ಉಪರಾಷ್ಟ್ರಪತಿಗಳ ಕಾರ್ಯಾಲಯ

ಎನ್ ಸಿಸಿ ಗಣರಾಜ್ಯೋತ್ಸವ ಶಿಬಿರ 2023 ರ ಉದ್ಘಾಟನಾ ಸಮಾರಂಭದಲ್ಲಿ ಉಪರಾಷ್ಟ್ರಪತಿಗಳ ಭಾಷಣ

Posted On: 07 JAN 2023 4:27PM by PIB Bengaluru

ನನ್ನ ಆತ್ಮೀಯ ಎನ್ ಸಿಸಿ  ಕೆಡೆಟ್ ಗಳೇ,

1.    ಈ ಗಣರಾಜ್ಯೋತ್ಸವದ ಎನ್ ಸಿಸಿ ಶಿಬಿರದಲ್ಲಿರುವ ಎಲ್ಲಾ ಮಕ್ಕಳಾದ  ದೇಶದಾದ್ಯಂತದ ಎನ್ ಸಿಸಿ ಕೆಡೆಟ್ಗಳೊಂದಿಗೆ ಇರಲು ಸಂತೋಷವಾಗಿದೆ. 

2.    ಈ ಸಂದರ್ಭದಲ್ಲಿ ನಿಮ್ಮ ನಡುವೆ ಇರಲು ಈ ಅವಕಾಶಕ್ಕಾಗಿ ಕೃತಜ್ಞರಾಗಿರುತ್ತೇನೆ. ಎನ್ ಸಿಸಿ ಕೆಡೆಟ್ಗಳಲ್ಲಿ ನಿಮ್ಮ ಉನ್ನತ ಗುಣಮಟ್ಟದ ಕವಾಯತು, ನೈತಿಕತೆ ಮತ್ತು ಪ್ರೇರಣೆಗೆ ನನ್ನ ಅಭಿನಂದನೆಗಳು.

3.    ಇಂದಿನ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ಯೋಜಿಸಿ ಮತ್ತು ಕಾರ್ಯಗತಗೊಳಿಸಿದ ಎಲ್ಲಾ ಕೆಡೆಟ್ಗಳು ಮತ್ತು ಸಿಬ್ಬಂದಿಗೆ ಅಭಿನಂದನೆಗಳು. 

4.    ನಿಮ್ಮೆಲ್ಲರಿಗೂ ಬಹಳ ತೃಪ್ತಿದಾಯಕ ಮತ್ತು ಉಜ್ವಲ ಭವಿಷ್ಯವನ್ನು ನಾನು ಬಯಸುತ್ತೇನೆ. 

5.    ವಿಶ್ವದ ಅತಿ ದೊಡ್ಡ ಯುವ ಸಂಘಟನೆಯಾದ ಎನ್ ಸಿಸಿಗೆ ಮತ್ತು ವಿಶೇಷವಾಗಿ ನಿಮ್ಮೆಲ್ಲರಿಗೂ ಅಮೃತಕಾಲದಲ್ಲಿ ಕರ್ತವ್ಯ ಪಥದಲ್ಲಿ ಪ್ರದರ್ಶನ ನೀಡುವುದು ಎಂದೆಂದಿಗೂ ಅವಿಸ್ಮರಣೀಯ ಕ್ಷಣವಾಗಿದೆ. 

6.    ನಮ್ಮ ಯುವ ವಿದ್ಯಾರ್ಥಿಗಳಲ್ಲಿ ಚಾರಿತ್ರ್ಯ, ಒಡನಾಟ ಮತ್ತು ನಿಸ್ವಾರ್ಥ ಸೇವೆಯ ಮನೋಭಾವವನ್ನು ಬೆಳೆಸುವ ಮೂಲಕ ರಾಷ್ಟ್ರ ನಿರ್ಮಾಣಕ್ಕಾಗಿ ಎನ್ಸಿಸಿಯ ಶ್ಲಾಘನೀಯ ಕೊಡುಗೆಯನ್ನು ಬಹಳವಾಗಿ ಪ್ರಶಂಸಿಸುತ್ತೇವೆ.

7.    ನಿಮ್ಮ ಆತ್ಮವಿಶ್ವಾಸ ಮತ್ತು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಿಕೆಯನ್ನು ನೋಡಿದಾಗ, ಚಿತ್ತೋರ್ಗಢದ ಸೈನಿಕ್ ಸ್ಕೂಲ್ನಲ್ಲಿ ಎನ್ಸಿಸಿ ಕೆಡೆಟ್ ಆಗಿದ್ದ ನನ್ನ ದಿನಗಳನ್ನು ನೆನಪಿಸಿಕೊಳ್ಳುತ್ತೇನೆ. ಆ ದಿನಗಳದ್ದು ನನಗೆ ತುಂಬಾ ಸವಿಯಾದ ನೆನಪುಗಳಾಗಿವೆ. ಅದು ನನ್ನನ್ನು ರೂಪಿಸಿದ ಶಿಕ್ಷಣವಾಗಿದೆ.

8.    ಮಕ್ಕಳೇ, ಎನ್ ಸಿಸಿ ಕೆಡೆಟ್ಗಳಾಗಿ ನೀವು ವಿವಿಧತೆಯಲ್ಲಿ ಭಾರತದ ಏಕತೆಯನ್ನು ಪ್ರತಿನಿಧಿಸುತ್ತೀರಿ. ಎನ್ ಸಿಸಿಯು ಧೀರ್ಘಕಾಲದಿಂದ, ಜೀವನದ ಎಲ್ಲಾ ಹಂತಗಳಲ್ಲಿ ಅತ್ಯುತ್ತಮ ಕೆಲಸ ಮಾಡುತ್ತಿರುವ ಪ್ರೇರಿತ ಮತ್ತು ಶಿಸ್ತಿನ ಯುವಕರ ನಿಜವಾದ ರೋಮಾಂಚಕ ಮತ್ತು ವೈವಿಧ್ಯಮಯ ತಂಡವನ್ನು ರಚಿಸಿದೆ. 

9.    ಎನ್ ಸಿಸಿಯು ನಮ್ಮ ದೇಶದ ವೈವಿಧ್ಯಮಯ ಪರಂಪರೆಯ ಬಗ್ಗೆ ಯುವಜನರಲ್ಲಿ ಜಾಗೃತಿ ಮೂಡಿಸುತ್ತದೆ ಮತ್ತು ಭಾಷಾ, ಸಾಂಸ್ಕೃತಿಕ, ಧಾರ್ಮಿಕ ಮತ್ತು ಭೌಗೋಳಿಕ ವಿವಿಧತೆಗಳಿದ್ದರೂ ದೇಶದ ಏಕತೆಯನ್ನು ಉತ್ತೇಜಿಸುತ್ತದೆ.

10.    ಎನ್ ಸಿಸಿ ನಿಮ್ಮಲ್ಲಿ ಒಗ್ಗಟ್ಟಿನಿಂದ ಕೆಲಸ ಮಾಡುವ ಮನೋಭಾವ, ಒಟ್ಟಿಗೆ ಬಾಳುವ. ಇತರ ರಾಜ್ಯಗಳ ಕೆಡೆಟ್ಗಳೊಂದಿಗೆ ಸಹಕರಿಸಿ ಮತ್ತು ಸಾಮರಸ್ಯದಿಂದ ಕೆಲಸ ಮಾಡುವ ಅನುಭವವನ್ನು ಬೆಳೆಸುತ್ತದೆ. 

11.    ಎನ್ ಸಿಸಿಯಲ್ಲಿ ನೈತಿಕತೆ ಮತ್ತು ಸಾಮಾಜಿಕ ಮೌಲ್ಯಗಳ ಬಗ್ಗೆ ಆಂತರಿಕ ಬೆಳವಣಿಗೆ, ಏಕತೆಯ ಮನೋಭಾವ ಮತ್ತು ವೈಯಕ್ತಿಕ ತ್ಯಾಗದ ಮೌಲ್ಯವಿದೆ.  

12.    ನಮ್ಮ ವೈವಿಧ್ಯಮಯ ದೇಶದಲ್ಲಿ ಎನ್ಸಿಸಿ ಶಿಬಿರಗಳು ಮತ್ತು ಗುಂಪು ಚಟುವಟಿಕೆಗಳು ಪರಸ್ಪರರ ಅನನ್ಯತೆಯ ಮೆಚ್ಚುಗೆಯ ಭಾವನೆಯನ್ನು ಉಂಟುಮಾಡುತ್ತವೆ ಮತ್ತು ಸ್ನೇಹವನ್ನು ಬೆಳೆಸುತ್ತವೆ. 

13.    ಎನ್ ಸಿಸಿಯು ಸಮಾಜಕ್ಕೆ ನಿಸ್ವಾರ್ಥ ಸೇವೆಯನ್ನು ನೀಡಲು ತರಬೇತಿ ಪಡೆದ ಮಾನವ ಸಂಪತ್ತಾಗಿದೆ ಮತ್ತು ದೇಶದ ಯಾವುದೇ ಸೇವೆಗಾಗಿ ಯಾವುದೇ ಸಮಯದಲ್ಲಿ ಲಭ್ಯವಿರುತ್ತದೆ. 

14.    ದೇಶದ ಸೇವೆಗಾಗಿ ಎಲ್ಲೆಡೆ ಮತ್ತು ಎಲ್ಲಿಯಾದರೂ ಸಹಾಯವನ್ನು ಒದಗಿಸಲು ಲಭ್ಯವಿರುವ ಎನ್ ಸಿಸಿಯನ್ನು ರಾಷ್ಟ್ರದ ಶಿಸ್ತುಬದ್ಧ, ತರಬೇತಿ ಪಡೆದ ಮತ್ತು ಪ್ರೇರಿತ ಯುವ ಶಕ್ತಿ ಎಂದು ಬಣ್ಣಿಸಬಹುದು.

15.    ಈ ಪ್ರತಿಷ್ಠಿತ ಆರ್ಡಿ ಶಿಬಿರದಲ್ಲಿ ಹುಡುಗಿಯರು ಉತ್ಸಾಹದಿಂದ ಭಾಗವಹಿಸುವುದನ್ನು ನೋಡಲು ನನಗೆ ವಿಶೇಷವಾಗಿ ಸಂತೋಷವಾಗಿದೆ.

16.    ಈ ಎನ್ ಸಿಸಿ ಗಣರಾಜ್ಯೋತ್ಸವ ಶಿಬಿರವು ಎನ್ಸಿಸಿ  ಯ ಧ್ಯೇಯವಾಕ್ಯ "ಏಕತೆ ಮತ್ತು ಶಿಸ್ತು" ಎನ್ನುವುದರ ಧ್ಯೋತಕವಾಗಿದೆ.

17.    ನನ್ನ ಯುವ ಸ್ನೇಹಿತರೇ ನಾವು ನಮ್ಮ ಸ್ವಾತಂತ್ರ್ಯದ ಅಮೃತ ಕಾಲದಲ್ಲಿದ್ದೇವೆ. ನಮ್ಮ ಭಾರತ ಹಿಂದೆಂದೂ ಕಾಣದಷ್ಟು ಏರುಗತಿಯಲ್ಲಿ ಸಾಗುತ್ತಿದೆ. ನಮ್ಮ ರಾಷ್ಟ್ರವು ಈಗ ಅವಕಾಶ ಮತ್ತು ಹೂಡಿಕೆಯ ಜಾಗತಿಕ ತಾಣವಾಗಿದೆ.

18.    ನಾವು ಭಾರತೀಯರು ಎಂದು ಹೆಮ್ಮೆ ಪಡಬೇಕು ಮತ್ತು ನಮ್ಮ ಸಾಧನೆಗಳ ಬಗ್ಗೆ ಹೆಮ್ಮೆ ಪಡಬೇಕು ಎಂದು ನಾನು ಎಲ್ಲರಿಗೂ ಮನವಿ ಮಾಡುತ್ತೇನೆ.

19.    ನಮ್ಮ ದೇಶ ಹಿಂದೆಂದೂ ಕಾಣದಷ್ಟು ಏರುಗತಿಯಲ್ಲಿ ಸಾಗುತ್ತಿದೆ ಎಂಬುದನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ನನಗೆ ಸಂತೋಷವಾಗುತ್ತಿದೆ. ಇದು ಈಗ ಐದನೇ ಅತಿದೊಡ್ಡ ಜಾಗತಿಕ ಆರ್ಥಿಕತೆಯಾಗಿದೆ. ಕೆಲವೇ ತಿಂಗಳುಗಳಲ್ಲಿ ನಾವು ಯುನೈಟೆಡ್ ಕಿಂಗ್ಡಂಅನ್ನು  ಹಿಂದಿಕ್ಕಿದ್ದೇವೆ. ದಶಕದ ಅಂತ್ಯದ ವೇಳೆಗೆ ನಾವು ಮೂರನೇ ಅತಿದೊಡ್ಡ ಜಾಗತಿಕ ಆರ್ಥಿಕತೆಯಾಗುತ್ತೇವೆ.

20.    ಭಾರತವು ಜಪಾನ್ ಅನ್ನು ಹಿಂದಿಕ್ಕಿ ವಿಶ್ವದ ವಾಹನದ ಮೂರನೇ ಅತಿದೊಡ್ಡ ಮಾರುಕಟ್ಟೆಯಾಗಿದೆ.

21.    ಔಷಧಗಳು, ಲಸಿಕೆಗಳು ಮತ್ತು ಉಪಕರಣಗಳ ಉತ್ಪಾದನೆ ಮತ್ತು ಅಭಿವೃದ್ಧಿಯಲ್ಲಿ ನಾವು ಕೋವಿಡ್ ಸಾಂಕ್ರಾಮಿಕದ ಸವಾಲನ್ನು "ಆತ್ಮ ನಿರ್ಭರ"ವಾಗುವ ಅವಕಾಶವನ್ನಾಗಿ ಪರಿವರ್ತಿಸಿದ್ದೇವೆ.

22.    ನಾವು 220 ಕೋಟಿ ಡೋಸ್ ಲಸಿಕೆಗಳನ್ನು ಒದಗಿಸಲು ಮತ್ತು 800 ದಶಲಕ್ಷ ಜನರಿಗೆ ಗುಣಮಟ್ಟದ ಆಹಾರವನ್ನು ಒದಗಿಸಲು ಏಪ್ರಿಲ್ 01, 2020 ರಿಂದ ಮುಂದುವರಿಸಲು ಸಾಧ್ಯವಾಗಿದೆ.     

23.    ಎನ್ ಸಿಸಿ ಕೆಡೆಟ್ ಗಳನ್ನು ಸಿಮ್ಯುಲೇಶನ್ ತಂತ್ರಜ್ಞಾನದ ಮೂಲಕ ಆಧುನಿಕ ತಂತ್ರಜ್ಞಾನಗಳಿಗೆ ಪರಿಚಯಿಸಲಾಗುತ್ತಿದೆ ಎಂಬುದನ್ನು ಗಮನಿಸಲು ಸಂತೋಷವಾಗಿದೆ. 

24.    ಹೊಸ ಶಿಕ್ಷಣ ನೀತಿ 2020, ಒಂದು ಮಹತ್ತರ ತಿರುವಾಗಿದ್ದು, ಮೂರು ದಶಕಗಳ ನಂತರ ಚಿಂತನಶೀಲವಾಗಿ ವಿಕಸನಗೊಂಡಿದೆ. ಸುಮಾರು 90 ವಿಶ್ವವಿದ್ಯಾನಿಲಯಗಳು ಎನ್ಸಿಸಿಯನ್ನು ಆಯ್ಕೆಯ ವಿಷಯವಾಗಿ ನೀಡುತ್ತವೆ ಎಂಬುದನ್ನು ಗಮನಿಸಲು ಸಂತೋಷವಾಗಿದೆ.

25.    ಘನತೆ ಮತ್ತು ಶಿಸ್ತಿನ ಉನ್ನತ ಮಟ್ಟದಲ್ಲಿ ನಿಮ್ಮನ್ನು ನಡೆಸಿಕೊಳ್ಳುವ ನಿಮ್ಮ ಪ್ರತಿಜ್ಞೆಯನ್ನು ನೀವೆಲ್ಲರೂ ಸಮರ್ಥಿಸುತ್ತೀರಿ ಎಂಬುದರಲ್ಲಿ ನನಗೆ ಸಂದೇಹವಿಲ್ಲ. 

26.    ಈ ಮಹತ್ವದ ಸಂದರ್ಭದ ಭಾಗವಾಗಿದ್ದಕ್ಕಾಗಿ ನಾನು ನಿಮ್ಮನ್ನು ಅಭಿನಂದಿಸುತ್ತೇನೆ. ನಿಸ್ಸಂದೇಹವಾಗಿ ನೀವು ಎನ್ಸಿಸಿ ಕೆಡೆಟ್ ಗಳಾಗಿ ಯಾವಾಗಲೂ ನಮ್ಮ ರಾಷ್ಟ್ರವನ್ನು ಮೊದಲ ಸ್ಥಾನದಲ್ಲಿರಿಸುವ ವ್ಯವಸ್ಥೆಗೆ ಉದಾಹರಣೆಯಾಗಿ ಮತ್ತು ವಿಕಸನಕ್ಕೆ ಸಹಾಯ ಮಾಡುತ್ತೀರಿ.

27.     ಎನ್ ಸಿಸಿ ಹೆಚ್ಚುತ್ತಿರುವ ಯಶಸ್ಸಿನೊಂದಿಗೆ ಅಭಿವೃದ್ಧಿ ಅಥವಾ ಪ್ರಗತಿಯೆಡೆಗೆ ಬೆಳೆಯುವುದನ್ನು ಮುಂದುವರಿಸಲಿ ಮತ್ತು ನಮ್ಮ ದೇಶಕ್ಕೆ ಅತ್ಯುತ್ತಮ ನಾಯಕರನ್ನು ಉತ್ಪಾದಿಸಲಿ.

ಜೈ ಹಿಂದ್! 

 

******



(Release ID: 1889449) Visitor Counter : 136


Read this release in: English , Urdu , Hindi , Tamil