ಕಲ್ಲಿದ್ದಲು ಸಚಿವಾಲಯ

ಬ್ಯಾಂಕ್ ಗ್ಯಾರಂಟಿ ಪರಿಷ್ಕರಣೆ ಸಡಿಲಿಕೆ ಕಲ್ಲಿದ್ದಲು ಸಚಿವಾಲಯದ ಪ್ರಕಟಣೆ 


ವಾಣಿಜ್ಯ ಕಲ್ಲಿದ್ದಲು ಬ್ಲಾಕ್ ಹರಾಜು ಬಿಡ್ ಸಲ್ಲಿಕೆಗೆ ಕೊನೆ ದಿನ ಜನವರಿ 30, 2023 ರವರೆಗೆ ವಿಸ್ತರಣೆ

Posted On: 14 JAN 2023 11:55AM by PIB Bengaluru

ಕಲ್ಲಿದ್ದಲು ಸಚಿವಾಲಯ 141 ಕಲ್ಲಿದ್ದಲು ಗಣಿಗಳ 6ನೇ ಸುತ್ತಿನ ಹಾಗೂ ಐದನೇ ಸುತ್ತಿನ ಎರಡನೇ ಪ್ರಯತ್ನದ ವಾಣಿಜ್ಯ ಕಲ್ಲಿದ್ದಲು ಗಣಿ ಹರಾಜನ್ನು 2022 ರ ನವೆಂಬರ್ 3 ರಿಂದ ಆರಂಭಿಸಿದೆ. ಕೈಗಾರಿಕೆಗಳ ಬೇಡಿಕೆ ಆಧರಿಸಿ ಮತ್ತು ಸುಲಲಿತ ವ್ಯಾಪಾರ (ಈಸ್ ಆಫ್ ಡೂಯಿಂಗ್ ಬ್ಯುಸಿನೆಸ್) ಉತ್ತೇಜನಕ್ಕೆ, ಆಯಾ ಕಲ್ಲಿದ್ದಲು ಗಣಿಗಳಿಗೆ ಗಣಿ ಆರಂಭ ಅನುಮತಿ ದೊರೆತಾಗ ಪರ್ಫಾರ್ಮೆನ್ಸ್ ಬ್ಯಾಂಕ್ ಗ್ಯಾರಂಟಿಯ (ಪಿಬಿಜಿ - ಕಾರ್ಯ ಪೂರ್ಣ ಗೊಳಿಸಲು ಸಂಸ್ಥೆ ವಿಫಲವಾದಲ್ಲಿ  ಬ್ಯಾಂಕ್ ನಿಂದ ಪರಿಹಾರದ) ಮೊದಲ ಪರಿಷ್ಕರಣೆಗೆ ಸಚಿವಾಲಯ ಮುಂದಾಗಿದೆ.

ಟೆಂಡರ್ ದಾಖಲೆಯ ನಿಯಮಗಳನುಸಾರ, ಯಶಸ್ವಿ ಹರಾಜಾದ ಪ್ರತಿ ಕಲ್ಲಿದ್ದಲು ಗಣಿ ಸಂಬಂಧಿತವಾಗಿ ಸಲ್ಲಿಸಲಾಗುವ ಪಿಬಿಜಿ ಅನ್ನು ವಾರ್ಷಿಕವಾಗಿ ಏಪ್ರಿಲ್ ತಿಂಗಳಿನ ರಾಷ್ಟ್ರೀಯ ಕಲ್ಲಿದ್ದಲು ಸೂಚ್ಯಂಕ (ಎನ್ ಸಿ ಐ) ಆಧಾರಿತವಾಗಿ ವರ್ಷಾರಂಭದಲ್ಲಿ ಪರಿಷ್ಕರಿಸಬೇಕು. 2020 ರಲ್ಲಿ ಮೊದಲ ವಾಣಿಜ್ಯ ಕಲ್ಲಿದ್ದಲು ಗಣಿ ಹರಾಜಿನ ಅನಾವರಣದ ನಂತರ ಎನ್ ಸಿ ಐ ದ್ವಿಗುಣಗೊಂಡಿದ್ದು, ಪಿಬಿಜಿ ಪರಿಷ್ಕರಣಾ ನಿಯಮಗಳಲ್ಲಿ ಸಡಿಲಿಕೆ ತರುವಂತೆ ಕೈಗಾರಿಕಾ ವಲಯದಿಂದ ಅನೇಕ ಮನವಿಗಳು ಸ್ವೀಕೃತವಾಗಿವೆ. ಹಿಂದೆಂದೂ ಇರದಷ್ಟು ಪ್ರಮಾಣದಲ್ಲಿ ಎನ್ ಸಿ ಐ ಹೆಚ್ಚಳವಾಗಿರುವುದು ಯಶಸ್ವಿ ಬಿಡ್ಡರ್ ಗಳ ಮೇಲೂ ಹಣಕಾಸು ಹೊರೆ ಹೆಚ್ಚಾಗುವಂತೆ ಮಾಡಿದೆ. ಇದರಿಂದಾಗಿ ಪೂರ್ವ ಕಾರ್ಯಾಚರಣೆ ಹಂತದಲ್ಲಿರುವ ಗಣಿಗಳಿಗೆ ಗಣಿ ಸಂಬಂಧಿತ ಚಟುವಟಿಕೆಗಳಿಗಾಗಿ ಹಣಕಾಸಿನ ಲಭ್ಯತೆ ಬಾಧಿತವಾಗಿದೆ. 

ಈ ಹೂಡಿಕೆದಾರ ಸ್ನೇಹಿ ಉಪಕ್ರಮವು ಕಲ್ಲಿದ್ದಲು ಗಣಿಗಳ ಕಾರ್ಯಾಚರಣೆ ಹಂತದಲ್ಲಿ ಬಿಡ್ಡರ್ ಗಳ ಹಣಕಾಸು ಹೊರೆಯನ್ನು ತಗ್ಗಿಸುವ ನಿರೀಕ್ಷೆ ಇದೆ ಮತ್ತು ವಾಣಿಜ್ಯ ಕಲ್ಲಿದ್ದಲು ಗಣಿ ಹರಾಜುಗಳಲ್ಲಿ ಭಾಗವಹಿಸುವಿಕೆಯನ್ನು ಹೆಚ್ಚಿಸುವ ಆಶಯ ಹೊಂದಲಾಗಿದೆ. ಈ ಹಿನ್ನೆಲೆಯಲ್ಲಿ ಈ ಪರಿಷ್ಕರಣೆಯನ್ನು ಜಾರಿಗೆ ತರಲು ಪ್ರಸ್ತುತ ನಡೆಯುತ್ತಿರುವ ಹರಾಜು ಸುತ್ತಿನ ಕೊನೆ ದಿನಾಂಕವನ್ನು ಸಚಿವಾಲಯ ವಿಸ್ತರಿಸಿದೆ. ಬಿಡ್ ಸಲ್ಲಿಸಲು ಇದ್ದ 2023 ಜನವರಿ 13 ರ ಗಡುವನ್ನು 2023 ರ ಜನವರಿ 30 ರವರೆಗೆ ವಿಸ್ತರಿಸಲಾಗಿದೆ.

*****(Release ID: 1891278) Visitor Counter : 125