ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ
ಜಾಗತಿಕ ನವೋದ್ಯಮ ಪರಿಸರ ವ್ಯವಸ್ಥೆಯನ್ನು ಬಲಪಡಿಸಲು ಮಾರ್ಗದರ್ಶಕರು, ಹೂಡಿಕೆದಾರರು ಮತ್ತು ಉದ್ಯಮಿಗಳ ಅಂತರರಾಷ್ಟ್ರೀಯ ಜಾಲ ರಚಿಸುವಂತೆ ಶ್ರೀ ಪಿಯೂಷ್ ಗೋಯಲ್ ಕರೆ
ಜಾಗತಿಕ ಸವಾಲುಗಳನ್ನು ಎದುರಿಸಲು ಎಲ್ಲವನ್ನೊಳಗೊಂಡ, ಸುಸ್ಥಿರ ನವೋದ್ಯಮ ಪರಿಸರ ವ್ಯವಸ್ಥೆ ರೂಪಿಸುವುದು ಜಗತ್ತಿನ ಸಾಮೂಹಿಕ ಜವಾಬ್ದಾರಿ: ಶ್ರೀ ಪಿಯೂಷ್ ಗೋಯಲ್
ನಾವೀನ್ಯ ಬಲಿಷ್ಠ ಆಧಾರ ಸ್ತಂಭವಾಗಿದ್ದು, ಅಮೃತ ಕಾಲದಲ್ಲಿ ಅಭಿವೃದ್ದಿ ಹೊಂದಿದ ಭಾರತವನ್ನು ನಿರ್ಮಿಸಲು ಇದು ನೆರವಾಗಲಿದೆ: ಶ್ರೀ ಪಿಯೂಷ್ ಗೋಯಲ್
ಇತ್ತೀಚಿನ ತಂತ್ರಜ್ಞಾನವನ್ನು ತ್ವರಿತವಾಗಿ ಅಳವಡಿಸಿಕೊಳ್ಳುತ್ತಿರುವ 2 ಮತ್ತು 3 ನೇ ಶ್ರೇಣಿಯ ಮಾರುಕಟ್ಟೆಗಳ ಪಾಲ್ಗೊಳ್ಳುವಿಕೆಯಿಂದ ಭಾರತದ ಸ್ಥಳೀಯ ನವೋದ್ಯಮಗಳ ಪರದೆ ಸರಿಸಿದಂತಾಗಿದೆ : ಶ್ರೀ ಪಿಯೂಷ್ ಗೋಯಲ್
ನವೋದ್ಯಮಗಳ ಬೆಳವಣಿಗೆಗೆ “ಪ್ರಜ್ಞೆ” – ಹಂಚಿಕೆ, ಪರಿಶೋಧನೆ, ನಿಸರ್ಗ, ಸೇವೆ ಮತ್ತು ಸಬಲೀಕರಣದ ಮಂತ್ರ ನೀಡಿದ ಸಚಿವರು
ಇಂದಿನ ಜಗತ್ತಿನಲ್ಲಿ ನಾವಿನ್ಯ ಕೇವಲ ಆರ್ಥಿಕ ಉದ್ದೇಶಗಳನ್ನು ಸಾಧಿಸುವುದಕ್ಕಿಂತಲೂ ಸಾಮಾಜಿಕ ಸೇರ್ಪಡೆ ಮತ್ತು ಪರಿಸರ ಸುಸ್ಥಿರತೆಯನ್ನು ಪರಿಗಣಿಸುತ್ತದೆ: ಶ್ರೀ ಪಿಯೂಷ್ ಗೋಯಲ್
ಅಭಿವೃದ್ದಿ ಹೊಂದಿದ ದೇಶಗಳು ಜಾಗತಿಕ ತಂತ್ರಜ್ಞಾನ ಮತ್ತು ನಾವೀನ್ಯದ ತಾಣವಾಗಲು ತಾವಾಗಿಯೇ ಕಡಿಮೆ ವೆಚ್ಚದಲ್ಲಿ ತಂತ್ರಾಂಶ ಮತ್ತು ಸೇವಾ ಬೆಂಬಲವನ್ನು ಹೊರಗುತ್ತಿಗೆ ಮೂಲಕ ವರ್ಗಾಯಿಸಬೇಕು: ಶ್ರೀ ಪಿಯೂಷ್ ಗೋಯಲ್
Posted On:
28 JAN 2023 12:45PM by PIB Bengaluru
ಜಾಗತಿಕ ನವೋದ್ಯಮ ಪರಿಸರ ವ್ಯವಸ್ಥೆಯನ್ನು ಬಲಪಡಿಸಲು ಮಾರ್ಗದರ್ಶಕರು, ಹೂಡಿಕೆದಾರರು ಮತ್ತು ಉದ್ಯಮಿಗಳ ಅಂತರರಾಷ್ಟ್ರೀಯ ಜಾಲ ರಚಿಸುವಂತೆ ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕೆ, ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ನಾಗರಿಕ ಸರಬರಾಜು ಮತ್ತು ಜವಳಿ ಸಚಿವ ಶ್ರೀ ಪಿಯೂಷ್ ಗೋಯಲ್ ಕರೆ ನೀಡಿದ್ದಾರೆ. ಇಂತಹ ಸಂಪರ್ಕ ಜಾಲ ನವೋದ್ಯಮಗಳಿಗೆ ಬೆಂಬಲ ಮತ್ತು ಸ್ಫೂರ್ತಿ, ಧನ ಸಹಾಯದ ವ್ಯವಸ್ಥೆ, ಸಂಶೋಧನೆ ಮತ್ತು ಅಭಿವೃದ್ದಿಯನ್ನು ಉತ್ತೇಜಿಸುವಂತಿರಬೇಕು ಎಂದರು. ಹೈದರಾಬಾದ್ ನಲ್ಲಿಂದು ಜಿ-20 ನವೋದ್ಯಮಗಳ 20 ಕಾರ್ಯನಿರತ ಗುಂಪಿನ ಪ್ರಾರಂಭಿಕ ಸಭೆ ಉದ್ದೇಶಿಸಿ ಅವರು ಮಾತನಾಡಿದರು.
ನಾವೀನ್ಯವನ್ನು ಬೆಂಬಲಿಸುವುದು ಕೇವಲ ಒಂದೆರಡು ದೇಶಗಳ ಪಾತ್ರವಲ್ಲ, ಜಗತ್ತಿನ ಎಲ್ಲ ಭಾಗಗಳಲ್ಲಿ ನವೋದ್ಯಮ ಪರಿಸರ ವ್ಯವಸ್ಥೆಗೆ ಉತ್ತೇಜನ ಕೊಡುವ ಜಾಗತಿಕ ಪ್ರಯತ್ನ ಹೊಂದಿರಬೇಕು. ಜಾಗತಿಕ ಸವಾಲುಗಳನ್ನು ಎದುರಿಸಲು ಎಲ್ಲವನ್ನೊಳಗೊಂಡ, ಸುಸ್ಥಿರ ನವೋದ್ಯಮ ಪರಿಸರ ವ್ಯವಸ್ಥೆಯನ್ನು ರೂಪಿಸುವುದು ಜಗತ್ತಿನ ಸಾಮೂಹಿಕ ಜವಾಬ್ದಾರಿಯಾಗಿದೆ ಎಂದರು.
ಭಾರತ ಜಿ-20 ಸಭೆಯನ್ನು ಮುನ್ನಡೆಸುವ ದೇಶವಾಗಿದ್ದು, ಜಾಗತಿಕ ನವೋದ್ಯಮ ಪರಿಸರ ವ್ಯವಸ್ಥೆಯ ಸಾಮರ್ಥ್ಯ ಮತ್ತು ಪ್ರಗತಿಯ ಮುಖ್ಯಾಂಶಗಳನ್ನು ಪ್ರಸ್ತಾಪಿಸುವುದು ಹೆಮ್ಮೆಯ ವಿಷಯವಾಗಿದೆ. ಭಾರತದ ನಾವೀನ್ಯವನ್ನು ವಿಶೇಷವಾಗಿ ಕೇಂದ್ರೀಕರಿಸಿ ಮೊದಲ ಬಾರಿಗೆ ಭಾರತದ ಜಿ20 ಅಧ್ಯಕ್ಷತೆಯಲ್ಲಿ ನವೋದ್ಯಮಗಳ 20 ಗುಂಪು ರಚಿಸಲಾಗಿದೆ ಎಂದು ಉಲ್ಲೇಖಿಸಿದರು.
ನಾವೀನ್ಯವೆನ್ನುವುದು ಬಲಿಷ್ಠ ಆಧಾರ ಸ್ತಂಭವಾಗಿದ್ದು, ಅಮೃತ ಕಾಲದಲ್ಲಿ ಅಭಿವೃದ್ದಿ ಹೊಂದಿದ ಭಾರತವನ್ನು ನಿರ್ಮಿಸಲು ಇದು ನೆರವಾಗಲಿದೆ. ಆರ್ಥಿಕತೆ, ಸಮಾಜ ಮತ್ತು ಸಾಮಾಜಿಕ ಒಳಿತಿಗಾಗಿ ನಾವೀನ್ಯವು ವೇಗವರ್ಧಕ ಶಕ್ತಿಯಾಗಿದೆ ಎಂದು ಹೇಳಿದರು. “ಇಂದಿನ ಜಗತ್ತಿನಲ್ಲಿ ನಾವಿನ್ಯ ಕೇವಲ ಆರ್ಥಿಕ ಉದ್ದೇಶಗಳನ್ನು ಸಾಧಿಸುವುದಕ್ಕಿಂತಲೂ ಸಾಮಾಜಿಕ ಸೇರ್ಪಡೆ ಮತ್ತು ಪರಿಸರ ಸುಸ್ಥಿರತೆಯನ್ನು ಪರಿಗಣಿಸುತ್ತದೆ” ಎಂದು ಹೇಳಿದರು.
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2016 ರಲ್ಲಿ ನವೋದ್ಯಮ ಭಾರತದ ಉಪಕ್ರಮಕ್ಕೆ ಶಿಲಾನ್ಯಾಸ ನೆರವೇರಿಸಿ ಭಾರತದ ನವೋದ್ಯಮದ ಯಾನವನ್ನು ಆರಂಭಿಸಿದ್ದರು. ಕಳೆದ ಏಳು ವರ್ಷಗಳಲ್ಲಿ ಉದ್ಯಮಶೀಲತೆಯನ್ನು ವೇಗಗೊಳಿಸಿದ್ದು, ನವ ಮತ್ತು ನವನವೀನ ಆಲೋಚನೆಗಳನ್ನು ಇದು ಉತ್ತೇಜಿಸಿದೆ. ಇದರಿಂದ ನವೋದ್ಯಮಗಳು ಪ್ರವರ್ಧಮಾನಕ್ಕೆ ಬರಲು ಮತ್ತು ನವೋದ್ಯಮಗಳ ಬೆಳವಣಿಗೆಗೆ ಪೂರಕವಾದ ಪರಿಸರ ವ್ಯವಸ್ಥೆಯನ್ನು ರೂಪಿಸಲು ಸಹಕಾರಿಯಾಗಿದೆ. ವಿವಿಧ ಕ್ಷೇತ್ರಗಳಲ್ಲಿ ನಮ್ಮ ನವೋದ್ಯಮಗಳ ಸಾಮರ್ಥ್ಯವಿದ್ದು, ಅದು ಇಂಧನವಾಗಿರಬಹುದು, ಹಣಕಾಸು ಸೇರ್ಪಡೆಯೇ ಆಗಿರಬಹುದು, ಅಲ್ಲಿ ಹಣಕಾಸು ತಂತ್ರಜ್ಞಾನ ಮಹತ್ವದ ಪಾತ್ರ ವಹಿಸಿದೆ. ಸಾಂಕ್ರಾಮಿಕ ರೋಗದ ವಿರುದ್ಧದ ಹೋರಾಟದಲ್ಲಿ, ದೂರ ಪ್ರದೇಶಗಳಲ್ಲಿ ಆರೋಗ್ಯ ಸೌಲಭ್ಯ ಒದಗಿಸುವ, ಆಹಾರ ವಿತರಣೆ, ಆನ್ ಲೈನ್ ಕಲಿಕೆ, ಕೃಷಿ ತಂತ್ರಜ್ಞಾನದಲ್ಲಿನ ನಮ್ಮ ಕೆಲಸವಾಗಿರಲಿ, ಅತ್ಯಂತ ಸ್ವಾಭಾವಿಕವಾಗಿ ಹಲವಾರು ಸವಾಲುಗಳನ್ನು ಎದುರಿಸಲು ನಮಗೆ ಸಹಾಯ ಮಾಡಿದೆ ಎಂದು ಹೇಳಿದರು.
ಜಗತ್ತು ಇಂದು ಬಡತನ ಮತ್ತು ಅಸಮಾನತೆಯಿಂದ ಹಿಡಿದು ಹವಾಮಾನ ಬದಲಾವಣೆಯಂತಹ ಬಹು ಹಂತದ ಜಾಗತಿಕ ಸವಾಲುಗಳನ್ನು ಎದುರಿಸುತ್ತಿದೆ. ಇಂತಹ ಸಮಸ್ಯೆಗಳನ್ನು ಪರಿಹರಿಸಲು ನಾವಿನ್ಯ ಸೂಕ್ತ ಮಾರ್ಗ ಎಂಬುದು ತಮ್ಮ ನಂಬಿಕೆಯಾಗಿದೆ ಎಂದು ಸಚಿವ ಪಿಯೂಷ್ ಗೋಯಲ್ ಒತ್ತಿ ಹೇಳಿದರು. ಭಾರತದ ನವೋದ್ಯಮದ ವಿಷಯದಲ್ಲಿ ಹೇಳುವುದಾದರೆ ನಮ್ಮ ಉದ್ಯಮಿಗಳು ಸವಾಲುಗಳನ್ನು ಎದುರಿಸಲು ತಮ್ಮ ಸೃಜನಶೀಲತೆ ಮತ್ತು ಜಾಣ್ಮೆಯನ್ನು ಬಳಸುತ್ತಿದ್ದಾರೆ ಎಂದು ಸಚಿವರು ಹೇಳಿದರು. ಉದಾಹರಣೆಗೆ ಸಾರ್ವಜನಿಕ ಡಿಜಿಟಲ್ ಸರಕುಗಳಾದ ಕೋವಿನ್, ಯುಪಿಐ ಮತ್ತು ಒ.ಎನ್.ಡಿ.ಸಿ ಗಳು ಸಮಸ್ಯೆಗಳನ್ನು ಪರಿಹರಿಸುತ್ತವೆ ಮತ್ತು ಸಾಮಾಜಿಕ ನಾವಿನ್ಯವನ್ನು ಮರು ವ್ಯಾಖ್ಯಾನಿಸುವ ಮೂಲಕ ಭಾರತ ಎಲ್ಲವನ್ನೊಳಗೊಂಡ ಬೆಳವಣಿಗೆಯನ್ನು ಖಚಿತಪಡಿಸಿಕೊಳ್ಳುತ್ತಿದೆ ಎಂದರು.
ಇತ್ತೀಚಿನ ತಂತ್ರಜ್ಞಾವನ್ನು ತ್ವರಿತವಾಗಿ ಅಳವಡಿಸಿಕೊಳ್ಳುತ್ತಿರುವ 2 ಮತ್ತು 3 ನೇ ಶ್ರೇಣಿಯ ಮಾರುಕಟ್ಟೆಗಳ ಪಾಲ್ಗೊಳ್ಳುವಿಕೆ ಹೆಚ್ಚಾಗುತ್ತಿದ್ದು, ಇದರಿಂದ ಭಾರತದ ಸ್ಥಳೀಯ ನವೋದ್ಯಮಗಳ ಪರದೆಯನ್ನು ಸರಿಸಿದಂತಾಗಿದೆ. ಜಿ20 ಮೂಲಕ ಭಾರತ ತನ್ನ ಪರಿಣತಿಯನ್ನು ವರ್ಗಾಯಿಸಲು ಪ್ರುಯತ್ನಿಸುತ್ತಿದೆ. ಆದ್ದರಿಂದ ಭಾರತದ ಸಂಗ್ರಹ, ಜಾಗತಿಕ ಸಂಗ್ರವಾಗಿರುತ್ತದೆ ಮತ್ತು ಜನತೆ ತಂತ್ರಜ್ಞಾವನ್ನು ಬಳಸುವ ವಿಧಾನದಲ್ಲಿ ಪರಿವರ್ತನೆ ತರುತ್ತದೆ, ತಂತ್ರಜ್ಞಾನವನ್ನು ಸಾಮಾನ್ಯ ಜನರ ಬಳಿಗೆ ಕೊಂಡೊಯ್ಯಲು ಸಹಾಯ ಮಾಡುತ್ತದೆ. ಅಭಿವೃದ್ದಿ ಹೊಂದಿದ ದೇಶಗಳು ಜಾಗತಿಕ ತಂತ್ರಜ್ಞಾನ ಮತ್ತು ನಾವೀನ್ಯದ ತಾಣವಾಗಲು ತಾವಾಗಿಯೇ ಕಡಿಮೆ ವೆಚ್ಚದಲ್ಲಿ ತಂತ್ರಾಂಶ ಮತ್ತು ಸೇವಾ ಬೆಂಬಲವನ್ನು ಹೊರಗುತ್ತಿಗೆ ಮೂಲಕ ವರ್ಗಾಯಿಸಬೇಕು. ಡಬ್ಲ್ಯೂ.ಐ.ಪಿ.ಒದ ಜಾಗತಿಕ ಆವಿಷ್ಕಾರ ಸೂಚ್ಯಂಕದಲ್ಲಿ [ಜಿಐಐ] ಭಾರತ 40 ನೇ ಶ್ರೇಯಾಂಕಕ್ಕೆ ಏರಿದ್ದು, 7 ವರ್ಷಗಳಲ್ಲಿ 41 ಸ್ಥಾನಗಳ ಬೃಹತ್ ಜಿಗಿತ ಕಂಡಿದೆ ಎಂದು ಸಚಿವರು ವಿಶೇಷವಾಗಿ ಪ್ರಸ್ತಾಪಿಸಿದರು. ಶಾಲಾ ಹಂತದಲ್ಲಿಯೇ ಅಟಲ್ ಆವಿಷ್ಕಾರ ಅಭಿಯಾನದ ಮೂಲಕ ನಾವೀನ್ಯದ ಸ್ಫೂರ್ತಿಯನ್ನು ಭಾರತ ಉತ್ತೇಜಿಸುತ್ತಿದೆ ಎಂದು ಶ್ರೀ ಗೋಯಲ್ ಹೇಳಿದರು. ಜಗತ್ತಿನಾದ್ಯಂತ ಹಲವು ರಾಷ್ಟ್ರಗಳಿಗೆ ನವೋದ್ಯಮ ಬೆಂಬಲದ ಕಾರ್ಯಕ್ರಮವನ್ನು ಸಕ್ರಿಯವಾಗಿ ಭಾರತ ಒದಗಿಸುತ್ತಿದೆ. “ಕೆಲವು ಪ್ರಮುಖ ಉದಾಹರಣೆಗಳೆಂದರೆ ಭಾರತ – ಅಮೆರಿಕ, ಭಾರತ – ಬ್ರಿಟನ್, ಭಾರತ – ಆಸ್ಟ್ರೇಲಿಯಾ ಸಹಭಾಗಿತ್ವದ ಮೂಲಕ ನವೋದ್ಯಮಗಳ ಆಳವಾದ ತಂತ್ರಜ್ಞಾನ, ಹಣದ ಹರಿವು ಹೆಚ್ಚಿಸಲು ಕೊಡುಗೆ ನೀಡುತ್ತಿದೆ ಮತ್ತು ಆರೋಗ್ಯ, ನೀರು, ಕೃಷಿ, ಶಿಕ್ಷಣ, ಆರ್ಥಿಕ ಒಳಗೊಳ್ಳುವಿಕೆ, ಇತರೆ ಮೂಲ ಅವಶ್ಯಕತೆಗಳನ್ನು ನಿವಾರಿಸುತ್ತಿದೆ” ಎಂದು ಹೇಳಿದರು.
ನವೋದ್ಯಮಗಳ ಬೆಳವಣಿಗೆಗೆ “ಪ್ರಜ್ಞೆ” – ಹಂಚಿಕೆ, ಪರಿಶೋಧನೆ, ನಿಸರ್ಗ, ಸೇವೆ ಮತ್ತು ಸಬಲೀಕರಣದ ಮಂತ್ರವನ್ನು ಸಚಿವರು ನೀಡಿದರು. “ನಮ್ಮ ಆಸುಪಾಸಿನಲ್ಲಿನ ಉತ್ಸಾಹವನ್ನು ನೋಡಿದಾಗ ನಾವು ಬದಲಾಗುತ್ತಿರುವ ಮನಸ್ಥಿತಿಯ ಪ್ರಜ್ಞೆಯನ್ನು ಪಡೆಯುತ್ತೇವೆ. ನವೋದ್ಯಮ 20 ಅತ್ಯಂತ ಶಕ್ತಿಯುತವಾದ ಸಂಸ್ಥೆಯಾಗಲಿದೆ ಎಂಬುದನ್ನು ಗ್ರಹಿಸಬಲ್ಲೇ, ಜಗತ್ತು ನವೋದ್ಯಮಗಳನ್ನು ಗುರುತಿಸುವ ಮತ್ತು ಗೌರವಿಸುವ ವಿಧಾನವನ್ನು ಬಯಸುತ್ತದೆ” ಎಂದು ಹೇಳಿದರು.
ಮುಂದಿನ ಎರಡು ದಿನಗಳ ಕಾಲ ನಡೆಯುವ ಚರ್ಚೆಗಳು ಜಾಗತಿಕ ನವೋದ್ಯಮ ಕ್ರಾಂತಿಯನ್ನು ಉದ್ದೇಶಪೂರ್ವಕವಾಗಿ ಪ್ರಾರಂಭಿಸಲು ಜಿ20 ನಾಯಕರಿಗೆ ಬಲವಾದ ಕ್ರಮಬದ್ಧ ಶಿಫಾರಸ್ಸುಗಳಿಗೆ ಅಡಿಪಾಯ ಹಾಕುತ್ತದೆ. ಇದು ಪ್ರಪಂಚದಾದ್ಯಂತ ನವೋದ್ಯಮಗಳ ಭವಿಷ್ಯಕ್ಕೆ ನಿಜವಾಗಿಯೂ ಬದಲಾವಣೆ ತರಲು ನೆರವಾಗುತ್ತದೆ.
ನವೋದ್ಯಮ 20 ರಲ್ಲಿ ಜಿ20 ದೇಶಗಳ ಪ್ರತಿನಿಧಿಗಳು ಮತ್ತು 9 ವೀಕ್ಷಕ ರಾಷ್ಟ್ರಗಳಿಂದ ವಿಶೇಷ ಆಹ್ವಾನಿತರು, ಬಹುಹಂತದ ಸಂಘಟನೆಗಳ ಪ್ರತಿನಿಧಿಗಳ ಜೊತೆಗೆ ಭಾರತದ ನವೋದ್ಯಮ ಪರಿಸರ ವ್ಯವಸ್ಥೆ ಭಾಗಿಯಾಗಲಿದೆ. ಭಾರತ ಅಧ್ಯಕ್ಷತೆ ವಹಿಸಿಕೊಂಡ ನಂತರ ಜಿ20 ರ ಅಡಿ ರಚನೆಯಾದ ಗುಂಪು ಜನವರಿ 28 ಮತ್ತು 29 ರಿಂದ ತನ್ನ ಆರಂಭಿಕ ಸಭೆ ನಡೆಸುತ್ತಿದೆ. ಮುಂದಿನ ವರ್ಷಗಳಲ್ಲಿ ಜಿ20 ದೇಶಗಳ ಉದ್ಯಮಶೀಲತೆ ಮತ್ತು ನಾವೀನ್ಯತೆಯ ನೀತಿ ಆಧಾರಿತ ಅಭಿವೃದ್ಧಿಯನ್ನು ನಿರೀಕ್ಷಿಸುತ್ತದೆ. ಈ ಸಭೆ ನವೋದ್ಯಮಗಳನ್ನು ಬೆಂಬಲಿಸಲು ಮತ್ತು ನವೋದ್ಯಮಗಳು, ಕಾರ್ಪೋರೇಟ್ ಗಳು, ಹೂಡಿಕೆದಾರರು, ನಾವೀನ್ಯ ಸಂಸ್ಥೆಗಳು, ಮತ್ತು ಇತರೆ ಪ್ರಮುಖ ಪರಿಸರ ವ್ಯವಸ್ಥೆಯ ಮಧ್ಯಸ್ಥಿಕೆದಾರರ ನಡುವೆ ಸಂಯೋಜನೆಯನ್ನು ಉತ್ತೇಜಿಸಲು ಜಾಗತಿಕ ನಿರೂಪಣೆಯನ್ನು ಇದು ರಚಿಸುತ್ತದೆ.
ನೀತಿ ಆಯೋಗದ ಸಿಇಒ, ಜಿ20 ಶೆರ್ಪಾ ಶ್ರೀ ಅಮಿತಾಬ್ ಕಾಂತ್, ನವೋದ್ಯಮ 20 ಭಾರತದ ಅಧ್ಯಕ್ಷ ಡಾ. ಚಿಂತನ್ ವೈಷ್ಣವ್, ಹಿರಿಯ ಸರ್ಕಾರಿ ಅಧಿಕಾರಿಗಳು ಮತ್ತು ಇತರೆ ಗಣ್ಯರು ಉದ್ಘಾಟನಾ ಸಮಾರಂಭದಲ್ಲಿ ಉಪಸ್ಥಿತರಿದ್ದರು.
Related stories:
https://www.pib.gov.in/PressReleasePage.aspx?PRID=1893556
*****
(Release ID: 1894380)
Visitor Counter : 155