ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ
azadi ka amrit mahotsav

XR ನವೋದ್ಯಮಗಳ ಕಾರ್ಯಕ್ರಮಕ್ಕಾಗಿ ಮೈಟಿ ಸ್ಟಾರ್ಟ್ ಅಪ್ ಹಬ್ ಮತ್ತು ಮೆಟಾ 120 ನವೋದ್ಯಮ  ಮತ್ತು ನವೋದ್ಯಮಿಗಳ ಪಟ್ಟಿ ಸಿದ್ಧಪಡಿಸಿವೆ 


ಶೇ 30 ಕ್ಕಿಂತ ಹೆಚ್ಚಿನ ನವೋದ್ಯಮಗಳು ಭಾರತದ 2 ನೇ ಮತ್ತು 3 ನೇ ಶ್ರೇಣಿಯ ನಗರಗಳಿಂದ ಬಂದಿವೆ

ಗ್ರ್ಯಾಂಡ್ ಚಾಲೆಂಜ್ ಗೆ ಆಯ್ಕೆಮಾಡಲಾದ ಶೇ 40 ಕ್ಕೂ ಹೆಚ್ಚು ನವೋದ್ಯಮಿಗಳು ಮತ್ತು ಸ್ಟಾರ್ಟ್‌ಅಪ್  ‌ಗಳು ದೇಶದ 2 ನೇ ಮತ್ತು 3 ನೇ ಶ್ರೇಣಿಯ ಭಾಗಗಳಿಗೆ ಸೇರಿವೆ

ಮಹಿಳಾ ನೇತೃತ್ವದ/ಸಹ-ನೇತೃತ್ವದ ನವೋದ್ಯಮಗಳು ಮತ್ತು ನವೋದ್ಯಮಿಗಳು ಒಟ್ಟು ಸಮೂಹದ ಶೇ 20 ಕ್ಕಿಂತ ಹೆಚ್ಚಿನ ಭಾಗವನ್ನು ಪ್ರತಿನಿಧಿಸುತ್ತಿದ್ದಾರೆ 

Posted On: 27 JAN 2023 1:25PM by PIB Bengaluru

ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ (MeitY) ಉಪಕ್ರಮವಾದ MeitY ಸ್ಟಾರ್ಟ್‌ಅಪ್ ಹಬ್ (MSH), ಮತ್ತು ಮೆಟಾ XR ಸ್ಟಾರ್ಟ್‌ಅಪ್ ಕಾರ್ಯಕ್ರಮಕ್ಕಾಗಿ 120 ನವೋದ್ಯಮಗಳು ಮತ್ತು ನವೋದ್ಯಮಿಗಳ ಪಟ್ಟಿಯನ್ನು ಇಂದು ಪ್ರಕಟಿಸಲಾಗಿದೆ. ಸೆಪ್ಟೆಂಬರ್ 2022 ರಲ್ಲಿ ಘೋಷಿಸಿದಂತೆ, XR ಸ್ಟಾರ್ಟ್‌ಅಪ್ ಕಾರ್ಯಕ್ರಮ ಭಾರತದಾದ್ಯಂತ ವಿಸ್ತೃತ ರಿಯಾಲಿಟಿ (XR) ತಂತ್ರಜ್ಞಾನ ನವೋದ್ಯಮಗಳು ಮತ್ತು ನವೋದ್ಯಮಿಗಳನ್ನು ಅನ್ವೇಷಿಸಲು, ಪೋಷಿಸಲು ಮತ್ತು ಉತ್ತೇಜಿಸಲು MSH ಮತ್ತು ಮೆಟಾ ನಡುವಿನ ಸಹಯೋಗವಾಗಿದೆ.

XR ಸ್ಟಾರ್ಟ್‌ಅಪ್ ಕಾರ್ಯಕ್ರಮ ಆಯ್ದ ಸಣ್ಣ ಉದ್ಯಮಗಳನ್ನು ಹೆಚ್ಚು ಉತ್ತೇಜಿಸುವುದು ಮತ್ತು ಗ್ರ್ಯಾಂಡ್ ಚಾಲೆಂಜ್ ಅನ್ನು ಒಳಗೊಂಡಿದೆ, ಇದು ದೇಶದಲ್ಲಿ ಉದಯೋನ್ಮುಖ ಟೆಕ್ ಪರಿಸರ ವ್ಯವಸ್ಥೆಯನ್ನು ಉತ್ತೇಜಿಸುವ ಗುರಿಯನ್ನು ಹೊಂದಿದ್ದು,  ಇತ್ತೀಚಿನ ರಾಷ್ಟ್ರೀಯ ನವೋದ್ಯಮಗಳ ದಿನದಂದು ಇದಕ್ಕೆ ಚಾಲನೆ ದೊರೆಯಿತು.

ಸಣ್ಣ ಉದ್ಯಮಗಳನ್ನು ಹೆಚ್ಚು ಉತ್ತೇಜಿಸುವ ಕಾರ್ಯಕ್ರಮದಲ್ಲಿ ಆಯ್ಕೆ ಮಾಡಲಾದ ನವೋದ್ಯಮಗಳಲ್ಲಿ, ಶೇ 30% ಕ್ಕಿಂತ ಹೆಚ್ಚು ಭಾರತದಾದ್ಯಂತ 2/3 ಶ್ರೇಣಿಯ ನಗರಗಳಿಂದ ಬಂದಿವೆ. ಅಲ್ಲದೆ, ಗ್ರ್ಯಾಂಡ್ ಚಾಲೆಂಜ್ ‌ನಲ್ಲಿ ಆಯ್ಕೆಮಾಡಿದ ಶೇ 40 ನವೋದ್ಯಮಿಗಳು ಮತ್ತು ಸ್ಟಾರ್ಟ್‌ಅಪ್ ಗಳು ಶ್ರೇಣಿ 2/3 ನಗರಗಳಿಂದ ಬಂದವರಾಗಿದ್ದಾರೆ. ಇದಲ್ಲದೆ, ಸಮೂಹದ ಶೇ 20 ಕ್ಕಿಂತ ಹೆಚ್ಚು ಮಹಿಳಾ ಸಂಸ್ಥಾಪಕರು / ಸಹ-ಸಂಸ್ಥಾಪಕರನ್ನು ಹೊಂದಿರುವ   ನವೋದ್ಯಮಗಳಿವೆ.

ಈ ಸಂದರ್ಭದಲ್ಲಿ ಮಾತನಾಡಿದ MeitY ಸ್ಟಾರ್ಟ್‌ಅಪ್ ಹಬ್ (MSH) ನ ಕಾರ್ಯನಿರ್ವಹಣಾಧಿಕಾರಿ ಶ್ರೀ ಜೀತ್ ವಿಜಯ್, “XR ‌ನಂತಹ ಉದಯೋನ್ಮುಖ ತಂತ್ರಜ್ಞಾನಗಳು ಡಿಜಿಟಲ್ ಪರಿಸರ ವ್ಯವಸ್ಥೆಯ ಮೇಲೆ, ಭಾರತೀಯ ಸ್ಟಾರ್ಟ್‌ಅಪ್ ‌ಗಳು ಮತ್ತು ನವೋದ್ಯಮಿಗಳು ಅದರಲ್ಲೂ ವಿಶೇಷವಾಗಿ ಮಹಾನಗರಗಳ ವ್ಯಾಪ್ತಿಗೆ ಸೇರದ ಸ್ಟಾರ್ಟ್‌ಅಪ್ ‌ಗಳು ಮತ್ತು ನವೋದ್ಯಮಿಗಳ ಮೇಲೆ ಗಮನಾರ್ಹ ಪರಿಣಾಮ ಬೀರುತ್ತಿವೆ., ಇದು ಮೆಟಾವರ್ಸ್ ನಂತಹ ತಂತ್ರಜ್ಞಾನಗಳನ್ನು ಮತ್ತು ಇಂಟರ್ನೆಟ್ ಭವಿಷ್ಯವನ್ನು ರೂಪಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಮೆಟಾದೊಂದಿಗಿನ ಸಹಯೋಗವು ಅಂತಹ ನವೋದ್ಯಮಗಳನ್ನು   ಬೆಂಬಲಿಸಲು ಮತ್ತು ಉತ್ತಮ ಹಂತಕ್ಕೆ ಕೊಂಡೊಯ್ಯಲು  ಅಗತ್ಯವಾದ ಪ್ರೋತ್ಸಾಹವನ್ನು ನೀಡುತ್ತವೆ ಎಂದು ಹೇಳಿದರು.

XR  ನವೋದ್ಯಮಗಳ ಕಾರ್ಯಕ್ರಮದ ಆರಂಭದ ಕುರಿತು ಮಾತನಾಡಿದ ಮೆಟಾ ಇಂಡಿಯಾದ ಸಾರ್ವಜನಿಕ ನೀತಿಯ ನಿರ್ದೇಶಕರಾದ ಶ್ರೀ ಶಿವನಾಥ್ ಠಕ್ರಾಲ್, “ಶಿಕ್ಷಣ, ಆರೋಗ್ಯ ರಕ್ಷಣೆ, ಕೃಷಿ ತಂತ್ರಜ್ಞಾನ ಮತ್ತು ಪ್ರವಾಸೋದ್ಯಮದಂತಹ ಕ್ಷೇತ್ರಗಳಲ್ಲಿ ತೀವ್ರತರವಾದ ತಂತ್ರಜ್ಞಾನಗಳ ಬೆಂಬಲದೊಂದಿಗೆ ಭಾರತವು ಮಹತ್ವದ ಡಿಜಿಟಲ್ ರೂಪಾಂತರಕ್ಕೆ ಒಳಗಾಗುತ್ತಿದೆ. ನವೋದ್ಯಮಗಳ ದೃಢವಾದ ಪರಿಸರ ವ್ಯವಸ್ಥೆ ಮತ್ತು ಪ್ರಬಲ ತಂತ್ರಜ್ಞಾನ ಪರಿಣಿತರ ತಂಡದೊಂದಿಗೆ ಸೇರಿ, II ಮತ್ತು III ನೇ ಶ್ರೇಣಿಯ ಪಟ್ಟಣಗಳ ನವೋದ್ಯಮಗಳು ಮತ್ತು ನಾವೀನ್ಯಕಾರರು ದೇಶದ ಡಿಜಿಟಲ್ ಭವಿಷ್ಯವನ್ನು ರೂಪಿಸಲು ಸಿದ್ಧರಾಗಿದ್ದಾರೆ. MeitY ಸ್ಟಾರ್ಟ್‌ಅಪ್ ಹಬ್ ನೊಂದಿಗೆ XR ಸ್ಟಾರ್ಟ್‌ಅಪ್ ಕಾರ್ಯಕ್ರಮದಂತಹ ಉಪಕ್ರಮಗಳು, ಭಾರತದಾದ್ಯಂತ ತಂತ್ರಜ್ಞಾನ ನವೋದ್ಯಮಗಳು ಮತ್ತು ನವೋದ್ಯಮಿಗಳ ಬೆಳವಣಿಗೆಗೆ ಮತ್ತಷ್ಟು ಪ್ರೋತ್ಸಾಹ ನೀಡುವತ್ತ ಕಾರ್ಯನಿರ್ವಹಿಸುತ್ತವೆ” ಎಂದು ಹೇಳಿದರು.

ಉತ್ತೇಜನ ನೀಡುವ ಕಾರ್ಯಕ್ರಮವು XR ತಂತ್ರಜ್ಞಾನಗಳಲ್ಲಿ ಕೆಲಸ ಮಾಡುವ 40 ಆರಂಭಿಕ ಹಂತದ ನವೋದ್ಯಮಗಳನ್ನು ತಲಾ ರೂ.20 ಲಕ್ಷಗಳ ಅನುದಾನದೊಂದಿಗೆ ಬೆಂಬಲಿಸುತ್ತಿದೆ.  ಇದಲ್ಲದೆ, ಶಿಕ್ಷಣ, ಕಲಿಕೆ ಮತ್ತು ಕೌಶಲ್ಯಗಳು, ಆರೋಗ್ಯ ರಕ್ಷಣೆ, ಗೇಮಿಂಗ್ ಮತ್ತು ಮನರಂಜನೆ, ಕೃಷಿ ತಂತ್ರಜ್ಞಾನ ಮತ್ತು ಕ್ಲೈಮೇಟ್ ಆಕ್ಷನ್ ಮತ್ತು ಪ್ರವಾಸೋದ್ಯಮ ಮತ್ತು ಸುಸ್ಥಿರತೆಯಂತಹ ಕ್ಷೇತ್ರಗಳಲ್ಲಿ ಆರಂಭಿಕ ಹಂತದ ನವೋದ್ಯಮಿಗಳನ್ನು ಗ್ರ್ಯಾಂಡ್ ಚಾಲೆಂಜ್ ಪ್ರೋತ್ಸಾಹಿಸುತ್ತಿದೆ.

ಸಂಶೋಧನೆ ಮತ್ತು ಅಭಿವೃದ್ಧಿ ಹಂತದಿಂದ ಕಾರ್ಯಸಾಧ್ಯವಾದ ಉತ್ಪನ್ನಗಳು ಮತ್ತು ಸೇವೆಗಳನ್ನು ಅಭಿವೃದ್ಧಿಪಡಿಸುವವರೆಗೆ ನವೋದ್ಯಮಿಗಳಿಗೆ ಬೆಂಬಲವನ್ನು ಒದಗಿಸಲಾಗುತ್ತದೆ. ಮೊದಲಿಗೆ 80 ನವೋದ್ಯಮಿಗಳು ಆರಂಭಿಕ ಹಂತದ ಶಿಬಿರಕ್ಕೆ ಹಾಜರಾಗುತ್ತಾರೆ, ಅದರಲ್ಲಿ ಒಟ್ಟು 16 ನವೋದ್ಯಮಿಗಳಿಗೆ ತಲಾ ರೂ 20 ಲಕ್ಷಗಳ ಅನುದಾನವನ್ನು ನೀಡಲಾಗುತ್ತದೆ ಮತ್ತು ಅವರಿಗೆ ಕನಿಷ್ಠ ಕಾರ್ಯಸಾಧ್ಯ ಉತ್ಪನ್ನ (MVP)/ ಮೂಲಮಾದರಿಗಳನ್ನು ಅಭಿವೃದ್ಧಿಪಡಿಸಲು ಸಹಾಯ ಮಾಡಲು ಹೆಚ್ಚಿನ ಬೆಂಬಲವನ್ನು ನೀಡಲಾಗುತ್ತದೆ.

ಗ್ರಾಹಕರ ಸಂಪರ್ಕಗಳು, ಪಾಲುದಾರಿಕೆ ಅವಕಾಶಗಳು ಮತ್ತು ಇತರ ವಿಷಯಗಳಲ್ಲಿ, ಮತ್ತು ಉಳಿದ ವಿಷಯಗಳಲ್ಲಿ  ನಿಧಿಸಂಗ್ರಹವನ್ನು ಮಾಡುವಲ್ಲಿಯೂ  ಗ್ರ್ಯಾಂಡ್ ಚಾಲೆಂಜ್  ಸ್ಟಾರ್ಟ್-ಅಪ್ ‌ಗಳು ಮತ್ತು ನವೋದ್ಯಮಿಗಳನ್ನು ಬೆಂಬಲಿಸುತ್ತಿದೆ.

ಐಐಟಿ ದೆಹಲಿ (ಉತ್ತರ ವಲಯ) ಯಲ್ಲಿರುವ ಫೌಂಡೇಶನ್ ಫಾರ್ ಇನ್ನೋವೇಶನ್ ಆಂಡ್  ಟೆಕ್ನಾಲಜಿ ಟ್ರಾನ್ಸ್‌ಫರ್ (ಎಫ್‌ಐಟಿಟಿ), ಐಐಐಟಿ-ಎಚ್ (ದಕ್ಷಿಣ ವಲಯ) ದಲ್ಲಿರುವ ಸೆಂಟರ್ ಪರ್ ಇನ್ನೋವೇಶನ್ ಆಂಡ್ ಎಂಟರ್‌ಪ್ರೆನ್ಯೂರ್‌ಶಿಪ್ (ಸಿಐಇ), SMUTBI (ಪೂರ್ವ ವಲಯ)ದ ಅಟಲ್ ಇನ್‌ಕ್ಯುಬೇಷನ್ ಸೆಂಟರ್ ಮತ್ತು ಗುಜರಾತ್ ಯೂನಿವರ್ಸಿಟಿ ಸ್ಟಾರ್ಟ್ಅಪ್ ಮತ್ತು ಎಂಟರ್‌ಪ್ರೆನ್ಯೂರ್‌ಶಿಪ್ ಕೌನ್ಸಿಲ್ (GUSEC) (ಪಶ್ಚಿಮ ವಲಯ) ಸೇರಿದಂತೆ ಈ ಎಲ್ಲ ಅನುಷ್ಠಾನ ಪಾಲುದಾರರ ಸಹಭಾಗಿತ್ವದಲ್ಲಿ ಕಾರ್ಯಕ್ರಮವನ್ನು ಕಾರ್ಯಗತಗೊಳಿಸಲಾಗುತ್ತಿದೆ. .

ಆಯ್ದ ಸ್ಟಾರ್ಟ್‌ಅಪ್ ‌ಗಳು ಮತ್ತು ನವೋದ್ಯಮಿಗಳ ಸಂಪೂರ್ಣ ಪಟ್ಟಿ ಇಲ್ಲಿದೆ 

MSH ಕುರಿತು 

MeitY ಸ್ಟಾರ್ಟ್ ‌ಅಪ್ ಹಬ್ (MSH) ಎಂಬುದು, ಹೊಸ ಧನಸಹಾಯ ಯೋಜನೆಗಳು, ಕಾರ್ಪೊರೇಟ್ ಸ್ಟಾರ್ಟ್ ‌ಅಪ್ ಕಾರ್ಯಕ್ರಮಗಳು ಮತ್ತು ಇತರ ಚಟುವಟಿಕೆಗಳ ಜೊತೆಗೆ  ಸ್ಟಾರ್ಟ್‌ಅಪ್ ‌ಗಳಿಗಾಗಿ ಅಂತರರಾಷ್ಟ್ರೀಯ ವಿಸ್ತರಣಾ ಕಾರ್ಯಕ್ರಮಗಳನ್ನು ಪ್ರಾರಂಭಿಸುವ ಮೂಲಕ ಭಾರತದಾದ್ಯಂತ ಸ್ಟಾರ್ಟ್ ‌ಅಪ್ ಪರಿಸರ ವ್ಯವಸ್ಥೆಯನ್ನು ನಿರ್ಮಿಸಲು ಮತ್ತು ಅದನ್ನು ಬಲಪಡಿಸಲು MeitY ಕೈಗೊಂಡ ಉಪಕ್ರಮವಾಗಿದೆ. ನಾವು ನಮ್ಮ ಸಂಪರ್ಕ ವಲಯದಲ್ಲಿ 4000 ಕ್ಕೂ ಹೆಚ್ಚು ಸ್ಟಾರ್ಟ್‌ಅಪ್ ಗಳು, 51 ಬೆಂಬಲಿತ ಮತ್ತು 476 ನೋಂದಾಯಿತ ಇನ್‌ಕ್ಯುಬೇಟರ್ ‌ಗಳು, 26 ಉದ್ಯಮಶೀಲತಾ ಕೇಂದ್ರಗಳು (CoEಗಳು), 22 ಉತ್ತೇಜನಾ ಕೇಂದ್ರಗಳು ಮತ್ತು 400 ಕ್ಕೂ ಹೆಚ್ಚು ಮಾರ್ಗದರ್ಶಕರನ್ನು ಹೊಂದಿದ್ದೇವೆ.

ಮೆಟಾ ಪ್ಲಾಟ್ ಫಾರ್ಮ್ ಇಂಕ್  ಕುರಿತು

ಜನರು ಸಂಪರ್ಕ ಹೊಂದಲು, ಸಮುದಾಯಗಳನ್ನು ಹುಡುಕಲು ಮತ್ತು ವ್ಯಾಪಾರಗಳನ್ನು ಬೆಳೆಸಲು ಸಹಾಯ ಮಾಡುವ ತಂತ್ರಜ್ಞಾನಗಳನ್ನು ಮೆಟಾ ನಿರ್ಮಿಸುತ್ತದೆ. 2004 ರಲ್ಲಿ ಫೇಸ್ ‌ಬುಕ್ ಪ್ರಾರಂಭವಾದಾಗ, ಅದು ಜನರು ಸಂಪರಕಿಸುವ ಮಾರ್ಗವನ್ನು ಬದಲಾಯಿಸಿತು. ಮೆಸೆಂಜರ್, ಇನ್‌ಸ್ಟಾಗ್ರಾಮ್ ಮತ್ತು ವಾಟ್ಸಾಪ್ ‌ನಂತಹ ಅಪ್ಲಿಕೇಶನ್ ‌ಗಳು ಪ್ರಪಂಚದಾದ್ಯಂತ ಶತಕೋಟಿ ಜನರನ್ನು ಮತ್ತಷ್ಟು ಸಬಲಗೊಳಿಸಿದವು. ಈಗ, Meta ಸಾಮಾಜಿಕ ತಂತ್ರಜ್ಞಾನದಲ್ಲಿ ಮುಂದಿನ ವಿಕಾಸದತ್ತ ಸಾಗಲು ಸಹಾಯ ಮಾಡಲೆಂದು ವರ್ಧಿತ ಮತ್ತು ವರ್ಚುವಲ್ ರಿಯಾಲಿಟಿನಂತಹ ಸಮೃದ್ಧ ಅನುಭವಗಳ ಕಡೆಗೆ 2D ತಂತ್ರಜ್ಞಾನವನ್ನು ದಾಟಿ  ಮುಂದುವರಿದಿದೆ. 

****


(Release ID: 1894157) Visitor Counter : 176