ಬುಡಕಟ್ಟು ವ್ಯವಹಾರಗಳ ಸಚಿವಾಲಯ
azadi ka amrit mahotsav

​​​​​​​ನವದೆಹಲಿಯ ಜೆ.ಎಲ್.ಎನ್ ಕ್ರೀಡಾಂಗಣದಲ್ಲಿ ಎರಡು ದಿನಗಳ ಮೆಗಾ ಉತ್ಸವವಾದ 'ಆದಿ ಶೌರ್ಯ: 'ಪರ್ವ್ ಪರಾಕ್ರಮ್ ಕಾ' ದ ಮೊದಲ ದಿನವನ್ನು ಆಚರಿಸಲಾಯಿತು


​​​​​​​ರೋಮಾಂಚಕ, ವರ್ಣರಂಜಿತ ಬುಡಕಟ್ಟು ನೃತ್ಯ ಪ್ರದರ್ಶನಗಳು ಮನ ಸೂರೆಗೊಂಡವು

ಲೋಕಸಭೆಯ ಸ್ಪೀಕರ್ ಶ್ರೀ ಓಂ ಬಿರ್ಲಾ ಅವರು ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ್ದರು

ಕೇಂದ್ರ ಸಚಿವ ಶ್ರೀ ಅರ್ಜುನ್ ಮುಂಡಾ ಮತ್ತು ರಕ್ಷಣಾ ಮತ್ತು ಪ್ರವಾಸೋದ್ಯಮ ಖಾತೆ ರಾಜ್ಯ ಸಚಿವ ಶ್ರೀ ಅಜಯ್ ಭಟ್ ಅವರು ಈ ಸಂದರ್ಭದಲ್ಲಿ ಹಾಜರಿದ್ದರು

Posted On: 23 JAN 2023 10:45PM by PIB Bengaluru

ಪ್ರಮುಖ ಮುಖ್ಯಾಂಶಗಳು:
• ನವದೆಹಲಿಯ ಜೆ.ಎಲ್.ಎನ್. ಕ್ರೀಡಾಂಗಣದಲ್ಲಿ ಆದಿ ಶೌರ್ಯ: 'ಪರ್ವ್ ಪರಾಕ್ರಮ್ ಕಾ' ಕಾರ್ಯಕ್ರಮದಲ್ಲಿ ಲೋಕಸಭಾ ಸ್ಪೀಕರ್ ಶ್ರೀ ಓಂ ಬಿರ್ಲಾ ಮತ್ತು ಕೇಂದ್ರ ಬುಡಕಟ್ಟು ವ್ಯವಹಾರಗಳ ಸಚಿವ ಶ್ರೀ ಅರ್ಜುನ್ ಮುಂಡಾ ಭಾಗವಹಿಸಿದ್ದರು.
• ಧೈರ್ಯ, ಸಂಸ್ಕೃತಿ ಮತ್ತು ಪರಂಪರೆಯ ಆದರ್ಶಗಳನ್ನು ರಕ್ಷಿಸುವ ಬುಡಕಟ್ಟು ಜನರೊಂದಿಗೆ ಸಶಸ್ತ್ರ ಪಡೆಗಳ ಸಹಜೀವನವನ್ನು ಆದಿಶೌರ್ಯ ಪ್ರದರ್ಶಿಸುತ್ತದೆ.
• ಗ್ರ್ಯಾಂಡ್ ಫಿನಾಲೆಯಲ್ಲಿ ಪದ್ಮಶ್ರೀ ವಿಜೇತ ಪ್ರಸಿದ್ಧ ಹಿನ್ನೆಲೆ ಗಾಯಕ ಶ್ರೀ ಕೈಲಾಶ್ ಖೇರ್ ಅವರ ಗಾಯನ ಪ್ರದರ್ಶನವನ್ನು ಪ್ರದರ್ಶಿಸಲಾಯಿತು. ನಂತರ ಸಶಸ್ತ್ರ ಪಡೆಗಳ ಕಲಾವಿದರು ಮತ್ತು ಬುಡಕಟ್ಟು ನರ್ತಕರು ದೇಶಭಕ್ತಿ ಗೀತೆಗಳಿಗೆ ಆತ್ಮ ಪ್ರಚೋದಕ ಸಂಗೀತದ ಮೂಲಕ ಹೆಜ್ಜೆ ಹಾಕಿದರು.
• ರೋಮಾಂಚಕ, ವರ್ಣರಂಜಿತ ಪ್ರದರ್ಶನಗಳ ಕಲಾಕೃತಿಗಳು ಜೋರಾದ ಚಪ್ಪಾಳೆ ಮತ್ತು ಹುರಿದುಂಬಿಕೆಯನ್ನು ಪಡೆದವು. ಇದು ಪ್ರೇಕ್ಷಕರಲ್ಲಿ ಉತ್ಸಾಹವನ್ನು ಪ್ರಚೋದಿಸಿತು.

ಪರಾಕ್ರಮ ದಿವಸವಾದ ಇಂದು, ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ 126ನೇ ಜನ್ಮ ದಿನಾಚರಣೆಯ ಅಂಗವಾಗಿ ಬುಡಕಟ್ಟು ವ್ಯವಹಾರಗಳ ಸಚಿವಾಲಯ, ರಕ್ಷಣಾ ಸಚಿವಾಲಯದ ಸಹಯೋಗದೊಂದಿಗೆ, ಭಾರತೀಯ ಕೋಸ್ಟ್ ಗಾರ್ಡ್ ಸಮನ್ವಯ ಸಂಸ್ಥೆಯಾಗಿ ಭಾಗವಹಿಸಿದ 'ಆದಿ ಶೌರ್ಯ - ಪರ್ವ್ ಪರಾಕ್ರಮ್ ಕಾ' ಮೊದಲ ದಿನವನ್ನು ಬುಡಕಟ್ಟು ನೃತ್ಯಗಳ ವರ್ಣರಂಜಿತ ಪ್ರದರ್ಶನ ಮತ್ತು ಸಶಸ್ತ್ರ ಪಡೆಗಳ ಪ್ರದರ್ಶನಗಳೊಂದಿಗೆ ನವದೆಹಲಿಯ ಜವಾಹರ್ ಲಾಲ್ ನೆಹರು ಕ್ರೀಡಾಂಗಣದಲ್ಲಿ ಸಾವಿರಾರು ಜನರ ಸಮ್ಮುಖದಲ್ಲಿ ಆಚರಿಸಲಾಯಿತು.

 

ಈ ಗಮನಾರ್ಹ ಕಾರ್ಯಕ್ರಮದಲ್ಲಿ, ಲೋಕಸಭೆಯ ಸ್ಪೀಕರ್ ಶ್ರೀ ಓಂ ಬಿರ್ಲಾ, ಕೇಂದ್ರ ಬುಡಕಟ್ಟು ವ್ಯವಹಾರಗಳ ಸಚಿವ ಶ್ರೀ ಅರ್ಜುನ್ ಮುಂಡಾ ಹಾಗು ರಕ್ಷಣಾ ಮತ್ತು ಪ್ರವಾಸೋದ್ಯಮ ಖಾತೆ ರಾಜ್ಯ ಸಚಿವ ಶ್ರೀ ಅಜಯ್ ಭಟ್ ಅವರು ಸಾಂಪ್ರದಾಯಿಕ ದೀಪವನ್ನು ಬೆಳಗಿಸುವ ಮೂಲಕ ಉತ್ಸವವನ್ನು ಉದ್ಘಾಟಿಸಿದರು.

 

ಆದಿ ಶೌರ್ಯ ಭಾರತದ ವೈವಿಧ್ಯವನ್ನು ಪ್ರತಿನಿಧಿಸುವ ಉಸಿರುಗಟ್ಟಿಸುವ ಕಾತರದ ಮಿಲಿಟರಿ ಪ್ರದರ್ಶನಗಳು ಮತ್ತು ಬುಡಕಟ್ಟು ನೃತ್ಯಗಳ ಚಿತ್ರದರ್ಶಿಯ ಮೂಲಕ ಉತ್ಸಾಹ, ಶಕ್ತಿ ಮತ್ತು ಉತ್ಸಾಹವನ್ನು ಪ್ರದರ್ಶಿಸಿತು.

ಈ ಸಂದರ್ಭದಲ್ಲಿ ಮಾತನಾಡಿದ ಕೇಂದ್ರ ಬುಡಕಟ್ಟು ವ್ಯವಹಾರಗಳ ಸಚಿವ ಶ್ರೀ ಅರ್ಜುನ್ ಮುಂಡಾ, "ಬುಡಕಟ್ಟು ಜನರು 'ಜಲ, ಅರಣ್ಯ, ನೆಲವನ್ನು' ಗೌರವಿಸುವಂತೆ, ನಮ್ಮ ಸಶಸ್ತ್ರ ಪಡೆಗಳು ನಮ್ಮ ಗಡಿಗಳನ್ನು ಬಲಪಡಿಸಿ, ನಮ್ಮ ದೇಶದ ಸ್ವತ್ತುಗಳು, ಬುಡಕಟ್ಟು ಸಮುದಾಯಗಳು ಮತ್ತು ಅವರ ಪರಂಪರೆಯನ್ನು ರಕ್ಷಿಸುತ್ತವೆ. ಈ ಹಬ್ಬದ ಆಚರಣೆಯು ಸಶಸ್ತ್ರ ಪಡೆಗಳು ಮತ್ತು ಬುಡಕಟ್ಟು ನಾಗರಿಕರ ನಡುವಿನ ಸಹಜೀವನದ ಸಂಬಂಧಕ್ಕೆ ಗೌರವ ಸಲ್ಲಿಸುತ್ತದೆ" ಎಂದು ತಿಳಿಸಿದರು.

ಮುಂದುವರಿದು ಅವರು "ಬುಡಕಟ್ಟು ಜನರು ಪ್ರಕೃತಿ, ಪರಿಸರ ಮತ್ತು ಸಂಸ್ಕೃತಿಯ ರಕ್ಷಕರು ಮಾತ್ರವಲ್ಲದೆ, ಗಡಿಗಳಲ್ಲಿ ಮುಂಚೂಣಿಯಲ್ಲಿ ನಿಲ್ಲುವ ಮೂಲಕ ದೇಶದ ಭದ್ರತೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ. ಮತ್ತೊಂದು ಮಹತ್ವದ ಅಂಶವೆಂದರೆ ನಮ್ಮ ಬುಡಕಟ್ಟು ಸಹೋದರ ಸಹೋದರಿಯರು ಗಡಿಯಲ್ಲಿ ನಮ್ಮ ಸೈನಿಕರೊಂದಿಗೆ ಹೆಗಲಿಗೆ ಹೆಗಲು ನೀಡಿ ಅವರೊಂದಿಗೆ ನಿಂತಿದ್ದಾರೆ. ನಾವು ಸ್ವಾತಂತ್ರ್ಯ ಹೋರಾಟದ ಬಗ್ಗೆ ಅಧ್ಯಯನ ಮಾಡುವಾಗ, ಇತಿಹಾಸವು ಬುಡಕಟ್ಟು ಸಮುದಾಯದ ಶೌರ್ಯದ ಕಥೆಗಳಿಂದ ತುಂಬಿದೆ ಎಂದು ನಾವು ಅರ್ಥಮಾಡಿಕೊಳ್ಳಬೇಕು" ಎಂದು ಹೇಳಿದರು.

ಈ ಉತ್ಸವವು ಮಿಲಿಟರಿ ಟ್ಯಾಟೂನಲ್ಲಿ ಸಶಸ್ತ್ರ ಪಡೆಗಳ ಪರಾಕ್ರಮವನ್ನು ಪ್ರದರ್ಶಿಸಿ, ಭಾರತದಾದ್ಯಂತದ ನಮ್ಮ ವೈವಿಧ್ಯಮಯ ಬುಡಕಟ್ಟು ಸಂಸ್ಕೃತಿಯ ಸೌಂದರ್ಯವನ್ನು ಪ್ರದರ್ಶಿಸುವ ಮತ್ತು ಒಂದೇ ಭಾರತ, ಶ್ರೇಷ್ಠ ಭಾರತ ಎಂಬ ಸಂದೇಶವನ್ನು ಸಾರುವ ಮಿಲಿಟರಿ ಮತ್ತು ಬುಡಕಟ್ಟು ಸಮುದಾಯಗಳ ವಿವಿಧ ಸಾಹಸಭರಿತ ನೃತ್ಯ ಪ್ರದರ್ಶನಗಳನ್ನು ಒಳಗೊಂಡಿತ್ತು.

 

ಪ್ಯಾರಾಮೋಟರ್ ಗ್ಲೈಡಿಂಗ್, ಹಾಟ್ ಏರ್ ಬಲೂನ್, ಹಾರ್ಸ್ ಶೋ, ಮೋಟಾರ್ ಸೈಕಲ್ ಡಿಸ್ಪ್ಲೇ, ಏರ್ ವಾರಿಯರ್ ಡ್ರಿಲ್, ನೇವಿ ಬ್ಯಾಂಡ್ ಮತ್ತು ಖುಖ್ರಿ ಡ್ಯಾನ್ಸ್, ಗಟ್ಕಾ, ಮಲ್ಲಕಂಬ, ಕಲರಿಪೇಟು, ಥಂಗ್ಟಾ ಮುಂತಾದ ಒಂದು ಗಂಟೆಯ ಸಾಂಪ್ರದಾಯಿಕ ನೃತ್ಯ ಪ್ರದರ್ಶನಗಳನ್ನು ಒಳಗೊಂಡ ಮಿಲಿಟರಿ ಟ್ಯಾಟೂವನ್ನು ಕಾರ್ಯಕ್ರಮದಲ್ಲಿ ಅಳವಡಿಸಲಾಗಿತ್ತು.

ಅರುಣಾಚಲ ಪ್ರದೇಶ, ಜಾರ್ಖಂಡ್, ಒಡಿಶಾ, ಛತ್ತೀಸ್ ಗಢ, ಕೇರಳ, ರಾಜಸ್ಥಾನ, ಲಡಾಖ್, ಮಧ್ಯಪ್ರದೇಶ ಮತ್ತು ಇತರ ರಾಜ್ಯಗಳಿಂದ ಬಂದ ಬುಡಕಟ್ಟು ನರ್ತಕರು ಪ್ರೇಕ್ಷಕರನ್ನು ತಮ್ಮ ಕುಣಿತಕ್ಕೆ ತಲೆಬಾಗಿಸಿದವು. ಹಿಮಾಚಲ ಪ್ರದೇಶದ ಗಡ್ಡಿ ನಾಟಿ, ಗುಜರಾತ್ ನ ಸಿದ್ಧಿ ಧಮಾಲ್, ಲಡಾಖ್ ನ ಬಾಲ್ಟಿ ನೃತ್ಯ, ಜಮ್ಮು ಮತ್ತು ಕಾಶ್ಮೀರದ ಮಾಂಘೋ ನೃತ್ಯ, ಪಶ್ಚಿಮ ಬಂಗಾಳದ ಪುರುಲಿಯಾ ಚಾವು ಮತ್ತು ಇನ್ನೂ ಅನೇಕ ಸೊಗಸಾದ ನೃತ್ಯಗಳಿಗೆ ಪ್ರೇಕ್ಷಕರು ಸಾಕ್ಷಿಯಾದರು.

1200ಕ್ಕೂ ಹೆಚ್ಚು ಪ್ರದರ್ಶಕರು ತಮ್ಮ ಪ್ರತಿಭಾವಂತ ಪ್ರದರ್ಶನಗಳಿಂದ ನಗರವನ್ನು ಮಂತ್ರಮುಗ್ಧಗೊಳಿಸಿದರು. ಸಂದರ್ಶಕರನ್ನು ಆಕರ್ಷಿಸಲು ಕ್ರೀಡಾಂಗಣ ಸಂಕೀರ್ಣದ ಒಳಗೆ ಮತ್ತು ಹೊರಗೆ ಸೃಜನಶೀಲ ಬ್ಯಾನರ್ ಗಳು ಮತ್ತು ಬುಡಕಟ್ಟು ಕಲೆಗಳನ್ನು ಸಹ ಪ್ರದರ್ಶಿಸಲಾಗಿತ್ತು. ಇದಲ್ಲದೆ, ವಿಭಿನ್ನ ಸ್ಟ್ರೋಬ್ ಲೈಟ್ ಎಫೆಕ್ಟ್ ಗಳು ಮತ್ತು ಆಕರ್ಷಕ ಆಡಿಯೊ ದೃಶ್ಯಗಳು ಕಿಕ್ಕಿರಿದ ಪ್ರದರ್ಶನಗಳಿಗೆ ಪೂರಕವಾಗಿದ್ದವು.

ಗ್ರ್ಯಾಂಡ್ ಫಿನಾಲೆಯಲ್ಲಿ ಪದ್ಮಶ್ರೀ ಪುರಸ್ಕೃತ ಹಿನ್ನೆಲೆ ಗಾಯಕ ಶ್ರೀ ಕೈಲಾಶ್ ಖೇರ್ ಅವರ ಗಾಯನ ಪ್ರದರ್ಶನವನ್ನು ನಡೆಸಲಾಯಿತು. ನಂತರ ಸಶಸ್ತ್ರ ಪಡೆಗಳ ಕಲಾವಿದರು ಮತ್ತು ಬುಡಕಟ್ಟು ನರ್ತಕರು ದೇಶಭಕ್ತಿ ಗೀತೆಗಳಿಗೆ ಸಂಗೀತದ ಮೂಲಕ ಜೊತೆಗೂಡಿದರು.

ರಕ್ಷಣಾ ಸಚಿವಾಲಯ, ಭಾರತೀಯ ಕೋಸ್ಟ್ ಗಾರ್ಡ್ ಮತ್ತು ಬುಡಕಟ್ಟು ವ್ಯವಹಾರಗಳ ಸಚಿವಾಲಯದ ಹಿರಿಯ ಅಧಿಕಾರಿಗಳು ಈ ಸಂದರ್ಭದಲ್ಲಿ ಹಾಜರಿದ್ದರು.

ಈ ಕಾರ್ಯಕ್ರಮಕ್ಕೆ ಇಂದು 40,000ಕ್ಕೂ ಹೆಚ್ಚು ಜನರು ಆಗಮಿಸಿದ್ದರು. ಏಕಲವ್ಯ ಮಾದರಿ ವಸತಿ ಶಾಲೆಗಳ (ಇ.ಎಂ.ಆರ್.ಎಸ್.) ವಿದ್ಯಾರ್ಥಿಗಳು ಕೂಡಾ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. 

ಹಾಜರಿದ್ದ ಎಲ್ಲರೂ ರಾಷ್ಟ್ರಗೀತೆ ಹಾಡುವುದರೊಂದಿಗೆ ಕಾರ್ಯಕ್ರಮ ಕೊನೆಗೊಂಡಿತು.

ಅದೇ ಸ್ಥಳ ಮತ್ತು ಸಮಯದಲ್ಲಿ ನಾಳೆ ಪುನರಾವರ್ತಿತ ಪ್ರದರ್ಶನವನ್ನು ನಿಗದಿಪಡಿಸಲಾಗಿದೆ.

ಪ್ರೇಕ್ಷಕರು ತಮ್ಮ ಆಸನಗಳನ್ನು https://in.bookmyshow.com/ ಉಚಿತವಾಗಿ ಕಾಯ್ದಿರಿಸಲು ಆಹ್ವಾನಿಸಲಾಗಿದೆ.

******

 


(Release ID: 1893233) Visitor Counter : 198


Read this release in: English , Urdu , Hindi