡುವ ಅಂತಹ ವ್ಯವಸ್ಥೆಗಳನ್ನು ತುರ್ತಾಗಿ ಗುರುತಿಸುವುದು ಕಡ್ಡಾಯವಾಗಿದೆ. ಕಡಿಮೆ ಆದಾಯ ಮತ್ತು ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ಇದು ಮುಖ್ಯವಾಗಿದೆ, ಏಕೆಂದರೆ ಈ ರಾಷ್ಟ್ರಗಳು ಈ ಸಂಪನ್ಮೂಲದ ಪ್ರಮುಖ ಫಲಾನುಭವಿಗಳಾಗಿದ್ದಾರೆ. ಹೆಚ್ಚುತ್ತಿರುವ ಸಾಲದಿಂದ ಹೆಚ್ಚು ಬಾಧಿತವಾದ ದೇಶಗಳೆಂದರೆ ಕಡಿಮೆ ಆದಾಯದ ದೇಶಗಳು ಮತ್ತು ಹೆಚ್ಚಿನವು ಮಧ್ಯಮ ಆದಾಯದ ದೇಶಗಳಾಗಿವೆ. ಹದಗೆಡುತ್ತಿರುವ ಸಾಲದ ಪರಿಸ್ಥಿತಿಯನ್ನು ನೀತಿ ಉಪಕ್ರಮಗಳು ಹೇಗೆ ಪರಿಹರಿಸಬಹುದು ಎಂಬುದರ ಕುರಿತು ಕಾರ್ಯಕಾರಿ ಗುಂಪು ಚರ್ಚಿಸಬಹುದು. ವಿಶ್ವದಾದ್ಯಂತದ ವಿವಿಧ ಪ್ರಖ್ಯಾತ ತಜ್ಞರೊಂದಿಗೆ, ಅಂತರರಾಷ್ಟ್ರೀಯ ಹಣಕಾಸು ವಾಸ್ತುಶಿಲ್ಪ ಕಾರ್ಯಕಾರಿ ಗುಂಪು ಅಭಿವೃದ್ಧಿ ಹಣಕಾಸು, ದುರ್ಬಲ ರಾಷ್ಟ್ರಗಳಿಗೆ ಬೆಂಬಲ, ಆರ್ಥಿಕ ಸ್ಥಿರತೆಯನ್ನು ಕಾಪಾಡಿಕೊಳ್ಳಲು ಮತ್ತು 'ಒಂದು ಭೂಮಿ, ಒಂದು ಕುಟುಂಬ, ಒಂದು ಭವಿಷ್ಯದ' ಗುರಿಯನ್ನು ಸಾಧಿಸಲು ಜಿ-20ರ ಪ್ರಯತ್ನಗಳನ್ನು ಸಮನ್ವಯಗೊಳಿಸುವಲ್ಲಿ ಉತ್ತಮವಾಗಿ ಸಜ್ಜಾಗಿದೆ ಎಂಬ ಭರವಸೆ ಇದೆ ಎಂದು ಅವರು ಹೇಳಿದರು.

ಈ ಸಭೆಯಲ್ಲಿ ಉಪಸ್ಥಿತರಿದ್ದ ಗಣ್ಯರಲ್ಲಿ ಐಎಫ್ಎಯ ಸಹ ಅಧ್ಯಕ್ಷರಾದ ಶ್ರೀ ವಿಲಿಯಂ ರೂಸ್ (ಫ್ರಾನ್ಸ್), ಬ್ಯುಂಗ್ಸಿಕ್ ಜಂಗ್ (ದಕ್ಷಿಣ ಕೊರಿಯಾ), ಕೇಂದ್ರ ಹಣಕಾಸು ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ ಶ್ರೀಮತಿ ಮನಿಷಾ ಸಿನ್ಹಾ, ಆರ್ ಬಿಐ ಸಲಹೆಗಾರ್ತಿ ಶ್ರೀಮತಿ ಮಹುವಾ ರೈ ಸೇರಿದ್ದಾರೆ.

****



(Release ID: 1894731) Visitor Counter : 182