ಸಂಸ್ಕೃತಿ ಸಚಿವಾಲಯ
azadi ka amrit mahotsav

ನವದೆಹಲಿಯ ಕರ್ತವ್ಯಪಥದಲ್ಲಿಂದು ನಡೆದ ರಾಷ್ಟ್ರೀಯ ಉತ್ಸವ ಗಣರಾಜ್ಯ ದಿನದ ಕಾರ್ಯಕ್ರಮದಲ್ಲಿ ಆಕರ್ಷಕ ವಂದೇ ಭಾರತಮ್ ಸಾಂಸ್ಕೃತಿಕ ಸಂಭ್ರಮ


ಗಣರಾಜ್ಯ ದಿನದ ಪರೇಡ್ ನಲ್ಲಿ ನಾರೀಶಕ್ತಿಯ ವರ್ಣರಂಜಿತ ಸ್ತಬ್ಧಚಿತ್ರ 

Posted On: 26 JAN 2023 3:26PM by PIB Bengaluru

ನವದೆಹಲಿಯಲ್ಲಿ ಗಣರಾಜ್ಯ ದಿನದ ಕಾರ್ಯಕ್ರಮದಲ್ಲಿ ಇಂದು ಅನಾವರಣಗೊಂಡ ಸಂಸ್ಕೃತಿ ಸಚಿವಾಲಯದ ಸಾಂಸ್ಕೃತಿಕ ಸಂಭ್ರಮ ವಂದೇ ಭಾರತಮ್ ಕಾರ್ಯಕ್ರಮ ಅತ್ಯಂತ ಆಕರ್ಷಕವಾಗಿತ್ತು. ರಾಷ್ಟ್ರಮಟ್ಟದ ಸ್ಪರ್ಧೆಗಳಲ್ಲಿ ಆಯ್ಕೆಯಾದ 479 ಕಲಾವಿದರು ಇಡೀ ದೇಶದ ಎದುರು “ನಾರಿ ಶಕ್ತಿ” ಅನಾವರಣಗೋಳಿಸಿದರು. ಭವ್ಯ ಪರೇಡ್ ನಲ್ಲಿ ಕಲಾವಿದರು ನೀಡಿದ  ಲವಲವಿಕೆಯಿಂದ ರೋಮಾಂಚನಕಾರಿ ಪ್ರದರ್ಶನ ಪ್ರೇಕ್ಷಕರನ್ನು ಮಂತ್ರಮುಗ್ಧರನ್ನಾಗಿಸಿತು. ಏಕ್ ಭಾರತ್ ಶ್ರೇಷ್ಠ್ ಭಾರತ್ ನ ಉಸಿರಾಗಿ ಭಾರತದ ವೈವಿಧ್ಯಮಯ ಸಂಸ್ಕೃತಿ ಮತ್ತು ಕಲೆಯ ಪರಂಪರೆಯ ಅನಾವರಣವಾಯಿತು. 

ವಂದೇ ಭಾರತಮ್ ಕಾರ್ಯಕ್ರಮಕ್ಕೆ ರಾಜ ಭವತಾರಣಿ ಮತ್ತು ಅಲೋಕ್ ನಂದಾ ದಾಸ್ ಗುಪ್ತಾ ಸಂಗೀತ ನೀಡಿದ್ದು, ಹಿಂದೂಸ್ತಾನಿ, ಕರ್ನಾಟಿಕ್ ಮತ್ತು ಸಮಕಾಲೀನ ರಾಗ ಸಹಿತವಾಗಿ ಸಂಯೋಜಿಸಿಲಾಗಿತ್ತು.

ಸಂಸ್ಕೃತಿ ಸಚಿವಾಲಯದ ವರ್ಣರಂಜಿತ ಸ್ತಬ್ಧಚಿತ್ರ “ಶಕ್ತಿ ರೂಪೇಣ ಸಂಸ್ಥಿತಾ” ಕೂಡ ಇಂದು ಕರ್ತವ್ಯಪಥದಲ್ಲಿ ಪ್ರದರ್ಶನ ಕಂಡಿತು. ಈ ಸ್ತಬ್ಧಚಿತ್ರ ದೇವತೆಯರ ಶಕ್ತಿಯಾಧಾರಿತವಾಗಿತ್ತು. ದೇವಿ ವೈಭವ ಸಾರುವ ಅನೇಕ ಜಾನಪದ ನೃತ್ಯಗಳನ್ನು ಈ ಸ್ತಬ್ಧಚಿತ್ರದ ಮೂಲಕ ಒಂದೇ ವೇದಿಕೆಯಲ್ಲಿ ಪ್ರದರ್ಶಿಸಲಾಯಿತು.

ಕೇಂದ್ರ ಸಂಸ್ಕೃತಿ ಸಚಿವಾಲಯ ಮತ್ತು ರಕ್ಷಣಾ ಸಚಿವಾಲಯದ ಜಂಟಿ ಸಹಯೋಗದಲ್ಲಿ ವಂದೇ ಭಾರತಮ್ ನೃತ್ಯೋತ್ಸವ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ಅಖಿಲ ಭಾರತ ನೃತ್ಯದ ಹಬ್ಬ, ಇಡೀ ವಿಶ್ವಕ್ಕೆ ನೃತ್ಯದ ಮೂಲಕ “ಏಕ್ ಭಾರತ್ ಶ್ರೇಷ್ಠ್ ಭಾರತ್” ಪರಿಕಲ್ಪನೆಯ ಪ್ರತಿಬಿಂಬವನ್ನು ಅನುರಣಿಸುವ ಗುರಿ ಹೊಂದಿದೆ. 2022 ರ ಅಕ್ಟೋಬರ್ 15 ರಂದು ಆರಂಭವಾಗಿದ್ದ ಈ ಎರಡನೇ ಆವೃತ್ತಿಯ ಸ್ಪರ್ಧೆಯಲ್ಲಿ ದೇಶದ ಮೂಲೆ ಮೂಲೆಗಳಿಂದ ಜನರು ಭಾಗವಹಿಸಿದ್ದರು. ಈ ಸ್ಪರ್ಧೆಯಲ್ಲಿ ಮೂರು ಹಂತಗಳಿವೆ - ರಾಜ್ಯ, ವಲಯ ಮತ್ತು ರಾಷ್ಟ್ರ ಮಟ್ಟ. ಈ ಸ್ಪರ್ಧೆಗಳಿಗೆ 17 ರಿಂದ 30 ವರ್ಷ ವಯೋಮಾನ ನಿಗದಿಪಡಿಸಲಾಗಿದ್ದು 2022 ರ ಡಿಸೆಂಬರ್ 19 ಮತ್ತು 20 ರಂದು ನಡೆದ ಅಂತಿಮ ಸ್ಪರ್ಧೆ ನವದೆಹಲಿಯ ಜವಾಹರ್ ಲಾಲ್ ನೆಹರೂ ಕ್ರೀಡಾಂಗಣದಲ್ಲಿ ನಡೆಯಿತು.

****


(Release ID: 1893976) Visitor Counter : 151