ಪ್ರಧಾನ ಮಂತ್ರಿಯವರ ಕಛೇರಿ

ಮಧ್ಯಪ್ರದೇಶದ ಇಂದೋರ್‌ನಲ್ಲಿ ಜಾಗತಿಕ ಹೂಡಿಕೆದಾರರ ಶೃಂಗಸಭೆ 2023 ಉದ್ದೇಶಿಸಿ ಪ್ರಧಾನಮಂತ್ರಿ ವೀಡಿಯೊ ಕಾನ್ಫರೆನ್ಸ್ ಭಾಷಣ

​​​​​​​"ನಂಬಿಕೆ ಮತ್ತು ಆಧ್ಯಾತ್ಮಿಕತೆಯಿಂದ ಪ್ರವಾಸೋದ್ಯಮದವರೆಗೆ, ಕೃಷಿಯಿಂದ ಶಿಕ್ಷಣ ಮತ್ತು ಕೌಶಲ್ಯ ಅಭಿವೃದ್ಧಿ ತನಕ, ಮಧ್ಯಪ್ರದೇಶ ಅದ್ಭುತ ತಾಣ"

"ಜಾಗತಿಕ ಆರ್ಥಿಕತೆಯ ಮೇಲೆ ನಿಗಾ ಇಡುವ ಮಹತ್ತರ ಸಂಸ್ಥೆಗಳು ಮತ್ತು ವಿಶ್ವಾಸಾರ್ಹ ಧ್ವನಿಗಳು ಭಾರತದ ಮೇಲೆ ಅಭೂತಪೂರ್ವ ವಿಶ್ವಾಸ ಹೊಂದಿವೆ"

"2014ರಿಂದ ಭಾರತವು 'ಸುಧಾರಣೆ, ಪರಿವರ್ತನೆ ಮತ್ತು ಕಾರ್ಯಕ್ಷಮತೆ'ಯ ಮಾರ್ಗದಲ್ಲಿ ಮುನ್ನಡೆದಿದೆ"

"ಸ್ಥಿರ ಸರ್ಕಾರ, ನಿರ್ಣಾಯಕ ಸರ್ಕಾರ, ಸರಿಯಾದ ಉದ್ದೇಶಗಳೊಂದಿಗೆ ನಡೆಯುತ್ತಿರುವ ಸರ್ಕಾರ, ಅಭೂತಪೂರ್ವ ವೇಗದಲ್ಲಿ ಅಭಿವೃದ್ಧಿ ತೋರಿಸುತ್ತಿದೆ"

"ಸಮರ್ಪಿತ ಸರಕು ಸಾಗಣೆ ಕಾರಿಡಾರ್‌ಗಳು, ಕೈಗಾರಿಕಾ ಕಾರಿಡಾರ್‌ಗಳು, ಎಕ್ಸ್‌ಪ್ರೆಸ್‌ವೇಗಳು, ಲಾಜಿಸ್ಟಿಕ್ ಪಾರ್ಕ್‌ಗಳು, ಇವು ನವ ಭಾರತದ ಗುರುತಾಗುತ್ತಿವೆ"

"ಪಿಎಂ ಗತಿಶಕ್ತಿಯು ಭಾರತದಲ್ಲಿ ಮೂಲಸೌಕರ್ಯ ನಿರ್ಮಾಣದ ರಾಷ್ಟ್ರೀಯ ವೇದಿಕೆಯಾಗಿ ರಾಷ್ಟ್ರೀಯ ಮಾಸ್ಟರ್ ಪ್ಲಾನ್ ರೂಪ ಹೊಂದಿದೆ"

"ಭಾರತವನ್ನು ವಿಶ್ವದ ಅತ್ಯಂತ ಸ್ಪರ್ಧಾತ್ಮಕ ಲಾಜಿಸ್ಟಿಕ್ಸ್ ಮಾರುಕಟ್ಟೆಯಾಗಿ ಮಾಡುವ ಗುರಿಯೊಂದಿಗೆ ನಾವು ನಮ್ಮ ರಾಷ್ಟ್ರೀಯ ಲಾಜಿಸ್ಟಿಕ್ಸ್ ನೀತಿ ಜಾರಿಗೆ ತಂದಿದ್ದೇವೆ"

"ಮಧ್ಯಪ್ರದೇಶಕ್ಕೆ ಬರುವ ಹೂಡಿಕೆದಾರರು ಪಿಎಲ್‌ಐ ಯೋಜನೆಯ ಗರಿಷ್ಠ ಪ್ರಯೋಜನ ಪಡೆಯುವಂತೆ ನಾನು ಕೋರುತ್ತೇನೆ"

"ಸರ್ಕಾರವು ಕೆಲವು ದಿನಗಳ ಹಿಂದೆ ಗ್ರೀನ್ ಹೈಡ್ರೋಜನ್ ಮಿಷನ್ ಅನುಮೋದಿಸಿದೆ, ಇದು ಸುಮಾರು 8 ಲಕ್ಷ ಕೋಟಿ ರೂ. ಹೂಡಿಕೆಯ ಸಾಧ್ಯತೆಗಳನ್ನು ತರಲಿದೆ"

Posted On: 11 JAN 2023 12:37PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಮಧ್ಯಪ್ರದೇಶದ ಇಂದೋರ್‌ನಲ್ಲಿ ಜಾಗತಿಕ ಹೂಡಿಕೆದಾರರ ಶೃಂಗಸಭೆ ಉದ್ದೇಶಿಸಿ ವೀಡಿಯೊ ಕಾನ್ಫರೆನ್ಸ್ ಮೂಲಕ ಮಾತನಾಡಿದರು. ಈ ಶೃಂಗಸಭೆಯು ಮಧ್ಯಪ್ರದೇಶದ ವೈವಿಧ್ಯಮಯ ಹೂಡಿಕೆ ಅವಕಾಶಗಳನ್ನು ಪ್ರದರ್ಶಿಸಲಿದೆ.

ಸಭೆ ಉದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿ, ಎಲ್ಲಾ ಹೂಡಿಕೆದಾರರು ಮತ್ತು ಉದ್ಯಮಿಗಳಿಗೆ ಆತ್ಮೀಯ ಸ್ವಾಗತ ಕೋರಿದರು. ಅಭಿವೃದ್ಧಿ ಹೊಂದಿದ ಭಾರತ ನಿರ್ಮಿಸುವಲ್ಲಿ ಮಧ್ಯಪ್ರದೇಶದ ಪಾತ್ರ ಬಹುದೊಡ್ಡದು. "ನಂಬಿಕೆ ಮತ್ತು ಆಧ್ಯಾತ್ಮಿಕತೆಯಿಂದ ಪ್ರವಾಸೋದ್ಯಮವರೆಗೆ, ಕೃಷಿಯಿಂದ ಶಿಕ್ಷಣ ಮತ್ತು ಕೌಶಲ್ಯ ಅಭಿವೃದ್ಧಿ ತನಕ ಮಧ್ಯಪ್ರದೇಶವು ಅದ್ಭುತ ತಾಣವಾಗಿದೆ". ಭಾರತದ ಅಮೃತ ಕಾಲದ ಸುವರ್ಣಯುಗ ಆರಂಭವಾಗಿರುವ ಸಂದರ್ಭದಲ್ಲಿ ಈ ಶೃಂಗಸಭೆ ನಡೆಯುತ್ತಿದೆ. ಅಭಿವೃದ್ಧಿ ಹೊಂದಿದ ಭಾರತ ನಿರ್ಮಿಸಲು ನಾವೆಲ್ಲರೂ ಒಟ್ಟಾಗಿ ಕೆಲಸ ಮಾಡುತ್ತಿದ್ದೇವೆ. "ನಾವು ಅಭಿವೃದ್ಧಿ ಹೊಂದಿದ ಭಾರತದ ಬಗ್ಗೆ ಮಾತನಾಡುವಾಗ, ಅದು ನಮ್ಮ ಆಕಾಂಕ್ಷೆಯಲ್ಲ, ಆದರೆ ಪ್ರತಿಯೊಬ್ಬ ಭಾರತೀಯನ ಸಂಕಲ್ಪವಾಗಿದೆ". ವಿಶ್ವದ ಪ್ರತಿಯೊಂದು ಸಂಸ್ಥೆ ಮತ್ತು ತಜ್ಞರು ಭಾರತೀಯರು ಮತ್ತು ಭಾರತದ ಬಗ್ಗೆ ವಿಶ್ವಾಸ ತೋರುತ್ತಿದ್ದಾರೆ ಎಂದು ಪ್ರಧಾನ ಮಂತ್ರಿ ಸಂತೋಷ ವ್ಯಕ್ತಪಡಿಸಿದರು.

ಜಾಗತಿಕ ಮಟ್ಟದ ಸಂಸ್ಥೆಗಳು ಭಾರತದ ಆರ್ಥಿಕತೆ ಮೇಲೆ ತೋರಿರುವ ನಂಬಿಕೆ ಮತ್ತು ಆತ್ಮವಿಶ್ವಾಸದ ಉದಾಹರಣೆಗಳನ್ನು ನೀಡಿದ ಪ್ರಧಾನಿ, ಜಾಗತಿಕ ಆರ್ಥಿಕತೆಯಲ್ಲಿ ಭಾರತವನ್ನು ಉಜ್ವಲ ತಾಣವಾಗಿ ಕಾಣುತ್ತಿದೆ ಎಂದು ಐಎಂಎಫ್ ತಿಳಿಸಿದೆ. ಜಾಗತಿಕ ಅಡ್ಡಿ ಆತಂಕ ಮತ್ತು ಸಂಕಷ್ಟಗಳನ್ನು ಎದುರಿಸಲು ಭಾರತವು ಇತರ ಹಲವು ದೇಶಗಳಿಗಿಂತ ಉತ್ತಮ ಸ್ಥಾನದಲ್ಲಿದೆ ಎಂದು ವಿಶ್ವಬ್ಯಾಂಕ್ ಈ ಮೊದಲೇ ಅಭಿಪ್ರಾಯ ವ್ಯಕ್ತಪಡಿಸಿದೆ. ಭಾರತದ ಬೃಹತ್ ಆರ್ಥಿಕತೆಯ ಬುನಾದಿ ಭದ್ರವಾಗಿದೆ ಎಂದು ಪ್ರಧಾನಿ ಪ್ರತಿಪಾದಿಸಿದರು. ಜಿ-20 ಗುಂಪಿನ ರಾಷ್ಟ್ರಗಳ ಪೈಕಿ ಭಾರತವು ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಗಳಲ್ಲಿ ಒಂದಾಗಿದೆ ಎಂದು ಆರ್ಥಿಕ ಸಹಕಾರ ಮತ್ತು ಅಭಿವೃದ್ಧಿ ಸಂಸ್ಥೆ(ಒಇಸಿಡಿ) ಪ್ರತಿಪಾದಿಸಿರುವುದನ್ನು ಪ್ರಧಾನಿ ಪ್ರಸ್ತಾಪಿಸಿದರು. ಮುಂದಿನ 4-5 ವರ್ಷಗಳಲ್ಲಿ ಭಾರತವು ವಿಶ್ವದ 3ನೇ ಅತಿದೊಡ್ಡ ಆರ್ಥಿಕತೆ ಆಗುವತ್ತ ಸಾಗುತ್ತಿದೆ ಎಂಬ ಮೋರ್ಗನ್ ಸ್ಟಾನ್ಲಿ ಉಲ್ಲೇಖವನ್ನು ಪ್ರಧಾನಿ ಪ್ರಸ್ತಾಪಿಸಿದರು.  ಪ್ರಸ್ತುತ ದಶಕ ಮಾತ್ರವಲ್ಲ, ಶತಮಾನವೇ ಭಾರತಕ್ಕೆ ಸೇರಿದ್ದು ಎಂದು ಮೆಕಿನ್ಸೆ ಸಿಇಒ ಘೋಷಿಸಿದ್ದಾರೆ ಎಂದು ಪ್ರಧಾನಿ ಹೇಳಿದರು. "ಜಾಗತಿಕ ಆರ್ಥಿಕತೆಯ ಮೇಲೆ ನಿಗಾ ಇಟ್ಟಿರುವ ಮಹತ್ತರ ಸಂಸ್ಥೆಗಳು ಮತ್ತು ವಿಶ್ವಾಸಾರ್ಹ ಧ್ವನಿಗಳು ಭಾರತದ ಮೇಲೆ ಅಭೂತಪೂರ್ವ ವಿಶ್ವಾಸ ಹೊಂದಿವೆ. ಜಾಗತಿಕ ಹೂಡಿಕೆದಾರರು ಸಹ ಅದೇ ಆಶಾವಾದ ಹಂಚಿಕೊಳ್ಳುತ್ತಿದ್ದಾರೆ. ಬಹುಪಾಲು ಹೂಡಿಕೆದಾರರು ತಮ್ಮ ಹೂಡಿಕೆಯ ತಾಣವಾಗಿ ಭಾರತಕ್ಕೆ ಆದ್ಯತೆ ನೀಡುತ್ತಾರೆ ಎಂದು ಪ್ರತಿಷ್ಠಿತ ಅಂತಾರಾಷ್ಟ್ರೀಯ ಬ್ಯಾಂಕ್ ನಡೆಸಿದ ಸಮೀಕ್ಷೆಯ ಬಗ್ಗೆ ಪ್ರಧಾನಿ ಗಮನ ಸೆಳೆದರು. “ಇಂದು, ಭಾರತವು ದಾಖಲೆ ಮಟ್ಟದ ವಿದೇಶಿ ನೇರ ಹೂಡಿಕೆಯನ್ನು ಸೆಳೆಯುತ್ತಿದೆ. ನಮ್ಮ ನಡುವಿನ ನಿಮ್ಮ ಉಪಸ್ಥಿತಿಯು ಸಹ ಈ ಭಾವನೆಯನ್ನು ಪ್ರತಿಬಿಂಬಿಸುತ್ತಿದೆ. ಭಾರತದ ಪ್ರಬಲ ಪ್ರಜಾಪ್ರಭುತ್ವ, ಅಪಾರ ಯುವ ಜನಸಂಖ್ಯೆ ಮತ್ತು ರಾಜಕೀಯ ಸ್ಥಿರತೆಯ ಜತೆಗೆ, ರಾಷ್ಟ್ರದ ಕಡೆಗೆ ತೋರಿಸಿರುವ ಬಲವಾದ ಆಶಾವಾದವೇ ಭಾರತದ ಸದೃಢ ಆರ್ಥಿಕತೆಗೆ ಕಾರಣ. ಭಾರತದ ಬಲಿಷ್ಠ ನೀತಿ ನಿರ್ಧಾರಗಳು ಜೀವನ ಮತ್ತು ವ್ಯವಹಾರವನ್ನು ಸುಲಭಗೊಳಿಸುತ್ತಿದೆ ಎಂದು ಪ್ರಧಾನಿ ತಿಳಿಸಿದರು.

'ಆತ್ಮನಿರ್ಭರ್ ಭಾರತ್' ಅಭಿಯಾನದ ಮೇಲೆ ಬೆಳಕು ಚೆಲ್ಲಿದ ಪ್ರಧಾನ ಮಂತ್ರಿ,  2014ರಿಂದ ಭಾರತವು 'ಸುಧಾರಣೆ, ಪರಿವರ್ತನೆ ಮತ್ತು ಕಾರ್ಯಕ್ಷಮತೆಯ ಮಾರ್ಗವನ್ನು ಕೈಗೊಂಡಿದ್ದು, ಹೂಡಿಕೆಗೆ ಭಾರತವು ಆಕರ್ಷಕ ತಾಣವಾಗಿ ಹೊರಹೊಮ್ಮಿದೆ. ಕೊರೊನಾ ಸೋಂಕಿನ ಶತಮಾನದ ಬಿಕ್ಕಟ್ಟು ಎದುರಾದಾಗಲೂ ನಾವು ಸುಧಾರಣೆಗಳ ಹಾದಿ ಹಿಡಿದಿದ್ದೇವೆ” ಎಂದು ಹೇಳಿದರು.

"ಸ್ಥಿರ ಸರ್ಕಾರ, ನಿರ್ಣಾಯಕ ಸರ್ಕಾರ, ಸರಿಯಾದ ಉದ್ದೇಶಗಳೊಂದಿಗೆ ನಡೆಯುವ ಸರ್ಕಾರವು ಅಭೂತಪೂರ್ವ ವೇಗದಲ್ಲಿ ಅಭಿವೃದ್ಧಿಯನ್ನು ತೋರಿಸುತ್ತಿದೆ" ಎಂದು ಪ್ರಧಾನಿ ಅವರು, ಕಳೆದ 8 ವರ್ಷಗಳಲ್ಲಿ ಸುಧಾರಣೆಗಳ ವೇಗ ಮತ್ತು ಪ್ರಮಾಣವು ನಿರಂತರವಾಗಿ ಹೆಚ್ಚುತ್ತಿರುವ ಬಗ್ಗೆ ಬೆಳಕು ಚೆಲ್ಲಿದರು. ಬ್ಯಾಂಕಿಂಗ್ ವಲಯದಲ್ಲಿ ಮರುಬಂಡವಾಳ ಹೂಡಿಕೆ ಮತ್ತು ಆಡಳಿತಕ್ಕೆ ಸಂಬಂಧಿಸಿದ ಸುಧಾರಣೆಗಳ ಉದಾಹರಣೆ ನೀಡಿದ ಪ್ರಧಾನಿ, ದಿವಾಳಿತನ ಸಂಕೇತ ಕಾಯ್ದೆ(ಐಬಿಸಿ)ಯಂತಹ ಆಧುನಿಕ ನಿರ್ಣಯಗಳ ಮಾರ್ಗಸೂಚಿ ರೂಪಿಸುವುದು, ಜಿಎಸ್ಟಿ ರೂಪದಲ್ಲಿ ಒಂದು ರಾಷ್ಟ್ರ ಒಂದು ತೆರಿಗೆಯಂತಹ ವ್ಯವಸ್ಥೆ ರೂಪಿಸುವುದು, ಕಾರ್ಪೊರೇಟ್ ತೆರಿಗೆಯನ್ನು ಜಾಗತಿಕವಾಗಿ ಸ್ಪರ್ಧಾತ್ಮಕಗೊಳಿಸುವುದು, ಸಾರ್ವಭೌಮ ಸಂಪತ್ತು ನಿಧಿಗಳಿಗೆ ವಿನಾಯಿತಿ ನೀಡುವುದು ಮತ್ತು ತೆರಿಗೆಯಿಂದ ಪಿಂಚಣಿ ನಿಧಿಗಳು, ಅನೇಕ ಕ್ಷೇತ್ರಗಳಲ್ಲಿ ಸ್ವಯಂಚಾಲಿತ ಮಾರ್ಗದ ಮೂಲಕ 100% ಎಫ್‌ಡಿಐಗೆ ಅವಕಾಶ ನೀಡುವುದು, ಸಣ್ಣ ಆರ್ಥಿಕ ತಪ್ಪುಗಳನ್ನು ಅಪರಾಧೀಕರಿಸುವುದು ಮತ್ತು ಅಂತಹ ಸುಧಾರಣೆಗಳ ಮೂಲಕ ಹೂಡಿಕೆಯ ಹಾದಿಯಲ್ಲಿನ ಅಡೆತಡೆಗಳನ್ನು ನಿವಾರಿಸುವಂತಹ ಸುಧಾರಣೆಗಳನ್ನು ಜಾರಿಗೆ ತರಲಾಗಿದೆ. ಅಲ್ಲದೆ, ಖಾಸಗಿ ವಲಯದ ಬಲದ ಮೇಲೆ ಭಾರತದ ಸಮಾನ ಅವಲಂಬನೆಗೆ ಒತ್ತು ನೀಡಲಾಗಿದ್ದು, ರಕ್ಷಣೆ, ಗಣಿಗಾರಿಕೆ ಮತ್ತು ಬಾಹ್ಯಾಕಾಶದಂತಹ ಅನೇಕ ಕಾರ್ಯತಂತ್ರ ಕ್ಷೇತ್ರಗಳು ಖಾಸಗಿ ವಲಯಕ್ಕೆ ತೆರೆದುಕೊಂಡಿವೆ ಎಂದು ತಿಳಿಸಿದರು. ಡಜನ್‌ಗಟ್ಟಲೆ ಕಾರ್ಮಿಕ ಕಾನೂನುಗಳನ್ನು 4 ಸಂಕೇತಗಳಲ್ಲಿ ಅಳವಡಿಸಲಾಗಿದೆ, ಇದು ಒಂದು ಪ್ರಮುಖ ಹೆಜ್ಜೆಯಾಗಿದೆ. ತೆರಿಗೆ ಅನುಸರಣೆಯ ಹೊರೆಯನ್ನು ಕಡಿಮೆ ಮಾಡಲು ಕೇಂದ್ರ ಮತ್ತು ರಾಜ್ಯ ಮಟ್ಟದಲ್ಲಿ ನಡೆಯುತ್ತಿರುವ ಅಭೂತಪೂರ್ವ ಪ್ರಯತ್ನಗಳನ್ನು ಪ್ರಧಾನಿ ಪ್ರಸ್ತಾಪಿಸಿದರು. ಕಳೆದ ಕೆಲವು ವರ್ಷಗಳಲ್ಲಿ ಸುಮಾರು 40,000 ಅನುಸರಣೆಗಳನ್ನು ತೆಗೆದುಹಾಕಲಾಗಿದೆ. "ರಾಷ್ಟ್ರೀಯ ಏಕ ಗವಾಕ್ಷಿ ವ್ಯವಸ್ಥೆಯ ಪ್ರಾರಂಭದೊಂದಿಗೆ, ಈ ವ್ಯವಸ್ಥೆಯ ಅಡಿ ಇದುವರೆಗೆ ಸುಮಾರು 50 ಸಾವಿರ ಅನುಮೋದನೆಗಳನ್ನು ನೀಡಲಾಗಿದೆ" ಎಂದು ಪ್ರಧಾನಮಂತ್ರಿ ತಿಳಿಸಿದರು.

ಹೂಡಿಕೆಯ ಸಾಧ್ಯತೆಗಳನ್ನು ಹುಟ್ಟುಹಾಕುವ ನಿಟ್ಟಿನಲ್ಲಿ ಕೈಗೊಂಡಿರುವ ರಾಷ್ಟ್ರದಲ್ಲಿನ ಆಧುನಿಕ ಮತ್ತು ಬಹುಮಾದರಿ ಮೂಲಸೌಕರ್ಯ ಬೆಳವಣಿಗೆಗಳನ್ನು ಎತ್ತಿ ಹಿಡಿದ ಪ್ರಧಾನಮಂತ್ರಿ, ಕಳೆದ 8 ವರ್ಷಗಳಲ್ಲಿ ರಾಷ್ಟ್ರೀಯ ಹೆದ್ದಾರಿಗಳ ನಿರ್ಮಾಣದ ವೇಗವು ದೇಶದಲ್ಲಿ ಕಾರ್ಯಾಚರಿಸುತ್ತಿರುವ ವಿಮಾನ ನಿಲ್ದಾಣಗಳ ಸಂಖ್ಯೆಯೊಂದಿಗೆ ದ್ವಿಗುಣಗೊಂಡಿದೆ ಎಂದರು. ಭಾರತದ ಬಂದರುಗಳ ನಿರ್ವಹಣಾ ಸಾಮರ್ಥ್ಯ ಮತ್ತು ಪುನಶ್ಚೇತನ ಸಮಯದಲ್ಲಿ ಅಭೂತಪೂರ್ವ ಸುಧಾರಣೆ ಕೈಗೊಳ್ಳಲಾಗಿದೆ. "ಸಮರ್ಪಿತ ಸರಕು ಸಾಗಣೆ ಕಾರಿಡಾರ್‌ಗಳು, ಕೈಗಾರಿಕಾ ಕಾರಿಡಾರ್‌ಗಳು, ಎಕ್ಸ್‌ಪ್ರೆಸ್‌ವೇಗಳು, ಲಾಜಿಸ್ಟಿಕ್ ಪಾರ್ಕ್‌ಗಳು, ಇವುಗಳು ನವ ಭಾರತದ ಗುರುತಾಗುತ್ತಿವೆ". ಪ್ರಧಾನಮಂತ್ರಿ ಗತಿಶಕ್ತಿಯ ಮೇಲೆ ಬೆಳಕು ಚೆಲ್ಲಿದ ಅವರು, ಇದು ಭಾರತದಲ್ಲಿ ಮೂಲಸೌಕರ್ಯಗಳ ನಿರ್ಮಾಣದ ರಾಷ್ಟ್ರೀಯ ವೇದಿಕೆಯಾಗಿದ್ದು ಅದು ರಾಷ್ಟ್ರೀಯ ಮಾಸ್ಟರ್ ಪ್ಲಾನ್ ರೂಪ ಪಡೆದುಕೊಂಡಿದೆ. ಸರ್ಕಾರಗಳು, ಏಜೆನ್ಸಿಗಳು ಮತ್ತು ಹೂಡಿಕೆದಾರರಿಗೆ ಸಂಬಂಧಿಸಿದ ನವೀಕರಿಸಿದ ಡೇಟಾವು ಈ ವೇದಿಕೆಯಲ್ಲಿ ಲಭ್ಯವಿ. "ಭಾರತವನ್ನು ವಿಶ್ವದ ಅತ್ಯಂತ ಸ್ಪರ್ಧಾತ್ಮಕ ಲಾಜಿಸ್ಟಿಕ್ಸ್ ಮಾರುಕಟ್ಟೆಯನ್ನಾಗಿ ಮಾಡುವ ಗುರಿಯೊಂದಿಗೆ ನಾವು ನಮ್ಮ ರಾಷ್ಟ್ರೀಯ ಲಾಜಿಸ್ಟಿಕ್ಸ್ ನೀತಿಯನ್ನು ಜಾರಿಗೆ ತಂದಿದ್ದೇವೆ" ಎಂದು ಪ್ರಧಾನಮಂತ್ರಿ ಹೇಳಿದರು.

ದೇಶದ ಡಿಜಿಟಲ್ ಮೂಲಸೌಕರ್ಯ ಅಭಿವೃದ್ಧಿಯ ಮೇಲೆ ಬೆಳಕು ಚೆಲ್ಲಿದ ಪ್ರಧಾನಿ, ಸ್ಮಾರ್ಟ್‌ಫೋನ್ ಡೇಟಾ ಬಳಕೆ, ಜಾಗತಿಕ ಹಣಕಾಸು ತಂತ್ರಜ್ಞಾನ ಮತ್ತು ಐಟಿ-ಬಿಪಿಎನ್ ಹೊರಗುತ್ತಿಗೆ ವಿತರಣೆಯಲ್ಲಿ ಭಾರತ ಅಗ್ರ ಸ್ಥಾನದಲ್ಲಿದೆ ಎಂದು ತಿಳಿಸಿದರು. ಭಾರತವು ವಿಶ್ವದ 3ನೇ ಅತಿದೊಡ್ಡ ವಾಯುಯಾನ ಮತ್ತು ವಾಹನ ಮಾರುಕಟ್ಟೆಯಾಗಿದೆ. ಜಾಗತಿಕ ಬೆಳವಣಿಗೆಯ ಮುಂದಿನ ಹಂತದ ಪ್ರಾಮುಖ್ಯತೆಯನ್ನು ಒತ್ತಿ ಹೇಳಿದ ಅವರು, ಒಂದು ಕಡೆ ಭಾರತವು ಪ್ರತಿ ಹಳ್ಳಿಗೂ ಆಪ್ಟಿಕಲ್ ಫೈಬರ್ ಜಾಲ ಒದಗಿಸುತ್ತಿದ್ದರೆ, ಮತ್ತೊಂದೆಡೆ 5ಜಿ ತಂತ್ರಜ್ಞಾನ ಜಾಲವನ್ನು ವೇಗವಾಗಿ ವಿಸ್ತರಿಸುತ್ತಿದೆ. 5ಜಿ, ಅಂತರ್ಜಾಲ ಸಂಬಂಧಿತ ಸೇವೆಗಳು ಮತ್ತು ಕೃತಕ ಬುದ್ಧಿಮತ್ತೆ ಸಹಾಯದಿಂದ ಪ್ರತಿ ಉದ್ಯಮ ಮತ್ತು ಗ್ರಾಹಕರಿಗೆ ಹೊಸ ಅವಕಾಶಗಳನ್ನು ಸೃಷ್ಟಿಸಲಾಗುತ್ತಿದೆ. ಇದು ಭಾರತದಲ್ಲಿ ಅಭಿವೃದ್ಧಿಯ ವೇಗವನ್ನು ಹೆಚ್ಚಿಸುತ್ತಿದೆ ಎಂದು ಹೇಳಿದರು.

ಉತ್ಪಾದನೆ ಅಥವಾ ತಯಾರಿಕೆ ವಲಯದಲ್ಲಿ ಜಾಗತಿಕವಾಗಿ ಅತಿವೇಗವಾಗಿ ಬೆಳೆಯುತ್ತಿರುವ ಭಾರತದ ಶಕ್ತಿ ಸಾಮರ್ಥ್ಯದ ಬಗ್ಗೆ ಬೆಳಕು ಚೆಲ್ಲಿದ ಪ್ರಧಾನಿ,  2.5 ಲಕ್ಷ ಕೋಟಿ ರೂ.ಗಿಂತ ಹೆಚ್ಚು ಮೌಲ್ಯದ ಉತ್ಪಾದನೆ ಸಂಪರ್ಕಿತ ಪ್ರೋತ್ಸಾಹಕ ಯೋಜನೆ(ಪಿಎಲ್ಐ)ಗಳಿಗೆ ಪ್ರೋತ್ಸಾಹ ನೀಡಲಾಗಿದೆ. ಜಾಗತಿಕ  ತಯಾರಕರ  ಜನಪ್ರಿಯತೆ ಗಮನಿಸಿದರೆ, ಮಧ್ಯಪ್ರದೇಶದಲ್ಲಿ ನೂರಾರು ಕೋಟಿ ರೂಪಾಯಿ ಹೂಡಿಕೆ ಮಾಡಲಾದ ವಿವಿಧ ವಲಯಗಳಲ್ಲಿ ಇದುವರೆಗೆ 4 ಲಕ್ಷ ಕೋಟಿ ರೂಪಾಯಿ ಮೌಲ್ಯದ ಉತ್ಪಾದನೆ ನಡೆದಿದೆ ಎಂದು ಮಾಹಿತಿ ನೀಡಿದರು. ಮಧ್ಯಪ್ರದೇಶವನ್ನು ದೊಡ್ಡ ಫಾರ್ಮಾ ಮತ್ತು ಜವಳಿ ಕೇಂದ್ರವನ್ನಾಗಿ ಮಾಡುವಲ್ಲಿ ಪಿಎಲ್ಐ ಯೋಜನೆ ಪ್ರಾಮುಖ್ಯವಾಗಿದೆ. ತೆಯನ್ನು ಅವರು ಗಮನಿಸಿದರು. "ಮಧ್ಯಪ್ರದೇಶಕ್ಕೆ ಬರುವ ಹೂಡಿಕೆದಾರರು ಪಿಎಲ್‌ಐ ಯೋಜನೆಯ ಗರಿಷ್ಠ ಪ್ರಯೋಜನ ಪಡೆದುಕೊಳ್ಳುವಂತೆ ನಾನು ಒತ್ತಾಯಿಸುತ್ತೇನೆ" ಎಂದು ಪ್ರಧಾನಿ ಮನವಿ ಮಾಡಿದರು.

ಹಸಿರು ಇಂಧನ ಉತ್ಪಾದನೆ ಬಗ್ಗೆ ಭಾರತ ಹೊಂದಿರುವ ಆಕಾಂಕ್ಷೆಗಳಿಗೆ ಒತ್ತು ನೀಡಿದ ಪ್ರಧಾನಮಂತ್ರಿ, ಸರ್ಕಾರವು ಕೆಲವು ದಿನಗಳ ಹಿಂದೆ ಗ್ರೀನ್ ಹೈಡ್ರೋಜನ್ ಮಿಷನ್ ಅನುಮೋದಿಸಿದೆ ಎಂದರು. ಇದು ಸುಮಾರು 8 ಲಕ್ಷ ಕೋಟಿ ರೂ. ಮೊತ್ತದ ಹೂಡಿಕೆಯ ಸಾಧ್ಯತೆಗಳನ್ನು ಸೃಜಿಸಲಿದೆ. ಇದು ಅಪಾರ ಮೊತ್ತದ ಹೂಡಿಕೆಯನ್ನು ಆಕರ್ಷಿಸಲು ಭಾರತಕ್ಕೆ ಕೇವಲ ಅವಕಾಶವಲ್ಲ, ಆದರೆ ಹಸಿರು ಇಂಧನದ ಜಾಗತಿಕ ಬೇಡಿಕೆಗಳನ್ನು ಪೂರೈಸಲು ಸಹ ಬೃಹತ್ ಅವಕಾಶಗಳನ್ನು ಕಲ್ಪಿಸಲಿದೆ. ಈ ಅಭಿಯಾನದ ಅಡಿ ಸಾವಿರಾರು ಕೋಟಿ ರೂ. ಮೌಲ್ಯದ ಪ್ರೋತ್ಸಾಹ ನೀಡಲಾಗುತ್ತಿದ್ದು, ಈ ಮಹತ್ವಾಕಾಂಕ್ಷೆಯ ಮಿಷನ್‌ನಲ್ಲಿ ತಮ್ಮ ಪಾತ್ರವನ್ನು ಅನ್ವೇಷಿಸುವಂತೆ ಹೂಡಿಕೆದಾರರಿಗೆ ಪ್ರಧಾನಿ ಒತ್ತಾಯಿಸಿದರು. ಆರೋಗ್ಯ, ಕೃಷಿ, ಪೌಷ್ಟಿಕತೆ, ಕೌಶಲ್ಯ ಮತ್ತು ನಾವೀನ್ಯತೆ ಕ್ಷೇತ್ರದ ಹೊಸ ಸಾಧ್ಯತೆಗಳನ್ನು ಎತ್ತಿ ತೋರಿಸಿದ ಅವರು, ಭಾರತದ ಜೊತೆಗೆ ಹೊಸ ಜಾಗತಿಕ ಪೂರೈಕೆ ಸರಪಳಿಯನ್ನು ನಿರ್ಮಿಸುವ ಅಗತ್ಯವಿದೆ ಎಂದು ಪ್ರತಿಪಾದಿಸಿ, ಪ್ರಧಾನಮಂತ್ರಿ ಭಾಷಣವನ್ನು ಮುಕ್ತಾಯಗೊಳಿಸಿದರು.

*****



(Release ID: 1890365) Visitor Counter : 137