ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ

‘ಪರಾಕ್ರಮ್ ದಿವಸ್’ ಅಂಗವಾಗಿ 500 ಕೇಂದ್ರೀಯ ವಿದ್ಯಾಲಯಗಳಲ್ಲಿ ರಾಷ್ಟ್ರಮಟ್ಟದ ಚಿತ್ರಕಲಾ ಸ್ಪರ್ಧೆ ಆಯೋಜನೆ

Posted On: 22 JAN 2023 3:15PM by PIB Bengaluru

ಪಿಐಬಿ ದೆಹಲಿ ಜನವರಿ 22: ಭಾರತದ ಪ್ರಮುಖ ಸ್ವಾತಂತ್ರ್ಯ ಹೋರಾಟಗಾರ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಜನ್ಮದಿನ- ಜನವರಿ 23ರಂದು 'ಪರಾಕ್ರಮ ದಿವಸ'(Parakram Diwas) ಆಚರಿಸಲಾಗುತ್ತದೆ, ಮಹಾನ್ ನಾಯಕನ ಜೀವನದ ಬಗ್ಗೆ ವಿದ್ಯಾರ್ಥಿಗಳಲ್ಲಿ ಸ್ಫೂರ್ತಿ ತುಂಬಿಸುವುದು ಮತ್ತು ಅವರಲ್ಲಿ ದೇಶಭಕ್ತಿಯ ಮನೋಭಾವವನ್ನು ಬೆಳೆಸುವುದು ಈ ದಿನಾಚರಣೆಯ ಉದ್ದೇಶವಾಗಿದೆ. 

-ಇದರ ಅಂಗವಾಗಿ ಕೇಂದ್ರೀಯ ವಿದ್ಯಾಲಯಗಳಲ್ಲಿ ವಿದ್ಯಾರ್ಥಿಗಳಿಗೆ ರಾಷ್ಟ್ರಮಟ್ಟದ ಚಿತ್ರಕಲಾ ಸ್ಪರ್ಧೆ ಆಯೋಜಿಸಲಾಗಿದ್ದು, ಪ್ರಧಾನಿ ನರೇಂದ್ರ ಮೋದಿಯವರು ಬರೆದ 'ಪರೀಕ್ಷಾ ವಾರಿಯರ್' ಪುಸ್ತಕವನ್ನು ಆಧರಿಸಿ ಸ್ಪರ್ಧೆಯಲ್ಲಿ ವಿದ್ಯಾರ್ಥಿಗಳಿಗೆ ವಿಷಯ ನೀಡಲಾಗುತ್ತದೆ.
-ಈ ಸ್ಪರ್ಧೆಯಲ್ಲಿ ದೇಶಾದ್ಯಂತ ಒಟ್ಟು 50,000 ವಿದ್ಯಾರ್ಥಿಗಳು ಭಾಗವಹಿಸುವ ನಿರೀಕ್ಷೆಯಿದೆ.

ಇನ್ನು ಪ್ರಧಾನ ಮಂತ್ರಿ ಶ್ರೀ ಮೋದಿಯವರು ನಡೆಸಿಕೊಡಲಿರುವ ಪರೀಕ್ಷಾ ಪೆ ಚರ್ಚಾ 2023, ವಿದ್ಯಾರ್ಥಿಗಳ ಪರೀಕ್ಷಾ ಒತ್ತಡವನ್ನು ನಿಭಾಯಿಸಲು ಒಂದು ಅನನ್ಯ ಉಪಕ್ರಮವಾಗಿದೆ. ಈ ಕಾರ್ಯಕ್ರಮ ಸರಣಿಯಲ್ಲಿ ಜನವರಿ 23ರಂದು ದೇಶಾದ್ಯಂತ 500 ಕೇಂದ್ರೀಯ ವಿದ್ಯಾಲಯಗಳಲ್ಲಿ ರಾಷ್ಟ್ರವ್ಯಾಪಿ ಚಿತ್ರಕಲೆ ಸ್ಪರ್ಧೆಯನ್ನು ಆಯೋಜಿಸಲಾಗಿದೆ. ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಜನ್ಮದಿನವನ್ನು 'ಪರಾಕ್ರಮ ದಿವಸ' ಎಂದು ಆಚರಿಸಲಾಗುತ್ತಿದ್ದು, ಇದು ಮಹಾನ್ ನಾಯಕನ ಜೀವನದ ಬಗ್ಗೆ ವಿದ್ಯಾರ್ಥಿಗಳ ಮನಸ್ಸಿನಲ್ಲಿ ಸ್ಫೂರ್ತಿ ತುಂಬಲು ಮತ್ತು ಅವರಲ್ಲಿ ದೇಶಭಕ್ತಿಯ ಮನೋಭಾವವನ್ನು ಬೆಳೆಸಲು ಸಹಾಯವಾಗಲಿದೆ. 

ವಿದ್ಯಾರ್ಥಿಗಳ ಸೃಜನಶೀಲ ಅಭಿವ್ಯಕ್ತಿಗಳನ್ನು ಉತ್ತೇಜಿಸಲು, ಚಿತ್ರಕಲೆ ಸ್ಪರ್ಧೆ ಸೇರಿದಂತೆ ದೇಶಾದ್ಯಂತ ಶಾಲೆಗಳಲ್ಲಿ ಶಿಕ್ಷಣ ಸಚಿವಾಲಯವು ವಿವಿಧ ಚಟುವಟಿಕೆಗಳನ್ನು ಆಯೋಜಿಸುತ್ತಿದೆ.

ಸಿಬಿಎಸ್ ಇ ಪಠ್ಯಕ್ರಮ ಅಳವಡಿಕೆ ಶಾಲೆಗಳ ವಿದ್ಯಾರ್ಥಿಗಳು, ರಾಜ್ಯ ಮಂಡಳಿಗಳು, ನವೋದಯ ವಿದ್ಯಾಲಯಗಳು ಮತ್ತು ಕೇಂದ್ರೀಯ ವಿದ್ಯಾಲಯಗಳ ವಿದ್ಯಾರ್ಥಿಗಳು ಈ ಅನನ್ಯ ಸೃಜನಶೀಲ ಕಲ್ಪನೆಗಳ ಅಭಿವ್ಯಕ್ತಿಯಲ್ಲಿ ವೈವಿಧ್ಯಮಯ ಭಾಗವಹಿಸುವಿಕೆಯನ್ನು ನಿರೀಕ್ಷಿಸಲಾಗಿದೆ. ಪ್ರಧಾನಮಂತ್ರಿಯವರು ಬರೆದಿರುವ 'ಪರೀಕ್ಷಾ ವಾರಿಯರ್'  ಪುಸ್ತಕವನ್ನು ಆಧರಿಸಿ ಸ್ಪರ್ಧೆಯಲ್ಲಿ ವಿದ್ಯಾರ್ಥಿಗಳಿಗೆ ವಿಷಯ ನೀಡಲಾಗುತ್ತದೆ.

ದೇಶಾದ್ಯಂತ ಈ ಚಿತ್ರಕಲಾ ಸ್ಪರ್ಧೆಯಲ್ಲಿ ಒಟ್ಟು 50 ಸಾವಿರ ವಿದ್ಯಾರ್ಥಿಗಳು ಭಾಗವಹಿಸುವ ನಿರೀಕ್ಷೆಯಿದೆ. ಕಾರ್ಯಕ್ರಮವನ್ನು ಆಯೋಜಿಸಲಿರುವ ನೋಡಲ್ ಕೇಂದ್ರೀಯ ವಿದ್ಯಾಲಯದ ವಿವಿಧ ಶಾಲೆಗಳ 100 ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಭಾಗವಹಿಸಲಿದ್ದಾರೆ. 70 ವಿದ್ಯಾರ್ಥಿಗಳನ್ನು ಜಿಲ್ಲೆಯ ರಾಜ್ಯ ಬೋರ್ಡ್ ಮತ್ತು ಸಿಬಿಎಸ್ ಇ ಶಾಲೆಗಳ ಹತ್ತಿರದ ಶಾಲೆಗಳಿಂದ ಆಹ್ವಾನಿಸಲಾಗಿದೆ, ನವೋದಯ ವಿದ್ಯಾಲಯಗಳಿಂದ 10 ಮತ್ತು ನೋಡಲ್ ಕೇಂದ್ರೀಯ ವಿದ್ಯಾಲಯಗಳಿಂದ 20 ವಿದ್ಯಾರ್ಥಿಗಳು ಇರುತ್ತಾರೆ. 

ಸ್ಪರ್ಧೆಯಲ್ಲಿ 5 ಅತ್ಯುತ್ತಮ ಪ್ರವೇಶಗಳಿಗೆ ಸ್ವಾತಂತ್ರ್ಯ ಹೋರಾಟಗಾರರು ಮತ್ತು ರಾಷ್ಟ್ರೀಯ ಪ್ರಾಮುಖ್ಯವನ್ನು ಸಾರುವ ವಿಷಯಗಳ ಪುಸ್ತಕಗಳ ಸೆಟ್  ಪ್ರಮಾಣಪತ್ರವನ್ನು ನೀಡಲಾಗುತ್ತದೆ. ಈ ಚಿತ್ರಕಲಾ ಸ್ಪರ್ಧೆಯನ್ನು ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಉತ್ಸಾಹದಿಂದ ಎದುರು ನೋಡುತ್ತಿದ್ದಾರೆ.

*****



(Release ID: 1892872) Visitor Counter : 165