ವಾರ್ತಾ ಮತ್ತು ಪ್ರಸಾರ ಸಚಿವಾಲಯ
azadi ka amrit mahotsav

'ಅನಿಮೇಷನ್ ಬಳಸಿ ಅನಂತ ಪ್ರಪಂಚಗಳನ್ನು ರಚಿಸುವ' ಕುರಿತು ಎಸ್ ಸಿಒ ಚಲನಚಿತ್ರೋತ್ಸವದಲ್ಲಿ ತಂಡ ಚರ್ಚೆ


 ದೇಶದ ಅನಿಮೇಷನ್ ಉದ್ಯಮದ ಮೇಲೆ ಭಾರತೀಯ ಜನಪದದ ಪ್ರಭಾವ ಮತ್ತು ಸೆಳೆತ -  ಚರ್ಚೆಯಲ್ಲಿ ಪ್ರಸ್ತಾಪ

Posted On: 28 JAN 2023 4:10PM by PIB Bengaluru

ಇಂದು ಶಾಂಘೈ ಸಹಕಾರ ಸಂಘ ಚಲನಚಿತ್ರೋತ್ಸವದ(SCO) ಮೊದಲ ದಿನದಂದು 'ಅನಿಮೇಷನ್ ಬಳಸಿ ಅನಂತ ಪ್ರಪಂಚಗಳನ್ನು ರಚಿಸುವುದು' ಕುರಿತು ಚರ್ಚೆಯನ್ನು ನಡೆಸಲಾಯಿತು. ಗ್ರಾಫಿಟಿ ಮಲ್ಟಿಮೀಡಿಯಾ ನಿರ್ದೇಶಕ ಮತ್ತು ಸಿಒಒ ಮುಂಜಾಲ್ ಶ್ರಾಫ್ ಮತ್ತು ಟೂಂಜ್ ಅನಿಮೇಷನ್‌ನ ಸಿಇಒ ಜಯಕುಮಾರ್ ಪ್ರಭಾಕರನ್ ಅವರು ಭಾರತೀಯ ಅನಿಮೇಷನ್ ಉದ್ಯಮದಲ್ಲಿ ಕೆಲಸ ಮಾಡಿದ ತಮ್ಮ ಅನುಭವ ಮತ್ತು ಅದರ ಬೆಳವಣಿಗೆಯ ಬಗ್ಗೆ ತಮ್ಮ ದೃಷ್ಟಿಕೋನಗಳನ್ನು ಹಂಚಿಕೊಂಡರು.

ಮುಂಜಾಲ್ ಶ್ರಾಫ್ ಅವರ ಸ್ವಂತ ಸೃಷ್ಟಿಯಾದ 'ದೀಪಾ ಅಂಡ್ ಅನೂಪ್' ಜನಪ್ರಿಯತೆಯ ಬಗ್ಗೆ ಚರ್ಚಿಸಿದರು. ಭಾರತೀಯ ಜನಜೀವನ, ವಿದ್ಯಮಾನ, ಸನ್ನಿವೇಶದೊಂದಿಗೆ ಅಂತಾರಾಷ್ಟ್ರೀಯ ಪ್ರೇಕ್ಷಕರನ್ನು ಸಂಪರ್ಕಿಸುವುದು ಈ ಸರಣಿಯನ್ನು ಮಾಡುವ ಹಿಂದಿನ ಪ್ರಮುಖ ಪ್ರೇರಣೆಯಾಗಿದೆ ಎಂದು ಅವರು ಹೇಳಿದರು. ಕೆಲವು 'ಅಮೆರಿಕನ್ ಕಂಪ' ನ್ನು ಸೇರಿಸಲು ಲಿಸಾ ಗೋಲ್ಡ್‌ಮನ್ ಅವರನ್ನು ಕರೆತರುವ ಮೂಲಕ ಸರಣಿಯು ಕೇವಲ ಭಾರತೀಯ ಪ್ರಾತಿನಿಧ್ಯಗಳಿಗೆ ಸೀಮಿತವಾಗಿಲ್ಲ ಎಂಬುದನ್ನು ವಿವರಿಸಿದರು.

ಜಯಕುಮಾರ್ ಪ್ರಭಾಕರನ್ ಅವರು ಅನಿಮೇಷನ್ ವಿಷಯದ ಸಾಮಾಜಿಕ ಆಯಾಮಗಳ ಮೇಲೆ ಬೆಳಕು ಚೆಲ್ಲುವ ವಿಷಯ ಕುರಿತು ಮಾತನಾಡಿದರು. ಕಾರ್ಟೂನ್‌ಗಳಿಂದ ಮಕ್ಕಳು ಹೇಗೆ ಅಭ್ಯಾಸಗಳನ್ನು ಮತ್ತು ಸಂಪೂರ್ಣ ಮಾರ್ಗಗಳನ್ನು ಕಂಡುಹಿಡಿಯುತ್ತಾರೆ ಎಂಬುದನ್ನು ಅವರು ಚರ್ಚಿಸಿದರು. ಸಿನಿಮಾ ಮತ್ತು ಟೆಲಿವಿಷನ್ ಸಾಂಸ್ಕೃತಿಕ ಆವಿಷ್ಕಾರದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಅವರು ಹೇಳಿದರು.

ಭಾರತೀಯ ಜನಪದವು ಪ್ರಪಂಚದಾದ್ಯಂತ ಪ್ರೇಕ್ಷಕರ ಗಮನವನ್ನು ಹೇಗೆ ಸೆಳೆದಿದೆ ಎಂಬುದರ ಕುರಿತು ಚರ್ಚೆಗಳಿಗೆ ಈ ಅಧಿವೇಶನ ಸಾಕ್ಷಿಯಾಯಿತು. ತೆನಾಲಿ ರಾಮ ಮತ್ತು ಅಕ್ಬರ್-ಬೀರಬಲ್ ಮುಂತಾದ ಪಾತ್ರಗಳು ಬಹು ತಲೆಮಾರುಗಳವರೆಗೆ ಸಾಗಿದೆ. ಪ್ರಮುಖ ಜಾಗತಿಕ ಬ್ರ್ಯಾಂಡ್‌ಗಳು ಮತ್ತು ವಿತರಕರೊಂದಿಗಿನ ಪಾಲುದಾರಿಕೆಗಳು ಆರ್ಥಿಕವಾಗಿ ಅಶಕ್ತವೆಂದು ಸಾಬೀತುಪಡಿಸಿದ್ದರಿಂದ ಸ್ಥಳೀಯ ವಿಷಯವನ್ನು ಉತ್ತೇಜಿಸಲು ತಮ್ಮ ವೃತ್ತಿಜೀವನದ ಆರಂಭದಲ್ಲಿ ಅವರು ಎದುರಿಸಿದ ಸವಾಲುಗಳ ಬಗ್ಗೆ ಅಧಿವೇಶನದಲ್ಲಿ ಅತಿಥಿಗಳು ಮಾತನಾಡಿದರು.

ವಿಸ್ಲಿಂಗ್ ವುಡ್ಸ್ ಇಂಟರ್‌ನ್ಯಾಶನಲ್‌ನ ಉಪಾಧ್ಯಕ್ಷ ಚೈತನ್ಯ ಚಿಂಚಿಲ್ಕರ್ ಅವರು ನಿರ್ವಹಿಸಿದ ಈ ಚರ್ಚೆಯಲ್ಲಿ ಭಾರತೀಯ ಅನಿಮೇಷನ್ ಉದ್ಯಮದ ಬೆಳವಣಿಗೆ ಮತ್ತು ಅದರ ಭವಿಷ್ಯದ ಮಾರ್ಗಸೂಚಿಯನ್ನು ಸಹ ಗುರುತಿಸಲಾಯಿತು.

*****


(Release ID: 1894372) Visitor Counter : 119