ಕಾನೂನು ಮತ್ತು ನ್ಯಾಯ ಸಚಿವಾಲಯ

 ಕೇಂದ್ರ ಕಾನೂನು ಸಚಿವ ಶ್ರೀ ಕಿರಣ್ ರಿಜಿಜು ಅವರು ಇ-ಕೋರ್ಟ್ಸ್ ಪ್ರಾಜೆಕ್ಟ್ ಉಪಕ್ರಮಗಳ ಪ್ರಶಸ್ತಿ ವಿಜೇತರನ್ನು ಅಭಿನಂದಿಸಿದರು.


 ನೇಮಕಾತಿ ವಿಭಾಗದ ಮಾರ್ಗದರ್ಶನದಲ್ಲಿ ಒಂದು ನೇಮಕಾತಿ ತಂತ್ರಾಂಶವನ್ನು ಅಭಿವೃದ್ಧಿಪಡಿಸಲಾಯಿತು.

Posted On: 24 JAN 2023 3:41PM by PIB Bengaluru

ನ್ಯಾಯ ಸಚಿವಾಲಯದಿಂದ ಇಂದು ನವ ದೆಹಲಿಯಲ್ಲಿ ಇ-ನ್ಯಾಲಯ ಪರಿಯೋಜನೆಗಳ‌ ಪ್ರಶಸ್ತಿ ವಿಜೇತರನ್ನು ಸನ್ಮಾನಿಸಲು ಒಂದು ಪ್ರಶಸ್ತಿ ಪುರಸ್ಕಾರ ಸಮಾರಂಭವನ್ನು ಆಯೋಜಿಸಲಾಯಿತು.ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೇಂದ್ರದ ಕಾನೂನು ಮತ್ತು ನ್ಯಾಯ ಸಚಿವ ಶ್ರೀ ಕಿರಣ್ ರಿಜಿಜೂ ಹಾಗೂ  ಕಾನೂನು ಮತ್ತು ನ್ಯಾಯ ಸಚಿವಾಲಯದ ರಾಜ್ಯ ಸಚಿವರಾದ ಪ್ರೊ. ಶ್ರೀ ಎಸ್.ಪಿ. ಸಿಂಗ್ ಬಘೇಲ್ ಅವರುಗಳು ವಹಿಸಿದ್ದರು.  ಸಂದರ್ಭದಲ್ಲಿ ನ್ಯಾಯಾಂಗ ಇಲಾಖೆಯ ಇತರ ಅಧಿಕಾರಿಗಳು ಮತ್ತು ನೌಕರರು ಸಹ ಉಪಸ್ಥಿತರಿದ್ದರು. ಸಮಾರಂಭದಲ್ಲಿ ಕೇಂದ್ರದ ಸಚಿವರು ನ್ಯಾಯಾಂಗ ವಿಭಾಗದಿಂದ ಹೊರತರಲಾದ  ಡೆಸ್ಕ್ ಕ್ಯಾಲೆಂಡರ್ ಅನ್ನು ಅನಾವರಣಗೊಳಿಸಿದರು. ಇದು ದಿಶಾ (ನ್ಯಾಯಕ್ಕೆ ಸಮಗ್ರ ಪ್ರವೇಶಕ್ಕಾಗಿ ನವೀನ ಪರಿಹಾರಗಳನ್ನು ವಿನ್ಯಾಸಗೊಳಿಸುವುದು) ಕಾರ್ಯಕ್ರಮದ ಅಡಿಯಲ್ಲಿ ನಾಗರಿಕರ ಕಲ್ಯಾಣಕ್ಕಾಗಿ ತೆಗೆದುಕೊಳ್ಳುತ್ತಿರುವ ಉಪಕ್ರಮಗಳ ಬಗ್ಗೆ ತಿಳಿಸುತ್ತದೆ.

ಇಂದು, ಸುಮಾರು 4.90 ಕೋಟಿ ಪ್ರಕರಣಗಳು ನ್ಯಾಯಾಲಯಗಳಲ್ಲಿ ಬಾಕಿ ಉಳಿದಿವೆ. ಸಾಧ್ಯವಾದಷ್ಟು ಕ್ಷಿಪ್ರ ಗತಿಯಲ್ಲಿ ನ್ಯಾಯ ಒದಗಿಸಬೇಕು. ಈ‌ ನಿಟ್ಟಿನಲ್ಲಿ ನ್ಯಾಯಾಲಯಗಳ ತಂತ್ರಜ್ಞಾನ ಸಕ್ರಿಯಗೊಳಿಸುವಿಕೆಯು ಈ ಪ್ರಕರಣದ ಹೊರೆ ಕಡಿಮೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.

ಕೇಂದ್ರ ಸಚಿವರಾದ  ಶ್ರೀ ಕಿರಣ್ ರಿಜಿಜು  ಅವರು ಜೈಸಲ್ಮೇರ್ ಹೌಸ್‌ನಲ್ಲಿನ ಕಾನ್ಫರೆನ್ಸ್ ಕೊಠಡಿಯಲ್ಲಿ ಮಾಧ್ಯಮವನ್ನುದ್ದೇಶಿಸಿ  ಮಾತನಾಡಿ,
 ನ್ಯಾಯಾಂಗ ಇಲಾಖೆಯು ಗೌರವಾನ್ವಿತ ಸಿಜೆಐ ಡಿ.ವೈ ಚಂದ್ರಚೂಡ್ ಅವರ ಮಾರ್ಗದರ್ಶನದಲ್ಲಿ ಸರ್ವೋಚ್ಚ ನ್ಯಾಯಾಲಯದ ಇ-ಸಮಿತಿಯೊಂದಿಗೆ ನಿಕಟ ಸಮನ್ವಯದಲ್ಲಿ ನಿರಂತರವಾಗಿ ಕೆಲಸ ಮಾಡುತ್ತಿದೆ ಎಂದು  ಹೇಳಿದರು.  ಕಾನೂನು ಮತ್ತು ನ್ಯಾಯ ಸಚಿವಾಲಯದ ರಾಜ್ಯ ಸಚಿವರಾದ ಪ್ರೊ. ಶ್ರೀ ಎಸ್.ಪಿ. ಸಿಂಗ್ ಬಘೇಲ್ ಅವರು ನ್ಯಾಯಾಂಗದ ವಿವಿಧ ನಾಗರಿಕ-ಕೇಂದ್ರಿತ ಸೇವೆಗಳಿಗಾಗಿ ನ್ಯಾಯಾಂಗ ಇಲಾಖೆಯನ್ನು ಶ್ಲಾಘಿಸಿದರು, ಇದು ನ್ಯಾಯದ ರಸ್ತೆಗಳನ್ನು ಎಲ್ಲರಿಗೂ ಪ್ರವೇಶಿಸುವಂತೆ ಮಾಡುತ್ತದೆ.  ಪ್ರಕರಣಗಳ ಬಾಕಿಯನ್ನು ಕಡಿಮೆ ಮಾಡಲು ನ್ಯಾಯಾಲಯಗಳಲ್ಲಿ ಆರ್ಟಿಫಿಷಿಯಲ್ ಇಂಟಲಿಜೆನ್ಸ್ ಮತ್ತು ತಂತ್ರಜ್ಞಾನ ಏಕೀಕರಣದ ಬಗ್ಗೆಯೂ ಅವರು ಒತ್ತಿ ಹೇಳಿದರು.  ಪ್ರಧಾನಮಂತ್ರಿ ನರೇಂದ್ರ ಮೋದಿಯವರ 'ಸಬ್ಕಾ ಸಾಥ್, ಸಬ್ಕಾ ವಿಕಾಸ್, ಸಬ್ಕಾ ನ್ಯಾಯ್' ದೂರದೃಷ್ಟಿಯಡಿಯಲ್ಲಿ, ನ್ಯಾಯಾಂಗ ಇಲಾಖೆ, ಕೇಂದ್ರ ಕಾನೂನು ಮತ್ತು ನ್ಯಾಯ ಸಚಿವರ ಮಾರ್ಗದರ್ಶನದಲ್ಲಿ, ಶ್ರೀ ಕಿರಣ್ ರಿಜಿಜೂ ಅವರು ಸಮಾಜದ ಕಟ್ಟಕಡೆಯ ವ್ಯಕ್ತಿಗೂ ನ್ಯಾಯ ಒದಗಿಸಲು ಅಪಾರ ಪ್ರಯತ್ನಗಳನ್ನು ಮಾಡುತ್ತಿದ್ದಾರೆ.  ದೇಶದ ಪ್ರತಿಯೊಂದು ಮೂಲೆ ಮೂಲೆಗಳಲ್ಲಿ ಅದರ ನಾಗರಿಕ-ಕೇಂದ್ರಿತ ವಿಧಾನ ಮತ್ತು ವಿವಿಧ ಕಾರ್ಯಕ್ರಮಗಳು ಮತ್ತು ಉಪಕ್ರಮಗಳೊಂದಿಗೆ ಪ್ರಯತ್ನಗಳನ್ನು ಮಾಡಲಾಗುತ್ತಿದೆ. ಈ ಉದ್ದೇಶದೊಂದಿಗೆ, ಇ-ಕೋರ್ಟ್ಸ್  ಪ್ರಾಜೆಕ್ಟ್ ಇ-ಸಮಿತಿ, ಭಾರತದ ಸುಪ್ರೀಂ ಕೋರ್ಟ್‌ನ ನಿಕಟ ಸಹಕಾರದೊಂದಿಗೆ ನ್ಯಾಯಾಲಯಗಳ ಐಸಿಟಿ ಸಕ್ರಿಯಗೊಳಿಸುವಿಕೆಯಿಂದ ಭಾರತೀಯ ನ್ಯಾಯಾಂಗವನ್ನು ಪರಿವರ್ತಿಸುವ ದೃಷ್ಟಿಯೊಂದಿಗೆ  ಗಮನಾರ್ಹ ಸಾಧನೆಗಳೊಂದಿಗೆ ಮುನ್ನಡೆಯುತ್ತಿದೆ.

ಇ-ನ್ಯಾಯಾಲಯ ಮಿಷನ್ ಮೋಡ್ ಪರಿಯೋಜನೆ ಅಡಿಯಲ್ಲಿ ಅಭಿವೃದ್ಧಿ ಪಡಿಸಿದ ಸಂಶೋಧಿತ ಪೋರ್ಟಲ್‌ಗೆ ಇಲೆಕ್ಟ್ರಾನಿಕ್ ಹಾಗೂ  ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ಸಚಿವಾಲಯದ ಆಶ್ರಯದಲ್ಲಿ ಭಾರತದ ಗೌರವಾನ್ವಿತ ರಾಷ್ಟ್ರಪತಿಗಳಿಂದ ನಾಗರಿಕರ ಡಿಜಿಟಲ್ ಸಬಲೀಕರಣ ವಿಭಾಗದಲ್ಲಿ 2022 ರ ಪ್ರತಿಷ್ಠಿತ ಡಿಜಿಟಲ್ ಇಂಡಿಯಾ ಪ್ರಶಸ್ತಿಯನ್ನು ಗೆದ್ದಿದೆ  ಮತ್ತು ರಾಷ್ಟ್ರೀಯ ಇ-ಆಡಳಿತ ಪ್ರಶಸ್ತಿ 2021-2022 'ಚಿನ್ನದ ವರ್ಗ'ದಲ್ಲಿ ಆಡಳಿತ ಸುಧಾರಣೆಗಳು ಮತ್ತು ಸಾರ್ವಜನಿಕ ಕುಂದುಕೊರತೆಗಳ  ಆಶ್ರಯದಲ್ಲಿ ಪ್ರಶಸ್ತಿಯನ್ನು ನೀಡಲಾಗಿದೆ.

ಇ-ಕೋರ್ಟ್ಸ್ (ಇ-ನ್ಯಾಯಾಲಯ) ಯೋಜನೆಯು ಇ-ಸಮಿತಿಯೊಂದಿಗೆ ಕೈಗೊಂಡ ಪ್ರಯತ್ನಗಳ ತಳಮಟ್ಟದ ಪ್ರಮುಖ ಫಲಿತಾಂಶಗಳನ್ನು ಗುರುತಿಸಿ, ಕೇಂದ್ರ ಸರ್ಕಾರವು ವಿಕಲಾಂಗ ವ್ಯಕ್ತಿಗಳ ಸಬಲೀಕರಣದಲ್ಲಿ ತೊಡಗಿರುವ ಸಂಸ್ಥೆಗಳಿಗೆ ರಾಷ್ಟ್ರೀಯ ಪ್ರಶಸ್ತಿಯಾದ ಇ-ಸಮಿತಿ, ಭಾರತದ ಸುಪ್ರೀಂ ಕೋರ್ಟ್ 2021 ಅನ್ನು ನೀಡಿದೆ. (ಉತ್ತಮ ರೀತಿಯಲ್ಲಿ ಸುಲಭವಾಗಿ ಪ್ರವೇಶಿಸಬಹುದಾದ ಸಾರಿಗೆ/ಮಾಹಿತಿ ವ್ಯವಸ್ಥೆ/ ಸಂವಹನ ತಂತ್ರಜ್ಞಾನ/ ಕಾನೂನು ಜಾಗವನ್ನು ಹೆಚ್ಚು ಸುಲಭವಾಗಿ  ಒಳಗೊಳ್ಳುವಂತೆ ಮಾಡುವುದಾಗಿದೆ.

ನ್ಯಾಯ ಸಚಿವಾಲಯದ ಕಾರ್ಯದರ್ಶಿ ಶ್ರೀ ಎಸ್.ಕೆ.ಜಿ.  ರಹತೆ, ಕಾರ್ಯದರ್ಶಿ ಅವರು, ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಸಚಿವರು ಮತ್ತು ಇತರ ಗಣ್ಯರನ್ನು ಸ್ವಾಗತಿಸಿದರು. ನೇಮಕಾತಿಗಳು ಮತ್ತು ಆಡಳಿತ ವಿಭಾಗದ ಹೆಚ್ಚುವರಿ ಕಾರ್ಯದರ್ಶಿ ಶ್ರೀ ರಾಜಿಂದರ್ ಕುಮಾರ್ ಕಶ್ಯಪ್
ಅವರು ನೇಮಕಾತಿ ಸಾಫ್ಟ್‌ವೇರ್‌ನ ಪ್ರಸ್ತುತಿಯನ್ನು  ಪ್ರಸ್ತುತ ಪಡಿಸಿದರು. ತಮ್ಮ ಪ್ರಸ್ತುತಿಯಲ್ಲಿ ಅವರು ಮಂಜೂರಾದ ಸಾಮರ್ಥ್ಯ, ನ್ಯಾಯಾಲಯಗಳಲ್ಲಿನ ಗೌರವಾನ್ವಿತ ನ್ಯಾಯಾಧೀಶರ ಕಾರ್ಯ ಸಾಮರ್ಥ್ಯ ಮತ್ತು ನೇಮಕಾತಿಯೊಂದಿಗೆ ಇಲಾಖೆಯು ಹೇಗೆ ವ್ಯವಹರಿಸುತ್ತದೆ ಎಂಬಂತಹ ವಿವಿಧ ವಿಷಯಗಳ ಕುರಿತು ವಿವರವಾಗಿ ತಿಳಿಸಿದರು. ವೆಬ್‌ಸೈಟ್ ಡ್ಯಾಶ್‌ಬೋರ್ಡ್‌ನಲ್ಲಿ ನವೀನ ರೀತಿಯಲ್ಲಿ ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್‌ಗಳ ನ್ಯಾಯಾಧೀಶರಿಗೆ ಸಂಬಂಧಿಸಿದ ವಿಷಯಗಳನ್ನು ಪ್ರಸ್ತುತ ಪಡಿಸಲಾಯಿತು.

ಡಿಜಿಟಲ್ ಇಂಡಿಯಾ ಪ್ರಶಸ್ತಿ, 2022, ಇ-ಆಡಳಿತ ಪ್ರಶಸ್ತಿ 2022 ಮತ್ತು ವಿಕಲಾಂಗ ವ್ಯಕ್ತಿಗಳ ಸಬಲೀಕರಣದಲ್ಲಿ ತೊಡಗಿರುವ ಸಂಸ್ಥೆಗಳಿಗೆ ರಾಷ್ಟ್ರೀಯ ಪ್ರಶಸ್ತಿಗೆ ವಿಶೇಷ ಒತ್ತು ನೀಡುವ ಇ-ಕೋರ್ಟ್ಸ್ ಪ್ರಾಜೆಕ್ಟ್‌ನ ಪ್ರಸ್ತುತಿಯನ್ನು ಜಂಟಿ ಕಾರ್ಯದರ್ಶಿ ಶ್ರೀ ಪ್ರವಾಸ್ ಪ್ರಶುನ್ ಪಾಂಡೆ ಅವರು ನೀಡಿದರು. ಪಾಂಡೆ ಅವರು ತಂತ್ರಜ್ಞಾನದ ಮಹತ್ವವನ್ನು ಒತ್ತಿ ಹೇಳಿದರು.  ನ್ಯಾಯಾಲಯಗಳು ಮತ್ತು ಸಾಮಾನ್ಯ ಸಾರ್ವಜನಿಕರ ಜೀವನದ ಮೇಲೆ ಅದರ ಪ್ರಭಾವ ಮತ್ತು ಇ-ಸಮಿತಿ, ಭಾರತದ ಸುಪ್ರೀಂ ಕೋರ್ಟ್‌ನ ಮಾರ್ಗದರ್ಶನದಡಿಯಲ್ಲಿ ನ್ಯಾಯಾಂಗ ಇಲಾಖೆಯ ಇಕೋರ್ಟ್‌ಗಳು ಹೇಗೆ ದೇಶದ ಜಿಲ್ಲಾ ಮತ್ತು ಅಧೀನ ನ್ಯಾಯಾಲಯಗಳಲ್ಲಿ ದೃಢವಾದ ಮೂಲಸೌಕರ್ಯವನ್ನು ರೂಪಿಸಲು ಸಹಾಯ ಮಾಡುತ್ತವೆ ಎಂಬುದನ್ನು ವಿವರಿಸಿದರು.  ಕಾರ್ಯಕ್ರಮದಲ್ಲಿ ಜಡ್ಜ್‌ಮೆಂಟ್ ಸರ್ಚ್ ಪೋರ್ಟಲ್‌ನಲ್ಲಿ ಕಿರುಚಿತ್ರವನ್ನು ಸಹ ಪ್ರದರ್ಶಿಸಲಾಯಿತು.

*****



(Release ID: 1893412) Visitor Counter : 136