ಕಲ್ಲಿದ್ದಲು ಸಚಿವಾಲಯ

ಸಿಎಂಪಿಡಿಐಎಲ್ ಸಂಸ್ಥೆಯಿಂದ ಹೊಸ ಧೂಳು ನಿಯಂತ್ರಣ ತಂತ್ರಜ್ಞಾನ


ಕಲ್ಲಿದ್ದಲು ಗಣಿಗಳು, ಉಷ್ಣ ವಿದ್ಯುತ್ ಸ್ಥಾವರಗಳು, ರೈಲ್ವೆ ಸೈಡಿಂಗ್‌ ಗಳು ಮತ್ತು ಬಂದರುಗಳಲ್ಲಿ ಉಪಯುಕ್ತವಾಗಿದೆ

Posted On: 12 JAN 2023 11:44AM by PIB Bengaluru

ಗಣಿಗಾರಿಕೆ ಪ್ರದೇಶಗಳಲ್ಲಿ ಅನಿಯಮಿತ ಧೂಳನ್ನು ಕಡಿಮೆ ಮಾಡಲು ಮತ್ತು ನಿಯಂತ್ರಿಸಲು, ಕೇಂದ್ರೀಯ ಗಣಿ ಯೋಜನೆ ಮತ್ತು ವಿನ್ಯಾಸ ಸಂಸ್ಥೆ (ಸಿಎಂಪಿಡಿಐಎಲ್), ರಾಂಚಿ (ಕೋಲ್ ಇಂಡಿಯಾ ಲಿಮಿಟೆಡ್‌ನ ಅಂಗಸಂಸ್ಥೆ) "ಅನಿಯಮಿತ ಧೂಳಿನ ಉತ್ಪಾದನೆ ಮತ್ತು ಚಲನೆಯನ್ನು ನಿಯಂತ್ರಿಸುವ ವ್ಯವಸ್ಥೆ ಮತ್ತು ವಿಧಾನ" ವನ್ನು ಕಂಡುಹಿಡಿದಿದೆ ಮತ್ತು ಡಿಸೆಂಬರ್, 2022 ರಲ್ಲಿ ಅದಕ್ಕೆ ಪೇಟೆಂಟ್ ಪಡೆದಿದೆ (ಪೇಟೆಂಟ್ ಸಂಖ್ಯೆ. 416055). ಈ ವ್ಯವಸ್ಥೆಯನ್ನು ಗಣಿಗಳಲ್ಲಿ, ಉಷ್ಣ ವಿದ್ಯುತ್ ಸ್ಥಾವರಗಳಲ್ಲಿ, ರೈಲ್ವೇ ಸೈಡಿಂಗ್‌ಗಳಲ್ಲಿ, ಬಂದರುಗಳಲ್ಲಿ, ನಿರ್ಮಾಣ ಸ್ಥಳಗಳಲ್ಲಿ ಕಲ್ಲಿದ್ದಲು ಅಥವಾ ಇತರ ಖನಿಜಗಳು,  ಅನಿಯಮಿತ ತ್ಯಾಜ್ಯ ವಸ್ತುಗಳನ್ನು ಬಯಲಿನಲ್ಲಿ ಸಂಗ್ರಹಿಸಲಾಗಿರುವ ಕಡೆ ಬಳಸಬಹುದು. ತೆರೆದ ಮೂಲಗಳಿಂದ ಧೂಳು ಉತ್ಪಾದನೆಯನ್ನು ಕಡಿಮೆ ಮಾಡುವುದರ ಜೊತೆಗೆ, ಇದು ಶಬ್ದವನ್ನೂ ಸಹ ತಗ್ಗಿಸುತ್ತದೆ.
 
ಕಲ್ಲಿದ್ದಲು ಸಚಿವಾಲಯದ ಅಡಿಯಲ್ಲಿ ಕಲ್ಲಿದ್ದಲು, ಲಿಗ್ನೈಟ್ ನ ಸರ್ಕಾರಿ ಸ್ವಾಮ್ಯದ ಉದ್ದಿಮೆಗಳು ದೇಶದ ಇಂಧನ ಅಗತ್ಯಗಳನ್ನು ಪೂರೈಸಲು ಪರಿಸರಸ್ನೇಹಿಯ ರೀತಿಯಲ್ಲಿ ಗುಣಮಟ್ಟದ ಕಲ್ಲಿದ್ದಲನ್ನು ಉತ್ಪಾದಿಸಲು ಸತತವಾಗಿ ಶ್ರಮಿಸುತ್ತವೆ. ಕಲ್ಲಿದ್ದಲು ಗಣಿಗಾರಿಕೆ ಮತ್ತು ಸಂಬಂಧಿತ ಚಟುವಟಿಕೆಗಳಿಂದ ಉಂಟಾಗುವ ವಾಯು ಮಾಲಿನ್ಯವನ್ನು ತಡೆಗಟ್ಟಲು ಅಥವಾ ತಗ್ಗಿಸಲು, ಕಲ್ಲಿದ್ದಲು, ಲಿಗ್ನೈಟ್ ನ ಸರ್ಕಾರಿ ಸ್ವಾಮ್ಯದ ಉದ್ದಿಮೆಗಳು  ವಿವಿಧ ಕ್ರಮಗಳನ್ನು ಅಳವಡಿಸಿಕೊಳ್ಳುತ್ತಿವೆ. ಪ್ಯುಗಿಟಿವ್ ಧೂಳು , ಅನಿಯಮಿತ ಧೂಳು, ಒಂದು ರೀತಿಯ ಕಣಗಳ ವಸ್ತುವಾಗಿದ್ದು ಅದರಿಂದ  ವಾಯು ಮಾಲಿನ್ಯವಾಗುತ್ತದೆ, ಇದು ವಿವಿಧ ಮೂಲಗಳಿಂದ ಗಾಳಿಗೆ ಒಡ್ಡಿಕೊಳ್ಳುತ್ತದೆ ಮತ್ತು ಸೀಮಿತ ಹರಿವಿನ ಹರಿವಿನ ಮೂಲಕ ವಾತಾವರಣಕ್ಕೆ ಬಿಡುಗಡೆಯಾಗುವುದಿಲ್ಲ.


ಫ್ಯುಗಿಟಿವ್ ಧೂಳಿನ ನಿಯಂತ್ರಣಕ್ಕಾಗಿ ವಿಂಡ್‌ಬ್ರೇಕ್ ಮತ್ತು ವರ್ಟಿಕಲ್ ಗ್ರೀನರಿ ಸಿಸ್ಟಮ್ (ವಿಜಿಎಸ್) ಸಿಂಕ್ರೊನೈಸ್ಡ್ ಅಪ್ಲಿಕೇಶನ್ - ಹೊಸ  ಯೋಚನೆ 

 
ವಿಂಡ್ ಬ್ರೇಕ್ ಮತ್ತು ವಿಜಿಎಸ್‌  ನ ಸಿಂಕ್ರೊನೈಸ್ಡ್ ಅಪ್ಲಿಕೇಶನ್


ಈ ಆವಿಷ್ಕಾರವು ಫ್ಯುಗಿಟಿವ್ , ಅನಿಯಮಿತ ಧೂಳಿನ ಉತ್ಪಾದನೆ ಮತ್ತು ಪ್ರಸರಣವನ್ನು ಕಡಿಮೆ ಮಾಡಲು ವಿಂಡ್‌ಬ್ರೇಕ್ (ಡಬ್ಲ್ಯೂಬಿ) ಮತ್ತು ವರ್ಟಿಕಲ್ ಗ್ರೀನರಿ ಸಿಸ್ಟಮ್ (ವಿಜಿಎಸ್) ಸಿಂಕ್ರೊನೈಸ್ ಮಾಡಿದ ಅಪ್ಲಿಕೇಶನ್‌ಗೆ ಸಂಬಂಧಿಸಿದೆ. ಡಬ್ಲ್ಯೂಬಿ ಮತ್ತು ವಿಜಿಎಸ್ ಗಳನ್ನು ಕ್ರಮವಾಗಿ ಫ್ಯುಗಿಟಿವ್ ಧೂಳಿನ ಮೂಲ(ಗಳಿಗೆ) ಸಂಬಂಧಿಸಿದಂತೆ ಮೇಲ್ಗಾಳಿ ಮತ್ತು ಇಳಿಮುಖ ದಿಕ್ಕಿನಲ್ಲಿ ಸ್ಥಾಪಿಸಲಾಗಿದೆ. ಡಬ್ಲ್ಯೂಬಿ ಗಾಳಿಯು ಮೂಲದ ಕಡೆಗೆ ಬರುವ ವೇಗವನ್ನು ಕಡಿಮೆ ಮಾಡುತ್ತದೆ ಮತ್ತು ಆದ್ದರಿಂದ, ಮೂಲದ ಮೇಲೆ ಬೀಸುವಾಗ ಧೂಳನ್ನು ತೆಗೆದುಕೊಳ್ಳಲು ಸುತ್ತುವರಿದ ಗಾಳಿಯ ತೀವ್ರತೆಯನ್ನು ಕಡಿಮೆ ಮಾಡುತ್ತದೆ. ‌ ವಿಜಿಎಸ್‌ ಫಿಲ್ಟರ್ ಆಗಿ ಕಾರ್ಯನಿರ್ವಹಿಸುತ್ತದೆ ಮತ್ತು ಗಾಳಿಯ ಜೊತೆಗೆ  ಗಾಳಿಯ ಸಾಗುವ ದಿಕ್ಕಿಗೆ ರಿಸೆಪ್ಟರ್‌ ಗಳ ಕಡೆಗೆ ಚಲಿಸುವ ಉಳಿದ ಧೂಳಿನ ಪ್ರಮಾಣವನ್ನು ಕಡಿಮೆ ಮಾಡುತ್ತದೆ. ಆದ್ದರಿಂದ,  ಇಳಿ ಮುಖವಾದ ಗಾಳಿಯ ದಿಕ್ಕಿನಲ್ಲಿ ನೆಲೆಗೊಂಡಿರುವ ವಿವಿಧ ರಿಸೆಪ್ಟರ್‌ (ಗ್ರಾಹಕ)ಗಳಲ್ಲಿ ಸುತ್ತುವರಿದ ಗಾಳಿಯಲ್ಲಿ ಧೂಳಿನ ಸಾಂದ್ರತೆಯಲ್ಲಿ ಗಮನಾರ್ಹವಾದ ಕಡಿತವಾಗುತ್ತದೆ. ಈ ತಂತ್ರವನ್ನು ಕೆಳಗಿನ ಚಿತ್ರದಲ್ಲಿ ವಿವರಿಸಲಾಗಿದೆ:

ವಿಂಡ್ ಬ್ರೇಕ್ ಮತ್ತು ವಿಜಿಎಸ್ ನ ಸಿಂಕ್ರೊನೈಸ್ಡ್ ಅಪ್ಲಿಕೇಶನ್ನ ಕಾರ್ಯವಿಧಾನ



(Release ID: 1890699) Visitor Counter : 135


Read this release in: English , Urdu , Hindi , Tamil