ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ
ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವಾಲಯ(ಎಂ.ಇ.ಐ.ವೈ.) ಇದರ ಆರ್.&ಡಿ. ಇನ್ಸ್ಟಿಟ್ಯೂಟ್ “ಸಮೀರ್’ ಸಂಸ್ಥೆಯು ಸೀಮೆನ್ಸ್ ಹೆಲ್ತ್ನಿಯರ್ಸ್ ಇಂಡಿಯಾ ಎಂ.ಆರ್.ಐ. ತಂತ್ರಜ್ಞಾನ ಸಂಸ್ಥೆಯೊಂದಿಗೆ ತಿಳುವಳಿಕೆ ಒಪ್ಪಂದಗಳಿಗೆ ಸಹಿ ಹಾಕಿದೆ-ಇದು ಭಾರತದಲ್ಲಿ ಡೀಪ್ ಟೆಕ್ ಆರೋಗ್ಯ ರಕ್ಷಣೆಯ ಆರ್.&ಡಿ. ಮತ್ತು ಸಪ್ಲೈ ಚೈನ್ ಪರಿಸರ ವ್ಯವಸ್ಥೆಯನ್ನು ರೂಪಿಸುವಲ್ಲಿ ಒಂದು ಮೈಲಿಗಲ್ಲಾಗಿದೆ
ಪ್ರತಿ ಭಾರತೀಯನಿಗೆ ಕೈಗೆಟುಕುವ ಗುಣಮಟ್ಟದ ಆರೋಗ್ಯ ಮತ್ತು ರೋಗನಿರ್ಣಯದ ಅವಕಾಶವು ಸಿಗಬೇಕು ಎಂಬ ಗೌರವಾನ್ವಿತ ಪ್ರಧಾನಮಂತ್ರಿ ಅವರ ದೃಷ್ಟಿಕೋನಕ್ಕೆ ಪೂರಕವಾಗಿ ಕಡಿಮೆ-ವೆಚ್ಚದ ಎಂ.ಆರ್.ಐ. ವ್ಯವಸ್ಥೆಗಳು ಲಭ್ಯವಾಗುವಂತೆ ಮಾಡುತ್ತದೆ: ಕೇಂದ್ರ ರಾಜ್ಯ ಖಾತೆ ಸಚಿವ ಶ್ರೀ ರಾಜೀವ್ ಚಂದ್ರಶೇಖರ್
ಭಾರತವು ಕೇವಲ ತಂತ್ರಜ್ಞಾನದ ಗ್ರಾಹಕರಾಗಿರದೆ, ತಂತ್ರಜ್ಞಾನ, ಸಾಧನಗಳು ಮತ್ತು ಉತ್ಪನ್ನಗಳ ನಿರ್ಮಾಪಕರಾಗುವುದು ನಮ್ಮ ಗೌರವಾನ್ವಿತ ಪ್ರಧಾನಮಂತ್ರಿಯವರ ದೂರದೃಷ್ಟಿಯಾಗಿದೆ: ಕೇಂದ್ರ ರಾಜ್ಯ ಖಾತೆ ಸಚಿವ ಶ್ರೀ ರಾಜೀವ್ ಚಂದ್ರಶೇಖರ್
Posted On:
27 JAN 2023 6:08PM by PIB Bengaluru
ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವಾಲಯ (ಎಂ.ಇ.ಐ.ವೈ.) ಇದರ ಭಾರತದ ಪ್ರಧಾನ ಆರ್&ಡಿ ಇನ್ಸ್ಟಿಟ್ಯೂಟ್ ಆಗಿರುವ ಸಮೀರ್ ಇಂದು ಸೀಮೆನ್ಸ್ ಹೆಲ್ತ್ನಿಯರ್ಸ್ ನೊಂದಿಗೆ ತಿಳುವಳಿಕೆ ಒಪ್ಪಂದಕ್ಕೆ ಸಹಿ ಹಾಕಿದೆ. ಇದು ಭಾರತದಲ್ಲಿ ಆರೋಗ್ಯ ಮತ್ತು ರೋಗನಿರ್ಣಯದ ಅವಕಾಶವನ್ನು ಹೆಚ್ಚಿಸಲು ಹೊಸ, ಸುಧಾರಿತ ಮತ್ತು ನವೀನ ತಂತ್ರಜ್ಞಾನಗಳ ಅಭಿವೃದ್ಧಿಗೆ ಅಪಾರ ಕೊಡುಗೆ ನೀಡಲಿದೆ.
ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಕೇಂದ್ರ ಕೌಶಲ್ಯಾಭಿವೃದ್ಧಿ ಮತ್ತು ಉದ್ಯಮಶೀಲತೆ ಮತ್ತು ಎಲೆಕ್ಟ್ರಾನಿಕ್ಸ್ ಮತ್ತು ಐಟಿ ರಾಜ್ಯ ಖಾತೆ ಸಚಿವ ಶ್ರೀ ರಾಜೀವ್ ಚಂದ್ರಶೇಖರ್ ಅವರು ಈ ವ್ಯೂಹಾತ್ಮಕ ಕಾರ್ಯತಂತ್ರದ ಒಪ್ಪಂದವನ್ನು ಸ್ವಾಗತಿಸಿದರು ಹಾಗೂ “ಪ್ರತಿ ಭಾರತೀಯರಿಗೂ ಗುಣಮಟ್ಟದ ಮತ್ತು ಕೈಗೆಟುಕುವ ಆರೋಗ್ಯ ಮತ್ತು ರೋಗನಿರ್ಣಯದ ಅವಕಾಶವನ್ನು ಒದಗಿಸುವ ಪ್ರಧಾನಮಂತ್ರಿಯ ದೂರದೃಷ್ಟಿಯ ಭಾಗವಾಗಿ ಕಡಿಮೆ-ವೆಚ್ಚದ ಎಂ.ಆರ್.ಐ.ಗಳನ್ನು ಲಭ್ಯವಾಗುವಂತೆ ಇದು ಮಾಡುತ್ತದೆ” ಎಂದು ಹೇಳಿದರು.
"2015 ರಲ್ಲಿ ಡಿಜಿಟಲ್ ಇಂಡಿಯಾ ಕಾರ್ಯಕ್ರಮವನ್ನು ಪ್ರಾರಂಭಿಸಿದ ಗೌರವಾನ್ವಿತ ಪ್ರಧಾನಮಂತ್ರಿಯವರು ಭಾರತವು ತಂತ್ರಜ್ಞಾನದ ಗ್ರಾಹಕರಿಂದ ತಂತ್ರಜ್ಞಾನ, ಸಾಧನಗಳು ಮತ್ತು ಉತ್ಪನ್ನಗಳ ಉತ್ಪಾದಕರಾಗಲು ದಾರಿ ಮಾಡಿಕೊಟ್ಟಿದ್ದಾರೆ, ಇಂದಿನ ತಿಳುವಳಿಕೆ ಒಪ್ಪಂದವು ಈ ದಿಕ್ಕಿನಲ್ಲಿ ಮಹತ್ವದ ಹೆಜ್ಜೆಯಾಗಿದೆ" ಎಂದು ಕೇಂದ್ರ ರಾಜ್ಯ ಖಾತೆ ಸಚಿವ ಶ್ರೀ ರಾಜೀವ್ ಚಂದ್ರಶೇಖರ್ ಅವರು ಹೇಳಿದರು.
“ಭಾರತದಲ್ಲಿ ಆರೋಗ್ಯ ಕ್ಷೇತ್ರವು ದೊಡ್ಡ ಮಾರುಕಟ್ಟೆಯನ್ನು ಪ್ರತಿನಿಧಿಸುತ್ತದೆ. ಭಾರತದಲ್ಲಿ ಉತ್ಪಾದನಾ ನೆಲೆಗಳನ್ನು ಸ್ಥಾಪಿಸಲು ಸಿದ್ಧರಿರುವ ಜಾಗತಿಕ ಕಂಪನಿಗಳೊಂದಿಗೆ ಪಾಲುದಾರಿಕೆಗೆ ಕೇಂದ್ರ ಸರ್ಕಾರ ಸಿದ್ಧವಿದೆ. ಹಾಗೂ ಜಾಗತಿಕ ಕಂಪನಿಗಳು ಮತ್ತು ಭಾರತದ ವಿಶಾಲವಾದ ಶೈಕ್ಷಣಿಕ ಸಂಸ್ಥೆಗಳ ನಡುವಿನ ಸಹ-ಅಭಿವೃದ್ಧಿಯ ಆಧಾರದ ಮೇಲೆ ಆರ್&ಡಿ ಮಾದರಿಯನ್ನು ಸಹ ನಾವು ಬೆಂಬಲಿಸುತ್ತೇವೆ." ಎಂದು ಹೇಳಿದ ಕೇಂದ್ರ ಸಚಿವರು.
ಸೆಮಿಕಂಡಕ್ಟರ್ ಕ್ಷೇತ್ರದ ಉದ್ಯಮದ ಪ್ರಮುಖರು ಮತ್ತು ಶಿಕ್ಷಣ ತಜ್ಞರೊಂದಿಗೆ ಕೇಂದ್ರ ಸರ್ಕಾರವು ಹೇಗೆ ನಿಕಟವಾಗಿ ಕಾರ್ಯನಿರ್ವಹಿಸುತ್ತಿದೆ ಎಂಬುದರ ಉದಾಹರಣೆಯನ್ನು ಉಲ್ಲೇಖಿಸಿದ ಕೇಂದ್ರ ಸಚಿವರು “ಭಾರತದಲ್ಲಿ ಮುಂದಿನ ಜನಾಂಗದ ಪ್ರತಿಭೆಯನ್ನು ರೂಪಿಸಲು ಪಠ್ಯಕ್ರಮವನ್ನು ರೂಪಿಸಲು ಕೇಂದ್ರ ಸರ್ಕಾರವು ಆರೋಗ್ಯ ಕ್ಷೇತ್ರದ ತಜ್ಞರೊಂದಿಗೆ ಚರ್ಚಿಸಲು ಸಿದ್ಧವಾಗಿದೆ” ಎಂದು ಹೇಳಿದರು.
ಸೊಸೈಟಿ ಫಾರ್ ಅಪ್ಲೈಡ್ ಮೈಕ್ರೋವೇವ್ ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್ & ರಿಸರ್ಚ್ ಇದರ ಸಂಕ್ಷಿಪ್ತ ರೂಪ - ಸಮೀರ್ - ಎಂದಾಗಿದೆ, ಹಾಗೂ ಆರ್.ಎಫ್. ಮೈಕ್ರೋವೇವ್ ರೇಡಾರ್ ಮತ್ತು ಕಮ್ಯುನಿಕೇಷನ್ ಸಿಸ್ಟಮ್ಸ್, ಇ-3 ಪರೀಕ್ಷೆ ಮತ್ತು ವೈದ್ಯಕೀಯ ಎಲೆಕ್ಟ್ರಾನಿಕ್ಸ್ ಮುಂತಾದ ಕ್ಷೇತ್ರಗಳಲ್ಲಿ ಕಾರ್ಯತಂತ್ರದ ಪಾಲುದಾರಿಕೆಯಲ್ಲಿ ಇದು ಪರಿಣತಿ ಹೊಂದಿದೆ.
"ವಿಶೇಷವಾಗಿ ಮ್ಯಾಗ್ನೆಟಿಕ್ ರೆಸೋನೆನ್ಸ್ ಇಮೇಜಿಂಗ್ (ಎಂ.ಆರ್.ಐ.) ಮತ್ತು ಲೀನಿಯರ್ ಆಕ್ಸಿಲರೇಟರ್ (ಲಿನಾಕ್) ಕ್ಷೇತ್ರದಲ್ಲಿ ಸಮೀರ್ ಮತ್ತು ಸೀಮೆನ್ಸ್ ಹೆಲ್ತ್ನಿಯರ್ಸ್ ಹೆಲ್ತ್ಕೇರ್ ತಂತ್ರಜ್ಞಾನ ಸಂಸ್ಥೆಗಳ ಪರಿಣತಿಯನ್ನು ಸಂಯೋಜಿಸುವ ಈ ಪಾಲುದಾರಿಕೆಯು ಭಾರತದಲ್ಲಿ ಎಂ.ಆರ್.ಐ. ಚಿಕಿತ್ಸಾ ಅವಕಾಶವನ್ನು ಸುಧಾರಿಸುವ ಜಂಟಿ ಕಾರ್ಯಚಟುವಟಿಕೆಗಳನ್ನು ಮುಂದುವರಿಸುತ್ತದೆ" ಎಂದು ಸಚಿವರು ತಿಳಿಸಿದರು.
ಕೇವಲ ಆರೋಗ್ಯ ರಕ್ಷಣೆ ಕ್ಷೇತ್ರದಲ್ಲಿ ಮಾತ್ರವಲ್ಲದೆ ಇತರ ಕ್ಷೇತ್ರಗಳಲ್ಲಿಯೂ ಸಹ ಸೀಮೆನ್ಸ್ ಸಂಸ್ಥೆಯು ಭಾರತದ ಉತ್ತಮ ಪಾಲುದಾರ ಸಂಸ್ಥೆಯಾಗಿದೆ ”ಎಂದು ಸಚಿವರು ಹೇಳಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಮೀರ್ ಇದರ ಮಹಾನಿರ್ದೇಶಕ ಡಾ. ಪಿ. ಹನುಮಂತ ರಾವ್ ಅವರು "ಕ್ಯಾನ್ಸರ್ ಥೆರಪಿ ಮತ್ತು ಮ್ಯಾಗ್ನೆಟಿಕ್ ರೆಸೋನೆನ್ಸ್ ಇಮೇಜಿಂಗ್ ಸಿಸ್ಟಂಗಳಲ್ಲಿ ಡಯಾಗ್ನೋಸ್ಟಿಕ್ಸ್ಗಾಗಿ ಸುಧಾರಿತ ಲೀನಿಯರ್ ಆಕ್ಸಿಲರೇಟರ್ಗಳಲ್ಲಿ ಸಮೀರ್ ಆರ್&ಡಿ ಯನ್ನು ಮಾಡುತ್ತಿದೆ. ಸೀಮೆನ್ಸ್ ಹೆಲ್ತ್ನಿಯರ್ಸ್ಗೆ ಸಂಸ್ಥೆಯು ಸ್ಥಳೀಯ ಉದ್ಯಮ ಕ್ಷೇತ್ರವನ್ನು ಪ್ರವೇಶಿಸಲು ಪಾಲುದಾರಿಕೆಯು ಸಹಾಯ ಮಾಡುತ್ತದೆ ಮತ್ತು ಪ್ರತಿಯಾಗಿ, ಸಮೀರ್ ಸಂಸ್ಥೆ ಮೂಲಕ ಸುಧಾರಿತ ಆರೋಗ್ಯ ತಂತ್ರಜ್ಞಾನಗಳಲ್ಲಿ ಮುಂದಿನ ಪೀಳಿಗೆಯ ಸಂಶೋಧನೆಗೆ ಅವಕಾಶ ಲಭ್ಯ ಮಾಡಿಕೊಡುತ್ತದೆ. ಈ ಉಪಕ್ರಮಗಳು ದೇಶದಾದ್ಯಂತ ಜೀವ ಉಳಿಸಲು ಆರಂಭಿಕ ರೋಗನಿರ್ಣಯ ಮತ್ತು ಚಿಕಿತ್ಸೆಗಾಗಿ ಆರೋಗ್ಯ ತಂತ್ರಜ್ಞಾನಗಳನ್ನು ಪೂರೈಸುತ್ತಾ, ಭಾರತದ ಆರೋಗ್ಯ ಮಿಷನ್ ಯೋಜನೆಯನ್ನು ಇನ್ನೂ ಸಕ್ರಿಯಗೊಳಿಸುತ್ತದೆ. " ಎಂದು ಹೇಳಿದರು
ಪ್ರಸ್ತುತ, ಸುಶ್ರುತ್ ಎಂ.ಆರ್.ಐ (ಇಂಡಿಯನ್ ಎಂಆರ್ಐ) ವ್ಯವಸ್ಥೆಯಡಿಯಲ್ಲಿ ಐ.ಎಂ.ಆರ್.ಐ. (ಸ್ವದೇಶಿ ಮ್ಯಾಗ್ನೆಟಿಕ್ ರೆಸೋನೆನ್ಸ್ ಇಮೇಜಿಂಗ್) ತಂತ್ರಜ್ಞಾನವನ್ನು ಸಮೀರ್ ಸಂಸ್ಥೆ ಅಭಿವೃದ್ಧಿಪಡಿಸುತ್ತಿದೆ ಎಂದು ಎಂ.ಆರ್.ಐ ಮತ್ತು ಇಂಡಸ್ಟ್ರಿ ಇಕೋಸಿಸ್ಟಮ್ನಲ್ಲಿ ಸಂಶೋಧನೆಯನ್ನು ಸಂಯೋಜಿಸುತ್ತಿರುವ ಶ್ರೀ ರಾಜೇಶ್ ಹರ್ಷ್ ಅವರು ಹೇಳಿದರು.
"ಪಾಲುದಾರಿಕೆಯು ಅತ್ಯಂತ ಮಾರಣಾಂತಿಕ ಕಾಯಿಲೆಗಳ ವಿರುದ್ಧ ಹೋರಾಡಲು ಗಮನ ಕೇಂದ್ರೀಕರಿಸುತ್ತದೆ ಮತ್ತು ದೇಶಾದ್ಯಂತ ಎಲ್ಲರಿಗೂ ಆರೋಗ್ಯವನ್ನು ಇನ್ನಷ್ಟು ಪರಿಣಾಮಕಾರಿ, ಸಮರ್ಥನೀಯ ಮತ್ತು ಮಾನವೀಯವಾಗಿ ಲಭ್ಯವಾಗಿಸಲು ಶ್ರಮಿಸುತ್ತದೆ." ಎಂದು ಸೀಮೆನ್ಸ್ ಹೆಲ್ತ್ನೀರ್ಸ್ನ ಮುಖ್ಯ ತಂತ್ರಜ್ಞಾನ ಅಧಿಕಾರಿ ಶ್ರೀ ಪೀಟರ್ ಸ್ಚಾರ್ಡ್ಟ್ ಅವರು ಹೇಳಿದರು
"ಈ ರೀತಿಯ ಪಾಲುದಾರಿಕೆಗಳು ಭಾರತದ ಆರೋಗ್ಯ ಕ್ಷೇತ್ರದ ಮೂಲಸೌಕರ್ಯವನ್ನು ಬಲಪಡಿಸಲು ಮತ್ತು ಸರಿಯಾದ ಸಮಯದಲ್ಲಿ ಸರಿಯಾದ ಚಿಕಿತ್ಸೆಯನ್ನು ಎಲ್ಲೆಡೆ ನೀಡಲು ಬೇಕಾದ ನಾವೀನ್ಯತೆ, ಶಿಕ್ಷಣ, ಆರೋಗ್ಯ ಮತ್ತು ಪ್ರತಿಭೆಯನ್ನು ಒಟ್ಟುಗೂಡಿಸುವಲ್ಲಿ ಭಾರತ ಹೊಂದಿರುವ ಬದ್ಧತೆಯನ್ನು ಪ್ರತಿಬಿಂಬಿಸುತ್ತವೆ" ಎಂದು ಸೀಮೆನ್ಸ್ ಹೆಲ್ತ್ನೀರ್ಸ್ ಸಂಸ್ಥೆಯ ಡೆವಲಪ್ಮೆಂಟ್ ಸೆಂಟರ್ ಮುಖ್ಯಸ್ಥ ಶ್ರೀ ದಿಲೀಪ್ ಮಂಗ್ಸುಲಿ ಅವರು ಹೇಳಿದರು.
******
(Release ID: 1894227)
Visitor Counter : 166