ಪ್ರವಾಸೋದ್ಯಮ ಸಚಿವಾಲಯ

ಪ್ರವಾಸೋದ್ಯಮ ಸಚಿವಾಲಯವು ನಾಳೆ ಅಂದರೆ ಜನವರಿ 26ರಿಂದ ಜನವರಿ 31 ರವರೆಗೆ ಆರು ದಿನಗಳ ಬೃಹತ್ ಕಾರ್ಯಕ್ರಮ "ಭಾರತ್ ಪರ್ವ್" ವನ್ನು ದೆಹಲಿಯ ಕೆಂಪು ಕೋಟೆ ಹುಲ್ಲುಹಾಸಿನ ಆವರಣದಲ್ಲಿ ಆಯೋಜಿಸುತ್ತಿದೆ. 


ಕಾರ್ಯಕ್ರಮ ಸ್ಥಳದಲ್ಲಿ ಗಣರಾಜ್ಯೋತ್ಸವ ಪರೇಡ್ ನಲ್ಲಿ ಪ್ರದರ್ಶನಗೊಂಡ ಕೆಲವು ಅತ್ಯುತ್ತಮ ಟ್ಯಾಬ್ಲೋಗಳನ್ನು ಪ್ರದರ್ಶಿಸಲಾಗುತ್ತದೆ.

Posted On: 25 JAN 2023 1:02PM by PIB Bengaluru

ಮುಖ್ಯಾಂಶಗಳು:

ವಲಯ ಸಾಂಸ್ಕೃತಿಕ ಕೇಂದ್ರಗಳಿಂದ ಮತ್ತು ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳ ಸಾಂಸ್ಕೃತಿಕ ತಂಡಗಳು, ಪ್ಯಾನ್ - ಇಂಡಿಯಾ ಫುಡ್ ಕೋರ್ಟ್ ಮತ್ತು 65 ಕರಕುಶಲ ಮಳಿಗೆಗಳೊಂದಿಗೆ ಪ್ಯಾನ್ - ಇಂಡಿಯಾ ಕ್ರಾಫ್ಟ್ಸ್ ಬಜಾರ್ ಕಾರ್ಯಕ್ರಮದ ಭಾಗವಾಗಲಿವೆ.

ಗಣರಾಜ್ಯೋತ್ಸವದ ಅಂಗವಾಗಿ ನಾಳೆಯಿಂದ ಜನವರಿ 31 ರವರೆಗೆ ದೆಹಲಿಯ ಕೆಂಪು ಕೋಟೆಯ ಮುಂಭಾಗದಲ್ಲಿರುವ ಹುಲ್ಲುಗಾವಲು ಮತ್ತು ಜ್ಞಾನ್ ಪಥ್‌ನಲ್ಲಿ ಆರು ದಿನಗಳ ಬೃಹತ್ ಕಾರ್ಯಕ್ರಮ “ಭಾರತ್ ಪರ್ವ್” ವನ್ನು ಭಾರತ ಸರ್ಕಾರ ಆಯೋಜಿಸಲಿದೆ.

ಈ ಕಾರ್ಯಕ್ರಮಕ್ಕೆ ಪ್ರವಾಸೋದ್ಯಮ ಸಚಿವಾಲಯವನ್ನು ನೋಡಲ್ ಸಚಿವಾಲಯ ಎಂದು ಗೊತ್ತುಪಡಿಸಲಾಗಿದೆ, ಸ್ಥಳದಲ್ಲಿ ಅತ್ಯುತ್ತಮ ಗಣರಾಜ್ಯೋತ್ಸವ ಪರೇಡ್ ಟೇಬಲ್‌ಲಾಕ್ಸ್, ವಲಯ ಸಾಂಸ್ಕೃತಿಕ ಕೇಂದ್ರಗಳ ಸಾಂಸ್ಕೃತಿಕ ಪ್ರದರ್ಶನಗಳು ಮತ್ತು ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳ ಸಾಂಸ್ಕೃತಿಕ ತಂಡಗಳು, ಪ್ಯಾನ್ - ಇಂಡಿಯಾ ಫುಡ್ ಕೋರ್ಟ್ ಮತ್ತು ಪ್ಯಾನ್ ಇಂಡಿಯಾ ಪರಿಕಲ್ಪನೆಯಲ್ಲಿ - 65 ಕರಕುಶಲ ಮಳಿಗೆಗಳೊಂದಿಗೆ ಇಂಡಿಯಾ ಕ್ರಾಫ್ಟ್ಸ್ ಬಜಾರ್ ಕಾರ್ಯಕ್ರಮದ ಆಕರ್ಷಣೆಯಾಗಿರುತ್ತವೆ.  ಕಾರ್ಯಕ್ರಮ ನಾಳೆ ಸಂಜೆ 5:30 ಕ್ಕೆ ಉದ್ಘಾಟಯಾಗಲಿದೆ. ಸಂಜೆ 5:30 ರಿಂದ ರಾತ್ರಿ 10 ಗಂಟೆಯವರೆಗೆ ಸಾರ್ವಜನಿಕರಿಗೆ ಮುಕ್ತವಾಗಿರುತ್ತದೆ. ಜನವರಿ 27ರಿಂದ 31ರವರೆಗೆ ಮಧ್ಯಾಹ್ನ 12 ಗಂಟೆಯಿಂದ ರಾತ್ರಿ 10 ಗಂಟೆಯವರೆಗೆ ತೆರೆದಿರುತ್ತದೆ. ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ವೀಕ್ಷಕರು ಬರುವ ನಿರೀಕ್ಷೆಯಿದೆ. 

ಭಾರತ್ ಪರ್ವ್ ಕಾರ್ಯಕ್ರಮವನ್ನು ಈ ಹಿಂದೆ 2016, 2017, 2018, 2019 ಮತ್ತು 2020 ರಲ್ಲಿ (2021 ರಲ್ಲಿ ವರ್ಚುವಲ್ ಮೂಲಕ) ಕೆಂಪು ಕೋಟೆಯ ಮುಂಭಾಗದಲ್ಲಿರುವ ಹಸಿರುಹಾಸಿನ ಆವರಣ ಮತ್ತು ಜ್ಞಾನ್ ಪಥ್‌ನಲ್ಲಿ ಆಯೋಜಿಸಲಾಗಿತ್ತು. 2 ವರ್ಷಗಳ ನಂತರ ಮತ್ತೆ ಕೆಂಪು ಕೋಟೆಯ ಮುಂಭಾಗದಲ್ಲಿರುವ ಆವರಣ ಮತ್ತು ಜ್ಞಾನ ಪಥದಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಕಾರ್ಯಕ್ರಮದಲ್ಲಿ ಆಹಾರೋತ್ಸವ, ಕರಕುಶಲ ಮೇಳ, ಜಾನಪದ ಮತ್ತು ಬುಡಕಟ್ಟು ನೃತ್ಯ ಪ್ರದರ್ಶನಗಳು, ಸಾಂಸ್ಕೃತಿಕ ತಂಡಗಳಿಂದ ಪ್ರದರ್ಶನಗಳು, ಗಣರಾಜ್ಯೋತ್ಸವದ ಟ್ಯಾಬ್ಲೋಗಳ ಪ್ರದರ್ಶನ, ಕೆಂಪು ಕೋಟೆ ಪ್ರಕಾಶಮಾನವಾಗಿ ಹೊಳೆಯುವುದು ಇತ್ಯಾದಿಗಳನ್ನು ನೋಡಬಹುದು. ಕಾರ್ಯಕ್ರಮದಲ್ಲಿ 'ದೇಖೋ ಅಪ್ನಾ ದೇಶ್', 'ಏಕ್ ಭಾರತ್ ಶ್ರೇಷ್ಠ ಭಾರತ್', 'ಜಿ20' ಮತ್ತು 'ಮಿಷನ್ ಲೈಫ್‌'ನ ಬ್ರ್ಯಾಂಡಿಂಗ್ ಮತ್ತು ಪ್ರಚಾರವನ್ನು ಕೈಗೊಳ್ಳಲಾಗುವುದು.

ಆರು ದಿನಗಳ ಕಾರ್ಯಕ್ರಮದಲ್ಲಿ ಈ ಕೆಳಗಿನ ಪ್ರಮುಖ ಅಂಶಗಳು ಹೊಂದಿರುತ್ತದೆ:

ಪ್ರಾದೇಶಿಕ ತಿನಿಸುಗಳ ಪ್ರದರ್ಶನ ಮತ್ತು ಮಾರಾಟ
* ಫುಡ್ ಕೋರ್ಟ್ 
* ರಾಜ್ಯ ಸರ್ಕಾರದಿಂದ ಮಳಿಗೆಗಳು
* ಇನ್ಸ್ಟ್ ಟ್ಯೂಟ್ ಆಫ್ ಹೊಟೇಲ್ ಮ್ಯಾನೇಜ್ ಮೆಂಟ್ (IHM)ನ ಮಳಿಗೆಗಳು
* ಆಹಾರ ಮಾರಾಟಗಾರ ಮಳಿಗೆಗಳು
* ಆಹಾರ ಪ್ರದರ್ಶನಗಳು (ಸಿರಿಧಾನ್ಯ ವರ್ಷಗಳ ಮೇಲೆ ಕೇಂದ್ರೀಕೃತ)
* ಕರಕುಶಲ ಮತ್ತು ಕೈಮಗ್ಗ

ಡಿಸಿ, ಕೈಮಗ್ಗದಿಂದ ಮಳಿಗೆಗಳು

* ರಾಜ್ಯ ಸರ್ಕಾರಗಳ ಮಳಿಗೆಗಳು
* KVIC, TRIFED ನಿಂದ ಮಳಿಗೆಗಳು

ಸಂಸ್ಕೃತಿ ಮತ್ತು ಪರಂಪರೆ

* ವಲಯ ಸಾಂಸ್ಕೃತಿಕ ಕೇಂದ್ರಗಳು (ಸಂಸ್ಕೃತಿ ಸಚಿವಾಲಯ) ದಿಂದ ನೃತ್ಯ ಸಂಯೋಜನೆಯ ಪ್ರದರ್ಶನಗಳು
* ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಿಂದ ಕಾರ್ಯಕ್ಷಮತೆ
* ವಿಶೇಷ ಪ್ರದರ್ಶನಗಳು
* ಟ್ಯಾಬ್ಲೋಗಳ ಪ್ರದರ್ಶನ
* ಕೇಂದ್ರ ಸರ್ಕಾರದ ಸಚಿವಾಲಯಗಳು ಮತ್ತು ಸಂಸ್ಥೆಗಳ ಸಾಧನೆಗಳು ಮತ್ತು ಪ್ರಮುಖ ಕಾರ್ಯಕ್ರಮ

ಚಟುವಟಿಕೆ ವಲಯ

* ನುಕ್ಕಡ್ ನಾಟಕ
* ರಸಪ್ರಶ್ನೆಗಳು
* ಚಿತ್ರಕಲೆ ಸ್ಪರ್ಧೆಗಳು
* ಪ್ರವಾಸೋದ್ಯಮ ಯೂತ್ ಕ್ಲಬ್, ಶಾಲೆ/ಕಾಲೇಜುಗಳ ಒಳಗೊಳ್ಳುವಿಕೆ
* ಪ್ರಯೋಗಾತ್ಮಕ ವಲಯ

****



(Release ID: 1893677) Visitor Counter : 120